ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ.1ರಂದು ಮಂಡಿಸಿದ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಹೈಡ್ರೋಜನ್ ಇಂಧನ ಮಿಷನ್ ಬಗ್ಗೆ ಪ್ರಸ್ತಾಪಿಸಿದ್ದರು. 2021-22ರ ಹಣಕಾಸು ವರ್ಷದಲ್ಲಿ ಹಸಿರು ಇಂಧನ ಮೂಲಗಳಿಂದ ಜಲವಿದ್ಯುತ್ ತಯಾರಿಸಲು ಹೈಡ್ರೋಜನ್ ಇಂಧನ ಮಿಷನ್ ಆರಂಭಿಸುವ ಪ್ರಸ್ತಾವನೆ ಇದೆ ಎಂದು ತಿಳಿಸಿದ್ದರು. ಈ ಪ್ರಸ್ತಾವನೆಯನ್ನು ಸರ್ಕಾರ ಇದೀಗ ಅನುಷ್ಠಾನಕ್ಕೆ ತರಲು ಸಿದ್ಧತೆ ನಡೆಸಿದೆ. ಸರ್ಕಾರಿ ಅಧಿಕಾರಿಗಳು ಮುಂದಿನ ಎರಡು ತಿಂಗಳಿನಲ್ಲಿ ಬಜೆಟ್ನಲ್ಲಿ ಪ್ರಸ್ತಾವನೆ ಆಗಿರುವ ಹೈಡ್ರೋಜನ್ ಇಂಧನ ಮಿಷನ್ ಕುರಿತು ನೀಲಿನಕ್ಷೆ ರೂಪಿಸಿಕೊಳ್ಳಲು ಸೂಚಿಸಲಾಗಿದೆ. ಬಜೆಟ್ನಲ್ಲಿ ಪ್ರಸ್ತಾವಿತ ಕ್ಷೇತ್ರದಲ್ಲಿ ಉಕ್ಕು ಮತ್ತು ರಾಸಾಯನಿಕಗಳು ಸೇರಿವೆ. ಇನ್ನು, 2021-22ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಹೈಡ್ರೋಜನ್ ಇಂಧನ ವಿಷನ್ಗೆ ಮಹತ್ವ ನೀಡಿದೆ. ಮಸ್ಕ್ ಟೆಸ್ಲಾ ಸಿಇಒ ಎಲೋನ್ ಮಸ್ಕ್ ಇಂಧನ ಸೆಲ್ ತಂತ್ರಜ್ಞಾನವನ್ನು ಮೂರ್ಖತನ ಎಂದು ಕರೆದಿದ್ದಾರೆ.
2050ರ ವೇಳೆಗೆ ಡಿಕಾರ್ಬೋನೈಸ್ ಗುರಿ
ಇತ್ತೀಚಿನ ದಿನಗಳಲ್ಲಿ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ರಸ್ತೆಯಲ್ಲಿ ಸಂಚರಿಸುತ್ತಿವೆ. ಒಂದೇ ಕುಟುಂಬದಲ್ಲಿ ಮೂರರಿಂದ ನಾಲ್ಕು ಕಾರುಗಳನ್ನು ಹೊಂದಿದವರು ಸಾಮಾನ್ಯ ಜನರ ಜೊತೆಗಿದ್ದಾರೆ. ಆದರೆ, ಹೆಚ್ಚು ವಾಹನಗಳು ರಸ್ತೆಯಲ್ಲಿ ಸಂಚಾರದಿಂದ ವಾತಾವರಣದಲ್ಲಿನ ಗಾಳಿ ಕಲುಷಿತವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ 2050ರ ವೇಳೆಗೆ ಹೈಡ್ರೋಜನ್ ಇಂಧನ ಮಿಷನ್ ಗುರಿಯೊಂದಿಗೆ ಡಿಕಾರ್ಬೋನೈಸ್ ಗುರಿಯನ್ನು ಹೊಂದಿದೆ. ಹೈಡ್ರೋಜನ್ ಇಂಧನ ಮಿಷನ್ಗಾಗಿ ಕೇಂದ್ರವು 1,500 ಕೋಟಿ ರೂ. ಖರ್ಚು ಮಾಡುತ್ತಿದೆ.
ಹೈಡ್ರೋಜನ್ ಯಾಕೆ ಬೇಕು?
ಭಾರತದಲ್ಲಿ ವಿದ್ಯುತ್ಗಾಗಿ ಹೆಚ್ಚಾಗಿ ಕಲ್ಲಿದ್ದಲು ಮೇಲೆ ಅವಲಂಬಿತವಾಗಿದೆ. ಇಷ್ಟು ದಿನ ನಡೆದುಕೊಂಡ ಬಂದಿದ್ದ ಹಾದಿ ಹೈಡ್ರೋಜನ್ ಮಿಷನ್ನಿಂದ ಬದಲಾವಣೆ ಆಗಲಿದೆ. ಹೈಡ್ರೋಜನ್ ಮಿಷನ್ ಕಾರ್ಯರೂಪಕ್ಕೆ ಬಂದರೆ ವಾಯು ಮಾಲಿನ್ಯ, ತೈಲ ದರ ಹೆಚ್ಚಳದ ಸಮಸ್ಯೆ ಇರುವುದಿಲ್ಲ.
ಇದು ವಿಶ್ವದಲ್ಲಿ ಅತ್ಯಂತ ಹೇರಳವಾಗಿರುವ ಅಂಶವಾಗಿದೆ. ಪೆಟ್ರೋಲ್ ಅನ್ನು ಬಳಸುವುದಕ್ಕಿಂತ ಮೂರು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿದೆ. ಇದು ಸಾರಿಗೆಯಲ್ಲಿ ಮಹತ್ವದ ಬದಲಾವಣೆ ತರಲಿದೆ. ಅಲ್ಲದೇ ಉಕ್ಕು ಮತ್ತು ರಾಸಾಯನಿಕ ಕ್ಷೇತ್ರಗಳಿಗೂ ಹೈಡ್ರೋಜನ್ ಮಿಷನ್ನಿಂದ ಹಲವು ಲಾಭಗಳಿವೆ.
ಹೈಡ್ರೋಜನ್ ಅಲ್ಲಿ ಮೂರು ವಿಧಗಳಿವೆ. ಬೂದು ಬಣ್ಣದ ಹೈಡ್ರೋಜನ್, ನೀಲಿ ಬಣ್ಣದ ಹೈಡ್ರೋಜನ್, ಹಸಿರು ಹೈಡ್ರೋಜನ್.
ಎಷ್ಟು ರೀತಿಯ ಎಲೆಕ್ಟ್ರಿಕ್ ವಾಹನಗಳಿವೆ ?
ಹೆಚ್ಇವಿ ( ಹೈಬ್ರಿಡ್ ಎಲೆಕ್ಟ್ರಿಕ್ ವಾಹನ ): ಈ ವಾಹನಗಳು ಇಂಧನದಿಂದ ಚಲಿಸುತ್ತದೆ. ಆದರೆ ವಾಹನದಿಂದ ಹೊರ ಹೋಗುವ ಹೊಗೆಯು ಬಹಳ ಕಡಿಮೆ ಇರುತ್ತದೆ. ಪೆಟ್ರೋಲ್ ಕಾರುಗಳಂತೆ ಹೆಚ್ಚು ಇಂಧನ ಬಳಸುವುದಿಲ್ಲ.
ಪಿಹೆಚ್ಇವಿ (ಪ್ಲಗ್-ಇನ್ ಹೈಬ್ರಿಡ್ ವಾಹನ ): ಈ ವಾಹನಗಳು ಬ್ಯಾಟರಿ ಮತ್ತು ಪೆಟ್ರೋಲ್ನಿಂದ ಚಲಿಸುತ್ತದೆ.
ಬಿಇವಿ ( ಬ್ಯಾಟರಿ ನಿಯಂತ್ರಿತ ಎಲೆಕ್ಟ್ರಿಕ್ ವಾಹನ ): ಈ ವಾಹನಗಳು ಸಂಪೂರ್ಣವಾಗಿ ಎಲೆಕ್ಟ್ರಿಕ್ ಆಗಿವೆ. ಬ್ಯಾಟರಿ ರಿಚಾರ್ಜ್ ಮೂಲಕ ಈ ವಾಹನಗಳು ಚಲಿಸುತ್ತವೆ. ಈ ವಾಹನಗಳಿಗೆ ಪೆಟ್ರೋಲ್ ಬಳಕೆ ಮಾಡುವುದಿಲ್ಲ.
ಎಫ್ಸಿಇವಿ (ಇಂಧನ ಕೋಶ ಎಲೆಕ್ಟ್ರಿಕ್ ವಾಹನ ): ಈ ವಾಹನಗಳು ಹೈಡ್ರೋಜನ್ ಮತ್ತು ಆಮ್ಲಜನಕದೊಂದಿಗೆ ಚಲಿಸುತ್ತದೆ. ಇದು ಸಂಪೂರ್ಣ ಎಲೆಕ್ಟ್ರಿಕ್ ಆಗಿದೆ. ಈ ವಾಹನಕ್ಕೆ ಇಂಧನ ಮರುತುಂಬಿಸಲಾಗುತ್ತದೆ, ರಿಚಾರ್ಜ್ ಮಾಡಲಾಗುವುದಿಲ್ಲ.
ಲಾಭಗಳು?
ವಾಯು ಮಾಲಿನ್ಯ ಸಮಸ್ಯೆ ನಿವಾರಣೆ ಆಗುತ್ತದೆ.
ಒಮ್ಮೆ ಚಾರ್ಜ್ ಮಾಡಿದರೆ ದೀರ್ಘ ಕಾಲದವರೆಗೆ ಚಲಿಸಬಹುದು.
ರೀಫಿಲ್ ಅನ್ನು ಕೇವಲ ಐದು ನಿಮಿಷದಲ್ಲಿ ಮಾಡಬಹುದು.
ಟೆಲ್ಸಾ ಕಾರು ಒಮ್ಮೆ ಚಾರ್ಜ್ ಮಾಡಿದರೆ 550 ಕಿ.ಮೀ. ಚಲಿಸಬಹುದು.
ನ್ಯೂನತೆಗಳು
ಇನ್ನು, ದೈತ್ಯ ಕಾರು ತಯಾರಕ ಕಂಪನಿಗಳಾದ ಜಪಾನ್ ಮೂಲದ ಹೋಂಡಾ, ಟೊಯೋಟಾ ಮತ್ತು ದಕ್ಷಿಣ ಕೊರಿಯಾ ದೇಶದ ಹುಂಡೈ ಕಾರುಗಳು 2020ರಲ್ಲಿ ಎಫ್ಸಿಎವಿ ಸಾಮರ್ಥ್ಯದ 25,000 ಕಾರುಗಳು ರಸ್ತೆಗಿಳಿದಿದ್ದವು.
ಸಂಪನ್ಮೂಲಗಳ ಕೊರತೆ: ಜಾಗತಿಕವಾಗಿ ಕೇವಲ 500 ಹೈಡ್ರೋಜನ್ ಕೇಂದ್ರಗಳಿವೆ.
ಸುರಕ್ಷತೆ: ಇದು ಸ್ಫೋಟಗೊಳ್ಳುವ ಅಪಾಯ ಇರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ