• Home
  • »
  • News
  • »
  • explained
  • »
  • One Nation, One Uniform: ಏನಿದು 'ಒಂದು ದೇಶ, ಒಂದೇ ಸಮವಸ್ತ್ರ'? ಬದಲಾಗುತ್ತಾ ಕರ್ನಾಟಕ ಪೊಲೀಸರ ಖಾಕಿ ಯೂನಿಫಾರ್ಮ್?

One Nation, One Uniform: ಏನಿದು 'ಒಂದು ದೇಶ, ಒಂದೇ ಸಮವಸ್ತ್ರ'? ಬದಲಾಗುತ್ತಾ ಕರ್ನಾಟಕ ಪೊಲೀಸರ ಖಾಕಿ ಯೂನಿಫಾರ್ಮ್?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ರೂಪಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಕೇಂದ್ರದ ಈ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ ಒಪ್ಪಿಗೆಯೂ ಸಿಕ್ಕಿದೆ. ಹಾಗಾದರೆ ಏನಿದು ಏಕ ರೂಪದ ಸಮವಸ್ತ್ರ ಸಂಹಿತೆ? ಇದರ ಸಾಧಕ-ಬಾಧಕಗಳೇನು? ಬದಲಾಗುತ್ತಾ ಕರ್ನಾಟಕ ಪೊಲೀಸರ ಖಾಕಿ ಸಮವಸ್ತ್ರ? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿ…

ಮುಂದೆ ಓದಿ ...
  • Share this:

ದೇಶದಲ್ಲಿ ಏಕರೂಪದ ವ್ಯವಸ್ಥೆ ಇರಬೇಕು ಅಂತ ಸಾರುತ್ತಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಹಲವು ಏಕರೂಪದ ಅಂಶಗಳನ್ನು ಜಾರಿಗೆ ತಂದಿದ್ದರು. ಏಕರೂಪದ ನಾಗರಿಕ ಸಂಹಿತೆ, ಏಕ ರೂಪದ ಶಿಕ್ಷಣ ಇತ್ಯಾದಿಗಳ ಕಲ್ಪನೆ ನೀಡಿದ್ದರು. ಇದೀಗ ಪೊಲೀಸರು (Police) ಧರಿಸುವ ಸಮವಸ್ತ್ರಗಳಲ್ಲಿ (Uniform) ಏಕರೂಪದ ಕಲ್ಪನೆ ತರಲು ಕೇಂದ್ರ ಸರ್ಕಾರ ಮುಂದಾದಂತೆ ಕಾಣುತ್ತಿದೆ. ‘ಒಂದು ದೇಶ, ಒಂದೇ ಸಮವಸ್ತ್ರ’ (one country, one uniform) ಎಂಬ ಕಲ್ಪನೆ ಬಗ್ಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದಾರೆ. ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ ರೂಪಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ಒಂದೇ ರೀತಿಯ ಸಮವಸ್ತ್ರ ಇದ್ದರೆ, ಎಲ್ಲಾ ರಾಜ್ಯದ ಪೊಲೀಸರಿಗೆ ಏಕರೂಪದ ಗುರುತು ದೊರೆಯುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ. ಈಗಾಗಲೇ ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ (Police) ಅನ್ವಯವಾಗುವಂತಹ ಏಕರೂಪದ ಸಮವಸ್ತ್ರ ಪದ್ಧತಿ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ (central government) ಪ್ರಸ್ತಾವನೆ ಸಲ್ಲಿಸಿ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿತ್ತು. ಇದೀಗ  ಕೇಂದ್ರ ಗೃಹ ಇಲಾಖೆಯ ಪ್ರಸ್ತಾವನೆಗೆ ಕರ್ನಾಟಕ ಸರ್ಕಾರದ (Karnataka Government) ಪರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಮ್ಮತಿಸಿದ್ದಾರೆ. ಹಾಗಾದರೆ ಏನಿದು ಏಕ ರೂಪದ ಸಮವಸ್ತ್ರ ಸಂಹಿತೆ? ಇದರ ಸಾಧಕ-ಬಾಧಕಗಳೇನು? ಈ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ ಓದಿ…


‘ಒಂದು ದೇಶ, ಒಂದೇ ಸಮವಸ್ತ್ರ’


ಒಂದು ಶ್ರೇಣಿ, ಒಂದು ಪಿಂಚಣಿ, ಒಂದು ರಾಷ್ಟ್ರ, ಒಂದು ಪಡಿತರ ಚೀಟಿ, ಒಂದು ರಾಷ್ಟ್ರ, ಒಂದು ರಸಗೊಬ್ಬರ, ಏಕ ರೂಪ ನಾಗರಿಕ ಸಂಹಿತೆ.. ಈ ರೀತಿಯ ಕಲ್ಪನೆಗಳನ್ನು ಬಿತ್ತಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದೆ. ಈಗ 'ಒಂದು ರಾಷ್ಟ್ರ, ಪೊಲೀಸರಿಗೆ ಒಂದು ಸಮವಸ್ತ್ರ' ಎಂಬ ಕಲ್ಪನೆ ತಂದಿದೆ. ಪ್ರಧಾನಿ ನರೇಂದ್ರ ಮೋದಿ ರಾಜ್ಯ ಗೃಹ ಸಚಿವರ ಚಿಂತನ್ ಶಿಬಿರ ಉದ್ದೇಶಿಸಿ ಮಾತನಾಡುವಾಗ ಪೊಲೀಸರಿಗೆ 'ಒಂದು ರಾಷ್ಟ್ರ, ಒಂದು ಸಮವಸ್ತ್ರ' ಪ್ರಸ್ತಾವನೆಯನ್ನು ಇಟ್ಟಿದ್ದಾರೆ.


ಎಲ್ಲಾ ರಾಜ್ಯಗಳ ಪೊಲೀಸರಿಗೆ ಒಂದೇ ರೀತಿಯ ಸಮವಸ್ತ್ರ


ಹೆಸರೇ ಸೂಚಿಸುವಂತೆ ಈ ಪ್ರಸ್ತಾವನೆಯು ದೇಶದ ಎಲ್ಲಾ ರಾಜ್ಯ ಪೊಲೀಸ್ ಇಲಾಖೆಗಳಲ್ಲಿ ಒಂದೇ ರೀತಿಯ ಸಮವಸ್ತ್ರವನ್ನು ತರಬೇಕು ಅಂತ ಹೇಳುತ್ತದೆ. ಪ್ರಸ್ತುತ ಎಲ್ಲಾ ರಾಜ್ಯಗಳ ಪೊಲೀಸ್ ಇಲಾಖೆಗಳು ಪ್ರತ್ಯೇಕ ಪೊಲೀಸ್ ಸಮವಸ್ತ್ರವನ್ನು ಹೊಂದಿವೆ. ಆದರೆ ದೇಶದಾದ್ಯಂತ ಇರುವ ರಾಜ್ಯದ ಪೊಲೀಸರ ಗುರುತು ಒಂದೇ ಆಗಿರಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ಅಡಿಯಲ್ಲಿ ದೇಶದಾದ್ಯಂತ ಇರುವ ಎಲ್ಲಾ ರಾಜ್ಯ ಪೊಲೀಸರು ಪೊಲೀಸರಿಗೆ ಒಂದೇ ಸಮವಸ್ತ್ರವನ್ನು ಹೊಂದಿರಬೇಕು ಎನ್ನುವುದು ಈ ಪ್ರಸ್ತಾವನೆಯ ಉದ್ದೇಶ.  ಒಂದು ವೇಳೆ ಇದು ಜಾರಿಯಾದರೆ ‘ಒಂದು ರಾಷ್ಟ್ರ, ಒಂದು ಸಮವಸ್ತ್ರ’ ಅಡಿಯಲ್ಲಿ ದೇಶದಾದ್ಯಂತ ಇರುವ ಎಲ್ಲಾ ರಾಜ್ಯ ಪೊಲೀಸರು ಪೊಲೀಸರಿಗೆ ಒಂದೇ ಸಮವಸ್ತ್ರವನ್ನು ಹೊಂದಿರುತ್ತಾರೆ.


ಇದನ್ನೂ ಓದಿ: Nepal Plane Crash: ವಿಮಾನಗಳಿಗೆ ಸುರಕ್ಷಿತವಲ್ಲವೇ ನೇಪಾಳ ಹವಾಮಾನ? ಪದೇ ಪದೇ ಅಪಘಾತಕ್ಕೆ ಕಾರಣವೇನು?


ಸದ್ಯ ಯಾವ ಯಾವ ರೀತಿಯ ಸಮವಸ್ತ್ರ ಇದೆ?


ಭಾರತದಲ್ಲಿನ ಪೊಲೀಸ್ ಸಿಬ್ಬಂದಿ ಸಾಮಾನ್ಯವಾಗಿ ಖಾಕಿ ಬಣ್ಣದೊಂದಿಗೆ ಸಂಬಂಧ ಹೊಂದಿದ್ದರೂ, ಅವರ ಸಮವಸ್ತ್ರಗಳು ವಿವಿಧ ಪ್ರದೇಶಗಳಲ್ಲಿ ವಿವಿಧ ಹಂತಗಳಲ್ಲಿ ಭಿನ್ನವಾಗಿರುತ್ತವೆ. ರಾಜ್ಯ ಸರ್ಕಾರಗಳು ಮತ್ತು ವೈಯಕ್ತಿಕ ಪಡೆ ಕೂಡ ತಮ್ಮ ಸಿಬ್ಬಂದಿ ಧರಿಸುವ ಸಮವಸ್ತ್ರವನ್ನು ನಿರ್ಧರಿಸಬಹುದಾಗಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಪೊಲೀಸರು ಖಾಕಿ ಬಟ್ಟೆ ಧರಿಸುತ್ತಾರೆ. ಅತ್ತ ಕೋಲ್ಕತ್ತಾ ಪೊಲೀಸರು ಬಿಳಿ ಸಮವಸ್ತ್ರವನ್ನು ಧರಿಸುತ್ತಾರೆ. ಪುದುಚೇರಿ ಪೊಲೀಸ್ ಕಾನ್‌ಸ್ಟೆಬಲ್‌ಗಳು ತಮ್ಮ ಖಾಕಿ ಸಮವಸ್ತ್ರದೊಂದಿಗೆ ಅಚ್ಚ ಕೆಂಪು ಬಣ್ಣದ ಟೋಪಿಯನ್ನು ಧರಿಸುತ್ತಾರೆ. ಇನ್ನು ದೆಹಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಿಳಿ ಮತ್ತು ನೀಲಿ ಸಮವಸ್ತ್ರವನ್ನು ಧರಿಸುತ್ತಾರೆ.


ಈ ಯೋಜನೆ ಯಾವಾಗ ಜಾರಿಯಾಗಲಿದೆ?


‘ಪೊಲೀಸರಿಗೆ ಒಂದು ರಾಷ್ಟ್ರ, ಒಂದೇ ಸಮವಸ್ತ್ರ’ ಯಾವಾಗ ವಿಧಿಸಲಾಗುತ್ತದೆ ಎಂಬುದಕ್ಕೆ ಕೇಂದ್ರ ಸರ್ಕಾರವೇನೂ ನಿರ್ದಿಷ್ಟ ಸಮಯ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಅಷ್ಟೇ. ನಾನು ಇದನ್ನು ಸಲಹೆಯಾಗಿ ನೀಡುತ್ತಿದ್ದೇನೆಯೇ ಹೊರತಾಗಿ ಇದನ್ನು ರಾಜ್ಯಗಳ ಮೇಲೆ ಹೇರಲು ಪ್ರಯತ್ನಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಐದು ಅಥವಾ 50 ವರ್ಷ, ಅಥವಾ 100 ವರ್ಷಗಳಲ್ಲಿ ಜಾರಿಗೆ ಬರಬಹುದು. ಆದರೆ ಈ ಬಗ್ಗೆ ನಾವು ಯೋಚಿಸಬೇಕಾಗಿದೆ ಅಂತ ಮೋದಿ ಹೇಳಿದ್ದಾರೆ.
ರಾಜ್ಯಗಳಿಗೆ ಪ್ರಸ್ತಾವನೆ ಸಲ್ಲಿಕೆ


ದೇಶದ ಎಲ್ಲಾ ರಾಜ್ಯಗಳ ಪೊಲೀಸರಿಗೆ (Police) ಅನ್ವಯವಾಗುವಂತಹ ಏಕರೂಪದ ಸಮವಸ್ತ್ರ ಪದ್ಧತಿ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರ (central government) ಪ್ರಸ್ತಾವನೆ ಸಲ್ಲಿಸಿ ರಾಜ್ಯ ಸರ್ಕಾರಗಳ ಅಭಿಪ್ರಾಯ ಕೇಳಿದೆ.


ಇದನ್ನೂ ಓದಿ: Mamta Mohan Das: ತಮ್ಮ ಸೌಂದರ್ಯ ಕಳೆದುಕೊಳ್ತಾರಾ ಮಮತಾ ಮೋಹನ್ ದಾಸ್? ಏನಿದು ನಟಿಯನ್ನು ಕಾಡುತ್ತಿರುವ ಕಾಯಿಲೆ?


ಕೇಂದ್ರದ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿದ ಕರ್ನಾಟಕ


ಇನ್ನು ಕೇಂದ್ರ ಸಲ್ಲಿಸಿರುವ ಒಂದು ದೇಶ ಒಂದೇ ಸಮವಸ್ತ್ರ ಕಲ್ಪನೆಗೆ ಕರ್ನಾಟಕ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ರಾಜ್ಯ ಸರ್ಕಾರದ ಪರವಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

Published by:Annappa Achari
First published: