• Home
  • »
  • News
  • »
  • explained
  • »
  • Explained: ತಮಿಳುನಾಡಿನ ಡುಗಾಂಗ್‌ ಅಂದ್ರೆ ಏನು? ಈ ನಾಡು ಸಂರಕ್ಷಣಾ ಪ್ರದೇಶವನ್ನಾಗಿ ಸ್ಥಾಪಿಸಲು ಕಾರಣವೇನು?

Explained: ತಮಿಳುನಾಡಿನ ಡುಗಾಂಗ್‌ ಅಂದ್ರೆ ಏನು? ಈ ನಾಡು ಸಂರಕ್ಷಣಾ ಪ್ರದೇಶವನ್ನಾಗಿ ಸ್ಥಾಪಿಸಲು ಕಾರಣವೇನು?

ಡುಗಾಂಗ್‌

ಡುಗಾಂಗ್‌

ಭಾರತವು ಡುಗಾಂಗ್‌ ಪ್ರಾಣಿಗಳನ್ನು ಸಂರಕ್ಷಿಸಬೇಕೆಂದು ದೇಶದಲ್ಲಿಯೇ ಪ್ರಥಮ 'ಡುಗಾಂಗ್ ಕನ್ಸರ್ವೇಶನ್ ರಿಸರ್ವ್' ಅನ್ನು ತಮಿಳುನಾಡಿನಲ್ಲಿ ಆರಂಭಿಸುತ್ತಿದೆ. ಭಾರತವು ಆಗಾಗ ಅಳಿವಿನಂಚಿಲ್ಲಿರುವ ಪ್ರಾಣಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಲೇ ಬಂದಿದೆ. ಈ ಹಿಂದೆ ಅಳಿವಿನಂಚಿನಲ್ಲಿರುವ ಚಿರತೆಗಳನ್ನು ಮರುಪರಿಚಯಿಸಿದ ನಂತರ, ಈಗ ಸಮುದ್ರ ಹಸು ಅಥವಾ ಕಡಲ ಹಸು ಎಂದೂ ಕರೆಯಲಾಗುವ ಅತಿದೊಡ್ಡ ಸಸ್ಯಾಹಾರಿ ಸಮುದ್ರ ಸಸ್ತನಿ ಡುಗಾಂಗ್ ಅನ್ನು ಸಂರಕ್ಷಿಸುವ ಪಣ ತೊಟ್ಟಿದೆ.

ಮುಂದೆ ಓದಿ ...
  • Share this:

ಡುಗಾಂಗ್‌ಗಳು (Dugong) ಅಥವಾ ಕಡಲ ಹಸು ಎಂದು ಕರೆಯುವ ಇದು ಅತಿ ದೊಡ್ಡ ಸಸ್ಯಾಹಾರಿ ಸಮುದ್ರದ ಸಸ್ತನಿಗಳಾಗಿವೆ. ಇದು ಕಡಲ ಹುಲ್ಲಿನ ಮೇಲೆ ತನ್ನ ಜೀವನವನ್ನು ನಡೆಸುತ್ತದೆ. ಈಗ ಇವುಗಳ ಸಂಖ್ಯೆ ಇಳಿಮುಖದತ್ತ ಸಾಗುತ್ತಿದೆ. ಆದ್ದರಿಂದ ಭಾರತವು ಈ ಪ್ರಾಣಿಗಳನ್ನು (Animals) ಸಂರಕ್ಷಿಸಬೇಕೆಂದು ದೇಶದಲ್ಲಿಯೇ ಪ್ರಥಮ 'ಡುಗಾಂಗ್ ಕನ್ಸರ್ವೇಶನ್ ರಿಸರ್ವ್' ಅನ್ನು (Dugong Conservation Reserve) ತಮಿಳುನಾಡಿನಲ್ಲಿ ಆರಂಭಿಸುತ್ತಿದೆ. ಭಾರತವು ಆಗಾಗ ಅಳಿವಿನಂಚಿಲ್ಲಿರುವ ಪ್ರಾಣಿಗಳನ್ನು ಸಂರಕ್ಷಿಸುವ ಕೆಲಸ ಮಾಡುತ್ತಲೇ ಬಂದಿದೆ. ಈ ಹಿಂದೆ ಅಳಿವಿನಂಚಿನಲ್ಲಿರುವ ಚಿರತೆಗಳನ್ನು ಮರುಪರಿಚಯಿಸಿದ ನಂತರ, ಈಗ ಸಮುದ್ರ ಹಸು (Sea Cow) ಅಥವಾ ಕಡಲ ಹಸು ಎಂದೂ ಕರೆಯಲಾಗುವ ಅತಿದೊಡ್ಡ ಸಸ್ಯಾಹಾರಿ ಸಮುದ್ರ ಸಸ್ತನಿ ಡುಗಾಂಗ್ ಅನ್ನು ಸಂರಕ್ಷಿಸುವ ಪಣ ತೊಟ್ಟಿದೆ.


ತಮಿಳುನಾಡು ರಾಜ್ಯ ಸರ್ಕಾರ ನೀಡಿರುವ ಹೇಳಿಕೆ
ಭಾರತವು ತನ್ನ ಮೊದಲ ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶದ ಹಕ್ಕನ್ನು ಪಡೆಯುತ್ತಿದೆ. ಅದು ತಮಿಳುನಾಡಿನಲ್ಲಿ ಎಂಬುದು ವಿಶೇಷ ಎಂಬ ಸೂಚನೆ ನೀಡಿದೆ ಎಂದು ರಾಜ್ಯ ಸರ್ಕಾರವು ಹೇಳಿಕೆಯನ್ನು ನೀಡಿದೆ. ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪನೆ ಮಾಡುವುದರಿಂದ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಸಂರಕ್ಷಿಸಬಹುದಾಗಿದೆ.


ಅದೇ ಈ ಕ್ರಮದ ಮೂಲ ಉದ್ದೇಶ. ಈಗ ಈ ಡುಗಾಂಗ್‌ ಸಂರಕ್ಷಣಾ ಮೀಸಲು ಪ್ರದೇಶವನ್ನು ಆರಂಭಿಸುವುದರಿಂದ ದೇಶದಲ್ಲಿ ಸಮುದ್ರ ಪ್ರಾಣಿಗಳ ಸಂರಕ್ಷಣೆ ಖಚಿತವಾಗಿದೆ.


“ನಾವು ಇತಿಹಾಸವನ್ನು ಮತ್ತೆ ಮತ್ತೆ ಸೃಷ್ಟಿ ಮಾಡುತ್ತಿದ್ದೇವೆ. ಇದರ ಜೊತೆಗೆ ಭಾರತ ಸರ್ಕಾರದ ಈ ನಿರ್ಧಾರವು ತಮಿಳುನಾಡಿನ ಪ್ರಾಣಿ ಸಂರಕ್ಷಣಾ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲು ಆಗಿದೆ. ಸರ್ಕಾರದ ಈ ಅಧಿಸೂಚನೆಯು ತಮಿಳುನಾಡಿನ ಅರಣ್ಯ ಇಲಾಖೆ ಮತ್ತು ಪ್ರಪಂಚದಾದ್ಯಂತದ ಇರುವ ಪ್ರಾಣಿ ಸಂರಕ್ಷಣಾಕಾರರಿಗೆ ಬಹಳ ಹೆಮ್ಮೆಯ ಕ್ಷಣವಾಗಿದೆ” ಎಂದು ತಮಿಳುನಾಡು ಸರ್ಕಾರದ ಪರಿಸರ, ಹವಾಮಾನ ಬದಲಾವಣೆ ಮತ್ತು ಅರಣ್ಯಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಪ್ರಿಯಾ ಸಾಹು ಅವರು ವಿವರಿಸಿದರು.


ಡುಗಾಂಗ್‌ಗಳು ಅಥವಾ ಕಡಲ ಹಸುಗಳು
ಈ ಡುಗಾಂಗ್‌ಗಳು ಮನಾಟೀಸ್‌ ಎಂಬ ಸಮುದ್ರ ಪ್ರಾಣಿಗಳನ್ನು ಹೋಲುತ್ತವೆ. ಈ ಮನಾಟೀಸ್‌ ಮತ್ತೊಂದು ರೀತಿಯ ಕಡಲ ಹಸು ಆಗಿದೆ. ಈ ಮನಾಟೀಸ್‌ ಪ್ರಾಣಿಯಂತೆ ಇದು ಕೂಡ ಅದರ ಲಕ್ಷಣಗಳನ್ನೇ ಹೊಂದಿದೆ.


ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಸಿರೆನಿಯಾ ಕುಟುಂಬಕ್ಕೆ ಸೇರಿದ ಈ ಡುಗಾಂಗ್‌ಗಳು ಸಸ್ಯಾಹಾರಿಗಳಾಗಿವೆ. ಅವುಗಳು ನೀರೊಳಗಿನ ಹುಲ್ಲನ್ನು ತಿನ್ನುತ್ತವೆ. ಇವು 231 ಕೆಜಿಯಿಂದ 498 ಕೆಜಿ ತೂಕವಿರುತ್ತವೆ. ಇವುಗಳು 13 ಅಡಿ ಎತ್ತರ ಇರುತ್ತವೆ. ಇವುಗಳ ಜೀವಿತಾವಧಿಯು ಸುಮಾರು 65 ರಿಂದ 70 ವರ್ಷಗಳು ಆಗಿವೆ.


ಇದನ್ನೂ ಓದಿ: Explained: ಝೋಂಬಿ ಐಸ್​ನಿಂದ ವಿಶ್ವಾದ್ಯಂತ ಆತಂಕ: ಜಾಗತಿಕ ಸಮುದ್ರ ಮಟ್ಟ ಭಾರೀ ಹೆಚ್ಚಳ!


ಕಡಲ ಹಸುಗಳು ಗಾಳಿಯನ್ನು ಪಡೆಯಲು ಭೂಮಿಯ ಮೇಲ್ಮೈಗೆ ಬರುವ ಮೊದಲ ಆರು ನಿಮಿಷಗಳ ಕಾಲ ನೀರಿನಡಿಯಲ್ಲಿ ನಿಂತು ಉಸಿರಾಡುತ್ತವೆ. ಅವು ಕೆಲವೊಮ್ಮೆ ತಮ್ಮ ತಲೆಯನ್ನು ನೀರಿನಲ್ಲಿ ಹುದುಗಿಸಿ, ಕೇವಲ ತಮ್ಮ ಬಾಲದಿಂದ ಮಾತ್ರ ಉಸಿರಾಡುತ್ತವೆ. ಈ ಪ್ರಾಣಿಯ ಉಸಿರಾಟ ಕ್ರಿಯೆ ವಿಶಿಷ್ಟವಾಗಿದೆ. ಡುಗಾಂಗ್ ಎಂಬುದು ಡುಗೊನ್ ಎಂಬ ವೈಜ್ಞಾನಿಕ ಹೆಸರಿನಿಂದ ಬಂದಿದೆ. ಈ ಕಡಲ ಸಸ್ತನಿಗಳು ತಮ್ಮ ಹೆಚ್ಚಿನ ಸಮಯವನ್ನು ಪ್ರತ್ಯೇಕವಾಗಿ ಕಳೆಯಲು ಬಯಸುತ್ತವೆ.


ಇವು ಎಲ್ಲಿ ಕಂಡುಬರುತ್ತವೆ?
ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಪ್ರಕಾರ, ಡುಗಾಂಗ್‌ಗಳು ಗಲ್ಫ್ ಆಫ್ ಮನ್ನಾರ್, ಪಾಲ್ಕ್ ಬೇ, ಗಲ್ಫ್ ಆಫ್ ಕಚ್ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕಂಡುಬರುತ್ತವೆ. ಪ್ರಸ್ತುತ, ಭಾರತದಲ್ಲಿ ಇವುಗಳ ಸಂಖ್ಯೆ ಸುಮಾರು 250 ಆಗಿದೆ.


ಪ್ರಪಂಚದಾದ್ಯಂತ, ಡುಗಾಂಗ್‌ಗಳು ಆಸ್ಟ್ರೇಲಿಯಾದಲ್ಲಿ ಹೆಚ್ಚು ಕಂಡುಬರುತ್ತವೆ. ಅಲ್ಲಿ ಅವುಗಳ ಸಂಖ್ಯೆ ಅಧಿಕವೆಂದೆ ಹೇಳಬಹುದು. ಅವುಗಳ ಸಂಖ್ಯೆಯು ಪಶ್ಚಿಮ ಆಸ್ಟ್ರೇಲಿಯಾದ ಶಾರ್ಕ್ ಕೊಲ್ಲಿಯಿಂದ ಕ್ವೀನ್ಸ್‌ಲ್ಯಾಂಡ್‌ನ ಮೊರೆಟನ್ ಕೊಲ್ಲಿಯವರೆಗೆ ವ್ಯಾಪಿಸಿದೆ.


ಸೊಸೈಟಿ ಫಾರ್ ಮೆರೈನ್ ಮ್ಯಾಮಲಾಜಿ ಪ್ರಕಾರ, ಶಾರ್ಕ್ ಕೊಲ್ಲಿಯಲ್ಲಿ ಮಾತ್ರ ಡುಗಾಂಗ್ ಗಳ ಸಂಖ್ಯೆ 10,000 ಕ್ಕಿಂತ ಹೆಚ್ಚು ಎಂದು ವರದಿಗಳಿಂದ ತಿಳಿದು ಬಂದಿದೆ. ಪರ್ಷಿಯನ್ ಗಲ್ಫ್ ವಿಶ್ವದ ಎರಡನೇ ಅತಿ ದೊಡ್ಡ ಡುಗಾಂಗ್‌ಗಳನ್ನು ಹೊಂದಿರುವ ಪ್ರದೇಶವಾಗಿದೆ. ಇಲ್ಲಿ ಸುಮಾರು 5,800 ರಿಂದ 7,300 ಸಂಖ್ಯೆಯ ಡುಗಾಂಗ್‌ಗಳು ವಾಸಿಸುತ್ತವೆ.


ಭಾರತ ಏಕೆ ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪನೆ ಮಾಡುತ್ತಿದೆ?
1972 ರ ವನ್ಯಜೀವಿ (ರಕ್ಷಣೆ) ಕಾಯಿದೆಯ ಶೆಡ್ಯೂಲ್ 1 ರ ಅಡಿಯಲ್ಲಿ ಕಡಲ ಹಸುಗಳನ್ನು ರಕ್ಷಿಸಲಾಗುತ್ತಿದೆ. ಡೌನ್‌ ಅರ್ಥ್‌ ಮಾಧ್ಯಮವು “ಡುಗಾಂಗ್‌ಗಳು ಒಂದು ದಿನದಲ್ಲಿ 40 ಕೆಜಿಯಷ್ಟು ಸೀಗ್ರಾಸ್ ಅಥವಾ ಸಮುದ್ರದ ಹುಲ್ಲನ್ನು ಸೇವಿಸುತ್ತವೆ. ಕರಾವಳಿ ಅಭಿವೃದ್ಧಿ ಯೋಜನೆಗಳಿಂದಾಗಿ ಆವಾಸಸ್ಥಾನದ ನಷ್ಟದ ಹೆಚ್ಚಳದೊಂದಿಗೆ, ಈ ಪ್ರಾಣಿಗಳು ಅಳಿವಿನ ಅಪಾಯವನ್ನು ಎದುರಿಸುತ್ತಿವೆ” ಎಂದು ವರದಿ ಮಾಡಿದೆ.


ಇದಲ್ಲದೆ, ಪರಿಸರ ಮಾಲಿನ್ಯ, ಅಕ್ರಮ ಮೀನುಗಾರಿಕೆ ಚಟುವಟಿಕೆಗಳು, ಬೇಟೆಯಂತಹ ಮಾನವ ಚಟುವಟಿಕೆಗಳು ಡುಗಾಂಗ್ ಪ್ರಾಣಿಗಳ ಇಳಿಕೆಗೆ ನೇರ ಕಾರಣವಾಗುತ್ತಿದೆ. ಇದರ ಪರಿಣಾಮವಾಗಿ ಅಳಿವಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಿಸಬೇಕೆಂದು ಡುಗಾಂಗ್‌ ಸಂರಕ್ಷಣಾ ಮೀಸಲು ಪ್ರದೇಶವನ್ನು ಸ್ಥಾಪಿಸಲು ಮುಂದಾಗಿದೆ ಭಾರತ ಸರ್ಕಾರ.


ಇದನ್ನೂ ಓದಿ: Memorial of Love: ಐತಿಹಾಸಿಕ ಬಾವಿಗಳಿಗೆ ಮೆಟ್ಟಿಲುಗಳು ಏಕಿರುತ್ತವೆ? ಇವುಗಳ ಹಿಂದಿದೆ ಇಂಟ್ರೆಸ್ಟಿಂಗ್ ಕಥೆ


“ಎರಡು ಶತಮಾನಗಳ ಹಿಂದೆ ಒಡಿಶಾ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದ ಕರಾವಳಿಯ ಸಮುದ್ರದಲ್ಲಿ ಕಡಲ ಹಸುಗಳು ಹೆಚ್ಚು ಸಂಖ್ಯೆಯಲ್ಲಿದ್ದವು. ಆದರೆ ಈಗ, ಈ ಪ್ರದೇಶಗಳಲ್ಲಿ ಅವು ನಶಿಸಿ ಹೋಗಿವೆ” ಎಂದು ಭಾರತೀಯ ವನ್ಯಜೀವಿ ಸಂಸ್ಥೆಯಲ್ಲಿನ ಅಳಿವಿನಂಚಿನಲ್ಲಿರುವ ಪ್ರಭೇದಗಳ ನಿರ್ವಹಣಾ ವಿಭಾಗದ ಹಿರಿಯ ವಿಜ್ಞಾನಿಯೊಬ್ಬರು ಡೌನ್‌ಟು ಅರ್ಥ್‌ ಮಾಧ್ಯಮಕ್ಕೆ ತಿಳಿಸಿದ್ದಾರೆ.


ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶದ ಬಗ್ಗೆ ನಿಮಗೆಷ್ಟು ಗೊತ್ತು?
ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶವನ್ನು ಸೆಪ್ಟೆಂಬರ್ 2021 ರಲ್ಲಿ ತಮಿಳುನಾಡಿನ ಕರಾವಳಿಯ ಪಾಕ್ ಕೊಲ್ಲಿ ಪ್ರದೇಶದಲ್ಲಿ ಸ್ಥಾಪನೆ ಮಾಡಲಾಗುತ್ತದೆ ಎಂದು ಈಗಾಗಲೇ ಭಾರತ ಸರ್ಕಾರವು ಘೋಷಿಸಿದೆ. ಇದು ವಿವಿಧ ಪ್ರಾಣಿಗಳು ಮತ್ತು ಅದರ ಸಮುದ್ರ ಆವಾಸಸ್ಥಾನಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಒಂದು ಮಹತ್ತರ ಹೆಜ್ಜೆ ಎಂದು ಹೇಳಬಹುದು.


“ಈ ಮೀಸಲು ಪ್ರದೇಶವು ತಂಜಾವೂರಿನ ಅದಿರಾಮ್‌ಪಟ್ಟಿಣಂ ಮತ್ತು ಪಡುಕೊಟ್ಟೈ ಜಿಲ್ಲೆಯ ಅಮಪಟ್ಟಿನಂ ನಡುವಿನ ಪಾಕ್ ಕೊಲ್ಲಿ ಪ್ರದೇಶದ ಉತ್ತರ ಭಾಗದಲ್ಲಿ ವ್ಯಾಪಿಸಿದೆ ಮತ್ತು 448 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ” ಎಂದು ದಿ ಹಿಂದೂ ಮಾಧ್ಯಮವು ವರದಿ ಮಾಡಿದೆ.


ಬಜೆಟ್‌ ಎಷ್ಟು?
ಡುಗಾಂಗ್ ಸಂರಕ್ಷಣಾ ಮೀಸಲು ಪ್ರದೇಶದ ಯೋಜನೆಯ ಅನುಷ್ಠಾನಕ್ಕೆ ಬರೋಬ್ಬರಿ ಒಟ್ಟು 25 ಲಕ್ಷ ರೂ. ಗಳ ಮೊತ್ತವನ್ನು ಭಾರತ ಸರ್ಕಾರ ಮೀಸಲಿಟ್ಟಿದೆ.


ಪಾಕ್‌ ಕೊಲ್ಲಿ
ಪಾಕ್ ಕೊಲ್ಲಿಯು ಆಳವಾದ ಒಂದು ಜಲಸಮೂಹದ ಕೊಲ್ಲಿಯಾಗಿದ್ದು, ಇದು ಡುಗಾಂಗ್‌ಗಳು, ಡಾಲ್ಫಿನ್‌ಗಳು, ಪೊರ್ಪೊಯಿಸ್‌ಗಳು ಮತ್ತು ಆಮೆಗಳಿಗೆ ಸೂಕ್ತವಾದ ಆವಾಸಸ್ಥಾನವನ್ನು ಒದಗಿಸುತ್ತದೆ. “ಕೊಲ್ಲಿಯಲ್ಲಿ ತಂಜಾವೂರು ಮತ್ತು ಪುದುಕೊಟ್ಟೈ ಜಿಲ್ಲೆಗಳ ನಡುವಿನ ಕರಾವಳಿ ಪ್ರದೇಶಗಳು 12,250 ಹೆಕ್ಟೇರ್ ಸೀಗ್ರಾಸ್ ನಿಂದ ಆವೃತವಾಗಿವೆ ಎಂದು ಅಧಿಕೃತ ಮಾಹಿತಿಯಿಂದ ತಿಳಿದು ಬಂದಿದೆ. ಇದು ಕಡಲ ಹಸುಗಳ ಮುಖ್ಯ ಆಹಾರದ ಮೂಲವಾಗಿದೆ”


“ಕರಾವಳಿ ಜನರಿಗೆ ಸಮುದ್ರವೇ ಎಲ್ಲ. ಅವರು ತಮ್ಮ ಜೀವನಕ್ಕಾಗಿ ಕರಾವಳಿ ಸಮುದ್ರವನ್ನೆ ಅವಲಂಬಿಸಿರುತ್ತಾರೆ. ಈ ಕರಾವಳಿ ಸಮುದ್ರವನ್ನು ಅವಲಂಬಿಸಿರುವ ಸಾಂಪ್ರದಾಯಿಕ ಮೀನುಗಾರರಿಗೆ ಈ ಸಂರಕ್ಷಣಾ ಮೀಸಲು ಪ್ರದೇಶದ ಸ್ಥಾಪನೆಯಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ನಾವು ಭರವಸೆ ನೀಡುತ್ತೆವೆ. ನಾವು ದೀರ್ಘ ಸಮಾಲೋಚನೆಗಳನ್ನು ನಡೆಸಿದ್ದೇವೆ ಮತ್ತು ಮೀನುಗಾರರ ಸಮುದಾಯಗಳ ಒಪ್ಪಿಗೆಯನ್ನು ತೆಗೆದುಕೊಂಡೆ ಈ ವಿಚಾರದಲ್ಲಿ ಮುಂದುವರಿದ್ದೇವೆ" ಎಂದು ಮುಖ್ಯ ವನ್ಯಜೀವಿ ವಾರ್ಡನ್, ಶ್ರೀನಿವಾಸ ರಾಮಚಂದ್ರ ರೆಡ್ಡಿ ಅವರು ಹೇಳಿದರು.


ಈ ಪ್ರಸ್ತಾವನೆಯನ್ನು ತಮಿಳುನಾಡಿನ ಎರಡೂ ಜಿಲ್ಲೆಗಳ ಒಟ್ಟು 45 ಮೀನುಗಾರಿಕಾ ಗ್ರಾಮಗಳು ಒಪ್ಪಿಕೊಂಡಿರುವುದು ನಿಜಕ್ಕೂ ಆಶಾದಾಯಕ ಬೆಳವಣಿಗೆ ಆಗಿದೆ.


ಪ್ರಪಂಚದ ಇತರ ಭಾಗಗಳಲ್ಲಿ ಡುಗಾಂಗ್‌ಗಳ ಸ್ಥಿತಿ
ಡುಗಾಂಗ್‌ಗಳನ್ನು IUCN ರೆಡ್ ಲಿಸ್ಟ್ ಆಫ್ ಥ್ರೆಟೆನ್ಡ್ ಸ್ಪೀಷೀಸ್‌ನಲ್ಲಿ ಅಳಿವಿನಂಚಿಲ್ಲಿರುವ ಪ್ರಾಣಿ ಎಂದು ಪಟ್ಟಿ ಮಾಡಲಾಗಿದೆ. ಕಡಲ ಹುಲ್ಲಿನ ಆವಾಸಸ್ಥಾನಗಳ ನಷ್ಟ, ಜಲಮಾಲಿನ್ಯ ಮತ್ತು ಅಭಿವೃದ್ಧಿ ಚಟುವಟಿಕೆಗಳಿಂದಾಗಿ ಕರಾವಳಿ ಪರಿಸರ ವ್ಯವಸ್ಥೆಯ ಅವನತಿ ಹೀಗೆ ಇನ್ನು ಅನೇಕ ಕಾರಣಗಳಿಂದಾಗಿ ಈ ಕಡಲ ಹಸುಗಳು ನಿಧಾನವಾಗಿ ನಶಿಸಿ ಹೋಗುತ್ತಿವೆ.


ಇದನ್ನೂ ಓದಿ:  Mohenjo-daro: ನಶಿಸಿಹೋಗುತ್ತಿದೆ ಮೊಹೆಂಜೋದಾರೋ ಕುರುಹು! ಕಳಚಿ ಹೋಗುತ್ತಾ ಐತಿಹಾಸಿಕ ಕೊಂಡಿ?


ಡುಗಾಂಗ್‌ಗಳು ಮೀನುಗಾರಿಕೆ ಬಲೆಗಳಿಗೆ ಆಕಸ್ಮಿಕವಾಗಿ ಸಿಕ್ಕಿಹಾಕಿಕೊಂಡು ನಂತರ ಅವು ದೋಣಿಗಳು ಮತ್ತು ಟ್ರಾಲರ್‌ಗಳ ಘರ್ಷಣೆಗೆ ಬಲಿಯಾಗುತ್ತವೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಳೆದ ತಿಂಗಳು, ಚೀನಾವು ಹಡಗು ಅಪಘಾತಗಳು ಮತ್ತು ಮೀನುಗಾರಿಕೆಯಿಂದಾಗಿ ಡುಗಾಂಗ್‌ ಪ್ರಭೇದವು ಅಳಿವಿನಂಚಿನಲ್ಲಿದೆ ಎಂದು ಘೋಷಣೆ ಮಾಡಿದೆ.

Published by:Ashwini Prabhu
First published: