ಹೆಣ್ಣುಮಕ್ಕಳ (Girls) ಮೇಲೆ ಪದೇ ಪದೇ ಕಿರುಕುಳಗಳು ನಡೆಯುತ್ತನೇ ಇದೆ. ಚಿಕ್ಕ ಮಕ್ಕಳ ಮೇಲೂ ಕಾಮುಕರು ವಿಕೃತಿಯನ್ನು ಮೆರೆಯುತ್ತಾರೆ. ಇಂತಹ ಕ್ರೂರ ಕೆಲಸವನ್ನು ಮಾಡಿದ ತಪ್ಪಿಗೆ ತಕ್ಕ ಶಿಕ್ಷೆಗಾಗಿ (punishment) ನೋಯ್ಡಾದಲ್ಲಿ 65 ವರ್ಷದ ವ್ಯಕ್ತಿಯೊಬ್ಬರು ಈ ವಾರ 'ಡಿಜಿಟಲ್ ಅತ್ಯಾಚಾರ'ದ (Digital Rape) ಅಪರಾಧಕ್ಕೆ ಶಿಕ್ಷೆಗೊಳಗಾದರು. ಈ ಪ್ರಕರಣವು ಎರಡು ವರ್ಷಗಳ ಹಿಂದೆ ನೋಯ್ಡಾ ಸೆಕ್ಟರ್ 29 ರ ಸಲಾರ್‌ಪುರ್ (Salarpur) ಗ್ರಾಮದಲ್ಲಿ ನಡೆದಿತ್ತು. ಅಲ್ಲಿನ ಮೂರು ವರ್ಷದ ಬಾಲಕಿಯ (Girl) ಮೇಲೆ ಡಿಜಿಟಲ್ ಅತ್ಯಾಚಾರ (Digital Rape) ಎಸಗಿದ್ದಕ್ಕಾಗಿ ಈ ವ್ಯಕ್ತಿಗೆ ಸೂರಜ್‌ಪುರ ಸೆಷನ್ಸ್ ನ್ಯಾಯಾಲಯವು ಶಿಕ್ಷೆಯನ್ನು ವಿಧಿಸಿದೆ.
ಈ ಕಾಯಿದೆಯನ್ನು ಐಪಿಸಿ ಸೆಕ್ಷನ್ 375 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ ಅಡಿಯಲ್ಲಿ ಲೈಂಗಿಕ ಅಪರಾಧ ಎಂದು ವರ್ಗೀಕರಿಸಲಾಗಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿಗಾಗಿ, ಮುಂದೆ ಓದಿ.
ಡಿಜಿಟಲ್ ಅತ್ಯಾಚಾರ ಒಂದು ಅಪರಾಧ ಎಂದು ಯಾವಾಗ ಅಂಗೀಕಾರವಾಗಿದೆ?
ದೆಹಲಿಯಲ್ಲಿ ನಿರ್ಭಯಾಳ ಘೋರ ಅತ್ಯಾಚಾರದ ನಂತರ, ಸರ್ಕಾರವು ಡಿಜಿಟಲ್ ಅತ್ಯಾಚಾರವನ್ನು ಲೈಂಗಿಕ ಅಪರಾಧವೆಂದು ಗುರುತಿಸಿತು. 2013 ರಲ್ಲಿ ಭಾರತದ ಅತ್ಯಾಚಾರ ಕಾನೂನುಗಳ ಅಡಿಯಲ್ಲಿ ಅದನ್ನು ಅಪರಾಧ ಎಂದು ಸೇರಿಸಿತು.
ನಿರ್ಭಯಾ ಪ್ರಕರಣ ದಾಖಲಾಗುವ ಮೊದಲು, ಇಂತಹ ಅಪರಾಧಗಳನ್ನು ಕಿರುಕುಳದ ಕೃತ್ಯವೆಂದು ಪರಿಗಣಿಸಲಾಗಿತ್ತು. ಅಂತಹ ಕೃತ್ಯಗಳಿಗೆ ಅತ್ಯಾಚಾರದ ಕಾನೂನು ವ್ಯಾಪ್ತಿಯನ್ನು ಸಹ ನೀಡಲಾಗಿದ್ದಿಲ್ಲ. ಆದರೆ ನಿರ್ಭಯಾ ಪ್ರಕರಣದ ನಂತರ ಸಂಸತ್ತು ಅಂಗೀಕರಿಸಿದ ಈ ಡಿಜಿಟಲ್ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳು ಅದರ ಹೊಸ ವ್ಯಾಖ್ಯಾನವನ್ನು ಗುರುತಿಸಿದವು.
ಏನಿದು ಪ್ರಕರಣ?
ಪಶ್ಚಿಮ ಬಂಗಾಳದ ಮಾಲ್ಡಾ ನಿವಾಸಿ ಅಕ್ಬರ್ ಅಲಿ ತನ್ನ ನೆರೆಯವರ ಮಗಳ ಮೇಲೆ ಹೇಯ ಕೃತ್ಯ ಎಸಗಿದ್ದಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ವೈದ್ಯಕೀಯ ಪುರಾವೆಗಳು ಮತ್ತು ಎಂಟು ಸಾಕ್ಷ್ಯಗಳ ಆಧಾರದ ಮೇಲೆ ಕೇಸ್ ದಾಖಲಾಗಿತ್ತು.
ಅಲಿ ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ 375 ಮತ್ತು ಸೆಕ್ಷನ್ 376 ಅಡಿಯಲ್ಲಿ ಆರೋಪವನ್ನು ಮಾಡಲಾಗಿತ್ತು. 2019 ರಲ್ಲಿ ನೋಯ್ಡಾದಲ್ಲಿರುವ ತನ್ನ ವಿವಾಹಿತ ಮಗಳ ಮನೆಗೆ ಭೇಟಿ ನೀಡಿದಾಗ, ಮೂರು ವರ್ಷದ ಮಗುವಿನ ಮೇಲೆ ಅಲಿ ಡಿಜಿಟಲ್ ಅತ್ಯಾಚಾರವೆಸಗಿದ್ದಾನೆ.
ಇದನ್ನೂ ಓದಿ: Explained: ಅಷ್ಟೊಂದು ಹಿಂಸೆಯಾಗ್ತಿದ್ರೂ ವಿಕಲಚೇತನ ಮಹಿಳೆಯರು ಎಲ್ಲಾ ನೋವು ಸಹಿಸಿಕೊಳ್ತಿರೋದೇಕೆ?
ಜನವರಿ 2019 ರಲ್ಲಿ, ಅಲಿ ತನ್ನ ನೆರೆಹೊರೆಯವರ ಮಗಳಿಗೆ ಮಿಠಾಯಿಗಳನ್ನು ಕೊಡಿಸುವ ಆಮಿಷವೊಡ್ಡಿದ್ದ. ನಂತರ ಆಕೆಯನ್ನು ತನ್ನ ಖಾಲಿ ಮನೆಯೊಳಗೆ ಕರೆದೊಯ್ದು ಡಿಜಿಟಲ್ ಅತ್ಯಾಚಾರ ಎಸಗಿದ್ದಾನೆ. ಮಗು ಅಳುತ್ತಾ ಮನೆಗೆ ಮರಳಿದ ನಂತರ, ಆಕೆಯ ಪೋಷಕರು 65 ವರ್ಷದ ಅಲಿ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ.
ಪೋಷಕರ ದೂರಿನ ಆಧಾರದ ಮೇಲೆ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ಅದರ ಬಳಿಕ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ನಿತಿನ್ ಬಿಷ್ಣೋಯ್ ತಿಳಿಸಿದ್ದಾರೆ.
ಡಿಜಿಟಲ್ ರೇಪ್ ಎಂದರೇನು?
ಡಿಜಿಟಲ್ ರೇಪ್ ಎಂದರೆ ಹುಡುಗಿ ಅಥವಾ ಹುಡುಗನನ್ನು ಇಂಟರ್ನೆಟ್ ಮೂಲಕ ಶೋಷಣೆ ಮಾಡಬೇಕು ಎಂದಲ್ಲ ಎಂದು ಪೊಲೀಸರು ಹೇಳಿದ್ದಾರೆ. ಈ ಪದವು ಡಿಜಿಟ್ ಮತ್ತು ರೇಪ್ ಎಂಬ ಎರಡು ಪದಗಳಿಂದ ಮಾಡಲ್ಪಟ್ಟಿದೆ. ಇಂಗ್ಲಿಷ್ ಅಂಕಿ ಎಂದರೆ ಸಂಖ್ಯೆ ಎಂದರ್ಥ, ಇಂಗ್ಲಿಷ್ ನಿಘಂಟಿನ ಪ್ರಕಾರ ಬೆರಳು, ಹೆಬ್ಬೆರಳು, ಕಾಲ್ಬೆರಳು, ಈ ದೇಹದ ಭಾಗಗಳನ್ನು ಸಹ ಅಂಕೆಯೊಂದಿಗೆ ಸಂಬೋಧಿಸಲಾಗುತ್ತದೆ.
ವಾಸ್ತವವಾಗಿ, ಡಿಜಿಟಲ್ ಅತ್ಯಾಚಾರಕ್ಕೆ ಸಂಬಂಧಿಸಿದ ಘಟನೆಗಳಲ್ಲಿ ಮಹಿಳೆಯ ಖಾಸಗಿ ಭಾಗದಲ್ಲಿ ಬೆರಳುಗಳನ್ನು ಬಳಸಲಾಗುತ್ತದೆ. ನಿರ್ಭಯಾ ಪ್ರಕರಣದ ನಂತರ, ಮಹಿಳೆಯರ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳದ ಘಟನೆಗಳನ್ನು ತಡೆಯಲು ಡಿಜಿಟಲ್ ರೇಪ್‌ನಲ್ಲಿ ಕಠಿಣ ಶಿಕ್ಷೆಯನ್ನು ಸಹ ರೂಪಿಸಲಾಗಿದೆ.
ಭಾರತದಲ್ಲಿ ಡಿಜಿಟಲ್ ಅತ್ಯಾಚಾರದ ಇತರ ಪ್ರಕರಣಗಳ ಉದಾಹರಣೆಗಳು ಇಲ್ಲಿವೆ:
ಕಳೆದ ಆಗಸ್ಟ್‌ನಲ್ಲಿ ನೋಯ್ಡಾದ 50 ವರ್ಷದ ಮನೋಜ್ ಲಾಲಾ ಎಂಬಾತನನ್ನು, ಏಳು ತಿಂಗಳ ಹೆಣ್ಣು ಮಗುವನ್ನು ಡಿಜಿಟಲ್ ಅತ್ಯಾಚಾರ ಮಾಡಿದ್ದಾಕ್ಕಾಗಿ ಬಂಧಿಸಲಾಯಿತು. ಇನ್ನೊಂದು ಪ್ರಕರಣದಲ್ಲಿ, ನೋಯ್ಡಾದ ಒಬ್ಬ ತಂದೆ ಜೂನ್ 2022 ರಲ್ಲಿ ತನ್ನ ಐದು ವರ್ಷದ ಮಗುವಿನ ಮೇಲೆ ಡಿಜಿಟಲ್ ಅತ್ಯಾಚಾರವನ್ನು ಮಾಡಿದ್ದಾನೆ ಎಂದು ಆರೋಪ ಹೊರಿಸಲಾಯಿತು.
ಆಕೆಯ ತಾಯಿಯು ನೀಡಿದ ದೂರಿನ ನಂತರ ಆ ಪ್ರಕರಣವನ್ನು ಎಫ್‌ಐಆರ್ ಮಾಡಿ ಅತ್ಯಾಚಾರಿಯನ್ನು ಬಂಧಿಸಲಾಯಿತು. 2021 ರಲ್ಲಿ, 80 ವರ್ಷದ ಕಲಾವಿದ ಏಳು ವರ್ಷಗಳ ಕಾಲ ಬಾಲಕಿಯ ಮೇಲೆ ನಿರಂತರವಾಗಿ ಡಿಜಿಟಲ್ ಅತ್ಯಾಚಾರವನ್ನು ಮಾಡಿದ್ದ ಎಂಬ ಆರೋಪ ಹೊರಿಸಲಾಗಿತ್ತು.
ಇದನ್ನೂ ಓದಿ: Explainer: ಇಡೀ ಕುಟುಂಬದ ಹತ್ಯೆ ಬಳಿಕ ಗ್ಯಾಂಗ್ರೇಪ್, ದೀರ್ಘಕಾಲದ ಹೋರಾಡಿದ್ರೂ ದೋಷಿಗಳ ಬಿಡುಗಡೆ: ಯಾರು ಈ ಬಿಲ್ಕಿಸ್ ಬಾನೊ?
ಭಾರತದಲ್ಲಿ ಅತ್ಯಾಚಾರದ ಕೆಲವು ಅಂಕಿಅಂಶಗಳು ಇಲ್ಲಿವೆ:
ಈ ವಾರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಬಿಡುಗಡೆ ಮಾಡಿದ ಕ್ರೈಮ್ ಇನ್ ಇಂಡಿಯಾ 2021 ವರದಿಯ ಪ್ರಕಾರ, ಭಾರತದಲ್ಲಿ 31,000 ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ 1,250 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ ಹರಿಯಾಣದಲ್ಲಿ ಸುಮಾರು 1700, ಮತ್ತು ಉತ್ತರ ಪ್ರದೇಶದಲ್ಲಿ 2021 ರಲ್ಲಿ 2,845 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ