ಬೆಂಗಳೂರಲ್ಲಿ (Bengaluru) ಮಳೆ (Rain) ಮತ್ತೆ ಅಬ್ಬರಿಸಿದೆ. ಕಳೆದ ಒಂದು ವಾರದಲ್ಲಿ ಎರಡನೇ ಬಾರಿ ರಾಜಧಾನಿಯಲ್ಲಿ ಅವಾಂತರವನ್ನೇ ಮಾಡದೆ. ಆಗಸ್ಟ್ 30 ರಂದು ರಾತ್ರಿಯ ಮಳೆಯಲ್ಲಿ, ಬೆಂಗಳೂರಿನ ಸರ್ಜಾಪುರ (Sarjapur) ಮತ್ತು ಹೊರ ವರ್ತುಲ ರಸ್ತೆಯಂತಹ (Out Ring Road) ಪ್ರದೇಶಗಳು ಜಲಾವೃತಗೊಂಡಿದ್ದವು. ಇಂದೂ ಕೂಡ ಮತ್ತೆ ಮಳೆಯಿಂದಾಗಿ ಬೆಂಗಳೂರು ನಗರದ ಸುಮಾರು ಅರ್ಧ ಭಾಗವೇ ಮುಳುಗಿದಂತಾಗಿದೆ. ರಾಜಾಕಾಲುವೆ ಒತ್ತುವರಿಯಿಂದ ಮಳೆನೀರು ಚರಂಡಿ ಒಳಗೆ ಹರಿದು ಹೋಗದೇ ರಸ್ತೆ ಮೇಲೆಲ್ಲ ನುಗ್ಗುತ್ತಿವೆ. ಪ್ರತಿ ಬಾರಿ ಮಳೆಗಾಲದಲ್ಲಿ ಪ್ರವಾಹ (Flood) ಬರುವುದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ, ದವಸ, ಧಾನ್ಯ ಸೇರಿ ಅಗತ್ಯ ವಸ್ತುಗಳನ್ನು ಆಪೋಷನ ತೆಗೆದುಕೊಳ್ಳುವುದು, ಯಾರಾದರೊಬ್ಬರು ರಾಜಕಾಲುವೆಯಲ್ಲಿ ಕೊಚ್ಚಿಕೊಂಡು ಹೋಗಿ, ಅವರ ಶವ (Dead Body) ಇನ್ಯಾವಾಗೋ ಸಿಗುವುದು ಇವೆಲ್ಲ ಬೆಂಗಳೂರಲ್ಲಿ ಮಳೆಗಾಲದಲ್ಲಿ ಕಾಮನ್ ಎನ್ನುವಂತಾಗಿದೆ. ಹಾಗಾದರೆ ಬೆಂಗಳೂರು ಮಳೆಯಿಂದ ತಪ್ಪಿಸಿಕೊಳ್ಳುವುದಿಲ್ಲವಾ? ಮತ್ತೆ ಮತ್ತೆ ಮಹಾನಗರದಲ್ಲಿ ಮಳೆ ಅವಾಂತರಕ್ಕೆ ಕಾರಣವೇನು? ಇಲ್ಲಿದೆ ಸಂಪೂರ್ಣ ಮಾಹಿತಿ…
ರಾಜಧಾನಿಯಲ್ಲಿ ಆಗಸ್ಟ್ ಮಳೆಯ ಲೆಕ್ಕಾಚಾರ
ಹವಾಮಾನ ಇಲಾಖೆಯು ಕಳೆದ ವರ್ಷ ನಗರದಲ್ಲಿ ಆಗಸ್ಟ್‌ನಲ್ಲಿ 98.5 ಮಿಮೀ ಮಳೆಯನ್ನು ದಾಖಲಿಸಿದೆ. ಅದಕ್ಕೂ ಮೊದಲು, ಆಗಸ್ಟ್ 2020 ರಲ್ಲಿ, 75.9 ಮಿಮೀ ಮಳೆ ದಾಖಲಾಗಿತ್ತು; 2019 ರಲ್ಲಿ, 146.8 ಮಿಮೀ ದಾಖಲಾಗಿದೆ; ಹಾಗೂ 2018ರಲ್ಲಿ 158.3 ಮಿ.ಮೀ. 2011 ರ ಆಗಸ್ಟ್ (278.2 ಮಿಮೀ) ನಂತೆ 2017 ರ ಆಗಸ್ಟ್ ತುಂಬಾ ತೇವವಾಗಿತ್ತು (351.8 ಮಿಮೀ). ಆದಾಗ್ಯೂ, 2016 (82.8 ಮಿಮೀ); 2015 (110 ಮಿಮೀ); 2014 (102.4 ಮಿಮೀ); 2013 (94.3 ಮಿಮೀ); ಮತ್ತು 2012 (189.1 ಮಿಮೀ) ಒಣಗಿತ್ತು. ಈ ವರ್ಷ ಜೂನ್ 1 ರಿಂದ, ನಗರದಲ್ಲಿ 769 ಮಿಮೀ ಮಳೆಯಾಗಿದೆ, ಈ ಅವಧಿಯಲ್ಲಿ ಸರಾಸರಿ 425 ಮಿಮೀ ಮಳೆಯಾಗಿದೆ.
ಈ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಎಷ್ಟು ಮಳೆಯಾಗಿದೆ?
ಈ ವರ್ಷದ ಆಗಸ್ಟ್‌ನಲ್ಲಿ ಬೆಂಗಳೂರು 370 ಮಿಮೀ ಮಳೆಯಾಗಿದ್ದು, ಆಗಸ್ಟ್ 1998 ರಲ್ಲಿ ಸಂಭವಿಸಿದ ಸಾರ್ವಕಾಲಿಕ ದಾಖಲೆಯ 387.1 ಮಿಮೀ ಮಳೆಗೆ ಸ್ವಲ್ಪ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಇದನ್ನೂ ಓದಿ: Bengaluru Rain: ಮುಳುಗಿದ ಬೆಂಗಳೂರು ನಗರದ ಮತ್ತಷ್ಟು ಚಿತ್ರಗಳನ್ನು ನೋಡಿ
ಸರ್ಜಾಪುರದ ರೈನ್ಬೋ ಲೇಔಟ್ ಏಕೆ ಜಲಾವೃತವಾಯಿತು?
ಸಾಧಾರಣ ತುಂತುರು ಮಳೆಯಲ್ಲೂ, ಸರ್ಜಾಪುರದಲ್ಲಿರುವ ರೇನ್ಬೋ ಡ್ರೈವ್ ಲೇಔಟ್ ಜಲಾವೃತಗೊಳ್ಳುತ್ತದೆ. ರೈನ್ಬೋ ಡ್ರೈವ್ ಲೇಔಟ್ ಅನ್ನು 20 ವರ್ಷಗಳ ಹಿಂದೆ ಮುಖ್ಯವಾಗಿ ನೀರಾವರಿಗಾಗಿ ಬಳಸಲಾಗುವ ಡ್ರೈನ್ ಬಳಿ ರಚಿಸಲಾಗಿದೆ. ಫ್ರೆಂಡ್ಸ್ ಆಫ್ ಲೇಕ್ಸ್, ನಾಗರಿಕರ ಸಮೂಹದ ಸಹ-ಸಂಸ್ಥಾಪಕ ರಾಮ್ ಪ್ರಸಾದ್, ಕಾಲಾನಂತರದಲ್ಲಿ, ಲೇಔಟ್ ಹತ್ತಿರ ನಿರ್ಮಿಸಲಾದ ಕಟ್ಟಡಗಳು ಅವುಗಳ ಎತ್ತರವನ್ನು ಹೆಚ್ಚಿಸಿವೆ, ಇದರಿಂದಾಗಿ ಈ ಪ್ರದೇಶವು "ಸೂಪ್ ಬೌಲ್" ಆಗಿದೆ. ಈ ಭಾಗದ ಭೌಗೋಳಿಕ ಬದಲಾವಣೆಯೊಂದಿಗೆ ಹೊಸ ಚರಂಡಿ ವಿನ್ಯಾಸದತ್ತ ಗಮನಹರಿಸಬೇಕಿತ್ತು. ಆದರೆ ಆ ಕೆಲಸ ಆಗಿಲ್ಲ.
ಸುತ್ತಮುತ್ತಲ ಏರಿಯಾಗಳಿಂದ ನುಗ್ಗುವ ನೀರು
ಜುನ್ನಸಂದ್ರ, ಹಾಲನಾಯಕನಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಮಳೆ ನೀರು ರೈನ್‌ಬೋ ಡ್ರೈವ್ ಲೇಔಟ್‌ಗೆ ಹರಿದಿದೆ. ಬಡಾವಣೆಯಿಂದ ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಮಳೆನೀರು ಚರಂಡಿಗೆ ಹರಿಸಲಾಗಿದೆ. ಸುತ್ತಮುತ್ತಲ ಗ್ರಾಮಗಳ ಹೆಚ್ಚುವರಿ ನೀರು ರೈನ್‌ಬೋ ಡ್ರೈವ್ ಲೇಔಟ್‌ಗೆ ಹರಿಸದೆ ನೇರವಾಗಿ ನಾಲೆಗೆ ಸೇರುವಂತೆ ವ್ಯವಸ್ಥೆ ಮಾಡಬೇಕಿತ್ತು. ಆದರೆ ಅದೂ ಸಾಧ್ಯವಾಗಿಲ್ಲ.
ರೈನ್‌ಬೋ ಡ್ರೈವ್ ಲೇಔಟ್‌ನಲ್ಲಿ ಪ್ರವಾಹವನ್ನು ತಡೆಯುವುದು ಹೇಗೆ?
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಮಾತನಾಡಿ, ಕೆಲವು ಆಸ್ತಿಗಳು ಚರಂಡಿಗೆ ಬಂದಿದ್ದು, ರೇನ್‌ಬೋ ಡ್ರೈವ್ ಲೇಔಟ್ ಮುಳುಗಡೆಗೆ ಕಾರಣವಾಗಿದೆ. ಕಾನೂನು ಪ್ರಕ್ರಿಯೆಗಳನ್ನು ಪರಿಶೀಲಿಸಲಾಗುತ್ತಿದ್ದು, ಬಳಿಕ ಚರಂಡಿ ಒತ್ತುವರಿ ಮಾಡಿಕೊಂಡಿರುವ ಆಸ್ತಿಗಳನ್ನು ನೆಲಸಮ ಮಾಡಲಾಗುವುದು ಎಂದು ಹೇಳಿದರು.
ಹೊರ ವರ್ತುಲ ರಸ್ತೆ ಏಕೆ ಜಲಾವೃತವಾಯಿತು?
ಸೆಪ್ಟೆಂಬರ್ 1 ರಂದು ಹೊರವರ್ತುಲ ರಸ್ತೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ಪ್ರದೇಶವು ಜಲಾವೃತಗೊಳ್ಳಲು ಪ್ರಮುಖ ಕಾರಣವೆಂದರೆ ಮಳೆನೀರು ಚರಂಡಿಗಳ ಅತಿಕ್ರಮಣ ಎಂದಿದ್ದಾರೆ. ಹೀಗಾಗಿ ಚರಂಡಿ ಮೇಲೆ ನಿರ್ಮಿಸಿರುವ ಎಲ್ಲ ಆಸ್ತಿಗಳನ್ನು ನೆಲಸಮಗೊಳಿಸುವಂತೆ ಆದೇಶಿಸಿದ್ದಾರೆ. ಮಾರತ್ತಹಳ್ಳಿಯ ಡಿಎನ್‌ಎ ಅಪಾರ್ಟ್‌ಮೆಂಟ್ ಬಳಿ ತಪಾಸಣೆ ನಡೆಸಿದಾಗ ಚರಂಡಿಯ ಅಗಲ 30 ಅಡಿಯಿಂದ 4 ಅಡಿಗೆ ಇಳಿದಿರುವುದು ಗಮನಕ್ಕೆ ಬಂದಿದೆ. ಈ ಪ್ರದೇಶದಲ್ಲಿ ಚರಂಡಿ ಒತ್ತುವರಿ ಮಾಡಿರುವ 10 ಸ್ಥಳಗಳನ್ನು ಬಿಬಿಎಂಪಿ ಪತ್ತೆ ಮಾಡಿದೆ.
ಸುಮಾರು 517ಕ್ಕೂ ಹೆಚ್ಚು ತಗ್ಗು ಪ್ರದೇಶ
ರಾಜಧಾನಿ ಬೆಂಗಳೂರಿನಲ್ಲಿ ಮಳೆಯಿಂದ ಹಾನಿಗೆ ಒಳಗಾಗುವ ಸುಮಾರು 517ಕ್ಕೂ ಹೆಚ್ಚು ತಗ್ಗು ಪ್ರದೇಶಗಳಿವೆ ಎನ್ನಲಾಗಿದೆ. ಸಮೀಕ್ಷೆಯ ಪ್ರಕಾರ ಸುಮಾರು 517 ತಗ್ಗು ಪ್ರದೇಶಗಳಿದ್ದು ಪ್ರತಿ ವರ್ಷ ಮಳೆಗಾಲದಲ್ಲಿ ಕಿರಿಕಿರಿ ಅನುಭವಿಸುತ್ತಲೇ ಇವೆ, ಮನೆ ಮುಳುಗಡೆ, ಮನೆ ಕುಸಿತ, ರಸ್ತೆ ಕುಸಿತ, ನೀರು ನುಗ್ಗುವುದು ಹೀಗೆ ನೂರಾರು ತೊಂದರೆಗಳು ಇದ್ದರು ಬಿಬಿಎಂಪಿ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದೆ.
ಬಿಬಿಎಂಪಿಯಿಂದ 209 ಪ್ರದೇಶಗಳ ಗುರುತು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರವಾಹಕ್ಕೆ ಒಳಗಾಗುವ 209 ಪ್ರದೇಶಗಳನ್ನು ಗುರುತಿಸಿದ್ದು, ಅವುಗಳಲ್ಲಿ 153 ಸೂಕ್ಷ್ಮ ಮತ್ತು 53 ಅತ್ಯಂತ ಸೂಕ್ಷ್ಮವಾಗಿವೆ. ಬೆಂಗಳೂರಿನ ಜೆಪಿ ನಗರ, ಪುಟ್ಟೇನಹಳ್ಳಿ, ಬಿಟಿಎಂ, ಕೋರಮಂಗಲ, ಈಜಿಪುರದ ತಗ್ಗು ಪ್ರದೇಶಗಳು ಪ್ರವಾಹಕ್ಕೆ ಸಾಕ್ಷಿಯಾಗಿವೆ.
ರಾಜಕಾಲುವೆಗಳ ನಿರಂತರ ಒತ್ತುವರಿ
ಇದು ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಲು ಪ್ರಮುಖ ಕಾರಣವಾಗಿದೆ. ಹಿಂದೆ ನಗರದಾದ್ಯಂತ ನೀರು ಸರಾಗವಾಗಿ ಹರಿದು ಹೋಗಲು ಎಲ್ಲಾ ಕಡೆ ರಾಜಕಾಲುವೆಗಳನ್ನು ನಿರ್ಮಿಸಲಾಗಿತ್ತು. ಏರಿಯಾದ ಬೇರೆ ಬೇರೆ ಕಡೆಯಿಂದ ಬಂದ ನೀರು ರಾಜಕಾಲುವೆ ಸೇರಿ ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಈಗ ನಿರಂತರವಾಗಿ ರಾಜಕಾಲುವೆ ಒತ್ತುವರಿ ನಡೆಯಿತ್ತಿದೆ. ಹೀಗಾದರೆ ನೀರಿಗೆ ಹೊರಹೋಗಲು ಜಾಗವೆಲ್ಲಿದೆ
ಇದನ್ನೂ ಓದಿ: Bengaluru Rain: ಬೆಂಗಳೂರಿನಲ್ಲಿ ಮತ್ತೆ ಶುರುವಾದ ಭಾರೀ ಮಳೆ, 2 ಗಂಟೆ ನಿರಂತರ ಸುರಿದ್ರೆ ಅನಾಹುತ ಫಿಕ್ಸ್
ಚರಂಡಿಗೆ ತಡೆಗೋಡೆ ಇಲ್ಲದಿರುವುದು
ನಗರದಲ್ಲಿ 842 ಕಿ.ಮೀ ಉದ್ದದ ಮಳೆನೀರು ಚರಂಡಿಗಳ ಪೈಕಿ ಕೇವಲ 389 ಕಿ.ಮೀ.ಗೆ ತಡೆಗೋಡೆ ನಿರ್ಮಿಸಲಾಗಿದೆ. ಪ್ರವಾಹಕ್ಕೆ ತಜ್ಞರು ಉಲ್ಲೇಖಿಸಿರುವ ಕಾರಣಗಳಲ್ಲಿ ಇದೂ ಒಂದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ