• ಹೋಂ
  • »
  • ನ್ಯೂಸ್
  • »
  • Explained
  • »
  • Explained: ಹಿಜಾಬ್, ಬುರ್ಖಾ, ನಿಕಾಬ್.. ಈ ಮೂರರಲ್ಲೂ ಇರೋ ವ್ಯತ್ಯಾಸವೇನು? ಯಾವ ದಿರಿಸು ಯಾವ ಸಂದರ್ಭದಲ್ಲಿ ತೊಡುತ್ತಾರೆ?

Explained: ಹಿಜಾಬ್, ಬುರ್ಖಾ, ನಿಕಾಬ್.. ಈ ಮೂರರಲ್ಲೂ ಇರೋ ವ್ಯತ್ಯಾಸವೇನು? ಯಾವ ದಿರಿಸು ಯಾವ ಸಂದರ್ಭದಲ್ಲಿ ತೊಡುತ್ತಾರೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hijab Controversy: ಈಗ ಹಿಜಬ್ ಧರಿಸುವುದಕ್ಕೆ ಕುರಿತಂತೆ ಕರ್ನಾಟಕದಲ್ಲಿ ವಿವಾದ ಎದ್ದಿದೆ. ಮೊದಲು ಉಡುಪಿಯಲ್ಲಿ ಕಾಣಿಸಿಕೊಂಡ ಈ ವಿವಾದವು ಕ್ರಮೇಣ ರಾಜ್ಯದ ಇತರೆ ಭಾಗಗಳಲ್ಲಿ ಕಂಡುಬರುತ್ತಿದ್ದು ಇದರಲ್ಲಿ ರಾಜಕೀಯವೂ ಸಹ ಬೆರೆಯುತ್ತಿರುವುದು ದುರದೃಷ್ಟದ ಸಂಗತಿ.

  • Trending Desk
  • 2-MIN READ
  • Last Updated :
  • Share this:

ಇತ್ತೀಚಿನ ಕೆಲ ದಿನಗಳಿಂದ ಕರ್ನಾಟಕವು (Karnataka) ಹಿಜಾಬ್ (Hijab) ವಿವಾದಕ್ಕೆ ಸಂಬಂಧಿಸಿದಂತೆ ಇಡೀ ದೇಶದ ಗಮನ ಸೆಳೆದಿದ್ದು ಗೊತ್ತಿರುವ ವಿಚಾರವೇ ಆಗಿದೆ. ಈ ಕುರಿತು ಈ ಮೊದಲು ಯಾವುದೇ ರೀತಿಯ ಸಂದಿಗ್ಧತೆಯಾಗಲಿ, ವಿವಾದವಾಗಲಿ ಇರಲಿಲ್ಲ. ಆದರೆ, ದುರದೃಷ್ಟವಶಾತ್ ಈಗ ಈ ರೀತಿಯ ವಿವಾದವು ತಲೆದೋರಿರುವುದು ಅದರಲ್ಲೂ ವಿಶೇಷವಾಗಿ ಕಲಿಯುವ ಮಕ್ಕಳು ಇದರಲ್ಲಿ ಭಾಗಿಯಾಗಿರುವುದು ಉತ್ತಮ ಬೆಳವಣಿಗೆಯಂತೂ ಖಂಡಿತ ಅಲ್ಲ.ಈ ಮುಂಚೆ ಉಡುಪಿಯ (Udupi) ಕಾಲೇಜೊಂದರಲ್ಲಿ ಹೆಣ್ಣು ಮಕ್ಕಳ  ಗುಂಪು ಹಿಜಾಬ್ ತೊಟ್ಟು ಕಾಲೇಜಿನೊಳಗೆ ಪ್ರವೇಶಿಸುತ್ತಿದ್ದಾಗ ಅವರು ಹಿಜಾಬ್ ಧರಿಸಿದ್ದನ್ನು ಒಪ್ಪದೆ ಅವರಿಗೆ ಪ್ರವೇಶಕ್ಕೆ  ನಿರಾಕರಿಸಿದ್ದಾಗಿನಿಂದ ಈ ಹಿಜಾಬ್ ವಿವಾದವು ನಿಧಾನವಾಗಿ ಮುನ್ನೆಲೆಗೆ ಬರಲು ಪ್ರಾರಂಭವಾಯಿತು.


ಸಾಮಾಜಿಕ ಮಾಧ್ಯಮಗಳಲ್ಲಂತೂ ಈ ಹಿಜಾಬ್ ವಿವಾದವು ಸಾಕಷ್ಟು ಬಿಸಿಬಿಸಿಯಾದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ವಿಪರ್ಯಾಸವೆಂದರೆ ಹಲವು ಜನರಿಗೆ ಇಸ್ಲಾಂ ಧರ್ಮದಲ್ಲಿ ಹೇಳಲಾಗಿರುವ ಹಿಜಾಬ್, ನಿಕಾಬ್, ಬುರ್ಖಾಗಳ ಮಧ್ಯೆಯಿರುವ ವ್ಯತ್ಯಾಸವೂ ತಿಳಿಯದೆ ತಮ್ಮ ನಾಲಿಗೆ ಹರಿಬಿಡುತ್ತಿದ್ದಾರೆ. ಅಷ್ಟಕ್ಕೂ ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ತೊಡಲು ಹಿಜಾಬ್, ನಿಕಾಬ್ ಹಾಗೂ ಬುರ್ಖಾ ಹೀಗೆ ಕೆಲ ವಿಶಿಷ್ಟ ಉಡುಗೆಗಳ ಕುರಿತು ತಿಳಿಸಲಾಗಿದ್ದು ಅವುಗಳ ಕುರಿತು ಈ ಲೇಖನದ ಮೂಲಕ ಕೆಲ ವಿವರಗಳನ್ನು ತಿಳಿದುಕೊಳ್ಳಿ.


ಹಿಜಾಬ್: ಇಸ್ಲಾಂ ಧರ್ಮದಲ್ಲಿ ಮಹಿಳೆಯರು ತೊಡುವ ಹಿಜಾಬ್ ಎಂಬುದು ಒಂದು ವಸ್ತ್ರವಾಗಿದ್ದು ಇದನ್ನು ಧರಿಸುವ ಮೂಲಕ ಮುಸ್ಲಿಂ ಮಹಿಳೆಯರು ತಮ್ಮ ತಲೆಗೂದಲು ಹಾಗೂ ಕುತ್ತಿಗೆ ಭಾಗ ಕಾಣದಂತೆ ಮುಚ್ಚಿಕೊಳ್ಳುತ್ತಾರೆ. ಆದರೆ ಮುಖವನ್ನು ಇದರಿಂದ ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಇದೊಂದು ತಲೆಯ ಸ್ಕಾರ್ಫ್ ಆಗಿದ್ದು ಹಲವು ಬಣ್ಣ ಹಾಗೂ ಶೈಲಿಯಲ್ಲಿ ದೊರೆಯುತ್ತದೆ.


ಇದನ್ನೂ ಓದಿ: ವಿಜಯಪುರ ಜಿಲ್ಲೆಗೆ ವ್ಯಾಪಿಸಿದ ಹಿಜಾಬ್ ವಿವಾದ; ಕೇಸರಿ ಶಾಲು ಧರಿಸಿ ಬಂದ ವಿದ್ಯಾರ್ಥಿಗಳು


ನಿಖಾಬ್ : ತಲೆಯ ಸ್ಕಾರ್ಫ್ ನ ಜೊತೆ ಇದನ್ನು ಧರಿಸಲಾಗುತ್ತದೆ. ಇದೊಂದು ಮುಖದ ಪರದೆಯಾಗಿದ್ದು ಇದನ್ನು ಮುಖವನ್ನು ಮುಚ್ಚಿಕೊಳ್ಳಲು ಬಳಸಲಾಗುತ್ತದೆ. ಇದನ್ನು ಧರಿಸಿದಾಗ ಕಣ್ಣುಗಳು ಮಾತ್ರವೇ ಕಾಣಿಸುತ್ತದೆ ಹಾಗೂ ಮಿಕ್ಕ ಭಾಗವೆಲ್ಲ ನಿಖಾಬ್‌ನಿಂದ ಮುಚ್ಚಿಕೊಳ್ಳಲಾಗಿರುತ್ತದೆ.


ಬುರ್ಖಾ: ಕೇವಲ ಕಣ್ಣುಗಳು ಮಾತ್ರವೇ ಗೋಚರಿಸುವಂತಿದ್ದು ಮಿಕ್ಕ ಸಂಪೂರ್ಣ ಶರೀರವನ್ನೇ ಮುಚ್ಚಿಕೊಳ್ಳುವ ಉಡುಗೆ ಇದಾಗಿದೆ. ಬುರ್ಖಾ ಏಕ ವಸ್ತ್ರವಾಗಿರಬಹುದು ಇಲ್ಲವೆ ತಲೆ ಭಾಗ ಆವರಿಸುವ ಒಂದು ಭಾಗ ಹಾಗೂ ದೇಹ ಭಾಗವನ್ನಾವರಿಸುವ ಇನ್ನೊಂದು ಭಾಗದಲ್ಲಿ ಎರಡು ಪ್ರತ್ಯೇಕವಾದ ವಸ್ತ್ರಗಳಿರಬಹುದು.


ಚಾದರ್ : ಸಂಪೂರ್ಣ ದೇಹವನ್ನೇ ಮುಚ್ಚಿರುವಂತೆ ಅನುಕೂಲವಾದ ವಸ್ತ್ರ ಇದಾಗಿದೆ. ಸಾಮಾನ್ಯವಾಗಿ ಇರಾನಿ ಮಹಿಳೆಯರು ಇದನ್ನು ತೊಡುತ್ತಾರೆ. ತಲೆಯ ಸ್ಕಾರ್ಫ್ ತೊಟ್ಟು ನಂತರ ಇದನ್ನು ಧರಿಸುವ ಅಭ್ಯಾಸ ಚಾಲ್ತಿಯಲ್ಲಿದೆ.


ಅಲ್-ಅಮಿರಾ : ಇದು ಎರಡು ಭಾಗಗಳನ್ನು ಹೊಂದಿದೆ. ಒಂದು ಕ್ಯಾಪ್ ಆಗಿದ್ದರೆ ಇನ್ನೊಂದು ಕೊಳವೆ ರೀತಿಯ ಸ್ಕಾರ್ಫ್ ಆಗಿರುತ್ತದೆ.


ಖೀಮರ್ : ಇದೂ ಸಹ ಒಂದು ರೀತಿಯ ಸ್ಕಾರ್ಫ್ ಆಗಿದೆ. ಆದರೆ ಇದು ಉಳಿದ ಸ್ಕಾರ್ಫ್‌ಗಿಂತಲೂ ಉದ್ದವಾಗಿದ್ದು , ಇದನ್ನು ಧರಿಸಿದಾಗ ಸೋಂಟ ಭಾಗದವರೆಗೆ ಆವರಿಸಿಕೊಳ್ಳುತ್ತದೆ. ಈ ಸ್ಕಾರ್ಫ್ ಧರಿಸಿ ಮುಖವೊಂದನ್ನು ಹೊರತುಪಡಿಸಿ ತಲೆ, ಕುತ್ತಿಗೆ, ತೋಳುಗಳ ಭಾಗವನ್ನು ಮುಚ್ಚುತ್ತದೆ.


ಶಾಯ್ಲಾ: ಆಯತಾಕಾರದ ಈ ಒಂದು ಬಟ್ಟೆಯ ತುಣಕನ್ನು ತಲೆಯ ಮೇಲೆ ಹೊದಿಸಿಕೊಂಡು ಒಂದೆಡೆ ಪಿನ್ ಮಾಡಲಾಗಿರುತ್ತದೆ.


ಇವು ಸದ್ಯ ಪ್ರಚಲಿತದಲ್ಲಿರುವ ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಧರಿಸಲು ಹೇಳಲಾಗಿರುವ ಕೆಲ ವಸ್ತ್ರಗಳ ಪ್ರಕಾರಗಳು. ಪ್ರಸ್ತುತ, ಇವುಗಳಲ್ಲಿ ಈಗ ಹಿಜಬ್ ಧರಿಸುವುದಕ್ಕೆ ಕುರಿತಂತೆ ಕರ್ನಾಟಕದಲ್ಲಿ ವಿವಾದ ಎದ್ದಿದೆ. ಮೊದಲು ಉಡುಪಿಯಲ್ಲಿ ಕಾಣಿಸಿಕೊಂಡ ಈ ವಿವಾದವು ಕ್ರಮೇಣ ರಾಜ್ಯದ ಇತರೆ ಭಾಗಗಳಲ್ಲಿ ಕಂಡುಬರುತ್ತಿದ್ದು ಇದರಲ್ಲಿ ರಾಜಕೀಯವೂ ಸಹ ಬೆರೆಯುತ್ತಿರುವುದು ದುರದೃಷ್ಟದ ಸಂಗತಿ.


ಅಷ್ಟಕ್ಕೂ, ಈ ಹಿಂದೆ ಕೇರಳದಲ್ಲೂ ಸಹ ಈ ರೀತಿಯ ಒಂದು ವಿವಾದ ಉಂಟಾಗಿತ್ತು. ಸ್ಟೂಡೆಂಟ್‌ ಪೊಲೀಸ್ ಕ್ಯಾಡೆಟ್ ಪ್ರಾಜೆಕ್ಟ್‌ವೊಂದರಲ್ಲಿ ಭಾಗವಹಿಸಿದ್ದ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ತನ್ನ ಧರ್ಮಕ್ಕನುಸಾರವಾದ ಹಿಜಾಬ್ ಹಾಗೂ ಫುಲ್ ಸ್ಲೀವ್ ಇರುವ ಬಟ್ಟೆಯನ್ನು ತೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಲು ತನಗೆ ಅನುಮತಿ ನೀಡುವಂತೆ ಕೇಳಿ ನ್ಯಾಯಾಲಯದ ಮೊರೆ ಹೋಗಿದ್ದಳು.


ಇದನ್ನೂ ಓದಿ: ಒನಕೆ ಓಬವ್ವ'ನಂತೆ ಆಗ್ತಾರೆ ಹೆಣ್ಮಕ್ಕಳು, ಸರ್ಕಾರದಿಂದ ವಿದ್ಯಾರ್ಥಿನಿಯರಿಗೆ ಟ್ರೇನಿಂಗ್

top videos


    ಅವಳ ಅರ್ಜಿಯನ್ನು ವಜಾ ಮಾಡಿದ್ದ ಕೋರ್ಟ್, ರಾಜ್ಯದ ಆರಕ್ಷಣ ಸಂಬಂಧಿ ಕಾರ್ಯಕ್ರಮದಲ್ಲಿ ಈ ರೀತಿಯ ಅವಕಾಶ ನೀಡುವುದರಿಂದ ಜಾತ್ಯಾತೀತತೆಯನ್ನು ಮೀರಿ ನಡೆದಂತಾಗುತ್ತದೆ ಎಂದು ನ್ಯಾಯಾಲಯ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು