Explained: ಕಜಕಿಸ್ತಾನದಲ್ಲಿ ಏನಾಗುತ್ತಿದೆ? ಅಲ್ಲಿನ ಜನ ಬೀದಿಗಿಳಿದು ಹೋರಾಟ ಮಾಡಲು ಕಾರಣವೇನು?

ಕಳೆದ ಶನಿವಾರ ರಾತ್ರೋರಾತ್ರಿ ದ್ರವೀಕೃತ ಪೆಟ್ರೋಲಿಯಂ ಅನಿಲ ಬೆಲೆಗಳು 2 ಪಟ್ಟು ಏರಿಕೆಯಾದ ಬಳಿಕ ಪ್ರತಿಭಟನೆಯ ಕಿಚ್ಚು ಹರಡಿತು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿ ದೇಶದಲ್ಲಿ ನಡೆದ ಪ್ರತಿಭಟನೆಗಳ (Protests) ಬಗ್ಗೆ ನಿಮಗೆ ಗೊತ್ತಿದೆಯಲ್ಲ. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ಇತರ ದೇಶಗಳಲ್ಲೂ ಪ್ರತಿಭಟನೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಇಂಧನ ಸಮೃದ್ಧಿ ರಾಷ್ಟ್ರಗಳಲ್ಲಿ ಒಂದಾದ ಕಜಕಿಸ್ತಾನ (Kazakhstan) ದಲ್ಲೂ ಇಂಧನ ದರ (fuel prices) ಹೆಚ್ಚಾಗಿದೆ ಎಂದು ಪ್ರತಿಭಟನೆಗಳು ಭಾರಿ ಸದ್ದು ಮಾಡಿದೆ ನೋಡಿ. 3 ದಶಕಗಳ ಹಿಂದೆ (Independence 3 Decades Ago) ಸ್ವಾತಂತ್ರ್ಯ ಗಳಿಸಿದ ನಂತರ ಕಜಕಿಸ್ತಾನ ದೇಶ ಕಂಡ ಅತ್ಯಂತ ಹೀನಾಯ ರಸ್ತೆ ಪ್ರತಿಭಟನೆಗಳನ್ನು ಅನುಭವಿಸುತ್ತಿದೆ.

8 ಕಾನೂನು ಜಾರಿ ಅಧಿಕಾರಿಗಳು ಹತ್ಯೆ
ದೇಶದ ಅತಿದೊಡ್ಡ ನಗರವಾದ ಅಲ್ಮಾಟಿ (Almaty) ಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ನಡೆದ ದಾಳಿ, ಪ್ರತಿಭಟನೆಯಲ್ಲಿ ಡಜನ್‌ಗಟ್ಟಲೆ ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರೇ ಹೇಳಿದ್ದಾರೆ. ಜತೆಗೆ, ಕನಿಷ್ಠ 8 ಕಾನೂನು ಜಾರಿ ಅಧಿಕಾರಿಗಳು ಹತ್ಯೆಗೀಡಾಗಿದ್ದಾರೆ.

ಕಜಕಿಸ್ತಾನದಲ್ಲಿ ನಡೆಯುತ್ತಿರುವ ಈ ಭಾರಿ ಅಸ್ಥಿರತೆಯ ಪ್ರಕೋಪವು 2 ಪ್ರಬಲ ನೆರೆಹೊರೆಯ ರಾಷ್ಟ್ರಗಳಾದ ರಷ್ಯಾ (Russia) ಮತ್ತು ಚೀನಾ (China) ದಲ್ಲಿ ಗಮನಾರ್ಹ ಕಾಳಜಿ ಉಂಟುಮಾಡುತ್ತಿದೆ. ರಷ್ಯಾ ಹಾಗೂ ಚೀನಾಗೆ ಯಾಕೆ ಆತಂಕ ಎಂಬ ಪ್ರಶ್ನೆಯಾ..? ಏಕೆಂದರೆ ಕಜಕಿಸ್ತಾನವು ತನ್ನ ಹೆಚ್ಚಿನ ತೈಲ ರಫ್ತುಗಳನ್ನು ಚೀನಾಕ್ಕೆ ಮಾರಾಟ ಮಾಡುತ್ತದೆ ಮತ್ತು ಇದು ಮಾಸ್ಕೋದ ಪ್ರಮುಖ ಕಾರ್ಯತಂತ್ರದ ಮಿತ್ರರಾಷ್ಟ್ರವಾಗಿದೆ. 2022ರ ವರ್ಷದ ಆರಂಭದಲ್ಲಿ ಕಾರು ಇಂಧನದ ಬೆಲೆಯಲ್ಲಿ ಹಠಾತ್ ಏರಿಕೆಯಾಗಿದೆ. ಇದರಿಂದ ದೂರದ ತೈಲ ಪಟ್ಟಣದಲ್ಲಿ ಮೊದಲ ಪ್ರತಿಭಟನೆಯನ್ನು ಪ್ರಚೋದಿಸಿತು. ಅಂದಿನಿಂದ ಹತ್ತಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಲ್ಲಿ ಬೀದಿಗಿಳಿದ ಹತ್ತಾರು ಸಾವಿರ ಜನರು ಈಗ ಸಂಪೂರ್ಣ ಸರ್ವಾಧಿಕಾರಿ ಸರ್ಕಾರದ ವಿರುದ್ಧ ಕೆಂಡ ಕಾರುತ್ತಿದ್ದಾರೆ.

ಈ ಪ್ರತಿಭಟನೆಗಳ ವಿರುದ್ಧ ಕಜಕಿಸ್ತಾನ ಅಧ್ಯಕ್ಷ ಕಾಸಿಮ್-ಜೋಮಾರ್ಟ್ ಟೊಕಾಯೆವ್ (Kassym-Jomart Tokayev)ಪ್ರತಿಕ್ರಿಯೆ ಹೀಗಿದೆ. ಬುಧವಾರದ ಆರಂಭದಲ್ಲಿ ಇಡೀ ಸರ್ಕಾರ ವಜಾಗೊಳಿಸುವ ಮೂಲಕ ಪ್ರತಿಭಟನಾ ಜನಸಂದಣಿಯನ್ನು ನಿಯಂತ್ರಣಗೊಳಿಸಲು ಪ್ರಯತ್ನಿಸಿದರು. ಆದರೆ ದಿನದ ಅಂತ್ಯದ ವೇಳೆಗೆ, ಅವರು ತಂತ್ರವನ್ನು ಬದಲಾಯಿಸಿದರು. ಅಲ್ಲದೆ, ಪ್ರತಿಭಟನಾಕಾರರನ್ನು ಭಯೋತ್ಪಾದಕರು ಎಂದು ಆರಂಭದಲ್ಲಿ ಬಣ್ಣಿಸಿದರು. ನಂತರ ಅವರು ದಂಗೆಯನ್ನು ಹತ್ತಿಕ್ಕಲು ಸಹಾಯಕ್ಕಾಗಿ ರಷ್ಯಾದ ನೇತೃತ್ವದ ಮಿಲಿಟರಿ ಒಕ್ಕೂಟ, ಕಲೆಕ್ಟೀವ್‌ ಸೆಕ್ಯುರಿಟಿ ಟ್ರೀಟಿ ಆರ್ಗನೈಸೇಶನ್‌ (Collective Security Treaty Organisation) (CSTO ) ಗೆ ಮನವಿ ಮಾಡಿದರು ಮತ್ತು CSTO ಅನಿರ್ದಿಷ್ಟ ಸಂಖ್ಯೆಯ ಶಾಂತಿಪಾಲಕರನ್ನು ಕಳುಹಿಸಲು ಒಪ್ಪಿಕೊಂಡಿತು.

ಇದನ್ನೂ ಓದಿ: Viral News: ಸೆಕ್ಸ್ ಡಾಲ್‌ನೊಂದಿಗೆ ಹನಿಮೂನ್: ಅವಿಸ್ಮರಣೀಯ ಕ್ಷಣಗಳನ್ನು ಹಂಚಿಕೊಂಡ ಕಜಕಿಸ್ತಾನದ ಬಾಡಿಬಿಲ್ಡರ್

ಜನರು ಏಕೆ ಆಕ್ರೋಶಗೊಂಡಿದ್ದಾರೆ..?
ಸೋವಿಯತ್ ಒಕ್ಕೂಟದ ವಿಸರ್ಜನೆಯ ನಂತರ ಸ್ವಾತಂತ್ರ್ಯ ಪಡೆದುಕೊಂಡ ಐದು ಮಧ್ಯ ಏಷ್ಯಾದ ಗಣರಾಜ್ಯಗಳ ಪೈಕಿ ಕಜಕಿಸ್ತಾನ ಅತಿ ದೊಡ್ಡ ಮತ್ತು ಶ್ರೀಮಂತ ರಾಷ್ಟ್ರವಾಗಿದೆ. ಇದು ಪಶ್ಚಿಮ ಯುರೋಪಿನ ಗಾತ್ರದ ಪ್ರದೇಶವನ್ನು ವ್ಯಾಪಿಸಿದ್ದು, ತೈಲ, ನೈಸರ್ಗಿಕ ಅನಿಲ, ಯುರೇನಿಯಂ ಮತ್ತು ಅಮೂಲ್ಯ ಲೋಹಗಳ ಬೃಹತ್ ನಿಕ್ಷೇಪಗಳ ಮೇಲೆ ಇದೆ.

ಕಜಕಿಸ್ತಾನದ ನೈಸರ್ಗಿಕ ಸಂಪತ್ತು ಅಲ್ಲಿನ ಜನರನ್ನು ಮಧ್ಯಮ ವರ್ಗರನ್ನಾಗಿ ಬೆಳೆಸಲು ಸಹಾಯ ಮಾಡಿದೆ. ಜೊತೆಗೆ ಅತಿ ಶ್ರೀಮಂತ ಉದ್ಯಮಿಗಳ ಗಣನೀಯ ಸಮೂಹವನ್ನು ಬೆಳೆಸುತ್ತದೆ. ಆದರೂ, ಹಲವರು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ.ಸರಾಸರಿ ರಾಷ್ಟ್ರೀಯ ಮಾಸಿಕ ವೇತನವು ಕೇವಲ 600 ಡಾಲರ್‌ಗಿಂತ ಕಡಿಮೆಯಾಗಿದ್ದು, ನಿಷ್ಕ್ರಿಯ ಸಾಲಗಳಿಂದ ಉಂಟಾದ ಆಳವಾದ ಬಿಕ್ಕಟ್ಟಿಗೆ ಬ್ಯಾಂಕಿಂಗ್ ವ್ಯವಸ್ಥೆಯು ಬಲಿಯಾಗಿದೆ. ಇನ್ನು, ಭಾರತ ಸೇರಿ ಹಲವು ರಾಷ್ಟ್ರಗಳಂತೆ ಭ್ರಷ್ಟಾಚಾರವೂ ವ್ಯಾಪಕವಾಗಿದೆ.

ತೈಲ ಕಾರ್ಮಿಕರನ್ನು ಬೆಂಬಲಿಸಿ ಪ್ರತಿಭಟನೆ
ಇತ್ತೀಚಿನ ಬಿಕ್ಕಟ್ಟನ್ನು ಹುಟ್ಟುಹಾಕಿದ ರ‍್ಯಾಲಿಯು ಪಶ್ಚಿಮ ತೈಲ ಪಟ್ಟಣವಾದ ಝನಾನೋಝೆನ್ (Zhanaozen) ನಲ್ಲಿ ನಡೆಯಿತು. ಪ್ರದೇಶದ ಇಂಧನದ ಸಂಪತ್ತು ಸ್ಥಳೀಯ ಜನಸಂಖ್ಯೆಯ ನಡುವೆ ತಕ್ಕಮಟ್ಟಿಗೆ ಹರಡಿಲ್ಲ ಎಂಬ ಅರ್ಥದಲ್ಲಿ ಅಸಮಾಧಾನಗಳು ದೀರ್ಘಕಾಲದವರೆಗೆ ಪ್ರದೇಶದಲ್ಲಿ ಉಲ್ಬಣಗೊಂಡಿವೆ. 2011ರಲ್ಲಿ ನಡೆದ ಪ್ರತಿಭಟನೆಯಲ್ಲಿ ಮುಷ್ಕರದ ನಂತರ ವಜಾಗೊಳಿಸಿದ ತೈಲ ಕಾರ್ಮಿಕರನ್ನು ಬೆಂಬಲಿಸಿ ಪ್ರತಿಭಟನೆ ನಡೆಸುತ್ತಿದ್ದ ನಗರದಲ್ಲಿ ಕನಿಷ್ಠ 15 ಜನರನ್ನು ಪೊಲೀಸರು ಗುಂಡಿಕ್ಕಿ ಕೊಂದರು.
ಇನ್ನು, ಈ ಪ್ರದೇಶದಲ್ಲಿ ಹೆಚ್ಚಿನ ಜನರು ತಮ್ಮ ಕಾರುಗಳಿಗೆ ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು ಬಳಸುತ್ತಾರೆ. ಈ ಹಿನ್ನೆಲೆ ಶನಿವಾರ ರಾತ್ರೋರಾತ್ರಿ ದ್ರವೀಕೃತ ಪೆಟ್ರೋಲಿಯಂ ಅನಿಲ ಬೆಲೆಗಳು 2 ಪಟ್ಟು ಏರಿಕೆಯಾದ ಬಳಿಕ ಪ್ರತಿಭಟನೆಯ ಕಿಚ್ಚು ಹರಡಿತು. ಹತ್ತಿರದ ನಗರಗಳಲ್ಲಿನ ನಿವಾಸಿಗಳು ಸಹ ಈ ಪ್ರತಿಭಟನೆಗೆ ತ್ವರಿತವಾಗಿ ಸೇರಿಕೊಂಡರು ಮತ್ತು ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗಳು ದೇಶದ ಉಳಿದ ಭಾಗಗಳಿಗೆ ಹರಡಿದೆ.

ಈ ಪ್ರತಿಭಟನೆಗಳನ್ನು ಮುನ್ನಡೆಸುವವರು ಯಾರು..?
ಕಜಕಿಸ್ತಾನ್‌ನಲ್ಲಿ ವಿಮರ್ಶಾತ್ಮಕ ಅಥವಾ ಸರ್ಕಾರವನ್ನು ಟೀಕಿಸುವ ಧ್ವನಿಗಳನ್ನು ನಿಗ್ರಹಿಸುವುದು ಬಹಳ ಹಿಂದಿನಿಂದಲೂ ರೂಢಿಯಲ್ಲಿದೆ. ಸರ್ಕಾರವನ್ನು ವಿರೋಧಿಸಲು ಬಯಸುವ ಯಾವುದೇ ವ್ಯಕ್ತಿಗಳನ್ನು ದಮನ ಮಾಡಲಾಗುತ್ತದೆ. ಆದ್ದರಿಂದ ಈ ಪ್ರತಿಭಟನೆಗಳು ದೊಡ್ಡದಾಗಿದ್ದರೂ - ಅಂದರೆ 10,000ಕ್ಕಿಂತ ಹೆಚ್ಚು ಜನರು ( ನಮ್ಮ ದೇಶದಲ್ಲಿ ಈ ಸಂಖ್ಯೆ ಕಡಿಮೆ ಎನಿಸಿದರೂ, ಕಜಕಿಸ್ತಾನದಲ್ಲಿ ಈ ಸಂಖ್ಯೆ ದೊಡ್ಡದೇ) ಭಾಗಿಯಾಗಿದ್ದರೂ, ಯಾವುದೇ ಪ್ರತಿಭಟನಾ ಚಳುವಳಿ ನಾಯಕರು ಹೊರಹೊಮ್ಮಲಿಲ್ಲ.

ಕಜಕಿಸ್ತಾನದ ಇತ್ತೀಚಿನ ಇತಿಹಾಸದ ಬಹುಪಾಲು ಸಮಯದಲ್ಲಿ ಆ ದೇಶದ ಅಧಿಕಾರವು ಮಾಜಿ ಅಧ್ಯಕ್ಷ ನರ್ಸುಲ್ತಾನ್ ನಜರ್ಬಯೇವ್ (Nursultan Nazarbayev)ಕೈಯಲ್ಲಿತ್ತು. ಬಳಿಕ 2019ರಲ್ಲಿ, ಈಗ 81ರ ಹರೆಯರಾಗಿರುವ ನಜರ್ಬಯೇವ್ ಅಧಿಕಾರ ತ್ಯಜಿಸಿದರು ಮತ್ತು ಅವರ ದೀರ್ಘಾವಧಿಯ ಮಿತ್ರ ಟೋಕಾಯೆವ್‌ರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಿದರು.

ಆದರೂ, ಮಿಲಿಟರಿ ಮತ್ತು ಭದ್ರತಾ ಸೇವೆಗಳನ್ನು ನೋಡಿಕೊಳ್ಳುವ ಭದ್ರತಾ ಮಂಡಳಿಯ ಮುಖ್ಯಸ್ಥರಾಗಿ, ನಜರ್ಬಯೇವ್ ಈವರೆಗೆ ದೇಶದ ಮೇಲೆ ಸಾಕಷ್ಟು ಅಧಿಕಾರ ಉಳಿಸಿಕೊಳ್ಳುವುದನ್ನು ಮುಂದುವರೆಸಿದ್ದಾರೆ. ಆದರೆ, ಭದ್ರತಾ ಮಂಡಳಿಯ ಮುಖ್ಯಸ್ಥರಾಗಿ ನಜರ್ಬಯೇವ್ ಅವರಿಂದ ಅಧಿಕಾರ ಪಡೆದುಕೊಳ್ಳುವುದಾಗಿ ಟೋಕಾಯೆವ್ ಈ ಪ್ರತಿಭಟನೆಗಳ ನಡುವೆ ಅಂದರೆ ಬುಧವಾರ ಘೋಷಿಸಿದ್ದಾರೆ. ಇನ್ನು, ಇತ್ತೀಚಿನ ದಿನಗಳಲ್ಲಿ ಬೀದಿಗಳಲ್ಲಿ ಪ್ರದರ್ಶಿಸಲಾದ ಹೆಚ್ಚಿನ ಪ್ರತಿಭಟನೆ, ಆಕ್ರೋಶವು ಟೋಕಾಯೆವ್ ಅವರ ಮೇಲೆ ಅಲ್ಲ, ಬದಲಾಗಿ ನಜರ್ಬಯೇವ್ ಅವರನ್ನು ಗುರಿಯಾಗಿಸಿದೆ. ಈಗಲೂ ಸಹ ಅವರೇ ದೇಶದ ಅಂತಿಮ ಹಾಗೂ ಅಧಿಕೃತ ಆಡಳಿತಗಾರ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದಾರೆ. ಈ ಹಿನ್ನೆಲೆ "“Shal ket!” (“Old man go”)!" ಎಂಬ ಘೋಷಣೆಯೇ ಈ ಪ್ರತಿಭಟನೆಯ ಮುಖ್ಯ ಘೋಷಣೆಯಾಗಿದೆ.

ಅಧಿಕಾರಿಗಳು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ..?
ಸರ್ಕಾರಿ ಕಟ್ಟಡಗಳ ಮೇಲಿನ ದಾಳಿಯಲ್ಲಿ ಡಜನ್‌ಗಟ್ಟಲೆ ಜನರು ಮೃತಪಟ್ಟಿದ್ದಾರೆ ಎಂದು ಅಲ್ಮಾಟಿಯ ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ರಾತ್ರಿ ವೇಳೆಯಲ್ಲಿ ಅಲ್ಮಾಟಿಯಲ್ಲಿ ಕಟ್ಟಡಗಳ ಮೇಲೆ ದಾಳಿ ಮಾಡುವ ಪ್ರಯತ್ನಗಳು ನಡೆದವು ಮತ್ತು "ಡಜನ್‌ಗಟ್ಟಲೆ ದಾಳಿಕೋರರನ್ನು ಹತ್ಯೆ ಮಾಡಲಾಯಿತು" ಎಂದು ಪೊಲೀಸ್ ವಕ್ತಾರೆ ರಾಜ್ಯ ಸುದ್ದಿ ವಾಹಿನಿ ಖಬರ್-24 ಗೆ ಸಲ್ತಾನಾತ್ ಅಜಿರ್ಬೆಕ್ ಹೇಳಿದ್ದಾರೆ.

ನಗರದಲ್ಲಿ ವ್ಯಾಪಕ ಅಶಾಂತಿ ಉಂಟಾದ ನಂತರ, ಮೇಯರ್ ಕಟ್ಟಡವನ್ನು ವಶಪಡಿಸಿಕೊಂಡಿದ್ದು ಸೇರಿ, ಹಲವು ಕಟ್ಟಡಗಳಿಗೆ ನುಗ್ಗುವ ಪ್ರಯತ್ನಗಳು ವರದಿಯಾಗಿವೆ. ಸಾರ್ವಜನಿಕ ಅಸಮಾಧಾನದ ಹಿನ್ನೆಲೆಯಲ್ಲಿ ಆರಂಭಿಕ ಪ್ರತಿಕ್ರಿಯೆಯು ಸಾಮಾನ್ಯ ನೀತಿಗೆ ಅನುಗುಣವಾಗಿತ್ತು. ಪೊಲೀಸರು ಮತ್ತು ರಾಷ್ಟ್ರೀಯ ಕಾವಲು ಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿತ್ತು.

ಸಿಟಿ ಹಾಲ್‌ಗೆ ನುಗ್ಗಿದ ಜನಸಮೂಹ
ಬುಧವಾರದ ಮುಂಜಾನೆ ವಾಣಿಜ್ಯ ರಾಜಧಾನಿ ಅಲ್ಮಾಟಿಯ ಸಿಟಿ ಹಾಲ್‌ಗೆ ನುಗ್ಗಿದ ಜನಸಮೂಹವನ್ನು ಗಲಭೆ ಪೊಲೀಸ್ ಮತ್ತು ಶಸ್ತ್ರಸಜ್ಜಿತ ಸಿಬ್ಬಂದಿ ವಾಹಕಗಳ ದೊಡ್ಡ ಪಡೆಗಳು ಎದುರಾದರು. ಹಲವಾರು ದೊಡ್ಡ ನಗರಗಳಲ್ಲಿ ಸರ್ಕಾರಿ ಕಟ್ಟಡಗಳು ಆಕ್ರಮಣಕ್ಕೆ ಒಳಗಾದ ಬಳಿಕ, ಮಾಸ್ಕೋ ನೇತೃತ್ವದ ಮಿಲಿಟರಿ ಒಕ್ಕೂಟವಾದ ಕಲೆಕ್ಟಿವ್ ಸೆಕ್ಯುರಿಟಿ ಟ್ರೀಟಿ ಆರ್ಗನೈಸೇಶನ್‌ನಿಂದ ಕಜಕಿಸ್ತಾನ ಅಧ್ಯಕ್ಷ ಟೋಕೇವ್‌ ಸಹಾಯಕ್ಕಾಗಿ ಮನವಿ ಮಾಡಿದರು. ಪ್ರತಿಭಟನಾಕಾರರು ಅಂತರರಾಷ್ಟ್ರೀಯ ಭಯೋತ್ಪಾದಕ ಗುಂಪುಗಳ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಬಾಹ್ಯ ಹಸ್ತಕ್ಷೇಪದ ಮನವಿಯನ್ನು ಅವರು ಸಮರ್ಥಿಸಿಕೊಂಡರು. ಆದರೆ, ಅದರ ಬಗ್ಗೆ ಅವರು ಯಾವುದೇ ವಿವರಗಳನ್ನು ನೀಡಲಿಲ್ಲ.

ಇದನ್ನೂ ಓದಿ: Murder: ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ದೇಹವನ್ನು ತುಂಡರಿಸಿ, ರುಂಡ ಬೇಯಿಸಿದ ಮಹಾಪಾಪಿ!

ಸರ್ಕಾರ ಉರುಳುವ ಸಾಧ್ಯತೆ ಇದೆಯೇ..?
ಕಜಕಿಸ್ತಾನವು 2016ರಲ್ಲಿ, ವಿವಾದಾತ್ಮಕ ಭೂ ಕಾನೂನಿನ ಅಂಗೀಕಾರದ ನಂತರ ಹಾಗೂ ಮತ್ತೆ 2019ರಲ್ಲಿ ವಿವಾದಾತ್ಮಕ ಚುನಾವಣೆ ನಡೆದು ಟೋಕೇವ್ ಅಧಿಕಾರ ಪಡೆದುಕೊಂಡ ನಂತರ ಪ್ರಮುಖ ಪ್ರತಿಭಟನೆಗಳನ್ನು ಕಂಡಿದೆ. ಆದರೆ ಈ ಪ್ರಮಾಣದಲ್ಲಿ ಎಂದಿಗೂ ಪ್ರತಿಭಟನೆಗಳು ನಡೆದಿರಲಿಲ್ಲ ಎನ್ನಲಾಗಿದೆ. ಬುಧವಾರ ಸಾರ್ವಜನಿಕರಿಗೆ ಅವರ ಮನವಿಯೊಂದರಲ್ಲಿ, ಟೋಕೇವ್ ಸುಧಾರಣೆಗಳನ್ನು ಮುಂದುವರಿಸಲು ವಾಗ್ದಾನ ಮಾಡಿದರು ಮತ್ತು ರಾಜಕೀಯ ಉದಾರೀಕರಣವು ಸಾಧ್ಯ ಎಂದು ಸುಳಿವು ನೀಡಿದರು. ಆದರೆ, ದಿನದ ಅಂತ್ಯದ ವೇಳೆಗೆ ಅವರು ಹೆಚ್ಚು ದಮನಕಾರಿ ಹಾದಿಯಲ್ಲಿ ಹೋಗುವುದಾಗಿ ಸೂಚಿಸಿದರು.

ಇನ್ನೂ, ಬೀದಿ ಪ್ರತಿಭಟನೆಗಳು ಮುಂದುವರೆದರೂ, ಆ ಪ್ರತಿಭಟನೆ ಸ್ಪಷ್ಟವಾದ ನಿಲುವನ್ನು ಹೊಂದಿಲ್ಲ. ಈ ಹಿನ್ನೆಲೆ ಇದೀಗ ಹೇಗೆ ಕೊನೆಗೊಳ್ಳಬಹುದು ಎಂಬುದನ್ನು ನೋಡುವುದು ಕಷ್ಟವಾಗಿದೆ. ಇನ್ನು, ಪ್ರತಿಭಟನಾಕಾರರು ಸರ್ಕಾರ ಉರುಳಿಸಲು ವಿಫಲವಾದರೂ, ಅವರು ಆಳವಾದ ಪರಿವರ್ತನೆಗೆ ಕಾರಣವಾಗಬಹುದು ಎಂದು ತೋರುತ್ತದೆ. ಆದರೆ, ಈ ಬಗ್ಗೆ ಇನ್ನು ಮುಂದಷ್ಟೇ ನೋಡಬೇಕಾಗಿದೆ.
Published by:vanithasanjevani vanithasanjevani
First published: