• Home
  • »
  • News
  • »
  • explained
  • »
  • Mysuru Gumbaz Bus Stand: ಮೈಸೂರಿನಲ್ಲಿ 'ಗುಂಬಜ್' ಬಸ್ ನಿಲ್ದಾಣ ಜಟಾಪಟಿ! ಬಿಜೆಪಿ vs ಬಿಜೆಪಿ ಎನ್ನುವ ಪರಿಸ್ಥಿತಿ!

Mysuru Gumbaz Bus Stand: ಮೈಸೂರಿನಲ್ಲಿ 'ಗುಂಬಜ್' ಬಸ್ ನಿಲ್ದಾಣ ಜಟಾಪಟಿ! ಬಿಜೆಪಿ vs ಬಿಜೆಪಿ ಎನ್ನುವ ಪರಿಸ್ಥಿತಿ!

ವಿವಾದಕ್ಕೆ ಕಾರಣವಾದ ಬಸ್ ನಿಲ್ದಾಣ

ವಿವಾದಕ್ಕೆ ಕಾರಣವಾದ ಬಸ್ ನಿಲ್ದಾಣ

ಹಿಜಾಬ್ ವಿವಾದ, ಕೇಸರಿ ಶಾಲು ವಿವಾದ, ಜಟ್ಕಾ ಕಟ್ ಹಲಾಲ್ ಕಟ್ ಮಾಂಸ ವಿವಾದ, ಹಿಂದೂ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ, ಆಜಾನ್ ವಿವಾದ.. ಹೀಗೆ ಧರ್ಮ ಧರ್ಮಗಳ ಮಧ್ಯೆ ನಡೆಯುತ್ತಿರುವ ವಿವಾದಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದೀಗ ಈ ವಿವಾದಕ್ಕೆ ಗುಮ್ಮಟ ವಿವಾದವೂ ಸೇರಿಕೊಂಡಿದೆ!

ಮುಂದೆ ಓದಿ ...
  • News18 Kannada
  • Last Updated :
  • Mysore, India
  • Share this:

ಸರ್ವಜನಾಂಗದ ಶಾಂತಿಯ ತೋಟ ಅಂತಾನೇ ಕರೆಸಿಕೊಂಡ ಕರ್ನಾಟಕದಲ್ಲಿ ಜಾತಿ ಜಾತಿಗಳ (Caste) ಮಧ್ಯೆ ಸಂಘರ್ಷ (conflict), ಧರ್ಮ ಧರ್ಮಗಳ (religions) ಮಧ್ಯೆ ಸಂಘರ್ಷ ಜೋರಾಗುತ್ತಿದೆ. ಹಿಜಾಬ್ ವಿವಾದ (Hijab controversy), ಕೇಸರಿ ಶಾಲು ವಿವಾದ, ಜಟ್ಕಾ ಕಟ್ ಹಲಾಲ್ ಕಟ್ ಮಾಂಸ ವಿವಾದ, ಹಿಂದೂ (Hindu) ಜಾತ್ರೆಗಳಲ್ಲಿ ಮುಸ್ಲಿಂ (Muslim) ವ್ಯಾಪಾರಿಗಳಿಗೆ ನಿಷೇಧ, ಆಜಾನ್ (Azan) ವಿವಾದ.. ಹೀಗೆ ಧರ್ಮ ಧರ್ಮಗಳ ಮಧ್ಯೆ ನಡೆಯುತ್ತಿರುವ ವಿವಾದಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದೀಗ ಈ ವಿವಾದಕ್ಕೆ ಗುಮ್ಮಟ ವಿವಾದವೂ (Gumbaz Controversy) ಸೇರಿಕೊಂಡಿದೆ! ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜು ಎದುರು ಅಪೂರ್ಣಗೊಂಡಿರುವ ಬಸ್ ಶೆಲ್ಟರ್‌ನಲ್ಲಿ ಈ ರೀತಿಯ ರಚನೆ ಮಾಡಲಾಗಿದೆ. ಗೋಪುರಗಳು ಮೇಲೆ ಕಳಶದ ಆಕೃತಿ ಮಾಡಿದ್ದು, ಇದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ (Pratap Simha) ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿದೆ.  


ವಿವಾದದ ಮೂಲವಾದ ಬಸ್ ನಿಲ್ದಾಣ!
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜು ಎದುರು ಅಪೂರ್ಣಗೊಂಡಿರುವ ಬಸ್ ಶೆಲ್ಟರ್‌ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಬಸ್ ಶೆಲ್ಟರ್‌ನಲ್ಲಿ ಸುತ್ತೂರು ಮಠದ ಮಾಜಿ ಮಠಾಧೀಶರಾದ ಶಿವರಾತ್ರಿ ರಾಜೇಂದ್ರ ಸ್ವಾಮಿ ಮತ್ತು ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿ ಸ್ವಾಮಿಗಳ ಭಾವಚಿತ್ರವಿದೆ. ಈ ಬಸ್ ನಿಲ್ದಾಣದ ಮೇಲೆ ಗುಮ್ಮಟದ ಆಕೃತಿ ಇದೆ, ಅದಕ್ಕೆ ಕಳಶ ಜೋಡಿಸಲಾಗಿದೆ. ಅಂದಹಾಗೆ ಬಿಜೆಪಿ ಶಾಸಕ ಎಸ್‌ಎ ರಾಮದಾಸ್ ಅವರು ವಿಧಾನಸಭೆಯಲ್ಲಿ ಪ್ರತಿನಿಧಿಸುವ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಈ ವಿವಾದಾತ್ಮಕ ಬಸ್ ನಿಲ್ದಾಣವಿದೆ.


ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್


ಗುಮ್ಮಟದ ಮೇಲೆ ಕಳಶಗಳನ್ನು ಇರಿಸಲಾಗಿದ್ದು, ಇದು ಮುಸ್ಲಿಮರ ಆರಾಧನ ಕೇಂದ್ರವಾದ ಮಸೀದಿಗಳನ್ನು ಹೋಲುತ್ತದೆ ಎನ್ನುವ ಕಾರಣದಿಂದ ವಿವಾದಕ್ಕೆ ತುತ್ತಾಗಿದೆ. ಕಳಶ ಇರುವ ಗುಮ್ಮಟಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದಾದ ಬಳಿಕ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದರು. ದೊಡ್ಡದಾಗಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಇಷ್ಟಾಗುತ್ತಿದ್ದಂತೆ ಒಂದು ದಿನದ ನಂತರ 'ಕಲಶ' ಮತ್ತು ದಾರ್ಶನಿಕರ ಚಿತ್ರಗಳು ಬಂದಿವೆ.
ಬಸ್ ನಿಲ್ದಾಣ ಒಡೆಯುತ್ತೇನೆ ಎಂದ ಪ್ರತಾಸ್ ಸಿಂಹ


ಬಸ್ ನಿಲ್ದಾಣದಲ್ಲಿ ಗುಂಬಜ್ ತರಹದ ವಿನ್ಯಾಸದ ಬಗ್ಗೆ ತಿಳಿದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು. ಮೈಸೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಬಸ್ ಶೆಲ್ಟರ್‌ನ ಮೇಲಿರುವ 'ಗುಂಬಜ್' ತರಹದ ರಚನೆಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದ್ರು. ಅಧಿಕಾರಿಗಳಿಗೆ ನಾಲ್ಕು ದಿನಗಳ ಗಡುವು ವಿಧಿಸಿದ್ದು, ಅಧಿಕಾರಿಗಳು ಗುಮ್ಮಟಗಳನ್ನು ಕೆಳಗಿಳಿಸದಿದ್ದರೆ ಮಸೀದಿಗೆ ಹೋಲಿಸಿದ ಕಟ್ಟಡವನ್ನು ಕೆಡವುದಾಗಿ ಎಚ್ಚರಿಕೆ ನೀಡಿದ್ದರು.


ರಾಜ್ಯ ರಾಜಕೀಯದಲ್ಲಿ ಕೋಲಾಹಲ


ಸದ್ಯ ಈ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಜತೆಗೆ ರಾಜಕೀಯ ನಾಯಕರು ತಮಗೆ ತೋಚಿದಂತೆ ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಲೇ ಸಾಗುತ್ತಿದ್ದಾರೆ. ಇದರ ನಡುವೆ ಸಂಸದ ಪ್ರತಾಪ್ ಸಿಂಹ ವರ್ಸಸ್ ರಾಮದಾಸ್ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.


ಬಸ್ ನಿಲ್ದಾಣದ ಬಗ್ಗೆ ಶಾಸಕರು ಹೇಳಿದ್ದೇನು?


ಇನ್ನು ತಮ್ಮ ಅವಧಿಯಲ್ಲಿ, ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನಿರ್ಮಾಣವಾದ ಬಸ್ ನಿಲ್ದಾಣದ ಬಗ್ಗೆ ಶಾಸಕ ರಾಮದಾಸ್ ಸ್ಪಷ್ಟನೆ ನೀಡಿದ್ದಾರೆ. ಮೈಸೂರು ನಗರ ಪಾರಂಪರಿಕ ನಗರಿಯಾಗಿರುವುದರಿಂದ ಇದರ ಮಹತ್ವ ಸಾರುವ ಉದ್ದೇಶದಿಂದ ಕೆ. ಆರ್. ಕ್ಷೇತ್ರದ 54ನೇ ವಾರ್ಡ್‍ನ ಬೆಂಗಳೂರು ನೀಲಗಿರಿ (ಊಟಿ) ರಸ್ತೆಯಲ್ಲಿ ಶಾಸಕರ ನಿಧಿಯಿಂದ 10 ಲಕ್ಷ ರೂ ವೆಚ್ಚದಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಶೇ. 60ರಷ್ಟು ಕಾಮಗಾರಿ ಮುಗಿದಿದೆ. ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.


ಮೈಸೂರಿನ ಪಾರಂಪರಿಕತೆಯನ್ನು ತೋರಿಸುವ ದೃಷ್ಟಿಯಲ್ಲಿ ಅರಮನೆಯಲ್ಲಿರುವ ಮಾದರಿಯಲ್ಲಿ ಪ್ರಯಾಣಿಕರ ತಂಗುದಾಣ ನಿರ್ಮಿಸಲಾಗಿದೆ. ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಸಾಮಾಜಿಕ ಜಾಲ ತಾಣಗಳಲ್ಲಿ ಮಸೀದಿ ರೀತಿಯಲ್ಲಿ ತಂಗುದಾಣವನ್ನು ನಿರ್ಮಿಸಲಾಗುತ್ತಿದೆ ಅಂತ ಆರೋಪಿಸುತ್ತಿದ್ದಾರೆ ಅಂತ ಹೇಳಿದ್ದಾರೆ.


“ರಾತ್ರೋ ರಾತ್ರಿ ಕಳಸಗಳನ್ನು ನಿರ್ಮಾಣ ಮಾಡಿಲ್ಲ”


ಇನ್ನು ಇದರ ಗುತ್ತಿಗೆದಾರ ಮುಸ್ಲಿಂ ವ್ಯಕ್ತಿ ಅಲ್ಲ. ದಂತಿ ಕನ್ ಸ್ಟ್ರಕ್ಷನ್ ಹೆಸರಿನಲ್ಲಿ ಮಹದೇವ್ ಎಂಬುವವರು ನಿರ್ಮಿಸುತ್ತಿದ್ದಾರೆ. ಈ ತಂಗುದಾಣಗಳಲ್ಲಿ ಎಲ್ ಇಡಿ ಸ್ಟ್ರೀನ್ ಅಳವಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಮಾಹಿತಿ ನೀಡಲಾಗುವುದು ಅಂತ ರಾಮದಾಸ್ ಹೇಳಿದ್ದಾರೆ. ಇನ್ನು ಕಾಮಗಾರಿ ಹಂತಹಂತವಾಗಿ ನಡೆಯುತ್ತಿದೆ. ಸಂಸದರ ಹೇಳಿಕೆ ಬಳಿಕ ರಾತ್ರೋರಾತ್ರಿ ಕಳಸ ಅಳವಡಿಸಲಾಗಿದೆ ಎಂಬ ಸುದ್ದಿಗಳು ಸುಳ್ಳು. ಇದನ್ನು ವಾರದ ಹಿಂದೆಯೇ ನಿರ್ಮಿಸಲಾಗಿದೆ. ಮೈಸೂರಿನ ಹಲವಾರು ಕಡೆಗಳಲ್ಲಿ ಇಂತಹ ತಂಗುದಾಣವನ್ನು ನಿರ್ಮಿಸಲಾಗಿದೆ. ಈ ವಿನ್ಯಾಸಗಳಿಂದ ವಿವಾದವಾಗಿದೆ ಎನ್ನುವುದಾದರೆ ತಜ್ಞರ ಸಮಿತಿ ರಚನೆ ಮಾಡಿ ಅವರು ವರದಿ ನೀಡಲಿ ಎಂದು ಮನವಿ ಮಾಡಿದ್ದಾರೆ. ಪ್ರಯಾಣಿಕರ ತಂಗುದಾಣವನ್ನು ಪಾರಂಪರಿಕ ದೃಷ್ಟಿಯಿಂದ ನಿರ್ಮಿಸಲಾಗಿದೆ ಹೊರತು ಧರ್ಮದ ಆಧಾರದಲ್ಲಿ ಅಲ್ಲ ಎಂದು ರಾಮದಾಸ್ ಸ್ಪಷ್ಟೀಕರಣ ನೀಡಿದ್ದಾರೆ.


“ಪಕ್ಷದಿಂದಲೇ ನನಗೆ ಕಿರುಕುಳ”


ಇನ್ನು ನಾನು ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಶಿಕ್ಷೆ ಕೊಡಲಿ, ನಷ್ಟದ ಹಣವನ್ನ ನನ್ನ ಸಂಬಳದಿಂದ ಭರಿಸುತ್ತೇನೆ ಅಂತ ರಾಮದಾಸ್ ಹೇಳಿದ್ದಾರೆ. ನನ್ನನ್ನು ಬಿಜೆಪಿ ಪಕ್ಷದಿಂದ ಬಿಡಿಸಲು ಕಿರುಕುಳ ನೀಡಲಾಗುತ್ತಿದೆ. ಈ 30 ವರ್ಷದಲ್ಲಿ ಬಿಜೆಪಿಯ 11 ಜನ ಶಾಸಕರು ಇದ್ದರು, ಅವರಿಗೆ ಕಿರುಕುಳ ನೀಡಿದ್ರಿಂದ 10 ಜನ ಬೇರೆ ಪಕ್ಷಕ್ಕೆ ಹೊರಟು ಹೋದರು. ಉಳಿದಿರುವವನು ನಾನೊಬ್ಬನೇ, ದಯಮಾಡಿ ನನ್ನನ್ನು ಬಿಟ್ಟು ಬಿಡಿ, ಮತ್ತೇನೂ ಪ್ರಶ್ನೆ ಕೇಳಬೇಡಿ ಎಂದು ಕೈ ಮುಗಿದು ರಾಮದಾಸ್‌ ಕೇಳಿಕೊಂಡಿದ್ದಾರೆ.


ರಾಮದಾಸ್ ಆರೋಪಕ್ಕೆ ಪ್ರತಾಪ್ ಸಿಂಹ ಟಾಂಗ್


ರಾಮದಾಸ್ ಆರೋಪಕ್ಕೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ರು. ಇಲ್ಲಿ ರಾಜಕಾರಣಿಗಳ ಬಳಿ ನನ್ನನ್ನೇ ಸುಡುವಷ್ಟು ಹಣವಿದೆ. ಪ್ರಧಾನಿ ಮೋದಿಯಿಂದ ಬೆನ್ನು ತಟ್ಟಿಸಿಕೊಂಡವರಿಗೆ ಕಿರುಕುಳ ಕೊಡವಷ್ಟು ದೊಡ್ಡವನು ನಾನಲ್ಲ. ರಾಮದಾಸ್ ಅವರಿಗೆ ಕಿರುಕುಳ ಕೊಡುವಷ್ಟು ಶಕ್ತಿ ನನಗೆಲ್ಲಿದೆ ಹೇಳಿ? ನಾನು ಅಭಿವೃದ್ದಿಗಾಗಿ ರಾಜಕಾರಣ ಮಾಡುತ್ತೇನೆ . ಈ ಹಿಂದೆ ಶಾಸಕ ರಾಮದಾಸ್ ಕಾಂಗ್ರೆಸ್ ಪಕ್ಷದಲ್ಲಿದ್ದರು. ಬಾಬ್ರಿ ಮಸೀದಿ ಧ್ವಂಸ ಬಳಿಕ ಬಿಜೆಪಿಗೆ ಬಂದರು. ರಾಮದಾಸ್ ಗೆ ಕಿರುಕುಳ ಆಗುತ್ತೆ ಎಂದು ಹೇಳಿದ್ದಾರೆ. ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ. ಗುಂಬಜ್ ಒಡೆದರೇ ಟಿಪ್ಪು ಅನುಯಾಯಿಗಳಿಗೆ ಕಿರಿಕಿರಿಯಾಗಬೇಕು. ಶಿವಾಜಿ ಅನುಯಾಯಿಗಳಿಗೆ ಕಿರುಕುಳ ಆಗಲ್ಲ ಎಂದು ಟಾಂಗ್ ನೀಡಿದ್ದಾರೆ.


ಇದನ್ನೂ ಓದಿ: Green Hydrogen: ಗ್ರೀನ್‌ ಹೈಡ್ರೋಜನ್‌ ಪ್ರಾಜೆಕ್ಟ್​ಗಳಿಗೆ ಮಂಗಳೂರನ್ನೇ ಆಯ್ಕೆ ಮಾಡುತ್ತಿರೋದೇಕೆ? ಬಯಲಾಯ್ತು ಕುತೂಹಲಕಾರಿ ಮಾಹಿತಿ!


ಬಿಜೆಪಿ ವಿರುದ್ಧ ಮುಗಿಬಿದ್ದ ವಿಪಕ್ಷಗಳು


ಇನ್ನು ಪ್ರತಾಪ್ ಸಿಂಹ ಹೇಳಿಕೆಗೆ ವಿಪಕ್ಷಗಳು ಕಿಡಿಕಾರಿವೆ. ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಸೇರಿದಂತೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Published by:Annappa Achari
First published: