• Home
  • »
  • News
  • »
  • explained
  • »
  • EXPLAINER: ಕಾರ್ಬನ್ ಕ್ರೆಡಿಟ್‌ ಯೋಜನೆ ಎಂದರೇನು? ಮಾಲಿನ್ಯವನ್ನು ಸರಿದೂಗಿಸುವ ಗುರಿಯನ್ನು ಹೇಗೆ ಹೊಂದಿವೆ?

EXPLAINER: ಕಾರ್ಬನ್ ಕ್ರೆಡಿಟ್‌ ಯೋಜನೆ ಎಂದರೇನು? ಮಾಲಿನ್ಯವನ್ನು ಸರಿದೂಗಿಸುವ ಗುರಿಯನ್ನು ಹೇಗೆ ಹೊಂದಿವೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಂಪನಿಗಳು, ವ್ಯಕ್ತಿಗಳು ಹಾಗೂ ಸರಕಾರಗಳು ಸಸ್ಯಗಳನ್ನು ನೆಡಲು ಅಥವಾ ಅರಣ್ಯವನ್ನು ಸಂರಕ್ಷಿಸಲು ಪಾವತಿಸುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ತಮ್ಮ ಕೈಲಾದ ಕರ್ತವ್ಯವನ್ನು ಮಾಡಬಹುದು.

  • Trending Desk
  • 3-MIN READ
  • Last Updated :
  • Share this:

ಹವಾಮಾನ (Atmosphere) ಬದಲಾವಣೆ ಹಾಗೂ ಪರಿಣಾಮಗಳ ಕುರಿತು ಕಾಳಜಿವಹಿಸುವ ಪ್ರಯಾಣಿಕರಿಗಾಗಿ ವಿಮಾನ ಯಾನ ಸಂಸ್ಥೆಗಳು ಹಲವಾರು ವರ್ಷಗಳಿಂದ ಒಂದು ಯೋಜನೆಯನ್ನು ನಡೆಸುತ್ತಿವೆ. ಮರಗಳನ್ನು ಸಂರಕ್ಷಿಸಲು ತಮ್ಮ ಪ್ರಯಾಣದ ವೆಚ್ಚದಲ್ಲಿ ಹೆಚ್ಚುವರಿ ಪಾವತಿಸಿ ಇಂಗಾಲದ ಡೈಆಕ್ಸೈಡ್ ಮಾಲಿನ್ಯವನ್ನು ನಿವಾರಿಸುವುದು. ಈ ಯೋಜನೆಗಳ ಹಿಂದಿನ ಕಲ್ಪನೆಯೇ ಅರಣ್ಯ ಕಾರ್ಬನ್ ಕ್ರೆಡಿಟ್‌ಗಳಾಗಿವೆ. ವಾತಾವರಣದಿಂದ ಇಂಗಾಲವನ್ನು ಮರಗಳು ಹೀರಿಕೊಳ್ಳುತ್ತವೆ. ಕಂಪನಿಗಳು, ವ್ಯಕ್ತಿಗಳು ಹಾಗೂ ಸರಕಾರಗಳು ಸಸ್ಯಗಳನ್ನು ನೆಡಲು ಅಥವಾ ಅರಣ್ಯವನ್ನು ಸಂರಕ್ಷಿಸಲು ಪಾವತಿಸುವ ಮೂಲಕ ಇಂಗಾಲದ ಹೊರಸೂಸುವಿಕೆಯನ್ನು ತಡೆಯಲು ತಮ್ಮ ಕೈಲಾದ ಕರ್ತವ್ಯವನ್ನು ಮಾಡಬಹುದು. ಅರಣ್ಯ ಕಾರ್ಬನ್ ಕ್ರೆಡಿಟ್ಸ್ (Carbon Credit) ಇದೇ ಕೆಲಸವನ್ನು ಮಾಡುತ್ತದೆ.


ಕಾರ್ಬನ್ ಕ್ರೆಡಿಟ್ ಎಂದರೇನು?


ಕಾರ್ಬನ್ ಕ್ರೆಡಿಟ್ ಇಂಗಾಲದ ಹೊರಸೂಸುವಿಕೆಯನ್ನು ಸರಿದೂಗಿಸಲು ಹಸಿರುಮನೆ ಅನಿಲ ಹೊರಸೂಸುವಿಕೆಯಲ್ಲಿ 1 ಮೆಟ್ರಿಕ್ ಟನ್ ಕಡಿತವನ್ನು ಪ್ರತಿನಿಧಿಸುತ್ತದೆ. ಈ ಕ್ರೆಡಿಟ್ ಅದರ ಅವಧಿ ಮುಗಿಯುವ ಮುನ್ನ ಖರೀದಿಸಬಹುದು, ಮಾರಾಟ ಮಾಡಬಹುದು ಅಂತೆಯೇ ಕ್ರೆಡಿಟ್‌ಗೆ ಸಂಬಂಧಿಸಿದ ಇಂಗಾಲದ ಹೊರಸೂಸುವಿಕೆ ಕಡಿತವನ್ನು ಖರೀದಿದಾರರು ಮಾತ್ರ ಕ್ಲೈಮ್ ಮಾಡಬಹುದಾಗಿದೆ.


ವಾತಾವರಣದಲ್ಲಿ ಇಂಗಾಲ ಮತ್ತು ಹಸಿರುಮನೆ ಅನಿಲಗಳ (GHG) ಮಟ್ಟವನ್ನು ಏಕೆ ಕಡಿಮೆ ಮಾಡಬೇಕು?


ವಾತಾವರಣದಲ್ಲಿ ಹೆಚ್ಚಿದ GHG ಮಟ್ಟವು ಗ್ರಹವನ್ನು ಬೆಚ್ಚಗಾಗಿಸುತ್ತಿದೆ ಎಂದು IPCC ಯ ವಿಜ್ಞಾನಿಗಳು ತಿಳಿಸಿದ್ದಾರೆ. ಇದು ಪ್ರಪಂಚದಾದ್ಯಂತ ತೀವ್ರವಾದ ಹವಾಮಾನ ಬದಲಾವಣೆಗಳನ್ನು ಸೃಷ್ಟಿಸುತ್ತದೆ. ಪ್ರಸ್ತುತ, ಪಳೆಯುಳಿಕೆ ಇಂಧನಗಳನ್ನು ಸುಡುವುದು - ಕಲ್ಲಿದ್ದಲು, ತೈಲ ಮತ್ತು ಅನಿಲ - ಹೆಚ್ಚಿದ GHG ಮಟ್ಟಗಳ ಮುಖ್ಯ ಚಾಲಕವಾಗಿದೆ.


ವಿಶ್ವದ ಜನಸಂಖ್ಯೆಯನ್ನು ಬೆಂಬಲಿಸುವ ವಾಸಯೋಗ್ಯ ಗ್ರಹವನ್ನು ನಾವು ನಿರ್ವಹಿಸಬೇಕಾದರೆ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಘೋಷಿಸಲು ವಿಶ್ವದ ದೇಶಗಳು ಒಗ್ಗೂಡಿವೆ.


ಇತ್ತೀಚಿನ ಸಂಶೋಧನೆಯು ಭೂಮಿಯ ಮೇಲಿನ ಕೆಲವು ದುರ್ಬಲ ಪರಿಸರ ವ್ಯವಸ್ಥೆಗಳು ಮತ್ತು ಸಮುದಾಯಗಳನ್ನು ರಕ್ಷಿಸಲು ಪ್ರತಿಯೊಬ್ಬರೂ ತುರ್ತು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದೆ.


ಹವಾಮಾನವನ್ನು ರಕ್ಷಿಸಲು ಹೂಡಿಕೆ ಏಕೆ ಮಾಡಬೇಕು?


ಪರಿಸರವನ್ನು ಸಂರಕ್ಷಿಸುವ ಪ್ರಸ್ತುತ ಪ್ರತಿಜ್ಞೆಗಳು ಮತ್ತು ಕ್ರಮಗಳು ಕಡಿಮೆಯಾಗುತ್ತಿವೆ ಮತ್ತು ಹವಾಮಾನ ಬದಲಾವಣೆಯನ್ನು ನಿಯಂತ್ರಣದಲ್ಲಿಡುವ ಕ್ರಮ ಕುಗ್ಗುತ್ತಿದೆ. ಪ್ಯಾರಿಸ್ ಒಪ್ಪಂದ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳಂತಹ (SDGs) ಅಂತರಾಷ್ಟ್ರೀಯವಾಗಿ ಅನುಮೋದಿಸಲಾದ ಗುರಿಗಳನ್ನು ತಲುಪಲು ಮಹತ್ವಾಕಾಂಕ್ಷೆಯನ್ನು ಹೆಚ್ಚಿಸಬೇಕು ಮತ್ತು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿಮೆ ಮಾಡಲು ಹವಾಮಾನ ಹಣಕಾಸನ್ನು ಸಜ್ಜುಗೊಳಿಸಬೇಕಾಗಿದೆ.


ಕಾರ್ಬನ್ ಕ್ರೆಡಿಟ್‌ಗಳ ವಿಶೇಷತೆಗಳೇನು?


ಕಾರ್ಬನ್ ಕ್ರೆಡಿಟ್‌ಗಳು ಪ್ರಮಾಣೀಕೃತ ಹವಾಮಾನ ಕ್ರಿಯೆಯ ಯೋಜನೆಗಳಿಂದ ಅಳೆಯಬಹುದಾದ, ಪರಿಶೀಲಿಸಬಹುದಾದ ಹೊರಸೂಸುವಿಕೆ ಕಡಿತಗಳಾಗಿವೆ. ಈ ಯೋಜನೆಗಳು ಹಸಿರುಮನೆ ಅನಿಲ (GHG) ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ, ತೆಗೆದುಹಾಕುತ್ತದೆ ಅಥವಾ ತಪ್ಪಿಸುತ್ತದೆ. ಸಮುದಾಯಗಳನ್ನು ಸಬಲಗೊಳಿಸುತ್ತದೆ, ಪರಿಸರ ವ್ಯವಸ್ಥೆಗಳನ್ನು ರಕ್ಷಿಸುತ್ತವೆ, ಅರಣ್ಯಗಳನ್ನು ಪುನಃಸ್ಥಾಪಿಸುತ್ತವೆ ಅಥವಾ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತವೆ.


ಕಾರ್ಬನ್ ಕ್ರೆಡಿಟ್ಸ್ ನಿಯಮಗಳೇನು?


ಜಾನುವಾರುಗಳಿಗೆ ಹುಲ್ಲುಗಳನ್ನು ಒದಗಿಸಲು ಅಥವಾ ವ್ಯವಸಾಯದ ಉದ್ದೇಶಕ್ಕಾಗಿ ಅರಣ್ಯಗಳನ್ನು ಹಾನಿಮಾಡುತ್ತಿದ್ದರೆ ಅಂತದ ಅಪಾಯಕ್ಕೊಳಗಾದ ಅರಣ್ಯದ ಫೋಟೋವನ್ನು ಸೆರೆಹಿಡಿಯಬೇಕು. ಅರಣ್ಯದ ವಿನಾಶವನ್ನು ತಪ್ಪಿಸಲು ಈ ಸಮಯದಲ್ಲಿ ಮಧ್ಯವರ್ತಿ ಆಗಮಿಸಿ ಅರಣ್ಯ ಮಾಲೀಕರಿಗೆ ಪಾವತಿಸುವ ಭರವಸೆ ನೀಡುತ್ತಾನೆ ಇಲ್ಲಿ ಅರಣ್ಯ ಮಾಲೀಕರು ಸರಕಾರ ಕೂಡ ಆಗಿರಬಹುದು


ಇಂತಹ ಅರಣ್ಯ ಭೂಮಿಯನ್ನು ಔಪಚಾರಿಕವಾಗಿ ಕಾರ್ಬನ್ ಕ್ರೆಡಿಟ್ ಯೋಜನೆ ಎಂದು ಗೊತ್ತುಪಡಿಸಲಾಗುತ್ತದೆ. ಈ ಯೋಜನೆಗೆ ಒಳಪಟ್ಟ ನಂತರ ಅಂತಹ ಅರಣ್ಯದಲ್ಲಿರುವ ಮರಗಳನ್ನು ಕಡಿಯಬಾರದು ಇಲ್ಲವೇ ಕತ್ತರಿಸಬಾರದು ಅಥವಾ ಬೆಂಕಿಯಿಂದ ನಾಶಪಡಿಸಬಾರದು. ಅರಣ್ಯ ಅಭಿವೃದ್ಧಿಪಡಿಸುವವರು ಈ ಭರವಸೆಗಳನ್ನು ಮಾರಾಟ ಮಾಡಿ ಹಣವನ್ನು ಉಳಿಸುತ್ತಾರೆ. ಮಾಲಿನ್ಯವನ್ನುಂಟು ಮಾಡುವ ಸಂಸ್ಥೆಯು ಈ ಕ್ರೆಡಿಟ್‌ಗಳನ್ನು ಖರೀದಿಸುತ್ತದೆ.


ಸಂಸ್ಥೆ ಅಥವಾ ವ್ಯಕ್ತಿಯು ಕಾರ್ಬನ್ ಕ್ರೆಡಿಟ್ ಅನ್ನು ಖರೀದಿಸಿದ ನಂತರ, ಕ್ರೆಡಿಟ್ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ. ಆದ್ದರಿಂದ ಅದನ್ನು ಮರುಬಳಕೆ ಮಾಡಲಾಗುವುದಿಲ್ಲ.


ವಿವಿಧ ರೀತಿಯ ಹವಾಮಾನ ಕ್ರಿಯೆ ಯೋಜನೆಗಳು ಯಾವುವು?


ಯೋಜನೆಗಳು ವಾತಾವರಣದಲ್ಲಿನ ಹಸಿರುಮನೆ ಅನಿಲದ (GHG) ಪ್ರಮಾಣವನ್ನು ಕನಿಷ್ಠ ಮೂರು ವಿಧಾನಗಳಲ್ಲಿ ಒಂದನ್ನು ಕಡಿಮೆ ಮಾಡುತ್ತದೆ ಅಥವಾ ತೆಗೆದುಹಾಕುತ್ತದೆ.


ಮೊದಲನೆಯದು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಪ್ಪಿಸುತ್ತದೆ, ಉದಾಹರಣೆಗೆ, ಪಳೆಯುಳಿಕೆ ಇಂಧನದಿಂದ ಪಡೆದ ಶಕ್ತಿಯನ್ನು ನವೀಕರಿಸಬಹುದಾದ ಮೂಲಗಳಿಂದ ಶಕ್ತಿಯೊಂದಿಗೆ ಬದಲಾಯಿಸುವ ಮೂಲಕ.


ಇದನ್ನೂ ಓದಿ: ಚೀನಾದಲ್ಲಿ ಮತ್ತೆ ಕೊರೋನಾ ಹಾವಳಿ, ಜಾಗತಿಕ ಮಟ್ಟದಲ್ಲಿ ಇದರ ಪರಿಣಾಮ ಏನಾಗಬಹುದು?


ಎರಡನೆಯದು ವಾತಾವರಣದಿಂದ ಹೊರಸೂಸುವಿಕೆಯನ್ನು ತೆಗೆದುಹಾಕುತ್ತದೆ, ಉದಾಹರಣೆಗೆ, ಹೆಚ್ಚಿನ ಮರಗಳನ್ನು ನೆಡುವುದರ ಮೂಲಕ, ಇದು ವಾತಾವರಣದಿಂದ ಇಂಗಾಲವನ್ನು ಬೇರ್ಪಡಿಸುತ್ತದೆ ಮತ್ತು ಅದನ್ನು ದ್ರವ ಅಥವಾ ಘನ ರೂಪದಲ್ಲಿ ಸಂಗ್ರಹಿಸುತ್ತದೆ. ಮೂರನೆಯದು ಹೊರಸೂಸುವಿಕೆಯನ್ನು ಸಂಗ್ರಹಿಸುತ್ತದೆ ಮತ್ತು ನಾಶಪಡಿಸುತ್ತದೆ.


ಮರಗಳು ಇಂಗಾಲವನ್ನು ಹೇಗೆ ಹೀರಿಕೊಳ್ಳುತ್ತವೆ?


ಮರಗಳು ತಮ್ಮ ಎಲೆಗಳ ಮೂಲಕ ಇಂಗಾಲವನ್ನು ಹೀರಿಕೊಳ್ಳುತ್ತವೆ ಇದರಿಂದ ಜೀವಿಸಲು ಬೇಕಾದ ಹವಾಮಾನವನ್ನು ಸಂರಕ್ಷಿಸಿಕೊಳ್ಳಬಹುದಾಗಿದೆ. ಸೂರ್ಯನ ಬೆಳಕನ್ನು ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುವ ಸಸ್ಯಗಳಲ್ಲಿನ ಪ್ರಕ್ರಿಯೆಯಾದ ದ್ಯುತಿಸಂಶ್ಲೇಷಣೆಯ ಮೂಲಕ ಇಂಗಾಲವನ್ನು ಹೀರಿಕೊಳ್ಳುತ್ತವೆ ಸಸ್ಯಗಳು ಉಪಉತ್ಪನ್ನವಾಗಿ ಆಮ್ಲಜನಕವನ್ನು ಉಸಿರಾಡುತ್ತವೆ. ಕಾರ್ಬನ್ ಅನ್ನು ಶಾಶ್ವತವಾಗಿ ಮರದ ನಾರುಗಳಲ್ಲಿ ಅದು ಸಾಯುವವರೆಗೆ ಮತ್ತು ಕೊಳೆಯುವವರೆಗೆ ಸಂಗ್ರಹಿಸಲಾಗುತ್ತದೆ.


ಅರಣ್ಯನಾಶದಿಂದ ಹವಮಾನ ವೈಪರೀತ್ಯಗಳು ಉಂಟಾಗುವುದಲ್ಲದೆ ಕೆಲವೊಂದು ವಿನಾಶಕ್ಕೂ ಕಾರಣವಾಗುತ್ತವೆ. ಸಸ್ಯ ದ್ಯುತಿಸಂಶ್ಲೇಷಣೆಯನ್ನು ನಿಲ್ಲಿಸುತ್ತದೆ ಇದರಿಂದ ಮರಗಳು ಇಂಗಾಲವನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ ಇನ್ನು ಅರಣ್ಯಗಳ ಬೆಂಕಿಯು ಬಹಳಷ್ಟು ಇಂಗಾಲದ ಡೈಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ.


ಯೋಜನೆಯ ಋಣಾತ್ಮಕ ಅಂಶಗಳೇನು?


ಅರಣ್ಯ ಕಾರ್ಬನ್ ಉದ್ಯಮವು ಮಾರುಕಟ್ಟೆಯಲ್ಲಿ ಅಭಿವೃದ್ಧಿಯನ್ನು ಕಂಡುಕೊಂಡಿದ್ದು ಹಣಮಾಡುವ ದಂಧೆಯಾಗಿ ಪರಿವರ್ತನೆಯಾಗಿದೆ. ಒಂದೆಡೆಯಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸುವ ಹಾಗೂ ನವೀಕರಿಸಬಹುದಾದ ಶಕ್ತಿಗಳಿಗೆ ಪರಿವರ್ತನೆಯ ವಿಧಾನವಾಗಿ ಈ ಯೋಜನೆ ಬಳಕೆಯಾಗಿದ್ದರೆ ಇನ್ನು ಕೆಲವೆಡೆ ಹಣ ಸಂಪಾದನೆಯ ಮಾರ್ಗವಾಗಿ ಹೊರಹೊಮ್ಮಿದೆ. ಹಾಗಾಗಿ ಪರಿಸರ ಗುಂಪುಗಳು, ವಿಜ್ಞಾನಿಗಳು ಇತರ ಅರಣ್ಯ ತಜ್ಞರು ಇಂತಹ ಕಾರ್ಯಕ್ರಮಗಳು ತಪ್ಪುದಾರಿಗೆಳೆಯಬಹುದು ಎಂದು ತಿಳಿಸುತ್ತಾರೆ.


ಹೆಚ್ಚಿನ ಸ್ವಯಂಪ್ರೇರಿತ ಇಂಗಾಲದ ಉದ್ಯಮಗಳು ಸ್ವಯಂ-ನಿಯಂತ್ರಿತವಾಗಿವೆ ಎಂಬುದು ಪ್ರಸ್ತುತ ಸಮಸ್ಯೆಯಾಗಿದೆ ಎಂದು ಹವಾಮಾನ ಸಲಹಾ ಸಂಸ್ಥೆಯಾದ ಅಜೆಂಡಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಬನ್ ಮಾರುಕಟ್ಟೆಗಳ ಪರಿಣಿತ ಅರ್ನಾಡ್ ಬ್ರೋಹೆ ತಿಳಿಸಿದ್ದಾರೆ.


ಅರಣ್ಯವನ್ನು ಸಂರಕ್ಷಿಸುವ ಈ ಕ್ರೆಡಿಟ್ ಯೋಜನೆಗಳು ಉಪಯೋಗಕಾರಿಯೇ ಇಲ್ಲವೇ ಎಂಬುದನ್ನು ನಿರ್ಣಯಿಸುವುದು ಕಷ್ಟಕರವಾಗಿದೆ. ಅರಣ್ಯದ ಕಾರ್ಬನ್ ಯೋಜನೆ ಪರಿಣಾಮಕಾರಿಯಾಗಿರಬೇಕು ಎಂದಾದಲ್ಲಿ ಅದರಿಂದ ಹೆಚ್ಚುವರಿಯಾದ ಕಾರ್ಯಗಳು ನಡೆಯಬೇಕು. ಅರಣ್ಯಗಳ ನಾಶದಲ್ಲಿ ಈ ಕ್ರೆಡಿಟ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತವೆ ಮರಗಳನ್ನು ಹಾಗೂ ಅರಣ್ಯವನ್ನು ಈಗಾಗಲೇ ರಕ್ಷಿಸಲಾಗಿದ್ದರೆ ಈ ಯೋಜನೆಗಳು ಅರ್ಥಹೀನವಾಗುತ್ತವೆ


ಕಾರ್ಬನ್ ಯೋಜನೆಯ ಪ್ರಯೋಜನಗಳೇನು?


ಉಷ್ಣವಲಯದ ಕಾಡುಗಳು ಬೇರೆಲ್ಲಿಯೂ ಇಲ್ಲದ ಅಸಂಖ್ಯಾತ ಜಾತಿಗಳಿಗೆ ನೆಲೆಯಾಗಿದೆ ಔಷಧಕ್ಕೆ ಅಗತ್ಯವಾಗಿರುವ ನಿರ್ಣಾಯಕವಾದ ಅನೇಕ ಸಸ್ಯ ಪ್ರಭೇದಗಳು ಮತ್ತು ಕೃಷಿಗೆ ನಿರ್ಣಾಯಕ ಪರಾಗಸ್ಪರ್ಶಕಗಳು ಸೇರಿದಂತೆ ಹಲವಾರು ಸಸ್ಯಸಂಪತ್ತನ್ನು ಹೊಂದಿವೆ. ಈ ಯೋಜನೆಯು ಇಂತಹ ಕಾಡುಗಳ ಸಂರಕ್ಷಣೆಯಲ್ಲಿ ಮಹತ್ತರವಾಗಿದೆ.


ನೀರು


ಅರಣ್ಯಗಳು ಜಲಚಕ್ರದ ಶಕ್ತಿ ಕೇಂದ್ರಗಳಾಗಿವೆ, ನೀರನ್ನು ಹಿಡಿದಿಟ್ಟುಕೊಳ್ಳುವುದು ಮತ್ತು ಶೋಧಿಸುವುದು ಮತ್ತು ನೆರೆಯ ಸಮುದಾಯಗಳಿಗೆ ಪ್ರವಾಹ ನಿಯಂತ್ರಣವನ್ನು ಒದಗಿಸುತ್ತದೆ.


ಆಹಾರ ಮತ್ತು ಉದ್ಯೋಗಗಳು


ಉಷ್ಣವಲಯದ ಕಾಡುಗಳು ತಮ್ಮ ಆಹಾರ ಭದ್ರತೆ ಮತ್ತು ಉದ್ಯೋಗಗಳಿಗಾಗಿ ಒದಗಿಸುವ ಸರಕು ಮತ್ತು ಸೇವೆಗಳ ಮೇಲೆ ಲಕ್ಷಾಂತರ ಜನರು ನೇರವಾಗಿ ಅವಲಂಬಿತರಾಗಿದ್ದಾರೆ.


ಸುಸ್ಥಿರ ಅಭಿವೃದ್ಧಿ


ಇಂಗಾಲದ ಯೋಜನೆಗಳಿಂದ ಬರುವ ಆದಾಯವು ಅರಣ್ಯ ಸಮುದಾಯಗಳಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರೋಗ್ಯ ಕಾರ್ಯಕ್ರಮಗಳಿಗೆ ನಿಧಿಗಳಿಗೆ ಸಹಕಾರಿಯಾಗಿವೆ ಈ ಯೋಜನೆಗಳು ಲಕ್ಷಾಂತರ ಜನರಿಗೆ ಸುಸ್ಥಿರ ಮತ್ತು ಆರ್ಥಿಕವಾಗಿ ಚೇತರಿಸಿಕೊಳ್ಳುವ ಉದ್ಯೋಗಗಳನ್ನು ಬೆಂಬಲಿಸುತ್ತವೆ.


ಕಾರ್ಬನ್ ಯೋಜನೆಗಳಿಗೆ ಅಗತ್ಯತೆಗಳು


ಈ ಯೋಜನೆಗಳನ್ನು ಯಶಸ್ವಿ ಎಂದು ಪರಿಗಣಿಸಲು, ಕಾರ್ಬನ್ ಯೋಜನೆಗಳು ಕಟ್ಟುನಿಟ್ಟಾದ ಮಾನದಂಡಗಳನ್ನು ಪೂರೈಸಬೇಕು, ಅವುಗಳೆಂದರೆ:


ಹೆಚ್ಚುವರಿ ಹೂಡಿಕೆ: ಕಾರ್ಬನ್ ಯೋಜನೆಯ ಹೂಡಿಕೆಯಿಲ್ಲದೆ ಹೊರಸೂಸುವಿಕೆಯ ಕಡಿತವು ಸಂಭವಿಸುವುದಿಲ್ಲ.


What is meant by carbon credit, How does carbon credit work, What is the value of 1 carbon credit, kannada news, karnataka news, ಕನ್ನಡ ನ್ಯೂಸ್, ಕರ್ನಾಟಕ ನ್ಯೂಸ್, ಕಾರ್ಬನ್ ಕ್ರೆಡಿಟ್‌ ಯೋಜನೆ , ಕಾರ್ಬನ್​ ಕ್ರಡಿಟ್​ ಇಂದ ಯಾರಿಗೆ ಲಾಭ,
ಸಾಂದರ್ಭಿಕ ಚಿತ್ರ


ಶಾಶ್ವತತೆ: ದೀರ್ಘಾವಧಿಯವರೆಗೆ ಕಾರ್ಬನ್ ಕ್ರೆಡಿಟ್ ಮೂಲಕ ಪ್ರತಿನಿಧಿಸುವ ಹೊರಸೂಸುವಿಕೆ ಕಡಿತ ಅಥವಾ ತೆಗೆದುಹಾಕುವಿಕೆ.


ಸೋರಿಕೆ: ಆ ಅರಣ್ಯನಾಶವು ಕೇವಲ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಗೊಂಡಿಲ್ಲ.


ಲಾಭ-ಹಂಚಿಕೆ: ಇಂಗಾಲದ ಯೋಜನೆಗಳ ಫಲಾನುಭವಿ ಸಮುದಾಯಗಳಿಗೆ ಸಮಾನವಾಗಿ ಪರಿಹಾರ ನೀಡಲಾಗುತ್ತದೆ.


ಈ ಅವಶ್ಯಕತೆಗಳನ್ನು ಹೇಗೆ ಪೂರೈಸಲಾಗುತ್ತಿದೆ


ಅಂತರಾಷ್ಟ್ರೀಯವಾಗಿ ವ್ಯಾಪಾರ ಮಾಡುವ ಎಲ್ಲಾ ಅರಣ್ಯ ಕಾರ್ಬನ್ ಕ್ರೆಡಿಟ್‌ಗಳು ಯುಎನ್ ಅಡಿಯಲ್ಲಿ ಅಂಗೀಕರಿಸಿರುವ ಅವಶ್ಯಕತೆಗಳನ್ನು ಪೂರೈಸಬೇಕಾಗುತ್ತದೆ


ಪ್ರಮುಖ ಅಂಶ: ಹೊರಸೂಸುವಿಕೆಯನ್ನು ಕಡಿಮೆಗೊಳಿಸಲಾಗುತ್ತಿದೆ ಅಥವಾ ತೆಗೆದುಹಾಕಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಲು ಅರಣ್ಯನಾಶ, ಅವನತಿ, ಸಂರಕ್ಷಣೆ ಮತ್ತು ಮರುಸ್ಥಾಪನೆಯನ್ನು ಅಳೆಯುವ ರಾಷ್ಟ್ರೀಯ ಮಾನದಂಡವನ್ನು ಅನ್ವಯಿಸುವುದು


ನಿರ್ವಹಣೆ: ಇಂಗಾಲದ ಹೆಚ್ಚುವರಿಯನ್ನು ಖಚಿತಪಡಿಸಿಕೊಳ್ಳಲು ಮಾನಂಡಕ್ಕೆ ಅನುಗುಣವಾಗಿ ಅರಣ್ಯ-ಸಂರಕ್ಷಣೆ ಬದಲಾವಣೆಗಳನ್ನು ಅಳೆಯಲು ಮೇಲ್ವಿಚಾರಣಾ ವ್ಯವಸ್ಥೆ


ತಂತ್ರ: ಶಾಶ್ವತತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಸೋರಿಕೆಯನ್ನು ತಪ್ಪಿಸಲು ರಾಷ್ಟ್ರೀಯ ತಂತ್ರ


ಸುರಕ್ಷತೆಗಳು: ಸ್ಥಳೀಯ ಹಕ್ಕುಗಳಿಗೆ ಗೌರವ ಮತ್ತು ಸ್ಥಳೀಯ ಮಧ್ಯಸ್ಥಗಾರರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಮಾಜಿಕ ಸುರಕ್ಷತೆಗಳ ಅನುಸರಣೆ, ಹಾಗೆಯೇ ಅರಣ್ಯ ನಷ್ಟದ ಅಪಾಯವನ್ನು ತಗ್ಗಿಸಲು ಪರಿಸರ ಸಂರಕ್ಷಣೆ.

First published: