Explainer: ಚೀನಾ-ತೈವಾನ್ ನಡುವಿನ ಕಿತ್ತಾಟಕ್ಕೆ ಕಾರಣವೇನು..? ಭಾರತಕ್ಕೆ ಪರಿಣಾಮಗಳೇನು..? ಇಲ್ಲಿದೆ ವಿವರ..

What is China vs Taiwan Conflict: ಈ ದ್ವೀಪವು ಪೂರ್ವ ಚೀನಾ ಸಮುದ್ರದಲ್ಲಿ, ಹಾಂಗ್ ಕಾಂಗ್‌ನ ಈಶಾನ್ಯದಲ್ಲಿ, ಫಿಲಿಪೈನ್ಸ್‌ನ ಉತ್ತರಕ್ಕೆ ಮತ್ತು ದಕ್ಷಿಣ ಕೊರಿಯಾದ ದಕ್ಷಿಣಕ್ಕೆ ಮತ್ತು ಜಪಾನ್‌ನ ನೈರುತ್ಯದಲ್ಲಿದೆ. ತೈವಾನ್ ಮತ್ತು ಸುತ್ತಮುತ್ತ ನಡೆಯುವ ಘಟನೆಗಳು, ಬೆಳವಣಿಗೆಗಳ ಬಗ್ಗೆ ಪೂರ್ವ ಏಷ್ಯಾದ ಎಲ್ಲ ರಾಷ್ಟ್ರಗಳು ಹೆಚ್ಚು ಕಾಳಜಿ ಹೊಂದಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಆರಂಭವಾದ ದಿನವನ್ನು ಸಂಭ್ರಮಾಚರಿಸಲು ಚೀನಾ ತನ್ನ ರಾಷ್ಟ್ರೀಯ ದಿನವನ್ನಾಗಿ ಅಕ್ಟೋಬರ್ 1ರಂದು ಆಚರಣೆ ಮಾಡಿತು. ಅಂದಿನಿಂದಲೂ ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದೆ. 72ನೇ ವಾರ್ಷಿಕೋತ್ಸವದ ಆಚರಣೆಯೊಂದಿಗೆ, ಚೀನಾ ತೈವಾನ್‌ನ ವಾಯು ರಕ್ಷಣಾ ಗುರುತಿನ ವಲಯಕ್ಕೆ 100ಕ್ಕೂ ಹೆಚ್ಚು ಫೈಟರ್ ಜೆಟ್‌ಗಳನ್ನು ಹಾರಿಸಿತು. ಇದು ತೈವಾನ್‌ಗೆ ಆತಂಕ ಉಂಟಾಯಿತು ಮತ್ತು ಚೀನಾ ತನ್ನ ಬಲದಿಂದ ದ್ವೀಪ ರಾಷ್ಟ್ರವಾದ ತೈವಾನ್‌ ವಶಪಡಿಸಿಕೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಪ್ರಪಂಚದಾದ್ಯಂತ ಎಚ್ಚರಿಕೆ ನೀಡಿತು.

  ತೈವಾನ್‌ ಅನ್ನು ಸ್ವತ್ರಂತ್ರ ರಾಷ್ಟ್ರ ಎಂದು ಇತರ ದೇಶಗಳು ಹೆಚ್ಚಾಗಿ ಗುರುತಿಸದಿದ್ದರೂ, ಸ್ವಯಂ-ಆಡಳಿತದ ತೈವಾನ್ ತನ್ನನ್ನು ಸ್ವತಂತ್ರ ರಾಷ್ಟ್ರಕ್ಕಿಂತ ಕಡಿಮೆಯಿಲ್ಲವೆಂದು ಪರಿಗಣಿಸುತ್ತದೆ. ಮತ್ತು ಸ್ವಾತಂತ್ರ್ಯದ ಪರವಾದ ಅಧ್ಯಕ್ಷ ಸಾಯ್ ಇಂಗ್-ವೆನ್ ಸೇರಿದಂತೆ ತೈವಾನ್‌ನ ನಾಯಕರು ಚೀನಾದ "ಪುನರ್ಮಿಲನ" ಗುರಿಯ ವಿರುದ್ಧ ತನ್ನ ಸಾರ್ವಭೌಮತ್ವವನ್ನು ರಕ್ಷಿಸಲು ಪ್ರತಿಜ್ಞೆ ಮಾಡಿದ್ದಾರೆ.

  ಆದರೆ ಚೀನಾದ ಆಕ್ರಮಣದ ವಿರುದ್ಧ ರಕ್ಷಣೆಗಾಗಿ ತೈವಾನ್ ಸಂಪೂರ್ಣವಾಗಿ ಯುಎಸ್ ಮೇಲೆ ಅವಲಂಬಿತವಾಗಿದೆ. ಮತ್ತು ಅದಕ್ಕಾಗಿಯೇ ಚೀನಾ ಹಾಗೂ ತೈವಾನ್ ನಡುವಿನ ಸೇನಾ ಉದ್ವಿಗ್ನತೆಯ ಪ್ರತಿ ಹೆಚ್ಚಳವು ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಈಗಾಗಲೇ ಹದಗೆಟ್ಟಿರುವ ಸಂಬಂಧದಲ್ಲಿ ಇನ್ನಷ್ಟು ಹೆಚ್ಚು ಹಗೆತನ ಉಂಟುಮಾಡುತ್ತದೆ.

  1949: ಪಿಆರ್‌ಸಿ (People Republic of China) ಸ್ಥಾಪನೆ:

  ಚೀನಾದ ಪೂರ್ವ ಕರಾವಳಿಯಲ್ಲಿರುವ ಒಂದು ಸಣ್ಣ ದ್ವೀಪವಾದ ತೈವಾನ್‌ ಅನ್ನು ಈ ಮೊದಲು ಫಾರ್ಮೋಸಾ ಎಂದು ಕರೆಯಲಾಗುತ್ತಿತ್ತು. 1949ರ ಕಮ್ಯುನಿಸ್ಟರ ವಿಜಯದ ನಂತರ ಕುಮಿಂಟಾಂಗ್ ಸರ್ಕಾರದ ಚೀನಾದ ಗಣರಾಜ್ಯದವರು ಇಂದಿನ ತೈವಾನ್‌ ಅನ್ನು ಹಿಮ್ಮೆಟ್ಟಿದರು - ಮತ್ತು ನಂತರ ಇದು ರಿಪಬ್ಲಿಕ್ ಆಫ್ ಚೀನಾ (RoC - Republic of China) ಆಗಿ ಮುಂದುವರೆದಿದೆ.

  ಈ ದ್ವೀಪವು ಪೂರ್ವ ಚೀನಾ ಸಮುದ್ರದಲ್ಲಿ, ಹಾಂಗ್ ಕಾಂಗ್‌ನ ಈಶಾನ್ಯದಲ್ಲಿ, ಫಿಲಿಪೈನ್ಸ್‌ನ ಉತ್ತರಕ್ಕೆ ಮತ್ತು ದಕ್ಷಿಣ ಕೊರಿಯಾದ ದಕ್ಷಿಣಕ್ಕೆ ಮತ್ತು ಜಪಾನ್‌ನ ನೈರುತ್ಯದಲ್ಲಿದೆ. ತೈವಾನ್ ಮತ್ತು ಸುತ್ತಮುತ್ತ ನಡೆಯುವ ಘಟನೆಗಳು, ಬೆಳವಣಿಗೆಗಳ ಬಗ್ಗೆ ಪೂರ್ವ ಏಷ್ಯಾದ ಎಲ್ಲ ರಾಷ್ಟ್ರಗಳು ಹೆಚ್ಚು ಕಾಳಜಿ ಹೊಂದಿದೆ.

  ತೈವಾನ್ ಅಕ್ಟೋಬರ್ 10 ಅನ್ನು ತನ್ನ ರಾಷ್ಟ್ರೀಯ ದಿನವನ್ನಾಗಿ ಆಚರಿಸುತ್ತದೆ. 1911ರಲ್ಲಿ ಈ ದಿನವೇ ಮಂಚು (Manchu) ಸೈನ್ಯದ ಕೆಲವು ವಿಭಾಗಗಳು ದಂಗೆ ಎದ್ದವು. ಇದು ಅಂತಿಮವಾಗಿ ಕ್ವಿಂಗ್ ರಾಜವಂಶವನ್ನು ಉರುಳಿಸಲು ಮತ್ತು 4,000 ವರ್ಷಗಳ ರಾಜಪ್ರಭುತ್ವದ ಅಂತ್ಯಕ್ಕೆ ಕಾರಣವಾಯಿತು.

  RoCಯನ್ನು ಡಿಸೆಂಬರ್ 29, 1911 ರಂದು ಘೋಷಿಸಲಾಯಿತು, ಮತ್ತು ಇದು 1920ರ ದಶಕದಲ್ಲಿ ಕುಮಿಂಟಾಂಗ್ (KMT) ಪಕ್ಷದ ಸಂಸ್ಥಾಪಕರಾದ ಡಾ. ಸನ್ ಯಾಟ್-ಸೆನ್ ನೇತೃತ್ವದಲ್ಲಿ ತನ್ನ ವಿಸ್ತರಣೆ ಕಂಡುಕೊಂಡಿತು.

  ಸನ್ ಯಾಟ್-ಸೆನ್‌ ನಂತರ ಜನರಲ್ ಚಿಯಾಂಗ್ ಕೈ-ಶೆಕ್ ಉತ್ತರಾಧಿಕಾರಿಯಾದರು. ಕೆಎಂಟಿಯೊಂದಿಗೆ ಮೈತ್ರಿಯ ಭಾಗವಾಗಿದ್ದ ಚೀನೀ ಕಮ್ಯುನಿಸ್ಟರ ವಿರುದ್ಧದ ಕ್ರಮಗಳು ಅಂತರ್‌ಯುದ್ಧವನ್ನು ಪ್ರಚೋದಿಸಿತು ಮತ್ತು ಕಮ್ಯುನಿಸ್ಟ್‌ಗಳ ವಿಜಯದಲ್ಲಿ ಕೊನೆಗೊಂಡಿತು ಮತ್ತು ಚಿಯಾಂಗ್ ಹಾಗೂ ಕೆಎಂಟಿಯು ತೈವಾನ್‌ಗೆ ಹಿಮ್ಮೆಟ್ಟಿತು.

  1949ರಲ್ಲಿ ಸ್ಥಾಪನೆಯಾದಾಗಿನಿಂದ, PRC ತೈವಾನ್ ಅನ್ನು ಮುಖ್ಯ ಭೂಭಾಗದೊಂದಿಗೆ ಮತ್ತೆ ಸಂಯೋಜಿಸಬೇಕು ಎಂದು ನಂಬಿದೆ. ಆದರೆ RoC ಒಂದು "ಸ್ವತಂತ್ರ" ದೇಶವಾಗಿ ಉಳಿದಿದೆ. ಶೀತಲ ಸಮರದ ಸಮಯದಲ್ಲಿ ಚೀನಾದ ವಿರುದ್ಧ RoC 1971ರವರೆಗೆ ವಿಶ್ವಸಂಸ್ಥೆಯಲ್ಲಿ ಗುರುತಿಸಲ್ಪಟ್ಟ ಏಕೈಕ 'ಚೀನಾ' ಆಗಿತ್ತು.

  ಆಗ ಅಮೆರಿಕ ಅಧ್ಯಕ್ಷ ರಿಚರ್ಡ್‌ ನಿಕ್ಸನ್‌ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಹೆನ್ರಿ ಕಿಸ್ಸಿಂಜರ್ ರಹಸ್ಯ ರಾಜತಾಂತ್ರಿಕತೆಯ ಮೂಲಕ ಚೀನಾದೊಂದಿಗೆ ಸಂಬಂಧವನ್ನು ಪ್ರಾರಂಭಿಸಿತು.

  ಯುಎಸ್ ತೈವಾನ್‌ನ ಸ್ವಾತಂತ್ರ್ಯವನ್ನು ಬೆಂಬಲಿಸುತ್ತದೆ, ತೈಪೆಯೊಂದಿಗೂ (ದ್ವಿಪಕ್ಷೀಯ) ಸಂಬಂಧ ಉಳಿಸಿಕೊಂಡಿದ್ದು ಮತ್ತು ಅದಕ್ಕೆ ಶಸ್ತ್ರಾಸ್ತ್ರಗಳನ್ನು ಮಾರುತ್ತದೆ. ಆದರೆ ಅಧಿಕೃತವಾಗಿ PRCಯ "ಒಂದು ಚೀನಾ ನೀತಿ"ಗೆ ಚಂದಾದಾರರಾಗಿದ್ದಾರೆ. ಅಂದರೆ ಕೇವಲ ಒಂದು ಕಾನೂನುಬದ್ಧ ಚೀನೀ ಸರ್ಕಾರವಿದೆ. ಈ ಹಿನ್ನೆಲೆ ಕೇವಲ 15, ತೀರಾ ಚಿಕ್ಕದಾದ ದೇಶಗಳು ಮಾತ್ರ ತೈವಾನ್ ಅನ್ನು ಅಧಿಕೃತವಾಗಿ ಗುರುತಿಸುತ್ತವೆ.

  ಚೀನಾ-ತೈವಾನ್ ಉದ್ವಿಗ್ನತೆ:

  1954-55ರಲ್ಲಿ, ಮತ್ತು 1958ರಲ್ಲಿ, PRC ತೈವಾನ್‌ನ ನಿಯಂತ್ರಣದಲ್ಲಿದ್ದ ಜಿನ್‌ಮೆನ್, ಮಜು ಮತ್ತು ಡಚೆನ್‌ ದ್ವೀಪಗಳಿಗೆ ಬಾಂಬ್ ಸ್ಫೋಟಿಸಿತು. ನಂತರ ತೈವಾನ್‌ ರಕ್ಷಣೆಗೆ ಧಾವಿಸಿದ ಅಮೆರಿಕ, ROC ಪ್ರದೇಶ ರಕ್ಷಿಸಲು ಫಾರ್ಮೋಸಾ ನಿರ್ಣಯವನ್ನು ಅಮೆರಿಕ ಕಾಂಗ್ರೆಸ್‌ ಅಂಗೀಕರಿಸಿತು. ಅಮೆರಿಕ ಅಧ್ಯಕ್ಷ ಡ್ವೈಟ್ ಡಿ ಐಸೆನ್‌ಹೋವರ್‌ಗೆ ಅಧಿಕೃತವಾಗಿ ರಕ್ಷಣೆ ಮಾಡುವ ನಿರ್ಣಯಕ್ಕೆ ಅಂಗೀಕಾರ ಹಾಕಿತು.

  1955ರಲ್ಲಿ, ಚೀನಾದ ಪ್ರೀಮಿಯರ್ ಝೌ ಎನ್-ಲಾಯ್ ಅವರು ಬಾಂಡುಂಗ್ ಸಮ್ಮೇಳನದಲ್ಲಿ ಯುಎಸ್ ಜೊತೆ ಮಾತುಕತೆ ನಡೆಸಲು ಬಯಸುವುದಾಗಿ ಘೋಷಿಸಿದರು. ಆದರೆ 1958ರಲ್ಲಿ ಲೆಬನಾನ್‌ನಲ್ಲಿ ಅಂತರ್ಯುದ್ಧ ಆರಂಭವಾದಾಗ, ಚೀನಾ ತೈವಾನ್‌ ಮೇಲೆ ಬಾಂಬ್‌ ದಾಳಿಯನ್ನು ಮತ್ತೆ ಪುನಾರಂಭಿಸಿತು. ಇದು ಅಮೆರಿಕವನ್ನು ಮತ್ತಷ್ಟು ಪ್ರಚೋದಿಸಿತು. ನಂತರ PRC ಮತ್ತು RoC ಪರ್ಯಾಯ ದಿನಗಳಲ್ಲಿ ಪರಸ್ಪರರ ಸೈನಿಕರ ಮೇಲೆ ಬಾಂಬ್ ಸ್ಫೋಟಿಸುತ್ತಿದ್ದ ಘಟನೆಗಳು 1971ರವರೆಗೂ ಮುಂದುವರೆಯಿತು.

  ಇನ್ನು, 1995-96ರಲ್ಲಿ, ಚೀನಾ - ತೈವಾನ್‌ ಕಿತ್ತಾಟ ಇನ್ನೂ ಗಂಭೀರ ಸ್ವರೂಪ ಪಡೆದಿತ್ತು. ಚೀನಾ ತೈವಾನ್ ಸುತ್ತಮುತ್ತಲಿನ ಸಮುದ್ರಗಳಲ್ಲಿ ಕ್ಷಿಪಣಿಗಳನ್ನು ಪರೀಕ್ಷಿಸಲು ಪ್ರಾರಂಭಿಸಿದ ಬಳಿಕ ವಿಯೆಟ್ನಾಂ ಯುದ್ಧದ ನಂತರ ಈ ಪ್ರದೇಶದಲ್ಲಿ ಅತಿದೊಡ್ಡ ಯುಎಸ್ ಸೇನೆಯ ಸಜ್ಜುಗೊಳಿಸುವಿಕೆಯನ್ನು ಪ್ರಚೋದಿಸಿತು.

  ಇದರಿಂದ ತೈವಾನ್‌ ಅಧ್ಯಕ್ಷ ಲೀ ಟೆಂಗ್-ಹುಯಿ 1996ರ ಮರು ಚುನಾವಣೆಯಲ್ಲಿ ಗೆಲ್ಲಲು ಕಾರಣವಾಯಿತು. ಚೀನಿಯರು ಇವರನ್ನು ಸ್ವಾತಂತ್ರ್ಯ-ಪರ ನಾಯಕರಂತೆ ನೋಡಿದರು.

  China wages war against taiwan

  ಸ್ವತಂತ್ರ ರಾಜಕೀಯ:

  1975ರಲ್ಲಿ, ಚಿಯಾಂಗ್ ಕೈ-ಶೆಕ್ ನಿಧನರಾದರು, ನಂತರ ಸಮರ ಕಾನೂನನ್ನು ತೆಗೆದುಹಾಕಲಾಯಿತು, ಮತ್ತು ತೈವಾನ್ ತನ್ನ ಮೊದಲ ಪ್ರಜಾಪ್ರಭುತ್ವ ಸುಧಾರಣೆಗಳನ್ನು ಪಡೆಯಿತು. 1990ರ ದಶಕದಿಂದ ಆರಂಭಗೊಂಡು, ಕ್ಷಿಪಣಿ ಬಿಕ್ಕಟ್ಟಿನ ಹೊರತಾಗಿಯೂ, PRC ಮತ್ತು RoC ನಡುವಿನ ಸಂಬಂಧಗಳು ಸುಧಾರಿಸಿದವು ಮತ್ತು ವ್ಯಾಪಾರ ಸಂಬಂಧಗಳನ್ನು ಸ್ಥಾಪಿಸಲಾಯಿತು. 1999ರಲ್ಲಿ ಬ್ರಿಟಿಷರು ಹಾಂಕಾಂಗ್‌ನಿಂದ ನಿರ್ಗಮಿಸಲು ಸಿದ್ಧರಾದಾಗ, "ಒಂದು ಚೀನಾ, ಎರಡು ವ್ಯವಸ್ಥೆಗಳು" ಪರಿಹಾರವನ್ನು ತೈವಾನ್‌ಗೂ ನೀಡಲಾಯಿತು, ಆದರೆ ಅದನ್ನು ತೈವಾನ್‌ ತಿರಸ್ಕರಿಸಿತು.

  2000ರಲ್ಲಿ, ತೈವಾನ್ ರಾಷ್ಟ್ರೀಯವಾದಿ ಡೆಮಾಕ್ರಟಿಕ್ ಪ್ರಗತಿಪರ ಪಕ್ಷ (DPP) ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಾಗ, ತೈವಾನ್ ತನ್ನ ಮೊದಲ KMT ಅಲ್ಲದ ಸರ್ಕಾರವನ್ನು ಪಡೆಯಿತು. ಬಳಿಕ 2004ರಲ್ಲಿ, ಚೀನಾ ತೈವಾನ್ ಗುರಿಯಾಗಿಟ್ಟುಕೊಂಡು ಪಕ್ಷಾಂತರ ವಿರೋಧಿ ಕಾನೂನನ್ನು ರೂಪಿಸಲು ಪ್ರಾರಂಭಿಸಿತು. ಆದರೂ, ವ್ಯಾಪಾರ ಮತ್ತು ಸಂಪರ್ಕವು ಸುಧಾರಿಸುತ್ತಲೇ ಇತ್ತು.

  ಇಂದು, ತೈವಾನ್‌ನ ರಾಜಕೀಯದಲ್ಲಿ ಎರಡು ದೊಡ್ಡ ಪಕ್ಷಗಳು ಅಂದರೆ DPP ಮತ್ತು KMT. ವಿಶಾಲವಾಗಿ ದ್ವೀಪದ ಹಕ್ಕಾ ನಿವಾಸಿಗಳು ಮತ್ತು ಅಲ್ಪಸಂಖ್ಯಾತ ಮುಖ್ಯ ಭೂಭಾಗ ಚೀನಿಯರು. 2016ರ ತೈವಾನ್‌ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಸಾಯ್‌ ಇಂಗ್‌ ವೆನ್‌ ಆಯ್ಕೆ ಬಳಿಕ ಸ್ವತಂತ್ರ ಪರವಾದ ಘಟ್ಟದ ಆರಂಭವನ್ನು ಗುರುತಿಸಿತು, ಮತ್ತು ಚೀನಾದೊಂದಿಗಿನ ಪ್ರಸ್ತುತ ಉದ್ವಿಗ್ನತೆಗಳು 2020ರಲ್ಲಿ ಮರು ಚುನಾವಣೆಯೊಂದಿಗೆ ಹೊಂದಿಕೆಯಾಯಿತು.

  ತೈವಾನ್ ಈಗ ಚೀನಾದಲ್ಲಿ ಹೂಡಿಕೆಗಳನ್ನು ಒಳಗೊಂಡಂತೆ ಬೃಹತ್ ಆರ್ಥಿಕ ಹಿತಾಸಕ್ತಿಗಳನ್ನು ಹೊಂದಿದೆ ಮತ್ತು ಸ್ವಾತಂತ್ರ್ಯ ಪರ ನಾಯಕರು ಇದು ತಮ್ಮ ಗುರಿಗಳಿಗೆ ಅಡ್ಡಿಯಾಗಬಹುದು ಎಂದು ಚಿಂತಿಸುತ್ತಾರೆ. ಇನ್ನೊಂದೆಡೆ, ಆರ್ಥಿಕ ಅವಲಂಬನೆ ಮತ್ತು ಜನರಿಂದ ಜನರ ಸಂಪರ್ಕವನ್ನು ಹೆಚ್ಚಿಸುವುದು ಸ್ವಾತಂತ್ರ್ಯ ಪರ ಲಾಬಿಗಳನ್ನು ಮತ್ತಷ್ಟು ಹೆಚ್ಚಿಸಬಹುದು ಎಂದು ರಾಜಮನೆತನದ ಮರುಸಂಘಟನೆ ಪರವಾದ ವಿಭಾಗಗಳು ಮತ್ತು ಚೀನಾ ಕಾಳಜಿ ವ್ಯಕ್ತಪಡಿಸಿದೆ.

  ಪ್ರಸ್ತುತ ಉದ್ವಿಗ್ನತೆಗಳು:

  ಕಳೆದ ವರ್ಷ, ಕೋವಿಡ್ ಮತ್ತು ವ್ಯಾಪಾರದ ಮೇಲೆ ಯುಎಸ್-ಚೀನಾ ಸಂಬಂಧಗಳು ಹದಗೆಡುತ್ತಿರುವಾಗ, ವಿದೇಶಾಂಗ ಇಲಾಖೆ ತನ್ನ ಅತ್ಯುನ್ನತ ಶ್ರೇಣಿಯ ನಿಯೋಗವನ್ನು ತೈಪೆಗೆ ಕಳುಹಿಸಿತು. ಭೇಟಿಯ ಸಮಯದಲ್ಲಿ, ಚೀನಾದವರು ತೈವಾನ್ ಜಲಸಂಧಿಯಲ್ಲಿ (Taiwan Strait) ಮಿಲಿಟರಿ ವ್ಯಾಯಾಮ ನಡೆಸಿದರು. ಇದು ತೈವಾನ್ ಅನ್ನು ಚೀನಾದ ಮುಖ್ಯ ಭೂಭಾಗದಿಂದ ಪ್ರತ್ಯೇಕಿಸುತ್ತದೆ.

  ಅಕ್ಟೋಬರ್ 2020ರಲ್ಲಿ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ PLAಗೆ ಯುದ್ಧಕ್ಕೆ ಸಿದ್ಧರಾಗುವಂತೆ ಕೇಳಿಕೊಂಡರು. ಇದು ತೈವಾನ್‌ನಲ್ಲಿ ಎಚ್ಚರಿಕೆಯನ್ನು ಪ್ರಚೋದಿಸಿತು, ಅದನ್ನು ತೆರೆದ ಬೆದರಿಕೆ ಎಂದು ಅರ್ಥೈಸಿದರು.

  Taiwan citizens protesting against china

  ಇನ್ನೊಂದೆಡೆ, ಅಮೆರಿಕ ನೂತನ ಅಧ್ಯಕ್ಷ ಜೋ ಬೈಡೆನ್‌ (American President Joe Biden) ಆಡಳಿತದ ಆರಂಭದಲ್ಲಿ, ತೈವಾನ್‌ಗೆ ಬೆಂಬಲದ ಬದ್ಧತೆ ಘೋಷಿಸಿದ ಬಳಿಕ ಚೀನೀ ಯುದ್ಧ ವಿಮಾನಗಳ ಆಕ್ರಮಣದ ಬಗ್ಗೆ ತೈಪೆ ಎಚ್ಚರಿಕೆ ನೀಡಿತು. ಏಪ್ರಿಲ್‌ನಲ್ಲಿ, ತೈವಾನ್ ತನ್ನ ವಾಯು ರಕ್ಷಣಾ ವಲಯದಲ್ಲಿ ಚೀನೀ ಜೆಟ್‌ಗಳನ್ನು ವರದಿ ಮಾಡಿತು. ಜುಲೈನಲ್ಲಿ, ಕ್ಸಿ ಜಿನ್‌ಪಿಂಗ್‌ ತೈವಾನೀಯರ ಯಾವುದೇ ಸ್ವಾತಂತ್ರ್ಯ ಪರವಾದ ನಡೆಯನ್ನು ನಾಶ ಮಾಡುವುದಾಗಿ ಎಚ್ಚರಿಸಿದರು.

  ಈ ತಿಂಗಳ ಆರಂಭದಲ್ಲಿ, ಚೀನಾದ ಜೆಟ್‌ಗಳು ಮರಳಿ ಬಂದಂತೆ, ಚೀನಾ ಈಗಾಗಲೇ ತೈವಾನ್ ಮೇಲೆ ಆಕ್ರಮಣ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ 2025ರ ವೇಳೆಗೆ "ವೆಚ್ಚ ಮತ್ತು ಕಡಿತವನ್ನು ಅದರ ಕನಿಷ್ಠ ಮಟ್ಟಕ್ಕೆ ತರಲು" ಸಾಧ್ಯವಾಗುತ್ತದೆ ಎಂದು ತೈವಾನ್‌ನ ರಕ್ಷಣಾ ಸಚಿವ ಚಿಯು ಕುಯೋ-ಚೆಂಗ್ ಸಂಸತ್ತಿನಲ್ಲಿ ಹೇಳಿದರು.

  ಇನ್ನು, ಅಕ್ಟೋಬರ್ 10 ರಂದು ಮಾಡಿದ ಭಾಷಣದಲ್ಲಿ, ಕ್ಸಿ ಜಿನ್‌ಪಿಂಗ್‌ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವ ಭಯವನ್ನು ನಿವಾರಿಸುವ ಯತ್ನ ಮಾಡಿದರು. ಮತ್ತು "ಶಾಂತಿಯುತ ಪುನರ್ಮಿಲನ" ದ ಬಗ್ಗೆ ಮಾತನಾಡಿದರು. ಆದರೆ "ತಾಯ್ನಾಡಿನ ಸಂಪೂರ್ಣ ಪುನರ್ಮಿಲನದ ಐತಿಹಾಸಿಕ ಕಾರ್ಯ ಖಂಡಿತವಾಗಿಯೂ ನೆರವೇರುತ್ತದೆ" ಎಂದೂ ಈ ವೇಳೆ ಒತ್ತಿ ಹೇಳಿದರು. ಅದೇ ದಿನ, ತೈವಾನ್ ಅಧ್ಯಕ್ಷರು ತನ್ನ ಸರ್ಕಾರವು "ದುಡುಕಿನಿಂದ ವರ್ತಿಸುವುದಿಲ್ಲ", ಆದರೆ ತೈವಾನ್ ಜನರು "ಒತ್ತಡಕ್ಕೆ ತಲೆಬಾಗುವುದಿಲ್ಲ" ಎಂದು ಹೇಳಿದರು.

  ಯುಎಸ್‌ಗೆ ಸವಾಲು:

  ಚೀನಾ - ತೈವಾನ್‌ ನಡುವೆ ಉದ್ವಿಗ್ನತೆ ಹೆಚ್ಚಾದಂತೆ ವಿಶ್ವವು ಅಮೆರಿಕದತ್ತ ನೋಡುತ್ತಿದೆ. ಆದರೆ, ಅಫ್ಘಾನಿಸ್ತಾನದಲ್ಲಿ ತನ್ನ ನಿರ್ಗಮನದ ನಂತರ ಯುಎಸ್‌ಗೆ ವಿಶ್ವದ ಅಗ್ರಮಾನ್ಯ ಶಕ್ತಿಯ ಸ್ಥಾನಮಾನವನ್ನು ಕಳೆದುಕೊಳ್ಳುವ ಚಿಂತೆ ಎದುರಾಗಿದೆ. ಪೂರ್ವ ಮತ್ತು ಆಗ್ನೇಯ ಏಷ್ಯಾದಲ್ಲಿ ಈಗಾಗಲೇ ಜಪಾನ್, ದಕ್ಷಿಣ ಕೊರಿಯಾ ಮತ್ತು ಫಿಲಿಪೈನ್ಸ್ ಸೇರಿದಂತೆ ಹಲವಾರು ದೇಶಗಳು, ಯುಎಸ್‌ನ ರಕ್ಷಣಾತ್ಮಕ ಬೆಂಬಲದ ಅಡಿಯಲ್ಲಿ ಆಶ್ರಯ ಪಡೆದಿದ್ದು, ಈ ರಾಷ್ಟ್ರಗಳೂ ಅಮೆರಿಕದ ಮುಂದಿನ ನಡೆಯತ್ತ ಎದುರು ನೋಡುತ್ತಿದೆ.

  ಯುಎಸ್‌ ಅಧ್ಯಕ್ಷ ಜೋ ಬೈಡೆನ್‌ ಇದುವರೆಗೆ ತೈವಾನ್‌ಗೆ ಬೆಂಬಲ ವಾಗ್ದಾನ ಮಾತ್ರ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಕ್ಸಿಯೊಂದಿಗೆ ಬೈಡೆನ್‌ ಮಾತನಾಡಿದ ನಂತರ, ಚೀನಾ "ತೈವಾನ್ ಒಪ್ಪಂದ" ವನ್ನು ಪಾಲಿಸಲು ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು. ಬೀಜಿಂಗ್ ತೈವಾನ್ ಮೇಲೆ ಆಕ್ರಮಣ ಮಾಡುವಂತಿಲ್ಲ ಎಂಬ ಷರತ್ತಿನ ಮೇಲೆ ಚೀನಾದ "ಒನ್ ಚೀನಾ ನೀತಿ" ಗೆ ಯುಎಸ್ ಬೆಂಬಲವಿರುತ್ತದೆ ಎಂದೂ ಹೇಳಿದೆ.

  China vs Taiwan dispute
  China - Taiwan flags


  ಯುಎಸ್, ಯುಕೆ ಮತ್ತು ಆಸ್ಟ್ರೇಲಿಯಾ ನಡುವಿನ ಆಕಸ್ (AUKUS) ಒಪ್ಪಂದವು ಆಸ್ಟ್ರೇಲಿಯಾ ಪರಮಾಣು ಜಲಾಂತರ್ಗಾಮಿ ನೌಕೆಗಳನ್ನು ಪೂರೈಸುತ್ತದೆ. ಇದು ಇಂಡೋ-ಪೆಸಿಫಿಕ್‌ನ ಭದ್ರತಾ ಡೈನಾಮಿಕ್ಸ್‌ಗೆ ಹೊಸ ಆಯಾಮ ನೀಡಿದೆ. ತೈವಾನ್ ಈ ಒಪ್ಪಂದವನ್ನು ಸ್ವಾಗತಿಸಿದೆ. ಆದರೆ ಚೀನಾ ಇದನ್ನು ಪ್ರಾದೇಶಿಕ ಶಾಂತಿಯನ್ನು ಗಂಭೀರವಾಗಿ ಹಾಳುಮಾಡುತ್ತಿದೆ ಎಂದು ಖಂಡಿಸಿದೆ.

  ಭಾರತದ ಮೇಲೆ ಪರಿಣಾಮಗಳೇನು..?

  LACಯಲ್ಲಿ ಭಾರತವು ಚೀನಾದೊಂದಿಗೆ ತನ್ನದೇ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಅದು ತನ್ನ ಒಂದು ಚೀನಾ ನೀತಿಯನ್ನು ಪರಿಶೀಲಿಸಬೇಕೆಂಬ ಸಲಹೆಗಳಿವೆ. ಸದ್ಯ, ಭಾರತ ಒನ್‌ ಚೀನಾ ನೀತಿಗೆ ಬೆಂಬಲ ನೀಡಿಲ್ಲ. ಇನ್ನು, ಚೀನಾದ ವಿರುದ್ಧ ಟಿಬೆಟ್ ಕಾರ್ಡ್ ಮಾತ್ರ ಬಳಸದೆ, ತೈವಾನ್‌ನೊಂದಿಗೆ ಹೆಚ್ಚು ದೃಢವಾದ ಸಂಬಂಧಗಳನ್ನು ಬೆಳೆಸಿಕೊಂಡು ಚೀನಾ ಸರ್ಕಾರಕ್ಕೆ ಅಥವಾ ಬೀಜಿಂಗ್‌ಗೆ ಸಂದೇಶ ನೀಡುವ ಆಲೋಚನೆಯೂ ಇದೆ.

  ಇದನ್ನೂ ಓದಿ: ಅಪಘಾನಿಸ್ತಾನದಲ್ಲಿ ಶತ್ರುಗಳ ಜೊತೆ ಯುದ್ಧವಿಲ್ಲದೇ ತಾಲಿಬಾನಿಗಳು ಏನು ಮಾಡುತ್ತಿದ್ದಾರೆ..?

  ಭಾರತ ಮತ್ತು ತೈವಾನ್ ಪ್ರಸ್ತುತ ಪರಸ್ಪರರ ರಾಜಧಾನಿಯಲ್ಲಿ "ವ್ಯಾಪಾರ ಮತ್ತು ಸಾಂಸ್ಕೃತಿಕ ವಿನಿಮಯ" ಕಚೇರಿಗಳನ್ನು ನಿರ್ವಹಿಸುತ್ತಿವೆ. ಮೇ 2020ರಲ್ಲಿ, ತೈವಾನ್‌ ಅಧ್ಯಕ್ಷೆ ಸಾಯ್‌ ಪ್ರಮಾಣವಚನಕ್ಕೆ ಬಿಜೆಪಿ ಸಂಸದರಾದ ಮೀನಾಕ್ಷಿ ಲೇಖಿ ಮತ್ತು ರಾಹುಲ್ ಕಸ್ವಾನ್ ಆನ್‌ಲೈನ್‌ನಲ್ಲಿ ಭಾಗವಹಿಸಿದ್ದರು. 2016ರಲ್ಲಿ, ಕೊನೆಯ ಕ್ಷಣದಲ್ಲಿ ಸಾಯ್‌ ಅಧ್ಯಕ್ಷರಾದ ಬಳಿಕ ಪ್ರಮಾಣ ವಚನ ಸಮಾರಂಭಕ್ಕೆ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸುವ ಯೋಜನೆಯನ್ನು ಹೊಸದಿಲ್ಲಿ ಕೊನೆಯ ಕ್ಷಣದಲ್ಲಿ ಕೈಬಿಟ್ಟಿತ್ತು.

  ಇದನ್ನೂ ಓದಿ: ಏಲಿಯನ್‌ಗಳ ಇರುವಿಕೆ ದೃಢವಾಯ್ತಾ? ಸೌರವ್ಯೂಹದ ಹೊರಗಿನಿಂದ ರೇಡಿಯೋ ಸಿಗ್ನಲ್‌ಗಳನ್ನು ಪಡೆದ ಭೂಮಿ!

  ಭಾರತಕ್ಕೆ 7.5 ಬಿಲಿಯನ್ ಡಾಲರ್ ಮೌಲ್ಯದ ಸೆಮಿಕಂಡಕ್ಟರ್ ಅಥವಾ ಚಿಪ್ ಉತ್ಪಾದನಾ ಘಟಕ ತರಲು ತೈಪೆಯೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಬ್ಲೂಮ್‌ಬರ್ಗ್‌ ವರದಿ ಮಾಡಿದೆ. ಚಿಪ್‌ಗಳನ್ನು ಕಂಪ್ಯೂಟರ್‌ಗಳಿಂದ ಹಿಡಿದು 5 ಜಿ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಿಕ್ ಕಾರುಗಳು ಮತ್ತು ವೈದ್ಯಕೀಯ ಉಪಕರಣಗಳು ಮುಂತಾದ ಸಾಧನಗಳಲ್ಲಿ ಬಳಸಲಾಗುತ್ತದೆ.

  ಇದನ್ನೂ ಓದಿ: Explained: ಭಾರತದಲ್ಲಿ ಕಲ್ಲಿದ್ದಲು ಕೊರತೆಗೆ ಕಾರಣವೇನು? ಯಾವ್ಯಾವ ರಾಜ್ಯಗಳಿಗೆ ವಿದ್ಯುತ್ ಅಭಾವ ಕಾಡಲಿದೆ?

  ಇಂಡೋ-ಪೆಸಿಫಿಕ್‌ನಲ್ಲಿ ಚೀನಾದ ಪ್ರಭಾವ ನಿಯಂತ್ರಿಸಲು ಪ್ರಯತ್ನಿಸುತ್ತಿರುವ ಯುಎಸ್, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾಗಳ ಗುಂಪಿನ ಕ್ವಾಡ್‌ನ ಶೃಂಗಸಭೆಯ ಹತ್ತಿರದಲ್ಲಿ ಈ ವರದಿ ಮಾಡಲಾಗಿದೆ. ಇನ್ನು, ಈ ಸಭೆಯಲ್ಲಿ"ಸೆಮಿಕಂಡಕ್ಟರ್‌ಗಳಿಗೆ ಸುರಕ್ಷಿತ ಪೂರೈಕೆ ಸರಪಳಿ" ಯನ್ನು ನಿರ್ಮಿಸುವ ಅವಶ್ಯಕತೆಯ ಬಗ್ಗೆಯೂ ಚರ್ಚೆ ನಡೆದಿದೆ.
  Published by:Sharath Sharma Kalagaru
  First published: