Explained: ಏನಿದು 5G Network? ಭಾರತದಲ್ಲಿ 4G ಗಿಂತ 5G ಹೆಚ್ಚು ದುಬಾರಿಯಾಗುವುದೇ? ಇಲ್ಲಿದೆ ವಿವರ

5G ಎಂದರೇನು? ಅದರ ಪ್ರಯೋಜನಗಳೇನು, ಬಳಕೆದಾರರು ಈ ನೆಟ್‌ವರ್ಕ್ ನಿಂದ ಏನನ್ನು ನಿರೀಕ್ಷಿಸಬಹುದು? ಕೌತುಕಕ್ಕೆ ಕಾರಣವಾಗಿರುವ 5G ಭಾರತದಲ್ಲಿ ಹೇಗೆ ಕಾರ್ಯನಿರ್ವಹಿಸಲಿದೆ? ಹೀಗೆ ಹೊಸ ನೆಟ್‌ವರ್ಕ್ ಮಾನದಂಡದ ಕುರಿತಾದ ಹಲವಾರು ಪ್ರಶ್ನೆಗಳಿಗೆ ನಾವಿಲ್ಲಿ ಉತ್ತರ ಹೊತ್ತು ತಂದಿದ್ದೇವೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
5G, ಭಾರತೀಯ ಟೆಲಿಕಾಂ (Telecom) ಜಗತ್ತಿನಲ್ಲಿ ಸದ್ಯ ಚರ್ಚೆಯಲ್ಲಿರುವ ಅತಿದೊಡ್ಡ ಸುದ್ದಿ. 5G ಎಂಬುದು ಐದನೇ ತಲೆಮಾರಿನ ಇಂಟರ್ನೆಟ್ (Internet) ಸೌಲಭ್ಯ, ಸರಳವಾಗಿ ಹೇಳುವುದಾದರೆ ವೇಗದ ಡೌನ್ಲೋಡ್ (Download) ಮತ್ತು ವೇಗದ ಅಪ್ಲೋಡ್ ಸೇವೆಯನ್ನು ನೀಡುವ ಇಂಟರ್ನೆಟ್. 5G ಬರುತ್ತಂತೆ, ಹೇಗಿರುತ್ತೋ ಎನೋ ಅನ್ನೋ ಕೂತಹಲದ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಹೌದು, ಅಷ್ಟಕ್ಕೂ 5G ಎಂದರೇನು? ಅದರ ಪ್ರಯೋಜನಗಳೇನು, ಬಳಕೆದಾರರು ಈ ನೆಟ್‌ವರ್ಕ್ ನಿಂದ (Network) ಏನನ್ನು ನಿರೀಕ್ಷಿಸಬಹುದು? ಕೌತುಕಕ್ಕೆ ಕಾರಣವಾಗಿರುವ 5G ಭಾರತದಲ್ಲಿ (India) ಹೇಗೆ ಕಾರ್ಯನಿರ್ವಹಿಸಲಿದೆ? ಹೀಗೆ ಹೊಸ ನೆಟ್‌ವರ್ಕ್ ಮಾನದಂಡದ ಕುರಿತಾದ ಹಲವಾರು ಪ್ರಶ್ನೆಗಳಿಗೆ ನಾವಿಲ್ಲಿ ಉತ್ತರ ಹೊತ್ತು ತಂದಿದ್ದೇವೆ. 

5G ಎಂದರೇನು?
ಜಗತ್ತಿನ ವಯರ್ ಲೆಸ್ ಸ್ಟ್ಯಾಂಡರ್ಡ್ ಗಳಾದ 1G, 2G, 3G ಮತ್ತು 4G ನಂತರದ ಹೊಸ ನೆಟ್‌ವರ್ಕ್ ಆವೃತ್ತಿಯೇ 5G. ಅಲ್ಟ್ರಾ ಕಡಿಮೆ-ಲೇಟೆನ್ಸಿ (ಮಾಹಿತಿಯನ್ನು ಕಳಿಸುವ ಮತ್ತು ಸ್ವೀಕರಿಸುವ ನಡುವಿನ ವಿಳಂಬ), ಹೆಚ್ಚು ವಿಶ್ವಾಸಾರ್ಹತೆ, ದೊಡ್ಡ ನೆಟ್‌ವರ್ಕ್ ಸಾಮರ್ಥ್ಯ, ಹೆಚ್ಚಿದ ಲಭ್ಯತೆ ಮತ್ತು ಹೆಚ್ಚು ಏಕರೂಪತೆಯನ್ನು ಒದಗಿಸುವ ಇತ್ತೀಚಿನ ನೆಟ್‌ವರ್ಕ್ ಮಾನದಂಡವಾಗಿದೆ.

ವೇಗ ಎಷ್ಟಿರುತ್ತದೆ?
5G ನೆಟ್ವರ್ಕ್ ವೇಗದ ಇಂಟರ್ನೆಟ್ ನೀಡುತ್ತೆ ಎಂಬುದು ಎಲ್ಲರಿಗೂ ಗೊತ್ತಿರೋ ವಿಷಯ. 5G ಅಂದ್ಮೇಲೆ 4Gಗಿಂತಲೂ ವೇಗದ ನೆಟ್ವರ್ಕ್ ಹೊಂದಿರುವುದು ಸರ್ವೇ ಸಾಮಾನ್ಯ. 5G ಅನ್ನು ಲೋ-ಬ್ಯಾಂಡ್, ಮಿಡ್-ಬ್ಯಾಂಡ್ ಅಥವಾ ಹೈ-ಬ್ಯಾಂಡ್ ಮಿಲಿಮೀಟರ್-ವೇವ್ 24 GHz ವರೆಗೆ 54 GHzನಲ್ಲಿ ಅಳವಡಿಸಬಹುದು.

ಕಡಿಮೆ-ಬ್ಯಾಂಡ್ 5G 600Mhz ನಿಂದ 900Mhz ನಡುವೆ 4G ಯಂತಹ ತರಂಗಾಂತರ ಶ್ರೇಣಿಯನ್ನು ಬಳಸುತ್ತದೆ, ಮಧ್ಯ-ಬ್ಯಾಂಡ್ 5G 1.7GHz ನಿಂದ 4.7 GHz ನಡುವೆ mmWaves ಅನ್ನು ಮತ್ತು ಹೈ-ಬ್ಯಾಂಡ್ 5G 24-47 GHz ಆವರ್ತನಗಳನ್ನು ಬಳಸುತ್ತದೆ. ಭಾರತದಲ್ಲಿ, 20 ವರ್ಷಗಳ ಮಾನ್ಯತೆಯ ಅವಧಿಯೊಂದಿಗೆ ಒಟ್ಟು 72097.85 MHz ಸ್ಪೆಕ್ಟ್ರಮ್ ಅನ್ನು ಜುಲೈ ಅಂತ್ಯದ ವೇಳೆಗೆ ಹರಾಜಿಗೆ ಇಡಲಾಗುತ್ತದೆ.

ವಿವಿಧ ಕಡಿಮೆ, ಮಧ್ಯಮ ಮತ್ತು ಹೆಚ್ಚಿನ (26 GHz) ಆವರ್ತನ ಬ್ಯಾಂಡ್‌ಗಳಲ್ಲಿ ಸ್ಪೆಕ್ಟ್ರಮ್‌ಗಾಗಿ ಹರಾಜು ನಡೆಯುತ್ತದೆ.

ಭಾರತದಲ್ಲಿ ಯಾವ 5G ಬ್ಯಾಂಡ್ ಅನ್ನು ಬಳಸಲಾಗುವುದು?
ಪ್ರಸ್ತುತ 4G ಸೇವೆಗಳ ಮೂಲಕ ಸಾಧ್ಯವಾಗುವುದಕ್ಕಿಂತ ಸುಮಾರು 10 ಪಟ್ಟು ಹೆಚ್ಚಿನ ವೇಗ ಮತ್ತು ಸಾಮರ್ಥ್ಯಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುವ 5G ತಂತ್ರಜ್ಞಾನ ಆಧಾರಿತ ಸೇವೆಗಳನ್ನು ತರಲು ಟೆಲಿಕಾಂ ಸೇವಾ ಪೂರೈಕೆದಾರರಿಂದ ಮಿಡ್ ಮತ್ತು ಹೈ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.

4G ಮತ್ತು 5G ನಡುವಿನ ವ್ಯತ್ಯಾಸವೇನು?
4Gಗೆ ಹೋಲಿಸಿದರೆ, 5G ಹೆಚ್ಚು ಸಾಮರ್ಥ್ಯದ ಇಂಟರ್ಫೇಸ್ ಆಗಿದೆ. 4G 150mbps ವರೆಗಿನ ವೇಗವನ್ನು ನೀಡಿದರೆ, 5G 10Gbps ಡೌನ್‌ಲೋಡ್ ವೇಗದ ಸಾಮರ್ಥ್ಯವನ್ನು ಹೊಂದಿದೆ. ಇದು 4G ಸಾಮರ್ಥ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ಡೇಟಾವನ್ನು ಹೊಂದಿದೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ, 5G ಮೂಲಕ ಬಳಕೆದಾರರು ಮೂರು ಗಂಟೆಗಳ ಕಾಲಾವಧಿಯ ಹೈಡೆಫಿನಿಶನ್ ಸಿನಿಮಾವೊಂದನ್ನು (ಹೆಚ್ಡಿ) ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ:  Semiconductors: ಜಾಗತಿಕ ಕಂಪನಿಗಳು ಎಣಿಸುತ್ತಿರುವಂತೆ ಭಾರತ ಚಿಪ್ ತಯಾರಕ ದಿಗ್ಗಜನಾಗಬಹುದೆ?

ವಿಶೇಷವಾಗಿ 5Gಯನ್ನು ಕೇವಲ ಮೊಬೈಲ್ ನೆಟ್ವರ್ಕ್ಗೆ ಮಾತ್ರವಲ್ಲದೆ ಇತರೆ ತಂತ್ರಜ್ಞಾನ ಸಾಧನಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಜನರನ್ನು ಸಂಪರ್ಕಿಸುವ ಒಂದು ವಿಶಿಷ್ಟ ರೀತಿಯ ತಂತ್ರಜ್ಞಾನವಾಗಿ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ 4G ಗಿಂತ 5G ಹೆಚ್ಚು ದುಬಾರಿಯಾಗುವುದೇ?
ಪ್ರಸ್ತುತ ಲಭ್ಯವಿರುವ ಮಾಹಿತಿ ಅನ್ವಯ ಭಾರತದಲ್ಲಿ 5G ಪ್ಲಾನ್‌ಗಳ ಬೆಲೆ ಹೇಗೆ ಇರುತ್ತದೆ ಎಂಬುದರ ಕುರಿತು ಮಾಹಿತಿಯಿಲ್ಲದಿದ್ದರೂ, 4Gಗಾಗಿ ನಾವು ಪಾವತಿಸುತ್ತಿರುವುದಕ್ಕಿಂತ ಸ್ವಲ್ಪ ಬೆಲೆ ಹೆಚ್ಚಾಗಿರುತ್ತದೆ. ಭಾರತವು ವಿಶ್ವದ ಅತ್ಯಂತ ಅಗ್ಗದ ಇಂಟರ್ನೆಟ್ ಅನ್ನು ಹೊಂದಿದೆ ಮತ್ತು ಇದು 5G ಬಂದ ನಂತರ ಬದಲಾಗುವ ನಿರೀಕ್ಷೆಯಿಲ್ಲ.

ಮಾರ್ಚ್ 2022ರಲ್ಲಿ, ಏರ್‌ಟೆಲ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO), ರಣದೀಪ್ ಸೆಖೋನ್ ಅವರು ಭಾರತದಲ್ಲಿ 5G ಯೋಜನೆಗಳು ನಾವು ಪ್ರಸ್ತುತ ಪಾವತಿಸುತ್ತಿರುವ 4G ಯೋಜನೆಗಳಿಗೆ ಸಮಾನವಾದ ಬೆಲೆಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದರು.

ಯಾವಾಗ ಬರುತ್ತೆ 5G ನೆಟ್‌ವರ್ಕ್?
5G ಸ್ಪೆಕ್ಟ್ರಮ್ ಹರಾಜುಗಳು ಮುಂದಿನ ತಿಂಗಳು ನಡೆಯಲಿರುವುದರಿಂದ, 5G ಸೇವೆಗಳನ್ನು ಈ ವರ್ಷದ ಕೊನೆಯಲ್ಲಿ ಅಥವಾ 2023ರ ಆರಂಭದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಈ ವರ್ಷದ ಆರಂಭದಲ್ಲಿ, ಏರ್‌ಟೆಲ್ ಮುಖ್ಯ ತಂತ್ರಜ್ಞಾನ ಅಧಿಕಾರಿ, ಹರಾಜು ಮುಗಿದ ನಂತರ 2-4 ತಿಂಗಳೊಳಗೆ ಟೆಲಿಕಾಂ ಆಪರೇಟರ್ ತನ್ನ 5G ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಹೇಳಿದ್ದರು.

5Gಗೆ ಹೊಸ ಮೊಬೈಲ್ ಟವರ್‌ಗಳ ಅಗತ್ಯವಿದೆಯೇ?
ನಿಮ್ಮ ಮೊಬೈಲ್ ಡೇಟಾ, ವೈ-ಫೈ ಮತ್ತು ಉಪಗ್ರಹ ಸಂವಹನಗಳಲ್ಲಿ ಪ್ರಸ್ತುತ ಬಳಸುತ್ತಿರುವ ಅದೇ ರೇಡಿಯೊ ಆವರ್ತನಗಳಲ್ಲಿ 5G ರನ್ ಆಗುತ್ತದೆ. ಒಂದೇ ತರಂಗಾಂತರಗಳಲ್ಲಿ 5G ಚಲಿಸುವುದರಿಂದ ಸೇವೆಗಳನ್ನು ನಿಯೋಜಿಸಲು ಟೆಲಿಕಾಂ ಪೂರೈಕೆದಾರರು ತಮ್ಮ ಟವರ್‌ಗಳನ್ನು ಬದಲಾಯಿಸಬೇಕಾಗಿಲ್ಲ.

5Gಯ ಇತರೆ ಸಾಮರ್ಥ್ಯ ಏನು?
5G ನೆಟ್‌ವರ್ಕ್ ಸಂಪರ್ಕವನ್ನು ಸುಧಾರಿಸುವುದಕ್ಕಿಂತ ಹೊರತಾಗಿ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇದನ್ನು ಐಒಟಿ, ಆಟೋ ಮೊಬೈಲ್, ಮೆಡಿಕಲ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಪ್ರಪಂಚದ ಕೆಲವು ಪ್ರಮುಖ ಸಮಸ್ಯೆಗಳನ್ನು ನಿಭಾಯಿಸಲು ನೈಜ ಸಮಯದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಹಂಚಿಕೊಳ್ಳುವ ಶತಕೋಟಿ ಸಾಧನಗಳನ್ನು ಹೊಂದಿರುವ ಸಾಧ್ಯತೆಯನ್ನು ಇದು ತರುತ್ತದೆ.

ಇದನ್ನೂ ಓದಿ:  5G in India: 5ಜಿ ತರಂಗ ಹರಾಜಿಗೆ ಕೇಂದ್ರದಿಂದ ಗ್ರೀನ್ ಸಿಗ್ನಲ್: ಕೆಲವೇ ದಿನಗಳಲ್ಲಿ ಹೈಸ್ಪೀಡ್ ಇಂಟರ್ನೆಟ್

5G ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಜಾಗದಲ್ಲಿ ಅನೇಕ ಸಾಧ್ಯತೆಗಳನ್ನು ತೆರೆಯುತ್ತದೆ, ಏಕೆಂದರೆ ವಿಜ್ಞಾನಿಗಳು ತಮ್ಮ ಸಿಸ್ಟಮ್‌ಗಳಲ್ಲಿ ಹೆಚ್ಚು ಹೆಚ್ಚು ಡೇಟಾವನ್ನು ಪ್ರೋಗ್ರಾಮ್ ಮಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ತ್ವರಿತ ಫಲಿತಾಂಶಗಳು ಮತ್ತು ತ್ವರಿತ ಪರಿಹಾರಗಳು ದೊರೆಯುತ್ತವೆ. 5G ಮೂಲಭೂತವಾಗಿ ಅನೇಕ ವಿಷಯಗಳ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
Published by:Ashwini Prabhu
First published: