Explained: ಮಾನ್ಸೂನ್‌ನ ಆರಂಭ ಎಂದರೇನು? ಕೇರಳ ಕರಾವಳಿಗೆ ಮುಂಗಾರು ಬೇಗ ಅಪ್ಪಳಿಸುವುದು ಅಸಾಮಾನ್ಯವೇ?

ಮಳೆಗಾಲ ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ವಿಶೇಷವಾಗಿ ಬೇಸಿಗೆಯ ಸುಡು ಬಿಸಿಲಿನ ತಾಪದಿಂದ ಬಸವಳಿದ ಜನರಿಗೆ ಆಗಸದಿಂದ ಭುವಿಗಿಳಿಯುವ ತಂಪಾದ ನೀರಿನ ಹನಿಗಳ ಸ್ಪರ್ಷ ಯಾವುದೇ ಸ್ವರ್ಗಕ್ಕಿಂತ ಕಡಿಮೆ ಎನ್ನುವ ಭಾವನೆ ಉಕ್ಕಿಸದೆ ಇರಲಾರದು. ಹಾಗಿದ್ರೆ ಮಾನ್ಸೂನ್ ಎಂದರೇನು? ಅದರ ಮಹತ್ವಗಳೇನು? ಇಲ್ಲಿದೆ ಮಾಹಿತಿ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಮಳೆಗಾಲ (Monsoon) ಎಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅದರಲ್ಲೂ ವಿಶೇಷವಾಗಿ ಬೇಸಿಗೆಯ (Summer) ಸುಡು ಬಿಸಿಲಿನ ತಾಪದಿಂದ ಬಸವಳಿದ ಜನರಿಗೆ ಆಗಸದಿಂದ ಭುವಿಗಿಳಿಯುವ ತಂಪಾದ ನೀರಿನ ಹನಿಗಳ (Water Drops) ಸ್ಪರ್ಷ ಯಾವುದೇ ಸ್ವರ್ಗಾಭಾಸಕ್ಕಿಂತ ಕಡಿಮೆ ಎನ್ನುವ ಭಾವನೆ ಉಕ್ಕಿಸದೆ ಇರಲಾರದು. ಮೇ ಕೊನೆಯ ದಿನಗಳು ಸಮೀಪಿಸುತ್ತಿರುವಂತೆಯೇ ದೇಶದ ಕೇರಳದಲ್ಲಿರುವ (Kerala) ಕರಾವಳಿ ತೀರಗಳು ಮಾನ್ಸೂನ್ ಮೋಡಗಳನ್ನು (Clouds) ಆದರದಿಂದ ಬರಮಾಡಿಕೊಳ್ಳಲು ಕಾತುರದಿಂದ ಕಾಯತೊಡಗುತ್ತಿರುವಂತೆ ವಾತಾವರಣ ಸೃಷ್ಟಿಯಾಗುತ್ತದೆ. ಹೌದು, ಜುಲೈ ಮಧ್ಯದ ಅಥವಾ ಕೊನೆಯವೆರೆ ಭಾರತದಾದ್ಯಂತ ಪ್ರಾರಂಭವಾಗುವ ಮಳೆಗಾಲ ಮೊದಲಿಗೆ ಕೇರಳದ ಕರಾವಳಿಯಿಂದಲೇ ತನ್ನ ಮೂರು-ನಾಲ್ಕು ತಿಂಗಳುಗಳ ಭಾರತ ಪ್ರವಾಸ ಆರಂಭಿಸುತ್ತದೆ ಎಂದೇ ಹೇಳಬಹುದು.

ಸಾಮಾನ್ಯವಾಗಿ ಕರ್ನಾಟಕದಲ್ಲಿ ಮಳೆಗಾಲವು ಜೂನ್ ನಂತರದಿಂದ ಆರಂಭವಾಗುವ ವಾಡಿಕೆಯಿದೆ. ಈ ಸಂದರ್ಭದಲ್ಲಿ ನೈಋತ್ಯ ಮಾನ್ಸೂನ್ ಕೇರಳದಿಂದ ಕರ್ನಾಟ್ಕಕ್ಕೆ ಪ್ರವೇಶಿಸುತ್ತವೆ. ಈ ಬಾರಿ ನೈಋತ್ಯ ಮಾನ್ಸೂನ್ ತನ್ನ ಸಾಮಾನ್ಯ ಆರಂಭದ ಜೂನ್ 1 ರ ಮೂರು ದಿನಗಳ ಮೊದಲು ಕೇರಳಕ್ಕೆ ಆಗಮಿಸಿದೆ. ಭಾರತೀಯ ಹವಾಮಾನ ಇಲಾಖೆ (IMD) ದಾಖಲೆಗಳ ಪ್ರಕಾರ, 2010 ರಿಂದ ಇದು ಸತತ ನಾಲ್ಕನೇ ಬಾರಿಗೆ ಮುಂಗಾರು ತನ್ನ ಸಾಮಾನ್ಯ ದಿನಾಂಕಕ್ಕಿಂತ ಸಾಕಷ್ಟು ಮುಂಚಿತವಾಗಿ ಆಗಮಿಸಿದೆ ಎಂದು ತಿಳಿದುಬಂದಿದೆ.

"ಮಾನ್ಸೂನ್ ಆರಂಭ" ಎಂದರೆ ಏನು?
ಕೇರಳದ ಮೇಲೆ ಮಾನ್ಸೂನ್‌ನ ಆರಂಭವು ನಾಲ್ಕು ತಿಂಗಳುಗಳ ಕಾಲ ಅಂದರೆ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಇರುತ್ತದೆ ಹಾಗೂ ಇದು ಅಧಿಕೃತವಾಗಿ ಭಾರತದ ಮೇಲೆ ನೈಋತ್ಯ ಮಾನ್ಸೂನ್ ಋತುವಿನ ಆರಂಭವನ್ನು ಸೂಚಿಸುತ್ತದೆ, ಇದು ದೇಶದ ವಾರ್ಷಿಕ ಮಳೆಯ 70 ಪ್ರತಿಶತಕ್ಕಿಂತ ಹೆಚ್ಚಿನ ಪ್ರಮಾಣವನ್ನು ತರುತ್ತದೆ. ಹಾಗಾಗಿ ಈ ಮಾನ್ಸೂನ್ ಋತುಮಾನಕ್ಕೆ ಭಾರತದ ಆರ್ಥಿಕ ಕ್ಯಾಲೆಂಡರ್‌ನಡಿಯಲ್ಲಿ ಸಾಕಷ್ಟು ಮಹತ್ವದ ಸಮಯ ಎಂದೇ ಹೇಳಲಾಗುತ್ತದೆ.

ಇದನ್ನೂ ಓದಿ: Explained: ಮೌಂಟ್ ಎವರೆಸ್ಟ್ ಹತ್ತಬೇಕಾ? 25ರಿಂದ 50 ಲಕ್ಷ ರೆಡಿ ಮಾಡಿಕೊಳ್ಳಿ! ಈ ಸಾಹಸ ಇಷ್ಟೊಂದು ದುಬಾರಿ ಯಾಕೆ?

ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮಾನ್ಸೂನ್‌ನ ಆರಂಭವು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ವಾತಾವರಣ ಮತ್ತು ಸಾಗರ ಪರಿಚಲನೆಯಲ್ಲಿ ಗಮನಾರ್ಹ ಪರಿವರ್ತನೆಯನ್ನು ಸೂಚಿಸುತ್ತದೆ ಮತ್ತು 2016 ರಲ್ಲಿ ಅಳವಡಿಸಿಕೊಂಡ ಕೆಲವು ಹೊಸದಾಗಿ ವ್ಯಾಖ್ಯಾನಿಸಲಾದ ಮತ್ತು ಅಳೆಯಬಹುದಾದ ನಿಯತಾಂಕಗಳನ್ನು ಪೂರೈಸಿದ ನಂತರವೇ ಹವಾಮಾನ ಇಲಾಖೆಯು ಈ ಬಗ್ಗೆ ಮಾಹಿತಿಯನ್ನು ಪ್ರಕಟಿಸುತ್ತದೆ. ಹಮಾಮಾನ ಇಲಾಖೆ ಪ್ರಕಟಿಸುವ ಈ ಮಾಹಿತಿಯಲ್ಲಿ ವ್ಯಾಖ್ಯಾನಿಸಲಾದ ಭೌಗೋಳಿಕತೆಯ ಆಧಾರದ ಮೇಲೆ ಮಳೆಯ ಸ್ಥಿರತೆ, ಅದರ ತೀವ್ರತೆ ಮತ್ತು ಗಾಳಿಯ ವೇಗವನ್ನು ಪರಿಶೀಲಿಸುವಿಕೆಯ ಅಂಶಗಳಿರುತ್ತವೆ.

* ಮಳೆಯ ಪ್ರಮಾಣ
ಮೇ 10 ರ ನಂತರ ಯಾವುದೇ ಸಮಯದಲ್ಲಿ ಕೇರಳ ಮತ್ತು ಲಕ್ಷದ್ವೀಪದಲ್ಲಿ ಕನಿಷ್ಠ 60% ರಷ್ಟು 14 ಗೊತ್ತುಪಡಿಸಿದ ಹವಾಮಾನ ಕೇಂದ್ರಗಳು ಕನಿಷ್ಠ 2.5 ಮಿಮೀ ಮಳೆಯನ್ನು ಸತತ ಎರಡು ದಿನಗಳವರೆಗೆ ದಾಖಲಿಸಿದರೆ ಹವಾಮಾನ ಇಲಾಖೆಯು ಅದನ್ನು ಮಾನ್ಸೂನ್ ಆರಂಭ ಎಂದು ಅಧಿಕೃತವಾಗಿ ಘೋಷಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರಾರಂಭ ನಿರ್ದಿಷ್ಟ ಗಾಳಿ ಮತ್ತು ತಾಪಮಾನದ ಮಾನದಂಡಗಳನ್ನು ಪೂರೈಸಿದರೆ ಎರಡನೇ ದಿನದಂದೆ ಕೇರಳಕ್ಕೆ ಇದರ ಆಗಮನವನ್ನು ಘೋಷಿಸಲಾಗುತ್ತದೆ.

ಇದನ್ನೂ ಓದಿ:  Viral Photos: ಅದೇನು ಧೈರ್ಯ ಗುರು! ಈ ಗ್ರಾಮದಲ್ಲಿ ಒಬ್ಬಂಟಿ ಮಹಿಳೆ ಮಾತ್ರ ವಾಸಿಸುತ್ತಿದ್ದಾಳೆ

ಪಟ್ಟಿಮಾಡಲಾಗಿರುವ 14 ಕೇಂದ್ರಗಳೆಂದರೆ: ಮಿನಿಕಾಯ್, ಅಮಿನಿ, ತಿರುವನಂತಪುರಂ, ಪುನಲೂರ್, ಕೊಲ್ಲಂ, ಅಲಪ್ಪುಳ, ಕೊಟ್ಟಾಯಂ, ಕೊಚ್ಚಿ, ತ್ರಿಶೂರ್, ಕೋಯಿಕ್ಕೋಡ್, ತಲಶ್ಶೇರಿ, ಕಣ್ಣೂರು, ಕಾಸರಗೋಡು ಮತ್ತು ಮಂಗಳೂರು.

* ಗಾಳಿ ಕ್ಷೇತ್ರ
ಸಮಭಾಜಕದಿಂದ 10ºN ಅಕ್ಷಾಂಶಕ್ಕೆ ಮತ್ತು ರೇಖಾಂಶ 55ºE ನಿಂದ 80ºE ವರೆಗೆ 600 ಹೆಕ್ಟೋಪಾಸ್ಕಲ್ (1 hPa ಒತ್ತಡದ 1 ಮಿಲಿಬಾರ್‌ಗೆ ಸಮಾನವಾಗಿರುತ್ತದೆ) ವರೆಗೆ ಪಶ್ಚಿಮದ ಆಳವು ಇರಬೇಕು. 5-10ºN ಅಕ್ಷಾಂಶ ಮತ್ತು 70-80ºE ರೇಖಾಂಶದಿಂದ ಸುತ್ತುವರಿದ ಪ್ರದೇಶದ ಮೇಲೆ ವಲಯ ಗಾಳಿಯ ವೇಗವು 925 hPa ನಲ್ಲಿ 15-20 ಗಂಟುಗಳ (28-37 kph) ಕ್ರಮದಲ್ಲಿರಬೇಕು. ಇದನ್ನು ಗಾಳಿ ಕ್ಷೇತ್ರ ಎಂದು ಪರಿಗಣಿಸಲಾಗುತ್ತದೆ.

* ಉಷ್ಣ
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಇನ್ಸಾಟ್ ಉಪಗ್ರಹದಿಂದ ಪಡೆದ ಹೊರಹೋಗುವ ಲಾಂಗ್‌ವೇವ್ ವಿಕಿರಣ (OLR) ಮೌಲ್ಯ (ಭೂಮಿಯ ಮೇಲ್ಮೈ, ಸಾಗರಗಳು ಮತ್ತು ವಾತಾವರಣದಿಂದ ಬಾಹ್ಯಾಕಾಶಕ್ಕೆ ಹೊರಸೂಸುವ ಶಕ್ತಿಯ ಅಳತೆ) ಪ್ರತಿ ಚದರ ಮೀಟರ್‌ಗೆ 200 ವ್ಯಾಟ್‌ಗಿಂತ ಕಡಿಮೆಯಿರಬೇಕು (wm2) ಬಾಕ್ಸ್ 5-10ºN ಅಕ್ಷಾಂಶ ಮತ್ತು 70-75ºE ಅಕ್ಷಾಂಶದಿಂದ ಸೀಮಿತವಾಗಿದೆ.

ಸಾಮಾನ್ಯವಾಗಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಪ್ರತಿ ವರ್ಷ ಮೇ 15 ಮತ್ತು ಮೇ 20 ರ ನಡುವೆ ಮಾನ್ಸೂನ್ ಮಳೆಯನ್ನು ಪಡೆಯಲು ಪ್ರಾರಂಭಿಸುತ್ತವೆ ಮತ್ತು ಸಾಮಾನ್ಯವಾಗಿ ಮೇ ತಿಂಗಳ ಕೊನೆಯ ವಾರದಲ್ಲಿ ಕೇರಳದ ಕರಾವಳಿ ಪ್ರದೇಶಗಳಲ್ಲಿ ಮಳೆಯಾಗಲು ಪ್ರಾರಂಭಿಸುತ್ತದೆ. ಆದಾಗ್ಯೂ, ನಿಗದಿತ ಷರತ್ತುಗಳನ್ನು (ಮೇಲಿನ) ಪೂರೈಸುವವರೆಗೆ ಪ್ರಾರಂಭವನ್ನು ಅಧಿಕೃತವಾಗಿ ಘೋಷಿಸಲಾಗುವುದಿಲ್ಲ.

ಕೇರಳ ಕರಾವಳಿಗೆ ಮುಂಗಾರು ಬೇಗ ಅಪ್ಪಳಿಸುವುದು ಅಸಾಮಾನ್ಯವೇ?
ಮಾನ್ಸೂನ್ ಆರಂಭ ಬೇಗನೆ ಆಗುವುದು ಅಥವಾ ತಡವಾಗಿ ಪ್ರಾರಂಭವಾಗುವುದು ಅಸಾಮಾನ್ಯವಾದ ವಿಷಯವೇನಲ್ಲ. 2018 ಮತ್ತು 2017 ರಲ್ಲಿ, ಕೇರಳದ ಮೇಲೆ ಕ್ರಮವಾಗಿ ಮೇ 29 ಮತ್ತು ಮೇ 30 ರಂದು ಮಾನ್ಸೂನ್ ಸಂಭವಿಸಿದೆ. 2010 ರಲ್ಲಿ, ಮೇ 31 ರಂದು ಪ್ರಾರಂಭವಾಗಿತ್ತು. 2020 ಮತ್ತು 2013 ರಲ್ಲಿ, ಮಾನ್ಸೂನ್ ನಿಖರವಾಗಿ ಸಮಯಕ್ಕೆ ಸರಿಯಾಗಿತ್ತು, ಜೂನ್ 1 ರಂದು ಕೇರಳ ಕರಾವಳಿಯನ್ನು ಅಪ್ಪಳಿಸಿತು.

2010 ಕ್ಕೆ ಹೋಲಿಸಿದರೆ ಉಳಿದ ವರ್ಷಗಳಲ್ಲಿ, ಪ್ರಾರಂಭವು ವಿಳಂಬವಾಗಿತ್ತೆಂದೇ ಹೇಳಬಹುದು. 2019 ರಲ್ಲಿ, ಐಎಂಡಿ ಆರು ದಿನಗಳ ವಿಳಂಬವನ್ನು ಘೋಷಿಸಿತು ಮತ್ತು ಜೂನ್ 6 ಕ್ಕೆ ಪ್ರಾರಂಭವಾಗುವ ಮುನ್ಸೂಚನೆಯನ್ನು ನೀಡಿತ್ತು. ಮಾನ್ಸೂನ್ ಅಂತಿಮವಾಗಿ ಜೂನ್ 8, 2019 ರಂದು ಕೇರಳದ ಮೇಲೆ ಪ್ರಾರಂಭವಾಗಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

ಬೇಗ ಆರಂಭವು ಉತ್ತಮ ಮಳೆ ಪ್ರಮಾಣದ ಮುನ್ಸೂನೆಯೇ?
ಇಲ್ಲ, ಖಂಡಿತವಾಗಿಯೂ ಬೇಗನೆ ಪ್ರಾರಂಭವಾಗುವ ಮಾನ್ಸೂನ್ ಋತು ಅಂದರೆ ಹೆಚ್ಚು ಹೆಚ್ಚು ಮಳೆಯಾಗುತ್ತದೆ ಎಂದು ಹೇಳುವ ಮಾನದಂಡವೂ ಅಲ್ಲ ಹಾಗೂ ಅದು ಸಂಕೇತವೂ ಅಲ್ಲ. ಅದರಂತೆ ವಿಳಂಬವಾಗುವ ಮಾನ್ಸೂನ್ ಸಹ ಕಳಪೆ ಮಳೆ ಪ್ರಮಾಣವನ್ನೂ ಮುನ್ಸೂಚಿಸುವುದಿಲ್ಲ. ಆರಂಭವು ಭಾರತೀಯ ಉಪಖಂಡದ ಮೇಲೆ ಮಾನ್ಸೂನ್ ಪ್ರಗತಿಯ ಸಮಯದಲ್ಲಿ ಸಂಭವಿಸುವ ಒಂದು ಘಟನೆಯಾಗಿದೆ ಅಷ್ಟೆ.

ಕೆಲವು ದಿನಗಳ ವಿಳಂಬ, ಅಥವಾ ಪ್ರಾಯಶಃ ಕೆಲವು ದಿನಗಳ ಮುಂಚಿತವಾಗಿ ಆಗಮಿಸುವ ಮಾನ್ಸೂನ್, ನಾಲ್ಕು ತಿಂಗಳ ಮಾನ್ಸೂನ್ ಅವಧಿಯಲ್ಲಿ ಮಳೆಯ ಗುಣಮಟ್ಟ ಅಥವಾ ಪ್ರಮಾಣ ಅಥವಾ ದೇಶಾದ್ಯಂತ ಅದರ ಪ್ರಾದೇಶಿಕ ವಿತರಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇತ್ತೀಚಿನ ವರ್ಷದಲ್ಲಿ, ಮಾನ್ಸೂನ್‌ನ ಪ್ರಾರಂಭವು ಸಾಮಾನ್ಯ ದಿನಾಂಕಕ್ಕಿಂತ ಎರಡು ದಿನಗಳ ಮುಂಚಿತವಾಗಿ ಸಂಭವಿಸುತ್ತಿದ್ದು ತದನಂತರ ಸುಮಾರು 10 ದಿನಗಳ ಕಾಲ ಭಾರೀ ಮಳೆಯಾಗಿದೆ - ಆದಾಗ್ಯೂ, ಒಟ್ಟಾರೆಯಾಗಿ ಋತುವು ಸಾಮಾನ್ಯಕ್ಕಿಂತ 14% ಕಡಿಮೆ ಮಳೆಯೊಂದಿಗೆ ಕೊನೆಗೊಂಡಿತ್ತು ಎಂದು ಹೇಳಬಹುದು.

ಇದನ್ನೂ ಓದಿ:  Explained: ಚಂಡಮಾರುತಗಳಿಗ್ಯಾಕೆ ವಿಚಿತ್ರ ಹೆಸರುಗಳು? ಅವುಗಳ ಅರ್ಥ, ಆ ಹೆಸರಿನ ಕಾರಣ ಏನು ಗೊತ್ತಾ?

ಈ ವರ್ಷ ಏಪ್ರಿಲ್ 14 ರಂದು, ಭಾರತೀಯ ಹವಾಮಾನ ಇಲಾಖೆ ಈ ವರ್ಷಕ್ಕೆ ತನ್ನ ಮೊದಲ ದೀರ್ಘಾವಧಿಯ ಮುನ್ಸೂಚನೆಯನ್ನು (LRF) ಬಿಡುಗಡೆ ಮಾಡಿತು, ಇದರಲ್ಲಿ ಅದು "ಸಾಮಾನ್ಯ" ಮಾನ್ಸೂನ್ ಅವಧಿಯ ಮುನ್ಸೂಚನೆ ನೀಡಿತು - ಅಂದರೆ ಮಳೆಯು ದೀರ್ಘಾವಧಿಯ 96% ರಿಂದ 104% ವ್ಯಾಪ್ತಿಯಲ್ಲಿರಬಹುದು ಎಂದು ತಿಳಿಸಿದೆ, ಅಂದರೆ 1971-2020 ಅವಧಿಯ ಅವಧಿಯ ಸರಾಸರಿ (LPA) ಪ್ರಮಾಣ ಇದಾಗಿದೆ. ಈ ಅವಧಿಯಲ್ಲಿ ನೈಋತ್ಯ ಮಾನ್ಸೂನ್ ಋತುವಿನಲ್ಲಿ ದೇಶದ ಒಟ್ಟಾರೆ ವಾರ್ಷಿಕ ಸರಾಸರಿ ಮಳೆಯು 87 ಸೆಂ.ಮೀ.

ಕೇರಳ ಕರಾವಳಿಯನ್ನು ಅಪ್ಪಳಿಸಿ ದೇಶಾದ್ಯಂತ ಮಾನ್ಸೂನ್ ಹೇಗೆ ಹರಡುತ್ತದೆ?
ಸಾಮಾನ್ಯವಾಗಿ ಭಾರತದಲ್ಲಿ ಮಳೆಗಾಲದ ಪ್ರಾರಂಭವು ಕೇರಳದ ಮೂಲಕ ಆಗುತ್ತದೆ. ಮೊದಲಿಗೆ ಮಾನ್ಸೂನ್ ಮೋಡಗಳು ಕೇರಳದ ಕರಾವಳಿ ತೀರಗಳನ್ನು ಅಪ್ಪಳಿಸುತವೆ. ತದನಂತರ ಅವು ಉತ್ತರಾಭಿಮುಖವಾಗಿ ಮುನ್ನಡೆಯುತ್ತವಾದರೂ ತನ್ನ ಪಥದಲ್ಲಿ ಉಂಟಾಗುವ ಕಡಿಮೆ ಒತ್ತಡದ ಪ್ರದೇಶಗಳ ಸೃಷ್ಟಿ ಸೇರಿದಂತೆ ಸ್ಥಳೀಯ ಅಂಶಗಳ ಮೇಲೆ ಇದರ ಪಥಚಲನೆ ಅವಲಂಬಿತವಾಗಿರುತ್ತದೆ.

ಈ ವರ್ಷ ಮುಂಗಾರು ಬೇಗ ಆಗಮಿಸಿದ್ದರೂ, ಕೇರಳದಲ್ಲಿ ತಡವಾಗಿ ಆರಂಭವಾದರೂ ದೇಶದ ಇತರ ಭಾಗಗಳಲ್ಲಿ ಸಮಯಕ್ಕೆ ಸರಿಯಾಗಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಕೇರಳದಲ್ಲಿ ಪ್ರಾರಂಭವಾದ ನಂತರ, ಜುಲೈ 15 ರ ವೇಳೆಗೆ ಮಾನ್ಸೂನ್ ಇಡೀ ದೇಶದಾದ್ಯಂತ ಹರಡುತ್ತದೆ.
Published by:Ashwini Prabhu
First published: