Anti Conversion Bill: ಹೇಗಿರಲಿದೆ ಮತಾಂತರ ನಿಷೇಧ ಕಾಯ್ದೆ? ಮತಾಂತರಿಗಳಿಗೆ ಏನು ಶಿಕ್ಷೆ ಗೊತ್ತಾ?

ಇನ್ನು ಮುಂದೆ ಯಾರನ್ನಾದರೂ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬಲವಂತವಾಗಿ ಮತಾಂತರ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಏಕೆಂದರೆ ನಿನ್ನೆಯಷ್ಟೇ ಮತಾಂತರ ನಿಷೇಧ ವಿಧೇಯಕ ವಿಧಾನ ಪರಿಷತ್ನಲ್ಲಿ ಪಾಸ್ ಆಗಿದೆ. ಇದೀಗ ರಾಜ್ಯಪಾಲರ ಅಂಕಿತವೊಂದೇ ಬಾಕಿಯಿದ್ದು, ಅದು ಪೂರ್ಣಗೊಂಡರೆ ರಾಜ್ಯದಲ್ಲಿ ಮತ್ತೊಂದು ಕಾನೂನು ಜಾರಿಗೆ ಬರಲಿದೆ. ಹಾಗಿದ್ರೆ ಮತಾಂತರ ನಿಷೇಧ ಕಾಯ್ದೆ ಎಂದರೇನು? ಸದ್ಯ ಈ ವಿಧೇಯಕದಲ್ಲಿ ಏನಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಸಂವಿಧಾನ (Constitution) ಪ್ರತಿಯೊಬ್ಬನಿಗೂ ಅವರಿಗೆ ಇಷ್ಟವಾದ ಧರ್ಮ (religion), ಆಚರಣೆಗಳನ್ನು ಒಪ್ಪುವ, ಅನುಸರಿಸುವ ಹಕ್ಕು (Rights) ನೀಡಿದೆ. ಆದರೆ ಇಂಥದ್ದೇ ಧರ್ಮವನ್ನು ಅನುಸರಿಸಬೇಕು ಅಂತ ಯಾರನ್ನೂ ಯಾರು ಬಲವಂತ ಮಾಡುವಂತಿಲ್ಲ. ಕರ್ನಾಟಕ (Karnataka) ರಾಜ್ಯದಲ್ಲಿ ಇನ್ನು ಮುಂದೆ ಯಾರನ್ನಾದರೂ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಬಲವಂತವಾಗಿ ಮತಾಂತರ (conversation) ಮಾಡಿದರೆ ಶಿಕ್ಷೆ (Punishment) ಅನುಭವಿಸಬೇಕಾಗುತ್ತದೆ. ಏಕೆಂದರೆ ನಿನ್ನೆಯಷ್ಟೇ ಮತಾಂತರ ನಿಷೇಧ ವಿಧೇಯಕ (Anti Conversion Bill) ವಿಧಾನ ಪರಿಷತ್‌ನಲ್ಲಿ (Legislative Council) ಪಾಸ್ ಆಗಿದೆ. ಇದೀಗ ರಾಜ್ಯಪಾಲರ (Governor) ಅಂಕಿತವೊಂದೇ ಬಾಕಿಯಿದ್ದು, ಅದು ಪೂರ್ಣಗೊಂಡರೆ ರಾಜ್ಯದಲ್ಲಿ ಮತ್ತೊಂದು ಕಾನೂನು ಜಾರಿಗೆ ಬರಲಿದೆ. ಹಾಗಿದ್ರೆ ಮತಾಂತರ ನಿಷೇಧ ಕಾಯ್ದೆ ಎಂದರೇನು? ಸದ್ಯ ಈ ವಿಧೇಯಕದಲ್ಲಿ ಏನಿದೆ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…

ವಿಧಾನ ಪರಿಷತ್‌ನಲ್ಲಿ ವಿಧೇಯಕಕ್ಕೆ ಗ್ರೀನ್ ಸಿಗ್ನಲ್

ಕರ್ನಾಟಕದಲ್ಲಿ ಮತಾಂತರ ತಡೆ ಕಾಯ್ದೆ ವಿಧೇಯಕ ನಿನ್ನೆ ವಿಧಾನ ಪರಿಷತ್​​ನಲ್ಲಿ ಮಂಡನೆ ಆಯ್ತು. ಗೃಹ ಸಚಿವ ಆರಗ ಜ್ಞಾನೇಂದ್ರ ಪರಿಷತ್‌ನಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ ಮಂಡಿಸಿದ್ರು. ಬಹಳ ಮಹತ್ವದ ಕಾಯ್ದೆಯನ್ನ ಇದೀಗ ರಾಜ್ಯ ಸರ್ಕಾರ ತಂದಿದೆ. 2013ರಲ್ಲಿ ಕಾಂಗ್ರೆಸ್‌ ಸರ್ಕಾರ ಚಿಂತನೆ ನಡೆಸಿತ್ತು. ಈಗ ಬಿಜೆಪಿ ಸರ್ಕಾರ ಜಾರಿಗೆ ತರುತ್ತಿದೆ.

ರಾಜ್ಯಪಾಲರ ಅಂಕಿತವೊಂದೇ ಬಾಕಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ವಿಧಾನಸಭೆಯಲ್ಲಿ ಈ ವಿಧೇಯಕ ಅಂಗೀಕಾರಗೊಂಡಿತ್ತು. ಆದರೆ, ಸಂಖ್ಯಾಬಲದ ಕೊರತೆ ಕಾರಣ ವಿಧಾನಪರಿಷತ್ತಿನಲ್ಲಿ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಈ ಬಗ್ಗೆ ರಾಜ್ಯ ಸರ್ಕಾರ ಕಳೆದ ಮೇ ನಲ್ಲಿ ಸುಗ್ರೀವಾಜ್ಞೆ ಜಾರಿಗೊಳಿಸಿತು. ಆದರೆ, ಸುಗ್ರೀವಾಜ್ಞೆಯ ಅವಧಿ ಆರು ತಿಂಗಳು ಮಾತ್ರ. ಅಷ್ಟರೊಳಗೆ ಉಭಯ ಸದನಗಳಲ್ಲಿ ಮತ್ತೊಮ್ಮೆ ಮಂಡಿಸಿ ಅಂಗೀಕಾರ ಪಡೆಯಬೇಕಾಗುತ್ತದೆ. ಇದೀಗ ವಿಧಾನಪರಿಷತ್ತಿನಲ್ಲಿ ಆಡಳಿತಾರೂಢ ಬಿಜೆಪಿ ಸ್ಪಷ್ಟಬಹುಮತ ಸಾಧಿಸಿದೆ. ಈಗ ವಿಧೇಯಕಕ್ಕೆ ಅಂಗೀಕಾರ ಪಡೆಯಲು ಯಾವುದೇ ಅಡಚಣೆ ಎದುರಾಗಲಿಕ್ಕಿಲ್ಲ ಎಂಬ ಉದ್ದೇಶದಿಂದ ಮಂಡನೆ ಮಾಡಿದ್ದು, ಧ್ವನಿ ಮತದ ಮುಖಾಂತರ ಒಪ್ಪಿಗೆ ಸಿಕ್ಕಿದೆ. ಇದೀಗ ರಾಜ್ಯಪಾಲಕ ಅಂಕಿತವೊಂದೇ ಬಾಕಿ ಇದೆ.

ಇದನ್ನೂ ಓದಿ: Anti Conversion Bill: ಮತಾಂತರ ನಿಷೇಧ ವಿಧೇಯಕ ಮೇಲ್ಮನೆಯಲ್ಲಿ ಪಾಸ್! ಪ್ರತಿ ಹರಿದು ಹಾಕಿ ಕಾಂಗ್ರೆಸ್ ಆಕ್ರೋಶ

ಮತಾಂತರ ನಿಷೇಧ ವಿಧೇಯಕದಲ್ಲಿ ಏನಿದೆ?

ಮತಾಂತರ ಅಗಬಯಸುವ ವ್ಯಕ್ತಿ 60 ದಿನಗಳ ಮೊದಲು ಫಾರ್ಮ್ 1 ಅನ್ನು ಭರ್ತಿ ಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿ ಬಳಿ ಮಾಹಿತಿ ನೀಡಬೇಕಿದೆ. ಮತಾಂತರ ಮಾಡಿಸುವ ವ್ಯಕ್ತಿಯೂ ಕೂಡ ಒಂದು ತಿಂಗಳ ಮೊದಲು ಈಗಾಗಲೇ ಫಾರ್ಮ್ 2 ಅನ್ನು ಭರ್ತಿಮಾಡಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗೆ ಮಾಹಿತಿ ನೀಡಬೇಕು. ಇನ್ನು ಮತಾಂತರವಾದ ಒಂದು ತಿಂಗಳ ಬಳಿಕ ಡಿಕ್ಲರೇಷನ್ ಫಾರ್ಮ್ ಅಥವಾ ಘೋಷಣಾಪತ್ರವನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ಭರ್ತಿ ಮಾಡಿ ನೀಡಬೇಕು, ಜೊತೆಗೆ ಡಿಕ್ಲರೇಷನ್ ಮಾಡಿದ 21 ದಿನಗಳ ಬಳಿಕ ಮತಾಂತರ ಹೊಂದಿದ ವ್ಯಕ್ತಿ ಖುದ್ದು ಹಾಜರಾಗಿ ಗುರುತು ನೀಡಬೇಕಿದೆ.

ದಂಡಾಧಿಕಾರಿಗಳಿಂದ ದೃಢೀಕರಣ

ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತಾಂತರೊತ್ತರ ಘಟನೆಯ ಸಂಪೂರ್ಣ ಘಟನೆಯನ್ನು ದಾಖಲಿಸತಕ್ಕದ್ದು. ತಕರಾರುಗಳಿದ್ದಲ್ಲಿ ತಕರಾರು ಎತ್ತಿದ ವ್ಯಕ್ತಿ ಹಾಗೂ ತಕರಾರಿನ ಸ್ವರೂಪವನ್ನ ದಾಖಲಿಸಬೇಕು. ಮತಾಂತರ ಹೊಂದಿದವರಿಗೆ ಜಿಲ್ಲಾ ದಂಡಾಧಿಕಾರಿಗಳು ದೃಢೀಕರಿಸಿದ ಪ್ರತಿಗಳನ್ನು ನೀಡಬೇಕಾಗುತ್ತದೆ. ತಕರಾರುಗಳಿದ್ದ ಪಕ್ಷದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸಂಬಂಧ ಪಟ್ಟ ಇಲಾಖೆಗಳಾದ ಕಂದಾಯ, ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಸೇರಿದಂತೆ ಇತರ ಸಂಬಂಧ ಪಟ್ಟ ಇಲಾಖೆಗಳಿಗೆ ಮಾಹಿತಿ ನೀಡಬೇಕು.

ಒತ್ತಾಯದ ಮತಾಂತರಕ್ಕೆ ಶಿಕ್ಷೆ ಏನು?

ಬಲವಂತದ ಮತಾಂತರಕ್ಕೆ 3-5 ವರ್ಷ ಜೈಲು, ₹ 25,000 ದಂಡ ವಿಧಿಸಲಾಗುತ್ತದೆ. ಅಪ್ರಾಪ್ತ, ಬುದ್ದಿಮಾಂದ್ಯರ ಮತಾಂತರಕ್ಕೆ 3-10 ವರ್ಷ ಶಿಕ್ಷೆ, ₹ 50,000 ದಂಡ ಮತಾಂತರಕ್ಕೆ ಬಲಿಯಾದವರಿಗೆ 5 ಲಕ್ಷವರೆಗೆ ಪರಿಹಾರ ನೀಡಲಾಗುತ್ತದೆ.  ಆಪಾದಿತನಿಂದಲೇ ಆ 5 ಲಕ್ಷ ಪರಿಹಾರ ವಸೂಲಿ ಮಾಡಲಾಗುತ್ತದೆ. ಪುನರಾವರ್ತನೆ ಅಪರಾಧಕ್ಕೆ 5 ವರ್ಷ ಜೈಲು, 2 ಲಕ್ಷ ದಂಡ ವಸೂಲಿ,  ಮತಾಂತರದ ಉದ್ದೇಶದ ಮದುವೆ ಅಸಿಂಧು ಖುದ್ದು ನ್ಯಾಯಾಲಯವೇ ಅಸಿಂಧುಗೊಳಿಸಬಹುದು.

ಬೇರೆ ಬೇರೆ ರಾಜ್ಯಗಳಲ್ಲಿ ಹೇಗಿದೆ ಶಿಕ್ಷೆ?

ಉತ್ತರ ಪ್ರದೇಶದಲ್ಲೂ ಮತಾಂತರ ನಿಷೇಧ ಕಾನೂನನ್ನು 2020ರಲ್ಲಿ ಜಾರಿಗೆ ತರಲಾಗಿದೆ. ಅಲ್ಲಿ ಬಲವಂತದ ಮತಾಂತರಕ್ಕೆ 1 ರಿಂದ 5 ವರ್ಷ ಶಿಕ್ಷೆ, ಅಪ್ರಾಪ್ತ, SC-ST ಮತಾಂತರಕ್ಕೆ ಹೆಚ್ಚಿನ ಪ್ರಮಾಣದ ಶಿಕ್ಷೆ, ಸಾಮೂಹಿಕ ಮತಾಂತರಕ್ಕೆ 3 ರಿಂದ 10 ವರ್ಷ ಶಿಕ್ಷೆ, ಜೊತೆಗೆ ತಪ್ಪಿತಸ್ಥರಿಗೆ ದಂಡದ ಶಿಕ್ಷೆ ಇದೆ.

ಹಿಮಾಚಲ ಪ್ರದೇಶ ಹೇಗಿದೆ ಶಿಕ್ಷೆ?

ಹಿಮಾಚಲ ಪ್ರದೇಶದಲ್ಲಿ 2019ರಲ್ಲಿ ಇದನ್ನು ಜಾರಿಗೆ ತರಲಾಯ್ತು. ವಿವಾಹ ಉದ್ದೇಶಕ್ಕೆ ಮತಾಂತರವೂ ತಪ್ಪು ಮತಾಂತರವಾಗಬೇಕಾದ್ರೆ 1 ತಿಂಗಳು ಮುಂಚೆ ಮಾಹಿತಿ ನೀಡ್ಬೇಕು, ನಿಯಮ ಉಲ್ಲಂಘಿಸಿದ್ರೆ 1 ರಿಂದ 7 ವರ್ಷಗಳ ವರೆಗೆ ಶಿಕ್ಷೆ ನೀಡುವ ಸಾಧ್ಯತೆ ಇದೆ.

ಗುಜರಾತ್‌ನಲ್ಲಿ ಮತಾಂತರ ನಿಷೇಧ ಕಾಯ್ದೆ

2013 ಗುಜರಾತ್‌ನಲ್ಲಿ ಈ ಕಾಯ್ದೆ ಜಾರಿಗೆ ಬಂತು. ಸ್ವ ಇಚ್ಛೆ ಮತಾಂತರವಾದ್ರೆ 10 ದಿನಗಳ ಬಳಿಕ ಮಾಹಿತಿ ನೀಡ್ಬೇಕು, ಧಾರ್ಮಿಕ ಮುಖಂಡನ ಮೂಲಕ ಮಹಾಂತರವಾದ್ರೆ ಮೊದಲೇ ಮಾಹಿತಿ ನೀಡ್ಬೇಕು. ಇನ್ನು ಬಲವಂತ ಮತಾಂತರಕ್ಕೆ 3 ರಿಂದ 4 ವರ್ಷ ಜೈಲು, 50 ರಿಂದ 1 ಲಕ್ಷ.ರೂ ದಂಡ ವಿಧಿಸಲಾಗುತ್ತದೆ.

ಮಧ್ಯ ಪ್ರದೇಶದಲ್ಲಿ ಹೇಗಿದೆ ಕಾಯ್ದೆ?

1968ರಲ್ಲಿ ಮಧ್ಯ ಪ್ರದೇಶದಲ್ಲಿ ಜಾರಿಗೆ ಬಂದ ಕಾಯ್ದೆಯನ್ವಯ ಸ್ವ ಇಚ್ಛೆ ಯಿಂದ ಮತಾಂತರವಾದ್ರೆ 7 ದಿನಗಳ ಒಳಗೆ ಮಾಹಿತಿ ನೀಡ್ಬೇಕು,  ಬಲವಂತದ ಮತಾಂತರಕ್ಕೆ 1 ರಿಂದ 2 ವರ್ಷ ಜೈಲು ತಪ್ಪಿತಸ್ಥರಿಗೆ 5 ರಿಂದ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

ಇತರೇ ರಾಜ್ಯಗಳಲ್ಲಿ ಶಿಕ್ಷೆ ಏನು?

ಉತ್ತರಾಖಂಡ್‌ದಲ್ಲಿ  2018ರ ಕಾಯ್ದೆಯನ್ವಯ ಮತಾಂತರಕ್ಕೂ 1 ತಿಂಗಳು ಮುನ್ನ ಮಾಹಿತಿ ನೀಡ್ಬೇಕು. ಬಲವಂತದದ ಮತಾಂತರಕ್ಕೆ 1 ರಿಂದ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಜಾರ್ಖಂಡ್‌ನಲ್ಲಿ 2017ರಲ್ಲಿ 7 ದಿನ ಮುಂಚಿತವಾಗಿ ಮತಾಂತರದ ಬಗ್ಗೆ ಮಾಹಿತಿ ನೀಡ್ಬೇಕು, ಧಾರ್ಮಿಕ ಮುಖಂಡನಿಂದ ಮತಾಂತರಕ್ಕೆ 15 ದಿನ ಮುನ್ನ ಮಾಹಿತಿ 3 ರಿಂದ 7 ವರ್ಷ ಜೈಲು, 50 ರಿಂದ 1 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.

ಇದನ್ನೂ ಓದಿ: Hindi Diwas: ಹಿಂದಿ ದಿವಸ್ ಆಚರಣೆ ಹಿಂದಿ ಹೇರಿಕೆಯ ಹುನ್ನಾರವೇ? ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿದ್ದೇಕೆ?

ಇನ್ನು ಛತ್ತೀಸ್‌ಗಢದಲ್ಲಿ 2006ರ ಕಾಯ್ದೆಯನ್ವಯ ಸ್ವ ಇಚ್ಛೆ ಮತಾಂತರವಾದ್ರೆ 1 ತಿಂಗಳ ಒಳಗೆ ಮಾಹಿತಿ ನೀಡ್ಬೇಕು, ಧಾರ್ಮಿಕ ಮುಖಂಡನಿಂದ ಮತಾಂತರಕ್ಕೆ 1 ತಿಂಗಳ ಮುನ್ನ ಮಾಹಿತಿ ಕೊಡಬೇಕು. ಒತ್ತಾಯ ಮಾಡಿದ್ರೆ 3 ರಿಂದ 4 ವರ್ಷ ಜೈಲು 20 ಸಾವಿರ ರೂಪಾಯಿವರೆಗೆ ದಂಡ ವಿಧಿಸಬಹುದು. ಅತ್ತ ಒಡಿಶಾದಲ್ಲಿ 1967ರ ಕಾಯ್ದೆಯನ್ವಯ ಸ್ವ ಇಚ್ಛೆ ಮತಾಂತರವಾದ್ರೆ 15 ದಿನ ಮುಂಚೆಯೇ ಮಾಹಿತಿ ನೀಡ್ಬೇಕು, ಬಲವಂತದ ಮತಾಂತರಕ್ಕೆ 1 ರಿಂದ 2 ವರ್ಷ ಜೈಲು 5 ರಿಂದ 10 ಸಾವಿರ ರೂಪಾಯಿವರೆಗೆ ದಂಡ ವಿಧಿಸುವ ಅವಕಾಶ ನೀಡಲಾಗಿದೆ.
Published by:Annappa Achari
First published: