• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಫುಲ್ ಕೋರ್ಟ್ ಮೀಟಿಂಗ್ ಎಂದರೇನು? ಸಭೆಯನ್ನು ಯಾವಾಗ ನಡೆಸಲಾಗುತ್ತದೆ ಹಾಗೂ ಇದರ ಮಹತ್ವವೇನು? ಇಲ್ಲಿದೆ ವಿವರ

Explained: ಫುಲ್ ಕೋರ್ಟ್ ಮೀಟಿಂಗ್ ಎಂದರೇನು? ಸಭೆಯನ್ನು ಯಾವಾಗ ನಡೆಸಲಾಗುತ್ತದೆ ಹಾಗೂ ಇದರ ಮಹತ್ವವೇನು? ಇಲ್ಲಿದೆ ವಿವರ

 49 ನೇ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್

49 ನೇ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್

ಫುಲ್ ಕೋರ್ಟ್ ಸಭೆಯಲ್ಲಿ ಎಲ್ಲಾ ಅಗತ್ಯವಿರುವ ನ್ಯಾಯಾಧೀಶರು ಉಪಸ್ಥಿತರಿರುತ್ತಾರೆ. ಸಭೆಯಲ್ಲಿ ಪ್ರಕರಣಗಳ (Cases) ಪಟ್ಟಿ ಹಾಗೂ ಇತ್ಯರ್ಥಗೊಳ್ಳದೇ ಇರುವ ಪ್ರಕರಣಗಳನ್ನು ಹೇಗೆ ಪರಿಹರಿಸಬಹುದೆಂಬುದರ ಕುರಿತು ನ್ಯಾಯಾಧೀಶರು ಚರ್ಚಿಸುತ್ತಾರೆ. ಹಾಗಿದ್ದರೆ ಈ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ

ಮುಂದೆ ಓದಿ ...
 • Share this:
top videos

  ಸುಪ್ರೀಂ ಕೋರ್ಟ್‌ನ (Supreme court) 49 ನೇ ಮುಖ್ಯ ನ್ಯಾಯಾಧೀಶರಾಗಿ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹೊಸದಾಗಿ ನೇಮಕಗೊಂಡಿರುವ ಸಿಜೆಐ (ಮುಖ್ಯ ನ್ಯಾಯಮೂರ್ತಿ) ಅಲ್ಪಾವಧಿಯ ಅವಧಿಯನ್ನು ಹೊಂದಿದ್ದಾರೆ ಮತ್ತು ನವೆಂಬರ್ 8, 2022 ರವರೆಗೆ ಅಧಿಕಾರವನ್ನು ಹೊಂದಿರುತ್ತಾರೆ. ಅವರು ಶುಕ್ರವಾರ ನಿವೃತ್ತರಾದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ಉತ್ತರಾಧಿಕಾರಿಯಾಗಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ಉದಯ್ ಉಮೇಶ್ ಲಲಿತ್ ಫುಲ್ ಕೋರ್ಟ್ ಸಭೆಯನ್ನು (Full Court Meeting) ಕರೆದರು. ಫುಲ್ ಕೋರ್ಟ್ ಸಭೆಯಲ್ಲಿ ಎಲ್ಲಾ ಅಗತ್ಯವಿರುವ ನ್ಯಾಯಾಧೀಶರು (Judgr) ಉಪಸ್ಥಿತರಿರುತ್ತಾರೆ. ಸಭೆಯಲ್ಲಿ ಪ್ರಕರಣಗಳ (Cases) ಪಟ್ಟಿ ಹಾಗೂ ಇತ್ಯರ್ಥಗೊಳ್ಳದೇ ಇರುವ ಪ್ರಕರಣಗಳನ್ನು ಹೇಗೆ ಪರಿಹರಿಸಬಹುದೆಂಬುದರ ಕುರಿತು ನ್ಯಾಯಾಧೀಶರು ಚರ್ಚಿಸುತ್ತಾರೆ. ಹಾಗಿದ್ದರೆ ಈ ಕುರಿತು ಇನ್ನಷ್ಟು ವಿವರಗಳನ್ನು ತಿಳಿದುಕೊಳ್ಳೋಣ


  ಫುಲ್ ಕೋರ್ಟ್ ಮೀಟಿಂಗ್ ಎಂದರೇನು?
  ಫುಲ್ ಕೋರ್ಟ್ ಸಭೆ ಎಂದರೆ ನ್ಯಾಯಾಲಯದ ಎಲ್ಲಾ ನ್ಯಾಯಾಧೀಶರು ಉಪಸ್ಥಿತರಿರುವಂತಹ ಸಭೆಯಾಗಿದೆ.


  ಸಭೆಯನ್ನು ಯಾವಾಗ ನಡೆಸಲಾಗುತ್ತದೆ?
  ಸಭೆಯನ್ನು ನಡೆಸುವುದರ ಕುರಿತು ಯಾವುದೇ ಲಿಖಿತ ನಿಯಮಗಳಿಲ್ಲ. ಸಭೆ ಕರೆಯುವ ನಿಯಮದ ಪ್ರಕಾರ, ನ್ಯಾಯಾಂಗಕ್ಕೆ ಸಂಬಂಧಿಸಿದ ಕೆಲವೊಂದು ಪ್ರಮುಖ ಸಮಸ್ಯೆಗಳನ್ನು ಚರ್ಚಿಸಲು ಭಾರತದ ಮುಖ್ಯ ನ್ಯಾಯಾಧೀಶರು ಫುಲ್ ಕೋರ್ಟ್ ಮೀಟಿಂಗ್‌ಗೆ ಕರೆ ನೀಡುತ್ತಾರೆ. ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ನಲ್ಲಿ ಅಭ್ಯಾಸ ನಿರತ ಹಿರಿಯ ವಕೀಲರ ಹುದ್ದೆಗಳನ್ನು ಇದೇ ಮೀಟಿಂಗ್‌ನಲ್ಲಿ ನಿರ್ಧರಿಸಲಾಗುತ್ತದೆ.


  ಫುಲ್ ಕೋರ್ಟ್ ಮೀಟಿಂಗ್‌ನ ಮಹತ್ವವೇನು?
  ವ್ಯವಸ್ಥೆಯನ್ನು ನ್ಯಾಯುಯುತವಾಗಿ ಕೊಂಡೊಯ್ಯುವುದು ಮೂಲ ಉದ್ದೇಶವಾಗಿದೆ. ದೇಶದ ಕಾನೂನು ವ್ಯವಸ್ಥೆಗೆ ತೊಡಕಾಗಿರುವ ಸಮಸ್ಯೆಗಳನ್ನು ನಿವಾರಿಸುವುದು ಅಂತೆಯೇ ಸಮಸ್ಯೆಗಳನ್ನು ಎದುರಿಸಲು ಸಿದ್ಧತೆಗಳನ್ನು ನಡೆಸುವುದು ಹಾಗೂ ನ್ಯಾಯಾಲಯದ ಆಡಳಿತಾತ್ಮಕ ಕ್ರಮಗಳಲ್ಲಿ ಅಗತ್ಯವಿದ್ದರೆ ತಿದ್ದುಪಡಿಗಳನ್ನು ಮಾಡುವಂತಹ ಕ್ರಮಗಳನ್ನು ಕೈಗೊಳ್ಳಲು ಫುಲ್ ಕೋರ್ಟ್ ಮೀಟಿಂಗ್ ಸೂಕ್ತವಾಗಿದೆ.


  ಇದನ್ನೂ ಓದಿ:   POCSO Act: ಪೋಕ್ಸೋ ಕಾಯ್ದೆ ಎಷ್ಟು ಕಠಿಣವಾಗಿದೆ? ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಶಿಕ್ಷೆಯೇನು?

  ಫುಲ್ ಕೋರ್ಟ್ ಮೀಟಿಂಗ್‌ನಲ್ಲಿ ಎಷ್ಟು ನ್ಯಾಯಾಧೀಶರಿರುತ್ತಾರೆ?
  ಒಬ್ಬರು ನ್ಯಾಯಾಧೀಶರು ಅಧ್ಯಕ್ಷತೆ ವಹಿಸುವ ನ್ಯಾಯಾಲಯದಲ್ಲಿ ಫುಲ್ ಕೋರ್ಟ್ ಸಭೆಯು ಮೂರು ಅಥವಾ ಹೆಚ್ಚಿನ ನ್ಯಾಯಾಧೀಶರನ್ನು ಹೊಂದಿರುತ್ತದೆ. ಅನೇಕ ಮೇಲ್ಮನವಿ ನ್ಯಾಯಾಲಯಗಳಂತೆ, ಸಾಮಾನ್ಯವಾಗಿ ಮೂರು ನ್ಯಾಯಾಧೀಶರು ಇರುವ ನ್ಯಾಯಾಲಯಕ್ಕೆ, ಪೂರ್ಣ ನ್ಯಾಯಾಲಯವು ಐದು (ಅಥವಾ ಹೆಚ್ಚಿನ) ನ್ಯಾಯಾಧೀಶರ ಪೀಠವನ್ನು ಹೊಂದಿರುತ್ತದೆ.


  ಫುಲ್ ಕೋರ್ಟ್ ಮೀಟಿಂಗ್ ಅನ್ನು ಎಷ್ಟು ಬಾರಿ ನಡೆಸಲಾಗುತ್ತದೆ?
  ಭಾರತದ ಮಖ್ಯ ನ್ಯಾಯಾಧೀಶರ ಪರಿವೀಕ್ಷಣೆಯ ಮೇರೆಗೆ ಫುಲ್ ಕೋರ್ಟ್ ಮೀಟಿಂಗ್ ಅನ್ನು ನಡೆಸಲಾಗುವುದರಿಂದ ಇದು ಯಾವುದೇ ದಿನಾಂಕವನ್ನು ಆಧರಿಸಿಲ್ಲ.


  ಈ ಹಿಂದೆ ಹಲವಾರು ಬಾರಿ ಫುಲ್ ಕೋರ್ಟ್ ಮೀಟಿಂಗ್‌ಗಳು ನಡೆದಿವೆ. ಮಾರ್ಚ್ 2020 ರಲ್ಲಿ ಕೋವಿಡ್-19 ಸ್ಫೋಟ ಹಾಗೂ ನ್ಯಾಯಾಲಯದ ಸಿಬ್ಬಂದಿಗಳಿಗೆ ಕೋವಿಡ್ ಹರಡಿದ ನಂತರ ಮುಂದಿನ ಸೂಚನೆಯವರೆಗೆ ನ್ಯಾಯಾಲಯವನ್ನು ಮುಚ್ಚಲು ಆದೇಶಿಸಲಾಯಿತು ಅಂತೆಯೇ ವಕೀಲರ ಸಂಘಗಳ ಬೇಡಿಕೆಗಳನ್ನು ಚರ್ಚಿಸಲು ಮತ್ತು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳನ್ನು ನಿರ್ಧರಿಸಲು ಫುಲ್ ಕೋರ್ಟ್ ಮೀಟಿಂಗ್ ನಡೆಸಲಾಯಿತು.


  ನ್ಯಾಯಾಧೀಶರ ಆಸ್ತಿ ಘೋಷಣೆ:
  ಅಲ್ಲದೆ ಮೇ 7, 1997 ರಂದು ನಡೆದ ಫುಲ್ ಕೋರ್ಟ್ ಮೀಟಿಂಗ್‌ನಲ್ಲಿ ಪ್ರತಿಯೊಬ್ಬ ನ್ಯಾಯಾಧೀಶರು ತಮ್ಮ ಎಲ್ಲಾ ಆಸ್ತಿ ಘೋಷಣೆಗಳನ್ನು ರಿಯಲ್ ಎಸ್ಟೇಟ್ ಅಥವಾ ಹೂಡಿಕೆ ರೂಪದಲ್ಲಿ ಮಾಡಬೇಕು ಎಂದು ತೀರ್ಮಾನಿಸಿದರು. ಸ್ವಂತ ಹೆಸರಿನಲ್ಲಿ ಅಥವಾ ಸಂಗಾತಿಯ ಹೆಸರಿನಲ್ಲಿ ಹಾಗೂ ಅವಲಂಬಿತ ಯಾವುದೇ ವ್ಯಕ್ತಿಯ ಹೆಸರಿನಲ್ಲಿ ಒಂದು ಸಮಂಜಸವಾದ ಸಮಯದೊಳಗೆ ಹಾಗೂ ಗಣನೀಯ ಸ್ವರೂಪದ ಯಾವುದೇ ಸ್ವಾಧೀನಪಡಿಸಿಕೊಂಡಾಗ ನಂತರ ಪ್ರಕಟಗೊಳಿಸಿ ಎಂಬುದು ಸಭೆಯಲ್ಲಿ ನಡೆಸಿದ ತೀರ್ಮಾನವಾಗಿದೆ.


  ಸಭೆಯಲ್ಲಿ ತೀರ್ಮಾನಿಸಲಾದ ಕ್ರಮಗಳೇನು?
  ತಮ್ಮ ಲೋಪ ಹಾಗೂ ಆಯೋಗದ ಕಾರ್ಯಗಳಿಂದ ಸೂಚಿಸಲಾದ ನ್ಯಾಯಾಂಗ ಜೀವನದ ಸಾರ್ವತ್ರಿಕವಾಗಿ ಅಂಗೀಕರಿಸಲಾದ ಮೌಲ್ಯಗಳನ್ನು ಅನುಸರಿಸದ ನ್ಯಾಯಾಧೀಶರ ವಿರುದ್ಧ ಸೂಕ್ತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ಭಾರತದ ಗೌರವಾನ್ವಿತ ಮುಖ್ಯ ನ್ಯಾಯಾಧೀಶರಿಂದ ಆಂತರಿಕ ಕಾರ್ಯವಿಧಾನವನ್ನು ರೂಪಿಸಬೇಕು ಎಂದು ಸಭೆ ನಿರ್ಧರಿಸಿತು. ನ್ಯಾಯಾಂಗ ಜೀವನದ ಮೌಲ್ಯಗಳ ಮರುಸ್ಥಾಪನೆ" ಯಲ್ಲಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು ಗಮನಿಸಬೇಕಾದ ಮತ್ತು ಅನುಸರಿಸಬೇಕಾದ ಕೆಲವು ನ್ಯಾಯಾಂಗ ಮಾನದಂಡಗಳು ಮತ್ತು ತತ್ವಗಳನ್ನು ನಿಗದಿಪಡಿಸಲಾಗಿದೆ.


  ಇದನ್ನೂ ಓದಿ:   Hemant Soren Disqualification: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್​ಗೆ ಅನರ್ಹತೆ ಭೀತಿ!

  ಹಲವಾರು ತೀರ್ಪುಗಳ ಭಾಗವಾಗಿರುವ ಯು.ಯು. ಲಲಿತ್
  ಉದಯ್ ಉಮೇಶ್ ಲಲಿತ್ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಹಲವಾರು ಪ್ರಮುಖ ತೀರ್ಪುಗಳ ಭಾಗವಾಗಿದ್ದಾರೆ. ಲಲಿತ್ ನೇತೃತ್ವದ ಪೀಠವು ಕಳೆದ ತಿಂಗಳು 2017 ರಲ್ಲಿ ನ್ಯಾಯಾಲಯದ ನಿಂದನೆ ಆರೋಪ ಸಾಬೀತಾದ ವಿಜಯ್ ಮಲ್ಯ ಅವರಿಗೆ ನಾಲ್ಕು ತಿಂಗಳ ಜೈಲು ಶಿಕ್ಷೆ ಮತ್ತು 2,000 ರೂ ವಿಧಿಸಿತ್ತು. ಮೇ 2017 ರಲ್ಲಿ ಅವಹೇಳನಕ್ಕಾಗಿ ಪರಾರಿಯಾದ ಉದ್ಯಮಿಯನ್ನು ದೋಷಿ ಎಂದು ತೀರ್ಪು ನೀಡಿದ ಪೀಠದ ಮುಖ್ಯಸ್ಥರಾಗಿದ್ದರು.


  ಮರಣ ದಂಡನೆಗೊಳಗಾದ ಅಪರಾಧಿಗಳೊಂದಿಗೆ ವ್ಯವಹರಿಸುವಾಗ ಅವರ ಅಪರಾಧ ಕೃತ್ಯ ತಗ್ಗಿಸುವ ಅಥವಾ ಅಪರಾಧಗಳನ್ನು ಕಡಿಮೆ ಮಾಡುವ ಅಂಶಗಳನ್ನು ಒತ್ತಿಹೇಳಿತು. ಮರಣ ದಂಡನೆಯನ್ನು ವಿಧಿಸಬೇಕೆ ಅಥವಾ ಬೇಡವೇ ಎಂಬುದನ್ನು ಪರಿಗಣಿಸುವಾಗ, ಶಿಕ್ಷೆಯನ್ನು ತಗ್ಗಿಸುವ ಪ್ರತಿಯೊಂದು ಸನ್ನಿವೇಶವನ್ನು ನ್ಯಾಯಾಲಯವು ಅಗತ್ಯವಾಗಿ ಪರಿಗಣಿಸಬೇಕು ಎಂದಾಗಿದೆ.


  ಉದಯ್ ಉಮೇಶ್ ಲಲಿತ್ ಯಾರು ?
  ನ್ಯಾಯಾಧೀಶರಾಗಿ ಸೇವೆ ಸಲ್ಲಿಸುವ ಮೊದಲು ಉದಯ್ ಉಮೇಶ್ ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದರು. ಉದಯ್ ಉಮೇಶ್ ಅವರು ಮಹಾರಾಷ್ಟ್ರದ ಸೋಲಾಪುರದಲ್ಲಿ ಜನಿಸಿದರು. ಯು.ಆರ್.ಲಲಿತ್ ಅವರು ಬಾಂಬೆ ಹೈಕೋರ್ಟ್ ನಾಗ್ಪುರ ಪೀಠದ ಮಾಜಿ ಹೆಚ್ಚುವರಿ ನ್ಯಾಯಾಧೀಶರಾಗಿದ್ದರು. ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿಯನ್ನು ಪೂರ್ಣಗೊಳಿಸಿದರು.


  ಉದಯ್ ಯು ಲಲಿತ್ ಅವರು ಜೂನ್ 1983 ರಲ್ಲಿ ಮಹಾರಾಷ್ಟ್ರ ಮತ್ತು ಗೋವಾದ ಬಾರ್ ಕೌನ್ಸಿಲ್‌ಗೆ ವಕೀಲರಾಗಿ ಸೇರಿಕೊಂಡರು. ಅವರು ವಕೀಲ ಎಂ.ಎ. ರಾಣೆ ಅವರೊಂದಿಗೆ ಅಭ್ಯಾಸವನ್ನು ಪ್ರಾರಂಭಿಸಿದರು. ಮುಂದೆ, ಅವರು ತಮ್ಮ ಅಭ್ಯಾಸವನ್ನು 1985 ರಲ್ಲಿ ದೆಹಲಿಗೆ ಬದಲಾಯಿಸಿದರು. ದೆಹಲಿಯಲ್ಲಿ ಅವರು ಹಿರಿಯ ವಕೀಲ ಪ್ರವೀಣ್ ಹೆಚ್. ಪಾರೇಖ್ ಅವರ ಚೇಂಬರ್‌ಗೆ ಸೇರ್ಪಡೆಗೊಂಡರು.


  ವರ್ಷಗಳ ನಂತರ, ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ನ್ಯಾಯಮೂರ್ತಿ ಅಶೋಕ್ ಕುಮಾರ್ ಗಂಗೂಲಿ ಅವರ ಸುಪ್ರೀಂ ಕೋರ್ಟ್ ಪೀಠವು ಉದಯ್ ಯು ಲಲಿತ್ ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಿಸಿತು. ಮೂರು ವರ್ಷಗಳ ನಂತರ, ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ರಾಜೇಂದ್ರ ಮಲ್ ಲೋಧಾ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಅವರನ್ನು ಸುಪ್ರೀಂ ಕೋರ್ಟ್‌ಗೆ ನ್ಯಾಯಮೂರ್ತಿಯಾಗಿ ಉನ್ನತೀಕರಿಸಲು ಶಿಫಾರಸು ಮಾಡಿತು. ಆಗಸ್ಟ್ 2014 ರಲ್ಲಿ, ಉದಯ್ ಯು ಲಲಿತ್ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಆಯ್ಕೆಯಾದ ಆರನೇ ವಕೀಲರಾದರು.


  ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ
  ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಸ್ಟ್ 10, 2022 ರಂದು ಉದಯ್ ಯು ಲಲಿತ್ ಅವರನ್ನು ಭಾರತದ 49 ನೇ ಮುಖ್ಯ ನ್ಯಾಯಮೂರ್ತಿಯಾಗಿ ನೇಮಿಸಿದರು. ಆಗಸ್ಟ್ 27, 2022 ರಂದು ರಾಷ್ಟ್ರಪತಿ ಭವನದಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಲಲಿತ್ ಅವರು ಜುಲೈ 2020 ರಲ್ಲಿ ತಿರುವನಂತಪುರಂನ ಶ್ರೀ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತದಲ್ಲಿ ತಿರುವಾಂಕೂರಿನ ಹಿಂದಿನ ರಾಜಮನೆತನದ ಹಕ್ಕುಗಳನ್ನು ಎತ್ತಿಹಿಡಿದ ಪೀಠದ ನೇತೃತ್ವ ವಹಿಸಿದ್ದರು.


  ಇದನ್ನೂ ಓದಿ:  Atal Bihari Vajpayee: ಅಟಲ್ ಬಿಹಾರಿ ವಾಜಪೇಯಿಗೆ ಅಜಾತಶತ್ರು ಎಂಬ ಬಿರುದು ಬಂದಿದ್ದೇಗೆ?

  ಲಲಿತ್ ಅವರು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (NALSA) ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ತಮ್ಮ ಪಾತ್ರದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ನಟ ಸಲ್ಮಾನ್ ಖಾನ್ ವಿರುದ್ಧದ ಕೃಷ್ಣಮೃಗ ಪ್ರಕರಣ, ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ವಿರುದ್ಧದ ರೋಡ್ ರೇಜ್ ಪ್ರಕರಣ ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪರವಾಗಿ ಭ್ರಷ್ಟಾಚಾರ ಪ್ರಕರಣ ಸೇರಿದಂತೆ ಹಲವು ಪ್ರಮುಖ ಪ್ರಕರಣಗಳಲ್ಲಿ ಲಲಿತ್ ಪಾತ್ರ ಹಿರಿದಾದುದು.

  First published: