• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಭಾರತದಲ್ಲಿ Income Tax ರದ್ದುಗೊಳಿಸಿದರೆ ಏನಾಗುತ್ತದೆ? ಲಾಭವಾಗುತ್ತಾ? ಯಾವ ದೇಶಗಳಲ್ಲಿ ಆದಾಯ ತೆರಿಗೆ ಇಲ್ಲ?

Explained: ಭಾರತದಲ್ಲಿ Income Tax ರದ್ದುಗೊಳಿಸಿದರೆ ಏನಾಗುತ್ತದೆ? ಲಾಭವಾಗುತ್ತಾ? ಯಾವ ದೇಶಗಳಲ್ಲಿ ಆದಾಯ ತೆರಿಗೆ ಇಲ್ಲ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಭಾರತವನ್ನು ಶೂನ್ಯ ಶೇಕಡಾ ಆದಾಯ ತೆರಿಗೆ ಹೊಂದಿರುವ ದೇಶವನ್ನಾಗಿ ಮಾಡುವುದು ಎಷ್ಟು ಸುಲಭ? ಅದೆಷ್ಟು ಸೂಕ್ತ? ಎಂಬಿತ್ಯಾದಿ ವಿವರ ಇಲ್ಲಿದೆ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಭಾರತದಲ್ಲಿ ಅನೇಕರು ಆದಾಯ ತೆರಿಗೆಯನ್ನು (Income Tax) ರದ್ದುಗೊಳಿಸಬೇಕೆಂದು ಪ್ರತಿಪಾದಿಸುತ್ತಾರೆ. 'ದಿ ಹಿಂದೂ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನದ ಪ್ರಕಾರ, ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ (BJP MP Subramanian Swamy) ಕೂಡಾ ಶೂನ್ಯ ಶೇಕಡಾ ಆದಾಯ ತೆರಿಗೆಯ ಸೂತ್ರವನ್ನು ಬೆಂಬಲಿಸುತ್ತಾರೆ. ಮತ್ತೊಂದೆಡೆ, ಆದಾಯ ತೆರಿಗೆಯನ್ನು ರದ್ದುಪಡಿಸುವ ಮೂಲಕ ದೇಶದ ಆರ್ಥಿಕ ಬೆಳವಣಿಗೆಯು (Economic Development) ಅತ್ಯಂತ ವೇಗವಾಗಿರುತ್ತದೆ ಎಂದು ದೇಶದ ದೊಡ್ಡ ವರ್ಗದ ಅಂದಾಜಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತವನ್ನು ಶೂನ್ಯ ಶೇಕಡಾ ಆದಾಯ ತೆರಿಗೆ ಹೊಂದಿರುವ ದೇಶವನ್ನಾಗಿ ಮಾಡುವುದು ಎಷ್ಟು ಸುಲಭ? ಅದೆಷ್ಟು ಸೂಕ್ತ? ಎಂಬಿತ್ಯಾದಿ ವಿವರ ಇಲ್ಲಿದೆ.


ತೆರಿಗೆಯಲ್ಲಿ ಎಷ್ಟು ವಿಧಗಳಿವೆ?


ಮುಖ್ಯವಾಗಿ ಎರಡು ರೀತಿಯ ತೆರಿಗೆಗಳಿವೆ. ಒಂದು ನೇರ ತೆರಿಗೆ, ಇನ್ನೊಂದು ಪರೋಕ್ಷ ತೆರಿಗೆ. ನೇರ ತೆರಿಗೆ ಎಂದರೆ ವ್ಯಕ್ತಿ ಅಥವಾ ಕಂಪನಿಯು ನೇರವಾಗಿ ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಪಾವತಿಸುವ ಹಣ. ನೇರ ತೆರಿಗೆ ಅಡಿಯಲ್ಲಿ ಕಾರ್ಪೊರೇಟ್ ತೆರಿಗೆ, ಬಂಡವಾಳ, ಆಸ್ತಿ ತೆರಿಗೆ ಮತ್ತು ಆದಾಯ ತೆರಿಗೆ ಬರುತ್ತದೆ. ಅದೇ ಪರೋಕ್ಷ ತೆರಿಗೆಯಲ್ಲಿ ಸರ್ಕಾರವು ಜನರಿಂದ ಪರೋಕ್ಷವಾಗಿ ತೆರಿಗೆ ತೆಗೆದುಕೊಳ್ಳುತ್ತದೆ. ಜಿಎಸ್‌ಟಿ ಪರೋಕ್ಷ ತೆರಿಗೆಗೆ ಸೂಕ್ತ ಉದಾಹರಣೆಯಾಗಿದೆ. ಇದರಲ್ಲಿ, ನಿಮ್ಮ ಹಣವು ಅಂಗಡಿ ಮಾಲೀಕರು ಅಥವಾ ಪೂರೈಕೆದಾರರ ಮೂಲಕ ಸರ್ಕಾರವನ್ನು ತಲುಪುತ್ತದೆ. ಇದಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವೂ ಪರೋಕ್ಷ ತೆರಿಗೆ ಅಡಿಯಲ್ಲಿ ಬರುತ್ತದೆ.


ಇದನ್ನೂ  ಓದಿ: Income Tax: ಗೃಹ ಸಾಲದಿಂದ ಆದಾಯ ತೆರಿಗೆ ವಿನಾಯಿತಿ ಪಡೆಯೋದು ಹೇಗೆ? ಇಲ್ಲಿದೆ ವಿವರ


ಭಾರತದ ಜನಸಂಖ್ಯೆ ಎಷ್ಟು ಆದಾಯ ತೆರಿಗೆ ಪಾವತಿಸುತ್ತದೆ?


ಪರೋಕ್ಷ ತೆರಿಗೆಯನ್ನು ದೇಶದ ಪ್ರತಿಯೊಬ್ಬ ನಾಗರಿಕರೂ ಪಾವತಿಸುತ್ತಾರೆ, ಆದರೆ ಆದಾಯ ತೆರಿಗೆ ಪಾವತಿಸುವವರ ಸಂಖ್ಯೆ ದೇಶದಲ್ಲಿ ಬಹಳ ಕಡಿಮೆದೆ. ಫೆಬ್ರವರಿ 2020 ರವರೆಗಿನ ಅಂಕಿಅಂಶಗಳ ಪ್ರಕಾರ, ಸುಮಾರು 1.3 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕೇವಲ 1.46 ಕೋಟಿ ಜನರು ಮಾತ್ರ ಆದಾಯ ತೆರಿಗೆ ಪಾವತಿಸುತ್ತಾರೆ ಎಂಬುವುದು ಬಯಲಾಗಿದೆ. ಇದು ಇಡೀ ಜನಸಂಖ್ಯೆಯ 1% ಮಾತ್ರ. ಇದಕ್ಕೆ ಪ್ರಮುಖ ಕಾರಣ ಭಾರತದ ಬಡತನ. ಭಾರತದಲ್ಲಿ ಹೆಚ್ಚಿನ ಜನಸಂಖ್ಯೆಯು ಆದಾಯ ತೆರಿಗೆ ಪಾವತಿಸುವ ಯೋನೆಯಲ್ಲಿಲ್ಲ.


ಆದಾಯ ತೆರಿಗೆಯನ್ನು ರದ್ದುಗೊಳಿಸುವುದರಿಂದ ಏನು ಪ್ರಯೋಜನ?


ಭಾರತದಂತಹ ದೊಡ್ಡ ಜನಸಂಖ್ಯೆ ಹೊಂದಿರುವ ದೇಶದಲ್ಲಿ ಆದಾಯ ತೆರಿಗೆಯನ್ನು ರದ್ದುಗೊಳಿಸಿದರೆ, ಆಗ ನಿಜಕ್ಕೂ ಏನಾಗುತ್ತದೆ ಎಂಬ ಬಗ್ಗೆ ನಿಖರವಾದ ಉತ್ತರವಿಲ್ಲ. ಆದರೆ ಆರ್ಥಿಕ ತಜ್ಞರ ಪ್ರಕಾರ, ಆದಾಯ ತೆರಿಗೆ ಪಾವತಿದಾರರು ಉಳಿಸುವ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಖರ್ಚು ಮಾಡಬಹುದು. ಇದರಿಂದ ಆರ್ಥಿಕತೆಯಲ್ಲಿ ಹೆಚ್ಚು ಹಣ ಚಲಾವಣೆಯಾಗುತ್ತದೆ. ಇದರ ಪರಿಣಾಮವಾಗಿ ದೇಶದ ಆರ್ಥಿಕ ಬೆಳವಣಿಗೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತದೆ.


ಕೆಲವು ಅರ್ಥಶಾಸ್ತ್ರಜ್ಞರು ಕಪ್ಪುಹಣ ಹೊಂದಿರುವವರ ಹಣ ಬಿಳಿಯಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜನರು ತಮ್ಮ ಕಪ್ಪು ಹಣವನ್ನು ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಸಾಧ್ಯವಾಗುತ್ತದೆ, ಇದು ಬ್ಯಾಂಕ್‌ಗಳ ಬಡ್ಡಿದರವನ್ನು ಕಡಿಮೆ ಮಾಡುತ್ತದೆ. ಆದಾಯ ತೆರಿಗೆ ಪದ್ಧತಿ ನಿಂತರೆ ಮುಗಿದಾಗ ಸರ್ಕಾರ ಟ್ಯಾಕ್ಸ್​ ವಸೂಲಿಗೆ ವ್ಯಯಿಸುತ್ತಿರುವ ಹಣವೂ ಉಳಿತಾಯವಾಗುತ್ತದೆ ಎಂದಿದ್ದಾರೆ. ಇದಲ್ಲದೆ, ಸರ್ಕಾರ ಹಣ ಪಡೆದಿರುವುದನ್ನು ಖಚಿತಪಡಿಸಲು ಕಾಗದದ ರೂಪದಲ್ಲಿ ದಾಖಲೆಗಳನ್ನೂ ಇಟ್ಟುಕೊಳ್ಳುತ್ತದೆ. ಅಲ್ಲದೇ ಇದಕ್ಕಾಗಿ ವೆಬ್‌ಸೈಟ್ ಅನ್ನು ನಿರ್ವಹಿಸುತ್ತದೆ. ತೆರಿಗೆ ಪದ್ಧತಿ ರದ್ದುಗೊಳಿಸಿದರೆ ಇವುಗಳಿಗೆ ವ್ಯಯಿಸುವ ಹಣವೂ ಉಳಿತಾಯವಾಗುತ್ತದೆ. ಇದರೊಂದಿಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಖರ್ಚು ಮಾಡುವ ಹಣವನ್ನೂ ಉಳಿಸಬಹುದು.




ಆದಾಯ ತೆರಿಗೆ ರದ್ದತಿಯಿಂದ ಏನಾದರೂ ನಷ್ಟವಿದೆಯೇ?


ಮೊದಲನೆಯದಾಗಿ ಸರಕಾರಕ್ಕೆ ಭಾರೀ ಪ್ರಮಾಣದ ಆದಾಯ ನಷ್ಟವಾಗುತ್ತದೆ. ಸರ್ಕಾರದ ಖಜಾನೆಯ ಶೇ.26.4ರಷ್ಟು ಆದಾಯ ತೆರಿಗೆಯಿಂದ ತುಂಬುತ್ತದೆ. ಇಷ್ಟು ದೊಡ್ಡ ಮೊತ್ತವನ್ನು ವಸೂಲಿ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಕೆಲವು ಅರ್ಥಶಾಸ್ತ್ರಜ್ಞರು ಆದಾಯ ತೆರಿಗೆ ವ್ಯವಸ್ಥೆಯನ್ನು ದೇಶದಿಂದ ತೆಗೆದುಹಾಕಿದರೆ, ದೇಶದ ಆರ್ಥಿಕ ಬೆಳವಣಿಗೆಯು ಉತ್ತಮವಾಗಿರುತ್ತದೆ ಮತ್ತು ಆದಾಯ ತೆರಿಗೆ ಸಂಗ್ರಹಿಸುವ ಅಗತ್ಯವಿಲ್ಲ ಎಂದು ಹೇಳುತ್ತಾರೆ.


ಸರ್ಕಾರದ ಅಂಕಿ ಅಂಶಗಳ ಪ್ರಕಾರ, GST ಯಿಂದ ಸರ್ಕಾರವು ಸುಮಾರು 28.3 ಪ್ರತಿಶತವನ್ನು ಗಳಿಸುತ್ತದೆ. ಅದೇ ಆದಾಯ ತೆರಿಗೆಯು ಸರ್ಕಾರಕ್ಕೆ 26.4 ಪ್ರತಿಶತವನ್ನು ಗಳಿಸುತ್ತದೆ. ಕಾರ್ಪೊರೇಟ್ ತೆರಿಗೆಯಿಂದ ಸರ್ಕಾರವು ಸುಮಾರು 24.5 ಪ್ರತಿಶತವನ್ನು ಗಳಿಸುತ್ತದೆ. ಇನ್ನು ಅಬಕಾರಿಯಿಂದ 15 ಪ್ರತಿಶತ ಮತ್ತು ಕಸ್ಟಮ್‌ನಿಂದ 5.7 ಪ್ರತಿಶತ ಗಳಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಆದಾಯ ತೆರಿಗೆ ರದ್ದುಗೊಳಿಸಿದರೆ ಸರ್ಕಾರಕ್ಕೆ ನಷ್ಟವಾಗುತ್ತದೆ.


ಆದಾಯ ತೆರಿಗೆ ಪದ್ಧತಿ ಇಲ್ಲದ ದೇಶಗಳಿವು


ಭಾರತದಲ್ಲಿ ಆದಾಯ ತೆರಿಗೆ ಕೊನೆಗೊಳ್ಳುತ್ತದೆಯೇ ಅಥವಾ ಇಲ್ಲವೇ ಎಂಬುವುದು ಸಮಯವೇ ಹೇಳಲಿದೆ. ಆದರೆ ಜಗತ್ತಿನ ಹಲವಾರು ದೇಶಗಳಲ್ಲಿ ಜನರಿಂದ ಆದಾಯ ತೆರಿಗೆ ಸಂಗ್ರಹಿಸುವುದಿಲ್ಲ. ಬಹಮಾಸ್, ಓಮನ್, ಸೌದಿ ಅರೇಬಿಯಾ, ಬರ್ಮುಡಾ, ಕತಾರ್, ಬ್ರೂನಿ, ಕುವೈತ್ ಮುಂತಾದ ಕೆಲವು ದೇಶಗಳು ಇದಕ್ಕೆ ಪ್ರಮುಖ ಉದಾಹರಣೆಗಳಾಗಿವೆ. ನಮ್ಮ ದೇಶ ಕೂಡಾ ಈ ನಿಟ್ಟಿನಲ್ಲಿ ಯೋಚಿಸಿ ಸೂಕ್ತ ಕ್ರಮ ಕೈಗೊಳ್ಳಬಹುದು.


ಇದನ್ನೂ ಓದಿ: Section 87A: ITR ಫೈಲ್​ ಮಾಡುವಾಗ ಸೆಕ್ಷನ್ 87ರ ಪ್ರಯೋಜನವನ್ನು ಹೀಗೆ ಪಡೆದುಕೊಳ್ಳಿ!


ಆದಾಯ ತೆರಿಗೆ ಇಲ್ಲದ ದೇಶಗಳು ಹೇಗೆ ಹಣ ಗಳಿಸುತ್ತವೆ?


ತೆರಿಗೆ ಪಡೆಯದ ದೇಶಗಳಲ್ಲಿ ಹೇಗೆ ಗಳಿಸುತ್ತವೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿರಬಹುದು. ಉದಾಹರಣೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಅನ್ನು ತೆಗೆದುಕೊಳ್ಳಿ. ದುಬೈನಲ್ಲಿ ಯಾವುದೇ ರೀತಿಯ ಆದಾಯ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆಯನ್ನು ಸಂಗ್ರಹಿಸುವುದಿಲ್ಲ. ಆದರೆ ಯುಎಇಯಲ್ಲಿನ ತೈಲ ಕಂಪನಿಗಳ ಮೇಲೆ ಕಾರ್ಪೊರೇಟ್ ತೆರಿಗೆಯನ್ನು ತಪ್ಪದೇ ವಿಧಿಸಲಾಗುತ್ತದೆ ಮತ್ತು ಈ ತೆರಿಗೆಯು ಕೆಲವೊಮ್ಮೆ 55 ಪ್ರತಿಶತಕ್ಕೆ ಏರಿಸಲಾಗುತ್ತದೆ. ಇದಲ್ಲದೇ ವಿದೇಶಿ ಬ್ಯಾಂಕ್ ಮೇಲೆ ಶೇ.20ರಷ್ಟು ತೆರಿಗೆ ವಿಧಿಸಲಾಗುತ್ತದೆ. ದುಬೈನಲ್ಲಿ ಮನರಂಜನಾ ತೆರಿಗೆ ಬಹಳ ಅಧಿಕ. ಅಲ್ಲದೇ, ಇಲ್ಲಿ ಆಮದು ಸುಂಕ ಬಹಳ ಅಧಿಕ. 23 ದೇಶಗಳಲ್ಲಿ ಸುಮಾರು 6 ದೇಶಗಳು ಹೆಚ್ಚಾಗಿ ತೈಲದಿಂದಲೇ ತೆರಿಗೆ ಸಂಗ್ರಹಿಸುತ್ತವೆ.


ಆದಾಯ ತೆರಿಗೆ ಮುಕ್ತ ದೇಶಕ್ಕೆ ಮೊನಾಕೊ ಕೂಡ ಒಂದು ಉತ್ತಮ ಉದಾಹರಣೆ


ಯುಎಇಯಂತೆ, ಯುರೋಪ್‌ನಲ್ಲಿ ಮೊನಾಕೊ ಎಂಬ ಸಣ್ಣ ದೇಶವಿದೆ, ಅಲ್ಲಿ ವೈಯಕ್ತಿಕ ಆದಾಯ ತೆರಿಗೆ ಇಲ್ಲ. ಈ ದೇಶದ ಹೆಚ್ಚಿನ ಜನರು ಶ್ರೀಮಂತರು, ಇಲ್ಲಿ ಪ್ರಾಪರ್ಟಿ ರೇಟ್​ ಬಹಳ ಅಧಿಕ. ಇಲ್ಲಿನ ಸರ್ಕಾರವು ಪ್ರಾಪರ್ಟಿ ರೆಂಟ್​ನಿಂದ 1 ಪ್ರತಿಶತ ತೆರಿಗೆಯನ್ನು ತೆಗೆದುಕೊಳ್ಳುತ್ತದೆ. ಇಲ್ಲಿ VAT ಕೂಡಾ ಸುಮಾರು 19.6 ಶೇಕಡದಷ್ಟಿದೆ. ಇಲ್ಲಿ ಸಾಮಾನ್ಯ ವಸ್ತುಗಳ ಬೆಲೆಯೂ ಬಹಳ ಅಧಿಕ.


top videos



    ಇದಲ್ಲದೇ, ಬರ್ಮುಡಾ ತೈಲದ ದೊಡ್ಡ ಮೂಲವಿಲ್ಲದ ದೇಶವಾಗಿದೆ, ಆದರೂ ಇಲ್ಲಿ ಯಾವುದೇ ಆದಾಯ ತೆರಿಗೆ ಅಥವಾ ಕಾರ್ಪೊರೇಟ್ ತೆರಿಗೆ ವಿಧಿಸಲಾಗುವುದಿಲ್ಲ. ಇಲ್ಲಿನ ಸರ್ಕಾರವು ಆಮದು ಸುಂಕದಿಂದ 20% ಗಳಿಸುತ್ತದೆ. ಇಲ್ಲಿ ವಾಹನಗಳಿಗೆ ಶೇ.150ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇಲ್ಲಿ ಭೂ ಕಂದಾಯವೂ ಅತಿ ಹೆಚ್ಚು. ಆದಾಯ ತೆರಿಗೆಯಂತೆ ವೇತನದಾರರ ತೆರಿಗೆಯನ್ನು ವಿಧಿಸಲಾಗುತ್ತದೆ. ವೇತನದಾರರ ತೆರಿಗೆಯನ್ನು ಸಂಬಳದ ಮೇಲೆ ಮಾತ್ರ ವಿಧಿಸಲಾಗುತ್ತದೆ.

    First published: