Explained: ‘ಬೆಳಕಿನಿಂದ ಕತ್ತಲೆಯೆಡೆಗೆ’ ಭಾರತ! ಕಲ್ಲಿದ್ದಲು ಕೊರತೆಗೆ ಕಾರಣ, ಅದರ ಪರಿಣಾಮವೇನು?

ಬೇಸಿಗೆಯಲ್ಲಿ ವಿದ್ಯುತ್ ಕಡಿತ ಸಾಮಾನ್ಯ, ಬಹುಶಃ ಇತ್ತೀಚಿಗೆ ಪ್ರತಿ ದಿನ ಅನಿಯಮಿತವಾಗಿ ಪವರ್ ಕಟ್ ಮಾಡೋದನ್ನು ನೀವು ಗಮನಿಸಿಯೇ ಇರುತ್ತೀರಿ. ಇದು ಪ್ರಾರಂಭ ಅಷ್ಟೇ, ಹೀಗೆ ಮುಂದುವರೆದರೆ ಕತ್ತಲಲ್ಲಿ ಇರಬೇಕಾದ ದಿನ ದೂರವಿಲ್ಲ ಅಂತಿವೆ ವರದಿಗಳು. ಯಾಕೆಂದ್ರೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಕಂಡು ಬಂದಿದೆ. ಹಾಗಿದ್ರೆ ಇದಕ್ಕೆ ಕಾರಣ ಏನು? ಇದರ ಪರಿಣಾಮಗಳೇನು? ಇಲ್ಲಿದೆ ಮಾಹಿತಿ...

ಕಲ್ಲಿದ್ದಲು ಸಂಗ್ರಹ ಚಿತ್ರ

ಕಲ್ಲಿದ್ದಲು ಸಂಗ್ರಹ ಚಿತ್ರ

  • Share this:
ಬಿಸಿಲ ಬೇಗೆ ಏರುತ್ತಿದೆ. ಮನೆ ಒಳಗಿದ್ದರೂ ಸೆಖೆ, ಮನೆ ಹೊರಗಿದ್ದರೂ ಸೆಖೆ. ಫ್ಯಾನ್‌ (Fan) ಹಾಕಿ ಆರಾಮ್‌ ತೆಗೆದುಕೊಳ್ಳೋಣ, ಎಸಿಯಲ್ಲಿ (AC) ತಣ್ಣಗೆ ಕೂರೋಣ, ಕೂಲರ್ (Cooler) ಹಾಕಿಕೊಂಡು ಕೂಲ್ (Cool) ಆಗಿರೋಣ ಅಂತ ಯೋಚಿಸ್ತಾ ಇದ್ದೀರಾ? ನೋ ವೇ, ಚಾನ್ಸೇ ಇಲ್ಲ.. ಯಾಕೆಂದ್ರೆ ನಿಮ್ ಮನೆಯಲ್ಲಿ ಪವರೇ (Power) ಇರೋದಿಲ್ಲ! ನೀವು ಪವರ್ ಬಿಲ್ (Power Bill) ಕರೆಕ್ಟ್ ಆಗಿ ಕಟ್ಟಿದ್ರೂ, ವಿದ್ಯುತ್ (Electricity) ಅನ್ನು ಮಿತವಾಗಿ ಬಳಸಿದ್ರೂ ನಿಮ್ಮ ಮನೆಯಲ್ಲಿ ಕರೆಂಟ್ ಬರೋದಿಲ್ಲ. ಅತ್ತ ರೈತರು ಜಮೀನಿಗೆ ನೀರು (Water) ಹರಿಸೋಣ ಅಂತ ಪಂಪ್ (Pump) ಆನ್ ಮಾಡಿದ್ರೆ ಓಡೋದೇ ಇಲ್ಲ, ಕೈಗಾರಿಕೆಗಳು ಸ್ಟಾರ್ಟ್ ಆಗೋದೇ ಇಲ್ಲ.. ಇದಕ್ಕೆಲ್ಲ ಕಾರಣ ಒಂದೇ ಪವರ್ ಕಟ್! ಈ ಪವರ್‌ ಕಟ್‌ಗೆ ಕಾರಣ ಕಲ್ಲಿದ್ದಲ (Coal) ಕೊರತೆ. ಹಾಗಿದ್ರೆ ಏನಿದು ಕಲ್ಲಿದ್ದಲು ಕೊರತೆ? ಇದಕ್ಕೆ ಕಾರಣವೇನು? ಇದರ ಪರಿಣಾಮಗಳೇನು? ಈ ಬಗ್ಗೆ ಇಲ್ಲಿದೆ ಮಾಹಿತಿ…

 ಕತ್ತಲಲ್ಲೇ ಇರಬೇಕಾಗುತ್ತದೆಯೇ ಭಾರತ?

ಬೇಸಿಗೆಯಲ್ಲಿ ವಿದ್ಯುತ್ ಕಡಿತ ಸಾಮಾನ್ಯ, ಬಹುಶಃ ಇತ್ತೀಚಿಗೆ ಪ್ರತಿ ದಿನ ಅನಿಯಮಿತವಾಗಿ ಪವರ್ ಕಟ್ ಮಾಡೋದನ್ನು ನೀವು ಗಮನಿಸಿಯೇ ಇರುತ್ತೀರಿ. ಇದು ಪ್ರಾರಂಭ ಅಷ್ಟೇ, ಹೀಗೆ ಮುಂದುವರೆದರೆ ಕತ್ತಲಲ್ಲಿ ಇರಬೇಕಾದ ದಿನ ದೂರವಿಲ್ಲ ಅಂತಿವೆ ವರದಿಗಳು. ಯಾಕೆಂದ್ರೆ ದೇಶದಲ್ಲಿ ಕಲ್ಲಿದ್ದಲು ಕೊರತೆ ಕಂಡು ಬಂದಿದೆ.

ನೀರಿನಂತೆ ಕಲ್ಲಿದ್ದಲೂ ಕೂಡ ವಿದ್ಯುತ್ ಉತ್ಪಾದನೆಯ ಪ್ರಮುಖ ಆಧಾರ. ಆದರೆ ದೇಶದಲ್ಲಿ ಕಲ್ಲಿದ್ದಲು ಕೊರತೆ ತೀವ್ರವಾಗಿದೆ ಎನ್ನಲಾಗುತ್ತಿದೆ. ಹೀಗಾಗಿ ಉಷ್ಣ ವಿದ್ಯುತ್ ಸ್ಥಾವರಗಳು ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿಲ್ಲ.

 100ಕ್ಕೂ ಹೆಚ್ಚು ಉಷ್ಣವಿದ್ಯುತ್ ಸ್ಥಾವರಗಳಲ್ಲಿ ಸಮಸ್ಯೆ

ವರದಿಯ ಪ್ರಕಾರ , ಭಾರತದಲ್ಲಿನ 100 ಕ್ಕೂ ಹೆಚ್ಚು ಉಷ್ಣ ವಿದ್ಯುತ್ ಸ್ಥಾವರಗಳಲ್ಲಿನ ಕಲ್ಲಿದ್ದಲು ದಾಸ್ತಾನು ಅಗತ್ಯವಿರುವ ಸ್ಟಾಕ್‌ನ 25% ಕ್ಕಿಂತ ಕಡಿಮೆಯಾಗಿದೆ. 50 ಕ್ಕೂ ಹೆಚ್ಚು ಶಾಖೋತ್ಪನ್ನ ಸ್ಥಾವರಗಳಲ್ಲಿ, ಸ್ಟಾಕ್ 10% ಕ್ಕಿಂತ ಕಡಿಮೆಯಾಗಿದೆ, ಇದು ಭಾರತದ ಏಕೈಕ ಕಲ್ಲಿದ್ದಲು ಉತ್ಪಾದಕ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ನಿಂದ ಹೆಚ್ಚುವರಿ ಕಲ್ಲಿದ್ದಲು ಪೂರೈಕೆಯನ್ನು ಪಡೆಯಲು ರಾಜ್ಯಗಳಿಗೆ ಕಾರಣವಾಗಿದೆ. ಭಾರತದ ವಿದ್ಯುತ್ ಬೇಡಿಕೆಯ 70% ಅನ್ನು ಉಷ್ಣ ವಿದ್ಯುತ್ ಸ್ಥಾವರಗಳು ಪೂರೈಸುತ್ತವೆ, ಇವುಗಳು ಕಲ್ಲಿದ್ದಲಿನಿಂದ ಚಾಲಿತವಾಗಿವೆ.

 ಇದನ್ನೂ ಓದಿ: Explained: ಎಲಾನ್‌ ಮಸ್ಕ್ ಬಲೆಗೆ ಬಿದ್ದಿದ್ದು ಹೇಗೆ ಟ್ವಿಟರ್? ಹೇಗಿರಲಿದೆ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಭವಿಷ್ಯ?

 ಕಲ್ಲಿದ್ದಲು ಕೊರತೆಗೆ ಕಾರಣಗಳೇನು?

ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯೇ ಕಲ್ಲಿದ್ದಲು ಕೊರತೆಗೆ ಬಹುದೊಡ್ಡ ಕಾರಣ. 2021 ರಲ್ಲಿ, ಬೇಡಿಕೆಯು 2019 ರಲ್ಲಿ ತಿಂಗಳಿಗೆ 106.6 BU ನಿಂದ ತಿಂಗಳಿಗೆ 124.2 BU ಗೆ ಏರಿತು. 2022 ರಲ್ಲಿ, ಬೇಡಿಕೆಯು 132 BU ಗೆ ಹೆಚ್ಚಿದೆ. 2021 ರ ಅಕ್ಟೋಬರ್‌ನಲ್ಲಿ, ಹಡಗು ವಿಳಂಬದಿಂದಾಗಿ ಭಾರತವು ಪ್ರಮುಖ ಕಲ್ಲಿದ್ದಲು ಬಿಕ್ಕಟ್ಟನ್ನು ಎದುರಿಸಿದಾಗ, ದಾಸ್ತಾನುಗಳು ಕೇವಲ ನಾಲ್ಕು ದಿನಗಳಿಗೆ ಇಳಿದವು, ಕೇಂದ್ರದ ಪ್ರಮುಖ ನಿರ್ವಹಣಾ ತಂಡವು (CMT) ಪೂರೈಕೆಯಲ್ಲಿನ ಕೊರತೆಯ ಕಾರಣಗಳನ್ನು ವಿಶ್ಲೇಷಿಸಿತು.

ಮಳೆಯಿಂದಾಗಿ ಹಲವೆಡೆ ಸಮಸ್ಯೆ

ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡಿನಂತಹ ಕಲ್ಲಿದ್ದಲು ಗಣಿಗಾರಿಕೆ ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಕಲ್ಲಿದ್ದಲು ಉತ್ಪಾದನೆಯು ಕಡಿಮೆಯಾಗಿದೆ. ಮಾನ್ಸೂನ್ ಋತುವಿನ ಮೊದಲು, ಹೆಚ್ಚಿನ ಶಾಖೋತ್ಪನ್ನ ಸ್ಥಾವರಗಳಲ್ಲಿ ಅಸಮರ್ಪಕ ಕಲ್ಲಿದ್ದಲು ಸ್ಟಾಕ್ ಸಂಗ್ರಹವಿತ್ತು, ಅವುಗಳನ್ನು ನಿರ್ಣಾಯಕ ಮಟ್ಟಕ್ಕಿಂತ ಕೆಳಕ್ಕೆ ತಳ್ಳಿತು. ಆಮದು ಮಾಡಿಕೊಂಡ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆಯಲ್ಲಿ 43.6% ಕಡಿತವಾಗಿದೆ ಎಂದು ಕೇಂದ್ರವು ಹೇಳಿದೆ, ಇದು 17.4 MT ದೇಶೀಯ ಕಲ್ಲಿದ್ದಲಿನ ಹೆಚ್ಚುವರಿ ಬೇಡಿಕೆಗೆ ಕಾರಣವಾಯಿತು, ಜೊತೆಗೆ ಕಲ್ಲಿದ್ದಲು ನಿಕ್ಷೇಪಗಳು ಮತ್ತಷ್ಟು ಖಾಲಿಯಾಗಿದೆ.

ಕಲ್ಲಿದ್ದಲು ಗಣಿಗಳು ಜಲಾವೃತ

ಛತ್ತೀಸಗಡ, ಜಾರ್ಖಂಡ್‌ನಲ್ಲಿನ ಬಹುತೇಕ ಕಲ್ಲಿದ್ದಲು ಗಣಿಗಳು ಜಲಾವೃತವಾಗಿ ಕಲ್ಲಿದ್ದಲ್ಲನ್ನು ತೆಗೆಯಲು ಸಾಧ್ಯವಾಗಿಲ್ಲ. ಮುಂಗಾರಿನ ಅವಧಿಯಲ್ಲಿ ಎಷ್ಟೋ ದಿನ ಕಲ್ಲಿದ್ದಲು ಗಣಿಗಳು ಕಾರ್ಯನಿರ್ವಹಿಸಿಲ್ಲ. ಆ ಅವಧಿಯಲ್ಲಿ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲನ್ನು ಪೂರೈಸಿಲ್ಲ. ಆದರೆ ಅದೇ ಅವಧಿಯಲ್ಲಿ ಸ್ಥಾವರಗಳು ತಮ್ಮಲ್ಲಿದ್ದ ಕಲ್ಲಿದ್ದಲಿನ ಸಂಗ್ರಹವನ್ನು ಬಳಕೆ ಮಾಡಿಕೊಂಡಿವೆ.

ಮತ್ತೆ ಶುರುವಾಗದ ಕಲ್ಲಿದ್ದಲು ಉತ್ಪಾದನೆ

ಸಂಗ್ರಹ ಮುಗಿಯುತ್ತಾ ಬಂದಿದೆ. ಆದರೆ ನಿರೀಕ್ಷಿತ ಅವಧಿಯಲ್ಲಿ ಕಲ್ಲಿದ್ದಲು ಗಣಿಗಳು ಕಾರ್ಯಾರಂಭ ಮಾಡದೇ ಇದ್ದ ಕಾರಣ ಕಲ್ಲಿದ್ದಲು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿರಲಿಲ್ಲ. ಹೀಗಾಗಿ ಸ್ಥಾವರಗಳಲ್ಲಿ ಕಲ್ಲಿದ್ದಲು ಕೊರತೆಯಾಗಿದೆ. ಈಗ ಗಣಿಗಳು ಕಾರ್ಯಾರಂಭ ಮಾಡಿದ್ದು, ಕಡಿಮೆ ಸಂಗ್ರಹವಿರುವ ಸ್ಥಾವರಗಳಿಗೆ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಸರ್ಕಾರವು ಹೇಳಿದೆ.

 ಆಮದು ಮಾಡಿಕೊಳ್ಳುವಲ್ಲಿ ಸಮಸ್ಯೆ

ಜಾಗತಿಕ ಮಟ್ಟದಲ್ಲಿ ಕಲ್ಲಿದ್ದಲಿನ ಸಮಸ್ಯೆ ಉಂಟಾಗಿದೆ. ಚೀನಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕದ ಕಲ್ಲಿದ್ದಲು ಗಣಿಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಹಲವು ದೇಶಗಳಿಗೆ ಕಲ್ಲಿದ್ದಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಭಾರತವೂ ಕಲ್ಲಿದ್ದಲನ್ನು ಹಲವು ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಕಲ್ಲಿದ್ದಲಿನ ಕೊರತೆ ಇರುವ ಕಾರಣ, ಭಾರತಕ್ಕೂ ಕಲ್ಲಿದ್ದಲು ಆಮದು ಆಗುವಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ದೇಶದ ಕಲ್ಲಿದ್ದಲಿನ ಗಣಿಗಳ ಮೇಲೆ ಒತ್ತಡ ಹೆಚ್ಚಾಗಿದೆ.

ವಿದ್ಯುತ್‌ಗೆ ಅತಿಯಾದ ಬೇಡಿಕೆ

ಕೋವಿಡ್‌ನ ಎರಡನೇ ಲಾಕ್‌ಡೌನ್‌ ತೆರವಾದ ನಂತರ ದೇಶದ ಎಲ್ಲೆಡೆ ಆರ್ಥಿಕ ಚಟುವಟಿಕೆ ಪುನರಾರಂಭವಾಗಿದೆ. ಕೈಗಾರಿಕೆಗಳು, ವಿದ್ಯುತ್ ಹೆಚ್ಚು ಬಳಸುವ ಸೇವಾ ಕ್ಷೇತ್ರಗಳು ಕೆಲಸ ಶುರು ಮಾಡಿವೆ. ಹೀಗಾಗಿ ದೇಶದಲ್ಲಿ ಈ ಹಿಂದಿಗಿಂತ ವಿದ್ಯುತ್‌ಗೆ ಹೆಚ್ಚು ಬೇಡಿಕೆ ಇದೆ. ಆ ಬೇಡಿಕೆಯನ್ನು ಪೂರೈಸಲು, ಉಷ್ಣ ವಿದ್ಯುತ್ ಸ್ಥಾವರಗಳು ತಮ್ಮಲ್ಲಿದ್ದ ಕಲ್ಲಿದ್ದಲಿನ ಸಂಗ್ರಹವನ್ನು ಬಳಕೆ ಮಾಡಿಕೊಂಡಿವೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ವಿದ್ಯುತ್‌ಗೆ ಬೇಡಿಕೆ ಹೆಚ್ಚುತ್ತದೆ. ಈ ಬಾರಿ ಮುಂಗಾರಿನ ಅವಧಿ ದೀರ್ಘವಾಗಿದ್ದ ಕಾರಣ ಹೆಚ್ಚು ವಿದ್ಯುತ್ ಬಳಕೆ ಮಾಡಲಾಗಿದೆ. ಹೆಚ್ಚುವರಿ ವಿದ್ಯುತ್ ಉತ್ಪಾದಿಸಲು ಸಂಗ್ರಹದಲ್ಲಿದ್ದ ಕಲ್ಲಿದ್ದಲನ್ನು ಬಳಸಲಾಗಿದೆ. ಕಲ್ಲಿದ್ದಲಿನ ಸಂಗ್ರಹ ಕಡಿಮೆಯಾಗಲು ಅಥವಾ ಮುಗಿಯಲೂ ಇದೂ ಒಂದು ಪ್ರಮುಖ ಕಾರಣ ಎಂದು ಸರ್ಕಾರ ಹೇಳಿದೆ.

ಕಲ್ಲಿದ್ದಲು ಕೊರತೆಯ ಪರಿಣಾಮಗಳೇನು?

ವಿದ್ಯುತ್ ಕೊರತೆಯಿಂದ ರಾಜ್ಯ ಸರ್ಕಾರ ದುಬಾರಿ ಬೆಲೆಗೆ ವಿದ್ಯುತ್ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಆಂಧ್ರಪ್ರದೇಶ ಅ.13 ರಂದು 2,102 ಮೆಗಾ ವ್ಯಾಟ್ ನ ಪೀಕ್ ಅವರ್ (a peak hour) ಬ್ಲಾಕ್ ನ್ನು 15 ನಿಮಿಷಗಳವರೆಗೆ ಅಂದರೆ ಸಂಜೆ 6.30 ರಿಂದ 6:45 ವರೆಗೆ ಪ್ರತಿ ಯುನಿಟ್ ಗೆ 20 ರೂಪಾಯಿ ನೀಡಿ ಖರೀದಿಸಿತ್ತು. ಇದೇ ಮೊತ್ತಕ್ಕೆ ಮತ್ತೊಮ್ಮೆ ಸಂಜೆ 7:00 ರಿಂದ 7:15 ವರೆಗೆ ಖರೀದಿಸಿತ್ತು.

ಇದಕ್ಕೂ ಮುನ್ನ ಮಂಗಳವಾರದಂದು 2,000 ಮೆಗಾ ವ್ಯಾಟ್ ನ್ನು ಎರಡು ಬಾರಿ ತಲಾ 15 ನಿಮಿಷಗಳಂತೆ ರೂಪಾಯಿ 20 ಕ್ಕೆ ಖರೀದಿಸಿತ್ತು. ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳಿಂದ ಹಾಗೂ ವಿನಿಮಯಗಳಿಂದ ಪ್ರತಿ ದಿನ ಆಂಧ್ರಪ್ರದೇಶ 28-40 ಮಿಲಿಯನ್ ಯುನಿಟ್ ಗಳಷ್ಟು ವಿದ್ಯುತ್ ನ್ನು ಸರಾಸರಿ ಖರೀದಿಸುತ್ತದೆ.

ಯೂನಿಟ್‌ಗೆ 20 ರೂಪಾಯಿಗಳಂತೆ ವಿದ್ಯುತ್ ಖರೀದಿ

ಕೇರಳ ಸಹ ರಿಯಲ್ ಟೈಮ್ ಖರೀದಿಯ ಮೊರೆ ಹೋಗಿದ್ದು ಪ್ರತಿ ದಿನ ವಿನಿಮಯದಿಂದ 0.4-1.10 ಮಿಲಿಯನ್ ಯುನಿಟ್ ಗಳಷ್ಟನ್ನು ಪ್ರತಿ ಯುನಿಟ್ ಗೆ 20 ರೂಪಾಯಿಗಳಂತೆ ಖರೀದಿಸುತ್ತಿದೆ. ರಾಜಸ್ಥಾನ 4 ಕೋಟಿ ಯುನಿಟ್ ಗಳಷ್ಟು ವಿದ್ಯುತ್ ನ್ನು ಪ್ರತಿ ದಿನ ಪ್ರತಿ ಯುನಿಟ್ ಗೆ 15-20 ರೂಪಾಯಿಗಳವರೆಗೆ ನೀಡಿ ಖರೀದಿಸುತ್ತಿದೆ. ಇದರಿಂದ ದಿನವೊಂದಕ್ಕೆ 80 ಕೋಟಿ ರೂಪಾಯಿ ಖರ್ಚಾಗುತ್ತಿದೆ. ಸಾಮಾನ್ಯದ ದಿನಗಳಲ್ಲಿ ಯುನಿಟ್ ಗೆ 3-4 ರೂಪಾಯಿ ಖರ್ಚಾಗುತ್ತದೆ.

ವಿದ್ಯುತ್ ಖರೀದಿಗೆ 282 ಕೋಟಿ ತೆತ್ತ ಪಂಜಾಬ್!

ಇನ್ನು ಬಿಹಾರ ಸಿಎಂ ಹಬ್ಬದ ದಿನಗಳಲ್ಲಿ ನಿರಂತರ ಕರೆಂಟ್ ನ್ನು ನೀಡುವುದಾಗಿ ಘೋಷಿಸಿದ್ದು, ಕೊರತೆಯನ್ನು ನೀಗಿಸುವುದಕ್ಕೆ ಪ್ರತಿ ಯುನಿಟ್ ಗೆ 20 ರೂಪಾಯಿಗಳಂತೆ 1,200 ಮೆಗಾವ್ಯಾಟ್ ವಿದ್ಯುತ್ ನ್ನು ಖರೀದಿಸುತ್ತಿದೆ. ಕಳೆದ 13 ದಿನಗಳಿಂದ ಪಂಜಾಬ್ ಸರ್ಕಾರ 282 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ವಿದ್ಯುತ್ ಖರೀದಿಸುತ್ತಿದೆ.

ಜನ ಸಾಮಾನ್ಯರ ಮೇಲೆ ದರ ಹೆಚ್ಚಳದ ಬರೆ

ಕಲ್ಲಿದ್ದಲನ್ನು ಭಾರಿ ದರ ನೀಡಿ ಕೊಳ್ಳುತ್ತಿರುವ ಕಾರಣ ಮುಂದಿನ ದಿನಗಳಲ್ಲಿ ಉಕ್ಕು ಉತ್ಪನ್ನದ ದರ ಹೆಚ್ಚಳವಾಗಬಹುದು ಎಂದು ಈ ಹಿಂದೆಯೇ ಜಿಂದಾಲ್‌ ಸ್ಟೀಲ್‌ ಆ್ಯಂಡ್‌ ಪವರ್‌ ಸಂಸ್ಥೆ ಹೇಳಿತ್ತು. ಕಲ್ಲಿದ್ದಲು, ವಿದ್ಯುತ್‌ ಅಭಾವದಿಂದ ಪೆಟ್ರೋಲಿಯಂ, ಅಲ್ಯುಮಿನಿಯಂ, ಸಿಮೆಂಟ್‌, ಸಕ್ಕರೆ ಸೇರಿ ಇತರ ವಸ್ತುಗಳ ಬೆಲೆಗಳೂ ಹೆಚ್ಚಳವಾಗಬಹುದು. ರೆಫ್ರಿಜಿರೇಟರ್‌ ಮೇಲೆ ಅವಲಂಬಿತವಾಗಿರುವ ಆಹಾರ ತಯಾರಿಕೆ ಮತ್ತು ಸಂಸ್ಕರಣಾ ಕ್ಷೇತ್ರಕ್ಕೂ ಹೆಚ್ಚಿನ ತೊಂದರೆ ಆಗಲಿದೆ.

ಆರ್ಥಿಕ ಚಟುವಟಿಕೆ ಕುಸಿಯುವ ಭೀತಿ

ಕಲ್ಲಿದ್ದಲಿನ ಕೊರತೆ ಕಾರಣ ವಿದ್ಯುತ್‌ ಉತ್ಪಾದನೆಯಲ್ಲಿ ಕಡಿತವಾಗಿದೆ. ಕೋವಿಡ್‌ ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟ ಎದುರಿಸಿದ್ದ ಉದ್ಯಮಗಳು ಈಗ ಚೇತರಿಕೆಯ ಹಾದಿಯಲ್ಲಿವೆ. ಸರ್ಕಾರ ನೀಡಿರುವ ಮಾಹಿತಿ ಪ್ರಕಾರ 2021ರ ಆಗಸ್ಟ್‌ನಲ್ಲಿದ್ದ ವಿದ್ಯುತ್‌ ಬೇಡಿಕೆಯು 2019ರ ಆಗಸ್ಟ್‌ನ ವಿದ್ಯುತ್ ಬೇಡಿಕೆಗಿಂತ ಶೇ 17ರಷ್ಟು ಜಾಸ್ತಿ ಇದೆ. ಇಂಥ ಸಮಯದಲ್ಲಿ ಉದ್ಯಮಗಳಿಗೆ ವಿದ್ಯುತ್‌ ಕೊರತೆ ಕಾಡಿದರೆ ದೇಶದಲ್ಲಿ ಆರ್ಥಿಕ ಚೇತರಿಕೆಗೆ ಮತ್ತೆ ಹೊಡೆತ ಬೀಳಬಹುದು ಎಂದು ಅಂದಾಜಿಸಲಾಗಿದೆ.

ಹಬ್ಬಗಳಲ್ಲಿ ವಿದ್ಯುತ್ ಕೊರತೆ ಸಾಧ್ಯತೆ

ಅಕ್ಟೋಬರ್‌ ಎರಡನೇ ವಾರದಿಂದ ದೇಶದಲ್ಲಿ ಸಾಲುಸಾಲು ಹಬ್ಬಗಳು ಶುರುವಾಗುವುದರಿಂದ ಹಲವಾರು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳೂ  ಉತ್ಪಾದನೆ ಹೆಚ್ಚಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿವೆ. ವಿದ್ಯುತ್‌ ವ್ಯತ್ಯಯ ಉಂಟಾದರೆ ಈ ಉದ್ದಿಮೆಗಳು ಚೇತರಿಸಿಕೊಳ್ಳಲು ಸಿಕ್ಕಿದ್ದ ಉತ್ತಮ ಅವಕಾಶ ಕೈತಪ್ಪಿದಂತಾಗುತ್ತದೆ.

ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು?

ಬೆಳೆಯುತ್ತಿರುವ ದೇಶೀಯ ಬೇಡಿಕೆಯನ್ನು ಪೂರೈಸಲು 25% ವರೆಗೆ ತನ್ನ ಕಲ್ಲಿದ್ದಲು ನಿಕ್ಷೇಪಗಳನ್ನು ಬಳಸಲು ಕೇಂದ್ರವು ರಾಜ್ಯಗಳಿಗೆ ಅವಕಾಶ ನೀಡಿದೆ. CIL ಮೇಲಿನ ಹೊರೆಯನ್ನು ಕಡಿಮೆ ಮಾಡಲು ಉತ್ಪಾದನಾ ಕಂಪನಿಗಳಿಗೆ ಆಮದು ಮಾಡಿಕೊಂಡ ಕಲ್ಲಿದ್ದಲನ್ನು 10% ವರೆಗೆ ಮಿಶ್ರಣ ಮಾಡಲು ಇದು ಅವಕಾಶ ಮಾಡಿಕೊಟ್ಟಿದೆ. ಆಮದು ಮಾಡಿಕೊಂಡ ಕಲ್ಲಿದ್ದಲು ದಾಸ್ತಾನು ಹೆಚ್ಚಿಸಲು ಕೇಂದ್ರವು ಚಿಂತನೆ ನಡೆಸುತ್ತಿರುವಾಗ, ಹೆಚ್ಚಿನ ಕಲ್ಲಿದ್ದಲು ವೆಚ್ಚವು ಕಷ್ಟಕರವಾಗಿದೆ.

ಇದನ್ನೂ ಓದಿ: Explained: ಬಜ್ಜಿ, ಬೋಂಡಾ ಇನ್ನು ನೆನಪು ಮಾತ್ರ! ಏ.28ರಿಂದಲೇ ಮತ್ತಷ್ಟು 'ಬಿಸಿ'ಯಾಗಲಿದೆ ಅಡುಗೆ ಎಣ್ಣೆ! ಇದಕ್ಕೆ ಕಾರಣವೇನು?

ಕಾನೂನು ಆದಾಯದ ಹಂಚಿಕೆಯಲ್ಲಿ ರಿಯಾಯಿತಿಯೊಂದಿಗೆ ಆರಂಭಿಕ ಕಲ್ಲಿದ್ದಲು ಉತ್ಪಾದನೆಯನ್ನು ಉತ್ತೇಜಿಸಿತು ಮತ್ತು CIL ನ ಕಾರ್ಯಾಚರಣೆಗಳನ್ನು ವೈವಿಧ್ಯಗೊಳಿಸಲು 50,000 ಕೋಟಿ ರೂಪಾಯಿಗಳ ಹೂಡಿಕೆಯನ್ನು ಭರವಸೆ ನೀಡಿತು.

ಆದಾಗ್ಯೂ, ಈ ಕಾನೂನು ರಾಜ್ಯಗಳಿಂದ ತೀವ್ರ ವಿರೋಧವನ್ನು ಎದುರಿಸಿದೆ - ವಿಶೇಷವಾಗಿ ಜಾರ್ಖಂಡ್, ಬಿಹಾರದಂತಹ ಖನಿಜ-ಸಮೃದ್ಧ ರಾಜ್ಯಗಳು - ಇದು ದೊಡ್ಡ ಬುಡಕಟ್ಟು ಜನಸಂಖ್ಯೆ ಮತ್ತು ಅರಣ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಉಲ್ಲೇಖಿಸುತ್ತದೆ. ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ.
Published by:Annappa Achari
First published: