• Home
 • »
 • News
 • »
 • explained
 • »
 • ಚುನಾವಣೆಗೂ ಮುನ್ನ ಲಂಬಾಣಿಗರಿಗೆ ಸಿಹಿ, ಮೋದಿ ವಿತರಿಸಿದ 'ಹಕ್ಕು ಪತ್ರ'ದ ಮಹತ್ವವೇನು? ಸಿಗೋ ಲಾಭ, ಇರೋ ಷರತ್ತುಗಳೇನು?

ಚುನಾವಣೆಗೂ ಮುನ್ನ ಲಂಬಾಣಿಗರಿಗೆ ಸಿಹಿ, ಮೋದಿ ವಿತರಿಸಿದ 'ಹಕ್ಕು ಪತ್ರ'ದ ಮಹತ್ವವೇನು? ಸಿಗೋ ಲಾಭ, ಇರೋ ಷರತ್ತುಗಳೇನು?

ಲಂಬಾಣಿಗರಿಗೆ ಹಕ್ಕು ಪತ್ರ ವಿತರಿಸಿದ್ದ ಮೋದಿ

ಲಂಬಾಣಿಗರಿಗೆ ಹಕ್ಕು ಪತ್ರ ವಿತರಿಸಿದ್ದ ಮೋದಿ

ಕಲ್ಬುರ್ಗಿ, ರಾಯಚೂರ, ಯಾದಗಿರಿ, ಬೀದರ್ ಮತ್ತು ಕಲ್ಬುರ್ಗಿ ಗಡಿಭಾಗದ ತಾಂಡಾ ಸೇರಿ ಒಟ್ಟು 50 ಸಾವಿರ ಹಕ್ಕು ಪತ್ರ ನೀಡಲಾಗಿದ್ದು, ಇದು ಲಂಬಾಣಿ ಜನರ ಸಂಭ್ರಮಕ್ಕೆ ಕಾರಣವಾಗಿತ್ತು. ಹಾಗಾದ್ರೆ ಲಂಬಾಣಿ ಸಮುದಾಯಕ್ಕೆ ವಿತರಿಸಲಾದ ಹಕ್ಕು ಪತ್ರ ಅಂದ್ರೇನು? ಯಾರಿಗೆಲ್ಲಾ ಸಿಗುತ್ತೆ? ಲಂಬಾಣಿಗರ ಮಹತ್ವವೇನು? ಈ ಕುರಿತಾದ ಒಂದು ನೋಟ ಇಲ್ಲಿದೆ.

ಮುಂದೆ ಓದಿ ...
 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಗುರುವಾರದಂದು ಯಾದಗಿರಿ ಮತ್ತು ಕಲ್ಬುರ್ಗಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಹಲವು ಯೋಜನೆಗಳಿಗೆ ಚಾಲನೆ ನೀಡಿದ್ದರು. ಅದರಲ್ಲೂ ವಿಶೇಷವಾಗಿ ಕಲ್ಬುರ್ಗಿಯ (Kalaburagi) ಮಳಖೇಡ ಗ್ರಾಮದಲ್ಲಿ ಆಯೋಜಿಸಿದ್ಧ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಜಾರ ಸಮುದಾಯಕ್ಕೆ ಹಕ್ಕು ಪತ್ರ ವಿತರಿಸಿದ್ದರು. ಹೀಗೆ 250ಕ್ಕೂ ಹೆಚ್ಚು ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲಾಗಿದೆ. ಕಲ್ಬುರ್ಗಿ, ರಾಯಚೂರ, ಯಾದಗಿರಿ, ಬೀದರ್ ಮತ್ತು ಕಲ್ಬುರ್ಗಿ ಗಡಿಭಾಗದ ತಾಂಡಾ (Tanda) ಸೇರಿ ಒಟ್ಟು 50 ಸಾವಿರ ಹಕ್ಕು ಪತ್ರ ನೀಡಲಾಗಿದ್ದು, ಇದು ಲಂಬಾಣಿ (Lambani)ಜನರ ಸಂಭ್ರಮಕ್ಕೆ ಕಾರಣವಾಗಿತ್ತು. ಹಾಗಾದ್ರೆ ಲಂಬಾಣಿ ಸಮುದಾಯಕ್ಕೆ ವಿತರಿಸಲಾದ ಹಕ್ಕು ಪತ್ರ ಅಂದ್ರೇನು? ಯಾರಿಗೆಲ್ಲಾ ಸಿಗುತ್ತೆ? ಲಂಬಾಣಿಗರ ಮಹತ್ವವೇನು? ಈ ಕುರಿತಾದ ಒಂದು ನೋಟ ಇಲ್ಲಿದೆ.


ಕರ್ನಾಟಕದಲ್ಲಿ ಲಂಬಾಣಿ ಒಂದು ವಿಶಿಷ್ಟ ಜನಾಂಗ, ಮೂಲತಃ ರಾಜಸ್ಥಾನದ ಪರಂಪರೆಯವರೆಂದು ಹೇಳಲಾಗುವ ಇವರು ಕರ್ನಾಟಕದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದಾರೆ. ಇವರಿಗೆ ಬಂಜಾರ, ಬಂಜಾಲಿಗ. ಸುಕಾಲಿಗ ಲಮಾಣಿ ಹೀಗೆ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಕಷ್ಟಜೀವಿಗಳಾಗಿರವ ಲಂಬಾಣಿಗಳು ಸಾಮಾನ್ಯವಾಗಿ ತಮ್ಮದೇ ಆದ ವಸತಿ ತಾಣ ಮಾಡಿಕೊಂಡು ಇರುವುದೇ ಹೆಚ್ಚು. ಇಂತಹ ವಸತಿ ತಾಣಗಳನ್ನು ಲಂಬಾಣಿ ತಾಂಡಾಗಳೆಂದು ಕರೆಯುತ್ತಾರೆ. ಶತಶತಮಾನಗಳಿಂದ ತುಳಿತಕ್ಕೊಳಗಾದ ಈ ಗುಂಪಿನವರು ಚಾರಿತ್ರಿಕ ಹಿನ್ನೆಲೆಯುಳ್ಳವರು. ಸದ್ಯ ಈ ಸಮುದಾಯದ ಬಹುಕಾಲದ ಬೇಡಿಕೆಯನ್ನು ಈಡೇರಿಸಿರುವ ಸರ್ಕಾರ, ಅವರಿಗೆ ಹಕ್ಕು ಪತ್ರಗಳನ್ನು ನೀಡಿದೆ.
ಹಕ್ಕು ಪತ್ರ ಎಂದರೇನು?


ಹಕ್ಕು ಪತ್ರವು ಒಂದು ಕಾನೂನು ದಾಖಲೆಯಾಗಿದ್ದು ಅದು ಒಬ್ಬ ವ್ಯಕ್ತಿಯ ಆಸ್ತಿಯ ಹಕ್ಕಿನ ಉತ್ತರಾಧಿಕಾರವನ್ನು ನೀಡುತ್ತದೆ. ಇದನ್ನು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ನಗರ ಕೊಳೆಗೇರಿ ನಿವಾಸಿಗಳು, ಅಂಗವಿಕಲರು ಮತ್ತು ಇತರ ಅನಾನುಕೂಲಕರ ಜನ ಸೇರಿದಂತೆ ರಾಷ್ಟ್ರದ ಹಿಂದುಳಿದ ವರ್ಗಕ್ಕೆ ನೀಡಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಹೀಗೆ ನೀಡಲಾದ ಜಮೀನಿಗೆ ನಿರ್ದಿಷ್ಟ ಷರತ್ತುಗಳನ್ನು ವಿಧಿಸಲಾಗುತ್ತದೆ ಹಾಗೂ ಸರ್ಕಾರಿ ಸ್ವಾಮ್ಯದಲ್ಲಿರುತ್ತದೆ. ಅಂದರೆ ಈ ಹಕ್ಕು ಪತ್ರದ ಜಮೀನಿನಲ್ಲಿ ನಿರ್ಮಿಸಿದ ಯಾವುದೇ ಮನೆಯನ್ನು ಫಲಾನುಭವಿ ಮನೆಯಾಗಿ ಬಳಸಬೇಕೇ ಹೊರತು ಬಾಡಿಗೆ ಉದ್ದೇಶಕ್ಕಾಗಿ ಬಳಸುವಂತಿಲ್ಲ.


ಇದನ್ನೂ ಓದಿ: Narendra Modi: ‘ಲಂಬಾಣಿ ಜನರ ಮಗ ನಾನು, ನೀವು ನಿಶ್ಚಿಂತೆಯಿಂದಿರಿ’: ಪ್ರಧಾನಿ ಮೋದಿ ಭರವಸೆ


ಹಾಗಾದ್ರೆ ಈ ಹಕ್ಕು ಪತ್ರದಿಂದ ಸಿಗೋ ಲಾಭಗಳೇನು?


ಈ ಹಕ್ಕು ಪತ್ರದಿಂದ ಜಮೀನು ಹೊಂದಿರುವವರು ಈ ನವೀಕೃತ ಮತ್ತು ಅಧಿಕೃತ ದಾಖಲೆಯಿಂದ ತಮ್ಮ ಆಸ್ತಿಯ ಕಾನೂನುಬದ್ಧ ಮಾಲೀಕರಾಗುತ್ತಾರೆ. ಸರ್ಕಾರವೇ ಈ ದಾಖಲೆಯನ್ನು ನೀಡುವುದರಿಂದ ಮತ್ತು ಇದು ರಾಜ್ಯ-ಖಾತರಿ ದಾಖಲೆಯಾಗಿರುವುದರಿಂದ ವ್ಯಕ್ತಿಯು ಹೆಚ್ಚಿನ ಅಲೆದಾಟ ನಡೆಸಬೇಕಿಲ್ಲ. ಹಕ್ಕು ಪತ್ರ ನೋಂದಣಿಯು ಭೂಮಿಯ ಮೇಲಿನ ಮಾಲೀಕತ್ವ ಅಥವಾ ಹಕ್ಕುಗಳಿಗೆ ಸಂಬಂಧಿಸಿದ ಎಲ್ಲಾ ರೀತಿಯ ವಿವಾದಗಳನ್ನು ಪರಿಹರಿಸುತ್ತದೆ. ವಿಶೇಷವಾಗಿ ಗಡಿಗಳಲ್ಲಿ ನಡೆಯುವ ಯಾವುದೇ ಅತಿಕ್ರಮಣವನ್ನು ತಡೆಯಲು ಡಾಕ್ಯುಮೆಂಟ್ ಸಹಾಯ ಮಾಡುತ್ತದೆ.


ಇದನ್ನು ಪಡೆಯುವುದು ಹೇಗೆ?


ಈ ಹಕ್ಕು ಪತ್ರ ಕರ್ನಾಟಕದ ರಾಜೀವ್ ಗಾಂಧಿ ರೂರಲ್ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್(RGRHCL) ಅಡಿಯಲ್ಲಿ ಬರುವ ಅಂಬೇಡ್ಕರ್ ಗ್ರಾಮೀಣ ವಸತಿ ಯೋಜನೆಯ ಒಂದು ಭಾಗವಾಗಿದೆ. ಜಿಲ್ಲೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(CEO), ಜಿಲ್ಲಾ ಪಂಚಾಯತ್, ಕಾರ್ಯನಿರ್ವಾಹಕ ಅಧಿಕಾರಿ, ಗ್ರಾಮ ಪಂಚಾಯತ್ ಅಥವಾ ತಾಲೂಕು ಪಂಚಾಯತ್ ಕಚೇರಿಗೆ ಭೇಟಿ ನೀಡುವ ಮೂಲಕ ನೀವು ಹಕ್ಕು ಪತ್ರ ಪಡೆಯುವ ಪ್ರಕ್ರಿಯೆ ಆರಂಭಿಸಬಹುದು. ಆದರೆ ಇದನ್ನು ಪಡೆಯಲು ಕೆಲವು ಅರ್ಹತೆಗಳೂ ಇವೆ ಎಂಬುವುದು ಉಲ್ಲೇಖನೀಯ.
ಹಕ್ಕು ಪತ್ರ ಯಾರಿಗೆ ಸಿಗುತ್ತೆ? ಮಾನದಂಡಗಳೇನು?


* ಹಕ್ಕು ಪತ್ರಕ್ಕಾಗಿ ನೋಂದಣಿ ಮಾಡಿಕೊಳ್ಳುವವರು ಕರ್ನಾಟಕದ ಯಾವುದೇ ಗ್ರಾಮೀಣ ಪ್ರದೇಶದ ಖಾಯಂ ನಿವಾಸಿಯಾಗಿರಬೇಕು.


* ನಿವೇಶನವು ಗ್ರಾಮ ಸಭೆ ಪಟ್ಟಿಯ ಭಾಗವಾಗಿರಬೇಕು. ನೋಂದಾವಣೆ ಮಾಡುವವರು SC/ST ಅಥವಾ OBC ವರ್ಗಕ್ಕೆ ಸೇರಿದವರಾಗಿದ್ದು, ಸರ್ಕಾರವು ನಿಗದಿಪಡಿಸಿದ BPL ಆದಾಯ ಮಟ್ಟಕ್ಕೆ ಬರುವ ಆದಾಯದೊಂದಿಗೆ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.


* ಯಾವುದೇ ಸರ್ಕಾರಿ ಅಥವಾ ಖಾಸಗಿ ಯೋಜನೆಯಡಿಯಲ್ಲಿ ವಸತಿ ಸಹಾಯವನ್ನು ಪಡೆದಿರಬಾರದು.


ಹಕ್ಕು ಪತ್ರಕ್ಕಿರೋ ಷರತ್ತುಗಳೇನು?


* ಹಕ್ಕು ಪತ್ರವನ್ನು ಯಜಮಾನಿ ಅಂದರೆ ಪುರುಷ ಅರ್ಜಿದಾರನ ಹೆಂಡತಿಯ ಹೆಸರಿನಲ್ಲಿ ನೀಡಲಾಗುತ್ತದೆ. ಕೆಲವು ಸಂದರ್ಭದಗಳಲ್ಲಿ ಫಲಾನುಭವಿ ಅವಿವಾಹಿತರಾಗಿದ್ದರೆ ಅಥವಾ ವಿಧವೆಯಾಗಿದ್ದರೆ, ಅದನ್ನು ಅವರ ಹೆಸರಿನಲ್ಲಿ ನೀಡಲಾಗುತ್ತದೆ.


* ನಿಯಮದ ಪ್ರಕಾರ, ಹಕ್ಕು ಪತ್ರಕ್ಕಾಗಿ ಫಲಾನುಭವಿಗಳನ್ನು ಕರ್ನಾಟಕದಲ್ಲಿ ಗ್ರಾಮ ಸಭೆಯ ನವೀಕರಿಸಿದ ನಿವೇಶನ, ವಸತಿ ರಹಿತರ ಪಟ್ಟಿಯಿಂದ ಆಯ್ಕೆ ಮಾಡಲಾಗುತ್ತದೆ.


* ಹಕ್ಕು ಪತ್ರದ ಭೂಮಿಯ ನಿರ್ಮಾಣ ಪ್ರದೇಶವು 20 ಚದರ ಮೀಟರ್‌ಗಿಂತ ಕಡಿಮೆಯಿರಬಾರದು. ಇದಕ್ಕೆ ನಿಗದಿತ ವಿನ್ಯಾಸವೂ ಇರುವುದಿಲ್ಲ.


* ಮನೆ ನಿರ್ಮಾಣದ ಪ್ರತಿಯೊಂದು ಹಂತದಲ್ಲಿ ಫಲಾನುಭವಿಗಳು ಭಾಗಿಯಾಗಬಹುದು. ಅಂದರೆ ಇಂದಿರಾ ಆವಾಸ್ ಯೋಜನೆಯಂತೆ , ಸುಧಾರಿತ ಮನೆ ವಿನ್ಯಾಸ, ನೈರ್ಮಲ್ಯ, ಕಟ್ಟಡ ಕಾರ್ಯವಿಧಾನಗಳು, ಸಾಮಗ್ರಿಗಳು ಇತ್ಯಾದಿಗಳನ್ನು ಈ ಯೋಜನೆಯಲ್ಲಿ ಅನ್ವಯಿಸಬಹುದು.


* ಫಲಾನುಭವಿಯು 15 ವರ್ಷಗಳವರೆಗೆ ಮನೆ ಸ್ವಾಧೀನದ ಹಕ್ಕು ಮಾತ್ರ ಪಡೆಯುತ್ತಾನೆ. ಈ ಅವಧಿ ಮುಗಿದ ಬಳಿಕವಷ್ಟೇ ಮಾಲೀಕತ್ವವನ್ನು ಫಲಾನುಭವಿಯ ಹೆಸರಿಗೆ ವರ್ಗಾಯಿಸಲಾಗುತ್ತದೆ. ಹೀಗಾಗಿ ಫಲಾನುಭವಿಯು 15 ವರ್ಷಗಳವರೆಗೆ ಮನೆಯನ್ನು ಖಾಲಿ ಬಿಡುವಂತಿಲ್ಲ.


* ಖಾಲಿ ಇದ್ದ ಸಂದರ್ಭದಲ್ಲಿ ಸರ್ಕಾರ ಸ್ಥಳವನ್ನು ಮುಟ್ಟುಗೋಲು ಹಾಕಿ ಬೇರೆ ಅರ್ಹ ಫಲಾನುಭವಿಗೆ ಜಮೀನು ಮಂಜೂರು ಮಾಡಬಹುದು. ಭೂಮಿಯನ್ನು ಮಾರಾಟ ಮಾಡಬಹುದು ಅಥವಾ ಕಂಪನಿಗೆ ಹಿಂತಿರುಗಿಸಬಹುದು.


ಇದನ್ನೂ ಓದಿ: PM Modi: ಡಬಲ್​ ಎಂಜಿನ್​ ಸರ್ಕಾರದಿಂದ ಡಬಲ್​ ಬೆನಿಫಿಟ್​; ರಾಜ್ಯ ಬಿಜೆಪಿ ಸರ್ಕಾರವನ್ನು ಕೊಂಡಾಡಿದ ಪ್ರಧಾನಿ ಮೋದಿ
ಸದ್ಯ ಭಾರತೀಯ ಶ್ರೀಮಂತ ಕಲಾ ಸಂಸ್ಕೃತಿಗೆ ಅಪಾರವಾದ ಕೊಡುಗೆ ನೀಡಿದ ಲಂಬಾಣಿ ಸಮುದಾಯದ ಕಲಬುರಗಿ, ರಾಯಚೂರ, ಯಾದಗಿರಿ, ಬೀದರ್ ಮತ್ತು ಕಲಬುರಗಿ ಗಡಿಭಾಗದ ತಾಂಡಾ ಸೇರಿ ಒಟ್ಟು 50 ಸಾವಿರ ಮಂದಿಗೆ ಹಕ್ಕುಪತ್ರ ವಿತರಿಸಲಾಗಿದೆ. ಈ ಮೂಲಕ ಯಾವುದೇ ಸರ್ಕಾರಿ ಸವಲತ್ತುಗಳನ್ನು ಪಡೆಯಲಾಗದೇ ಪರದಾಡುತ್ತಿದ್ದ 250ಕ್ಕೂ ಹೆಚ್ಚು ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತನೆಯಾಗಿವೆ. ಇದು ಲಂಬಾಣಿಗರ ಸಂಭ್ರಮವನ್ನು ಹೆಚ್ಚಿಸಿದೆ ಎಂಬುವುದರಲ್ಲಿ ತಪ್ಪಿಲ್ಲ.

Published by:Precilla Olivia Dias
First published: