• ಹೋಂ
  • »
  • ನ್ಯೂಸ್
  • »
  • Explained
  • »
  • Gujarat Model: ಬಿಜೆಪಿಯಲ್ಲಿ 'ಗುಜರಾತ್ ಮಾದರಿ' ಜಪ! ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲ್ವಂತೆ ಪಾಪ!

Gujarat Model: ಬಿಜೆಪಿಯಲ್ಲಿ 'ಗುಜರಾತ್ ಮಾದರಿ' ಜಪ! ಕೆಲ ಹಾಲಿ ಶಾಸಕರಿಗೆ ಟಿಕೆಟ್ ಸಿಗಲ್ವಂತೆ ಪಾಪ!

ಏನಿದು ಗುಜರಾತ್ ಮಾದರಿ?

ಏನಿದು ಗುಜರಾತ್ ಮಾದರಿ?

ಈಗಾಗಲೇ ಗುಜರಾತ್ ಗೆದ್ದು ಬೀಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದಲ್ಲೂ ಗುಜರಾತ್ ಮಾದರಿ ಚುನಾವಣಾ ರಣತಂತ್ರ ರೂಪಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆಯೇ ಬಿಎಸ್ವೈ ನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಹಾಗಿದ್ರೆ ಏನಿದು ಗುಜರಾತ್ ಮಾದರಿ? ಹಾಲಿ ಎಲ್ಲಾ ಶಾಸಕರಿಗೂ ಟಿಕೆಟ್ ಸಿಗೋದಿಲ್ವಾ? ಈ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ…

ಮುಂದೆ ಓದಿ ...
  • News18 Kannada
  • 4-MIN READ
  • Last Updated :
  • Karnataka, India
  • Share this:

ಕರ್ನಾಟಕ ವಿಧಾನಸಭಾ ಚುನಾವಣೆ (Karnataka assembly elections) ಹತ್ತಿರ ಬರುತ್ತಿದೆ. ಚುನಾವಣಾ ಆಯೋಗದಿಂದ (Election Commission) ದಿನಾಂಕ ಘೋಷಣೆ ಆಗುವುದೊಂದೇ ಬಾಕಿ ಇದೆ. ಆದರೆ ಈಗಾಗಲೇ ಬಿಜೆಪಿ (BJP), ಕಾಂಗ್ರೆಸ್ (Congress), ಜೆಡಿಎಸ್ (JDS) ಸೇರಿದಂತೆ ಎಲ್ಲಾ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇದರ ನಡುವೆ ಬಿಜೆಪಿಯ ಕೆಲ ಹಾಲಿ ಶಾಸಕರಿಗೆ (sitting MLA) ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yeddyurappa) ಶಾಕ್ ನೀಡಿದ್ದಾರೆ. “ಹಾಲಿ ಬಿಜೆಪಿಯ ಎಲ್ಲಾ ಶಾಸಕರಿಗೂ ಈ ಬಾರಿ ಟಿಕೆಟ್ ನೀಡಲಾಗುತ್ತದೆ. ಆದರೆ ಕೆಲ 4ರಿಂದ 6 ಶಾಸಕರನ್ನು ಹೊರತುಪಡಿಸಿ” ಅಂತ ಹೇಳಿದ್ದಾರೆ! ಇದು ಬಹುತೇಕ ಎಲ್ಲಾ ಶಾಸಕರಲ್ಲಿ, ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಲ್ಲಿ ನಡುಕ ಹುಟ್ಟಿಸಿದೆ. ಈಗಾಗಲೇ ಗುಜರಾತ್ (Gujarat) ಗೆದ್ದು ಬೀಗಿರುವ ಬಿಜೆಪಿ ರಾಷ್ಟ್ರೀಯ ನಾಯಕರು ಕರ್ನಾಟಕದಲ್ಲೂ ‘ಗುಜರಾತ್ ಮಾದರಿ’ (Gujarat Model) ಚುನಾವಣಾ ರಣತಂತ್ರ ರೂಪಿಸಲು ಪ್ಲಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ನಡುವೆಯೇ ಬಿಎಸ್‌ವೈ ನೀಡಿರುವ ಹೇಳಿಕೆ ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ. ಹಾಗಿದ್ರೆ ಏನಿದು ಗುಜರಾತ್ ಮಾದರಿ? ಹಾಲಿ ಎಲ್ಲಾ ಶಾಸಕರಿಗೂ ಟಿಕೆಟ್ ಸಿಗೋದಿಲ್ವಾ? ಈ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ…


ಗುಜರಾತ್‌ನಲ್ಲಿ ಏನಾಗಿತ್ತು ಎಲೆಕ್ಷನ್ ಫಲಿತಾಂಶ?


ಗುಜರಾತ್‌ನಲ್ಲಿ 2022ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆ ಭಾರತೀಯ ಜನತಾ ಪಾರ್ಟಿಗೆ ಮತ್ತೊಮ್ಮೆ ಅಧಿಕಾರ ನೀಡಿತು. ಕಳೆದ 27 ವರ್ಷಗಳಿಂದ ಗುಜರಾತ್‌ ಆಳುತ್ತಿದ್ದ ಬಿಜೆಪಿ, ಮತ್ತೊಮ್ಮೆ ಅಧಿಕಾರದ ಗದ್ದುಗೆಗೆ ಏರಿತು. 182 ಸ್ಥಾನಗಳ ಪೈಕಿ ಬಿಜೆಪಿ ಒಂದೇ ಬರೋಬ್ಬರಿ 156 ಸ್ಥಾನಗಳನ್ನು ಪಡೆದು ಬೀಗಿತು. ಅತ್ತ ಕೇವಲ 17 ಸ್ಥಾನಗಳನ್ನು ಪಡೆದ ಕಾಂಗ್ರೆಸ್ ವಿಪಕ್ಷ ಸ್ಥಾನವನ್ನು ಪಡೆಯಲೂ ಅನರ್ಹವಾಯ್ತು.


ಹೊಸದಾಗಿ ಸೃಷ್ಟಿಯಾಯ್ತು ಚುನಾವಣಾ ರಣತಂತ್ರ


ಪ್ರಧಾನಿ ನರೇಂದ್ರ ಮೋದಿಯವರ ಅಲೆಯ ಜೊತೆಗೆ ಬಿಜೆಪಿ ಚಾಣಾಕ್ಷ ಅಮಿತ್ ಶಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಕೈಗೊಂಡ ಕಾರ್ಯತಂತ್ರ ಗುಜರಾತ್‌ನಲ್ಲಿ ಸಕ್ಸಸ್ ಆಗಿತ್ತು. ಕಳೆದ 27 ವರ್ಷಗಳಿಂದಲೂ ಗುಜರಾತ್‌ನಲ್ಲೇ ಅದೇ ತಂತ್ರವನ್ನು ಬಿಜೆಪಿ ಪ್ರಯೋಗಿಸುತ್ತಿದೆ. ಅದಕ್ಕೆ ‘ಗುಜರಾತ್ ಮಾದರಿ’ ಚುನಾವಣಾ ತಂತ್ರಗಾರಿಕೆ ಅಂತ ಬಿಜೆಪಿ ನಾಯಕರು ಕರೆಯುತ್ತಾರೆ.


ಏನಿದು ಗುಜರಾತ್ ಮಾದರಿ?


ಬಿಜೆಪಿ ಗುಜರಾತ್‌ನಲ್ಲಿ 27 ವರ್ಷಗಳಿಂದ ಅಧಿಕಾರದಲ್ಲಿದೆ ಮತ್ತು ಅದರ ಚುನಾವಣಾ ತಂತ್ರವನ್ನು "ಗುಜರಾತ್ ಮಾದರಿ" ಎಂದು ಕರೆಯಲಾಗುತ್ತದೆ. ತಂತ್ರವು ಹಲವಾರು ಪ್ರಮುಖ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ.


ಇದನ್ನೂ ಓದಿ: Madalu Prashant: ಬಗೆದಷ್ಟು ಹೊರ ಬರುತ್ತಿದೆ ಮಾಡಾಳು ಮಗನ ಭ್ರಷ್ಟಾಚಾರ! ಡೀಲ್ ನಡೆಸ್ತಿದ್ದನಾ ಪ್ರಶಾಂತ್?


ಅಭಿವೃದ್ಧಿ ಮತ್ತು ಬೆಳವಣಿಗೆ


ಗುಜರಾತ್ ಮಾದರಿಯು ರಾಜ್ಯದ ಜನರ ಜೀವನವನ್ನು ಸುಧಾರಿಸುವ ಪ್ರಾಥಮಿಕ ಸಾಧನವಾಗಿ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಒತ್ತಿಹೇಳುತ್ತದೆ. ಗುಜರಾತ್‌ನ ಬಿಜೆಪಿ ಸರ್ಕಾರವು ರಾಜ್ಯದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಕೈಗಾರಿಕೀಕರಣವನ್ನು ಉತ್ತೇಜಿಸುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವತ್ತ ಗಮನಹರಿಸಿದೆ.


ಹಿಂದುತ್ವದ ಅಜೆಂಡಾ


ಬಿಜೆಪಿ ತನ್ನ ಹಿಂದೂ ರಾಷ್ಟ್ರೀಯತಾವಾದಿ ಸಿದ್ಧಾಂತಕ್ಕೆ ಹೆಸರುವಾಸಿಯಾಗಿದೆ ಮತ್ತು ಗುಜರಾತ್ ಮಾದರಿ ತಂತ್ರವು ಈ ಅಂಶವನ್ನು ಒತ್ತಿಹೇಳುತ್ತದೆ. ಪಕ್ಷವು ತನ್ನ ಪ್ರಚಾರಗಳಲ್ಲಿ ಮುಸ್ಲಿಂ ವಿರೋಧಿ ಮಾತುಗಳನ್ನು ಬಳಸುತ್ತಿದೆ ಎಂದು ಆರೋಪಿಸಲಾಗಿದೆ ಮತ್ತು ಇದು ರಾಜ್ಯದಲ್ಲಿ ಕೋಮು ಉದ್ವಿಗ್ನತೆಯನ್ನು ಉಂಟುಮಾಡಿದೆ ಎಂದು ಕೆಲವರು ಆರೋಪಿಸುತ್ತಾರೆ. ಆದರೆ ಇದು ಹಿಂದುತ್ವದ ಅಜೆಂಡಾ ಅಷ್ಟೇ, ಇದು ಬೇರೆ ಧರ್ಮದ ವಿರೋಧಿ ಧೋರಣೆ ಅಲ್ಲ ಅಂತ ಬಿಜೆಪಿ ಹೇಳುತ್ತಿದೆ.


ಮೋದಿ ನಾಯಕತ್ವದ ಅಲೆ


ಗುಜರಾತ್ ಮಾದರಿ ತಂತ್ರವು 2001 ರಿಂದ 2014 ರವರೆಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಾಳೆಹಾಕಿಕೊಂಡಿದೆ. ಬಿಜೆಪಿ ತನ್ನ ಪ್ರಚಾರಗಳಲ್ಲಿ ಮೋದಿ ಅವರ ವೈಯಕ್ತಿಕ ಜನಪ್ರಿಯತೆ ಮತ್ತು ನಾಯಕತ್ವವನ್ನು ಪ್ರಮುಖ ಚುನಾವಣಾ ತಂತ್ರವಾಗಿ ಬಳಸಿಕೊಂಡಿದೆ.


ಸಮಾಜ ಕಲ್ಯಾಣ ಕಾರ್ಯಕ್ರಮಗಳು


ಸಮಾಜದಲ್ಲಿ ಮಹಿಳೆಯರ ಸ್ಥಾನಮಾನವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ‘ಬೇಟಿ ಬಚಾವೋ, ಬೇಟಿ ಪಢಾವೋ’ ಅಭಿಯಾನದಂತಹ ಹಲವಾರು ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳನ್ನು ಗುಜರಾತ್‌ನಲ್ಲಿ ಬಿಜೆಪಿ ಜಾರಿಗೊಳಿಸಿದೆ. ಈ ಕಾರ್ಯಕ್ರಮಗಳು ಜನಸಂಖ್ಯೆಯ ಕೆಲವು ವರ್ಗಗಳಲ್ಲಿ ಬಿಜೆಪಿಯ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ಸೃಷ್ಟಿಸಲು ಸಹಾಯ ಮಾಡಿದೆ.


ಹಲವು ರಾಜ್ಯಗಳಲ್ಲಿ ಪ್ರಯೋಗಕ್ಕೆ ಸಿದ್ಥತೆ


ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಲ್ಲಿ ಗುಜರಾತ್ ಮಾದರಿಯನ್ನು ಪುನರಾವರ್ತಿಸಲು ಬಿಜೆಪಿ ಪ್ರಯತ್ನಿಸಿದೆ. ರಾಜ್ಯದ ಮೂಲಸೌಕರ್ಯಗಳನ್ನು ಸುಧಾರಿಸುವುದು, ಕೈಗಾರಿಕೀಕರಣವನ್ನು ಉತ್ತೇಜಿಸುವುದು ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಗುರಿಯೊಂದಿಗೆ ಪಕ್ಷವು ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ತನ್ನ ಆಡಳಿತದ ಮುಖ್ಯ ಕೇಂದ್ರವಾಗಿ ಒತ್ತಿಹೇಳಿದೆ.


ರಾಷ್ಟ್ರೀಯ ಮತ್ತು ಸ್ಥಳೀಯ ನಾಯಕತ್ವ ಹೈಲೈಟ್


ಬಿಜೆಪಿಯು ತನ್ನ ಪ್ರಮುಖ ನಾಯಕರ ನಾಯಕತ್ವವನ್ನು ಹೈಲೈಟ್ ಮಾಡಲು ಪ್ರಯತ್ನಿಸಿದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಹೈಲೈಟ್ ಮಾಡುತ್ತಿದೆ. ಇಬ್ಬರೂ ನಾಯಕರನ್ನು ರಾಜ್ಯಕ್ಕೆ ಅಭಿವೃದ್ಧಿ ಮತ್ತು ಉತ್ತಮ ಆಡಳಿತವನ್ನು ನೀಡುವ ಸಾಮರ್ಥ್ಯವಿರುವ ಪ್ರಬಲ, ನಿರ್ಣಾಯಕ ನಾಯಕರಾಗಿ ಪ್ರಸ್ತುತಪಡಿಸಲಾಗಿದೆ.


ಕರ್ನಾಟಕದಲ್ಲಿ ಗುಜರಾತ್ ಮಾದರಿಗೆ ಹಲವು ಸವಾಲು


ಕರ್ನಾಟಕದಲ್ಲಿ ಬಿಜೆಪಿಯ ತಂತ್ರವು ಗುಜರಾತ್ ಮಾದರಿಯಂತೆಯೇ ಅಭಿವೃದ್ಧಿ, ಹಿಂದುತ್ವ ಮತ್ತು ಪ್ರಬಲ ನಾಯಕತ್ವಕ್ಕೆ ಒತ್ತು ನೀಡಿದೆ. ಆದಾಗ್ಯೂ, ಇತರ ರಾಜಕೀಯ ಪಕ್ಷಗಳು ಮತ್ತು ನಾಗರಿಕ ಸಮಾಜ ಗುಂಪುಗಳ ವಿರೋಧದಿಂದಾಗಿ ರಾಜ್ಯದಲ್ಲಿ ಪ್ಲಾನ್ ಅನುಷ್ಠಾನಗೊಳಿಸುವಲ್ಲಿ ಕೆಲವು ಸವಾಲುಗಳನ್ನು ಎದುರಿಸಿದೆ.


ಹಳಬರಿಗೆ ಕೊಕ್, ಹೊಸ ಮುಖಗಳಿಗೆ ಮಣೆ


ಕಳೆದ ಬಾರಿ ಗುಜರಾತ್ ಚುನಾವಣೆಯಲ್ಲಿ ಹಳೆ ಮುಖಗಳಿಗೆ ಕೊಕ್ ನೀಡಲಾಗಿತ್ತು. ಹಲವು ಹಾಲಿ ಶಾಸಕರಿಗೆ ಕೊಕ್ ನೀಡದೇ ಹೊಸ ಮುಖಗಳಿಗೆ ಮಣೆ ಹಾಕಲಾಗಿತ್ತು. ಈ ಪೈಕಿ ಬಹುತೇಕ ಹೊಸಬರು ಗೆದ್ದಿದ್ದಾರೆ. ಗುಜರಾತ್‌ನ 5 ಹಾಲಿ ಸಚಿವರು ಸೇರಿ 38 ಶಾಸಕರಿಗೆ ಟಿಕೆಟ್ ಕೈ ತಪ್ಪಿತ್ತು. ಈ ರೀತಿ ಬಿಜೆಪಿ ಟಿಕೆಟ್ ವಂಚಿತರಲ್ಲಿ ಬಹುತೇಕರು 75 ವರ್ಷದೊಳಗಿನವರಿದ್ದರು. ಅದೇ ತತ್ವವನ್ನು ಪ್ರಯೋಗಿಸಿ, ಕರ್ನಾಟಕದಲ್ಲೂ ಜಾರಿ ತರಲಾಗುತ್ತದೆ ಎನ್ನಲಾಗುತ್ತಿದೆ. ಈಗಾಗಲೇ ಹಾಲಿ ಶಾಸಕರ ಪೈಕಿ 4ರಿಂದ 6 ಜನಕ್ಕೆ ಈ ಬಾರಿಗೆ ಟಿಕೆಟ್ ಸಿಗೋದಿಲ್ಲ ಅಂತ ಮಾಜಿ ಸಿಎಂ ಬಿಎಸ್‌ವೈ ಹೇಳಿರೋದು ಇದಕ್ಕೆ ತಾಳೆಯಾಗುತ್ತಿದೆ.




ಯಾರ್ಯಾರಿಗೆ ಟಿಕೆಟ್, ಯಾರಿಗೆ ಟಿಕೆಟ್ ಸಿಗೋದು ಡೌಟ್?


ಮೋದಿ ಅಲೆಯೊಂದೇ ಅಲ್ಲ, ಸ್ವಂತ ಬಲದಿಂದಲೂ ಗೆಲ್ಲುವವರಿಗೆ ಮಾತ್ರ ಈ ಬಾರಿ ಟಿಕೆಟ್ ನೀಡಲು ನಿರ್ಧರಿಸಲಾಗಿದ್ಯಂತೆ. ಭ್ರಷ್ಟಾಚಾರದಂತಹ ಗುರುತರ ಆರೋಪ ಎದುರಿಸುತ್ತಿರುವ ಹಾಲಿ ಶಾಸಕರಿಗೆ ಟಿಕೆಟ್ ಮಿಸ್ ಆಗಬಹುದು. ಹಳೆ ನಾಯಕ ಜೊತೆ ಹೊಸ ಮುಖಕ್ಕೂ ಮಣೆ ಹಾಕಲು ಪ್ಲಾನ್ ಮಾಡಲಾಗಿದೆ. ಹೀಗಾಗಿ ಮಧ್ಯಮ ವರ್ಗ, ಯುವಕರನ್ನ ಸೆಳೆಯುವ ಯುವ ನಾಯಕರಿಗೆ ಶೋಧಿಸಲಾಗುತ್ತಿದೆ. ವಯಸ್ಸಿನ ಮಾನದಂಡ ಜೊತೆ ವರ್ಚಸ್ಸು ನಾಯಕರಿಗೆ ಟಿಕೆಟ್ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

Published by:Annappa Achari
First published: