• ಹೋಂ
  • »
  • ನ್ಯೂಸ್
  • »
  • Explained
  • »
  • Draupadi Murmu: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ

Draupadi Murmu: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ

NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

NDA ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಇಂದು ರಾಷ್ಟ್ರಪತಿ ಚುನಾವಣೆಯಲ್ಲಿ ಕಣದಲ್ಲಿದ್ದಾರೆ. ಹಾಗಾದ್ರೆ ಯಾರು ಈ ದ್ರೌಪದಿ ಮುರ್ಮು? ಎಲ್ಲಿಯವರು, ಏನು ಓದಿದ್ದು? ಇವರ ಬದುಕು ಹೇಗಿತ್ತು? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…

  • Share this:

ಭಾರತದ ರಾಷ್ಟ್ರಪತಿ ಚುನಾವಣೆಗೆ (Indian Presidential Election) ದಿನಗಣನೆ ಆರಂಭವಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ramanath Kovind) ಅವರ ಅಧಿಕಾರಾವಧಿ ಜುಲೈ 24 ರಂದು ಕೊನೆಗೊಳ್ಳುವ ಹಿನ್ನೆಲೆಯಲ್ಲಿ, ನೂತನ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ (Election) ನಡೆಯಲಿದೆ. ಬಿಜೆಪಿ (BJP)  ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟದ ಅಭ್ಯರ್ಥಿಯಾಗಿ (Candidate)  ದ್ರೌಪದಿ ಮುರ್ಮು (Draupadi Murmu) ಕಣದಲ್ಲಿದ್ದಾರೆ. ಹಾಗಿದ್ರೆ ಯಾರು ಈ ದ್ರೌಪದಿ ಮುರ್ಮು? ಎಲ್ಲಿಯವರು, ಏನು ಓದಿದ್ದು? ಇವರ ಬದುಕು ಹೇಗಿತ್ತು? ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದು ಹೇಗೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ...


ದ್ರೌಪದಿ ಮುರ್ಮು ಯಾರು? 


ದ್ರೌಪದಿ ಮುರ್ಮು ಅವರು ಓಡಿಶಾ ಮೂಲದವರು. 1958, ಜೂನ್ 20ರಂದು ಬುಡಕಟ್ಟು ಸಮುದಾಯದ ಕುಟುಂಬದಲ್ಲಿ ಜನಿಸಿದವರು. ಇವರ ಪತಿ ಶ್ಯಾಮ್ ಚರಣ್ ಮುರ್ಮು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ದುರದೃಷ್ಟವಶಾತ್ ಇಬ್ಬರೂ ಮೃತಪಟ್ಟಿದ್ದಾರೆ. ಬಳಿಕ ಪತಿಯನ್ನೂ ಕಳೆದುಕೊಂಡ ಇವರು. ಇದೀಗ ಪುತ್ರಿ ಜೊತೆ ವಾಸಿಸುತ್ತಿದ್ದಾರೆ.


ಕೌನ್ಸಿಲರ್ ಆಗಿ ವೃತ್ತಿ ಜೀವನ ಆರಂಭ


ದ್ರೌಪದಿ ಮುರ್ಮು ಅವರು ಕೌನ್ಸಿಲರ್ ಆಗಿ ತಮ್ಮ ರಾಜಕೀಯ ವೃತ್ತಿಜೀವನ ಆರಂಭಿಸಿದರು. ನಂತರ ರಾಯ್ರಂಗಪುರ ರಾಷ್ಟ್ರೀಯ ಸಲಹಾ ಮಂಡಳಿ ಅಥವಾ NAC ನ ಉಪಾಧ್ಯಕ್ಷರಾದರು. 2013ರಲ್ಲಿ ಅವರು ಬಿಜೆಪಿ ಪಕ್ಷದ ಎಸ್‌ಟಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆಯ ಸ್ಥಾನಕ್ಕೆ ಏರಿದ್ದರು. ಭುವನೇಶ್ವರದ ರಮಾ ದೇವಿ ಮಹಿಳಾ ಕಾಲೇಜಿನಲ್ಲಿ ಕಲಾ ಪದವಿ ಪಡೆದ ಅವರು ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಸುಮಾರು ಎರಡು ದಶಕಗಳನ್ನು ಕಳೆದಿದ್ದಾರೆ.


ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?


ಮಕ್ಕಳನ್ನು ಕಳೆದುಕೊಂಡು ಕಂಗಾಲು


1997 ರಲ್ಲಿ, ಅವರು ರಾಯರಂಗಪುರ ನಗರ ಪಂಚಾಯತ್‌ನಲ್ಲಿ ಮೊದಲ ಬಾರಿಗೆ ಕೌನ್ಸಿಲರ್ ಚುನಾವಣೆಗೆ ಸ್ಪರ್ಧಿಸಿ ಜಯ ಕಂಡಿದ್ದರು. 2000ರಲ್ಲಿ ಶಾಸಕ ಸ್ಥಾನದ ಟಿಕೆಟ್ ಪಡೆದು ಅದರಲ್ಲೂ ಗೆಲುವು ಕಂಡ ಮಂತ್ರಿಯೂ ಆಗಿದ್ದರು. 2009ರ ಚುನಾವಣೆಯಲ್ಲಿ ಸೋಲು ಕಂಡ ಬಳಿಕ ಗ್ರಾಮಕ್ಕೆ ಮರಳಿದ ದ್ರೌಪದಿ ಮುರ್ಮು ಅವರಿಗೆ ಅದಕ್ಕಿಂತ ದೊಡ್ಡ ಶಾಕ್ ಕಾದಿತ್ತು. ಹಿರಿಯ ಮಗ ಅಫಘಾತದಲ್ಲಿ ಸಾವು ಕಂಡ ಸುದ್ದಿ ಕೇಳಿ ಖಿನ್ನತೆಗೆ ಒಳಗಾಗಿದ್ದ ಅವರು. 2013ರಲ್ಲಿ ತಮ್ಮ 2ನೇ ಮಗನನ್ನೂ ಅಪಘಾತದಲ್ಲಿ ಕಳೆದುಕೊಂಡರು. ಇದರ ಬೆನ್ನಲ್ಲಿಯೇ 2014ರಲ್ಲಿ ಪತಿಯ ಸಾವನ್ನೂ ನೋಡಿದರು. ಸಂಪೂರ್ಣ ಕುಸಿದು ಹೋಗಿದ್ದ ದ್ರೌಪದಿ ಮುರ್ಮು ಬಳಿಕ ಸಮಾಜಸೇವೆಯಲ್ಲಿಯೇ ತೊಡಗಿಸಿಕೊಂಡಿದ್ದರು.


ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ


64 ವರ್ಷದ ಮುರ್ಮು ಅವರು ಜಾರ್ಖಂಡ್ ರಾಜ್ಯದ 9ನೇ ರಾಜ್ಯಪಾಲೆಯಾಗಿ ಸೇವೆ ಸಲ್ಲಿಸಿದ್ದರು. ದ್ರೌಪದಿ ಮುರ್ಮು ಜಾರ್ಖಂಡ್‌ನ ಒಂಬತ್ತನೇ ಗವರ್ನರ್ ಆಗಿದ್ದ ಭಾರತೀಯ ರಾಜಕಾರಣಿ. ಅವರು ಭಾರತೀಯ ಜನತಾ ಪಕ್ಷದ ಸದಸ್ಯೆಯಾಗಿದ್ದಾರೆ.


ಬಡತನದಲ್ಲೇ ಬೆಳೆದು ಬಂದವರು


ತಾವು ಸಂತಾಲ್ ಸಮುದಾಯದವರು ಎಂದಿರುವ ದ್ರೌಪದಿ ಮುರ್ಮು, ನಮ್ಮದು ಬಹಳ ಬಡ ಕುಟುಂಬವಾಗಿತ್ತು. ಆರಂಭಿಕ ಹಂತದಲ್ಲಿ ಒಂದು ಸಣ್ಣ ಕೆಲಸ ಮಾಡುವ ಮೂಲಕ ನಮ್ಮ ಕುಟುಂಬವನ್ನು ಸಾಕುವುದಷ್ಟೇ ನನ್ನ ಗುರಿಯಾಗಿತ್ತು. ನನಗೆ ಕೆಲಸ ಸಿಕ್ಕಿತ್ತು. ಆದರೆ, ಅದಾಗಲೇ ಮದುವೆಯಾಗಿದ್ದ ಕಾರಣ, ಇದನ್ನು ಬಿಡುವ ಅನಿವಾರ್ಯತೆ ಎದುರಾಯಿತು. ಆದರೆ, ಇದು ನನಗೆ ಇಷ್ಟವಿರಲಿಲ್ಲ. ಹಾಗಾಗಿ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಲು ಆರಂಭಿಸಿದೆ ಅಲ್ಲಿಂದಲೇ ನನ್ನ ಸಾಮಾಜಿಕ ಸೇವೆ ಆರಂಭವಾಯಿತು ಅಂತ ನೆನಪಿಸಿಕೊಂಡಿದ್ದಾರೆ.


ಇದನ್ನೂ ಓದಿ: Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ


ರಾಷ್ಟ್ರಪತಿಯಾದರೆ ಇತಿಹಾಸ ನಿರ್ಮಾಣ


ಬಿಜೆಪಿಗೆ ಬಹುಮತ ಇರುವುದಿಂದ ದ್ರೌಪದಿ ಮುರ್ಮು ಅವರೇ ರಾಷ್ಟಪತಿಯಾಗೋದು ಬಹುತೇಕ ಖಚಿತವಾಗಿದೆ. ಒಂದು ವೇಳೆ ದ್ರೌಮದಿ ಮುರ್ಮು ರಾಷ್ಟ್ರಪತಿಯಾಗಲು ಯಶಸ್ವಿಯಾದಲ್ಲಿ, ದೇಶದ ಉನ್ನತ ಸಾಂವಿಧಾನಿಕ ಹುದ್ದೆಗೇರಿದ 2ನೇ ಮಹಿಳೆ ಎಂಬ ಖ್ಯಾತಿ ಪಡೆಯಲಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಮೊದಲ ಒಡಿಶಾ ಪ್ರಜೆ ಹಾಗೂ ಬುಡಕಟ್ಟು ಪ್ರಜೆ ಎನಿಸಿಕೊಂಡು, ದಾಖಲೆ ಬರೆಯಲಿದ್ದಾರೆ.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು