• Home
 • »
 • News
 • »
 • explained
 • »
 • Explained: ರಷ್ಯಾ-ಉಕ್ರೇನ್ ಯುದ್ಧ ಅಂತಿಮವಾಗಿ ಏನಾಗುತ್ತೆ..? 5 ಸಾಧ್ಯತೆಗಳು ಇಲ್ಲಿವೆ ನೋಡಿ..

Explained: ರಷ್ಯಾ-ಉಕ್ರೇನ್ ಯುದ್ಧ ಅಂತಿಮವಾಗಿ ಏನಾಗುತ್ತೆ..? 5 ಸಾಧ್ಯತೆಗಳು ಇಲ್ಲಿವೆ ನೋಡಿ..

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾವಿರಾರು ಜನರು ಈ ಯುದ್ಧವನ್ನು ವಿರೋಧಿಸಿ ಅದರ ವಿರುದ್ಧ ಪ್ರತಿಭಟಿಸುತ್ತ ಬೀದಿಗಿಳಿಯುತ್ತಿದ್ದಾರೆ. ಮುಂದೆ ಸಾವಿರ ಹೋಗಿ ಲಕ್ಷಗಳಾಗಿ, ಕೋಟಿಗಳಾಗಿ ಪುಟಿನ್ ಅವರನ್ನೇ ಉಚ್ಛಾಟಿಸಬಹುದಾದಂತಹ ಸಂಭವನೀಯತೆ ಇರುವುದನ್ನು ಕಡೆಗಣಿಸುವಂತಿಲ್ಲ.

 • Share this:

  ಮಾನವ ಇತಿಹಾಸದಲ್ಲಿ (History) ಇಂದು ಮತ್ತೊಂದು ಭಾರವಾದ ದಿನ. ಏಕೆಂದರೆ, ಈಗಾಗಲೇ ರಷ್ಯಾ-ಉಕ್ರೇನ್  ಯುದ್ಧದಲ್ಲೇ ( Russia-Ukraine War)  ದಿನಗಳು ಉರುಳುತ್ತಿದೆ.  ಇಂದೂ ಸಹ ಘೋರ ಆಕ್ರಮಣ ರಷ್ಯಾದ ಕಡೆಯಿಂದ ಮುಂದುವರೆದಿದ್ದು ಈ ಯುದ್ಧ ನಿಲ್ಲುವುದೇ? ಜನರ ಪ್ರಾಣ ಉಳಿಯುವುದೇ ಎಂಬ ಪ್ರಶ್ನೆಗಳನ್ನು ಈಗ ಪ್ರತಿಯೊಬ್ಬರು ಮನದಲ್ಲೇ ಕೇಳತೊಡಗಿದ್ದಾರೆ. ಒಂದೆಡೆ ಜಗತ್ತಿನ (WORLD) ಇತರೆ ಭಾಗದ ಜನರು (ಯುದ್ಧ ನಡೆಯುತ್ತಿರುವ ಪ್ರದೇಶ ಹೊರತುಪಡಿಸಿ) ಎಂದಿನಂತೆ ಕೆಲಸ ಮಾಡಿ, ಊಟ ಮಾಡಿ, ವಿಶ್ರಾಂತಿ ಪಡೆದು ಮಲಗಿ ಸಹಜ ರೀತಿಯಲ್ಲಿ ಜೀವನ ನಡೆಸುತ್ತಿದ್ದರೆ ಯುದ್ಧ ನಡೆಯುತ್ತಿರುವ ಪ್ರದೇಶದ ಜನರು ಮಾತ್ರ ತಮ್ಮ ಜೀವವನ್ನೇ ಕೈಯಲ್ಲಿ ಹಿಡಿದು ಸಾವಿನ ಜೊತೆ ಕಣ್ಣು ಮುಚ್ಚಾಲೆ ಆಡುತ್ತಿರುವುದನ್ನು ಕಂಡಾಗ ಮನುಷ್ಯ ಎಂದೆನಿಸಿಕೊಂಡವನಿಗೆ ಹೃದಯ ಹಿಂಡಿದಂತಾಗದೆ ಇರಲಾರದು.


  ರಷ್ಯಾದ ದಾಳಿ ಇಂದಿಗೂ ಉಕ್ರೇನ್ ಮೇಲೆ ಎಂದಿನಂತೆ ತೀವ್ರ ಸ್ವರೂಪದಲ್ಲೇ ನಡೆಯುತ್ತಿದ್ದು ಬಂದಿರುವ ಮಾಹಿತಿಗಳ ಪ್ರಕಾರ, ಯುರೋಪ್ ನಲ್ಲೆ ದೊಡ್ಡದೆನ್ನಲಾಗುವ ಜ್ಯಾಪೋರಿಜಿಯಾ ಅಣು ವಿದ್ಯುತ ಸ್ಥಾವರದ ಮೇಲೆ ಶೆಲ್ಲಿಂಗ್ ದಾಳಿ ಮಾಡಲಾಗುತ್ತಿದ್ದು ಅದರ ಒಂದು ಭಾಗ ಬೆಂಕಿಯ ಸುಳಿಗೆ ಸಿಕ್ಕಿದೆ ಎಂದು ತಿಳಿದುಬಂದಿದೆ. ಇದು ನಿಜಕ್ಕೂ ಆತಂಕಕಾರಿಯಾದ ಸುದ್ದಿಯಾಗಿದ್ದು ಇಲ್ಲೇನಾದರೂ ಸ್ಫೋಟ ಸಂಭವಿಸಿದರೆ ಅದು ಈ ಹಿಂದೆ ನಡೆದಿದ್ದ ಐತಿಹಾಸಿಕ ಚೆರ್ನೋಬಿಲ್ ಸ್ಫೋಟಕ್ಕಿಂತ ಹತ್ತುಪಟ್ಟು ಹೆಚ್ಚಿನ ಹಾನಿ ಮಾಡಲಿದೆ ಎಂದು ಹೇಳಲಾಗಿದೆ. ಈ ನಡುವೆ ಉಕ್ರೇನ್ ಅಧ್ಯಕ್ಷ ಜೆಲೆನ್ಸ್ಕಿ, ರಷ್ಯಾದ ಅಧ್ಯಕ್ಷ ಪುಟಿನ್ ಅವರನ್ನು ಕುರಿತು ಯುದ್ಧ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆನ್ನಲಾಗಿದೆ. ಆದಾಗ್ಯೂ ಯುದ್ದ ವಿರಾಮದ ಯಾವುದೇ ಲಕ್ಷಣಗಳಂತೂ ಸದ್ಯಕ್ಕೆ ಸಿಗುತ್ತಿಲ್ಲ.


  ಇದನ್ನೂ ಓದಿ: Explained: ಬಜೆಟ್ ಎಂದರೇನು? ಯಾವುದಕ್ಕೆ ಎಷ್ಟು ಹಣ ನೀಡಬೇಕು ಎಂದು ಹೇಗೆ ನಿರ್ಧಾರವಾಗುತ್ತೆ?


  ಆದರೆ, ಸದ್ಯಕ್ಕೆ ಜಗತ್ತಿನಾದ್ಯಂತ ಎಲ್ಲರ ಮಸ್ತಿಷ್ಕದಲ್ಲಿ ಓಡಾಡುತ್ತಿರುವ ಆಲೋಚನೆಗಳೆಂದರೆ ಈ ಯುದ್ಧ ಎಲ್ಲಿಯವರೆಗೆ? ಇದು ಅಂತ್ಯವಾಗುವುದು ಯಾವಾಗ? ಮುಂದೇನಾಗಬಹುದು? ಎಂಬ ಪ್ರಶ್ನೆಗಳು. ಹಾಗಾಗಿ ಈ ಪ್ರಶ್ನೆಗಳಿಗೆ ಉತ್ತರ ಅರಸುತ್ತ ನಡೆದ ವಿದ್ಯಮಾನಗಳು ಹಾಗೂ ಮುಂದೆ ನಡೆಯಬಹುದಾದ ವಿದ್ಯಮಾನಗಳ ಲೆಕ್ಕ ಹಾಕಿ ಅಂತಿಮವಾಗಿ ಈ ಯುದ್ಧಕ್ಕೆ ಸಂಬಂಧಿಸಿದಂತೆ ಏನಾಗಬಹುದೆಂಬ ಐದು ಸಾಧ್ಯಾ ಸಾಧ್ಯತೆಗಳನ್ನು ಇಲ್ಲಿ ನೀಡುತ್ತಿದ್ದೇವೆ.


  ಸ್ಥಾನಪಲ್ಲಟ


  ಮೇಲ್ನೋಟಕ್ಕೆ ಇದೇ ರಷ್ಯಾದ ಉದ್ದೇಶವಾಗಿದೆ ಎಂದು ಹೇಳಬಹುದು. ಹೀಗಾದ ಸಂದರ್ಭದಲ್ಲಿ ರಷ್ಯಾ ಉಕ್ರೇನ್ ದೇಶದ ಪ್ರಸ್ತುತ ಸರ್ಕಾರವನ್ನು ರದ್ದುಗೊಳಿಸಿ ರಷ್ಯಾಪರವಿರುವ ಸರ್ಕಾರವನ್ನು ಸ್ಥಾಪಿಸಬಹುದು. ಆದರೆ, ಇದು ರಷ್ಯಾ ಅಂದುಕೊಂಡಂತೆ ಅಷ್ಟೊಂದು ಸುಲಭವಾಗಿರುವುದು ಕಂಡುಬರುತ್ತಿಲ್ಲ, ಕಾರಣ ಉಕ್ರೇನಿ ಸೈನ್ಯ ಹಾಗೂ ಅದರಲ್ಲೂ ವಿಶೇಷವಾಗಿ ಉಕ್ರೇನಿ ಜನರು ರಷ್ಯಾ ಸೈನ್ಯದ ವಿರುದ್ಧ ಬಂಡಾಯ ಎದ್ದಿರುವ ಪರಿ. ಬಹುಶಃ ರಷ್ಯಾ ಸಹ ಇದನ್ನು ನಿರೀಕ್ಷಿಸಿರಲ್ಲಿವೇನೋ. ಸದ್ಯ ಉಕ್ರೇನಿಯನ್ನರು ಸಾಕಷ್ಟು ಪ್ರತಿರೋಧ ಒಡ್ಡುತ್ತಿದ್ದು ರಷ್ಯಾ ಸೈನ್ಯಕ್ಕೆ 'ಕೇಕ್ ವಾಕ್' ಆಗ ಬೇಕಾಗಿದ್ದ ಸ್ಥಿತಿ, ಚಳಿಯಲ್ಲೂ ಬೆವರಿಳಿಯುವಂತೆ ಮಾಡಿದೆ. ಇದರ ಜೊತೆಗೆ ನ್ಯಾಟೊ ಪಡೆಗಳು ಬಂಡಾಯಗಾರರ ಹಿಂದೆ ನಿಂತು ಬೆಂಬಲ ನೀಡುತ್ತಿದ್ದು ಅವರಿಗೆ ಶಸ್ತ್ರಾಸ್ತ್ರಗಳ ಬೆಂಬಲ ನೀಡುವ ವಿಚಾರ ರಷ್ಯಾಗೆ ಮತ್ತಷ್ಟು ಕಿರಿಕಿರಿಯಾಗಿ ಪರಿಣಮಿಸಿದೆ. ಅಲ್ಲದೆ, ರಷ್ಯಾದ ಶಸ್ತ್ರಾಸ್ತ್ರಗಳು ಖರ್ಚಾಗುತ್ತಿವೆ. ಮುಂದೆ ಇದು ಇಂದು ಸಮಯದ ನಂತರ ರಷ್ಯಾ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮಟ್ಟಕ್ಕೆ ಬರಬಹುದು.


  1) ರಾಜತಾಂತ್ರಿಕ ಪರಿಹಾರ


  ಯುದ್ಧ ಆರಂಭವಾದಾಗಿನಿಂದಲೂ ಭಾರತ ಈ ಮಾರ್ಗವನ್ನೇ ಪದೆ ಪದೆ ಹೇಳುತ್ತಿದೆ ಎಂಬುದನ್ನು ಇಲ್ಲಿ ಗಮನಿಸಬಹುದು. ಸಾಮಾನ್ಯವಾಗಿ ಎಲ್ಲ ಸಮಸ್ಯೆಗಳಿಗೂ ಮಾತುಕತೆಗಳ ಮೂಲಕ ಪರಿಹಾರ ಕಂಡುಕೊಳ್ಳಬಹುದು. ಇದು ಎಲ್ಲೆಡೆ ಮಾನ್ಯ ಮಾಡಲಾಗಿರುವ ನಿಯಮವೇ ಆಗಿದೆ. ಅದರಲ್ಲೂ ಎರಡು ದೇಶಗಳ ಮಧ್ಯೆ ವೈಮನಸ್ಸು ಏರ್ಪಟ್ಟಾಗ ಆ ಎರಡೂ ದೇಶಗಳು ಕುಳಿತು ಕೂಟ ನೀತಿಗಳ ಮೂಲಕ ಇಬ್ಬರ ಲಾಭಗಳನ್ನು ಸಮತೋಲನದಲ್ಲಿರಿಸಿ ಬಗೆಹರಿಸಿಕೊಳ್ಳಬಹುದು. ಹಾಗಾಗಿಯೇ ಭಾರತ ಈ ರೀತಿಯ ತಂತ್ರಕ್ಕೆ ಮುಂಚಿನಿಂದಲೂ ಹೆಚ್ಚು ಒತ್ತು ನೀಡುತ್ತ ಬಂದಿದೆ.


  ಈಗಾಗಲೇ ರಷ್ಯಾ ಮತ್ತು ಉಕ್ರೇನ್ ರಾಜತಾಂತ್ರಿಕರ ಮಧ್ಯೆ ಎರಡು ಸುತ್ತಿನ ಮಾತುಕತೆಗಳು ನಡೆದಿವೆಯಾದರೂ ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬಂದಿಲ್ಲ. ಆದರೆ, ಪೊಲ್ಯಾಂಡ್ ಹಾಗೂ ಬೆಲಾರೂಸ್ ದೇಶಗಳ ಗಡಿ ಭಾಗದಲ್ಲಿ ನಡೆದ ಎರಡನೇ ಸುತ್ತಿನ ಮಾತುಕತೆಯಲ್ಲಿ ಎರಡು ಕಡೆಯವರು ಮೊದಲಿಗೆ ಮಾನವೀಯತೆಯ ನೆಲೆಗಟ್ಟಿನಲ್ಲಿ ಜನರು ಸುರಕ್ಷಿತವಾಗಿ ತೆರಳಲು ಅನುವು ಮಾಡಿಕೊಡಲು ಅವಕಾಶ ಮಾಡಿಕೊಡುವ ಬಗ್ಗೆ ಒಮ್ಮತವಾಗಿ ಒಪ್ಪಿದರೆನ್ನಲಾಗಿದೆ. ಆದರೆ, ಯುದ್ಧ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ಧನಾತ್ಮಕ ಫಲಿತಾಂಶ ಹೊರಬಂದಿಲ್ಲ. ಸಾಮಾನ್ಯವಾಗಿ ಅಮೆರಿಕದಲ್ಲಿ ಮುಖ್ಯವಾದ ಹೆದ್ದಾರಿಯಿಂದ ತಕ್ಷಣ ಹೊರ ಹೋಗುವ ವಿಚಾರಕ್ಕೆ ''ಆಫ್ ರ್‍ಯಾಂಪ್" ಎಂಬ ಶಬ್ದವನ್ನು ಬಳಸುತ್ತಾರೆ. ಸದ್ಯ ಪಶ್ಚಿಮಾತ್ಯ ದೇಶಗಳು ಈ ರೀತಿಯ "ಆಫ್ ರ್‍ಯಾಂಪ್" ಮಾತುಕತೆಗೆ ಸಜ್ಜಾಗಿ ಮಧ್ಯಸ್ಥಿಕೆ ವಹಿಸುತ್ತವೆಯೇ ಎಂಬುದರ ಮೇಲೆ ಈ ಯುದ್ಧದ ಪರಿಣಾಮ ಒಂದೆಡೆ ಅವಲಂಬಿತವಾಗಿದೆ ಎಂತಲೂ ಹೇಳಬಹುದು.


  3) ನ್ಯಾಟೊ ಮತ್ತು ರಷ್ಯಾ ಮಧ್ಯೆ ಯುದ್ಧ


  ಇದು ಸದ್ಯಕ್ಕೆ ಸಾಧ್ಯವೇ ಇಲ್ಲ, ಅನ್ನುವಂತಿದ್ದರೂ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಇದನ್ನು ತಳ್ಳಿ ಹಾಕಲಾಗದು. ಒಂದು ವೇಳೆ ಸದ್ಯ ನಡೆಯುತ್ತಿರುವ ವಿದ್ಯಮಾನಗಳು ದಾರಿ ತಪ್ಪಿ ಉಕ್ರೇನ್ ಯುದ್ಧಭೂಮಿ ನ್ಯಾಟೊ ಮತ್ತು ರಷ್ಯಾ ಮಧ್ಯೆ ಯುದ್ಧ ಜರುಗುವಂತೆ ಕಾರಣವಾದರೆ ಜಗತ್ತಿನ ಸಂಪೂರ್ಣ ವ್ಯವಸ್ಥೆಯೇ ಪಣಕ್ಕಿಡಬೇಕಾಗುತ್ತದೆ ಎಂದು ಅಟ್ಲಾಂಟಿಕ್ ಕೌನ್ಸಿಲ್ ವರದಿ ಹೇಳುತ್ತದೆ. ನ್ಯಾಟೋ ಪಡೆ ಈ ಕಣದಲಿ ಹೇಗೆ ಧುಮುಕಬಹುದು ಎಂಬುದರ ಬಗ್ಗೆ ಅವಲೋಕಿಸೋಣ.


  ಇದನ್ನೂ ಓದಿ: Explained: 'ಕಾಮಾಟಿಪುರ'ದ ಇತಿಹಾಸ ಗೊತ್ತಾ? ಇಲ್ಲಿದೆ 'ಕೆಂಪು ದೀಪ'ದ ಕೆಳಗಿನ ಕರಾಳ ಕಥೆ!


  ಉಕ್ರೇನ್ ನಲ್ಲಿ ನ್ಯಾಟೊ ನೋ-ಫ್ಲೈ ಜೋನ್ ಅನ್ನು ಹೇರಬಹುದು ಇಲ್ಲವೇ ನೇರವಾಗಿ ಸೈನಿಕ ಕಾರ್ಯಾಚರಣೆಗೆ ಇಳಿಯಬಹುದು. ಆ ಮೂಲಕ ನ್ಯಾಟೊ ಮತ್ತು ರಷ್ಯಾದ ಮಧ್ಯೆ ಯುದ್ಧ ಏರ್ಪಟ್ಟಂತಾಗುತ್ತದೆ. ಸದ್ಯಕ್ಕೆ ನ್ಯಾಟೊ ಈ ಕ್ರಮ ಕೈಗೊಳ್ಳುವುದು ಅಸಾಧ್ಯವೆನ್ನಲಾಗಿದೆ. ಆದಾಗ್ಯೂ ರಷ್ಯಾ ಸೈನ್ಯ ಉಕ್ರೇನ್ ನಾಗರಿಕರ ಮೇಲೆ ಬಾಂಬ್ ದಾಳಿ ಮಾಡುವುದನ್ನು ಮುಂದುವರಿಸಿದರೆ ನ್ಯಾಟೊ ಈ ಆಯ್ಕೆ ಬಳಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು. ಹೀಗಾದಲ್ಲಿ ರಷ್ಯಾ ತನ್ನ ಎಂದಿನಂತಿನ ಉಕ್ರೇನ್ ದಾಳಿ ಮುಂದುವರಿಸಬಹುದು ಇಲ್ಲವೆ ನ್ಯಾಟೊದೊಂದಿಗೆ ಕದನಕ್ಕಿಳಿಯಬಹುದು. ಈ ಸಂದರ್ಭದಲ್ಲಿ ರಷ್ಯಾ ನ್ಯಾಟೊದೊಂದಿಗೆ ಯುದ್ಧಕ್ಕಿಳಿಯುವ ಸಾಧ್ಯೆತೆಯೇ ಹೆಚ್ಚೆನ್ನಬಹುದು. ಹಾಗಾದಲ್ಲಿ ಇದು ಅತ್ಯಂತ ಭೀಕರ ಕಾಳಗಕ್ಕೆ ಕಾರಣವಾಗಲಿದೆ ಹಾಗೂ ಅಪಾರ ಪ್ರಮಾಣದ ಪ್ರಾಣಹಾನಿ ಹಾಗೂ ಆಸ್ತಿಹಾನಿಗಳಾಗಲಿವೆ. ಅಲ್ಲದೆ ವಿಶ್ವದಾದ್ಯಂತ ಎಲ್ಲೆಡೆ ಇದು ತೀವ್ರ ಸ್ವರೂಪದ ಪರಿಣಾಮಗಳನ್ನು ಉಂಟು ಮಾಡಬಹುದು.


  4) ರಷ್ಯಾ ಗೆಲುವು


  ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ಹೇಳುತ್ತದೆ, ಬಹುಶಃ ರಷ್ಯಾ ಹೀಗೆ ಮುಂದುವರೆಯುತ್ತ ಒಂದು ದಿನ ತಮ್ಮ ಸ್ವ-ರಕ್ಷಣೆಗಾಗಿ ಬಂಡಾಯ ಎದ್ದಿರುವ ಜನರನ್ನು ಸಮಾಧಾನಪಡಿಸಬಹುದು ಆದರೆ ಅದು ಇಷ್ಟು ಬೇಗ ಸಾಧ್ಯವಿಲ್ಲ ಎಂದು. ಇನ್ನೊಂದೆಡೆ ವ್ಯಕ್ತವಾಗಿರುವ ಅಭಿಪ್ರಾಯದಂತೆ, ಈ ಪ್ರದೇಶ ರಷ್ಯಾದ ಕೈವಶವಾಗಿ ಮುಂದೆ ಇಲ್ಲಿ ಗೊರಿಲ್ಲಾ ಮಾದರಿಯ ಯುದ್ಧಗಳಾಗಬಹುದು. ಆವಾಗ ಈ ಮಾದರಿಯ ಯುದ್ಧಗಳನ್ನು ಗಡಿಪಾರಾಗಿರುವ ಉಕ್ರೇನ್ ಸರ್ಕಾರ ನಡೆಸಿದರೆ ಪಶ್ಚಿಮ ದೇಶಗಳು ಅದಕ್ಕೆ ಬೆಂಬಲ ನೀಡಬಹುದು. ಈಗಾಗಲೇ ರಷ್ಯಾ ನಡೆಸುತ್ತಿರುವ ದಾಳಿಯ ತೀವ್ರತೆ ನೋಡಿದರೆ ಇನ್ನು ಸ್ವಲ್ಪ ದಿನಗಳಲ್ಲೇ ಕೀವ್ ರಷ್ಯಾ ವಶದಲ್ಲಿ ಬರಬಹುದಾಗಿದ್ದು ತದನಂತರ ರಷ್ಯಾ ಅಧ್ಯಕ್ಷರು ಯುದ್ಧದಲ್ಲಿ ಜಯ ಸಿಕ್ಕಿರುವುದನ್ನು ಘೋಷಿಸಿ ಕೆಲವು ಸೇನಾ ಪಡೆಗಳನ್ನು ಹಿಂತೆಗೆದುಕೊಂಡು ಈ ಪ್ರದೇಶದಲ್ಲೂ ಹಿಡಿತವನ್ನಿಟ್ಟುಕೊಂಡು ಮರಳಬಹುದು.


  5) ಪುಟಿನ್ ಉಚ್ಛಾಟನೆ


  ಈ ರೀತಿಯಾಗುವುದು ಹೆಚ್ಚುಕಡಿಮೆ ಅಸಾಧ್ಯವೆ ಎಂದು ಗೋಚರಿಸುತ್ತಿದೆಯಾದರೂ ಒಂದೆಳೆಯಷ್ಟು ಅನುಮಾನದ ಲಾಭವನ್ನು ಇದಕ್ಕೂ ನೀಡಲೇಬೇಕಾಗಿದೆ, ಕಾರಣ ಸಾವಿರಾರು ಜನರು ಈ ಯುದ್ಧವನ್ನು ವಿರೋಧಿಸಿ ಅದರ ವಿರುದ್ಧ ಪ್ರತಿಭಟಿಸುತ್ತ ಬೀದಿಗಿಳಿಯುತ್ತಿದ್ದಾರೆ. ಮುಂದೆ ಸಾವಿರ ಹೋಗಿ ಲಕ್ಷಗಳಾಗಿ, ಕೋಟಿಗಳಾಗಿ ಪುಟಿನ್ ಅವರನ್ನೇ ಉಚ್ಛಾಟಿಸಬಹುದಾದಂತಹ ಸಂಭವನೀಯತೆ ಇರುವುದನ್ನು ಕಡೆಗಣಿಸುವಂತಿಲ್ಲ.


  ಇದಲ್ಲದೆ, ಮಾರ್ಚ್ 1ರ ತನಕ ರಷ್ಯಾದ ಕರೆನ್ಸಿಯಾದ ರೂಬಲ್ ನಲ್ಲಿ ಶೇ.30 ರಷ್ಟು ಕುಸಿತವಾಗಿದ್ದು ಷೇರು ಮಾರುಕಟ್ಟೆ ತಲ್ಲಣಿಸಿ ಹೋಗಿದೆ. ರಷ್ಯಾದ ಜನರು ಹಣಕ್ಕಾಗಿ ಪರದಾಡುತ್ತಿದ್ದಾರೆ. ಎಟಿಎಂಗಳ ಮುಂದೆ ಹಣ ವಿತ್‍ಡ್ರಾವ್ ಮಾಡಲು ಸಾಲುಗಟ್ಟಿ ನಿಂತಿದ್ದಾರೆ. ಬಹುತೇಕ ಎಲ್ಲ ಯುರೋಪ್ ನೆಡೆ ತೆರಳುತ್ತಿರುವ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಗಳನ್ನು ರದ್ದುಗೊಳಿಸಲಾಗಿದೆ. ಈಗಾಗಲೇ ಎಲ್ಲ ಯುರೋಪ್ ದೇಶಗಳು ರಷ್ಯಾಗೆ ಏರ್ ಸ್ಪೇಸ್ ನಿಷೇಧಿಸಿವೆ. ಅಂತಾರಾಷ್ಟ್ರೀಯ ಹಣಕಾಸಿನ ಟ್ರಾನ್ಸ್ಯಾಕ್ಷನ್ ಗಾಗಿ ವ್ಯಾಪಾರಿಗಳು ಹರಸಾಹಸ ಪಡುತ್ತಿದ್ದಾರೆ. ಅಜಾಲಿಯಾ ಇದ್ರಿಸೋವಾ ಮುಂದಿನ ದಿನಗಳಲ್ಲಿ ತನ್ನ ಗ್ರಾಹಕರಿರುವ ಅರ್ಜೆಂಟೈನಾಗೆ ವ್ಯಾಪಾರೋದ್ದೇಶದಿಂದ ತೆರಳಬೇಕಾಗಿದ್ದು ಈಗ ಅವಳಿಗೆ ಗ್ರಾಹಕರಿಂದ ಹಣವೂ ಸಹ ಪಾವತಿಯಾಗುವುದೇ ಎಂಬ ಅನುಮಾನ ಕಾಡತೊಡಗಿದೆ ಎಂದು ಒಂದು ಕಡೆ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಒಟ್ಟಿನಲ್ಲಿ ರಷ್ಯಾ ಅಧ್ಯಕ್ಷರ ಈ ನಡೆಯು ಸಾಮಾನ್ಯ ರಷ್ಯಾ ನಾಗರಿಕರ ಮೇಲೆ ವಿಪರೀತವಾಗಿ ಪರಿಣಾಮಗಳನ್ನು ಉಂಟು ಮಾಡುತ್ತಿದ್ದು ಮುಂದೆ ಇದು ಸಹಿಸಲಾಗದ ಸ್ಥಿತಿಗೆ ತಲುಪಿ ರಷ್ಯಾದ ಜನರೇ ಅಧ್ಯಕ್ಷರ ವಿರುದ್ಧ ಬ್ಂಡಾಯ ಎದ್ದು ಅವರನ್ನು ಅಧ್ಯಕ್ಷ ಸ್ಥಾನದಿಂದ ಉಚ್ಛಾಟಿಸುವಂತೆ ಆಗಬಹುದೆ....ಎಂಬುದನ್ನು ಕಾದು ನೋಡಬೇಕಾಗಿದೆ ಅಷ್ಟೆ.

  Published by:Kavya V
  First published: