Explained: ಪ್ರಧಾನಿ ಮೋದಿ ಕನಸಿನ ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯಲ್ಲಿ ಇರೋದಾದ್ರೂ ಏನು?

ಭಾರತದಲ್ಲಿ ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಕ್ಕೆ ಒಂದು ಕಾರಣವೆಂದರೆ ಆಯಾ ಕ್ಷೇತ್ರಗಳಲ್ಲಿರುವ ಗಮನಿಸುವ ಕೊರತೆಯಾಗಿದೆ. ವಾಸ್ತವವಾಗಿ ಸರಕಾರದಲ್ಲಿಯೂ ಕ್ಷೇತ್ರವನ್ನು ನಿರ್ವಹಿಸುವ ಒಂದೇ ಒಂದು ಇಲಾಖೆ ಇಲ್ಲ.

ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

  • Share this:
ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ರಾಷ್ಟ್ರೀಯ ಲಾಜಿಸ್ಟಿಕ್ ನೀತಿಯನ್ನು (NLP) ಪ್ರಾರಂಭಿಸಿದ್ದು, ಈ ನೀತಿಯು ದೇಶಾದ್ಯಂತ ಸರಕುಗಳ ತಡೆರಹಿತ ಚಲನೆಯನ್ನು ಉತ್ತೇಜಿಸುವುದು ಮಾತ್ರವಲ್ಲದೆ ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತೀಯ ಸರಕುಗಳ ಸ್ಪರ್ಧಾತ್ಮಕತೆಯನ್ನು ಸುಧಾರಿಸುವುದರೊಂದಿಗೆ ವ್ಯಾಪಾರ ವಲಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಭಾರತದಲ್ಲಿ ಚೀತಾಗಳನ್ನು (Cheetah) ಮರುಪರಿಚಯಿಸಿದ ಅದೇ ದಿನದಂದು ಸಾಮಾನು ಸರಂಜಾಮುಗಳು ಕೂಡ ಚಿರತೆಯಂತೆ ತ್ವರಿತವಾಗಿ ಸಾಗಬೇಕು ಎಂದು ತಿಳಿಸುವ ಮೂಲಕ ಈವೆಂಟ್ ಅನ್ನು ಉಲ್ಲೇಖಿಸಿದ್ದಾರೆ. ಲಾಜಿಸ್ಟಿಕ್ ವೆಚ್ಚಗಳು ಪ್ರಸ್ತುತ ಭಾರತದ GDP ಯ 13 ರಿಂದ 14% ರಷ್ಟಿದ್ದು, ಅಭಿವೃದ್ಧಿ ಹೊಂದಿದ ದೇಶಗಳಲ್ಲಿನ ವೆಚ್ಚಗಳ ದುಪ್ಪಟ್ಟು ಎಂದೆನಿಸಿದೆ.

ನೀತಿಯ ಹಿಂದಿರುವ ಪರಿಶ್ರಮ
ಪ್ರಧಾನಿಯವರು ನೀತಿಯ ಕುರಿತು ಮಾಹಿತಿ ನೀಡಿದ್ದು, ಲಾಜಿಸ್ಟಿಕ್ಸ್ ನೀತಿಯ ಹಿಂದೆ ಎಂಟು ವರ್ಷಗಳ ಪರಿಶ್ರಮವಿದ್ದು ನೀತಿಯು ಅನಿರೀಕ್ಷಿತವಾದ ಪ್ರಯತ್ನವಾಗಿದೆ. ಸಂಪರ್ಕದ ಸುಧಾರಣೆಗೆ ಕೆಲವೊಂದು ಯೋಜನೆಗಳಾದ ಸಾಗರಮಾಲಾ, ಭಾರತಮಾಲಾ, ಮೀಸಲಾದ ಸರಕು ಸಾಗಣೆ ಕಾರಿಡಾರ್‌ನಂತಹ ಮೊದಲಾದವುಗಳ ಮೂಲಕ ವ್ಯವಸ್ಥಿತ ಮೂಲಸೌಕರ್ಯ ಅಭಿವೃದ್ಧಿಯನ್ನು ಸರಕಾರ ಮಾಡುತ್ತಿದೆ.

ಬಂದರುಗಳ ಸಾಮರ್ಥ್ಯ ಹೆಚ್ಚಳ
ಭಾರತೀಯ ಬಂದರುಗಳ ಒಟ್ಟು ಸಾಮರ್ಥ್ಯವು ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ತಿಳಿಸಿದ ಮೋದಿಯವರು, ಕಂಟೈನರ್ ಹಡಗುಗಳ ಸರಾಸರಿ ತಿರುಗುವ ಸಮಯವು 44 ಗಂಟೆಗಳಿಗಿಂತ 26 ಗಂಟೆಗೆ ಇಳಿಕೆಯಾಗಿದೆ. ಜಲಮಾರ್ಗಗಳ ಮೂಲಕ ಪರಿಸರ ಸ್ನೇಹಿ ಮತ್ತು ವೆಚ್ಚ-ಪರಿಣಾಮಕಾರಿ ಸಾರಿಗೆಯನ್ನು ನಿರ್ವಹಿಸಬಹುದು. ಇದಕ್ಕಾಗಿ ದೇಶದಲ್ಲಿ ಅನೇಕ ಜಲಮಾರ್ಗಗಳ ನಿರ್ಮಾಣ ಕೂಡ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ.

ಲಾಜಿಸ್ಟಿಕ್ ವೆಚ್ಚ ಹೆಚ್ಚಾಗಲು ಕಾರಣವೇನು?
ಭಾರತದಲ್ಲಿ ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಕ್ಕೆ ಒಂದು ಕಾರಣವೆಂದರೆ ಆಯಾ ಕ್ಷೇತ್ರಗಳಲ್ಲಿರುವ ಗಮನಿಸುವ ಕೊರತೆಯಾಗಿದೆ. ವಾಸ್ತವವಾಗಿ ಸರಕಾರದಲ್ಲಿಯೂ ಕ್ಷೇತ್ರವನ್ನು ನಿರ್ವಹಿಸುವ ಒಂದೇ ಒಂದು ಇಲಾಖೆ ಇಲ್ಲ.

ಲಾಜಿಸ್ಟಿಕ್ಸ್ ಅಗತ್ಯಗಳನ್ನು ರಸ್ತೆ ಸಾರಿಗೆ, ಹಡಗು, ರೈಲ್ವೆ, ನಾಗರಿಕ ವಿಮಾನಯಾನ, ಪೋಸ್ಟ್‌ಗಳು ಮತ್ತು ವಾಣಿಜ್ಯ ಮತ್ತು ಉದ್ಯಮ ಮತ್ತು ಹಣಕಾಸು ಸೇರಿದಂತೆ ಹಲವು ಸಚಿವಾಲಯಗಳು ನಿರ್ವಹಿಸುತ್ತವೆ.

ಸಮಸ್ಯೆಗಳಿವೆ, ಪರಿಹಾರಗಳೂ ಇವೆ!
GST ಯ ಪರಿಚಯವು ದೇಶಾದ್ಯಂತ ಸರಕುಗಳ ಚಲನೆಯನ್ನು ಸುಧಾರಿಸಿದೆ. ಆದರೆ ಹೆಚ್ಚಿನ ಸಮಸ್ಯೆಗಳಿವೆ. ಭಾರತದಲ್ಲಿ ಲಾಜಿಸ್ಟಿಕ್ಸ್ ವಲಯವು ಅಂದಾಜು 10.5 ಪ್ರತಿಶತದಷ್ಟು ವಾರ್ಷಿಕ ದರದಲ್ಲಿ ಬೆಳೆಯುತ್ತಿದೆಯಾದರೂ, ನೀತಿಯ ಒತ್ತಡದ ಅನುಪಸ್ಥಿತಿಯಿಂದಾಗಿ ಈ ವಲಯವು ಹೆಚ್ಚಾಗಿ ಅಸಂಘಟಿತವಾಗಿದೆ. ಇದರಿಂದ ಯಾವುದೇ ಆರ್ಥಿಕ ಪ್ರಯೋಜನವಿಲ್ಲ. ವೆಚ್ಚವು ಹೆಚ್ಚಾಗುತ್ತದೆ.

ನಿರ್ಮಲಾ ಸೀತಾರಾಮನ್ ಪ್ರಕಾರ ಲಾಜಿಸ್ಟಿಕ್ ನೀತಿ ಏಕೆ ಅಗತ್ಯ?
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪ್ರಕಾರ, ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿಯು "ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಪ್ರಮುಖ ನಿಯಂತ್ರಕರ ಪಾತ್ರಗಳನ್ನು ಸ್ಪಷ್ಟಪಡಿಸುತ್ತದೆ" ಎಂದಾಗಿದೆ.

ಇದು ಭಾರತದ ಬೃಹತ್ ಮಧ್ಯಮ ಮತ್ತು ಸಣ್ಣ ಉದ್ಯಮಗಳು ಸ್ಪರ್ಧಾತ್ಮಕವಾಗಿ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದೂ ಉಲ್ಲೇಖಿಸಿದ್ದಾರೆ.

ಲಾಜಿಸ್ಟಿಕ್ಸ್ ನೀತಿಯ ಅಗತ್ಯವೇನು?
ಲಾಜಿಸ್ಟಿಕ್ಸ್ ವ್ಯಾಪಕವಾಗಿ ವ್ಯಾಪಾರಕ್ಕೆ ಅಗತ್ಯವಾಗಿರುವ ಪ್ರಮುಖ ಸೌಲಭ್ಯಗಳನ್ನು ಒಳಗೊಂಡಿದೆ: ಸರಕುಗಳ ಸಾಗಣೆಗೆ ಸಾರಿಗೆ ಸೇವೆಗಳು, ಆಹಾರ ಪದಾರ್ಥಗಳು, ಹಣ್ಣುಗಳು ಮತ್ತು ತರಕಾರಿಗಳಂತಹ ಕೊಳೆಯುವ ಸರಕುಗಳ ವ್ಯಾಪಾರಕ್ಕೆ ವಿಶೇಷವಾಗಿ ಅಗತ್ಯವಾಗಿರುವ ಶೇಖರಣಾ ಸೌಲಭ್ಯಗಳು ಮತ್ತು ಪರವಾನಗಿ ಮತ್ತು ವ್ಯಾಪಾರವನ್ನು ಸುಗಮಗೊಳಿಸುವ ಸರ್ಕಾರಿ ಸೇವೆಗಳ ಸುಗಮ ಕಾರ್ಯನಿರ್ವಹಣೆ ಪದ್ಧತಿಗಳು ಮೊದಲಾದ ಸೌಲಭ್ಯಗಳನ್ನು ಒಳಗೊಂಡಿವೆ.

ತಂತ್ರಜ್ಞಾನದ ಅಳವಡಿಕೆಯು ಲಾಜಿಸ್ಟಿಕ್ ವಲಯವನ್ನು ಬಲಪಡಿಸುತ್ತಿದೆ. ಉದಾಹರಣೆಗೆ, ಇ-ಸಂಚಿತ್ ಕಾಗದರಹಿತ ರಫ್ತು-ಆಮದು ವ್ಯಾಪಾರ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸುತ್ತಿದೆ ಮತ್ತು ಕಸ್ಟಮ್ಸ್‌ನಲ್ಲಿ ಮುಖರಹಿತ ಮೌಲ್ಯಮಾಪನವನ್ನು ಹೊರತರಲಾಗಿದೆ.

ಭಾರತದ ರಫ್ತುಗಳ ಸ್ಪರ್ಧಾತ್ಮಕತೆ ತುಂಬಾ ಕಡಿಮೆ
ಅಕ್ಟೋಬರ್ 2021 ರಲ್ಲಿ ಬಹು-ಮಾದರಿ ಸಂಪರ್ಕಕ್ಕಾಗಿ ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸಿದಾಗ ಮೋದಿಯವರು ಲಾಜಿಸ್ಟಿಕ್ಸ್ ವೆಚ್ಚವು ಜಿಡಿಪಿಯ 13% ಆಗಿದೆ ಎಂಬುದಾಗಿ ಉಲ್ಲೇಖಿಸಿದ್ದಾರೆ.

ಹೆಚ್ಚಿನ ವ್ಯವಸ್ಥಾಪನಾ ವೆಚ್ಚದಿಂದಾಗಿ ಭಾರತದ ರಫ್ತುಗಳ ಸ್ಪರ್ಧಾತ್ಮಕತೆಯು ಬಹಳ ಕಡಿಮೆಯಾಗಿದೆ. ಭಾರತದ ರಫ್ತುಗಳ ಸ್ಪರ್ಧಾತ್ಮಕತೆಯು ಬಹಳ ಕಡಿಮೆಯಾಗಿದೆ.

ಸಮೀಕ್ಷೆ ಏನೆಂದು ಸೂಚಿಸಿದೆ
ಕಳೆದ ವರ್ಷ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಸಮೀಕ್ಷೆಯಲ್ಲಿ, 'ವಿವಿಧ ರಾಜ್ಯಗಳಾದ್ಯಂತ ಸುಲಭ ಲಾಜಿಸ್ಟಿಕ್ಸ್' ಎಂಬ ಶೀರ್ಷಿಕೆಯಡಿಯಲ್ಲಿ, ಗುಜರಾತ್, ಪಂಜಾಬ್ ಮತ್ತು ಹರಿಯಾಣ ಮೊದಲ ಮೂರು ರಾಜ್ಯಗಳಲ್ಲಿ ಸ್ಥಾನ ಪಡೆದಿವೆ.

ರಸ್ತೆ ಮತ್ತು ರೈಲ್ವೆ ಮೂಲಸೌಕರ್ಯಗಳ ಗುಣಮಟ್ಟ, ರಸ್ತೆ ಸರಕು ಸಾಗಣೆ ದರಗಳು, ಗೋದಾಮಿನ ಮೂಲಸೌಕರ್ಯದ ಗುಣಮಟ್ಟ ಇತ್ಯಾದಿಗಳನ್ನು ಒಳಗೊಂಡಿರುವ ನಿಯತಾಂಕಗಳೆಂದೆನಿಸಿವೆ.

ಕ್ಷೇತ್ರ-ನಿರ್ದಿಷ್ಟ ಕೌಶಲ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವುದು ಮತ್ತು ಲಾಜಿಸ್ಟಿಕ್ಸ್-ಸಂಬಂಧಿತ ಅನುಮೋದನೆ ಮತ್ತು ಕ್ಲಿಯರೆನ್ಸ್ ಪ್ರಕ್ರಿಯೆಗಳನ್ನು ಸುಗಮಗೊಳಿಸುವಂತಹ ವಿಧಗಳ ಮೇಲೆ ರಾಜ್ಯಗಳು ಗಮನಹರಿಸಬೇಕು ಎಂದು ಸಮೀಕ್ಷೆ ಸೂಚಿಸಿದೆ.

ರಾಷ್ಟ್ರೀಯ ಲಾಜಿಸ್ಟಿಕ್ ನೀತಿಯ ವೈಶಿಷ್ಟ್ಯಗಳೇನು?
ಹೊಸ ಲಾಜಿಸ್ಟಿಕ್ಸ್ ನೀತಿಯು ನಾಲ್ಕು ವೈಶಿಷ್ಟ್ಯಗಳನ್ನು ಹೊಂದಿದೆ: ಇದು ಡಿಜಿಟಲ್ ಸಿಸ್ಟಮ್ (IDS) ಏಕೀಕರಣ; ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ (ULIP); ಈಸ್ ಆಫ್ ಲಾಜಿಸ್ಟಿಕ್ಸ್ (ELOG); ಮತ್ತು ಸಿಸ್ಟಮ್ ಸುಧಾರಿತ ಗ್ರೂಪ್ (SIG).

IDS ಅಡಿಯಲ್ಲಿ, ರಸ್ತೆ ಸಾರಿಗೆ, ರೈಲ್ವೆ, ಕಸ್ಟಮ್ಸ್, ವಾಯುಯಾನ ಮತ್ತು ವಾಣಿಜ್ಯ ಇಲಾಖೆಗಳ ಡೇಟಾ ಸೇರಿದಂತೆ ಏಳು ಇಲಾಖೆಗಳ 30 ವಿಭಿನ್ನ ವ್ಯವಸ್ಥೆಗಳನ್ನು ಇದರಲ್ಲಿ ಸಂಯೋಜಿಸಲಾಗಿದೆ.

ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ ಯುಲಿಪ್ (ULIP):
ಯುನಿಫೈಡ್ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್ ಯುಲಿಪ್ (ULIP) "ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ಡಿಜಿಟಲ್ ಸೇವೆಗಳನ್ನು ಒಂದೇ ಪೋರ್ಟಲ್‌ಗೆ ತರುತ್ತದೆ" ಎಂದು ಪ್ರಧಾನಿ ತಿಳಿಸಿದ್ದಾರೆ.

ಅಂತೆಯೇ, ಸಮಸ್ಯೆಗಳನ್ನು ಪರಿಹರಿಸಲು ಉದ್ಯಮ ಸಂಘಗಳು ಸರಕಾರವನ್ನು ತಲುಪುವ ಮೂಲಕ ಹೊಸ ಡಿಜಿಟಲ್ ಪ್ಲಾಟ್‌ಫಾರ್ಮ್ ಈಸ್ ಆಫ್ ಲಾಜಿಸ್ಟಿಕ್ಸ್ ಸೇವೆಗಳನ್ನು (ಇ-ಲಾಗ್‌ಗಳು) ಸಹ ಪ್ರಾರಂಭಿಸಲಾಗಿದೆ.

ಲಾಜಿಸ್ಟಿಕ್ ಅನ್ನು ಸುಧಾರಿಸಲು ಸರಕಾರವು ಹೇಗೆ ಗಮನಹರಿಸುತ್ತಿದೆ?
ಎಲೆಕ್ಟ್ರಾನಿಕ್ ಟೋಲ್ ತೆರಿಗೆ ಸಂಗ್ರಹಕ್ಕಾಗಿ ಫಾಸ್ಟ್‌ಟ್ಯಾಗ್ ಮತ್ತು ಕಸ್ಟಮ್ಸ್‌ಗಾಗಿ ಮುಖರಹಿತ ಮೌಲ್ಯಮಾಪನದಂತಹ ಲಾಜಿಸ್ಟಿಕ್ಸ್ ಅಂಶಗಳನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಈ ಮೊದಲಿನ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಪ್ರಧಾನಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Ponniyin Selvan: ಈ ಜನಪ್ರಿಯ ಕಾದಂಬರಿಯೇ ಮಣಿರತ್ನಂ ಸಿನಿಮಾಕ್ಕೆ ಸ್ಫೂರ್ತಿ, ಅಷ್ಟಕ್ಕೂ ‘ಪೊನ್ನಿಯನ್‌ ಸೆಲ್ವನ್‌ʼನಲ್ಲಿ ಏನಿದೆ?

ಪ್ರಮಾಣದ ದೃಷ್ಟಿಯಿಂದ, ಈ ಯೋಜನೆಗಳಲ್ಲಿ ಹಿರಿದಾದುದು ಗತಿ ಶಕ್ತಿ ಮಾಸ್ಟರ್ ಪ್ಲಾನ್, ಮತ್ತು ಪ್ರಧಾನಮಂತ್ರಿಯವರು ಉಲ್ಲೇಖಿಸಿರುವಂತೆ ರಾಜ್ಯ ಸರ್ಕಾರಗಳ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ ಸಂಬಂಧಿಸಿದ ದೊಡ್ಡ ಪ್ರಮಾಣದ ಮಾಹಿತಿಯನ್ನು ಸಿದ್ಧಪಡಿಸಲಾಗಿದ್ದು, ಇಂದು, ಸುಮಾರು 1500 ಲೇಯರ್‌ಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವರವು ಪಿಎಂ ಗತಿಶಕ್ತಿ ಪೋರ್ಟಲ್‌ನಲ್ಲಿ ಬರುತ್ತಿದೆ.

ಗತಿಶಕ್ತಿ ಯೋಜನೆಯ ಪ್ರಸ್ತಾಪ
ಕಳೆದ ವರ್ಷ ಗತಿಶಕ್ತಿ ಯೋಜನೆಯನ್ನು ಆಗಸ್ಟ್ 15 ರಂದು ಪ್ರಧಾನ ಮಂತ್ರಿಯವರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಪ್ರಸ್ತಾಪಿಸಲಾಯಿತು. ಮೋದಿಯವರು ಮುಂದಿನ ದಿನಗಳಲ್ಲಿ, ನಾವು 100 ಲಕ್ಷ ಕೋಟಿ ರಾಷ್ಟ್ರೀಯ ಮೂಲಸೌಕರ್ಯ ಯೋಜನೆಯಾದ ಪ್ರಧಾನಮಂತ್ರಿ ಗತಿ ಶಕ್ತಿ ಯೋಜನೆಯನ್ನು ಪ್ರಾರಂಭಿಸುತ್ತಿದ್ದು ಇದು ಸಮಗ್ರ ಮೂಲಸೌಕರ್ಯಕ್ಕಾಗಿ ಅಡಿಪಾಯವನ್ನು ಹಾಕುತ್ತದೆ ಮತ್ತು ನಮ್ಮ ಆರ್ಥಿಕತೆಗೆ ಸಮಗ್ರ ಮಾರ್ಗವನ್ನು ತೋರಿಸುತ್ತದೆ ಎಂದು ಉಲ್ಲೇಖಿಸಿದ್ದರು.

ಸಚಿವಾಲಯಗಳಿಗೆ ಒಂದೇ ಪ್ಲ್ಯಾಟ್‌ಫಾರ್ಮ್
ವಿವಿಧ ಮೂಲಸೌಕರ್ಯ ಯೋಜನೆಗಳ ಪ್ರಗತಿಯನ್ನು ಮೇಲ್ವಿಚಾರಣೆ ನಡೆಸಲು ಸಚಿವಾಲಯಗಳಿಗೆ ಒಂದೇ ಪ್ಲ್ಯಾಟ್‌ಫಾರ್ಮ್ ಅನ್ನು ಪ್ರಾರಂಭಿಸಲಾಯಿತು.

ನಂತರ, ಮುಂದಿನ 4 ರಿಂದ 5 ವರ್ಷಗಳಲ್ಲಿ 200 ವಿಮಾನ ನಿಲ್ದಾಣಗಳು, ಹೆಲಿಪ್ಯಾಡ್‌ಗಳು ಮತ್ತು ವಾಟರ್ ಏರೋಡ್ರೋಮ್‌ಗಳನ್ನು ಸೇರಿಸುವ ಗುರಿಯನ್ನು ಕೇಂದ್ರ ಹೊಂದಿದೆ. ಇದರೊಂದಿಗೆ ಸುಮಾರು 19,000 ಕಿ.ಮೀ ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ ಜಾಲವನ್ನು ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.

13 ರಾಜ್ಯಗಳ ಲಾಜಿಸ್ಟಿಕ್ ನೀತಿ ಕರಡು ಹಂತದಲ್ಲಿದೆ
ಆಂಧ್ರಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮಿಜೋರಾಂ, ರಾಜಸ್ಥಾನ, ತೆಲಂಗಾಣ ಮತ್ತು ಉತ್ತರ ಪ್ರದೇಶಗಳಂತಹ ಕೆಲವು ರಾಜ್ಯಗಳು ಈಗಾಗಲೇ ತಮ್ಮ ಲಾಜಿಸ್ಟಿಕ್ಸ್ ನೀತಿಯನ್ನು ರೂಪಿಸಿವೆ. 13 ರಾಜ್ಯಗಳ ಲಾಜಿಸ್ಟಿಕ್ಸ್ ನೀತಿಗಳು ಇನ್ನೂ ಕರಡು ಹಂತದಲ್ಲಿವೆ.

ಇದನ್ನೂ ಓದಿ: Explained: ಅಮೆರಿಕಾದಲ್ಲಿ ಕ್ರಿಶ್ಚಿಯನ್ನರ ಜನಸಂಖ್ಯೆ 50% ಕ್ಕಿಂತ ಕಡಿಮೆಯಾಗಲಿದೆಯಂತೆ!

ಸಿಐಐನ ಡೈರೆಕ್ಟರ್ ಜನರಲ್, ಚಂದ್ರಜಿತ್ ಬ್ಯಾನರ್ಜಿ, ಉಲ್ಲೇಖಿಸಿರುವಂತೆ ವ್ಯವಹಾರವನ್ನು ಸುಲಭಗೊಳಿಸುವುದು ಮತ್ತು ಸರಳವಾಗಿ ಸುಲಭವಾಗಿ ಬದುಕಲು ಅನುಕೂಲವಾಗುವಂತೆ, ಲಾಜಿಸ್ಟಿಕ್ಸ್ ನೀತಿಯು ಪಿಎಂ ಗತಿ-ಶಕ್ತಿಯ ಇತರ ಆಧಾರ ಸ್ತಂಭಗಳ ಜೊತೆಗೆ ಅಭೂತಪೂರ್ವ 'ಚಲನೆಯ ಸುಲಭ' ಯುಗವನ್ನು ಪ್ರಾರಂಭಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದಾರೆ.

ದೇಶವು, ಸಾರಿಗೆ ವಿಧಾನಗಳಲ್ಲಿ-ನೀರು, ಗಾಳಿ, ರಸ್ತೆಗಳು, ರೈಲುಮಾರ್ಗಗಳಲ್ಲಿ ಸರಕು ಮತ್ತು ಜನರ ವೇಗವಾದ ಮತ್ತು ತಡೆರಹಿತ ಚಲನೆಯನ್ನು ಖಚಿತಪಡಿಸುತ್ತದೆ.
Published by:ಗುರುಗಣೇಶ ಡಬ್ಗುಳಿ
First published: