Explained: ಆಹಾರ ಬೆಲೆ ಹೆಚ್ಚಳಕ್ಕೂ ಬ್ಯಾಂಕ್ ಬಡ್ಡಿದರ ಹೆಚ್ಚಳಕ್ಕೂ ಲಿಂಕ್ ಇದೆಯೇ?

ಅಮೆರಿಕದ ಆರ್ಥಿಕತೆಯ ತಜ್ಞರು ಮತ್ತು ವಿಶ್ಲೇಷಕರು ಪ್ರತಿ ಬಾರಿಯೂ ಫೆಡ್ ಹಣದುಬ್ಬರವನ್ನು 2 ಅಥವಾ 3 ಪ್ರತಿಶತದಷ್ಟು ಕಡಿಮೆ ಮಾಡಲು ಪ್ರಯತ್ನಿಸಿದಾಗ ಅದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದ್ದು ಬೇರೆ ರೀತಿಯಲ್ಲಿ ಹೇಳುವುದಾದರೆ, ಹಣದುಬ್ಬರವನ್ನು 2% ಗೆ ಇಳಿಸಲು ಫೆಡ್ ತನ್ನ ಸಂಕಲ್ಪದಲ್ಲಿ ಸ್ಥಿರವಾಗಿದ್ದರೆ, ಮತ್ತೆ ಆರ್ಥಿಕ ಹಿಂಜರಿತಕ್ಕೆ ಅಮೆರಿಕ ಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಾಡಿಕೆಯಂತೆ ಫೆಡ್ ಎಂದು ಕರೆಯಲ್ಪಡುವ ಯುಎಸ್ ಸೆಂಟ್ರಲ್ ಬ್ಯಾಂಕ್ ಬಡ್ಡಿದರಗಳನ್ನು (Interest Rate) 75 ಬೇಸಿಸ್ ಪಾಯಿಂಟ್‌ಗಳಷ್ಟು (ಅಥವಾ 0.75 ಶೇಕಡಾ ಪಾಯಿಂಟ್‌ಗಳು) ಹೆಚ್ಚಿಸುವುದಾಗಿ ಘೋಷಿಸಿತು. ಇದರ ಹಿಂದಿರುವ ಪ್ರಮುಖ ಉದ್ದೇಶ ಹಣದುಬ್ಬರ (Inflation) ದರವನ್ನು 2% ಗೆ ಇಳಿಸುವುದಾಗಿತ್ತು. ಪ್ರಸ್ತುತ, ಅಮೆರಿಕದಲ್ಲಿ (America) ಹಣದುಬ್ಬರವು 9% ಕ್ಕೆ ಹತ್ತಿರದಲ್ಲಿದೆ. ಅಮೆರಿಕದ ಆರ್ಥಿಕತೆಯ ತಜ್ಞರು ಮತ್ತು ವಿಶ್ಲೇಷಕರು ಪ್ರತಿ ಬಾರಿಯೂ ಫೆಡ್ ಹಣದುಬ್ಬರವನ್ನು 2 ಅಥವಾ 3 ಪ್ರತಿಶತದಷ್ಟು ಕಡಿಮೆ ಮಾಡಲು ಪ್ರಯತ್ನಿಸಿದಾಗ ಅದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿದ್ದು ಬೇರೆ ರೀತಿಯಲ್ಲಿ ಹೇಳುವುದಾದರೆ, ಹಣದುಬ್ಬರವನ್ನು 2% ಗೆ ಇಳಿಸಲು ಫೆಡ್ ತನ್ನ ಸಂಕಲ್ಪದಲ್ಲಿ ಸ್ಥಿರವಾಗಿದ್ದರೆ, ಮತ್ತೆ ಆರ್ಥಿಕ ಹಿಂಜರಿತಕ್ಕೆ (Economic Downturn) ಅಮೆರಿಕ ಹೋಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮೊದಲನೇಯದಾಗಿ: ಹಣದುಬ್ಬರ ಎಂದರೇನು
ಪ್ರತಿಯೊಂದು ಸರಕು ಸಾಮಗ್ರಿಗಳ ಬೆಲೆ ಏರಿಕೆಯಾಗುವ ದರದ ಗತಿಯನ್ನೇ ಹಣದುಬ್ಬರ ಎನ್ನಲಾಗುತ್ತದೆ. ಹಣದುಬ್ಬರದ ಪ್ರಮಾಣ 2% ಎಂದಿದ್ದರೆ ಅದರ ಅರ್ಥ ಈ ವರ್ಷದ ಏಪ್ರಿಲ್‌ನಲ್ಲಿ ಸಾಮಾನ್ಯ ಬೆಲೆ ಮಟ್ಟವು ಕಳೆದ ವರ್ಷ ಏಪ್ರಿಲ್‌ನಲ್ಲಿದ್ದ ಬೆಲೆ ಮಟ್ಟಕ್ಕಿಂತ 2% ರಷ್ಟು ಹೆಚ್ಚಾಗಿದೆ ಎಂದು ಸೂಚಿಸುತ್ತದೆ.

ಅದು ನಿಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
ಬೇರೆ ರೀತಿಯಲ್ಲಿ ಹೇಳುವುದಾದರೆ, ಹಣದುಬ್ಬರದ ದರವು ಮಾರ್ಚ್‌ನಲ್ಲಿ 1%, ಏಪ್ರಿಲ್‌ನಲ್ಲಿ 2% ಮತ್ತು ನಂತರ ಮೇನಲ್ಲಿ 4% ಮತ್ತು ಜೂನ್‌ನಲ್ಲಿ 7% ಆಗಿ ಹೀಗೆ ಮೇಲ್ಮುಖವಾಗಿ ಚಲಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಪ್ರಪಂಚದ ಹೆಚ್ಚಿನ ಆರ್ಥಿಕತೆಗಳಲ್ಲಿ ಇದು ನಿಖರವಾಗಿ ನಡೆಯುತ್ತಿದೆ. ಉದಾಹರಣೆಗೆ ಭಾರತವನ್ನು ತೆಗೆದುಕೊಳ್ಳಿ, ಇಲ್ಲಿ ಹಣದುಬ್ಬರ ದರವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 4% ಇದ್ದದ್ದು ಈ ವರ್ಷ ಏಪ್ರಿಲ್‌ನಲ್ಲಿ ಸುಮಾರು 8% ಕ್ಕೆ ಸ್ಥಿರವಾಗಿ ಏರಿ ನಿಂತಿದೆ.

ಹಣದುಬ್ಬರ ಕೆಟ್ಟದ್ದೆ?
ಪ್ರತಿಯೊಂದರ ಬೆಲೆಗಳು ಹೆಚ್ಚುವುದನ್ನು ಯಾರು ತಾನೇ ಸಹಿಸಿಕೊಳ್ಳಬಲ್ಲರು? ಒಂದೊಮ್ಮೆ ಈ ಕೆಳಗಿನ ಪರಿಸ್ಥಿತಿಗಳನ್ನೊಮ್ಮೆ ಅವಲೋಕಿಸಿ. ವಸ್ತುಗಳನ್ನು ದುಬಾರಿಯಾಗಿಸುವುದು ಸೇರಿದಂತೆ ಹಣದುಬ್ಬರ ಆರ್ಥಿಕ ನಿರ್ಧಾರಗಳನ್ನು ಮಾಡುವ ಆಧಾರವನ್ನೂ ಮೂಲಭೂತವಾಗಿ ನಾಶಪಡಿಸುತ್ತದೆಯೇ? ನೀವು ಇಂದು ಅಥವಾ ಆರು ತಿಂಗಳ ನಂತರ ಕಾರನ್ನು ಖರೀದಿಸಬೇಕೇ?

ನೀವು ಹಣವನ್ನು ಸಾಲವಾಗಿ ನೀಡಬೇಕೇ?
ನಿಮ್ಮ ಸಾಲವನ್ನು ಮರುಪಾವತಿಸಲು ನೀವು ತಡೆಹಿಡಿಯಬೇಕೇ? ಆರು ತಿಂಗಳ ಅವಧಿಯಲ್ಲಿ ಬಿಲ್‌ಗಳನ್ನು ಪಾವತಿಸಲು ನಿಮ್ಮ ಆದಾಯವು ಸಾಕಾಗುತ್ತದೆ ಎಂದು ನಿಮಗೆ ಖಚಿತವಾಗಿದೆಯೇ? ನಿಮ್ಮ ಬಾಸ್‌ಗೆ ಯಾವ ಹೆಚ್ಚಳವನ್ನು ಕೇಳಬೇಕು? ಹೊಸ ವ್ಯವಹಾರವನ್ನು ಪ್ರಾರಂಭಿಸಲು ನೀವು ಹೂಡಿಕೆ ಮಾಡಬೇಕೇ? ಹೀಗೆ ಇತ್ಯಾದಿ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ಹಣದುಬ್ಬರ ಖಂಡಿತ ಒಳ್ಳೆಯದಂತೂ ಅಲ್ಲ ಎಂದಷ್ಟೇ ಹೇಳಬಹುದು.

ಆರ್ಥಿಕ ಹಿಂಜರಿತ ಎಂದರೇನು
ಆರ್ಥಿಕ ಹಿಂಜರಿತದ ತಾಂತ್ರಿಕ ವ್ಯಾಖ್ಯಾನ ನೋಡುವುದಾದರೆ ಸತತ ಎರಡು ತ್ರೈಮಾಸಿಕಗಳಲ್ಲಿ ಆರ್ಥಿಕತೆ ಅಧೋಗತಿಗೆ ತಲುಪುವುದು ಹಾಗೂ ಒಂದು ತ್ರೈಮಾಸಿಕದಲ್ಲಿ ಮೂರು ತಿಂಗಳುಗಳಿರುತ್ತವೆ. 1981 ರಲ್ಲಿ ಅಮೆರಿಕದ ಅಧ್ಯಕ್ಷರಾಗಿ ಜಿಮ್ಮಿ ಕಾರ್ಟರ್ ಅವರ ನಂತರ ಆ ಸ್ಥಾನಕ್ಕೆ ಏರಿದ್ದ ರೊನಾಲ್ಡ್ ರೇಗನ್ ತಮ್ಮ ಹಾಸ್ಯ ಪ್ರಜ್ಞೆಯುಳ್ಳ ಹೇಳಿಕೆಗಾಗಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು.

ಆರ್ಥಿಕ ಹಿಂಜರಿತ/ಹಿನ್ನಡೆ ಅಥವಾ ರಿಸೆಷನ್ ಅನ್ನು ಅವರು ಒಂದೊಮ್ಮೆ ಹೀಗೆ ವ್ಯಾಖ್ಯಾನಿಸಿದ್ದರು, "ನಿಮ್ಮ ನೆರೆಯಲ್ಲಿರುವ ವ್ಯಕ್ತಿ ಕೆಲಸ ಕಳೆದುಕೊಂಡರೆ ಅದು ರಿಸೆಷನ್, ನೀವು ಕಳೆದುಕೊಂಡರೆ ಅದು ಡಿಪ್ರೆಷನ್ ಹಾಗೂ ಇವೆರಡರ ರಿಕವರಿ ಎಂದರೆ ಕಾರ್ಟರ್ ತಮ್ಮ ಕೆಲಸ ಕಳೆದುಕೊಳ್ಳುವುದು". ವಾಸ್ತವದಲ್ಲಿ ಹಣದುಬ್ಬರವನ್ನು ತಗ್ಗಿಸಲು ಅಂದು ಕಾರ್ಟರ್ ಪ್ರಯತ್ನಿಸಿದ್ದು ಆರ್ಥಿಕ ಹಿಂಜರಿತಕ್ಕೆ ಕಾರಣವಾಗಿತ್ತು.

ಆರ್ಥಿಕ ಹಿಂಜರಿತ ಏಕೆ ಕೆಟ್ಟದ್ದು? ನೀವೇ ಕೆಲಸ ಕಳೆದುಕೊಳ್ಳಲಿರುವ ನೆರೆಯ ವ್ಯಕ್ತಿಯಾಗಿರಬಹುದು..
ಈಗ ನಿಮಗೆ ಹೀಗೆ ಮಾಡುವುದರಿಂದ ಆರ್ಥಿಕ ಹಿಂಜರಿತ ಉಂಟಾಗಬಹುದೆಂಬ ವಿಷಯ ಗೊತ್ತಿದ್ದರೂ, ಯುಎಸ್ ಫೆಡರಲ್ ಬಡ್ಡಿದರಗಳನ್ನು ಏಕೆ ಹೆಚ್ಚಿಸುತ್ತಿದೆ ಎಂದು ನಿಮ್ಮಲ್ಲಿ ಹಲವರು ಆಶ್ಚರ್ಯ ಪಡಬಹುದು. ಈ ಪ್ರಶ್ನೆಯು ಅಮೆರಿಕ ವಿಷಯದಲ್ಲಿ ಎಷ್ಟು ನಿಜವಾಗುತ್ತದೆಯೋ ಅಷ್ಟೇ ಭಾರತದ ಆರ್‌ಬಿಐ ವಿಷಯದಲ್ಲೂ ಸಹ ನಿಜವಾಗಿದೆ. ಆದರೂ ಭಾರತದಲ್ಲಿ, ಆರ್ಥಿಕತೆಯು ಹಿಂಜರಿತಕ್ಕೆ ಹೋಗುವ ನಿರೀಕ್ಷೆಯಿಲ್ಲ ಆದರೆ ಮತ್ತಷ್ಟು ನಿಧಾನಗೊಳ್ಳುತ್ತದೆ, ಇದರಿಂದಾಗಿ ಆದಾಯ ಕುಗ್ಗುತ್ತದೆ, ಉದ್ಯೋಗಗಳು ನಷ್ಟವಾಗುತ್ತವೆ ಅಥವಾ ಕನಿಷ್ಠ ಪಕ್ಷ ನಿರುದ್ಯೋಗ ಸಮಸ್ಯೆಯಿಂದ ಬಳಲುತ್ತಿರುವ ಸ್ಥಿತಿ ಮತ್ತಷ್ಟು ಹದಗೆಡಬಹುದು.

ಇದನ್ನೂ ಓದಿ:  GSAT-24 ಸಂವಹನ ಉಪಗ್ರಹ ಉಡಾವಣೆ ಮಾಡಿದ ಭಾರತ- ಇದರಿಂದಾಗುವ ಪರಿಣಾಮಗಳೇನು? ಇಲ್ಲಿದೆ ವಿವರ

ಅಷ್ಟಾಗಿಯೂ, ಫೆಡ್‌ನ (ಅಥವಾ ಆರ್‌ಬಿಐ) ಮಾಡಿರುವ ನಿರ್ಧಾರವು ಇನ್ನಷ್ಟು ವಿಲಕ್ಷಣವಾಗಿ ಕಾಣುವಂತೆ ಮಾಡುವ ಅಂಶವೆಂದರೆ, ಅವರು ಪ್ರಸ್ತುತ ಹಣದುಬ್ಬರದ ಏರಿಕೆಯು ಆಹಾರ ಮತ್ತು ಇಂಧನದ ಹೆಚ್ಚುತ್ತಿರುವ ವೆಚ್ಚಗಳಿಂದಾಗಿ ಪೂರೈಕೆ ಸರಪಣಿಗೆ ಅಡಚಣೆಗಳುಂಟಾಗಿರುವುದು ಎಂದು ಬಹಿರಂಗವಾಗಿ ಹೇಳಿರುವುದು.

ಅಮೆರಿಕದ ಫೆಡ್ ನ ಚೇರ್ಪರ್ಸನ್ ಆಗಿರುವ ಜೇ ಪೊವೆಲ್ ಕೂಡ ಇದೇ ವಿಷಯವನ್ನು ಹೇಳಿದ್ದಾರೆ: "ರಷ್ಯಾದ ಉಕ್ರೇನ್ ಆಕ್ರಮಣದಿಂದ ಉಂಟಾದ ಕಚ್ಚಾ ತೈಲ ಮತ್ತು ಇತರ ಸರಕುಗಳ ಬೆಲೆಗಳ ಏರಿಕೆಯು ಗ್ಯಾಸೋಲಿನ್ ಮತ್ತು ಆಹಾರದ ಬೆಲೆಗಳನ್ನು ಹೆಚ್ಚಿಸುತ್ತಿದೆ ಮತ್ತು ಹಣದುಬ್ಬರದ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡುತ್ತಿದೆ" ಎಂದು ಹೇಳಿದ್ದಾರೆ.

ಹಣದುಬ್ಬರವನ್ನು ತಗ್ಗಿಸಲು ಅಮೆರಿಕದ ಫೆಡ್ ಏನು ಮಾಡುತ್ತಿದೆ
ಪರಿಸ್ಥಿತಿ ಹೀಗಿರುವಾಗ, ಹೊಸ ಕಾರು ಖರೀದಿಸಲು ಅಥವಾ ಹೊಸ ಅಂಗಡಿಯನ್ನು ತೆರೆಯಲು ಅಥವಾ ಶಿಕ್ಷಣ ಅಥವಾ ಗೃಹ ಸಾಲವನ್ನು ತೆಗೆದುಕೊಳ್ಳುವ ಜನರಿಗೆ ಹೆಚ್ಚಿನ ಬಡ್ಡಿ ದರವನ್ನು ವಿಧಿಸಲು ಬ್ಯಾಂಕುಗಳನ್ನು ಒತ್ತಾಯಿಸುವ ಮೂಲಕ ಆಹಾರ ಮತ್ತು ಇಂಧನ ಬೆಲೆಗಳನ್ನು ಇಳಿಸಲು ಸಾಧ್ಯವಿಲ್ಲ ಎಂದು ಆರ್‌‌‌‌‌‍ಬಿಐಗಾಗಲಿ ಅಥವಾ ಫೆಡ್ ಗಾಗಲಿ ತಿಳಿದಿಲ್ಲವೇ? ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ, ವಿಡಂಬನೆ ಎಂದರೆ ಅವರಿಗೂ ಸಹ ಈ ಬಗ್ಗೆ ತಿಳಿದಿರುವುದು.

ಹಣದುಬ್ಬರ ತಗ್ಗಿಸಲು ಅಸಹಾಯಕತೆ
ಹಣದುಬ್ಬರವನ್ನು ತಗ್ಗಿಸಲು ಅಮೆರಿಕದ ಫೆಡ್ "ಆರ್ಥಿಕ ಹಿಂಜರಿತವನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆಯೇ" ಎಂದು ಪತ್ರಕರ್ತರೊಬ್ಬರು ಅವರನ್ನು ನೇರವಾಗಿ ಕೇಳಿದಾಗ, ಚೇರ್ ಪರ್ಸನ್ ಆಗಿರುವ ಜೇ ಪೊವೆಲ್ ಅವರು "ನಮ್ಮ ನಿಯಂತ್ರಣದಲ್ಲಿಲ್ಲದ ಅಂಶಗಳಿಂದ" ಹಣದುಬ್ಬರವನ್ನು ತಗ್ಗಿಸಲು ತಮ್ಮ ಅಸಹಾಯಕತೆಯನ್ನು ಒಪ್ಪಿಕೊಂಡರು.

ಇದಲ್ಲದೆ ಅವರು ಮತ್ತೆ ಮುಂದುವರೆಯುತ್ತ, "ಮತ್ತೆ, ಉಕ್ರೇನ್‌ನಲ್ಲಿನ ಯುದ್ಧದ ಪರಿಣಾಮದ ಕುರಿತು ಇಲ್ಲಿ ಒಮ್ಮೆ ಯೋಚಿಸಿ, ಇದು ನಿಜಕ್ಕೂ ಇಂಧನ ಶಕ್ತಿ, ಆಹಾರ, ರಸಗೊಬ್ಬರ ಮತ್ತು ಕೈಗಾರಿಕಾ ರಾಸಾಯನಿಕಗಳ ಬೆಲೆಗಳಲ್ಲಿ ದಿಢೀರ್ ಏರಿಕೆಯನ್ನುಂಟು ಮಾಡಿದೆ ಹಾಗೂ ಜೊತೆಗೆ ಪೂರೈಕೆ ಸರಪಳಿಗಳನ್ನು ಇನ್ನಷ್ಟು ವಿಶಾಲವಾಗಿ ಹರಡುವಂತೆ ಮಾಡಿದ್ದು ಇದುನಿರೀಕ್ಷೆಗಿಂತ ದೊಡ್ಡದಾಗಿದೆ ಮತ್ತು ದೀರ್ಘಕಾಲದವರೆಗೆ ಇರಲಿದೆ" ಎಂದು ಹೇಳಿದ್ದಾರೆ.

ಮೂರನೇಯದಾಗಿ: ಹಣದುಬ್ಬರ ನಿರೀಕ್ಷೆಗಳು ಯಾವುವು ಮತ್ತು ಅವು ಏಕೆ ಮುಖ್ಯವಾಗಿವೆ?
ಸರಳವಾಗಿ ಹೇಳುವುದಾದರೆ, ಹಣದುಬ್ಬರ ನಿರೀಕ್ಷೆಗಳು ಜನರ ಅಥವಾ ಭವಿಷ್ಯದಲ್ಲಿ ಹಣದುಬ್ಬರ ದರ ಹೇಗಿರುತ್ತದೆ ಎಂಬ ಕುಟುಂಬಗಳ ನಿರೀಕ್ಷೆಯನ್ನು ಸೂಚಿಸುತ್ತದೆ. ಇದು ಮುಖ್ಯವಾದ ವಿಚಾರ ಏಕೆಂದರೆ ಈ ನಿರೀಕ್ಷೆಯು ಜನರ ಆರ್ಥಿಕ ನಡವಳಿಕೆಯನ್ನು ನಿರ್ಧರಿಸುತ್ತದೆ. ಉದಾಹರಣೆಗೆ, ನೀವು ಇಂದು ಖರೀದಿಸಲು ಬಯಸುವ ಕಾರು ಮುಂದಿನ ವರ್ಷ ಸುಮಾರು 20% ಹೆಚ್ಚು ದುಬಾರಿಯಾಗಲಿದೆ ಎಂದು ನೀವು ನಿರೀಕ್ಷಿಸಿದರೆ ಏನು ಮಾಡುತ್ತೀರಿ? ಹಣದುಬ್ಬರವು ನಿಮ್ಮ ಕೊಳ್ಳುವ ಶಕ್ತಿಯನ್ನು ಇನ್ನೂ ಕುಗ್ಗಿಸದಿರುವಾಗ ನೀವು ಇಂದು ಕಾರನ್ನು ಖರೀದಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: BJP Government: ಕಾಶಿ ಯಾತ್ರೆ ಹೋಗುವವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಬಿಗ್ ಆಫರ್

ಅಂತಹ ನಿರೀಕ್ಷೆಯ ಮತ್ತೊಂದು ಪರಿಣಾಮವೆಂದರೆ- ಮುಂಬರುವ ವರ್ಷದಲ್ಲಿ ಸಾಮಾನ್ಯ ಬೆಲೆಯ ಮಟ್ಟವು 10% ರಷ್ಟು ಏರುತ್ತದೆ ಎಂದು ನೀವು ನಿರೀಕ್ಷಿಸುತ್ತೀರಿ - ನೀವು ಕೆಲಸ ಮಾಡುವ ಸಂಸ್ಥೆಯ ಬಾಸ್ ಅನ್ನು ಕುರಿತು 15% ರಷ್ಟು ವೇತನ ಹೆಚ್ಚಿಸಲು ನೀವು ಕೇಳಬಹುದು. ಏಕೆಂದರೆ 10% ಹೆಚ್ಚಳವು ನಿಮ್ಮ ದೃಷ್ಟಿಯಲ್ಲಿ, ನೀವು ಪಾವತಿಸಬೇಕಾದ ಹೆಚ್ಚಿನ ಬೆಲೆಗಳಿಗೆ ನಿಮಗೆ ರಕ್ಷಣೆ ನೀಡುವುದಿಲ್ಲ. ಹಾಗಾಗಿ 5% ರಷ್ಟು "ನೈಜ" ಹೆಚ್ಚಳವನ್ನು ಪಡೆಯಲು, ನಿಮಗೆ 15% ರಷ್ಟು ನಾಮಮಾತ್ರದ ಹೆಚ್ಚಳದ ಅಗತ್ಯವಿರಬೇಕೆಂಬುದು ಅನಿವಾರ್ಯವಗಿರುತದೆ.

ಭಾರತದಲ್ಲಿ ಜಿಡಿಪಿ ಬೆಳವಣಿಗೆಯ ಏಕೈಕ ಅತಿದೊಡ್ಡ ಎಂಜಿನ್
ಪ್ರಸ್ತುತ, ಜನರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಖರೀದಿಸುವುದು ಭಾರತದಲ್ಲಿ ಜಿಡಿಪಿ ಬೆಳವಣಿಗೆಯ ಏಕೈಕ ಅತಿದೊಡ್ಡ ಎಂಜಿನ್ ಆಗಿದೆ, ಇದು ಖಾಸಗಿ ಬಳಕೆಯ ವೆಚ್ಚದ ರೂಪದಲ್ಲಿ ಭಾರತದ GDP ಯ ಮೂರನೇ ಎರಡರಷ್ಟು ಭಾಗವನ್ನು ಹೊಂದಿದೆ. ಆದ್ದರಿಂದ ಹಣದುಬ್ಬರವು ಜನರ ಮನಸ್ಸಿನಲ್ಲಿ ನೆಲೆಗೊಂಡಾಗ ಅದು ಹೆಚ್ಚು "ನಿರಂತರ ಮತ್ತು ಸಾಮಾನ್ಯೀಕರಿಸಲ್ಪಟ್ಟಿದೆ" ಎಂದು ಅರ್ಥವಾಗುವಂತಹದ್ದಾಗಿದೆ.

ಇದೇ ಅಂಶವು ಆರ್ಥಿಕತೆಯ ಮೇಲೆ ಪ್ರತಿಕೂಲ ದೃಷ್ಟಿಕೋನಕ್ಕೆ ಕಾರಣವಾಗುತ್ತದೆ. ವೆಚ್ಚಗಳು (ವೇತನಗಳಂತಹವು) ಹೆಚ್ಚಾದಂತೆ ವ್ಯಾಪಾರವು ತಾಜಾ ಹೂಡಿಕೆಯನ್ನು ತಡೆಹಿಡಿಯುತ್ತದೆ. ಇದು, ದೇಶದ ಸ್ಪರ್ಧಾತ್ಮಕತೆಯನ್ನು ಘಾಸಿಗೊಳಿಸುತ್ತದೆ. ಜನರು ತಮ್ಮ ಉಳಿತಾಯದಿಂದ ಹಣವನ್ನು ಹೊರತೆಗೆಯುತ್ತಾರೆ ಮತ್ತು ಅದನ್ನು ಚಿನ್ನದಂತಹ ಅನುತ್ಪಾದಕ ಆಸ್ತಿಗಳಲ್ಲಿ ಹೂಡುತ್ತಾರೆ. ಭಾರತಕ್ಕೆ ಸಂಬಂಧಿಸಿದಂತೆ ಎಲ್ಲಾ ಚಿನ್ನದ ಬೇಡಿಕೆಯ 98% ರಷ್ಟು ಆಮದುಗಳಿಂದ ಪೂರೈಸಲ್ಪಡುವುದರಿಂದ, ಇದು ಮೂಲಭೂತವಾಗಿ ಇತರ ದೇಶಗಳಿಗೆ ಹೋಗುವ ಬಂಡವಾಳವನ್ನು ಸೂಚಿಸುತ್ತದೆ.

ಹಣದುಬ್ಬರ ಮತ್ತು ಹಣದುಬ್ಬರ ನಿರೀಕ್ಷೆಗಳನ್ನು ಹೇಗೆ ತಗ್ಗಿಸುತ್ತದೆ?
ಹಾಗಿದ್ದರೂ, ರಿಸರ್ವ್ ಬ್ಯಾಂಕ್ ಅಥವಾ ಅಮೆರಿಕದ ಫೆಡ್ ಬಡ್ಡಿದರಗಳನ್ನು ಹೆಚ್ಚಿಸುವುದು ಹಣದುಬ್ಬರ ಮತ್ತು ಹಣದುಬ್ಬರ ನಿರೀಕ್ಷೆಗಳನ್ನು ಹೇಗೆ ತಗ್ಗಿಸುತ್ತದೆ? ಎಂಬುದನ್ನು ಪ್ರಶ್ನಿಸಬೇಕಾಗುತ್ತದೆ. ಹೆಚ್ಚಿನ ಬಡ್ಡಿದರಗಳು ಪೂರೈಕೆ ಬದಿಯ ಹಣದುಬ್ಬರದ ಮೇಲೆ ಪರಿಣಾಮ ಬೀರದಿದ್ದರೂ, ಇದು ಇತರ ಸರಕು ಮತ್ತು ಸೇವೆಗಳ ಬೇಡಿಕೆಯನ್ನು ತಗ್ಗಿಸುತ್ತದೆ. ಸಾಲವನ್ನು ತಡೆಯುವ ಮೂಲಕ ಕೇಂದ್ರ ಬ್ಯಾಂಕ್ ಎರವಲು-ನೇತೃತ್ವದ ಬೇಡಿಕೆಯನ್ನು ಕಡಿಮೆ ಮಾಡುತ್ತದೆ. ಈ ರೀತಿಯಾಗಿ ಇದು ಎರಡು ಕೆಲಸಗಳನ್ನು ಮಾಡುತ್ತದೆ. ಒಂದು, ಇದು ಬೇಡಿಕೆಯನ್ನು ಕಡಿಮೆ ಮಾಡುವ ಮೂಲಕ ಹಣದುಬ್ಬರವನ್ನು ಕಡಿಮೆ ಮಾಡುತ್ತದೆ, ಮತ್ತು ಎರಡು, ಇದು ಸಮಯಾವಕಾಶವನ್ನು ನೀಡುತ್ತದೆ.

ಇದನ್ನೂ ಓದಿ: Yashwant Sinha: ವಿಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಯಶ್ವಂತ್ ಸಿನ್ಹಾ ಹೆಜ್ಜೆ ಗುರುತು

ಸಂಕ್ಷಿಪ್ತವಾಗಿ ಹೇಳುವುದಾದರೆ: ಹಣದುಬ್ಬರದ ನಿರೀಕ್ಷೆಗಳನ್ನು "ಆಂಕರ್ಡ್" ಎಂದು ಖಚಿತಪಡಿಸಿಕೊಳ್ಳುವುದು ವಿತ್ತೀಯ ನೀತಿಯ ಅಗತ್ಯ ಗುರಿಯಾಗಿದೆ. ಹಣದುಬ್ಬರವನ್ನು ಕಡಿಮೆ ಮಾಡುವುದು ಆ ಗುರಿಯನ್ನು ಸಾಧಿಸುವ ಒಂದು ಮಾರ್ಗವಾಗಿದೆ ಮತ್ತು ಬಡ್ಡಿದರಗಳನ್ನು ಹೆಚ್ಚಿಸುವುದು ಕಡಿಮೆ ಹಣದುಬ್ಬರವನ್ನು ಸಾಧಿಸುವ ಒಂದು ಮಾರ್ಗವಾಗಿದೆ. ಫೆಡ್ ಚೇರ್ ಪೊವೆಲ್ ಅವರು ಹಿಂಜರಿತವನ್ನು ಪ್ರೇರೇಪಿಸಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ಕೇಳಿದಾಗ ಅವರು ಕೊಟ್ಟ ಉತ್ತರ ಈ ಎಲ್ಲ ಅಂಶಗಳನ್ನು ನಿಖರವಾಗಿ ವಿವರಿಸುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.
Published by:Ashwini Prabhu
First published: