Explained: ಮಳೆಯ ಪ್ರಮಾಣ ಕಡಿಮೆಯಾಗಲು ಕಾರಣಗಳೇನು? ಅಧ್ಯಯನದಲ್ಲಿ ಬಯಲಾದ ಅಂಶಗಳೇನು?

ಗುಜರಾತ್ ಹಾಗೂ ಕೇರಳದ ನಡುವಿನ ಕಡಲ ತೀರದ ಬಾಹ್ಯರೇಖೆಗಳು ಅರಬ್ಬಿ ಸಮುದ್ರದಿಂದ ತೇವಾಂಶದ ಗಾಳಿಯನ್ನು ಭೂಮಿಯ ಕಡೆಗೆ ಆಕರ್ಷಿಸುತ್ತವೆ. ಇದರಿಂದಾಗಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳದಲ್ಲಿ ಭಾರೀ ಮಳೆಯಾಗುತ್ತದೆ. ಆದರೆ ಕಳೆದ ತಿಂಗಳು ಈ ಬಾಹ್ಯರೇಖೆಗಳು ಹೆಚ್ಚು ದೀರ್ಘವಾಗಿರಲಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈ ವರ್ಷದ ಮಳೆಗಾಲವು ಅಂತ್ಯ ಕಾಣಲು ಇನ್ನೇನು ನಾಲ್ಕು ದಿನಗಳು ಉಳಿದಿವೆ ಅಷ್ಟೇ. ನಾಲ್ಕು ತಿಂಗಳ ನೈರುತ್ಯ ಮುಂಗಾರು ಮಳೆಗಾಲ ಅಧಿಕೃತ ಅಂತ್ಯ ಕಾಣುತ್ತಿದೆ. ಇದುವರೆಗೆ ದೇಶವು 850.3 ಮಿಮೀ ಮಳೆಯಾಗಿದ್ದು ಇದು ಸಾಮಾನ್ಯಕ್ಕಿಂತ 2% ಕಡಿಮೆಯಾಗಿದೆ ಎಂಬ ಮಾಹಿತಿ ದೊರಕಿದೆ. ಜುಲೈನಿಂದ ಸಪ್ಟೆಂಬರ್ 21 ರವರೆಗೆ ಮಳೆ ಸಾಮಾನ್ಯಕ್ಕಿಂತ ಕಡಿಮೆಯಾಗಿತ್ತು. ಕಳೆದ ವಾರವಷ್ಟೇ ಮಳೆ ಸಾಮಾನ್ಯ ಮಟ್ಟವನ್ನು ದಾಖಲಿಸಿದೆ. ವಾಯುವ್ಯ ಭಾಗದಲ್ಲಿ ಮಳೆ ಕೊರತೆಯಾಗಿರುವುದರಿಂದ ಹಾಗೂ ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ ಸರಿಯಾದ ಪ್ರಮಾಣದಲ್ಲಿ ಮಳೆ ಸುರಿಯದೇ ಇರುವುದರಿಂದ ಮಳೆಯ ಪ್ರಮಾಣದಲ್ಲಿ ತಗ್ಗಿದೆ ಎನ್ನಲಾಗಿದೆ.

  ಜುಲೈನಿಂದ ಸಪ್ಟೆಂಬರ್ 15 ರವರೆಗೆ ಮಳೆ ಕೊರತೆಯ ನಂತರ ಕಳೆದ ವಾರ ಮಧ್ಯ ಭಾರತದ ಮೇಲೆ ವರ್ಷಧಾರೆಯಾಗಿದೆ. ಜೂನ್ 1 ರಿಂದ ಸೆಪ್ಟೆಂಬರ್ 27 ರವರೆಗೆ ವಾಯುವ್ಯದಲ್ಲಿ –4 %, ಮತ್ತು ಪೂರ್ವ ಮತ್ತು ಈಶಾನ್ಯ ಭಾರತದಲ್ಲಿ –13 % ಮಳೆಯಾಗಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ದಕ್ಷಿಣ ದ್ವೀಪ ಭಾಗದಲ್ಲಿ ಮಳೆಯು ಸಕಾರಾತ್ಮವಾಗಿದೆ ಹಾಗೂ ಸಾಮಾನ್ಯಕ್ಕಿಂತ 10% ಏರಿಕೆಯಾಗಿದೆ. ಮಧ್ಯಭಾರತವು 1% ಹೆಚ್ಚುವರಿ ಮಳೆಯನ್ನು ದಾಖಲಿಸಿದೆ.

  ಜೂನ್‌ನಲ್ಲಿ+9.6% ಮಳೆ 

  ಜೂನ್‌ನಲ್ಲಿ ಸುರಿದ ಮಳೆಯು ಯಾಸ್ ಚಂಡಮಾರುತದ ಅವಶೇಷಗಳ ಅಂಶ ಹಾಗೂ ಕೇರಳದ ಮೇಲೆ ಮುಂಗಾರು ಆರಂಭದಿಂದ ಉಂಟಾಗಿದೆ. ದಕ್ಷಿಣ ಪರ್ಯಾದ ದ್ವೀಪದಾದ್ಯಂತ ಮಳೆ ಆರಂಭವಾಯಿತು ಜೊತೆಗೆ ಭಾರತದ ಪೂರ್ವ, ಈಶಾನ್ಯ ಹಾಗೂ ಮಧ್ಯ ಭಾಗಗಳಲ್ಲಿ ಕೂಡ ಮಳೆ ದಾಖಲಾಯಿತು. ಹಾಗೂ ಜೂನ್‌ನಲ್ಲಿ+9.6% ನೊಂದಿಗೆ ಮಳೆ ಸಮಾಪ್ತಿಯಾಯಿತು.

  23 ದಿನಗಳ ಶುಷ್ಕತೆಯೊಂದಿಗೆ ಮಾನ್ಸೂನ್ ಸಂಪೂರ್ಣ ದೇಶವನ್ನು ಜುಲೈ 13 ರಂದು ಮಾತ್ರವೇ ಆವರಿಸಿತು. ಹಾಗಾಗಿ ಜುಲೈನಲ್ಲಿ ಸಂಚಿತ ಮಳೆ 6.8% ನಂತೆ ದಾಖಲಾಗಿದೆ. IMD ಮುನ್ಸೂಚನೆಗಳನ್ನು ಆಧರಿಸಿ ಆಗಸ್ಟ್‌ನಲ್ಲಿ ಮಳೆಯು ದುರ್ಬಲವಾಗಿತ್ತು, ಆದರೆ ಉತ್ತರಾಖಾಂಡ, ಮಧ್ಯಪ್ರದೇಶ, ಒಡಿಸ್ಸಾ ಹಾಗೂ ಜಾರ್ಖಂಡ್‌ನ ಕೆಲವು ಭಾಗಗಳಲ್ಲಿ ವಿಪರೀತ ಮಳೆ ಸುರಿದಿದೆ ಎಂಬ ಅಂಶವೂ ಇಲ್ಲಿ ಗಮನಿಸಬೇಕಾದುದು.

  ಮಳೆಯ ದಾಖಲೆ 

  ಸಪ್ಟೆಂಬರ್ ತಿಂಗಳಲ್ಲಿ ಮುಂಗಾರು ಪುನಃ ಗರಿಗೆದರಿಕೊಂಡಿತು. ಇಲ್ಲಿಯವರೆಗೆ ನಾಲ್ಕು ಕಡಿಮೆ ಒತ್ತಡವು ಅತ್ಯಂತ ಮಳೆ ಕೊರತೆನ್ನು ಎದುರಿಸುವ ಮಧ್ಯ ಹಾಗೂ ವಾಯುವ್ಯ ಪ್ರದೇಶಗಳಲ್ಲಿ ಮಳೆಯನ್ನು ಸುರಿಸಿದೆ. ಒಡಿಸ್ಸಾದಲ್ಲಿ 24 ಗಂಟೆಗಳಲ್ಲಿ ದಾಖಲಾದ ಮಳೆಯ ಪ್ರಮಾಣ 400 ಮಿ.ಮೀಗಿಂತ ಹೆಚ್ಚಾಗಿದೆ. ಹಾಗೂ ಗುಜರಾತ್‌ನಲ್ಲಿ ಸಪ್ಟೆಂಬರ್ 13 ರಂದು ಇದೇ ಪ್ರಮಾಣದ ಮಳೆ ದಾಖಲಾಗಿದೆ. ಇದು ಆಂಧ್ರ ಹಾಗೂ ದಕ್ಷಿಣ ಒಡಿಸ್ಸಾ ಕರಾವಳಿಯ ಭೂಪ್ರದೇಶವನ್ನು ಆವರಿಸಿತು.

  ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಭಾರತದ ಅತ್ಯಂತ ಆರ್ದ್ರ ಪ್ರದೇಶಗಳಲ್ಲಿ, ಸತತ 17 ವಾರಗಳವರೆಗೆ ಮಳೆ ಕೊರತೆಯನ್ನು ಕಂಡಿದೆ-ಸಂಪೂರ್ಣ ಸೀಸನ್‌ನಲ್ಲಿಯೇ-ಜೂನ್ 2 ರಿಂದ ಅರುಣಾಚಲ ಪ್ರದೇಶವು 14 ವಾರಗಳ ಮತ್ತು ಅಸ್ಸಾಂ ಮತ್ತು ಮೇಘಾಲಯ ಆರು ವಾರಗಳ ಮಳೆಯ ಕೊರತೆಗೆ ಸಾಕ್ಷಿಯಾಗಿದೆ.

  ಇದನ್ನೂ ಓದಿ: Explained: ದೊಡ್ಡ ನಗರಗಳನ್ನು ಬಿಟ್ಟು ಸಣ್ಣ ಪಟ್ಟಣಗಳತ್ತ ಜನರು ಹೋಗುತ್ತಿರುವುದೇಕೆ..? ಇಲ್ಲಿದೆ ಡೀಟೇಲ್ಸ್‌..

  ಜೂನ್ 12 ರಿಂದ ಸಪ್ಟೆಂಬರ್ 1 ರವರೆಗೆ 11 ನೇರ ವಾರಗಳಲ್ಲಿ ಕೇರಳವು 12 ವಾರಗಳ ಮಳೆಯ ಕೊರತೆಯನ್ನು ದಾಖಲಿಸಿದೆ. ಇದೇ ವೇಳೆಗೆ ಲಕ್ಷದ್ವೀಪವು 15 ವಾರಗಳ ನಿರಂತರದಲ್ಲಿ ಮಳೆ ಕೊರತೆಗೆ ಸಾಕ್ಷಿಯಾಗಿದೆ. ಜುಲೈ 7 ರಿಂದ ಸೆಪ್ಟೆಂಬರ್ 8 ರ ವರೆಗೂ ಒಡಿಸ್ಸಾ 10 ವಾರಗಳವರೆಗೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಈಶಾನ್ಯ ಹಾಗೂ ಕೇರಳದಲ್ಲಿ ಮಳೆಯು ಕ್ಷೀಣಗೊಳ್ಳುತ್ತಿರುವ ಅಂಶವನ್ನು ಅಧ್ಯಯನಗಳು ದೃಢಪಡಿಸಿದವು. ಇನ್ನು ಮಹಾರಾಷ್ಟ್ರ, ಬಿಹಾರ, ಪೂರ್ವ ಯುಪಿ, ಸಿಕ್ಕಿಂ, ಗಂಗಾ ಪಶ್ಚಿಮ ಬಂಗಾಳ, ಛತ್ತೀಸ್‌ಗಢ್, ತೆಲಂಗಾಣ, ರಾಯಲಸೀಮ, ಮತ್ತು ಕರ್ನಾಟಕದ ಹವಾಮಾನ ಉಪವಿಭಾಗಗಳಲ್ಲಿ ಎಲ್ಲಾ 17 ವಾರಗಳವರೆಗೆ ಸಂಚಿತ ಮಳೆಯು ಸಾಮಾನ್ಯ, ಅಧಿಕ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಹೀಗೆ ಸುರಿದಿದೆ.

  ಆಗಸ್ಟ್‌ನಲ್ಲಿ ಹೆಚ್ಚು ಶುಷ್ಕತೆ

  24% ಮಳೆ ಕೊರತೆಯೊಂದಿಗೆ ಆಗಸ್ಟ್ ತಿಂಗಳು ಹೆಚ್ಚು ಶುಷ್ಕತೆಯನ್ನು ಕಂಡಿದೆ. ಎರಡು ಶುಷ್ಕತೆಯು 18 ದಿನಗಳವರೆಗೆ ಕಂಡುಬಂದಿದ್ದು, ಮುಂಗಾರು ಚಟುವಟಿಕೆ ಆಗಸ್ಟ್ 11-25 ರಿಂದ ಸತತ ಮೂರು ವಾರಗಳವರೆಗೆ ದುರ್ಬಲವಾಗಿತ್ತು. ಇದಕ್ಕೆ ಹಲವಾರು ಅಂಶಗಳು ಕಾರಣವಾಗಿವೆ ಎಂದು IMD ವರದಿ ಮಾಡಿದೆ.

  ಕಡಿಮೆ ಒತ್ತಡ ವ್ಯವಸ್ಥೆಗಳು 

  ಮಾನ್ಸೂನ್ ಮಳೆಗೆ ಇವು ಮೂಲ ಅಂಶವಾಗಿವೆ. ಹಾಗೂ ಇವುಗಳಲ್ಲಿ ಎರಡು ಸಿಸ್ಟಮ್‌ಗಳು ಮಾತ್ರವೇ ಪ್ರಮುಖವಾಗಿವೆ. ಇವುಗಳಲ್ಲಿ ಎರಡು ಸಿಸ್ಟಮ್‌ಗಳು ತೀವ್ರ ಒತ್ತಡಕ್ಕೆ ಒಳಗಾಗುತ್ತವೆ.

  ಮಾನ್ಸೂನ್ ಬಾಹ್ಯರೇಖೆಯ ಸ್ಥಾನ 

  ಯಾವುದೇ ಕಡಿಮೆ ಒತ್ತಡ ಸಿಸ್ಟಮ್‌ಗಳು ರೂಪುಗೊಳ್ಳದೇ ಮಾನ್ಸೂನ್ ಬಾಹ್ಯರೇಖೆಯು ಆಗಸ್ಟ್‌ನಲ್ಲಿ ಹೆಚ್ಚಿನ ದಿನಗಳವರೆಗೆ ಸಾಮಾನ್ಯ ಉತ್ತರ ಭಾಗಕ್ಕೆ ಇಳಿದಿದೆ. ಇದರ ಪರಿಣಾಮವಾಗಿ, ಉತ್ತರಾಖಂಡ, ಹಿಮಾಚಲ, ಯುಪಿ ಮತ್ತು ಬಿಹಾರದ ಭಾಗಗಳಿಗೆ ಮಳೆಯು ಹೆಚ್ಚಾಗಿ ಸೀಮಿತವಾಗಿತ್ತು.

  ಪಶ್ಚಿಮ ಪೆಸಿಫಿಕ್ ಸೈಕ್ಲೋನ್‌ಗಳು 

  ಮಯನ್ಮಾರ್ ಅನ್ನು ದಾಟಿದಾಗ ಸೈಕ್ಲೋನ್‌ಗಳು ಉತ್ತಮ ಮಳೆಯನ್ನು ತರುತ್ತವೆ. ಇವುಗಳ ಅವಶೇಷಗಳು ಬಂಗಾಳಕೊಲ್ಲಿಯನ್ನು ಪುನರ್ ಪ್ರವೇಶಿಸುತ್ತವೆ ಹಾಗೂ ತಾಜಾ ಹವಾಮಾನವಾಗಿ ಬದಲಾಗುತ್ತವೆ ಹಾಗೂ ಪೂರ್ವ ಕರಾವಳಿ ಸೇರಿದಂತೆ ಭಾರತೀಯ ಮುಖ್ಯ ಪ್ರದೇಶವನ್ನು ತಲುಪುತ್ತವೆ. ಈ ಆಗಸ್ಟ್‌ನಲ್ಲಿ ಚಂಡಮಾರುತದ ಚಟುವಟಿಕೆ ಕಡಿಮೆಯಾಗಿತ್ತು, ಹಾಗೂ ಅವುಗಳ ಯಾವುದೇ ಅಳಿದುಳಿದ ಭಾಗಗಳು ಬಂಗಾಳ ಕೊಲ್ಲಿಯನ್ನು ಪ್ರವೇಶಿಸಿಲ್ಲ. ಜೊತೆಗೆ ಚಂಡಮಾರುತಗಳು ಬಂಗಾಳ ಕೊಲ್ಲಿಯ ಕಡೆಗೆ ವಾಯುವ್ಯ ದಿಕ್ಕಿಗೆ ಮುನ್ನಡೆಯುವ ಬದಲು ಈಶಾನ್ಯ ದಿಕ್ಕಿಗೆ ಪುನಶ್ಚೇತನಗೊಂಡಿವೆ. ಕಡಿಮೆ ಒತ್ತಡದ ಅನುಪಸ್ಥಿತಿಯಿಂದಾಗಿ ಮಧ್ಯಭಾರತದಲ್ಲಿ ಕಡಿಮೆ ಮಳೆಯನ್ನು ತಂದಿದೆ ಎಂದು ಪುಣೆಯ ಹವಾಮಾನ ಸಂಶೋಧನೆ ಮತ್ತು ಸೇವೆಗಳ ಮುಖ್ಯಸ್ಥ ಡಿ ಶಿವಾನಂದ್ ಪೈ ತಿಳಿಸಿದ್ದಾರೆ.

  ಹಿಂದೂ ಮಹಾಸಾಗರ ದ್ವಿಧ್ರುವಿ ಋಣಾತ್ಮಕತೆ 

  ಮಾನ್ಸೂನ್ ಆರಂಭವಾದಾಗಿನಿಂದ, IOD (ಹಿಂದೂ ಮಹಾಸಾಗರ ದ್ವಿಧ್ರುವಿ )ತನ್ನ ಋಣಾತ್ಮಕ ಹಂತದಲ್ಲೇ ಉಳಿದಿದೆ. IOD ಯ ಋಣಾತ್ಮಕ ಹಂತವನ್ನು ಸಾಮಾನ್ಯ ಮಳೆಗಿಂತ ಕಡಿಮೆ ಎಂದು ಅಧ್ಯಯನಗಳು ತಿಳಿಸಿವೆ.

  ಕಡಲ ತೀರದ ಬಾಹ್ಯರೇಖೆ 

  ಗುಜರಾತ್ ಹಾಗೂ ಕೇರಳದ ನಡುವಿನ ಕಡಲ ತೀರದ ಬಾಹ್ಯರೇಖೆಗಳು ಅರಬ್ಬಿ ಸಮುದ್ರದಿಂದ ತೇವಾಂಶದ ಗಾಳಿಯನ್ನು ಭೂಮಿಯ ಕಡೆಗೆ ಆಕರ್ಷಿಸುತ್ತವೆ. ಇದರಿಂದಾಗಿ ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳದಲ್ಲಿ ಭಾರೀ ಮಳೆಯಾಗುತ್ತದೆ. ಆದರೆ ಕಳೆದ ತಿಂಗಳು ಈ ಬಾಹ್ಯರೇಖೆಗಳು ಹೆಚ್ಚು ದೀರ್ಘವಾಗಿರಲಿಲ್ಲ. ಅದೇ ರೀತಿ ಬಾಹ್ಯರೇಖೆ ಇಲ್ಲದೆಯೇ ಭಾರೀ ಮಳೆ ತರುವ ನೈರುತ್ಯ ಮಾನ್ಸೂನ್ ಮಾರುತಗಳು ದುರ್ಬಲವಾಗಿ ಉಳಿದಿವೆ.

  ಮ್ಯಾಡನ್ ಜೂಲಿಯನ್ ತೂಗಾಟ 

  ಪೂರ್ವ ದಿಕ್ಕಿಗೆ ಚಲಿಸುವ ಮೋಡಗಳ ಅಲೆಗಳು 30-60 ದಿನಗಳ ಚಕ್ರದಲ್ಲಿ ಸಮಭಾಜಕದ ಉದ್ದಕ್ಕೂ ಮಳೆಯನ್ನು ತರುತ್ತದೆ. ಇದೇ ಅಲೆಗಳು ಆಫ್ರಿಕಾದಲ್ಲಿ ಕೂಡ ಉನ್ನತಿ ಸಾಧಿಸುತ್ತಿದ್ದವು. ಆದರೆ ಭಾರತದಲ್ಲಿ ಮೋಡಗಳ ರಚನೆಗೆ ಈ ಅಲೆಗಳು ಸಹಕಾರಿಯಾಗಲಿಲ್ಲ.

  ಮಳೆ ಸುರಿಯುವಿಕೆ ನಿರಂತರತೆ 

  ಸಪ್ಟೆಂಬರ್ 17 ಹಿಂಪಡೆಯುವಿಕೆಯ ಆರಂಭ ದಿನಾಂಕವಾಗಿದ್ದರೂ ಈ ವರ್ಷ ಅಕ್ಟೋಬರ್ 6 ಕ್ಕಿಂತ ಮುನ್ನ ಹಿಂಪಡೆಯುವಿಕೆಯನ್ನು ನಿರೀಕ್ಷಿಸಲಾಗುವುದಿಲ್ಲವೆಂದು IMD ಯ ವಿಸ್ತೃತ ಶ್ರೇಣಿಯ ಮುನ್ಸೂಚನೆಯು ತಿಳಿಸಿದೆ. ಇದರಿಂದ 1975 ರ ನಂತರ ಎರಡನೇ ಅತ್ಯಂತ ವಿಳಂಬ ಮಾನ್ಸೂನ್ ಹಿಂಪಡೆಯುವಿಕೆಯ ವರ್ಷವನ್ನಾಗಿ 2021 ಅನ್ನು ಬಿಂಬಿಸಿದೆ. 2019 ರಲ್ಲಿ ಮಾನ್ಸೂನ್ ಅಕ್ಟೋಬರ್ 9 ರಿಂದ ಹಿಂತೆಗೆದುಕೊಳ್ಳಲು ಆರಂಭಿಸಿತು. ಮಾನ್ಸೂನ್ ಹಿಂತೆಗೆತ ಉಂಟಾದಾಗ ಆ ಪ್ರದೇಶದಲ್ಲಿ ಐದು ದಿನಗಳವರೆಗೆ ಮಳೆಯ ಚಟುವಟಿಕೆ ಸ್ಥಗಿತಗೊಳ್ಳುತ್ತದೆ ಜೊತೆಗೆ ಆ್ಯಂಟಿ - ಸೈಕ್ಲೋನ್ ಸಮುದ್ರ ಮಟ್ಟಕ್ಕಿಂತ 1.5 ಕಿಲೋಮೀಟರುಗಳಷ್ಟು ಕಡಿಮೆ ಉಷ್ಣವಲಯದಲ್ಲಿ ಸ್ಥಾಪನೆಯಾಗುತ್ತದೆ; ಮತ್ತು ತೇವಾಂಶವು ಕಡಿಮೆಯಾಗುತ್ತದೆ.

  ಇದನ್ನೂ ಓದಿ: Explainer: ಸಾಂಕ್ರಾಮಿಕ ರೋಗದ ಅವಧಿಯಲ್ಲಿ ರಾಜ್ಯದಲ್ಲಿ ಮಕ್ಕಳಿಗಾಗಿರುವ ಕಲಿಕೆಯ ನಷ್ಟದ ವಿವರ ಇಲ್ಲಿದೆ!

  ದೇಶದಲ್ಲಿ ಸಪ್ಟೆಂಬರ್‌ನಿಂದ ಇಲ್ಲಿಯವರೆಗೆ 205.4 ಮಿಮೀ ಮಳೆಯಾಗಿದ್ದು 29.3% ಹೆಚ್ಚುವರಿಯಾಗಿದೆ. ಚಂಡಮಾರುತ ಗುಲಾಬ್‌ನ ಅವಶೇಷಗಳಿಂದಾಗಿ ಮುಂದಿನ ಮೂರು ದಿನಗಳಲ್ಲಿ ಹೆಚ್ಚಿನ ಮಳೆಯ ಮುನ್ಸೂಚನೆಯೊಂದಿಗೆ ಮಾನ್ಸೂನ್ ಸಾಮಾನ್ಯ ವರ್ಗದಲ್ಲಿ ಅಂತ್ಯಗೊಳ್ಳುವ ಸಂಭವವಿದೆ. ಸೆಪ್ಟೆಂಬರ್ 30 ರ ಸುಮಾರಿಗೆ ಬಂಗಾಳ ಕೊಲ್ಲಿಯಲ್ಲಿ ಮತ್ತೊಂದು ವ್ಯವಸ್ಥೆಯು ಅಭಿವೃದ್ಧಿಗೊಳ್ಳುವ ಸಾಧ್ಯತೆಯಿದೆ ಎಂದು ಐಎಂಡಿ ಹೇಳಿದೆ, ಇದು ಮುಂದಿನ ತಿಂಗಳ ಆರಂಭದಲ್ಲಿ ದೇಶದ ಮೇಲೆ ಮಾನ್ಸೂನ್ ಅನ್ನು ಸಕ್ರಿಯಗೊಳಿಸುತ್ತದೆ. ಮಾನ್ಸೂನ್ ತನ್ನ ಅಂತಿಮ ತಿಂಗಳಲ್ಲಿ ಇದ್ದು ಹದಿನೈದು ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ದಾಖಲಾದ ಮಳೆಯು ಸಂಪೂರ್ಣ ಭಾರತದ ಮಳೆಯನ್ನು 'ಸಾಮಾನ್ಯ' ವರ್ಗಕ್ಕೆ ತರುವಲ್ಲಿ ಹೆಚ್ಚಿನ ಕೊಡುಗೆ ನೀಡಿದೆ.
  First published: