• Home
  • »
  • News
  • »
  • explained
  • »
  • Mangaluru Blast: ಕುಕ್ಕರ್‌ನಲ್ಲಿ ಬಾಂಬ್ ಇಟ್ಟಿದ್ದ ಶಾರೀಕ್ ಎಂತಾ ಖತರ್ನಾಕ್ ಗೊತ್ತಾ? ಇಲ್ಲಿದೆ ಶಂಕಿತ ಉಗ್ರನ ಭಯಾನಕ ಹಿಸ್ಟರಿ

Mangaluru Blast: ಕುಕ್ಕರ್‌ನಲ್ಲಿ ಬಾಂಬ್ ಇಟ್ಟಿದ್ದ ಶಾರೀಕ್ ಎಂತಾ ಖತರ್ನಾಕ್ ಗೊತ್ತಾ? ಇಲ್ಲಿದೆ ಶಂಕಿತ ಉಗ್ರನ ಭಯಾನಕ ಹಿಸ್ಟರಿ

ಕುಕ್ಕರ್ ಜೊತೆ ಶಂಕಿತ ಉಗ್ರ ಶಾರೀಕ್

ಕುಕ್ಕರ್ ಜೊತೆ ಶಂಕಿತ ಉಗ್ರ ಶಾರೀಕ್

ಮೊದಲು ಅಂದೊಂದು ಆಕಸ್ಮಿಕ ಘಟನೆ ಅಂತ ಹೇಳಲಾಗಿತ್ತು. ಆದರೆ ಪೊಲೀಸರ ತನಿಖೆ ವೇಳೆ ಅದು ಉಗ್ರರ ಕೃತ್ಯ ಅನ್ನೋದು ಸಾಬೀತಾಯ್ತು. ಈ ಕೃತ್ಯ ನಡೆಸಿದ್ದವ ತನ್ನ ದಾಖಲೆಯಲ್ಲಿ ಪ್ರೇಮ್ಕುಮಾರ್ ಅಂತ ಹಾಕಿಕೊಂಡಿದ್ದ. ಅಸಲಿಗೆ ಆತ ಪ್ರೇಮ್ ಕುಮಾರ್ ಆಗೇ ಇರಲಿಲ್ಲ, ಅವನ ಅಸಲೀ ಹೆಸರೇ ಬೇರೆಯಾಗಿತ್ತು. ಅಂದಹಾಗೆ ಅವನ ಹೆಸರು ಪ್ರೇಮ್ಕುಮಾರ್ ಅಲ್ಲ ಶಾರೀಕ್! ಹಾಗಿದ್ರೆ ಯಾರು ಈ ಶಾರೀಕ್? ಆತನ ಹಿನ್ನೆಲೆ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ...

ಮುಂದೆ ಓದಿ ...
  • News18 Kannada
  • Last Updated :
  • Mangalore, India
  • Share this:

ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶವಾದ (communally sensitive area) ಕರಾವಳಿಯಲ್ಲಿ (coastal) ಮತ್ತೆ ಆತಂಕ ಮನೆ ಮಾಡಿದೆ. ಅದಕ್ಕೆ ಕಾರಣ ಆಟೋ ಬಾಂಬ್ ಬ್ಲಾಸ್ಟ್ (auto bomb blast)! ಹೌದು, ಆಟೋದಲ್ಲಿ ಕುಕ್ಕರ್ (Cooker) ಹಿಡಿದುಕೊಂಡು ಬಂದಿದ್ದ ಅಪರಿಚಿತನೊಬ್ಬ ಭಾರೀ ವಿಧ್ವಂಸಕ ಕೃತ್ಯ ಸೃಷ್ಟಿಮಾಡುವ ಪ್ಲಾನ್ ಮಾಡಿದ್ದ. ಆದರೆ ಆತರ ಟಾರ್ಗೆಟ್ (Target) ಮಿಸ್ ಆಗಿತ್ತು, ದಾರಿ ಮಧ್ಯದಲ್ಲಿಯೇ ಕುಕ್ಕರ್ ಒಂದು ಸ್ಪೋಟಗೊಂಡಿತ್ತು. ಅಂದಹಾಗೆ ಮೊದಲು ಅಂದೊಂದು ಆಕಸ್ಮಿಕ ಘಟನೆ ಅಂತ ಹೇಳಲಾಗಿತ್ತು. ಆದರೆ ಪೊಲೀಸರ ತನಿಖೆ ವೇಳೆ ಅದು ಉಗ್ರರ ಕೃತ್ಯ ಅನ್ನೋದು ಸಾಬೀತಾಯ್ತು. ಈ ಕೃತ್ಯ ನಡೆಸಿದ್ದವ ತನ್ನ ದಾಖಲೆಯಲ್ಲಿ ಪ್ರೇಮ್‌ಕುಮಾರ್ ಅಂತ ಹಾಕಿಕೊಂಡಿದ್ದ. ಅಸಲಿಗೆ ಆತ ಪ್ರೇಮ್ ಕುಮಾರ್ ಆಗೇ ಇರಲಿಲ್ಲ, ಅವನ ಅಸಲೀ ಹೆಸರೇ ಬೇರೆಯಾಗಿತ್ತು. ಅಂದಹಾಗೆ ಅವನ ಹೆಸರು ಪ್ರೇಮ್‌ಕುಮಾರ್‌ ಅಲ್ಲ ಶಾರೀಕ್! ಹಾಗಿದ್ರೆ ಯಾರು ಈ ಶಾರೀಕ್? ಆತನ ಹಿನ್ನೆಲೆ ಏನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.            


ಯಾರು ಈ ಶಾರೀಕ್?


ಶಂಕಿತ ಉಗ್ರ ಶಾರೀಕ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮೂಲದವನು. ಶಿವಮೊಗ್ಗದ ತೀರ್ಥಹಳ್ಳಿ ಸೊಪ್ಪಿನಗುಡ್ಡೆ ವಾಸಿ ತಂದೆ ಜೊತೆ ಬಟ್ಟೆ ಅಂಗಡಿ ನೋಡಿಕೊಳ್ತಿದ್ದ ತಂದೆ ಸಾವಿನ ಬಳಿಕ ಮಲತಾಯಿ ಜೊತೆಗಿದ್ದ ಶಂಕಿತ ಉಗ್ರರ ಪಟ್ಟಿಯಲ್ಲಿದ್ದ ಶಾರಿಕ್​​​​ ಖಾಕಿ ಹುಡುಕಾಡ್ತಿದ್ದಂತೆ ಕಣ್ಮರೆಯಾಗಿದ್ದ. ಕೆಲವೊಂದು ಅಪರಾಧ ಕೃತ್ಯಗಳಲ್ಲಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ. ಶಾರೀಕ್ ಆಗಸ್ಟ್ 15, 2022 ರ ಶಿವಮೊಗ್ಗ ಗಲಾಟೆ ಬಳಿಕ ಎಚ್ಚೆತ್ತುಕೊಂಡಿದ್ದ. ಅಗಸ್ಟ್ 23ರ ಬಳಿಕ ಅಲ್ಲಿಂದ ಪರಾರಿಯಾಗಿದ್ದ.


ಶಾರೀಕ್‌ಗೆ ಉಗ್ರ ನಂಟು?


ಈತ 2020ರಲ್ಲಿ ಮಂಗಳೂರಲ್ಲಿ ಲಷ್ಕರ್​​ಗೆ ಜೈಕಾರ ಗೋಡೆ ಮೇಲೆ ಬರಹ ಕೇಸ್​ನಲ್ಲಿ ಬಂಧನವಾಗಿ, ಬಳಿಕ ರಿಲೀಸ್​ ಆಗಿದ್ದ. ಆಗಷ್ಟ್ 2022ರಲ್ಲಿ ಶಿವಮೊಗ್ಗದಲ್ಲಿ ಪ್ರೇಮ್​ಸಿಂಗ್​​ಗೆ ಚಾಕು ಶಾರಿಕ್​​ ಕೃತ್ಯ, ಕೈವಾಡ ಎಂದು ಖಾಕಿ ಘೋಷಿಸಿತ್ತು.


ಇದನ್ನೂ ಓದಿ: Mangaluru Auto Blast: ಮಂಗಳೂರಿನಲ್ಲಿ ಆಟೋ ಸ್ಫೋಟಿಸಿದ್ದು ಉಗ್ರರಾ? ನಿಜಕ್ಕೂ ಅವರ ಟಾರ್ಗೆಟ್ ಯಾರಾಗಿದ್ದರು?


ಟ್ರಯಲ್ ಬ್ಲಾಸ್ಟ್ ಮಾಡಿದ್ದ ಶಂಕಿತ


ಸೆಪ್ಟೆಂಬರ್ 2022ರಲ್ಲಿ ಶಿವಮೊಗ್ಗದ ಹಲವೆಡೆ ಟ್ರಯಲ್​​ ಬ್ಲಾಸ್ಟ್ ಮಾಡಿದ್ದ ಕೃತ್ಯದಲ್ಲಿ ಈತ ಕೂಡ ಶಾಮೀಲಾಗಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಯಾಸಿನ್​, ಮಾಜ್​ ಎಂಬುವರ ಬಂಧನವಾಗಿತ್ತು. ಈ ವೇಳೆ ಶಾರೀಕ್​ ಎಸ್ಕೇಪ್ ಆಗಿದ್ದ. ಇನ್ನು ಇದೇ ಅಕ್ಟೋಬರ್ 2022ರಲ್ಲಿ ತಮಿಳುನಾಡಿನ ಕೊಯಮತ್ತೂರಲ್ಲಿ ನಡೆದ ಕಾರ್​ ಬ್ಲಾಸ್ಟ್​ನಲ್ಲೂ ಕೂಡ ಶಾರೀಕ್​ ಕೈವಾಡ ಇರೋ ಶಂಕೆ ವ್ಯಕ್ತವಾಗಿದೆ.


ಐಸಿಸ್ ಜೊತೆ ಲಿಂಕ್ ಇತ್ತಾ ಶಾರೀಕ್‌ಗೆ?


ಶಾರಿಕ್​​ ಸಾಮಾನ್ಯದವ್ನಲ್ಲ ಅನ್ನೋದು ಗೊತ್ತಾಗಿದೆ. ಕುಕ್ಕರ್ ಬಾಂಬ್ ತಯಾರಿಸಿ ಐಸಿಸ್ ಮಾದರಿಯಲ್ಲೇ ಪೋಸ್​ ಕೊಟ್ಟಿದ್ದಾನೆ. ಇದನ್ನೆಲ್ಲಾ ಗಮನಿಸಿದ್ರೆ ಶಾರಿಕ್ ಐಸಿಸ್​ನಿಂದ ಪ್ರೇರಿತನಾಗಿದ್ದ ಅನ್ನೋದು ತಿಳಿದು ಬಂದಿದೆ. ಮತ್ತಷ್ಟು ಸ್ಫೋಟ ನಡೆಸೋಕೆ ಬೇಕಾದ ವಸ್ತುಗಳನ್ನ ಕೂಡಿಟ್ಟಿದ್ದ. ಕುಕ್ಕರ್ ಬಾಂಬ್​ಗೆ ಪಾಸ್ಪರಸ್, ಸಲ್ಫರ್, ಪೊಟ್ಯಾಷಿಯಂ ನೈಟ್ರೇಟ್ ಬಳಸಿದ್ದ. ಆದರೆ ಬಾಂಬ್ ಸ್ಫೋಟಿಸಲು ತೆರಳುತ್ತಿದ್ದಾಗ ನಸೀಬು ಕೆಟ್ಟು ಕುಕ್ಕರ್ ಸ್ಫೋಟ ಸಂಭವಿಸಿದೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.


ಮೈಸೂರಿನ ಬಾಡಿಗೆ ಮನೆಯಲ್ಲಿ ಸ್ಫೋಟಕ ಸಂಗ್ರಹ?


ಶಾರಿಕ್ ದೊಡ್ಟಮಟ್ಟದಲ್ಲಿ ವಿಧೃಂಸಕ ಕೃತ್ಯ ನಡೆಸೋಕೆ ಪ್ಲ್ಯಾನ್ ಮಾಡಿದ್ನಂತೆ. ಮೈಸೂರಿನಲ್ಲಿರೋ ಶಾರಿಕ್ ಬಾಡಿಗೆ ರೂಮ್​ನಲ್ಲಿ 5 ದೊಡ್ಡ ಚೀಲಗಳಷ್ಟು ಸ್ಫೋಟಕಗಳು ಸಿಕ್ಕಿವೆ. ಸ್ಫೋಟಕಗಳನ್ನು ಪುಡಿ ಮಾಡಲು ಮಿಕ್ಸರ್ ಗ್ರೈಂಡರ್ ತಂದಿದ್ನಂತೆ. ಹಲವು ರಾಸಾಯನಿಕ ಪೌಡರ್, ಕಚ್ಚಾವಸ್ತು ತಂದಿದ್ನಂತೆ. ಸದ್ಯ ಎಲ್ಲಾ ವಸ್ತುಗಳನ್ನು ಸೀಲ್ ಮಾಡಿ ಜಪ್ತಿ ಮಾಡಲಾಗಿದೆ. ಕೊಠಡಿಯಲ್ಲಿ ಆರು ಟೇಬಲ್​ಗಳ ಮೇಲೆ ಸ್ಫೋಟಕ ವಸ್ತುಗಳನ್ನ ಪೊಲೀಸ್ರು ಜೋಡಿಸಿದ್ದಾರೆ. ಅದ್ರ ಮಾಹಿತಿ ಪಡೆಯಲು ಮೈಸೂರ್ ಕಮಿಷನರ್​ಗೆ ಅಲೋಕ್ ಕುಮಾರ್ ಬುಲಾವ್ ಕೊಟ್ಟಿದ್ದಾರೆ. ಸೀಝ್ ಮಾಡಿದ ವಸ್ತುಗಳನ್ನು ಮಂಗಳೂರಿಗೆ ತರಲಾಗಿದೆ.


ಮೊಬೈಲ್ ರಿಪೇರಿ ಬಗ್ಗೆ ತರಬೇತಿ


ಶಾರಿಕ್​ ಮೈಸೂರಿನಲ್ಲಿ ಮೊಬೈಲ್​ ಟ್ರೈನಿಂಗ್ ಸೆಂಟರ್​ನಲ್ಲಿ ಕೆಲಸ ಮಾಡ್ತಿದ್ದ. ಅದ್ರ ಬಗ್ಗೆ ಮಾತಾಡಿರೋ ಮೊಬೈಲ್ ಟ್ರೈನಿಂಗ್ ಸೆಂಟರ್ ಮಾಲೀಕ, ಶಾರಿಕ್​ನನ್ನು ನಿಜವಾಗಲೂ ಹಿಂದೂ ಎಂದುಕೊಂಡಿದ್ವಿ. ಆತ ಮುಸ್ಲಿಂ ಅನ್ನೋ ಬಗ್ಗೆ ಎಲ್ಲೂ ಅನುಮಾನ ಬರಲೇ ಇಲ್ಲ ಎಂದಿದ್ದಾರೆ.


ಮಂಗಳೂರನ್ನೇ ಟಾರ್ಗೆಟ್ ಮಾಡಿದ್ದ ಶಂಕಿತ


ಪಿಎಫ್​​ಐ ಸಂಘಟನೆ ನಿಷೇಧ, ರಾಜ್ಯದಲ್ಲಿ ಹಿಜಾಬ್ ಸಂಘರ್ಷ, ಬಿಜೆಪಿ, ಆರ್​​ಎಸ್​ಎಸ್​ ಪ್ರಾಬಲ್ಯಕ್ಕೆ ಸಾಕ್ಷಿಯಾಗಿರೋ ಮಂಗಳೂರನ್ನೇ ಉಗ್ರರು ಟಾರ್ಗೆಟ್ ಮಾಡಿಕೊಂಡಿದ್ರಂತೆ. ISIS ಜೊತೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ ಶಾರೀಕ್​​​, ಕದ್ರಿ ಬಳಿಯ ಗೋಡೆ ಬರಹ ಬರೆದು ​​ ಅರೆಸ್ಟ್ ಆಗಿದ್ದ. ಮಂಗಳೂರಿನಲ್ಲಿ ಗೋಲಿಬಾರ್ ನಡೆದಿದ್ದಾಗಲೂ ಸ್ಥಳದಲ್ಲಿದ್ದ. ಇದೇ ಕಾರಣಕ್ಕೆ ಶಾರೀಕ್​​​ ಮಂಗಳೂರನ್ನು ಆಯ್ಕೆ ಮಾಡಿಕೊಂಡಿದ್ನಂತೆ. ತನ್ನ ಹ್ಯಾಂಡ್ಲರ್​ಗಳ ಸೂಚನೆಯಂತೆ ಪಂಪ್​​​ವೆಲ್ ಬಳಿ ಸ್ಫೋಟಕ್ಕೆ ನಿರ್ಧರಿಸಿದ್ನಂತೆ. ಪ್ಲಾನ್ ಪ್ರಕಾರ ಸ್ಫೋಟ ಸಂಭವಿಸಿದ್ರೆ ದೊಡ್ಡ ಮಟ್ಟದ ಅನಾಹುತ ಸಂಭವಿಸ್ತಿತ್ತು.


ಶಂಕಿತನ ಸಂಪರ್ಕದಲ್ಲಿದ್ದವರಿಗೆ ತಲಾಶ್


ಶಂಕಿತ ಶಾರಿಕ್ ಜೊತೆ ಸಂಪರ್ಕದಲ್ಲಿರೋ ಅಬ್ದುಲ್ ಮತೀನ್ ಅಹ್ಮದ್ ತಾಹಗೆ ಎನ್​ಐಎ ತಲಾಶ್ ನಡೆಸ್ತಿದೆ. ಮತಿನ್ ಎನ್ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದಾನೆ. ಸುದ್ದಗುಂಟೆಪಾಳ್ಯದ NIA ಕೇಸ್​ನಲ್ಲಿ ತಾಹ A12 ಆರೋಪಿಯಾಗಿದ್ದು, ಸುದ್ದಗುಂಟೆಪಾಳ್ಯ ಮನೆ ಮೇಲೂ ಪೊಲೀಸರು ರೇಡ್​ ಮಾಡಿದ್ದಾರೆ. ತೀರ್ಥಹಳ್ಳಿಯ ಸೊಪ್ಪುಗುಡ್ಡೆ ಮೂಲದ ತಾಹ ಮೆಹಬೂಬ್ ಪಾಷಾ ಜೊತೆಗೂಡಿ ಉಗ್ರ ಕೃತ್ಯದಲ್ಲಿ ಭಾಗಿಯಾಗಿದ್ನಂತೆ. ಜತೆಗೆ ಮಂಗಳೂರು ಸ್ಫೋಟದಲ್ಲೂ ಮತಿನ್ ಹೆಸರು ತಳುಕು ಹಾಕಿಕೊಂಡಿದೆ.


ಮನೆಯವರ ಸಂಪರ್ಕವನ್ನೇ ಕಳೆದುಕೊಂಡಿರುವ ಮತೀನ್


ನ್ಯೂಸ್ 18 ಕನ್ನಡಕ್ಕೆ ಶಂಕಿತ ಉಗ್ರ ಮತೀನ್ ತಂದೆ ಮನ್ಸೂರ್ ಅಹಮದ್ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮಗ ಮತೀನ್ ಸಂಪರ್ಕವಿಲ್ಲದೆ ಹಲವು ವರ್ಷಗಳೇ ಕಳೆದಿವೆ. ಅವ್ನು ಏನಾಗಿದ್ದಾನೆ ಅಂತ ನಮಗೆ ಇನ್ನೂ ಗೂತ್ತಿಲ್ಲ. ಆದ್ರೆ ಆತ ಉಗ್ರ ಅಲ್ಲ ಎಂದಿದ್ದಾರೆ.


ಇದನ್ನೂ ಓದಿ: Mangaluru Blast Case: ಬೆಂಗಳೂರಿನಲ್ಲಿ ಮತ್ತೊಬ್ಬ ಶಂಕಿತ ಅರೆಸ್ಟ್; ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ನಡೆದಿತ್ತಾ ಪ್ಲಾನ್​!?


ಮುಂದುವರೆದ ತನಿಖೆ


ಸದ್ಯ ಪ್ರಕರಣದ ತನಿಖೆ ಚುರುಕುಗೊಂಡಿದೆ. ಹಲವು ರೀತಿಯಲ್ಲಿ ತನಿಖೆ ನಡೆಸಲಾಗ್ತಿದೆ. ಎನ್ಐಎ ಈ ಘಟನೆಯ ತನಿಖೆ ನಡೆಸುತ್ತಿದ್ದು, ಉಗ್ರರ ಜಾಡು ಹಿಡಿದು ಹೊರಟಿದೆ.

Published by:Annappa Achari
First published: