Rheumatoid: ಯುವಕರನ್ನೇ ಬಾಧಿಸುತ್ತೆ ರುಮಟಾಯ್ಡ್‌ ಸಂಧಿವಾತ: ಏನಿದು? ಕಾರಣವೇನು?

ದೇಹದಲ್ಲಿ ಸಾಮಾನ್ಯ ನೋವು, ಎದೆಯುರಿ ಅಥವಾ ಉಸಿರಾಟದ ಸಮಸ್ಯೆ ಪದೇ ಪದೇ ಕಾಡುತ್ತಿದೆಯೇ? ಇದು ಸಾಮಾನ್ಯ ಸಮಸ್ಯೆ ಎಂದು ಸುಮ್ಮನಾಗಬೇಡಿ. ಯಾಕೆಂದರೆ ಇವೆಲ್ಲವೂ ರುಮಟಾಯ್ಡ್ ಸಂಧಿವಾತದ ಸಂಕೇತವಾಗಿರಬಹುದು. ಈ ಸ್ವಯಂ ನಿರೋಧಕ ಕಾಯಿಲೆಯ ಅಸಾಮಾನ್ಯ ಲಕ್ಷಣಗಳು ಇಲ್ಲಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

 • Share this:
ದೇಹದಲ್ಲಿ ಸಾಮಾನ್ಯ ನೋವು, ಎದೆಯುರಿ ಅಥವಾ ಉಸಿರಾಟದ ಸಮಸ್ಯೆ (Breathing problem) ಪದೇ ಪದೇ ಕಾಡುತ್ತಿದೆಯೇ? ಇದು ಸಾಮಾನ್ಯ ಸಮಸ್ಯೆ ಎಂದು ಸುಮ್ಮನಾಗಬೇಡಿ. ಯಾಕೆಂದರೆ ಇವೆಲ್ಲವೂ ರುಮಟಾಯ್ಡ್ ಸಂಧಿವಾತದ (Rheumatoid arthritis) ಸಂಕೇತವಾಗಿರಬಹುದು. ಈ ಸ್ವಯಂ ನಿರೋಧಕ ಕಾಯಿಲೆಯ ಅಸಾಮಾನ್ಯ ಲಕ್ಷಣಗಳು ಇಲ್ಲಿವೆ. ಇವುಗಳನ್ನು ನೀವು ಎಂದಿಗೂ ನಿರ್ಲಕ್ಷಿಸಬಾರದು. ಅದರಲ್ಲೂ ಇಂದಿನ ನವ ಯುವಕರಲ್ಲಿ (Youths) ಈ ರುಮಟಾಯ್ಡ್‌ ಸಂಧಿವಾತದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಎಂದು ಸಂಶೋಧನೆಗಳು (Research) ಹೇಳುತ್ತಿವೆ. ಹಾಗಿದ್ರೆ ಈ ಸಂಶೋಧನೆಗಳು ಏನ್‌ ಹೇಳ್ತಿವೆ? ರುಮಟಾಯ್ಡ್‌ ಸಂಧಿವಾತ ಎಂದ್ರೇನು? ಅದರ ಲಕ್ಷಣಗಳು ಹೇಗಿರುತ್ತವೆ? ಎಂಬೆಲ್ಲ ವಿಚಾರಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ರುಮಟಾಯ್ಡ್ ಸಂಧಿವಾತ ಒಂದು ಗಂಭೀರ ಕೀಲು ನೋವು ಆಗಿದೆ. ಇದು ಸ್ವಯಂ ನಿರೋಧಕ ಕಾಯಿಲೆಯಾಗಿದ್ದು ಅದು ಮೂಳೆಗಳ ತುದಿಗಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸಂಧಿವಾತ ಇರುವ ರೋಗಿಗಳಲ್ಲಿ ನಡೆಯಲು ಕಷ್ಟವಾಗುವ ಸ್ಥಿತಿಯನ್ನು ಈ ರುಮಟಾಯ್ಡ್‌ ಸಂಧಿವಾತ ತರುತ್ತದೆ. ಇದು ಕೀಲು ನೋವು ಆಗಿದ್ದು, ಕಿರಿಯರಿಗಿಂತ ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಇಷ್ಟು ದಿನ ಎಲ್ಲರೂ ತಿಳಿದಿದ್ದರು. ಆದರೆ ಈಗ ಕೆಲವು ಸಂಶೋಧನಾ ಅಧ್ಯಯನಗಳು ಇದರಿಂದ ಯುವಜನರು ಕೂಡ ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿವೆ.

ಹಾಗಿದ್ರೆ ಇದರ ಕುರಿತು ಸಂಶೋಧನಾ ಅಧ್ಯಯನಗಳು ಏನ್‌ ಹೇಳ್ತಿವೆ?
ಹೌದು! ಪಬ್‌ಮೆಡ್ ಸೆಂಟ್ರಲ್ ಮೌಲ್ಯಮಾಪನ ಮಾಡಿದ 2017ರ ಅಧ್ಯಯನದ ಪ್ರಕಾರ, ವಯಸ್ಕರಲ್ಲಿ 0.41 ರಿಂದ 0.54 ರಷ್ಟು ಈ ರುಮಟಾಯ್ಡ್‌ ಸಂಧಿವಾತ ನೋವು ಹೆಚ್ಚಿನ ಪರಿಣಾಮ ಬೀರುತ್ತಿದೆ. ವಾಸ್ತವವಾಗಿ ಹೇಳುವುದಾದರೆ, 52,840 ವಯಸ್ಕ ಜನರನ್ನು ಒಳಗೊಂಡಿರುವ ಜರ್ನಲ್ ಆಫ್ ಚೈನೀಸ್ ಮೆಡಿಕಲ್ ಅಸೋಸಿಯೇಶನ್‌ನ 2018 ರ ಅಧ್ಯಯನದಲ್ಲಿ ರುಮಟಾಯ್ಡ್‌ ಸಂಧಿವಾತವು ಹಲವಾರು ಕಾಯಿಲೆಗಳಿಗೆ ದಾರಿ ಮಾಡಿ ಕೊಡುವ ಕಾಯಿಲೆಗಳಿಗೆ ಅಪಾಯಕಾರಿ ಅಂಶವಾಗಿದೆ ಎಂದು ಕಂಡುಬಂದಿದೆ. ಅವರಲ್ಲಿ 10,568 ಜನರು ರುಮಟಾಯ್ಡ್‌ ಸಂಧಿವಾತ ರೋಗವನ್ನು ಹೊಂದಿದ್ದರು.

ಇದನ್ನೂ ಓದಿ: Thinking: ಯೋಚ್ನೆ ಮಾಡಿ ಮಾಡಿನೇ ಸುಸ್ತಾಗ್ತಿದೆಯಾ? ಇದರಿಂದ ಚೇತರಿಸಿಕೊಳ್ಳುವುದು ಹೇಗೆ?

ರುಮಟಾಯ್ಡ್‌ ಸಂಧಿವಾತ ಹೊಂದಿರುವ ವಯಸ್ಕರು ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಮತ್ತು ಪಾರ್ಶ್ವವಾಯು ಸೇರಿದಂತೆ ಸೆರೆಬ್ರೊವಾಸ್ಕುಲರ್ ಅಸ್ವಸ್ಥತೆಗಳ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಮತ್ತು ಇಂತಹ ವ್ಯಕ್ತಿಗಳಲ್ಲಿ ಈ ಅಪಾಯವು 2.35 ಪಟ್ಟು ಹೆಚ್ಚಾಗಿದೆ ಎಂದು ಕಂಡುಹಿಡಿಯಲಾಗಿದೆ. ಈಗ ಅದರ ರೋಗಲಕ್ಷಣಗಳನ್ನು ತಿಳಿಯುವ ಮೊದಲು, ಅದರ ಸ್ಥಿತಿಯ ಬಗ್ಗೆ ಸೂಕ್ತವಾಗಿ ಅರ್ಥಮಾಡಿಕೊಳ್ಳೋಣ.

ರುಮಟಾಯ್ಡ್ ಸಂಧಿವಾತ ಎಂದರೇನು?
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ ಸಂಧಿವಾತವು ಸ್ವಯಂ ನಿರೋಧಕ ಕಾಯಿಲೆಯಾಗಿದೆ. ಇದು ಹೆಚ್ಚಾಗಿ ಮೂಳೆಗಳು ಮತ್ತು ಕೀಲುಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯು ನಿಮ್ಮ ದೇಹದಲ್ಲಿನ ಆರೋಗ್ಯಕರ ಕೋಶಗಳ ಮೇಲೆ ದಾಳಿ ಮಾಡುವುದರಿಂದ, ಸ್ವಯಂ ನಿರೋಧಕ ಕಾಯಿಲೆಗಳು ಮೂಲಭೂತವಾಗಿ ದೇಹದಲ್ಲಿ ಊತ ಮತ್ತು ಉರಿಯೂತವನ್ನು ಉಂಟುಮಾಡುತ್ತವೆ. ಇದರ ಜೊತೆಗೆ ಕಣ್ಣುಗಳು, ಶ್ವಾಸಕೋಶಗಳು, ಹೃದಯ ಮತ್ತು ಇತರ ದೈಹಿಕ ಅಂಗಗಳು ಈ ರುಮಟಾಯ್ಡ್‌ ಸಂಧಿವಾತದಿಂದ ಹೆಚ್ಚು ಅಪಾಯವನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಸಿಡಿಸಿ ಹೇಳುತ್ತದೆ. ಇದು ರೋಗಿಗಳಿಗೆ ಹೆಚ್ಚಿನ ಅಪಾಯಗಳನ್ನು ತರುವ ಸಾಧ್ಯತೆಯನ್ನು ಹೊಂದಿದೆ.

ಯುವಕರಲ್ಲಿ ರುಮಟಾಯ್ಡ್‌ ಸಂಧಿವಾತ ಕಂಡುಬರಲು ಮುಖ್ಯ ಕಾರಣವೇನು?
“ರುಮಟಾಯ್ಡ್ ಸಂಧಿವಾತದ ಯುವಕರಲ್ಲಿ ಹೇಗೆ ಕಾಣಿಸಿಕೊಳ್ಳುತ್ತದೆ ಎಂದು ನಿಖರ ಕಾರಣ ತಿಳಿದಿಲ್ಲ. ಆದರೆ ಆ ಸ್ಥಿತಿಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳನ್ನು ನಾವು ಕಂಡು ಹಿಡಿಯಬಹುದು. ಇಂದಿನ ದಿನಗಳಲ್ಲಿ, ರುಮಟಾಯ್ಡ್ ಸಂಧಿವಾತದ ಲಕ್ಷಣಗಳು ಸಾಮಾನ್ಯವಾಗಿ ಯುವಜನರಲ್ಲಿ ಕಂಡುಬರುತ್ತವೆ. ಅದರ ಹಿಂದೆ ಅನೇಕ ಪ್ರಮುಖ ಅಂಶಗಳಿವೆ ” ಎಂದು ಡಾ. ಅಯ್ಯರ್ ಹೇಳುತ್ತಾರೆ.

ಇದನ್ನೂ ಓದಿ: Uric Acid: ರಕ್ತದಲ್ಲಿರುವ ಅಧಿಕ ಯೂರಿಕ್ ಆಮ್ಲವನ್ನು ನಿಯಂತ್ರಿಸಲು ಈ 5 ಪಾನೀಯಗಳನ್ನು ಸೇವಿಸಿ

ರುಮಟಾಯ್ಡ್‌ ಸಂಧಿವಾತ ಕಾಣಿಸಿಕೊಳ್ಳಲು ಇರುವ ಪ್ರಮುಖ ಕಾರಣಗಳು ಇಲ್ಲಿವೆ

 1. ಆನುವಂಶಿಕ ಹಿನ್ನೆಲೆ: ಕುಟುಂಬದಲ್ಲಿ ಯಾರಾದರೂ ರುಮಟಾಯ್ಡ್ ಸಂಧಿವಾತ ನೋವನ್ನು ಈ ಹಿಂದೆ ಹೊಂದಿದ್ದರೆ, ಮುಂದೆ ಆ ಕುಟುಂಬದಲ್ಲಿ ಒಬ್ಬರು ಅದರಿಂದ ಬಳಲುವ ಅಪಾಯ ಹೆಚ್ಚಾಗಿರುತ್ತದೆ. ಆನುವಂಶಿಕವಾಗಿ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು.

 2. ಧೂಮಪಾನ: ಸಿಗರೇಟ್ ಸೇದುವಿಕೆಯು ಸಣ್ಣ ವಯಸ್ಸಿನಲ್ಲಿ ರುಮಟಾಯ್ಡ್ ಸಂಧಿವಾತದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನಗಳು ತಿಳಿಸುತ್ತವೆ.

 3. ಅಧಿಕ ತೂಕ: ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಯುವಜನರು ರುಮಟಾಯ್ಡ್ ಸಂಧಿವಾತಕ್ಕೆ ಬಹು ಬೇಗನೆ ತುತ್ತಾಗುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂಬುದು ನಿಜಕ್ಕೂ ಆಘಾತಕಾರಿ ವಿಚಾರವಾಗಿದೆ.


ಸಂಧಿವಾತ ಫೌಂಡೇಶನ್ ಆಫ್ ಇಂಡಿಯಾದ ಪ್ರಕಾರ, ರುಮಟಾಯ್ಡ್‌ ಸಂಧಿವಾತದ ನೋವಿನಿಂದ ಯುವಜನರಲ್ಲಿ ಕಾಣಿಸುವ ರುಮಟಾಯ್ಡ್ ಸಂಧಿವಾತದ ಪ್ರಮುಖ 7 ಲಕ್ಷಣಗಳು ಇಲ್ಲಿವೆ

 1. ನೋವು, ಊತ, ಬಿಗಿತ ಮತ್ತು ಕೀಲುಗಳ ಮೃದುತ್ವವು ಒಬ್ಬರಿಗಿಂತ ಒಬ್ಬರಿಗೆ ವಿಭಿನ್ನವಾಗಿರುತ್ತವೆ. ಕೆಲವರಿಗೆ ಈ ನೋವು ಸ್ವಲ್ಪ ಹೆಚ್ಚೆ ಎನಿಸಿದರೆ, ಮತ್ತೆ ಕೆಲವರಿಗೆ ಈ ನೋವು ಕಡಿಮೆ ಎನಿಸಬಹುದು. ಕೀಲುಗಳಲ್ಲಿ ನೋವು ಕಾಣಿಸಿಕೊಂಡರೆ ಇದು ಪ್ರಮುಖ ಲಕ್ಷಣಗಳಲ್ಲಿ ಒಂದಾಗುತ್ತದೆ.

 2. ಗಂಟೆಗಟ್ಟಲೇ ಒಂದೇ ಸ್ಥಳದಲ್ಲಿ ಕುಳಿತುಕೊಳ್ಳುವುದರಿಂದ ಬೆಳಿಗ್ಗೆಯ ಸಮಯ ಹೆಚ್ಚಿನ ನೋವು ಕಾಣಿಸಿಕೊಳ್ಳುವ ಲಕ್ಷಣ ಇದಾಗಿದೆ.

 3. ದಿನವಿಡೀ ವಿಪರೀತ ದಣಿವು ಮತ್ತು ಆಯಾಸವನ್ನು ಸಹ ಅನೇಕ ಜನರಲ್ಲಿ ಕಾಣಬಹುದು.

 4. ಕೆಲಸದಲ್ಲಿ ನಿಮ್ಮ ಉತ್ಪಾದಕತೆಯನ್ನು ಕಡಿಮೆ ಮಾಡುವ ದೇಹದ ಸುಸ್ತು.

 5. ರುಮಟಾಯ್ಡ್ ಸಂಧಿವಾತದ ಲಕ್ಷಣಗಳಲ್ಲಿ ಜ್ವರ ಕೂಡ ಒಂದು ಪ್ರಮುಖ ಲಕ್ಷಣವಾಗಿದೆ.

 6. ಈ ರುಮಟಾಯ್ಡ್‌ ಸಂಧಿವಾತ ಇದ್ದರೆ ಹಸಿವು ಕಡಿಮೆಯಾಗುವುದು ಕೂಡ ಪ್ರಮುಖ ಲಕ್ಷಣಗಳಲ್ಲಿ ಒಂದಾಗಿದೆ. ಈ ಸ್ಥಿತಿಯಲ್ಲಿ ಯಾವುದೇ ಅಹಾರ ಸೇವಿಸಲು ಮನಸಾಗುವುದಿಲ್ಲ.

 7. ಒಂದಕ್ಕಿಂತ ಹೆಚ್ಚು ಕೀಲುಗಳಲ್ಲಿ ನೋವು ಮತ್ತು ಊತ ಉಂಟಾಗಿದ್ದರೆ, ಇದು ದೀರ್ಘಕಾಲದವರೆಗೆ ಇದ್ದರೆ ಸಂಶಯವೇ ಬೇಡ. ಅದು ಸಂಧಿವಾತದ ಮೊದಲ ಮೆಟ್ಟಿಲು ಎಂದು ತಿಳಿಯಬಹುದು.


ಇತರ ಲಕ್ಷಣಗಳೆಂದರೆ:

 • ಕೈಯಲ್ಲಿ ಮರಗಟ್ಟುವಿಕೆ ಮತ್ತು ಮಣಿಕಟ್ಟಿನಲ್ಲಿ ನೋವು: ಮಣಿಕಟ್ಟಿನ ನೋವು ಮತ್ತು ಬೆರಳುಗಳು ಮತ್ತು ಕೈಗಳಲ್ಲಿ ಮರಗಟ್ಟುವಿಕೆ ರುಮಟಾಯ್ಡ್ ಸಂಧಿವಾತದ ಸಾಮಾನ್ಯ ಲಕ್ಷಣಗಳಾಗಿವೆ. ಈ ರೋಗಲಕ್ಷಣವು ಹೆಚ್ಚಾಗಿ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಕೆಲಸ ಮಾಡುವ ಜನರಲ್ಲಿ ಕಂಡುಬರುತ್ತದೆ - ಪುನರಾವರ್ತಿತ ರೀತಿಯಲ್ಲಿ ತಮ್ಮ ಕೈಗಳನ್ನು ಚಲಿಸುವ ಜನರು. ಸಮಯಕ್ಕೆ ಸರಿಯಾಗಿ ರೋಗಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ನೋವು ಮಣಿಕಟ್ಟಿನಿಂದ ಮೊಣಕೈ ಕಡೆಗೆ ಹರಡಬಹುದು.

 • ಎದೆ ನೋವು: ಹೌದು, ಎದೆ ನೋವು ಕೇವಲ ಹೃದಯಾಘಾತ ಅಥವಾ ಹೃದಯ ಸ್ತಂಭನದ ಲಕ್ಷಣವಲ್ಲ. ದೀರ್ಘಕಾಲದ ಎದೆ ನೋವು ಇದ್ದರೆ ನೀವು ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದೀರಿ ಎಂದರ್ಥ. ದುರ್ಬಲ ಹೃದಯದ ಕಾರ್ಯಗಳು ರುಮಟಾಯ್ಡ್ ಸಂಧಿವಾತಕ್ಕೆ ಕಾರಣವಾಗಬಹುದು.


ಇದನ್ನೂ ಓದಿ:  Coronavirus: ಕೊರೊನಾ ವೈರಸ್​ನ ಈ ಲಕ್ಷಣಗಳು ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಂತೆ

 • ಕಣ್ಣುಗಳಲ್ಲಿ ನೋವು: ಕಣ್ಣಿನ ನೋವು ಇದ್ದಾಗ ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿದ್ದೀರಿ ಎಂದು ಎಂದಾದರೂ ಯೋಚಿಸಿದ್ದೀರಾ? ಕಣ್ಣಿನ ನೋವು ಅಥವಾ ಸ್ಕ್ಲೆರಿಟಿಸ್ ಎನ್ನುವುದು ರುಮಟಾಯ್ಡ್ ಸಂಧಿವಾತದ ಒಂದು ತೊಡಕು. ಆದಾಗ್ಯೂ, ಇದು ರೋಗಿಯು ಅನುಭವಿಸಬಹುದಾದ ಅತ್ಯಂತ ಅಪರೂಪದ ಮತ್ತು ಅತ್ಯಂತ ಅಸಾಮಾನ್ಯ ಲಕ್ಷಣವಾಗಿದೆ.

 • ಉಸಿರಾಟದ ತೊಂದರೆ: ಉಸಿರಾಡಲು ಕಷ್ಟವಾಗಿದೆಯೇ? ಒಬ್ಬ ವ್ಯಕ್ತಿಯು ಉಸಿರಾಡಲು ಕಷ್ಟವಾಗುವುದು ಕೇವಲ ಉಸಿರಾಟದ ಕಾಯಿಲೆ ಲಕ್ಷಣವಲ್ಲ.. ಹೌದು, ರುಮಟಾಯ್ಡ್ ಸಂಧಿವಾತದಿಂದ ಬಳಲುತ್ತಿರುವ ಅನೇಕ ಜನರು ಶ್ವಾಸಕೋಶದ ತೊಂದರೆಗಳನ್ನು ಹೊಂದಿರುತ್ತಾರೆ, ಆದರೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಜನರು ಇದನ್ನು ಬೇರೆ ಸಮಸ್ಯೆ ಎಂದುಕೊಳ್ಳುತ್ತಾರೆ.

 • ತೋಳುಗಳು ಅಥವಾ ಬೆರಳುಗಳಲ್ಲಿ ಜುಮ್ಮೆನಿಸುವಿಕೆ ಭಾವನೆ: ಸಂಧಿವಾತವು ಹೆಚ್ಚಾದರೆ ಅಪಾಯಕಾರಿ. ಈ ಸ್ಥಿತಿಯ ಒಂದು ಪ್ರಮುಖ ಲಕ್ಷಣವೆಂದರೆ ಬೆನ್ನು ಮತ್ತು ಕುತ್ತಿಗೆಯಲ್ಲಿ ಒತ್ತಡ. ಕುತ್ತಿಗೆ ಮತ್ತು ಬೆನ್ನುಮೂಳೆಯಲ್ಲಿನ ಹಾನಿಯು ಸರ್ವಿಕಲ್ ಮೈಲೋಪತಿಗೆ ಕಾರಣವಾಗಬಹುದು - ಇದು ನರಗಳ ಮೇಲೆ ತೀವ್ರ ಒತ್ತಡವನ್ನು ಉಂಟುಮಾಡುತ್ತದೆ.

Published by:Ashwini Prabhu
First published: