ಕಳೆದ ಕೆಲವು ವರ್ಷಗಳಲ್ಲಿ, ಜಗತ್ತು ಕೊರೊನಾದಂತಹ ವಿನಾಶವನ್ನು ಕಂಡಿದೆ. ಕೊರೊನಾ ವೈರಸ್‌ನಿಂದ ಲಕ್ಷಅಂತರ ಮಂದಿ ಸಾವನ್ನಪ್ಪಿದ್ದಾರೆ. ಇನ್ನು 2019 ರಿಂದ ಪ್ರಾರಂಭವಾದ ಈ ಸಾಂಕ್ರಾಮಿಕದ ಭಯ ಸದ್ಯ ಕೊಂಚ ತಗ್ಗಿದೆ. ಅತ್ತ ವಿಜ್ಞಾನಿಗಳು ಕೊರೊನಾ ವೈರಸ್ ಮಣಿಸಬಲ್ಲ ಲಸಿಕೆಯನ್ನು ಸಿದ್ಧಪಡಿಸಿದ್ದರಿಂದ ಇದೆಲ್ಲವೂ ಸಧ್ಯವಾಗಿದೆ. ಆದರೆ ಇದೆಲ್ಲದರ ಮಧ್ಯೆ, ವಿಶ್ವ ಆರೋಗ್ಯ ಸಂಸ್ಥೆ ಮತ್ತೊಂದು ಹೊಸ ಸಾಂಕ್ರಾಮಿಕದ ಎಚ್ಚರಿಕೆಯನ್ನು ನೀಡಿದೆ, ಇದು ಕರೊನಅಗಿಂತಲೂ ಹೆಚ್ಚು ಅಪಾಯಕಾರಿ ಎಂದು ಬಣ್ಣಿಸಲಾಗಿದೆ.
ಕೊರೊನಾಗಿಂತಲೂ X ಮಾರಣಾಂತಿಕವಾಗಬಹುದೇ?
ಈ ಎಚ್ಚರಿಕೆಯ ನಂತರ, WHO ವೆಬ್‌ಸೈಟ್‌ನಲ್ಲಿ 'ಆದ್ಯತಾ ರೋಗಗಳ' ಪಟ್ಟಿಯಲ್ಲಿ ಹೊಸ ಆಸಕ್ತಿ ಕಂಡುಬಂದಿದೆ. ಎಬೋಲಾ, SARS ಮತ್ತು Zika ಸೇರಿದಂತೆ ಮುಂದಿನ ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ಸಂಭವನೀಯ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ಪಟ್ಟಿಯಲ್ಲಿ, ಒಂದು ಕಾಯಿಲೆಯು ಎಲ್ಲರ ಆತಂಕವನ್ನು ಹೆಚ್ಚಿಸಿದೆ, ಅವರ ಹೆಸರು 'ಡಿಸೀಸ್ ಎಕ್ಸ್'. WHO ವೆಬ್‌ಸೈಟ್ ಪ್ರಕಾರ, ಈ ಪದವು ಗಂಭೀರ ಸಾಂಕ್ರಾಮಿಕವನ್ನು ಪ್ರತಿನಿಧಿಸುತ್ತದೆ ಎನ್ನಲಾಗಿದೆಯಾದರೂ ಈವರೆಗೆ ಅದರ ಬಗ್ಗೆ ಏನೂ ತಿಳಿದಿಲ್ಲ. ಅಂದರೆ ಇದುವರೆಗೂ ಮಾನವನಿಗೆ ಕಾಯಿಲೆ ತಂದಿಲ್ಲ.
ಇದನ್ನೂ ಓದಿ: Siddaramaiah: ಹೂವಿನ ಹಾಸಿಗೆಯಲ್ಲ ಸಿಎಂ ಸ್ಥಾನ! ಸಿದ್ದು ಮುಂದಿದೆ ಸಾಲು-ಸಾಲು ಸವಾಲು!
ವೈರಸ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಯಾವುದಾದರೂ ರೂಪದಲ್ಲಿರಬಹುದು ಈ ಡಿಸೀಸ್ X
ಇದು ಹೊಸ ಅತಿಥಿ ಆಗಿರಬಹುದು. ವೈರಸ್, ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರ ಹೀಗೆ ಯಾವುದಾದರೂ ರೂಪದಲ್ಲಿರಬಹುದು. ಇನ್ನು WHO ಈ ಪದವನ್ನು 2018 ರಲ್ಲಿ ಬಳಸಲು ಪ್ರಾರಂಭಿಸಿತು. ನಂತರ ಒಂದು ವರ್ಷ ಕೊರೊನಾ ಪ್ರಪಂಚದಾದ್ಯಂತ ಹರಡಲು ಪ್ರಾರಂಭಿಸಿತು. ಬಾಲ್ಟಿಮೋರ್‌ನ ಜಾನ್ಸ್ ಹಾಪ್‌ಕಿನ್ಸ್ ಬ್ಲೂಮ್‌ಬರ್ಗ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಇಂಟರ್‌ನ್ಯಾಶನಲ್ ಹೆಲ್ತ್ ವಿಭಾಗದ ಸಂಶೋಧಕ ಪ್ರಣಬ್ ಚಟರ್ಜಿ ಮಾತನಾಡಿ ಡಿಸೀಸ್ ಎಕ್ಸ್ ಹೆಚ್ಚು ದೂರವಿಲ್ಲ ಎನ್ನುವುದು ಅತಿಶಯೋಕ್ತಿಯಾಗುವುದಿಲ್ಲ ಎಂದು ಎಚ್ಚರಿಸಿದ್ದರು.
ಮೊದಲು ಪ್ರಾಣಿಗಳಲ್ಲಿ ಮತ್ತು ನಂತರ ಮನುಷ್ಯರಲ್ಲಿ ಹರಡಬಹುದು
ಕಾಂಬೋಡಿಯಾದಲ್ಲಿ ಇತ್ತೀಚಿನ H5N1 ಹಕ್ಕಿ ಜ್ವರ ಪ್ರಕರಣಗಳು ಕೇವಲ ಒಂದು ಪ್ರಕರಣವಷ್ಟೇ ಆದರೆ ಡಿಸೀಸ್ ರೋಗ X, ಅದರ ಪೂರ್ವವರ್ತಿಗಳಾದ ಎಬೋಲಾ, HIV/AIDS ಅಥವಾ ಕೊರೊನಾ, ಪ್ರಾಯಶಃ ಪ್ರಾಣಿಗಳಲ್ಲಿ ಹುಟ್ಟಿಕೊಳ್ಳಬಹುದು ಮತ್ತು ನಂತರ ಮನುಷ್ಯರಿಗೆ ಹರಡಬಹುದು, ಇದು ತೀವ್ರ ಅನಾರೋಗ್ಯ ಮತ್ತು ಹೆಚ್ಚಿದ ಸಾವನ್ನು ಉಂಟುಮಾಡುತ್ತದೆ.
ಇದನ್ನೂ ಓದಿ: DCM: ಉಪಮುಖ್ಯಮಂತ್ರಿ ಅನ್ನೋದು ಅಧಿಕಾರವಿಲ್ಲದ ಅಲಂಕಾರಿಕ ಹುದ್ದೆಯೇ? ಡಿಸಿಎಂಗೆ ಯಾವ ಪವರ್ ಇರುತ್ತದೆ?
ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್
ಇನ್ನು ಡಿಸೀಸ್ ಎಕ್ಸ್ ಬಗ್ಗೆ ವಿಶ್ವಸಂಸ್ಥೆ ವಾರ್ನಿಂಗ್ ಕೊಟ್ಟಾಗಿನಿಂದ ಈ ರೋಗವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಇಂತಹುದ್ದೊಂದು ಕಾಯಿಲೆ ಬಂದರೆ ಏನಾಗುತ್ತದೆ? ಇದರ ಭೀಕರತೆ ಎಷ್ಟಿರಲಿದೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ಆರಂಭವಾಗಿದೆ.
ಆದರೆ ವಿಜ್ಞಾನಿಗಳು ಮಾತ್ರ ನಾವು ಹೊಸ ಸಾಂಕ್ರಾಮಿಕ ರೋಗಗಳು ಅಪ್ಪಳಿಸುವ ಕಾಲದಲ್ಲಿದ್ದೇವೆ. ಈ ರೋಗಗಳು ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂಡಲಿವೆ. ಇದನ್ನು ಎದುರಿಸುವುದು ಹೇಗೆ ಎಂಬುವುದು ಜನರಿಗೆ ಗೊತ್ತಾಗುವುದಿಲ್ಲ ಎಂದು ಚಿಂತೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ