ಯಾವುದೇ ವಿಚಾರದಲ್ಲಿ ಸ್ವಲ್ಪ ಡೌಟ್ ಬಂದರೂ ತಕ್ಷಣ ಮೊಬೈಲ್ (Mobile) ತಗೊಂಡು ಗೂಗಲ್ (Google) ಮಾಡೇ ಬಿಡ್ತೀವಿ. ಅಷ್ಟರ ಮಟ್ಟಿಗೆ ಈ ಸರ್ಚ್ ಎಂಜಿನ್ಗೆ ನಾವು-ನೀವೆಲ್ಲಾ ಒಗ್ಗಿಕೊಂಡು ಬಿಟ್ಟಿದ್ದೇವೆ. ಜನರ ಜೀವನಾಡಿ ಆಗಿರುವ ಗೂಗಲ್ ಸರ್ಚ್ಗೆ (Google Search) ಸರಿಸಾಟಿ ಯಾರು ಇಲ್ಲ ಎನ್ನಲಾಗುತ್ತಿತ್ತು. ಆದರೆ ಜನಪ್ರಿಯ ಗೂಗಲ್ ಸರ್ಚ್ಗೆ ಸೆಡ್ಡು ಹೊಡೆಯಲು ಪ್ರತಿಸ್ಪರ್ಧಿಯಾಗಿ ಮತ್ತೊಂದು ಸೇವೆ ಅದಾಗ್ಲೇ ಕಾಲಿಟ್ಟಿದೆ. ಗೂಗಲ್ ನಂತರ ಚಾಟ್ಜಿಪಿಟಿ (ChatGPT) ಬಗ್ಗೆ ಬಳಕೆದಾರರು ಸಾಕಷ್ಟು ಚರ್ಚೆ ಮಾಡುತ್ತಿದ್ದಾರೆ. ಈ AI ಬೆಂಬಲಿತ ಚಾಟ್ಬಾಟ್ ಅಕ್ಷರಶಃ ಇಂಟರ್ನೆಟ್ (Internet) ಅಲ್ಲಿ ಬಿರುಗಾಳಿ ಎಬ್ಬಿಸಿದೆ ಎನ್ನಬಹುದು.
ಗೂಗಲ್ ಸರ್ಚ್ ನಂತರ ಚಾಟ್ಜಿಪಿಟಿ
ವಿದ್ಯಾರ್ಥಿಗಳಿಂದ ಹಿಡಿದು ಪ್ರತಿಯೊಬ್ಬರೂ ಇಂಟರ್ನೆಟ್ನ ಈ ಸೇವೆಗೆ ಮಾರು ಹೋಗಿದ್ದಾರೆ. ಅಷ್ಟೇ ಯಾಕೆ ಗೂಗಲ್ ಉತ್ತಮ ಎನ್ನುತ್ತಿದ್ದ ಬಳಕೆದಾರರು ಗೂಗಲ್ ಸರ್ಚ್ಗಿಂತ ಚಾಟ್ಜಿಪಿಟಿ ಬೆಸ್ಟ್ ಎನ್ನುತ್ತಿದ್ದಾರೆ. ಅಷ್ಟಕ್ಕೂ ಇಷ್ಟೆಲ್ಲಾ ಪೀಠಿಕೆ ನೀಡಿರುವ ಚಾಟ್ಜಿಪಿಟಿ ಅಂದರೆ ಏನು? ಹೇಗೆ ಕೆಲಸ ಮಾಡುತ್ತದೆ? ಮತ್ತು ಅದನ್ನು ಹೇಗೆ ಬಳಸುವುದು? ಅಂತಾ ನೋಡೋಣ.
ChatGPT ಎಂದರೇನು
ಚಾಟ್ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಸಂಶೋಧನಾ ಕಂಪನಿ ಓಪನ್ಎಐ ಅಭಿವೃದ್ಧಿಪಡಿಸಿದ AI-ಚಾಲಿತ ಚಾಟ್ಬಾಟ್ ಆಗಿದೆ. ಚಾಟ್ಬಾಟ್ ಬಳಕೆದಾರರ ಪ್ರಶ್ನೆಗಳಿಗೆ ಮತ್ತು ಪ್ರಾಂಪ್ಟ್ಗಳಿಗೆ ಪ್ರತಿಕ್ರಿಯೆಗಳನ್ನು ರಚಿಸಲು ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಎಂದು ಕರೆಯಲ್ಪಡುವ ಯಂತ್ರ ಕಲಿಕೆಯ ಕ್ಷೇತ್ರವನ್ನು ಬಳಸುತ್ತದೆ.
ಬಳಕೆದಾರರ ಎಲ್ಲಾ ಪ್ರಶ್ನೆಗಳಿಗೆ ನಿಖರವಾದ ಉತ್ತರವನ್ನು ಈ ಚಾಟ್ಜಿಪಿಟಿ ನೀಡುತ್ತದೆ. ಭಾಷಾ ಅನುವಾದ ಆಗಿರಬಹುದು, ಪ್ರಶ್ನೆಗೆ ಉತ್ತರ ಆಗಿರಬಹುದು, ಪಠ್ಯ ಸಾರೀಕರಣದಂತಹ ವಿವಿಧ ಕೆಲಸದಲ್ಲಿ ಯಾವುದೇ ಅನುಮಾನವಿಲ್ಲದೇ ಬಳಕೆದಾರರು ಈ ಅಪ್ಲಿಕೇಶನ್ ಅನ್ನು ಉಪಯೋಗಿಸಬಹುದು.
ChatGPT ಅನ್ನು ಬಳಸುವುದು ಹೇಗೆ ?
ಬೇಸರದ ಸಂಗತಿ ಎಂದರೆ ಇದು ಸ್ಮಾರ್ಟ್ಫೋನ್ನಲ್ಲಿ ಇನ್ನೂ ಲಭ್ಯವಿಲ್ಲ. ಹೀಗಾಗಿ ನೀವು ChatGPT ಅನ್ನು ವೆಬ್ ಪುಟದಲ್ಲಿ ಮಾತ್ರ ಬಳಸಬಹುದು ಮತ್ತು ಕಂಪನಿಯು ಇನ್ನೂ ಅಧಿಕೃತ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಬೇಕಾಗಿದೆ. ಆದ್ದರಿಂದ ಅಧಿಕೃತ ಚಾಟ್ಜಿಪಿಟಿ ಅಪ್ಲಿಕೇಶನ್ಗಳು ಎಂದು ಹೇಳಿಕೊಳ್ಳುವ ಆಪ್ ಸ್ಟೋರ್ಗಳಲ್ಲಿ ಲಭ್ಯವಿರುವ ನಕಲಿ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರ ಇರಲಿ.
ChatGPT ಬಳಸಲು...
-ಮೊದಲಿಗೆ chat.openai.com/ ಗೆ ಭೇಟಿ ನೀಡಿ
- ನಂತರ ನಿಮ್ಮ ಇಮೇಲ್ ಐಡಿ ಮತ್ತು ಫೋನ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಮಾಡಿ ಅಥವಾ ಸೈನ್ ಅಪ್ ಮಾಡಿ. ಬಳಕೆದಾರರು ಇಲ್ಲಿ ತಮ್ಮ ವಾಟ್ಸ್ಯಾಪ್ ಫೋನ್ ಸಂಖ್ಯೆಯನ್ನು ಸಹ ಬಳಸಬಹುದು.
- ಸೈನ್ ಅಪ್ ಮಾಡಿದ ನಂತರ ಮುಖ್ಯ ವಿಂಡೋ ತೆರೆಯುತ್ತದೆ. ChatGPT ಕುರಿತು ಮಾಹಿತಿಯ ಅಡಿಯಲ್ಲಿ, ನೀವು ಹುಡುಕಾಟ ಪಟ್ಟಿಯನ್ನು ಕಂಡುಕೊಳ್ಳುತ್ತೀರಿ
- ಈ ಹುಡುಕಾಟ ಪಟ್ಟಿಯಲ್ಲಿ ನಿಮಗೆ ಉತ್ತರ ಬೇಕಿರುವ ಪ್ರಶ್ನೆಯನ್ನು ಬರೆಯಿರಿ ಮತ್ತು ನಮೂದಿಸಿ.
- AI ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡುತ್ತದೆ.
ChatGPT ಹೇಗೆ ಸಹಕಾರಿಯಾಗಿದೆ?
ChatGPT ನಿಮ್ಮ ಪ್ರಶ್ನೆಗಳಿಗೆ ಅತ್ಯಂತ ವೇಗವಾಗಿ ಉತ್ತರಿಸುತ್ತದೆ. ಮುಖ್ಯವಾಗಿ ಚಾಟ್ GPT ಬಳಕೆದಾರರ ಪ್ರಶ್ನೆಗಳಿಗೆ ಯಾವುದೇ ಯಾಂತ್ರಿಕ ಉತ್ತರ ನೀಡದೇ ಮಾನವ ತರಹದ ಚಿಂತನೆಯ ಉತ್ತರವನ್ನು ನೀಡುತ್ತದೆ.
ಇದನ್ನೂ ಓದಿ: Google School: ಗೂಗಲ್ ಮಾನ್ಯತೆ ಪಡೆದ ಈ ಶಾಲೆ ಹೇಗಿದೆ ನೋಡಿ
ಹೀಗಾಗಿ ಈ ಸೇವೆ ಸಾಕಷ್ಟು ಲಾಭಕಾರಿಯಾಗಿದೆ. ಇದಲ್ಲದೆ, ನೀವು ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಮಾಹಿತಿಯನ್ನು ಪಡೆಯಲು, ದೀರ್ಘ ದಾಖಲೆಗಳು ಮತ್ತು ಲೇಖನಗಳನ್ನು ಸಾರಾಂಶ ಮಾಡಲು, ವಿಭಿನ್ನ ಪಠ್ಯಗಳನ್ನು ಭಾಷಾಂತರಿಸಲು, ಕಥೆಗಳು ಮತ್ತು ಕವಿತೆಗಳನ್ನು ರಚಿಸಲು, ಕೋಡ್ ಸಹಾಯ ಮತ್ತು ಹೆಚ್ಚಿನದನ್ನು ಮಾಡಲು ನೀವು ChatGPT ಅನ್ನು ಬಳಸಬಹುದು. ಇಷ್ಟೇಲ್ಲಾ ಪ್ರಯೋಜನಗಳನ್ನು ನೀಡುತ್ತಿರುವ ChatGPT ಸದ್ಯ ಗೂಗಲ್ಗೆ ಪ್ರಬಲ ಪ್ರತಿಸ್ಪರ್ಧಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ