Maharashtra Politics: 'ಮಹಾ' ರಾಜಕೀಯ ಬಿಕ್ಕಟ್ಟಿಗೆ ಕಾರಣಗಳೇನು? ಮುಂದೆ 'ಲಗಾಟಿ' ಹೊಡೆಯುತ್ತಾ ಅಘಾಡಿ ಸರ್ಕಾರ?

ವಿಶ್ವಾಸ ಮತದ ಕೊರತೆ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಸರ್ಕಾರ ಯಾವುದೇ ಕ್ಷಣದಲ್ಲೂ ಬಿದ್ದು ಹೋಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗಿದ್ರೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಕಾರಣಗಳೇನು? ಮುಂದೆ ಏನಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಮಹಾ ಅಗಾಡಿ ಸರ್ಕಾರ

ಮಹಾ ಅಗಾಡಿ ಸರ್ಕಾರ

  • Share this:
ಮಹಾರಾಷ್ಟ್ರ ರಾಜಕೀಯದಲ್ಲಿ (Maharashtra Politics) ಅಲ್ಲೋಲ ಕಲ್ಲೋಲ ಆಗಿದೆ. ಸಿಎಂ ಉದ್ಧವ್ ಠಾಕ್ರೆ (CM Uddav Thakhrey) ವಿರುದ್ದ ಶಿವಸೇನೆ ಶಾಸಕರೇ (Shiv Sena MLA’s) ರೆಬೆಲ್ (Reabel) ಆಗಿದ್ದಾರೆ. ಏಕನಾಥ್ ಶಿಂಧೆ (Ekanath Shindhe) ನೇತೃತ್ವದಲ್ಲಿ 40ಕ್ಕೂ ಹೆಚ್ಚು ಶಾಸಕರ ಗುಂಪು ಅಸ್ಸಾಂನ (Assam) ರೆಸಾರ್ಟ್‌ನಲ್ಲಿ (Resort) ವಾಸ್ತವ್ಯ ಹೂಡಿದೆ. ಉತ್ತ ಮಹಾ ಅಗಾಡಿ ಸರ್ಕಾರ (maha aghadi Sarkar) ಬಿದ್ದು ಹೋಗುವ ಆತಂಕ ಉಂಟಾಗಿದೆ. ಏಕನಾಥ್ ಶಿಂಧೆ ತನಗೆ 6 ಪಕ್ಷೇತರ ಶಾಸಕರ ಬೆಂಬಲ ಸಹ ಇದೆಯೆಂದು ಹೇಳಿಕೊಂಡಿದ್ದಾರೆ. ವಿಶ್ವಾಸ ಮತದ ಕೊರತೆ ಎದುರಿಸುತ್ತಿರುವ ಉದ್ಧವ್ ಠಾಕ್ರೆ ಸರ್ಕಾರ ಯಾವುದೇ ಕ್ಷಣದಲ್ಲೂ ಬಿದ್ದು ಹೋಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಹಾಗಿದ್ರೆ ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟಿಗೆ ಕಾರಣಗಳೇನು? ಮುಂದೆ ಏನಾಗಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ಓದಿ…

ಕ್ರಾಸ್ ವೋಟ್ ಮಾಡಿಸಿದ್ದರಾ ಏಕನಾಥ್ ಶಿಂಧೆ?

ಕಳೆದ ವಾರ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕ್ರಾಸ್ ವೋಟಿಂಗ್ ನೆರವಿನಿಂದ ಆಡಳಿತಾರೂಢ ಮಹಾ ವಿಕಾಸ್ ಆಘಾಡಿ ಮೈತ್ರಿಕೂಟಕ್ಕೆ ಬಿಜೆಪಿ ಶಾಕ್ ಕೊಟ್ಟಿತು. ಏಕನಾಥ್ ಶಿಂಧೆ ನೆರವಿನಿಂದ ಹಲವು ಶಾಸಕರು ಕ್ರಾಸ್ ವೋಟ್ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಶಿಂಧೆ ಅವರು ಅಸಮಾಧಾನವನ್ನು ಬಹಿರಂಗವಾಗಿಯೇ ಹೊರಹಾಕಿದ್ದರು.

ಶಿಂಧೆ ಕೋಪಕ್ಕೆ ಕಾರಣವೇನು?

ಏಕನಾಥ್ ಶಿಂಧೆ ಅಸಮಾಧಾನಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ, ಮಾನ್ಯತೆ ಸಿಗುತ್ತಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕ್ರಾಸ್ ವೋಟಿಂಗ್ ಹಿಂದೆ ಏಕನಾಥ್ ಪಾತ್ರ ಇದೆ ಎಂಬ ಶಂಕೆಯ ಮೇಲೆ ಸಿಎಂ ಉದ್ಭವ್ ಠಾಕ್ರೆ ಸೋಮವಾರ ಕೆಡಿಕಾರಿದ್ದರು. ಆಗಲೇ ಶಿಂಧೆ ತಮ್ಮ ಜೊತೆ ಹಲವು ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ದಿದ್ದಾರೆ.

ಮನವೊಲಿಕೆಗೆ ಬಗ್ಗದ ಏಕನಾಥ್ ಶಿಂಧೆ

ಏಕನಾಥ್ ಶಿಂದೆಯನ್ನು ಪುಸಲಾಯಿಸಲು ಶಿವಸೇನಾ ನಾಯಕ ಮಿಲಿಂದ್ ನಾರ್ವೇಕರ್ ಅವರನ್ನು ಸಿಎಂ ಕಳುಹಿಸಿದ್ದದರು. ಎರಡು ಗಂಟೆಯ ಭೇಟಿಯಲ್ಲಿ ನಾರ್ವೇಕರ್‌ಗೆ ಯಾವುದೇ ಫಲ ಸಿಗಲಿಲ್ಲ. ನಂತರ ಉದ್ಭವ್ ಠಾಕ್ರೆಯೇ ಖುದ್ದಾಗಿ ಫೋನ್‌ನಲ್ಲಿ ಹತ್ತು ನಿಮಿಷ ಕಾಲ ಶಿಂದೆ ಜೊತೆ ಮಾಡಿದರು. ಆದರೂ ಅದು ಯಶಸ್ವಿಯಾಗಿಲ್ಲ.

ಇದನ್ನೂ ಓದಿ: Uddhav Thackeray: ನಾನು ರಾಜೀನಾಮೆಗೆ ಸಿದ್ಧ ಎಂದ ಉದ್ಧವ್ ಠಾಕ್ರೆ! 'ಮಹಾ' ರಾಜಕೀಯದಲ್ಲಿ ಕ್ಷಣಕ್ಕೊಂದು ಟ್ವಿಸ್ಟ್

 ಬಿಜೆಪಿಗೆ ಬೆಂಬಲ ಎಂದರಾ ಶಿಂಧೆ?

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಹತ್ತು ನಿಮಿಷ ಫೋನ್‌ನಲ್ಲಿ ಮಾತನಾಡಿದ ಏಕನಾಥ್ ಶಿಂಧೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಶಿವಸೇನೆ ಮೈತ್ರಿ ಮಾಡಿಕೊಂಡಿದ್ದು ತನಗೆ ಸರಿಕಾಣಿಸುತ್ತಿಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳಿದರೆನ್ನಲಾಗಿದೆ. ಶಿವಸೇನೆಯ ಬೇರೆ ಶಾಸಕರಿಗೂ ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಇಷ್ಟವಿಲ್ಲ. ನೀವು ಬಿಜೆಪಿ ಜೊತೆ ಮತ್ತೆ ಮೈತ್ರಿ ಮಾಡಿಕೊಳ್ಳಿ ಎಂದು ಉದ್ಧವ್ ಠಾಕ್ರೆಗೆ ಶಿಂಧೆ ತಿಳಿಸಿದ್ದಾರೆ ಅಂತ ಹೇಳಲಾಗುತ್ತಿದೆ.

ಮಹಾರಾಷ್ಟ್ರ ವಿಧಾನಸಭೆ ಬಲಾಬಲ

ಮಹಾರಾಷ್ಟ್ರ ವಿಧಾನಸಭೆಯು 288 ಸದಸ್ಯರನ್ನು ಹೊಂದಿದೆ. ಒಬ್ಬ ಸದಸ್ಯ ಸಾವನಪ್ಪಿದ್ದು, ಇಬ್ಬರು ಜೈಲಿನಲ್ಲಿದ್ದಾರೆ. ಹಾಗಾಗಿ ಸದಸ್ಯಬಲ 285ಕ್ಕೆ ಕುಸಿದಿದೆ. ಅಲ್ಲಿಗೆ ಯಾವುದೇ ಸರ್ಕಾರಕ್ಕೆ ಬಹುಮತ ತೋರಿಸಲು 143 ಸದಸ್ಯರ ಬೆಂಬಲ ಬೇಕಿದೆ.

ಮಹಾ ಅಘಾಡಿ ಸರ್ಕಾರದ ಬಲವೆಷ್ಟು?

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಸಮ್ಮಿಶ್ರವಾದ ಮಹಾ ವಿಕಾಸ್ ಅಘಾಡಿ ಸರ್ಕಾರದ ಬಳಿ 152 ಶಾಸಕರಿದ್ದಾರೆ. 55 ಶಿವಸೇನೆ, 51 ಎನ್‌ಸಿಪಿ ಮತ್ತು 44 ಕಾಂಗ್ರೆಸ್ ಸದಸ್ಯರಿದ್ದು ಉಳಿದವರು ಪಕ್ಷೇತರರಾಗಿದ್ದಾರೆ.

ಕುಸಿದ ಸರ್ಕಾರದ ಶಾಸಕರ ಸಂಖ್ಯೆ

55 ಶಿವಸೇನೆ ಶಾಸಕರಲ್ಲಿ 40 ಜನ ಏಕನಾಥ್ ಶಿಂಧೆ ನೇತೃತ್ವದಲ್ಲಿ ಬಂಡಾಯವೆದ್ದ ಕಾರಣ ಶಿವಸೇನೆಯ ಬಲ ಕೇವಲ 15ಕ್ಕೆ ಕುಸಿದಿದೆ. ಹಾಗಾಗಿ ಸರ್ಕಾರದ ಬಲ 102ಕ್ಕೆ ಕುಸಿಯುತ್ತದೆ. ಏಕನಾಥ್ ಶಿಂಧೆಯ ಗುಂಪು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಮೂರನೇ ಎರಡರಷ್ಟು ಸದಸ್ಯರನ್ನು (37) ಹೊಂದಿರಬೇಕು.

ಮುಂದೆ ಏನಾಗಬಹುದು?

ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬಂಡಾಯ ಶಾಸಕರನ್ನು ಅನರ್ಹಗೊಳಿಸದಂತೆ ಖಚಿತಪಡಿಸಿಕೊಳ್ಳಲು ಶಿಂಧೆ ಟೀಂ 37 ಶಿವಸೇನಾ ಶಾಸಕರನ್ನು (ಒಟ್ಟು 2/3 ಭಾಗಗಳು) ಗೆಲ್ಲುವ ಅಗತ್ಯವಿದೆ. ಶಿಂಧೆ ಬಣವು ಈ ಸಂಖ್ಯೆಗೆ ಬಂದರೆ ಮತ್ತು ಬಿಜೆಪಿಯನ್ನು ಬೆಂಬಲಿಸಲು ಅಥವಾ ಅದರೊಂದಿಗೆ ವಿಲೀನಗೊಳಿಸಲು ನಿರ್ಧರಿಸಿದರೆ, ಆಡಳಿತ ಬದಲಾವಣೆಯಾಗಬಹುದು.

ಬಿಜೆಪಿ ಜೊತೆ ಸರ್ಕಾರ ರಚಿಸ್ತಾರಾ ಶಿಂಧೆ?

ಶಿಂಧೆಯವರ ಬಂಡಾಯವು ಶಾಸಕರರ ಪ್ರಮುಖ ಬೇಡಿಕೆಯಾದ MVAಯನ್ನು ವಿಭಜಿಸಲು ಮತ್ತು ಬಿಜೆಪಿಯೊಂದಿಗೆ ಸರ್ಕಾರವನ್ನು ರಚಿಸಲು ಶಿವಸೇನಾ ನಾಯಕತ್ವವನ್ನು ಒತ್ತಾಯಿಸಬಹುದು.

ಏಕನಾಥ್ ಶಿಂಧೆಗೆ ಉಪ ಮುಖ್ಯಮಂತ್ರಿ ಸ್ಥಾನ?

ಬಿಜೆಪಿಯಿಂದ ದೇವೇಂದ್ರ ಫಡ್ನವೀಸ್ ಮತ್ತೊಮ್ಮೆ ಸಿಎಂ ಆಗಬಹುದು. ಜೊತೆಗೆ ಉಪಮುಖ್ಯಮಂತ್ರಿ ಸ್ಥಾನ ಏಕನಾಥ್ ಶಿಂಧೆಗೆ ಸಿಗಬಹುದು. ಇನ್ನು ಶಿವಸೇನೆಯ ಶಿಂಧೆ ಬಣದಿಂದ 10-12 ಶಾಸಕರು ಸಚಿವರಾಗುವ ಸಾಧ್ಯತೆ ಇದೆ.

ಶಿಂಧೆ ಮನವೊಲಿಕೆಗೆ ಶಿವಸೇನೆ ಕಸರತ್ತು?

ಶಿಂಧೆ ಮತ್ತು ರೆಬೆಲ್ ಶಾಸಕರ ಮನವೊಲಿಕೆಗೆ ಶಿವಸೇನೆ ಮತ್ತೆ ಮುಂದಾಗಬಹುದು. ಶಿಂಧೆ ಅವರು ಸಚಿವರಾಗಿ ಮುಂದುವರೆಸುತ್ತೇವೆ ಅಂತ ಆಮಿಷ ಒಡ್ಡಬಹುದು.

ಇದನ್ನೂ ಓದಿ: Maharashtra Politics: ಶಿವಸೇನೆ ಶಾಸಕರಿಗೆ ಇಂಜೆಕ್ಷನ್ ಕೊಟ್ಟು, ಕಿಡ್ನಾಪ್ ಮಾಡಿದ್ರಾ? ಇದು 'ಮಹಾ' ಹೈಡ್ರಾಮಾದ ಸ್ಫೋಟಕ ನ್ಯೂಸ್

ಠಾಕ್ರೆ ವಿಶ್ವಾಸ ಗಳಿಸಲು ಕಷ್ಟ ಕಷ್ಟ

ಠಾಕ್ರೆಯವರ ಮಾತೋಶ್ರೀ ಮನೆ ಮತ್ತು ಕುುಟಂಬದ ವಿಶ್ವಾಸವನ್ನು ಮರಳಿ ಪಡೆಯಲು ಶಿಂಧೆಗೆ ವರ್ಷಗಳೇ ಹಿಡಿಯಬಹುದು. ಇನ್ನು ಶಿವಸೇನೆಗೆ ಮರಳಿದರೆ ಶಿಂಧೆ ಮೇಲುಗೈ ಸಾಧಿಸಬಹುದು.

ಪಕ್ಷದಿಂದ ಶಿಂಧೆ ಉಚ್ಛಾಟನೆಯಾಗುತ್ತಾ?

ಭಿನ್ನಮತೀಯ ಚಟುವಟಿಕೆಗಳಿಗಾಗಿ ಶಿಂಧೆ ಅವರನ್ನು ಹೊರಹಾಕಿದ ನಂತರ ಸೇನೆಯು MVA ಯ ಭಾಗವಾಗಿ ಮುಂದುವರಿಯಬಹುದು. ಹೀಗಾಗಿ ಶಿಂಧೆ ಅಂತಿಮವಾಗಿ ಬಿಜೆಪಿಗೆ ಸೇರಬಹುದು. ಶಿವಸೇನೆಯ ಇನ್ನೂ ಅನೇಕ ಶಾಸಕರನ್ನು ಪಕ್ಷಕ್ಕೆ ಸೆಳೆದು, ಮುಂದಿನ ವಿಧಾನಸಭೆ ಮತ್ತು ಸಾರ್ವತ್ರಿಕ ಚುನಾವಣೆಗೆ ಸಜ್ಜಾಗಬಹುದು.
Published by:Annappa Achari
First published: