China vs Taiwan: ಚೀನಾ-ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ಇದರಲ್ಲೇಕೆ ಅಮೆರಿಕಕ್ಕೆ ಆಸಕ್ತಿ?

ಜಗತ್ತಿನ ಸೂಪರ್ ಪವರ್ ಕಂಟ್ರಿ ಆಗಬೇಕು ಎಂಬ ಅದಮ್ಯ ಉತ್ಸಾಹದಲ್ಲಿರುವ ಚೀನಾಕ್ಕೆ ತೈವಾನ್ ಈಗ ಮಗ್ಗಲ ಮುಳ್ಳಾಗುವ ಲಕ್ಷಣ ಗೋಚರಿಸುತ್ತಿದೆ. ಅದಕ್ಕಾಗಿ ತೈವಾನ್ ವಿರುದ್ಧ ಯುದ್ಧ ನಡೆಸಲು ಚೀನಾ ತಂತ್ರ ಹೂಡುತ್ತಿದೆ. ಅತ್ತ ತೈವಾನ್‌ನೆ ಸಹಾಯ ಹಸ್ತ ಚಾಚಿ, ಡ್ರ್ಯಾಗನ್ ರಾಷ್ಟ್ರದ ಹಲ್ಲು ಕೀಳಲು ಅಮೆರಿಕಾ ಹವಣಿಸುತ್ತಿದೆ! ಹಾಗಾದರೆ ಚೀನಾ ಹಾಗೂ ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ತೈವಾನ್ ಮೇಲೆಕೆ ಅಮೆರಿಕಕ್ಕೆ ಆಸಕ್ತಿ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

ಚೀನಾ-ತೈವಾನ್ ಸಂಘರ್ಷ

ಚೀನಾ-ತೈವಾನ್ ಸಂಘರ್ಷ

  • Share this:
ಡ್ರ್ಯಾಗನ್ ರಾಷ್ಟ್ರ (Dragon Nation) ಚೀನಾ (China) ಸಿಡಿದೆದ್ದಿದೆ. ವಿಶ್ವದ ದೊಡ್ಡಣ್ಣ ಅಮೆರಿಕಾ (America) ವಿರುದ್ಧ ಚೀನಾ ಕೆಂಗಣ್ಣು ಬೀರಿದೆ. ಅದಕ್ಕೆ ಕಾರಣ ತೈವಾನ್ (Taiwan). ಈ ಪುಟ್ಟ ತೈವಾನ್ ನಮ್ಮ ದೇಶದ ಭಾಗ, ಅದರ ಮೇಲೆ ನಮಗೆ ಹಕ್ಕಿದೆ, ಅದನ್ನು ಚೀನಾಕ್ಕೆ ಸೇರಿಸಿಕೊಳ್ಳದೇ ಬಿಡುವುದಿಲ್ಲ ಅಂತ ಚೀನಾ ಹಿಂದಿನಿಂದಲೂ ಅಬ್ಬರಿಸುತ್ತಿದೆ. ಆದರೆ ಡ್ರ್ಯಾಗನ್ ಬೆದರಿಕೆಗೆ ಸೊಪ್ಪು ಹಾಕದ ತೈವಾನ್, ಈಗಾಗಲೇ ತಾನು ಸ್ವತಂತ್ರ ರಾಷ್ಟ್ರ (independent country) ಎಂದು ಘೋಷಿಸಿಕೊಂಡು ಅಮೆರಿಕಾದೊಂದಿಗೆ ಮಿತ್ರತ್ವ (Friendship) ಬಯಸಿದೆ. ಇದು ಚೀನಾದ ಆತಂಕಕ್ಕೆ ಕಾರಣವಾಗಿದೆ. ಜಗತ್ತಿನ ಸೂಪರ್ ಪವರ್ ಕಂಟ್ರಿ (Super Power Country) ಆಗಬೇಕು ಎಂಬ ಅದಮ್ಯ ಉತ್ಸಾಹದಲ್ಲಿರುವ ಚೀನಾಕ್ಕೆ ತೈವಾನ್ ಈಗ ಮಗ್ಗುಲ ಮುಳ್ಳಾಗುವ ಲಕ್ಷಣ ಗೋಚರಿಸುತ್ತಿದೆ. ಅದಕ್ಕಾಗಿ ತೈವಾನ್ ವಿರುದ್ಧ ಯುದ್ಧ ನಡೆಸಲು ಚೀನಾ ತಂತ್ರ ಹೂಡುತ್ತಿದೆ. ಅತ್ತ ತೈವಾನ್‌ಗೆ ಸಹಾಯ ಹಸ್ತ ಚಾಚಿ, ಡ್ರ್ಯಾಗನ್ ರಾಷ್ಟ್ರದ ಹಲ್ಲು ಕೀಳಲು ಅಮೆರಿಕಾ ಹವಣಿಸುತ್ತಿದೆ! ಹಾಗಾದರೆ ಚೀನಾ ಹಾಗೂ ತೈವಾನ್ ನಡುವಿನ ಸಂಘರ್ಷಕ್ಕೆ ಕಾರಣವೇನು? ತೈವಾನ್ ಮೇಲೆಕೆ ಅಮೆರಿಕಕ್ಕೆ ಆಸಕ್ತಿ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ…

 ತೈವಾನ್ ಎಲ್ಲಿದೆ?

ತೈವಾನ್ ದ್ವೀಪ ಸಮೂಹವು ಅಧಿಕೃತವಾಗಿ ರಿಪಬ್ಲಿಕ್ ಆಫ್ ಚೈನಾದಲ್ಲಿದೆ ಅಂತ ಚೀನಾ ಹೇಳುತ್ತಿದೆ. ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರಗಳು, ವಾಯುವ್ಯದಲ್ಲಿ ಪೆಸಿಫಿಕ್ ಮಹಾಸಾಗರ, ಪೀಪಲ್ಸ್ ರಿಪಬ್ಲಿಕ್ ಜೊತೆಗೆ ವಾಯುವ್ಯಕ್ಕೆ ಚೀನಾ, ಈಶಾನ್ಯಕ್ಕೆ ಜಪಾನ್ ದಕ್ಷಿಣಕ್ಕೆ ಪಿಲಿಫೈನ್ಸ್ ಅನ್ನು ಒಳಗೊಂಡಿದೆ, ಚೀನಾದಿಂದ ನಿಯಂತ್ರಿಸಲ್ಪಡುವ ಸುಮಾರು 168 ಪ್ರದೇಶಗಳನ್ನು ಹೊಂದಿದ್ದು, ತೈಪೆ ಇದರ ರಾಜಧಾನಿಯಾಗಿದೆ.

ಚೀನಾದಿಂದ ಬಂದು ತೈವಾನ್‌ನಲ್ಲಿ ನೆಲೆಸಿದ ಜನ

ತೈವಾನ್‌ನಲ್ಲಿ ಇರುವ ಆಸ್ಟ್ರೋನೇಷಿಯನ್ ಬುಡಕಟ್ಟು ಜನರು, ಅವರು ಆಧುನಿಕ ದಿನದ ದಕ್ಷಿಣ ಚೀನಾದಿಂದ ಬಂದವರು ಎಂದು ಭಾವಿಸಲಾಗಿದೆ. 17 ನೇ ಶತಮಾನದಿಂದ, ಗಮನಾರ್ಹ ಸಂಖ್ಯೆಯ ವಲಸಿಗರು ಚೀನಾದಿಂದ ಬರಲು ಪ್ರಾರಂಭಿಸಿದರು, ಆಗಾಗ್ಗೆ ಪ್ರಕ್ಷುಬ್ಧತೆ ಅಥವಾ ಕಷ್ಟದಿಂದ ಪಲಾಯನ ಮಾಡಿದರು. ಹೆಚ್ಚಿನವರು ಫುಜಿಯಾನ್ (ಫುಕಿಯನ್) ಪ್ರಾಂತ್ಯದಿಂದ ಹೊಕ್ಲೋ ಚೈನೀಸ್ ಅಥವಾ ಹಕ್ಕಾ ಚೈನೀಸ್, ಹೆಚ್ಚಾಗಿ ಗುವಾಂಗ್‌ಡಾಂಗ್‌ನಿಂದ ಬಂದವರು. ಅವರ ವಂಶಸ್ಥರು ಈಗ ದ್ವೀಪದಲ್ಲಿ ಅತಿದೊಡ್ಡ ಜನಸಂಖ್ಯಾ ಗುಂಪುಗಳಾಗಿವೆ.

1949ರಲ್ಲಿ ಚೀನಾದಿಂದ ಬೇರೆಯಾಗಿದ್ದ ತೈವಾನ್

ತೈವಾನ್ ದ್ವೀಪವು ಚೀನಾದ ಭಾಗವೇ ಆಗಿತ್ತು. ಆದರೆ 1949 ರಲ್ಲಿ ನಡೆದ ಅಂತರ್ಯುದ್ಧದ ಸಮಯದಲ್ಲಿ ತೈವಾನ್ ಚೀನಾದಿಂದ ಬೇರ್ಪಟ್ಟಿತ್ತು. ಆದರೆ, ಚೀನಾ ತೈವಾನ್​​ ದ್ವೀಪವನ್ನು ತನ್ನ ಸ್ವಂತ ಪ್ರದೇಶ ಎಂದು ಹೇಳುತ್ತದೆ. ಅಷ್ಟೇ ಅಲ್ಲ ತೈವಾನ್​ ವಶಕ್ಕೆ ಪಡೆಯಲು ಮಿಲಿಟರಿ ಕಾರ್ಯಾಚರಣೆ ಮಾಡಲು ಹಿಂಜರಿಯಲ್ಲ ಎಂದೂ ಘೋಷಿಸಿದೆ.

ಚೀನಾ ಒತ್ತಡಕ್ಕೆ ಮಣಿಯದ ತೈವಾನ್

ಚೀನಾ ಎಷ್ಟೇ ಒತ್ತಡ ಹೇರಿದರೂ ಅದರ ಭಾಗವಾಗುವುದಿಲ್ಲ ಎಂದು ತೈವಾನ್ ಈಗಾಗಲೇ ಘೋಷಿಸಿದೆ. ಮತ್ತೊಂದು ಕಡೆ ತೈವಾನನ್ನು ತನ್ನ ಜತೆ ವಿಲೀನಗೊಳಿಸಲು ಚೀನಾ ಒತ್ತಡ ಹೇರುತ್ತಿದೆ. ತೈವಾನ್ ತನ್ನ ಅವಿಭಾಜ್ಯ ಅಂಗವೆಂದು ಹೇಳುತ್ತಿದೆ. ಬೆದರಿಕೆಯ ತಂತ್ರವಾಗಿ ತೈವಾನ್ ಜಲಸಂಯ ಮೇಲೆ ಚೀನಾದ ಹಲವಾರು ವಿಮಾನಗಳು ಕಳೆದ ತಿಂಗಳು ಹಾರಾಡಿದ್ದವು.

ಇದನ್ನೂ ಓದಿ: Explained: ಕೇವಲ 10 ದಿನಗಳಲ್ಲಿ 3 ಹತ್ಯೆ, ಬಡ ಕುಟುಂಬಗಳ ಕಣ್ಣೀರು ಒರೆಸುವವರು ಯಾರು?

ಚೀನಾಕ್ಕೆ ತೈವಾನ್ ತಿರುಗೇಟು

ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವೆನ್, “ಇಂಥ ಚಟುವಟಿಕೆಗಳಿಂದ ಚೀನಾಕ್ಕೆ ಯಾವುದೇ ಪ್ರಯೋಜನವಾಗದು. ಅದರ ಅಂತಾರಾಷ್ಟ್ರೀಯ ವರ್ಚಸ್ಸಿಗೆ ಶೋಭೆ ತರದು. ಬದಲಿಗೆ ಚೀನಾದ ಕಮ್ಯುನಿಸ್ಟ್ ಸರಕಾರದ ನಿಜ ಬಣ್ಣ ಜಗತ್ತಿನೆದುರು ಬಯಲಾಗಲಿದೆ" ಎಂದು ತಿರುಗೇಟು ಕೊಟ್ಟಿದ್ದರು.

ಭಯದಲ್ಲೇ ಇರುವ ತೈವಾನ್

1949ರಿಂದಲೇ ತೈವಾನ್ ತನ್ನನ್ನು ತಾನು ಸ್ವತಂತ್ರ ರಾಷ್ಟ್ರ ಎಂದು ಘೋಷಿಸಿಕೊಂಡಿದೆ. ಪ್ರಜಾಪ್ರಭುತ್ವ ಸರ್ಕಾರ ಅಸ್ಥಿತ್ವಕ್ಕೆ ಬಂದಿದ್ದು, ಪ್ರಸ್ತುತ ತೈವಾನ್ ರಾಷ್ಟ್ರಪತಿಯಾಗಿ ಚೆನ್ ಶುಇ-ಬಿಯಾನ್, ಉಪ ರಾಷ್ಟ್ರಪತಿಯಾಗಿ ಅನೆಟ್ ಲು ಹಾಗೂ ಪ್ರಧಾನಿಯಾಗಿ ಸು ತ್ಸೆಂಗ್ ಚಾಂಗ್ ಅಧಿಕಾರ ನಿರ್ವಹಿಸುತ್ತಿದ್ದಾರೆ. ಪ್ರಜಾಸತ್ತಾತ್ಮಕವಾಗಿ ಚುನಾಯಿತ ನಾಯಕರು ಮತ್ತು ಅದರ ಸಶಸ್ತ್ರ ಪಡೆಗಳಲ್ಲಿ ಸುಮಾರು 300,000 ಸಕ್ರಿಯ ಪಡೆಗಳನ್ನು ಹೊಂದಿದೆ. ಪ್ರಜಾಪ್ರಭುತ್ವ ದೇಶವಾಗಿರುವ ತೈವಾನ್​ ಸದಾ ಚೀನಾ ದಾಳಿಯ ಭೀತಿಯಲ್ಲಿಯೇ ಬದುಕುತ್ತಿದೆ. ತೈವಾನ್​ ಅನ್ನು ಚೀನಾ ತನ್ನ ಅಂಗ ಎಂದೇ ಭಾವಿಸಿದ್ದು, ಒಂದಲ್ಲಾ ಒಂದು ದಿನ ಬಲಪ್ರಯೋಗದಿಂದಲಾದರೂ ಸರಿ ಅದನ್ನು ವಶಪಡಿಸಿಕೊಳ್ಳುವುದಾಗಿ ಘೋಷಿಸಿದೆ.

ತೈವಾನ್‌ನೊಂದಿಗೆ ಚೀನಾ ಒಪ್ಪಂದ

1980 ರ ದಶಕದಲ್ಲಿ ತೈವಾನ್ ಚೀನಾಕ್ಕೆ ಭೇಟಿ ಮತ್ತು ಹೂಡಿಕೆಯ ನಿಯಮಗಳನ್ನು ಸಡಿಲಗೊಳಿಸಿದ್ದರಿಂದ ಸಂಬಂಧಗಳು ಸುಧಾರಿಸಲು ಪ್ರಾರಂಭಿಸಿದವು. 1991 ರಲ್ಲಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದೊಂದಿಗಿನ ಯುದ್ಧವು ಮುಗಿದಿದೆ ಎಂದು ಅದು ಘೋಷಿಸಿತು. ಚೀನಾ "ಒಂದು ದೇಶ, ಎರಡು ವ್ಯವಸ್ಥೆಗಳು" ಎಂದು ಕರೆಯಲ್ಪಡುವ ಆಯ್ಕೆಯನ್ನು ಪ್ರಸ್ತಾಪಿಸಿತು, ಇದು ಬೀಜಿಂಗ್‌ನ ನಿಯಂತ್ರಣಕ್ಕೆ ಬರಲು ಒಪ್ಪಿಕೊಂಡರೆ ತೈವಾನ್ ಸ್ವಾಯತ್ತತೆಯನ್ನು ಅನುಭವಿಸಬಹುದು ಅಂತ ಚೀನಾ ಆಮಿಷವೊಡ್ಡಿತು. ಈ ವ್ಯವಸ್ಥೆಯು 1997 ರಲ್ಲಿ ಹಾಂಗ್ ಕಾಂಗ್ ಚೀನಾಕ್ಕೆ ಹಿಂದಿರುಗಲು ಮತ್ತು ಬೀಜಿಂಗ್ ತನ್ನ ಪ್ರಭಾವವನ್ನು ಹೆಚ್ಚಿಸಲು ಪ್ರಯತ್ನಿಸಿದಾಗ  ಮತ್ತೆ ಸಂಘರ್ಷ ಶುರುವಾಯ್ತು.

ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದ ಪ್ರಭಾವಿತವಾಗಿರು ಚೀನಾ

ಉಕ್ರೇನ್ ಮೇಲೆ ರಷ್ಯಾ ದಾಳಿಯ ನಂತರ ತೈವಾನ್ ವಿಚಾರದಲ್ಲಿ ಚೀನಾ ಕಠಿಣ ಧೋರಣೆ ತಳೆಯಿತು. ಉಕ್ರೇನ್ ಅನ್ನು ಹದ್ದುಬಸ್ತಿನಲ್ಲಿಡಲು ರಷ್ಯಾ ತೆಗೆದುಕೊಳ್ಳುತ್ತಿರುವ ಕ್ರಮಗಳ ಮಾದರಿಯಲ್ಲಿಯೇ ತೈವಾನ್ ವಿಚಾರದಲ್ಲಿ ವರ್ತಿಸಲು ಚೀನಾ ಮುಂದಾಯಿತು. ತೈವಾನ್​ನ ಸುತ್ತಮುತ್ತಲೂ ಮಿಲಿಟರಿ ಚಟುವಟಿಕೆ ಹೆಚ್ಚಿಸಿತು. ತೈವಾನ್​ನ ಭೂ ಪ್ರದೇಶದ ಮಾದರಿಯನ್ನೇ ಮರುಸೃಷ್ಟಿಸಿ ಹಲವು ಬಾರಿ ಚೀನಾ ಸೇನೆಯು ಅಣಕು ದಾಳಿಯ ಕಾರ್ಯಾಚರಣೆ ನಡೆಸಿತ್ತು.

ತೈವಾನ್ ಗಡಿಯಲ್ಲೇ ಬೀಡು ಬಿಟ್ಟಿರುವ ಚೀನಾ

ಕಳೆದ ಜನವರಿ 23ರಂದು ಚೀನಾದ 23 ಯುದ್ಧ ವಿಮಾನಗಳು ತೈವಾನ್ ವಾಯುಗಡಿ ಉಲ್ಲಂಘಿಸಿದ್ದವು. ಕಳೆದ ವರ್ಷ, 2021ರಲ್ಲಿ ಒಟ್ಟು 969 ಬಾರಿ ತೈವಾನ್ ವಾಯುಗಡಿಯಲ್ಲಿ ಚೀನಾದ ಯುದ್ಧವಿಮಾನಗಳು ಹಾರಾಟ ನಡೆಸಿದ್ದವು. 2020ರಲ್ಲಿ 380 ಬಾರಿ ಚೀನಾದ ಯುದ್ಧವಿಮಾನಗಳು ತೈವಾನ್​ ವಾಯುಗಡಿ ಉಲ್ಲಂಘಿಸಿದ್ದವು. 2022ರಲ್ಲಿ ಈವರೆಗೆ ತೈವಾನ್​ ಮೇಲೆ 465 ಬಾರಿ ಚೀನಾದ ಯುದ್ಧ ವಿಮಾನಗಳು ಹಾರಾಡಿವೆ.

ಚೀನಾ ಧೋರಣೆಗೆ ವಿರೋಧಿಸಿದ್ದ ಅಮೆರಿಕಾ

ತೈವಾನ್ ವಿಚಾರದಲ್ಲಿ ಚೀನಾ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಮೆರಿಕ ಅಗತ್ಯ ಬಿದ್ದರೆ ಮಧ್ಯಪ್ರವೇಶಿಸುವುದಾಗಿ ಎಚ್ಚರಿಸಿತ್ತು. ಅದರಂತೆ ಅಮೆರಿಕದ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿನ ಪ್ರಜಾಪ್ರಭುತ್ವದ ಹೋರಾಟಕ್ಕೆ ಬೆಂಬಲಿಸುವ ಉದ್ದೇಶದಿಂದ ಅವರು ಭೇಟಿ ನೀಡಿದ್ದರು.

ಅಮೆರಿಕಾ ಸ್ಪೀಕರ್ ಭೇಟಿಗೆ ಚೀನಾ ವಿರೋಧ

ನ್ಯಾನ್ಸಿ ಪೆಲೋಸಿ ತೈವಾನ್​ ತಲುಪುತ್ತಿದ್ದಂತೆ ಚೀನಾ ಮಿಲಟರಿ ಕಾರ್ಯಾಚರಣೆ ಘೋಷಿಸಿದೆ. ಚೀನಾ ಇತ್ತೀಚಿನ ವರ್ಷಗಳಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಒತ್ತಡ ಎರಡನ್ನೂ ಹೆಚ್ಚಿಸುತ್ತಿದೆ. 2016 ರಲ್ಲಿ ಅಧ್ಯಕ್ಷ ತ್ಸೈ ಇಂಗ್-ವೆನ್ ದ್ವೀಪ ಮತ್ತು ಮುಖ್ಯ ಭೂಭಾಗವು ಒಂದೇ ಚೀನೀ ರಾಷ್ಟ್ರದ ಪ್ರತಿಪಾದನೆ ಮಾಡುತ್ತಿದೆ. ಅಮೆರಿಕಾದ ವರ್ತನೆ ಚೀನಾದ ಸಾರ್ವಭೌಮತೆಗೆ ಧಕ್ಕೆ ತಂದಿದೆ ಅಂತ ಆರೋಪಿಸಿದೆ.

ಇದನ್ನೂ ಓದಿ: Air Pollution: ಈ ಪಟ್ಟಣಕ್ಕೆ ಏನಾಗಿದೆ? ಬೆಂಗಳೂರಲ್ಲಿ ವಾಯುಮಾಲಿನ್ಯ ಹೆಚ್ಚಾಗಲು ಕಾರಣವೇನು?

ತೈವಾನ್ ಮೇಲೆಕೆ ಅಮೆರಿಕಕ್ಕೆ ಪ್ರೀತಿ?

ತೈವಾನ್‌ನೊಂದಿಗೆ ಯುನೈಟೆಡ್ ಸ್ಟೇಟ್ಸ್‌ನ ಅನಧಿಕೃತ ಸಂಬಂಧಗಳನ್ನು ಕೈಗೊಳ್ಳಲು ತೈವಾನ್ ಸಂಬಂಧಗಳ ಕಾಯಿದೆಯಿಂದ ಕಡ್ಡಾಯಗೊಳಿಸಲಾದ ಸರ್ಕಾರೇತರ ಸಂಸ್ಥೆಯಾದ ತೈವಾನ್‌ನಲ್ಲಿನ ಅಮೇರಿಕನ್ ಇನ್‌ಸ್ಟಿಟ್ಯೂಟ್ (AIT) ಮೂಲಕ, ತೈವಾನ್‌ನೊಂದಿಗೆ ನಮ್ಮ ಸಹಕಾರವು ವಿಸ್ತರಿಸುತ್ತಲೇ ಇದೆ. ವ್ಯಾಪಾರ ಮತ್ತು ಹೂಡಿಕೆ, ಆರೋಗ್ಯ, ಸೆಮಿಕಂಡಕ್ಟರ್ ಮತ್ತು ಇತರ ನಿರ್ಣಾಯಕ ಪೂರೈಕೆ ಸರಪಳಿಗಳು, ಹೂಡಿಕೆ ತಪಾಸಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಶಿಕ್ಷಣ, ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುನ್ನಡೆಸುವಲ್ಲಿ ತೈವಾನ್ ಪ್ರಮುಖ US ಪಾಲುದಾರನಾಗಿ ಮಾರ್ಪಟ್ಟಿದೆ.

ಚೀನಾ-ತೈವಾನ್ ಯುದ್ಧದಿಂದ ಜಗತ್ತಿಗೆ ನಷ್ಟ!

ಹೌದು, ಯಾಕೆಂದ್ರೆ ಪ್ರಪಂಚದ ಹೆಚ್ಚಿನ ದೈನಂದಿನ ಎಲೆಕ್ಟ್ರಾನಿಕ್ ಉಪಕರಣಗಳು - ಫೋನ್‌ಗಳಿಂದ ಲ್ಯಾಪ್‌ಟಾಪ್‌ಗಳು, ಕೈಗಡಿಯಾರಗಳು ಮತ್ತು ಆಟಗಳ ಕನ್ಸೋಲ್‌ಗಳವರೆಗೆ - ತೈವಾನ್‌ನಲ್ಲಿ ತಯಾರಿಸಿದ ಕಂಪ್ಯೂಟರ್ ಚಿಪ್‌ಗಳು ತೈವಾನ್‌ನಿಂದಲೇ ಬರುತ್ತವೆ. ಒಂದೇ ತೈವಾನೀಸ್ ಕಂಪನಿ - ತೈವಾನ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಅಥವಾ TSMC - ಪ್ರಪಂಚದ ಅರ್ಧದಷ್ಟು ಮಾರುಕಟ್ಟೆಯನ್ನು ಹೊಂದಿದೆ.
Published by:Annappa Achari
First published: