Explained : ಇತಿಹಾಸ ಸೃಷ್ಟಿಸಿದ ಜಾವೆಲಿನ್ ಥ್ರೋ ಆಟದ ಬಗ್ಗೆ ನಿಮಗೆ ಗೊತ್ತಾ?

Javelin Throw :ನೀರಜ್ ಚಿನ್ನ ಗೆದ್ದಿದ್ದು ಜಾವೆಲಿನ್ ಥ್ರೋ ಆಟದಲ್ಲಿ. ಆದರೆ ಅದೆಷ್ಟೋ ಭಾರತೀಯರಿಗೆ ಈ ಆಟ ಯಾವುದು ಎಂಬುದು ತಿಳಿದಿಲ್ಲ. ಇನ್ನು ಇದನ್ನ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಸತ್ಯ ಒಪ್ಪಿಕೊಂಡಿದ್ದು, ನಮಗೆ ಈ ಆಟದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಚಿನ್ನದ ಪದಕ ವಿಜೇತ ನೀರಜ್

ಚಿನ್ನದ ಪದಕ ವಿಜೇತ ನೀರಜ್

  • Share this:
Javelin Throw : ಈ ಬಾರಿಯ ಒಲಂಪಿಕ್ಸ್ ಭಾರತೀಯರ ಪಾಲಿಗೆ ಸಿಹಿ ನೀಡಿದೆ. ಕಂಚು ಮತ್ತು ಬೆಳ್ಳಿ ಪದಕಗಳನ್ನು ಭಾರತೀಯ ಆಟಗಾರರು ಮುಡಿಗೇರಿಸಿಕೊಂಡಿದ್ದಾರೆ. ಹಾಗೆಯೇ ಭಾರತದ ಅಥ್ಲೀಟ್ ನೀರಜ್ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್ 2021 ರಲ್ಲಿ ಭಾರತಕ್ಕಾಗಿ ಅಥ್ಲೆಟಿಕ್ಸ್‌ನಲ್ಲಿ ಮೊದಲ ಒಲಿಂಪಿಕ್ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದರು. ಅವರ ಗೆಲುವನ್ನು ಪ್ರತಿಯೊಬ್ಬ ಭಾರತೀಯರೂ ಸಂಭ್ರಮಿಸಿದ್ದಾರೆ. ಅಲ್ಲದೇ ಈ ಬಾರಿಯ ಮೊದಲ ಚಿನ್ನದ ಪದಕವನ್ನು ಗೆದ್ದು ಬೀಗಿದ್ದಾರೆ.  ನೆಟ್ಟಿಗರಂತೂ ತಮ್ಮ ಸಾಮಾಜಿಕ ಖಾತೆಯಲ್ಲಿ ಅವರ ವಿಡಿಯೋ ಮತ್ತು ಫೋಟೋ ಹಂಚಿಕೊಳ್ಳುವ ಮೂಲಕ ಸಂತೋಷಪಟ್ಟಿದ್ದಾರೆ. ಇನ್ನು ನೀರಜ್ ಚಿನ್ನ ಗೆದ್ದಿದ್ದು ಜಾವೆಲಿನ್ ಥ್ರೋ (javelin throw)ಆಟದಲ್ಲಿ. ಆದರೆ ಅದೆಷ್ಟೋ ಭಾರತೀಯರಿಗೆ ಈ ಆಟ ಯಾವುದು ಎಂಬುದು ತಿಳಿದಿಲ್ಲ. ಇನ್ನು ಇದನ್ನ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಜನರು ಸತ್ಯ ಒಪ್ಪಿಕೊಂಡಿದ್ದು, ನಮಗೆ ಈ ಆಟದ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಹಲವಾರು ಜನರು ಈ ಆಟದ ಬಗ್ಗೆ ಮಾಹಿತಿಯನ್ನು ಗೂಗಲ್ ಮಾಡಿ ತಿಳಿದುಕೊಳ್ಳುತ್ತಿದ್ದಾರೆ.

ಜಾವೆಲಿನ್ ಥ್ರೋ  ಎಲ್ಲ ಆಟಗಳ ಹಾಗೆ ಹಳೆ ಆಟ ಎಂದು ಹೇಳಲಾಗುತ್ತದೆ. ಇದು ಪ್ರಾಚೀನ ಗ್ರೀಕ್ ಒಲಿಂಪಿಕ್ಸ್‌ನಲ್ಲಿ ಪೆಂಟಾಥ್ಲಾನ್‌ನ ಭಾಗವಾಗಿತ್ತು. ಅಥ್ಲೆಟಿಕ್ಸ್‌ನ ಅಂತಾರಾಷ್ಟ್ರೀಯ ಆಡಳಿತ ಮಂಡಳಿಯಾದ ವರ್ಲ್ಡ್ ಅಥ್ಲೆಟಿಕ್ಸ್ ಪ್ರಕಾರ, ಜಾವೆಲಿನ್ ಥ್ರೋ ಎನ್ನುವ ಆಟದಲ್ಲಿ ಕ್ರೀಡಾಪಟುಗಳು ಲೋಹದ ತುದಿಯಲ್ಲಿರುವ ಜಾವೆಲಿನ್ ಅನ್ನು ಸಾಧ್ಯವಾದಷ್ಟು ದೂರ ಎಸೆಯುವ ಒಂದು ಆಟ. ಇದಕ್ಕೆ ಶಕ್ತಿ, ಸಮಯ, ಸಮನ್ವಯ ನಿಖರತೆ ಮತ್ತು ಸಮಯದ ಸಂಯೋಜನೆಯ ಅಗತ್ಯವಿರುತ್ತದೆ. ಕ್ರೀಡಾಪಟು ಜಾವೆಲಿನ್ ಅನ್ನು ಅದರ ತಂತಿಯ ಹಿಡಿತದಿಂದ ತನ್ನ ಕಿರುಬೆರಳಿನಿಂದ  ಜಾವಲಿನ್ ತುದಿಗೆ ಹತ್ತಿರವಾಗಿ ಹಿಡಿದಿಟ್ಟುಕೊಳ್ಳಬೇಕು. ಇನ್ನು  ಪುರುಷರ ಜಾವೆಲಿನ್ ಕನಿಷ್ಠ 800 ಗ್ರಾಂ ತೂಕವಿರಬೇಕು ಮತ್ತು 2.6 ಮೀ -2.7 ಮೀ ಉದ್ದವಿರಬೇಕು  ಎಂಬ ನಿಯಮವಿದೆ.  ಹಾಗೆಯೇ ಮಹಿಳೆಯರ ಜಾವೆಲಿನ್ 600 ಗ್ರಾಂ ತೂಕವಿರಬೇಕು ಮತ್ತು 2.2 ಮೀ 2.3 ಮೀ ಉದ್ದವಿರಬೇಕು ಎಂಬುದು ನಿಯಮ.

ಇದನ್ನೂ ಓದಿ: ಚಿನ್ನದ ಹುಡುಗ ನೀರಜ್​ಗೆ ತರಬೇತಿ ನೀಡಿದ್ದ ಕನ್ನಡಿಗ ಕಾಶಿನಾಥ್​ ನಾಯ್ಕ್​ಗೆ ರಾಜ್ಯ ಸರ್ಕಾರದಿಂದ 10 ಲಕ್ಷ ಬಹುಮಾನ ಘೋಷಣೆ

ಜಾವೆಲಿನ್ ಥ್ರೋ  1908 ರ ತನಕ ಒಲಂಪಿಕ್ ಪಂದ್ಯಾವಳಿಯ ಪಟ್ಟಿಯಲ್ಲಿರಲಿಲ್ಲ. ನಂತರ  ಒಲಿಂಪಿಕ್ಸ್‌ನಲ್ಲಿ ಸೇರಿಸಲಾಯಿತು. ಸಾಂಪ್ರದಾಯಿಕವಾಗಿ, ಸ್ಕ್ಯಾಂಡಿನೇವಿಯನ್ ಕ್ರೀಡಾಪಟುಗಳು ಈ ಆಟವನ್ನು ಆಡುತ್ತಿದ್ದರು.  ಜಾವೆಲಿನ್ ಥ್ರೋನ ಮೊದಲ ರಾಷ್ಟ್ರೀಯ ಚಾಂಪಿಯನ್‌ಶಿಪ್ ಸ್ವೀಡನ್‌ನಲ್ಲಿ ನಡೆಸಲಾಗಿತ್ತು. ಜೆಕ್ ಕ್ರೀಡಾಪಟು ಜಾನ್ ಝಲೆನಝಿ (Jan Zelezny )ಯನ್ನು ಇತಿಹಾಸದಲ್ಲಿ ಅತ್ಯುತ್ತಮ ಜಾವೆಲಿನ್ ಎಸೆತಗಾರ ಎಂದು ಪರಿಗಣಿಸಲಾಗಿದೆ. ಅವರು 1992-2000ರಿಂದ ಹ್ಯಾಟ್ರಿಕ್ ಒಲಿಂಪಿಕ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಹಾಗೆಯೇ ಅವರು 1996 ರಲ್ಲಿ 98.48 ಮೀಟರ್  ಜಾವಲಿನ್  ಥ್ರೋ ಮಾಡುವ ಮೂಲ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಪ್ರಕಟಿಸಿದ ಮಾಹಿತಿ ಪ್ರಕಾರ  ಇತರ ಎಸೆಯುವ ಉಪಕರಣಗಳಿಗೆ  ಅಥವಾ ಆಟಗಳಿಗೆ ಹೋಲಿಸಿದರೆ, ಜಾವೆಲಿನ್ ತುಲನಾತ್ಮಕವಾಗಿ ವಾಯುಬಲ ವೈಜ್ಞಾನಿಕವಾಗಿದೆ. ಹಾಗಿದ್ದರೂ,  ಅದರ ಪ್ರಮುಖ ಅಂಶವೆಂದರೆ ಜಾವಲೆನ್ ಥ್ರೋ ಮಾಡುವ ವೇಗ. ಈ  ವೇಗವನ್ನು ಹೆಚ್ಚಿಸುವುದರಿಂದ ಕ್ರೀಡಾಪಟುವಿಗೆ ಆಟದಲ್ಲಿ ಯಶಸ್ಸನ್ನು ಪಡೆಯುವ ಅತ್ಯುತ್ತಮ ಅವಕಾಶ ಸಿಗುತ್ತದೆ.

ಇನ್ನುಈ ಬಾರಿಯ ಒಲಂಪಿಕ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ದೊರಕಿಸಿಕೊಟ್ಟ ನೀರಜ್ ಹರಿಯಾಣದ ರೈತರೊಬ್ಬರ ಮಗ.  23 ವರ್ಷದ ನೀರಜ್ ಹರಿಯಾಣದ ಪಾಣಿಪತ್ ಸಮೀಪದ ಖಂಡ್ರಾ ಗ್ರಾಮದವರು. ಫೈನಲ್‌ನಲ್ಲಿ 87.58 ಮೀ  ದೂರದಷ್ಟು ಎರಡನೇ ಥ್ರೋ ಮಾಡಿದ ಅವರು ಅಥ್ಲೆಟಿಕ್ಸ್ ಜಗತ್ತನ್ನು ದಿಗ್ಭ್ರಮೆಗೊಳಿಸಿದ್ದಾರೆ. ಅಲ್ಲದೇ  ಒಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಪದಕಕ್ಕಾಗಿ 100 ವರ್ಷಗಳಿಂದ ಕಾದಿದ್ದ ಭಾರತದ ಆಸೆಯನ್ನು ಈಡೇರಿಸಿದ್ದಾರೆ.
Published by:Sandhya M
First published: