ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾದಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ (SVB) ಯುನೈಟೆಡ್ ಸ್ಟೇಟ್ಸ್‌ನ ಅತಿದೊಡ್ಡ ಬ್ಯಾಂಕ್‌ಗಳಲ್ಲಿ ಒಂದೆನಿಸಿದೆ. ದೊಡ್ಡ ತಂತ್ರಜ್ಞಾನದ ಸ್ಟಾರ್ಟಪ್‌ಗಳಿಗೆ (Start-up) ಸಾಲ ನೀಡಲು ಹೆಸರುವಾಸಿಯಾಗಿರುವ ಸಿಲಿಕಾನ್ ವ್ಯಾಲಿ ಬ್ಯಾಂಕ್ (Silicon Valley Bank) ನಷ್ಟಕ್ಕೊಳಗಾಗಿದ್ದು, 2008ರ ಆರ್ಥಿಕ ಬಿಕ್ಕಟ್ಟಿನ ನಂತರ ಎರಡನೇ ಅತಿದೊಡ್ಡ ಬ್ಯಾಂಕ್ ವಿಫಲತೆ ಎಂಬುದಾಗಿ ಗುರುತಿಸಿಕೊಂಡಿದೆ. ಸಿಲಿಕಾನ್ ವ್ಯಾಲಿ ಬ್ಯಾಂಕ್ ನಾಲ್ಕು ವರ್ಷಗಳಿಂದ ಯುಎಸ್ ಸಾಲದಾತ ಹಾಗೂ ಟೆಕ್ ಸ್ಟಾರ್ಟಪ್‌ಗಳ ಮೂಲಾಧಾರ ಎಂದೆನಿಸಿತ್ತು. ಉದ್ಯಮದ ಕೆಲವು ಪ್ರಸಿದ್ಧ ಬ್ರ್ಯಾಂಡ್‌ಗಳನ್ನು ಒಳಗೊಂಡಂತೆ ಬ್ಯಾಂಕ್ ಹೆಚ್ಚಾಗಿ ತಂತ್ರಜ್ಞಾನ ಕೆಲಸಗಾರರು ಮತ್ತು ಸಾಹಸೋದ್ಯಮ ಬಂಡವಾಳ-ಬೆಂಬಲಿತ ಕಂಪನಿಗಳಿಗೆ ಸೇವೆ ಸಲ್ಲಿಸಿದೆ ಎಂದು ವರದಿಗಳು ತಿಳಿಸಿವೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್ ದಿವಾಳಿ
ಕ್ಯಾಲಿಫೋರ್ನಿಯಾ ಬ್ಯಾಂಕಿಂಗ್ ನಿಯಂತ್ರಕರು ಸಿಲಿಕಾನ್ ವ್ಯಾಲಿ ಬ್ಯಾಂಕ್ ಅನ್ನು ಮುಚ್ಚಿದ್ದಾರೆ ಹಾಗೂ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಬ್ಯಾಂಕ್‌ನ ಕುಸಿತವು ಅತಿದೊಡ್ಡ ರಿಟೇಲ್ ಬ್ಯಾಂಕಿಂಗ್ ವಿಫಲತೆ ಎಂದೆನಿಸಿದೆ. ಯುಎಸ್ ನಿಯಂತ್ರಕರು ಬ್ಯಾಂಕ್ ಅನ್ನು ಮುಚ್ಚಿದ ಕೂಡಲೇ ಬ್ಯಾಂಕ್‌ನ ಠೇವಣಿಗಳ ಮೇಲಿನ ನಿಯಂತ್ರಣವನ್ನು ಸುಪರ್ದಿಗೆ ತೆಗೆದುಕೊಂಡರು ಹಾಗೂ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಸಂಭವಿಸಿರುವ ಬ್ಯಾಂಕಿಂಗ್ ವಿಫಲತೆಯಾಗಿದೆ.
ಬಾಂಡ್ ಮೌಲ್ಯಗಳು ಕಡಿಮೆಯಾಗಲು ಕಾರಣವೇನು?
ಟೆಕ್ ಸ್ಟಾರ್ಟ್ ಅಪ್‌ಗಳಲ್ಲಿ ಹೂಡಿಕೆ ಮಾಡುವ ಮೂಲಕ ದೊಡ್ಡ ಸಂಪತ್ತನ್ನು ಗಳಿಸಿದ ಸಿಲಿಕಾನ್ ವ್ಯಾಲಿ ಬ್ಯಾಂಕ್, ತನ್ನ ಹೆಚ್ಚಿನ ಆಸ್ತಿಗಳನ್ನು US ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದೆ. ಹಣದುಬ್ಬರ ದರಗಳನ್ನು ತಗ್ಗಿಸಲು, ಕಳೆದ ವರ್ಷ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು ಹೆಚ್ಚಿಸಲು ಪ್ರಾರಂಭಿಸಿತು, ಇದು ಬಾಂಡ್ ಮೌಲ್ಯಗಳು ಕಡಿಮೆಯಾಗಲು ಕಾರಣವಾಯಿತು.
ಬ್ಯಾಂಕ್ ನಷ್ಟಕ್ಕೆ ಕಾರಣವಾದ ಅಂಶಗಳು
ಕೋವಿಡ್ ಸಾಂಕ್ರಾಮಿಕದ ನಂತರ ಸ್ಟಾರ್ಟಪ್ ಫಂಡಿಂಗ್ ಕೂಡ ವಿಫಲಗೊಳ್ಳಲಾರಂಭಿಸಿತು ಇದರಿಂದಾಗಿ ಬ್ಯಾಂಕ್‌ನ ಹೆಚ್ಚಿನ ಗ್ರಾಹಕರು ಹಣವನ್ನು ಹಿಂತೆಗೆದುಕೊಳ್ಳಲಾರಂಭಿಸಿದರು. ಅವರ ವಿನಂತಿಯ ಮೇರೆಗೆ, ಸಿಲಿಕಾನ್ ವ್ಯಾಲಿ ಬ್ಯಾಂಕ್ ತನ್ನ ಹೂಡಿಕೆಗಳನ್ನು ಮಾರಾಟಮಾಡಬೇಕಾದ ಒತ್ತಡಕ್ಕೆ ಕೂಡ ಒಳಗಾಗಬೇಕಾಯಿತು ಆದರೆ ಹೂಡಿಕೆಗಳ ಮೌಲ್ಯ ತಗ್ಗಿದ್ದು ಇದು ಕೂಡ ಬ್ಯಾಂಕ್ ನಷ್ಟಕ್ಕೆ ಕಾರಣವಾಯಿತು.
ಇದನ್ನೂ ಓದಿ: Cough Syrup: ಕೆಮ್ಮು ನಿವಾರಿಸುವ ಸಿರಪ್ ಪ್ರಾಣ ತೆಗೆದಿದ್ದೇಕೆ? ವಿಷವಾಗುತ್ತಿರುವುದೇಕೆ ಔಷಧಿಗಳು?
FDIC ನಿಯಂತ್ರಣದಲ್ಲಿರುವ ಠೇವಣಿಗಳು
ಬ್ಯಾಂಕ್ ಸುಮಾರು $2 ಬಿಲಿಯನ್ ನಷ್ಟಕ್ಕೆ ಒಳಗಾಗಿದೆ ಎಂಬುದಾಗಿ ಬಹಿರಂಗಗೊಳಿಸಿರುವುದಾಗಿ ವರದಿ ತಿಳಿಸಿದೆ. ಬ್ಯಾಂಕ್‌ನ ಮುಚ್ಚುವಿಕೆಯ ನಂತರ, ಸುಮಾರು $175 ಶತಕೋಟಿ ಗ್ರಾಹಕ ಠೇವಣಿಗಳು ಈಗ ಫೆಡರಲ್ ಡಿಪಾಸಿಟ್ ಇನ್ಶುರೆನ್ಸ್ ಕಾರ್ಪೊರೇಷನ್ (FDIC) ನಿಯಂತ್ರಣದಲ್ಲಿವೆ.
ಷೇರುಗಳ ಕುಸಿತ
ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಹಠಾತ್ ಕಣ್ಮರೆಯು ಬ್ಯಾಂಕ್‌ನ ಉದ್ಯಮಿಗಳನ್ನು ಕಂಗಾಲಾಗಿಸಿದೆ. ಬ್ಯಾಂಕ್ ತನ್ನ ಬ್ಯಾಲೆನ್ಸ್ ಶೀಟ್ ಹೆಚ್ಚಿಸಲು $2.25 ಶತಕೋಟಿ ಸಂಗ್ರಹಿಸುವ ಅಗತ್ಯವಿದೆ ಎಂದು ಘೋಷಿಸಿದಾಗಲೇ ಸಂಸ್ಥೆಯ ಕುಸಿತದ ಆರಂಭ ಪ್ರಾರಂಭವಾಯಿತು ಎಂದು ಕೆಲವೊಂದು ಸುದ್ದಿಮಾಧ್ಯಮಗಳ ವರದಿ ತಿಳಿಸಿದೆ. ಈ ಘೋಷಣೆಯು ಪ್ರಮುಖ ಸಾಹಸೋದ್ಯಮ ಬಂಡವಾಳ ಸಂಸ್ಥೆಗಳಲ್ಲಿ ಭೀತಿಯನ್ನುಂಟು ಮಾಡಿತು ಹಾಗೂ ಬ್ಯಾಂಕ್‌ನಲ್ಲಿದ್ದ ತಮ್ಮ ಹಣವನ್ನು ಹಿಂಪಡೆಯಲು ಕಂಪನಿಗಳಿಗೆ ಸಲಹೆ ಮಾಡಿದ್ದಾರೆ ಎಂಬುದಾಗಿ ಸುದ್ದಿ ವರದಿಗಳು ತಿಳಿಸಿವೆ. ಆರಂಭಿಕ ಗ್ರಾಹಕರು ಹಾಗೂ ಐಪಿಒಗಳು ತಮ್ಮ ಠೇವಣಿಗಳನ್ನು ಹಿಂತೆಗೆದುಕೊಂಡಿದ್ದರಿಂದ SVB ಬಂಡವಾಳದ ಕೊರತೆಯನ್ನು ಕಂಡುಕೊಂಡಿತು. ಕಂಪನಿಯ ಷೇರುಗಳು ಕುಸಿದು ನಿಯಮಿತ ವಹಿವಾಟಿನ ಅಂತ್ಯದ ವೇಳೆಗೆ 60% ಕ್ಕೆ ತಲುಪಿದೆ. ಬ್ಯಾಂಕ್‌ನ ಹಣಕಾಸಿನ ಸಮಸ್ಯೆಯು ಬೆಳಕಿಗೆ ಬಂದೊಡನೆ ಷೇರು ಬೆಲೆ ಅರ್ಧಕ್ಕಿಂತ ಹೆಚ್ಚು ಹಾಗೂ ಪೂರ್ವ-ಮಾರುಕಟ್ಟೆ ವಹಿವಾಟಿನಲ್ಲಿ 69% ರಷ್ಟು ಕುಸಿಯಿತು.
ಬ್ಯಾಂಕ್ ಹೊಂದಿದ್ದ ಆಸ್ತಿ
SVB ಯ ಷೇರುಗಳನ್ನು ಸ್ಥಗಿತಗೊಳಿಸಲಾಯಿತು ಮತ್ತು ತ್ವರಿತವಾಗಿ ಬಂಡವಾಳವನ್ನು ಸಂಗ್ರಹಿಸಲು ಅಥವಾ ಖರೀದಿದಾರರನ್ನು ಹುಡುಕುವ ಪ್ರಯತ್ನಗಳನ್ನು ಕೈಬಿಟ್ಟಿತು. ಇತರ ಬ್ಯಾಂಕ್‌ಗಳಾದ ಫಸ್ಟ್ ರಿಪಬ್ಲಿಕ್, ಪ್ಯಾಕ್‌ವೆಸ್ಟ್ ಬ್ಯಾನ್‌ಕಾರ್ಪ್ ಮತ್ತು ಸಿಗ್ನೇಚರ್ ಬ್ಯಾಂಕ್‌ಗಳ ಷೇರುಗಳನ್ನು ಈ ಹಿನ್ನಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ವೈಫಲ್ಯದ ಸಮಯದಲ್ಲಿ ಬ್ಯಾಂಕ್ $ 209 ಶತಕೋಟಿ ಆಸ್ತಿಯನ್ನು ಮತ್ತು $ 175 ಶತಕೋಟಿ ಠೇವಣಿಗಳನ್ನು ಹೊಂದಿತ್ತು ಎಂದು FDIC ಹೇಳಿದೆ.
ಸ್ಟಾರ್ಟಪ್‌ಗಳ ಅಳಿವು ಸನ್ನಿಹಿತವಾಗಿದೆಯೇ?
ಕ್ಯಾಲಿಫೋರ್ನಿಯಾ ನಿಯಂತ್ರಕ ಫೈಲಿಂಗ್ ಪ್ರಕಾರ, ಹಣಕಾಸಿನ ಸೋಲು ಬಾಧಿಸುತ್ತಿದ್ದಂತೆಯೇ ಬ್ಯಾಂಕ್‌ನ, ಗ್ರಾಹಕರು ಗುರುವಾರ ಅಂತ್ಯದ ವೇಳೆಗೆ $42 ಶತಕೋಟಿ ಠೇವಣಿಗಳನ್ನು ಹಿಂತೆಗೆದುಕೊಂಡರು ಎಂದು ತಿಳಿಸಿದೆ. ಸ್ಟಾರ್ಟಪ್‌ಗಳಿಗೆ ಅಳಿವಿನ ಸೂಚನೆಯಾಗಿರುವ ಘಟನೆಯಾಗಿದೆ ಎಂಬುದಾಗಿ ಸ್ಟಾರ್ಟಪ್ ಇನ್‌ಕ್ಯುಬೇಟರ್ ವೈ ಕಾಂಬಿನೇಟರ್‌ನ ಸಿಇಒ ಗ್ಯಾರಿ ಟಾನ್ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
ಬ್ಯಾಂಕ್‌ನ ವಿಫಲತೆಯ ತುರ್ತು ಪರಿಣಾಮಗಳೇನು?
ಬ್ಯಾಂಕ್‌ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಕೆಲವೊಂದು ಸ್ಟಾರ್ಟಪ್‌ಗಳು ತಮ್ಮ ಉದ್ಯೋಗಿಗಳಿಗೆ ಪಾವತಿಸಬೇಕಾದ ಸಂಕಷ್ಟಕ್ಕೆ ಒಳಗಾಗಿದ್ದು ಬ್ಯಾಂಕ್‌ನಿಂದ ಫಂಡ್‌ಗಳನ್ನು ಪಡೆಯುವವರೆಗೆ ಪ್ರಾಜೆಕ್ಟ್‌ಗಳನ್ನು ನಿಲ್ಲಿಸುವ ಅಥವಾ ಒಂದಷ್ಟು ಉದ್ಯೋಗಿಗಳನ್ನು ವಜಾಗೊಳಿಸುವ ಕ್ರಮದಲ್ಲಿವೆ ಎಂಬುದು ತಿಳಿದು ಬಂದಿದೆ.
ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಲ್ಲಿ ಉಳಿದಿರುವ ಸಮಸ್ಯೆಗಳೇನು?
ಬಗೆಹರಿಸಲು ಸಾಧ್ಯವಾಗದ ಎರಡು ಸಮಸ್ಯೆಗಳು ಬ್ಯಾಂಕ್‌ನಲ್ಲಿವೆ. ಬ್ಯಾಂಕ್‌ನಲ್ಲಿರುವ ಹೆಚ್ಚಿನ ಡಿಪಾಸಿಟ್‌ಗಳನ್ನು ಇನ್‌ಶ್ಯೂರ್ ಮಾಡದೇ ಇರುವುದು ಏಕೆಂದರೆ ಇದರ ಹೆಚ್ಚಿನ ಸ್ಟಾರ್ಟಪ್ ಹಾಗೂ ಆರ್ಥಿಕ ಗ್ರಾಹಕರ ನೆಲೆಯಾಗಿದೆ. ಫೆಡರಲ್ ಡಿಪಾಸಿಟ್ ಇನ್ಶೂರೆನ್ಸ್ ಕಾರ್ಪೋರೇಶನ್ ಹೇಳಿರುವಂತೆ ವಿಮೆ ಮಾಡಿದ ಇರುವ ಡಿಪಾಸಿಟ್‌ಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ ಆದರೆ ಅದಕ್ಕಿಂತ ಹೆಚ್ಚಿನ ಸ್ತರದ್ದನ್ನು ವಿಮೆ ಮಾಡದೇ ಇರುವುದಾಗಿ ಖಾತ್ರಿಗೊಳಿಸಲಾಗುತ್ತದೆ ಎಂದು ತಿಳಿಸಿದೆ. ಇನ್ನು ಎರಡನೆಯ ಸಮಸ್ಯೆ ಅಂದರೆ ಸಿಲಿಕಾನ್ ವ್ಯಾಲಿ ಬ್ಯಾಂಕ್‌ಗೆ ಯಾರೂ ಖರೀದಿದಾರರು ಇಲ್ಲದೇ ಇರುವುದಾಗಿದೆ.
ಭಾರತೀಯ ಸ್ಟಾರ್ಟಪ್‌ಗಳ ಮೇಲೆ ಬಿದ್ದಿರುವ ಹೊಡೆತವೇನು?
ಸ್ಟಾರ್ಟ್‌ಅಪ್‌ಗಳಿಗೆ ಜೀವಾಳವಾಗಿ ಕಾರ್ಯನಿರ್ವಹಿಸುತ್ತಿದ್ದ ಸಿಲಿಕಾನ್ ವ್ಯಾಲಿ ಕುಸಿತವು ಭಾರತೀಯ ಸಂಸ್ಥೆಗಳ ಮೇಲೂ ಪರಿಣಾಮ ಬೀರಿವೆ. ವೈಸಿ, ಲೈಟ್‌ಸ್ಪೀಡ್, ಸಾಫ್ಟ್‌ಬ್ಯಾಂಕ್ ಪಾರ್ಟ್‌ನರ್ಸ್‌ನಿಂದ ಬೆಂಬಲಿತವಾದ ಡಜನ್‌ಗಟ್ಟಲೆ ಯುವ ಭಾರತೀಯ ಸ್ಟಾರ್ಟ್‌ಅಪ್‌ಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನೊಂದಿಗೆ ಟೈಅಪ್ ಆಗಿವೆ. ಕೆಲವು ಭಾರತೀಯ ಸಂಸ್ಥೆಗಳು ಸಿಲಿಕಾನ್ ವ್ಯಾಲಿ ಬ್ಯಾಂಕ್‌ನಿಂದ ತಮ್ಮ ಹಣವನ್ನು ಸಮಯಕ್ಕೆ ಹಿಂಪಡೆಯಲು ಸಾಧ್ಯವಾಗಲಿಲ್ಲ ಏಕೆಂದರೆ ಈ ಸಂಸ್ಥೆಗಳಿಗೆ ಮತ್ತೊಂದು US ಬ್ಯಾಂಕಿಂಗ್ ಖಾತೆಯು ಸುಲಭವಾಗಿ ಲಭ್ಯವಿಲ್ಲದೇ ಇರುವುದಾಗಿದೆ ಎಂದು ಅನೇಕ ಸಾಹಸೋದ್ಯಮ ಬಂಡವಾಳಗಾರರು ವಿವರಿಸುತ್ತಾರೆ.
ಇನ್ನಷ್ಟು ಆರ್ಥಿಕ ಕುಸಿತಕ್ಕೆ ಕಾರಣವಾಗಲಿದೆಯೇ?
ಫಂಡಿಂಗ್ ಸಮಸ್ಯೆಯನ್ನೆದುರಿಸುತ್ತಿರುವ ಹಲವಾರು ಸಂಸ್ಥೆಗಳಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನ ಕುಸಿತವು ಶಾಕಿಂಗ್ ಸುದ್ದಿಯಾಗಿದೆ. ಬ್ಲ್ಯೂಸ್ಟೋನ್, ಪೇಟಿಎಮ್, ಒನ್97, ಕಮ್ಯುನಿಕೇಶನ್ಸ್ ಏಂಡ್ ಭಾರತ್ ಫಿನಾನ್ಶಿಯಲ್ ಇನ್‌ಕ್ಲುಶನ್, ಫಂಡ್‌ಗಳು ದೊರೆಯದೇ ಇರುವ ಸಮಸ್ಯೆಯಲ್ಲಿ ಸಿಲುಕಿವೆ. ಇದರಿಂದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು, ಇದರಿಂದ ವೆಚ್ಚ ಕಡಿತ, ಪ್ರಾಜೆಕ್ಟ್‌ಗಳ ವಿಳಂಬ ಹಾಗೂ ಉದ್ಯೋಗಿ ವಜಾಗೊಳಿಸುವಿಕೆಯ ಸಮಸ್ಯೆ ಮತ್ತಷ್ಟು ತಲೆದೋರಲಿದೆ. ಭಾರತೀಯ ಸ್ಟಾರ್ಟಪ್ ಪರಿಸರ ವ್ಯವಸ್ಥೆಯಲ್ಲಿ ಎಸ್‌ವಿಬಿ ಮಹತ್ವದ ಪಾತ್ರವಹಿಸಿದೆ. ಫ್ಲಿಪ್‌ಕಾರ್ಟ್, ಓಲಾ ಹಾಗೂ ಜೊಮಾಟೊದಂತಹ ಯಶಸ್ವಿ ಸ್ಟಾರ್ಟಪ್‌ಗಳಿಗೆ ಬ್ಯಾಂಕಿಂಗ್ ಸೇವೆಯನ್ನು ನೀಡಿದ ಹೆಗ್ಗಳಿಗೆ ಸಿಲಿಕಾನ್ ವ್ಯಾಲಿ ಬ್ಯಾಂಕ್‌ನದ್ದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ