Explained: ಬಂದೂಕು ಸುರಕ್ಷತೆಗೆ ಸಂಬಂಧಿಸಿದಂತೆ ಬಿಲ್ ಪಾಸ್ ಮಾಡಿದ ಅಮೆರಿಕ! ಏನಿದು? ಇಲ್ಲಿದೆ ವಿವರ

ಅಮೆರಿಕವು ಬಂದೂಕು ಸುರಕ್ಷತೆಗೆ ಸಂಬಂಧಿಸಿದಂತೆ ಬಿಲ್ ಒಂದನ್ನು ಪಾಸ್ ಮಾಡಿರುವ ಬಗ್ಗೆ ವರದಿಯಾಗಿದೆ. ಇತ್ತೀಚಿನ ಕೆಲ ಸಮಯದಲ್ಲಿ ಅಮೆರಿಕದಲ್ಲಿ ಬಂದೂಕು ಬಳಸಿ ಹಿಂಸಾತ್ಮಕ ಪ್ರಕರಣಗಳು ವೃದ್ಧಿಯಾಗಿದ್ದವು. ಈ ಮಧ್ಯೆ ಅಮೆರಿಕದ ಸುಪ್ರೀಮ್ ಕೋರ್ಟ್ ತನ್ನ ಸೂಚನೆಯಲ್ಲಿ ಅಮೆರಿಕನ್ನರು ತಮ್ಮ ಪ್ರಾಣ ಸುರಕ್ಷತೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಂದೂಕು ಇಟ್ಟುಕೊಳ್ಳುವುದು ಅವರ ಸಾಂವಿಧಾನಿಕ ಹಕ್ಕಾಗಿದೆ ಎಂದು ಹೇಳಿರುವ ಬೆನ್ನಲ್ಲೇ ಜೂನ್ 23 ರಂದು ಅಮೆರಿಕವು ಈ ಬಂದೂಕು ಸುರಕ್ಷತಾ ಬಿಲ್ ಅನ್ನು ಅನುಮೋದಿಸಿರುವುದಾಗಿ ತಿಳಿದುಬಂದಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಅಮೆರಿಕವು (America) ಬಂದೂಕು ಸುರಕ್ಷತೆಗೆ (Gun Safety) ಸಂಬಂಧಿಸಿದಂತೆ ಬಿಲ್ ಒಂದನ್ನು ಪಾಸ್ ಮಾಡಿರುವ ಬಗ್ಗೆ ವರದಿಯಾಗಿದೆ. ಇತ್ತೀಚಿನ ಕೆಲ ಸಮಯದಲ್ಲಿ ಅಮೆರಿಕದಲ್ಲಿ ಬಂದೂಕು ಬಳಸಿ ಹಿಂಸಾತ್ಮಕ ಪ್ರಕರಣಗಳು (violent case) ವೃದ್ಧಿಯಾಗಿದ್ದವು. ಈ ಮಧ್ಯೆ ಅಮೆರಿಕದ ಸುಪ್ರೀಮ್ ಕೋರ್ಟ್ (Supreme court) ತನ್ನ ಸೂಚನೆಯಲ್ಲಿ ಅಮೆರಿಕನ್ನರು ತಮ್ಮ ಪ್ರಾಣ ಸುರಕ್ಷತೆಗಾಗಿ ಸಾರ್ವಜನಿಕ ಸ್ಥಳಗಳಲ್ಲಿ (Public Places) ಬಂದೂಕು ಇಟ್ಟುಕೊಳ್ಳುವುದು ಅವರ ಸಾಂವಿಧಾನಿಕ ಹಕ್ಕಾಗಿದೆ (constitutional right) ಎಂದು ಹೇಳಿರುವ ಬೆನ್ನಲ್ಲೇ ಜೂನ್ 23 ರಂದು ಅಮೆರಿಕವು ಈ ಬಂದೂಕು ಸುರಕ್ಷತಾ ಬಿಲ್ ಅನ್ನು ಅನುಮೋದಿಸಿರುವುದಾಗಿ ತಿಳಿದುಬಂದಿದೆ.

ಬಂದೂಕು ಸುರಕ್ಷತೆಗೆ ಬಿಲ್ ಪಾಸ್
ಉಭಯ ಪಕ್ಷಗಳು ಬೆಂಬಲಿತ ಈ ಬಂದೂಕು ಸುರಕ್ಷತಾ ಕಾಯ್ದೆಯು 65-33 ಬಹುಮತಗಳೊಂದಿಗೆ ಸೆನೆಟ್ ನಲ್ಲಿ ಅನುಮೋದನೆಗೊಂಡಿದೆ. ಏನಿಲ್ಲವೆಂದರೂ ಕನಿಷ್ಠ 15 ರಿಪಬ್ಲಿಕನ್ ಸದಸ್ಯರು ಈ ನಿಯಂತ್ರಣ ಕಾಯ್ದೆಯ ಪರ ಮತ ಚಾಲಯಿಸಿದ್ದು ಒಂದು ರೀತಿಯಲ್ಲಿ ಆಸಕ್ತಿಕರ ಬೆಳವಣಿಗೆ ಎನ್ನಲಾಗುತ್ತಿದೆ. ಏಕೆಂದರೆ, ಈ ಹಿಂದೆ ಈ ರೀತಿಯ ನಿಯಂತ್ರಕ ಕಾಯ್ದೆಯ ವಿರುದ್ಧವೇ ಕಳೆದ ಹಲವು ವರ್ಷಗಳಿಂದ ರಿಪಬ್ಲಿಕನ್ ಪಕ್ಷವು ವಿರೋಧ ವ್ಯಕ್ತಪಡಿಸುತ್ತ ಬಂದಿತ್ತು.

ಸದ್ಯ, ಈಗ ಈ ಬಿಲ್ ಅನ್ನು ಡೆಮಾಕ್ರೆಟಿಕ್ ಪಕ್ಷ ಪ್ರಾಬಲ್ಯವಿರುವ ಮನೆಗೆ ಅದರ ಪ್ರತಿನಿಧಿಗಳ ಮುಂದೆ ವರ್ಗಾಯಿಸಲಾಗುವುದು ಹಾಗೂ ತದನಂತರ ಅದು ಅಮೆರಿಕದ ಅಧ್ಯಕ್ಷರಾದ ಜೋ ಬಿಡೇನ್ ಅವರ ಬೆಳಿ ಅಂತಿಮ ಅನುಮೋದನೆಗಾಗಿ ತಲುಪುತ್ತದೆ.

ಎಲಿಮೆಂಟರಿ ಶಾಲೆಗೆ ನುಗ್ಗಿ ಹತ್ಯೆ
ಕಳೆದ ಒಂದು ತಿಂಗಳ ಹಿಂದಷ್ಟೇ, ಟೆಕ್ಸಾಸಿನ ಉವಾಲ್ಡೆ ಎಂಬಲ್ಲಿ ಬಂದೂಕುಧಾರಿಯೊಬ್ಬ ಎಲಿಮೆಂಟರಿ ಶಾಲೆಯಲ್ಲಿ ನುಗ್ಗಿ 21 ಜನರನ್ನು ಗುಂಡಿಕ್ಕಿ ಹತ್ಯೆಗೈದಿದ್ದನು. ಹತ್ಯೆಯಾದವರಲ್ಲಿ 19 ಮಕ್ಕಳು ಇದ್ದರು. ಈ ಘಟನೆ ಸಂಭವಿಸಿ ಒಂದು ತಿಂಗಳದ ನಂತರ ಈಗ ಈ ಬಿಲ್ ಅನ್ನು ಪಾಸ್ ಮಾಡಲಾಗಿದೆ. ಈ ಕರಾಳ ಘಟನೆಯು ನ್ಯೂಯಾರ್ಕ್ ನಗರದ ಬಫ್ಯಾಲೊ ಸೂಪರ್ ಮಾರ್ಕೆಟ್ ಒಂದರಲ್ಲಿ ಜನಾಂಗೀಯ ನೆಲೆಯಲ್ಲಿ 10 ಕಪ್ಪು ಜನಾಂಗದವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಘಟನೆಯ ಕೆಲ ದಿನಗಳ ನಂತರವಷ್ಟೇ ನಡೆದಿತ್ತು.

ಇದನ್ನೂ ಓದಿ:  Military School: ದೇಶ ರಕ್ಷಣೆ ನಿಮ್ಮ ಕನಸಾ? ಹಾಗಿದ್ರೆ ಇಲ್ಲಿದೆ ನೋಡಿ ಅತ್ಯುತ್ತಮ ಮಿಲಿಟರಿ ಶಾಲೆ

ಇನ್ನು, ಈ ಬಿಲ್ ಕುರಿತಂತೆ ಸಭಾಮನೆಯಲ್ಲಿ ಮಾತನಾಡಿರುವ ಡೆಮಾಕ್ರೆಟಿಕ್ ಪ್ರತಿನಿಧಿಯಾಗಿರುವ ಕ್ರಿಸ್ ಮರ್ಫಿ ಹೀಗೆ ಹೇಳಿದ್ದಾರೆ, "ಇದು ಕಾಂಗ್ರೆಸ್ 30 ವರ್ಷದ ಇತಿಹಾಸದಲ್ಲೇ ಅನುಮೋದನೆ ಮಾಡಿರುವ ಬಹು ಪರಿಣಾಮಕಾರಿಯಾದ ಆಂಟಿ-ಗನ್-ವಾಯ್ಲೆನ್ಸ್ ಕಾಯ್ದೆಯಾಗಿದೆ".

ಏನಿದು ಸುರಕ್ಷಿತ ಸಮುದಾಯಗಳ ಆಕ್ಟ್?
ಮಂಗಳವಾರದಂದು ಪರಿಚಯಿಸಲಾದ ಈ ಬಿಲ್ "ನಮ್ಮ ಸಮುದಾಯವನ್ನು ಸಂರಕ್ಷಿಸುವ" ಗುರಿಯನ್ನು ಹೊಂದಿದ್ದು ಇದನ್ನು ಬೈಪಾರ್ಟಿಸನ್ ಸೇಫರ್ ಕಮ್ಯೂನಿಟೀಸ್ ಆಕ್ಟ್ ಎಂದು ಕರೆಯಲಾಗಿದೆ. 80 ಪುಟಗಳ ಈ ಕಾಯ್ದೆಗೆ 15 ಬಿಲಿಯನ್ ಡಾಲರ್ ಅನ್ನು ಅಲೋಕೆಟ್ ಮಾಡಲಾಗಿದ್ದು ಕ್ರಿಸ್ ಮರ್ಫಿ ಅವರ ಪ್ರಕಾರ ಇದನ್ನು ಪೂರ್ಣವಾಗಿ ಭರಿಸಲಾಗುತ್ತದೆ ಎನ್ನಲಾಗಿದೆ.

ಈ ದ್ವೀಪಕ್ಷೀಯ ಬಿಲ್ ಅಮೆರಿಕದಲ್ಲಿ ಶಸ್ತ್ರಾಸ್ತ್ರಗಳು ಹಾಗೂ ವೈದ್ಯಕೀಯ ಆರೈಕೆ ಸುಧಾರಣೆಯ ಮೇಲೆ ಹೆಚ್ಚಿನ ಗಮನ ಹೊಂದಿದೆ ಎನ್ನಲಾಗಿದೆ. ಈ ಬಿಲ್ ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಬಲವರ್ಧಿಸಲು ಹಾಗೂ ಸುರಕ್ಷಿತ ವಾತಾವರಣ ಕಲ್ಪಿಸಲು ಅನುದಾನಗಳನ್ನು ಸಹ ನೀಡಲಿದೆ ಎಂದು ತಿಳಿದುಬಂದಿದೆ.

ಅಪ್ರಾಪ್ತರಿಗೆ ಕಟ್ಟುನಿಟ್ಟಾದ ಪರಿಶೀಲನೆ
ಈ ಬಿಲ್, ಗನ್ ಖರೀದಿದಾರರಿಗೆ, ವಿಶೇಷವಾಗಿ ಅಪ್ರಾಪ್ತರಿಗೆ ಕಟ್ಟುನಿಟ್ಟಾದ ಹಿನ್ನೆಲೆ ಪರಿಶೀಲನೆಗಳನ್ನು ಒಳಗೊಂಡಿದೆ. ಈ ಕಾಯ್ದೆಯಡಿ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗೆ ಬಂದೂಕನ್ನು ವರ್ಗಾಯಿಸಲಾದರೆ, ಇದರಲ್ಲಿ ರೂಪಿಸಲಾದ ವ್ಯವಸ್ಥೆಯು ಕೂಡಲೆ ಆ ವ್ಯಕ್ತಿಯ ಬಗ್ಗೆ ಮಾಹಿತಿ ಕಲೆ ಹಾಕಲು ಅಥವಾ ವ್ಯಕ್ತಿಯ ಈ ಹಿಂದೆ ಏನಾದರು ಇದ್ದಿರಬಹುದಾದ ಪ್ರಕರಣಗಳನ್ನು ಪರಿಶೀಲಿಸಲು ಅಪರಾಧ ಇತಿಹಾಸ ಸಂಗ್ರಹಾಗಾರ ಅಥವಾ ಬಾಲಾಪರಾಧಿ ನ್ಯಾಯ ಮಾಹಿತಿ ವ್ಯವಸ್ಥೆ, ಮಾನಸಿಕ ಆರೋಗ್ಯ ತೀರ್ಪು ದಾಖಲೆಗಳ ರಾಜ್ಯ ಪಾಲಕರು ಮತ್ತು ರಾಜ್ಯದ ಸ್ಥಳೀಯ ಕಾನೂನು ಜಾರಿ ಸಂಸ್ಥೆಯನ್ನು ಸಂಪರ್ಕಿಸಬೇಕು ಎಂದು ಅದು ಹೇಳುತ್ತದೆ.

ಇದನ್ನೂ ಓದಿ:  Explained: ಅಗ್ನಿವೀರರಿಂದ ಚೀನಾಕ್ಕೆ ಸವಾಲ್! ಸರ್ಕಾರದ ಖಡಕ್ ಪ್ಲಾನ್

ಮಸೂದೆಯ ಪ್ರಕಾರ, ಪರವಾನಗಿದಾರರು ಪರವಾನಗಿಗಾಗಿ ವ್ಯವಸ್ಥೆಯನ್ನು ಸಂಪರ್ಕಿಸಿದ 3 ದಿನಗಳೊಳಗೆ ಆ ವ್ಯಕ್ತಿಯು ಪ್ರಾಯಶಃ ಅನರ್ಹಗೊಳಿಸುವ ಬಾಲಾಪರಾಧಿ ದಾಖಲೆಯನ್ನು ಹೊಂದಿದ್ದಾರೆಯೇ ಎಂದು ನಿರ್ಧರಿಸಲು ಇದು ಅಧಿಕಾರಿಗಳಿಗೆ ಸಹಾಯ ಮಾಡುತ್ತದೆ. ಹೆಚ್ಚಿನ ತನಿಖೆಯ ಅಗತ್ಯವಿದ್ದಲ್ಲಿ, ಪರವಾನಗಿದಾರರಿಗೆ ಬಂದೂಕನ್ನು ವರ್ಗಾಯಿಸುವುದು ಅಥವಾ ಸ್ವೀಕರಿಸುವುದು ಉಲ್ಲಂಘನೆಯಾಗಿದೆ ಎಂದು 10 ದಿನಗಳಲ್ಲಿ ಸೂಚಿಸಬೇಕಾಗುತ್ತದೆ.

ಮಸೂದೆಯ ಪ್ರಕಾರ, ಪ್ರತಿ ರಾಜ್ಯ ಮತ್ತು ಫೆಡರಲ್ ಏಜೆನ್ಸಿಯು "ಒಬ್ಬ ವ್ಯಕ್ತಿಯು ಕಾನೂನುಬದ್ಧವಾಗಿ ಶಸ್ತ್ರ ಸ್ವಾಧೀನಪಡಿಸಿಕೊಳ್ಳುವುದನ್ನು ಅಥವಾ ಹೊಂದಿರುವುದನ್ನು ಇನ್ನು ಮುಂದೆ ನಿಷೇಧಿಸುವ ದಾಖಲೆಗಳ ವ್ಯವಸ್ಥೆಯಿಂದ ತೆಗೆದುಹಾಕುವುದು" ಎಂಬ ಮಾಹಿತಿಯನ್ನು ಒಳಗೊಂಡಿರುವ ವಿವರವಾದ ವರದಿಯನ್ನು ಸಲ್ಲಿಸುವ ಅಗತ್ಯವಿದೆ. ಇದು ತೆಗೆದುಹಾಕಲಾದ ದಾಖಲೆಗಳ ಸಂಖ್ಯೆಯನ್ನು ಒಳಗೊಂಡಿರಬೇಕು ಮತ್ತು ಅವುಗಳನ್ನು ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ನಮೂದಿಸಿರಬೇಕು. ವರದಿಯನ್ನು ನ್ಯಾಯಾಂಗ ಸಮಿತಿ, ಸೆನೆಟ್‌ನ ವಿನಿಯೋಗಗಳ ಸಮಿತಿ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ವಿನಿಯೋಗ ಸಮಿತಿಗೆ ಸಲ್ಲಿಸಬೇಕು.

ಉದ್ದೇಶಪೂರ್ವಕ ಖರೀದಿ ಅಥವಾ ಖರೀದಿಸಲು ಪಿತೂರಿ ಮಾಡುವುದು ಕಾನೂನುಬಾಹಿರ
ಈ ಮಸೂದೆಯು ಬೇರೊಬ್ಬರ ಪರವಾಗಿ ಬಂದೂಕನ್ನು ಖರೀದಿಸುವ ಕ್ರಿಯೆಗೆ ದಂಡವನ್ನು ವಿಧಿಸುತ್ತದೆ. ಆ ಪ್ರಕಾರ ಬಿಲ್ಲಿನಲ್ಲಿ, “ಯಾವುದೇ ವ್ಯಕ್ತಿ ಉದ್ದೇಶಪೂರ್ವಕವಾಗಿ ಖರೀದಿಸುವುದು ಅಥವಾ ಖರೀದಿಸಲು ಪಿತೂರಿ ಮಾಡುವುದು ಕಾನೂನುಬಾಹಿರವಾಗಿರುತ್ತದೆ, ಅಥವಾ ಯಾವುದೇ ಇತರ ವ್ಯಕ್ತಿಯ ಪರವಾಗಿ ಅಥವಾ ವಿನಂತಿ ಅಥವಾ ಬೇಡಿಕೆಯ ಮೇರೆಗೆ ಅಂತರರಾಜ್ಯ ಅಥವಾ ವಿದೇಶಿ ವಾಣಿಜ್ಯದಲ್ಲಿ ಪರಿಣಾಮ ಬೀರುವ ಯಾವುದೇ ಬಂದೂಕು ಅಂತಹ ಇತರ ವ್ಯಕ್ತಿ  ಒಂದು ಅಪರಾಧ, ಭಯೋತ್ಪಾದನೆಯ ಫೆಡರಲ್ ಅಪರಾಧ ಅಥವಾ ಮಾದಕವಸ್ತು ಕಳ್ಳಸಾಗಣೆ ಅಪರಾಧದ ಮುಂದುವರಿಕೆಗಾಗಿ ಬಂದೂಕನ್ನು ಬಳಸಲು, ಸಾಗಿಸಲು, ಹೊಂದಲು ಅಥವಾ ಮಾರಾಟ ಮಾಡಲು ಅಥವಾ ವಿಲೇವಾರಿ ಮಾಡಲು ಉದ್ದೇಶಿಸಿದ್ದಾನೆ ಎಂದು ನಂಬಲು ಸಮಂಜಸವಾದ ಕಾರಣವಾಗಿದೆ" ಎಂದು ಉಉಲೇಖಿಸಲಾಗಿದೆ.

ಒನ್ನೊಬ್ಬರ ಸಲುವಾಗಿ ಖರೀದಿ ಮಾಡುವವರಿಗೆ ಶಿಕ್ಷೆ
ಬಿಲ್ಲಿನಲ್ಲಿ ಹೇಳಿರುವಂತೆ ಒನ್ನೊಬ್ಬರ ಸಲುವಾಗಿ ಖರೀದಿ ಮಾಡುವವರಿಗೆ 15 ರಿಂದ 25 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಇನ್ನು, ಬಂದೂಕು ಕಳ್ಳಸಾಗಣೆಗೆ ಸಂಬಂಧಿಸಿದಂತೆ, ಮಸೂದೆಯು ಹೀಗೆ ಹೇಳುತ್ತದೆ, “ಯಾವುದೇ ವ್ಯಕ್ತಿಯು ಅಂತರರಾಜ್ಯ ಅಥವಾ ವಿದೇಶಿ ವಾಣಿಜ್ಯದಲ್ಲಿ ಅಥವಾ ಪರಿಣಾಮ ಬೀರುವ ಯಾವುದೇ ವ್ಯಕ್ತಿಗೆ ಯಾವುದೇ ಬಂದೂಕನ್ನು ಸಾಗಿಸಲು, ವರ್ಗಾಯಿಸಲು, ಅಥವಾ ವಿಲೇವಾರಿ ಮಾಡುವುದು ಕಾನೂನುಬಾಹಿರವಾಗಿರುತ್ತದೆ.

ಅಂತಹ ಬಂದೂಕನ್ನು ಸ್ವೀಕರಿಸುವವರು ಬಂದೂಕಿನ ಬಳಕೆ, ಕೊಂಡೊಯ್ಯುವುದು ಅಥವಾ ಹೊಂದುವುದು ಅಪರಾಧ ಎಂದು ನಂಬಲು ಸಮಂಜಸವಾದ ಕಾರಣವನ್ನು ಹೊಂದಿದೆ. ಇದಕ್ಕೆ 15 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ನಿಕಟ ಸಂಪರ್ಕ ಹೊಂದಿದ ಅವಿವಾಹಿತರ ಮೇಲೆ ದೌರ್ಜನ್ಯ ಎಸಗಿದ ಅಪರಾಧಿಗಳಿಗೆ ಬಂದೂಕುಗಳ ಮಾರಾಟವನ್ನು ಈ ಮಸೂದೆ ನಿರ್ಬಂಧಿಸುತ್ತದೆ.

ರೆಡ್ ಫ್ಲ್ಯಾಗ್ ಕಾನೂನು ಎಂದರೇನು
ರೆಡ್ ಫ್ಲ್ಯಾಗ್ ಕಾನೂನುಗಳನ್ನು ಜಾರಿಗೆ ತರಲು ರಾಜ್ಯಗಳಿಗೆ ಹಣವನ್ನು ಒದಗಿಸಲು ಈ ಮಸೂದೆಯು ಅವಕಾಶ ನೀಡುತ್ತದೆ, ರೆಡ್ ಫ್ಲ್ಯಾಗ್ ಕಾನೂನು ಎಂಬುದು ಅಪಾಯಕಾರಿ ಎಂದು ಪರಿಗಣಿಸಲಾದ ಜನರಿಂದ ಬಂದೂಕುಗಳು ಮತ್ತು ಶಸ್ತ್ರಾಸ್ತ್ರಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರಿಗಳಿಗೆ ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ:  Udaipur Murder: ವ್ಯಕ್ತಿಯ ಶಿರಚ್ಛೇದನ, ಪ್ರಧಾನಿ ಮೋದಿಗೆ ಬೆದರಿಕೆ; ನೂಪುರ್ ಶರ್ಮಾ ಪರ ಪೋಸ್ಟ್​ಗೆ ಹಾಡಹಗಲೆ ಮರ್ಡರ್

ಈ ಕುರಿತಂತೆ ಮರ್ಫಿ ಅವರು “ನಾವು ಏನಾದರೂ ಮಾಡಬೇಕು ಎಂದು ಹೇಳುತ್ತಿರುವ ಅದೇ ಜನರು ನಮ್ಮ ಮಕ್ಕಳು ಮತ್ತು ಸಮುದಾಯಗಳನ್ನು ಸುರಕ್ಷಿತವಾಗಿರಿಸಲು ನಾವು ಏನು ಮಾಡಬಹುದೆಂಬುದನ್ನು ನಮಗೆ ಈಗ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ನಾನು ನಂಬುತ್ತೇನೆ. ಈ ಶಾಸನವು ನಮ್ಮನ್ನು ಸಕಾರಾತ್ಮಕ ದಿಕ್ಕಿನಲ್ಲಿ ನಡೆಸಲಿದೆ ಎಂಬ ವಿಶ್ವಾಸ ನನಗಿದೆ" ಎಂದು ಹೇಳಿದ್ದಾರೆ.

ಈ ಬಗ್ಗೆ ಡೆಮಾಕ್ರಟಿಕ್ ಸೆನೆಟ್ ನಾಯಕ ಚಕ್ ಶುಮರ್ ಹೇಳಿದ್ದು ಹೀಗೆ
ಆದಾಗ್ಯೂ, ದಾಳಿಯ ಮಾದರಿಯ ಶಸ್ತ್ರಾಸ್ತ್ರಗಳನ್ನು ನಿಷೇಧಿಸುವುದು, ಬಂದೂಕುಗಳನ್ನು ಖರೀದಿಸಲು ಕನಿಷ್ಠ ವಯಸ್ಸನ್ನು ಹೆಚ್ಚಿಸುವುದು ಮತ್ತು ಇತರರಲ್ಲಿ ಹೆಚ್ಚಿನ ಸಾಮರ್ಥ್ಯದ ಮ್ಯಾಗಜೀನ್ ಹಾಗೂ ಇತರೆ ಯುದ್ಧ ಸಾಮಗ್ರಿಗಳನ್ನು ನಿಷೇಧಿಸುವುದು ಸೇರಿದಂತೆ ಅನೇಕ ಡೆಮೋಕ್ರಾಟ್‌ಗಳು ಮತ್ತು ಕಾರ್ಯಕರ್ತರು ಒತ್ತಾಯಿಸುತ್ತಿರುವ ಬಲವಾದ ನಿರ್ಣಯಗಳನ್ನು ಈ ಮಸೂದೆಯು ಹೊಂದಿಲ್ಲ ಎಂದು ಡೆಮಾಕ್ರಟಿಕ್ ಸೆನೆಟ್ ನಾಯಕ ಚಕ್ ಶುಮರ್ ಹೇಳಿದ್ದಾರೆ, ಈ ಸಂದರ್ಭದಲ್ಲಿ ಅವರು "ಈ ಉಭಯಪಕ್ಷೀಯ ಗನ್ ಸುರಕ್ಷತಾ ಶಾಸನವು ಪ್ರಗತಿಯಲ್ಲಿದೆ ಮತ್ತು ಜೀವಗಳನ್ನು ಉಳಿಸುತ್ತದೆ  ಆದರೆ, ಇದು ನಮಗೆ ಬೇಕಾದುದೆಲ್ಲವನ್ನು ಹೊಂದಿಲ್ಲ ಆದಾಗ್ಯೂ, ಈ ಶಾಸನದ ಅಗತ್ಯ ಈಗ ತುರ್ತಾಗಿದೆ." ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ನಡುವೆ ಅಮೆರಿಕದಲ್ಲಿ ಬಂದೂಕು ಹಕ್ಕುಗಳನ್ನು ಬೆಂಬಲಿಸುವ ಗುಂಪಾದ ನ್ಯಾಷನಲ್ ರೈಫ್ ಅಸೋಸಿಯೇಷನ್, ಪ್ರಸ್ತುತ ಮಸೂದೆಯ ವಿರುದ್ಧ ಹೇಳಿಕೆಯನ್ನು ನೀಡಿದೆ. ಅದು ಈ ಕುರಿತಂತೆ "ಮಸೂದೆಯು ಪ್ರತಿ ಹಂತದಲ್ಲೂ ವಿಫಲವಾಗಿದೆ. ಹಿಂಸಾತ್ಮಕ ಅಪರಾಧವನ್ನು ನಿಜವಾಗಿಯೂ ಪರಿಹರಿಸಲು ಇದು ಸಶಕ್ತವಾಗಿಲ್ಲ ಎಂದು ಹೇಳಿಕೆ ನೀಡಿದೆ.

ಅತಿ ಹೆಚ್ಚು ಸಾವಿನ ಪ್ರಮಾಣ ಹೊಂದಿದ ದೇಶ
ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಬಂದೂಕುಗಳನ್ನು ಬಳಸಿ ಹಿಂಸೆ ಮಾಡುವ ಪ್ರಕರಣಗಳನ್ನು ಹೋಲಿಸಿದರೆ ಯುಎಸ್ ನಲ್ಲೇ ಅತಿ ಹೆಚ್ಚು ಸಾವಿನ ಪ್ರಮಾಣವನ್ನು ಕಾಣಬಹುದಾಗಿದೆ. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಪ್ರಕಾರ, ಅಮೆರಿಕದಲ್ಲಿ 79% ರಷ್ಟು ನರಹತ್ಯೆಗಳು ಬಂದೂಕು ಸಂಬಂಧಿತ ಹತ್ಯೆಗಳಾಗಿವೆ.


ಇದನ್ನೂ ಓದಿ:  Texas: ಕಂಟೈನರ್​ನಲ್ಲಿ 46 ಜನರ ಮೃತದೇಹ ಪತ್ತೆ! ಆಗಿದ್ದೇನು?

ಪ್ಯೂ ರಿಸರ್ಚ್ ಪ್ರಕಾರ, "2020 ರಲ್ಲಿ, ಅಮೆರಿಕದಲ್ಲಿ 45,222 ಜನರು ಬಂದೂಕು-ಸಂಬಂಧಿತ ಗಾಯಗಳಿಂದ ಸಾವನ್ನಪ್ಪಿದ್ದಾರೆ." ಅಲ್ಲದೆ, "2020 ರಲ್ಲಿ, ಅಮೆರಿಕದಲ್ಲಿನ ಎಲ್ಲಾ ಬಂದೂಕು-ಸಂಬಂಧಿತ ಸಾವುಗಳಲ್ಲಿ 54 ಪ್ರತಿಶತದಷ್ಟು ಆತ್ಮಹತ್ಯೆಗಳಾದರೆ (24,292), 43 ಪ್ರತಿಶತದಷ್ಟು ಕೊಲೆಗಳು (19,384), ಎಂದು ಸಿಡಿಸಿ ಹೇಳಿದೆ.

ಸ್ವಿಸ್ ಮೂಲದ ಸಂಶೋಧನಾ ಯೋಜನೆಯ ಪ್ರಕಾರ, 2018 ರಲ್ಲಿ, ಅಮೆರಿಕದಲ್ಲಿ ಸುಮಾರು 390 ಮಿಲಿಯನ್ ಬಂದೂಕುಗಳು ಚಲಾವಣೆಯಲ್ಲಿದ್ದವು ಎಂದು ಬಿಬಿಸಿ ವರದಿ ಮಾಡಿದೆ. ಅಂದಾಜು ಲೆಕ್ಕದ ಪ್ರಕಾರ, ಅಮೆರಿಕವು ಪ್ರತಿ 100 ಜನರಿಗೆ 120.5 ಬಂದೂಕುಗಳನ್ನು ಹೊಂದಿದೆ.
Published by:Ashwini Prabhu
First published: