Explained: ರಾಷ್ಟ್ರೀಯ ಭಾಷೆ ಎಂದರೇನು? ಹಿಂದಿ ನಮ್ಮ ರಾಷ್ಟ್ರ ಭಾಷೆಯೇ?

ಸ್ಯಾಂಡಲ್‌ವುಡ್ ನಟ (Sandalwood Hero) ಕಿಚ್ಚ ಸುದೀಪ್ (KIchcha Sudeep) ಹಾಗೂ ಬಾಲಿವುಡ್ ನಟ (Bollywood Hero) ಅಜಯ್ ದೇವಗನ್ (Ajay Devgan) ಹಿಂದಿ ಭಾಷಾ ವಿಚಾರದಲ್ಲಿ ಟ್ವೀಟ್‌ ವಾರ್ ನಡೆಸಿದ್ದರು. ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್ ಆಗಿದೆ. ಹಿಂದಿ ಪರ-ವಿರೋಧದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆಯೇ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ  ಓದಿ…

ಹಿಂದಿ ರಾಷ್ಟ್ರೀಯ ಭಾಷೆಯೇ?

ಹಿಂದಿ ರಾಷ್ಟ್ರೀಯ ಭಾಷೆಯೇ?

  • Share this:
ಹಿಂದಿ (Hindi) ವಿಚಾರವಾಗಿ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ (Social Media) ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಸ್ಯಾಂಡಲ್‌ವುಡ್ ನಟ (Sandalwood Hero) ಕಿಚ್ಚ ಸುದೀಪ್ (KIchcha Sudeep) ಹಾಗೂ ಬಾಲಿವುಡ್ ನಟ (Bollywood Hero) ಅಜಯ್ ದೇವಗನ್ (Ajay Devgan) ನಡುವಿನ ಟ್ವೀಟ್ ವಾರ್ (Tweet War). ಇತ್ತೀಚಿಗೆ ಸ್ಯಾಂಡಲ್​ ವುಡ್ ನಟ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಹಿಂದಿ ಭಾಷೆಯ ಬಗ್ಗೆ ಮಾತನಾಡಿದ್ದರು. “ಹಿಂದಿ ರಾಷ್ಟ್ರೀಯ ಭಾಷೆ (National Language) ಅಲ್ಲ, ರಾಷ್ಟ್ರೀಯ ಭಾಷೆಯಾಗಿ ಒಪ್ಪಲು ಸಾಧ್ಯವಿಲ್ಲ” ಎಂದಿದ್ದರು. ಇದೇ ವಿಚಾರಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಟ್ವಿಟರ್‌ನಲ್ಲಿ ಪ್ರತ್ರಿಕ್ರಿಯೆ ನೀಡಿದ್ದರು. ಇದಕ್ಕೆ ಮತ್ತೆ ಕಿಚ್ಚ ಸುದೀಪ್ ರೀ ಟ್ವೀಟ್ ಮಾಡಿದ್ದಾರೆ. ಇದೀಗ ಟ್ವಿಟ್ಟರ್‌ನಲ್ಲಿ ಭಾರೀ ಟ್ರೆಂಡ್ ಆಗಿದೆ. ಹಿಂದಿ ಪರ-ವಿರೋಧದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಹಿಂದಿ ನಮ್ಮ ರಾಷ್ಟ್ರಭಾಷೆಯೇ ಎಂಬ ಚರ್ಚೆ ಶುರುವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ  ಓದಿ…

ರಾಷ್ಟ್ರೀಯ ಭಾಷೆ ಎಂದರೇನು?

ರಾಷ್ಟ್ರೀಯ ಭಾಷೆ ಅಂದರೆ ಒಂದು ದೇಶದ ಜನಸಂಖ್ಯೆಯ ಬಹುಪಾಲು ಜನರು ಮಾತನಾಡುವ ಭಾಷೆ. ಇದನ್ನು ಅಧಿಕೃತ ಭಾಷೆ ಎಂದು ಗೊತ್ತುಪಡಿಸಬಹುದು ಅಥವಾ ಇಲ್ಲದಿರಬಹುದು. ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷ್ ಅನ್ನು ರಾಷ್ಟ್ರೀಯ ಸರ್ಕಾರದ ಸಂವಹನದ ಎರಡು ಅಧಿಕೃತ ಭಾಷೆಗಳಾಗಿ ಬಳಸುವುದನ್ನು ನಿಗದಿಪಡಿಸಿದೆ. ಆದರೆ ರಾಷ್ಟ್ರೀಯ ಭಾಷೆ ಎಂದು ಹಿಂದಿಯನ್ನು ಉಲ್ಲೇಖಿಸಿಲ್ಲ.

ಭಾರತಕ್ಕೆ ರಾಷ್ಟ್ರೀಯ ಭಾಷೆ ಇದೆಯೇ?

"ಭಾರತೀಯ ಭಾಷೆಯು ನೀರಿನಂತೆ ಪ್ರತಿ ಕೆಲವು ಕಿಲೋಮೀಟರ್‌ಗಳಿಗೆ ಬದಲಾಗುತ್ತದೆ". ಆಶ್ಚರ್ಯವೇನಿಲ್ಲ, ಇದು ಎಲ್ಲ ಅರ್ಥದಲ್ಲೂ ನಿಜ. ಭಾರತವು 28 ರಾಜ್ಯಗಳು ಮತ್ತು 8 ಕೇಂದ್ರಾಡಳಿತ ಪ್ರದೇಶಗಳನ್ನು ಹೊಂದಿರುವ ರಾಜ್ಯಗಳ ಒಕ್ಕೂಟವಾಗಿರುವುದರಿಂದ ಪ್ರತಿ ಕಿ.ಮೀ.ಗೆ ಬದಲಾಗುವ ವಿವಿಧ ಭಾಷೆಗಳನ್ನು ಹೊಂದಿದೆ. ಸಂವಿಧಾನದ ಆರಂಭದಿಂದಲೂ ರಾಷ್ಟ್ರೀಯ ಭಾಷೆಯ ವಿಷಯದ ಬಗ್ಗೆ ಹಲವಾರು ಚರ್ಚೆಗಳು ನಡೆದಿವೆ. ಆದರೆ, ಭಾರತಕ್ಕೆ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ.

ಇದನ್ನೂ ಓದಿ: Explained: ಕಿಚ್ಚ ಸುದೀಪ್-ಅಜಯ್ ದೇವಗನ್ ಮಧ್ಯೆ 'ಹಿಂದಿ' ವಾರ್! ಶುರುವಾಗಿದ್ದು ಹೇಗೆ, ಬಂದು ನಿಂತಿದ್ದೆಲ್ಲಿಗೆ?

ರಾಷ್ಟ್ರೀಯ ಭಾಷೆ ಮತ್ತು ಅಧಿಕೃತ ಭಾಷೆಯ ನಡುವಿನ ವ್ಯತ್ಯಾಸವೇನು?

ರಾಷ್ಟ್ರೀಯ ಭಾಷೆಯನ್ನು ರಾಜಕೀಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸಲಾಗುತ್ತದೆ. ರಾಷ್ಟ್ರೀಯ ನ್ಯಾಯಾಲಯ, ಸಂಸತ್ತು ಅಥವಾ ವ್ಯವಹಾರದಂತಹ ಸರ್ಕಾರಿ ವ್ಯವಹಾರಗಳಿಗೆ ಅಧಿಕೃತ ಭಾಷೆಯನ್ನು ಬಳಸಲಾಗುತ್ತದೆ.

ರಾಷ್ಟ್ಪೀಯ ಭಾಷೆ ಬಗ್ಗೆ ಸಂವಿಧಾನ ಹೇಳಿದ್ದೇನು?

ಭಾರತೀಯ ಸಂವಿಧಾನವು ರಾಜ್ಯಗಳು ತಮ್ಮ ಅಧಿಕೃತ ಕಾರ್ಯಗಳ ನಿರ್ವಹಣೆಗಾಗಿ ಬಳಸಬೇಕಾದ ಅಧಿಕೃತ ಭಾಷೆಗಳನ್ನು ನಿರ್ದಿಷ್ಟಪಡಿಸುವುದಿಲ್ಲ ಮತ್ತು ಪ್ರತಿ ರಾಜ್ಯವನ್ನು ಅದರ ಶಾಸಕಾಂಗದ ಮೂಲಕ ಹಿಂದಿ ಅಥವಾ ಅದರ ಪ್ರಾಂತ್ಯದಲ್ಲಿ ಬಳಸುವ ಯಾವುದೇ ಭಾಷೆಯನ್ನು ಅದರ ಅಧಿಕೃತ ಭಾಷೆ ಅಥವಾ ಭಾಷೆಯಾಗಿ ಸ್ವೀಕರಿಸಲು ಮುಕ್ತವಾಗಿ ಬಿಡುತ್ತದೆ.

ಹಿಂದಿ ಎಲ್ಲೆಲ್ಲಿ ಅಧಿಕೃತ ಭಾಷೆಯಾಗಿದೆ?

ಹಿಂದಿ ಭಾರತದಾದ್ಯಂತ ಮಾತನಾಡುವ ಅತ್ಯಂತ ಜನಪ್ರಿಯ ಭಾಷೆಯಾಗಿದೆ. ಬಿಹಾರ, ಛತ್ತೀಸ್‌ಗಢ, ದೆಹಲಿ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಉತ್ತರಾಖಂಡದಂತಹ ರಾಜ್ಯಗಳಲ್ಲಿ ಸುಮಾರು 366 ಮಿಲಿಯನ್ ಜನ ಹಿಂದಿ ಮಾತನಾಡುವವರಿದ್ದಾರೆ.

ಭಾರತದಲ್ಲಿ ಎಷ್ಟು ಅಧಿಕೃತ ಭಾಷೆಗಳಿವೆ?

ಭಾರತದ ಸಂವಿಧಾನದಲ್ಲಿ ಉಲ್ಲೇಖಿಸಿದಂತೆ 22 ಅಧಿಕೃತ ಭಾಷೆಗಳಿವೆ. ಅವುಗಳಲ್ಲಿ ಹಿಂದಿ, ಇಂಗ್ಲೀಷ್, ಅಸ್ಸಾಮಿ, ಬೆಂಗಾಲಿ, ಬೋಡೋ ಅಸ್ಸಾಂ, ಡೋಗ್ರಿ, ಗುಜರಾತಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒಡಿಯಾ, ಪಂಜಾಬಿ, ಸಂಸ್ಕೃತ, ಸಂತಾಲಿ, ಸಿಂಧಿ, ತಮಿಳು, ತೆಲುಗು, ಉರ್ದು ಸೇರಿದಂತೆ 22 ಅಧಿಕೃತ ಭಾಷೆಗಳಿವೆ.

ಆದರೆ ಹಿಂದಿ ರಾಜ್ಯಗಳೊಂದಿಗೆ ಸಂವಹನ ನಡೆಸುವಾಗ 343 ನೇ ವಿಧಿಯ ಪ್ರಕಾರ ಕೇಂದ್ರ ಸರ್ಕಾರವು ಬಳಸುವ ಭಾಷೆಯಾಗಿದೆ. ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಸಂವಿಧಾನದ ಪ್ರಕಾರ ಬಳಸಬಹುದಾದ ಆಡಳಿತ ಭಾಷೆ ಎಂದರೆ ಇಂಗ್ಲಿಷ್ ಮಾತ್ರ!

ಹಿಂದಿ ರಾಷ್ಟ್ರಭಾಷೆಯಲ್ಲ ಎಂದಿದ್ದ ಗುಜರಾತ್ ಹೈಕೋರ್ಟ್

ಹಿಂದಿ ರಾಷ್ಟ್ರೀಯ ಭಾಷೆ ಎನ್ನುವುದು ಉತ್ತರ ಭಾರತೀಯ ರಾಜಕಾರಣಿಗಳ ನಿಲುವು. ಹಿಂದಿಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎನ್ನುವುದು ದಕ್ಷಿಣ ಭಾರತದ ಜನರ ಆರೋಪ. ಇದೇ ಗೊಂದಲವನ್ನು ನಿವಾರಿಸುವ ಸಲುವಾಗಿ ಗುಜರಾತ್ ಹೈ ಕೋರ್ಟ್ 2010 ರಲ್ಲಿ ಭಾರತಕ್ಕೆ ಯಾವುದೇ ಅಧಿಕೃತ ರಾಷ್ಟ್ರ ಭಾಷೆ ಇಲ್ಲವೆಂದು ತೀರ್ಪು ನೀಡಿದೆ.

ಸ್ವಾತಂತ್ರ್ಯಪೂರ್ವದಿಂದಲೂ ಹಿಂದಿ ಹೇರಿಕೆಗೆ ವಿರೋಧ

ಸ್ವಾತಂತ್ರ್ಯ ಬಂದಾಗಿನಿಂದ ದೇಶವಾಳಿದ ಎಲ್ಲಾ ಉತ್ತರ ಭಾರತೀಯರ ಪ್ರಭುತ್ವದ ಸರ್ಕಾರಗಳು ಪ್ರಯತ್ನ ನಡೆಸುತ್ತಲೇ ಇವೇ. ಹಿಂದಿ ಹೇರಿಕೆ ವಿರುದ್ಧದ ಮೊದಲ ಪ್ರತಿಭಟನೆ ಈ ದೇಶದಲ್ಲಿ ನಡೆದಿದ್ದು ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1937 ರಲ್ಲೇ ಇದರ ಮೂಲ ಮತ್ತು ಸಾರಥ್ಯ ತಮಿಳುನಾಡಿನದೇ ಆದರು ಅದು ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶಗಳಲ್ಲು ಇದು ವ್ಯಾಪಿಸಿತ್ತು. 1965 ಹಿಂದಿ ಹೇರಿಕೆ ವಿರುದ್ಧದ ಹೋರಾಟದ ಬಿಸಿಯಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಗೆ ಅಧಿಕಾರ ಬಿಟ್ಟು ಕೊಟ್ಟ ನಂತರ ಕಾಂಗ್ರೆಸಿಗೆ ಮತ್ತೆಂದೂ ಅಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗಿಲ್ಲ.

1937ರಲ್ಲಿ ಹಿಂದಿ ವಿರುದ್ಧ ಹಿಂಸಾತ್ಮಕ ಪ್ರತಿಭಚನೆ

1937 ರಲ್ಲಿ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಹಿಂದಿ ವಿರುದ್ಧ ಚಳುವಳಿ ಕಂಡುಬಂದಿತು. ಆ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಆಜ್ಞೆಯ ಮೇರೆಗೆ ದಕ್ಷಿಣದಲ್ಲಿ ಹಿಂದಿ ಕಲಿಸುವ ಬಗ್ಗೆ ಮಾತನಾಡಲಾಯಿತು. ಜನರು ಸುಮಾರು ಮೂರು ವರ್ಷಗಳ ಕಾಲ ಪ್ರತಿಭಟನೆ ನಡೆಸಿದರು ಮತ್ತು ಪ್ರತಿಭಟನೆಗಳು ಹಲವಾರು ಬಾರಿ ಹಿಂಸಾಚಾರಕ್ಕೆ ತಿರುಗಿದವು.

ಕೇಂದ್ರ ಸರ್ಕಾರದಿಂದ ಹಿಂದಿಗೆ ಆದ್ಯತೆ

ಹಿಂದಿಯನ್ನು ಹೆಚ್ಚು ಪ್ರಚುರ ಪಡಿಸಲು ಕೇಂದ್ರ ಸರ್ಕಾರ ಅದಕ್ಕೆ ರಾಜಭಾಷೆಯ ಸ್ಥಾನ ನೀಡಿ ಹಿಂದಿ ದಿವಸ, ಹಿಂದಿ ಸಪ್ತಾಹ ಮುಂತಾದ ಕಾರ್ಯಕ್ರಮಗಳನ್ನು ಪ್ರತಿ ವರ್ಷ ಹಮ್ಮಿಕೊಳ್ಳುತ್ತಿದೆ. ಇದಲ್ಲದೆ ಹಿಂದಿ ಪ್ರಚಾರ ಪರಿಷತ್ ಮುಂತಾದ ಆಯೋಗಗಳನ್ನು ರಚಿಸಿ ಹಿಂದಿಯೇತರ ಪ್ರದೇಶಗಳಲ್ಲಿ ಹಿಂದಿ ಭಾಷೆಯ ಪ್ರಚಾರಕ್ಕೆ ಇವುಗಳನ್ನು ಬಳಸುತ್ತಿದೆ.

ಇದನ್ನೂ ಓದಿ: Explained: ‘ಬೆಳಕಿನಿಂದ ಕತ್ತಲೆಯೆಡೆಗೆ’ ಭಾರತ! ಕಲ್ಲಿದ್ದಲು ಕೊರತೆಗೆ ಕಾರಣ, ಅದರ ಪರಣಾಮವೇನು?

 ಹಿಂದಿಯೇ ಆಗಬೇಕೇ ರಾಷ್ಟ್ರೀಯ ಭಾಷೆ

2-3 ಶತಮಾನಗಳಷ್ಟು ಹಳೆಯದಾದ ಹಿಂದಿ ಭಾಷೆಯೇ ಏಕೆ ರಾಷ್ಟ್ರಭಾಷೆಯಾಗಬೇಕು? ಸಾಕಷ್ಟು ಐತಿಹ್ಯವುಳ್ಳ, ಸಾವಿರಾರು ವರ್ಷಗಳಿಂದ ಬೆಳೆದು ಬಂದಿರುವ ಇನ್ನೂ ಬೆಳೆಯುತ್ತಿರುವ ಕನ್ನಡ, ತಮಿಳು, ತೆಲಗು, ಬಂಗಾಳಿ ಭಾಷೆಗಳಿಗೆ ಯಾಕೆ ಈ ಸ್ಥಾನಮಾನ ಸಿಗಬಾರದು ಎನ್ನವುದು ಈಗಿನ ಪ್ರಶ್ನೆ.
Published by:Annappa Achari
First published: