Explained: ಏನಿದು NSE ಹಗರಣ? ಯಾರಿವರು ಚಿತ್ರಾ ರಾಮಕೃಷ್ಣ? ಅವರ ಹಿಂದಿದ್ದ ನಿಗೂಢ ಬಾಬಾ ಯಾರು?

ಎನ್‌ಎಸ್ಇ ಎಂದರೆ ಏನು? ಈ ಚಿತ್ರಾ ರಾಮಕೃಷ್ಣ ಯಾರು? ಅವರ ಮೇಲಿನ ಆರೋಪಗಳೇನು? ವಿಚಾರಣೆ ವೇಳೆ ಚಿತ್ರಾ ಉಲ್ಲೇಖಿಸಿದ 'ಹಿಮಾಲಯದ ಆ ನಿಗೂಢ ಯೋಗಿ' ಯಾರು? ಸಿಬಿಐ ವಿಚಾರಣೆ ಹೇಗೆ ನಡೆಯುತ್ತಿದೆ? ಈ ಎಲ್ಲಾ ವಿಚಾರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ...

NSE ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ

NSE ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ

  • Share this:
ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ (National Stock Exchange) ಅಥವಾ ಎನ್ಎಸ್ಇ (NSE) ಬಗ್ಗೆ ತಿಳಿದವರು ಬಹುತೇಕ ಕಡಿಮೆ. ಕಳೆದ ಕೆಲ ದಿನಗಳ ಹಿಂದಷ್ಟೇ ಇದರ ಸಿಇಒ (CEO) ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ (MD) ಆಗಿದ್ದ ಚಿತ್ರಾ ರಾಮಕೃಷ್ಣ (Chitra Ramkrishna) ಹಾಗೂ ಅವರ ಜೊತೆ ಶಾಮೀಲಾಗಿದ್ದಾರೆ ಎನ್ನಲಾದ ವ್ಯಕ್ತಿಗಳ ವಿರುದ್ಧ ಸಿಬಿಐ (CBI) ಅಧಿಕಾರಿಗಳ ತಂಡ (Officers Team) ವಿಚಾರಣೆ ನಡೆಸುತ್ತಿದೆ. ಈ ಬಳಿಕವಷ್ಟೇ ಚಿತ್ರಾ ರಾಮಕೃಷ್ಣ ಅವರ ಜೊತೆ ಎನ್‌ಎಸ್ಇ ಬಗ್ಗೆಯೂ ವ್ಯಾಪಕ ಚರ್ಚೆ ಶುರುವಾಗಿದೆ. ಹಾಗಾದರೆ ಎನ್ಎಸ್ಇ ಎಂದರೆ ಏನು? ಈ ಚಿತ್ರ ರಾಮಕೃಷ್ಣ ಯಾರು? ಅವರ ಮೇಲಿನ ಆರೋಪಗಳೇನು? ಅವರ ಹಿಂದಿದ್ದ ಆ ‘ನಿಗೂಢ ಯೋಗಿ’ (Mysterious Yogi) ಯಾರು ಎಂಬ ಬಗ್ಗೆ ವಿವರವಾದ ಮಾಹಿತಿ ಇಲ್ಲಿದೆ ಓದಿ…

ಏನಿದು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್?

ನ್ಯಾಶನಲ್ ಸ್ಟಾಕ್ ಎಕ್ಸ್‌ಚೇಂಜ್ (NSE) ಭಾರತದಲ್ಲಿನ ಪ್ರಮುಖ ಸ್ಟಾಕ್ ಎಕ್ಸ್‌ಚೇಂಜ್ ಆಗಿದೆ. ಈಕ್ವಿಟಿ ಟ್ರೇಡಿಂಗ್ ವಾಲ್ಯೂಮ್ 2015ರ ಪ್ರಕಾರ ವಿಶ್ವದಲ್ಲೇ ನಾಲ್ಕನೇ ದೊಡ್ಡ ಆರ್ಥಿಕ ವ್ಯವಸ್ಥೆಯಾಗಿದೆ. ವಿಶ್ವ ವಿನಿಮಯ ಒಕ್ಕೂಟದ (WFE) ಪ್ರಕಾರ, ವಿದ್ಯುನ್ಮಾನ ಅಥವಾ ಪರದೆಯ-ಆಧಾರಿತ ವ್ಯಾಪಾರವನ್ನು ಜಾರಿಗೆ ತಂದ ಭಾರತದಲ್ಲಿ NSE ಮೊದಲ ವಿನಿಮಯ ಕೇಂದ್ರವಾಗಿದೆ.

 ಮುಂಬೈನಲ್ಲಿ ಇದೆ ಇದರ ಪ್ರಧಾನ ಕಚೇರಿ

ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಇದು 1994 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು 1995 ರಿಂದ ಈಕ್ವಿಟಿ ಷೇರುಗಳ ಒಟ್ಟು ಮತ್ತು ಸರಾಸರಿ ದೈನಂದಿನ ವಹಿವಾಟಿನ ವಿಷಯದಲ್ಲಿ ಭಾರತದಲ್ಲಿ ಅತಿದೊಡ್ಡ ಸ್ಟಾಕ್ ಎಕ್ಸ್‌ಚೇಂಜ್ ಆಗಿದೆ. ಸಾಮಾನ್ಯವಾಗಿ ಹೇಳಬೇಕು ಅಂದರೆ ಕೆಲವು ನಿರ್ದಿಷ್ಟ ನಿಯಮಗಳಿಗೆ ಅನ್ವಯವಾಗಿ ಜನರು ‘ಸೆಕ್ಯುರಿಟೀಸ್’ನ ಕೊಳ್ಳುವ, ಮಾರುವ ಸ್ಥಳವನ್ನು ಸ್ಟಾಕ್ ಎಕ್ಸ್‌ಚೇಂಜ್ ಎನ್ನಲಾಗುತ್ತದೆ.

 ಏನಿದು ಎನ್‌ಎಸ್ಇ ಹಗರಣ?

ಎನ್‌ಎಸ್ಇ ಮಾಜಿ ಸಿಇಒ ಹಾಗೂ ಎಂಡಿ ಆಗಿದ್ದ ಚಿತ್ರಾ ರಾಮಕೃಷ್ಣ ಹಾಗೂ ಕೆಲವರ ವಿರುದ್ಧ ಗಂಭೀರ ಆರೋಪ ಕೇಳಿಬಂದಿತ್ತುಕೆಲವು ದಲ್ಲಾಳಿಗಳು 2010 ಮತ್ತು 2015 ರ ನಡುವೆ NSE ಯ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಆದ್ಯತೆಯ ಪ್ರವೇಶದಿಂದ ಲಾಭ ಪಡೆದಿದ್ದಾರೆ ಎಂದು ಹೇಳಲಾಗುತ್ತದೆ. ವಿವಾದವು ಮೊದಲು ಜನವರಿ 2015 ರಲ್ಲಿ ವಿಸ್ಲ್‌ಬ್ಲೋವರ್‌ನ ಮೇಲ್ ಮೂಲಕ ಬೆಳಕಿಗೆ ಬಂದಿತು.

ಇದನ್ನೂ ಓದಿ: Explainer: ಕರ್ನಾಟಕದಲ್ಲಿ ಹಿಜಾಬ್ ‘ವಿವಾದ’ ಹೇಗಾಯ್ತು? ಇಲ್ಲಿಯವರೆಗೆ ಏನೆಲ್ಲಾ ನಡೆಯಿತು..Timeline ಇಲ್ಲಿದೆ

ಯಾರು ಈ ಚಿತ್ರಾ ರಾಮಕೃಷ್ಣ?

ಮುಂಬೈನಲ್ಲಿ 1963ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಚಿತ್ರಾ ರಾಮಕೃಷ್ಣ, ಮುಂಬೈನಲ್ಲೇ ಶಿಕ್ಷಣ ಪಡೆಯುತ್ತಾರೆ. ಬಳಿಕ ಯುಕೆ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. , ಚಾರ್ಟರ್ಡ್ ಸಂಸ್ಥೆಯಲ್ಲಿ ಮ್ಯಾನೆಜ್ ಮೇಂಟ್ ಅಕೌಂಟೆಂಟ್ ಪದವಿಯನ್ನು ಮುಗಿಸಿ, ದೆಹಲಿಯಲ್ಲಿ ಐಸಿಎಐ ಪದವಿಯನ್ನು ಪಡೆದು. ಮುಂಬೈನಲ್ಲಿ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಪದವಿಯನ್ನು ಪಡೆದರು. ನಂತರ ರಾಮಕೃಷ್ಣ ಅವರನ್ನು ವಿವಾಹವಾದರು.

2013ರಲ್ಲಿ ಎನ್ಎಸ್ಐಯಲ್ಲಿ ಕೆಲಸ ಆರಂಭ

ಚಿತ್ರಾ ಅವರು 1985 ರಲ್ಲಿ ಐಡಿಬಿಐನ ಪ್ರಾಜೆಕ್ಟ್ ಫೈನಾನ್ಸ್ ವಿಭಾಗದಲ್ಲಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. NSE ಗೆ ಸೇರುವ ಮೊದಲು ಸ್ವಲ್ಪ ಅವಧಿಯವರೆಗೆ ಮಾರುಕಟ್ಟೆ ನಿಯಂತ್ರಕವಾದ ಸೆಬಿಯಲ್ಲಿ ಕೆಲಸ ಮಾಡಿದವರಾಗಿದ್ದಾರೆ. 2013 ರಲ್ಲಿ ಅವರು NSE ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ.

ಚಿತ್ರಾ ರಾಮಕೃಷ್ಣ ಮೇಲಿರುವ ಆರೋಪಗಳು ಏನು?

ಹಲವಾರು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಚಿತ್ರಾ ಅವರು ಭಾಗಿಯಾಗಿದ್ದಾರೆ ಎಂದು ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು, 3 ಕೋಟಿ ರೂಪಾಯಿ ದಂಡವನ್ನೂ ಹಾಕಿತ್ತು.

ಖಾಸಗಿ ಕಂಪನಿಗಳಿಗೆ ರಹಸ್ಯ ಮಾಹಿತಿ ಸೋರಿಕೆ

ಖಾಸಗಿ ಕಂಪನಿಯ ಮಾಲೀಕರು ಮತ್ತು ಪ್ರವರ್ತಕರು ಎನ್‌ಎಸ್‌ಇಯ ಅಪರಿಚಿತ ಅಧಿಕಾರಿಗಳೊಂದಿಗೆ ಚಿತ್ರಾ ಆ್ಯಂಡ್ ಟೀಂ ನಿರಂತರ ಸಂಪರ್ಕದಲ್ಲಿ ಇತ್ತು ಎನ್ನಲಾಗಿದೆ. ಎನ್‌ಎಸ್‌ಇಯ ಸರ್ವರ್ ಆರ್ಕಿಟೆಕ್ಚರ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

2010-2012ರ ಅವಧಿಯಲ್ಲಿನ ಸ್ಟಾಕ್ ಎಕ್ಸ್‌ಚೇಂಜ್‌ನ ಎಕ್ಸ್‌ಚೇಂಜ್ ಸರ್ವರ್‌ಗೆ ಮೊದಲು ಲಾಗಿನ್ ಆಗಲು ಅನುವು ಮಾಡಿಕೊಟ್ಟಿತು, ಇದು ಮಾರುಕಟ್ಟೆಯಲ್ಲಿ ಖಾಸಗಿ  ಬ್ರೋಕರ್‌ಗಳ ಮೊದಲು ಡೇಟಾವನ್ನು ಪಡೆಯಲು  ಸಹಾಯವಾಗುತ್ತಿತ್ತು ಎನ್ನಲಾಗಿದೆ.

ಯಾರು ಈ ರವಿ ನರೇನ್? ಇವರ ಮೇಲಿನ ಆರೋಪ ಏನು?

ರವಿ ನರೇನ್ ಅವರು ಮಾರ್ಚ್ 31, 2013 ರವರೆಗೆ ಎನ್ಎಸ್ಇಯ ಎಂಡಿ ಮತ್ತು ಸಿಇಒ ಆಗಿದ್ದರು ಮತ್ತು ಆ ಅವಧಿಯಲ್ಲಿ ಚಿತ್ರಾ ರಾಮಕೃಷ್ಣ ಅವರು ಉಪ ಸಿಇಒ ಆಗಿದ್ದರು. ರವಿ ನರೇನ್ ನಂತರ ಚಿತ್ರಾ ರಾಮಕೃಷ್ಣ MD ಮತ್ತು CEO ಆಗಿ ಅಧಿಕಾರ ವಹಿಸಿಕೊಂಡರು, ಬಳಿಕ ಡಿಸೆಂಬರ್ 2016ರಲ್ಲಿ ರಾಜೀನಾಮೆ ನೀಡಿದರು.

ಸಿಬಿಐನಿಂದ ಚಿತ್ರಾ ಹಾಗೂ ಆಪ್ತರ ವಿಚಾರಣೆ

ಚಿತ್ರಾ ಮೇಲಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಿಬಿಐ ಲುಕ್​ಔಟ್ ನೊಟೀಸ್ ಜಾರಿ ಮಾಡಿತ್ತು. ಚಿತ್ರಾ ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಿದ ಮಾರನೇ ದಿನವೇ ಸಿಬಿಐ ಈ ಕ್ರಮಕ್ಕೆ ಮುಂದಾಗಿದೆ.

ಮತ್ತೋರ್ವ ಮಾಜಿ ಸಿಇಒ ರವಿ ನಾರಾಯಣ್ ಮತ್ತು ಮಾಜಿ ಮುಖ್ಯ ಹಣಕಾಸು ಅಧಿಕಾರಿ ಆನಂದ್ ಸುಬ್ರಹ್ಮಣ್ಯಂ ಅವರ ವಿರುದ್ಧವೂ ಸಿಬಿಐ ಲುಕ್​ಔಟ್ ನೊಟೀಸ್ ಜಾರಿ ಮಾಡಿದೆ.

ಆದಾಯ ತೆರಿಗೆ ಅಧಿಕಾರಿಗಳು ಶಂಕಿತ ವಂಚನೆಗಾಗಿ ಚಿತ್ರಾ ರಾಮಕೃಷ್ಣ ಮತ್ತು ಅವರ ಮಾಜಿ ಸಲಹೆಗಾರ ಆನಂದ್ ಸುಬ್ರಮಣಿಯನ್ ಅವರಿಗೆ ಸಂಬಂಧಿಸಿದ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದೆ.

ವಿಚಾರಣೆ ವೇಳೆ ನಿಗೂಢ ಯೋಗಿ ಬಗ್ಗೆ ಹೇಳಿದ ಚಿತ್ರಾ

ಎನ್‌ಎಸ್‌ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣ ಅವರು ವಿಚಾರಣೆ ವೇಳೆ ಕೆಲವೊಂದು ಮಾಹಿತಿ ನೀಡಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಅವರು ಎನ್ಎಸ್ಇ ಉದ್ಯೋಗದಲ್ಲಿದ್ದಾಗ ಹಿಮಾಲಯದ ನಿಗೂಢ ಯೋಗಿಯೊಬ್ಬರ ಮಾತಿನಂತೆ ನಡೆದುಕೊಳ್ಳುತ್ತಿದ್ದರಂತೆ!

20 ವರ್ಷಗಳಿಂದ ಯೋಗಿಯ ಸಂಪರ್ಕ

ಕಳೆದ 20 ವರ್ಷಗಳಿಂದ ಚಿತ್ರಾ ಅವರು ಹಿಮಾಲಯದ ನಿಗೂಢ ಯೋಗಿಯನ್ನು ಭೇಟಿಯಾಗುತ್ತಿದ್ದರಂತೆ. ಎನ್‌ಎಸ್‌ಇಯ ವ್ಯಾಪಾರಿ ಯೋಜನೆಗಳು, ಮಂಡಳಿ ಸಭೆಯ ಕಾರ್ಯಸೂಚಿಗಳು ಮತ್ತು ಸಂಬಳ ಹಾಗೂ ಹಣಕಾಸಿನ ಎಲ್ಲಾ ಮಾಹಿತಿ ಸಹಿತ, ತಾನು ಹಿಮಾಲಯದ ಯೋಗಿಗೆ ನೀಡಿದ್ದಾಗಿ ಚಿತ್ರಾ ಹೇಳಿಕೊಂಡಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ NSEಯನ್ನು ಯೋಗಿಯೆ ನಡೆಸುತ್ತಿದ್ದರು ಎಂದು ಸೆಬಿ ನಡೆಸಿದ ತನಿಖೆಯಲ್ಲಿ ಗೊತ್ತಾಗಿದೆ.

ಇಮೇಲ್ ಮೂಲಕ ನಿಗೂಢ ಯೋಗಿ ನಿರ್ದೇಶನ

ನಿಗೂಢ ಯೋಗಿ ಕುರಿತಂತೆ ಚಿತ್ರಾ ರಾಮಕೃಷ್ಣ ಅವರು ವಿಚಿತ್ರ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಯೋಗಿಗೆ ಯಾವುದೇ ಭೌತಿಕ ವ್ಯಕ್ತಿತ್ವ ಇಲ್ಲ ಮತ್ತು ಅವನು ಅವನ ಇಚ್ಛೆಯಂತೆ ರೂಪ ಪಡೆಯುತ್ತಾರೆ ಎಂದಿದ್ದಾರೆ.  ಇಮೇಲ್ ಐಡಿ ಮೂಲಕ ಸಂವಹನ ನಡೆಸಿದ್ದಾಗಿ ಹೇಳುತ್ತಿದ್ದಾರೆ.

ಇದನ್ನೂ ಓದಿ:  Mysore Silk Sarees: ಮೈಸೂರು ಸಿಲ್ಕ್ ಸೀರೆಯ ಇತಿಹಾಸ ಗೊತ್ತಾ? ಮೈಸೂರು ಸಿಲ್ಕ್ ಯಾಕೆ ಅಷ್ಟೊಂದು ದುಬಾರಿ?

ಪವಿತ್ರ ಸ್ಥಳಗಳಲ್ಲಿ ಯೋಗಿ ಭೇಟಿಯಾಗಿದ್ದ ಚಿತ್ರಾ

ಹಿಮಾಲಯ ಸೇರಿದಂತೆ ಹಲವು ಪವಿತ್ರ ಕ್ಷೇತ್ರಗಳಲ್ಲಿ ಆ ಯೋಗಿ ನನಗೆ ಕಾಣಿಸಿಕೊಂಡಿದ್ದಾರೆ ಅಂತ ಚಿತ್ರಾ ಹೇಳುತ್ತಿದ್ದಾರೆ. ಈ ಯೋಗಿ ಹಿಮಾಲಯ ಶ್ರೇಣಿಗಳಲ್ಲಿ ವಾಸಿಸುತ್ತಾನೆ ಎಂದಾದರೆ, ಅವನು ಈ-ಮೇಲ್‌ಗಳನ್ನು ಬಳಸುತ್ತಿರುವುದು ಹೇಗೆ? ಅವರು ನಿಮ್ಮೊಂದಿಗೆ ನಿಯಮಿತವಾಗಿ ಪತ್ರವ್ಯವಹಾರ ನಡೆಸುತ್ತಿದ್ದು ಹೇಗೆ? ಎಂಬ ಸೆಬಿಯ ಪ್ರಶ್ನೆಗೆ, ಚಿತ್ರಾ ಉತ್ತರಿಸಿದ್ದು, “ನನಗೆ ತಿಳಿದಿರುವಂತೆ, ಅವರ ಆಧ್ಯಾತ್ಮಿಕ ಶಕ್ತಿಗಳು ಅಂತಹ ಯಾವುದೇ ಭೌತಿಕ ಕೋ-ಆರ್ಡಿನೇಟ್‌ಗಳನ್ನು ಹೊಂದುವ ಅಗತ್ಯವಿಲ್ಲ” ಎಂದು ತಿಳಿಸಿದ್ದರಂತೆ.

ಸಿಬಿಐನಿಂದ ಮುಂದುವರೆದ ತನಿಖೆ

ಮೊನ್ನೆ ಮೊನ್ನೆಯಷ್ಟೇ ಚಿತ್ರಾ ರಾಮಕೃಷ್ಣ ಹಾಗೂ ಇತರೇ ಆರೋಪಿಗಳ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ. ಅಲ್ಲದೇ ಚಿತ್ರಾ ಹಾಗೂ ಇತರರನ್ನು ತೀವ್ರ ವಿಚಾರಣೆಗೆ ಒಳಪಡಿಸಿದೆ.
Published by:Annappa Achari
First published: