Explained: ಕೋವಿಡ್ - 19 ವಿರುದ್ಧದ ವಾಲ್ನೆವಾ ಲಸಿಕೆಯ ವಿಶೇಷತೆಗಳೇನು..? ವಿವರ ಹೀಗಿದೆ..

ಸತ್ತ ವೈರಸ್ ನಮಗೆ ಸೋಂಕು ತಗುಲಿಸುವುದಿಲ್ಲ. ಆದರೆ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸಬಹುದು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

ಕೊರೊನಾ ವೈರಸ್‌ಗೆ (corona virus) ಜಗತ್ತಿನಾದ್ಯಂತ ಮಿಲಿಯನ್ ಗಟ್ಟಲೆ ಜನರು ಬಲಿಯಾಗಿದ್ದಾರೆ. ಲಸಿಕೆ ಇಲ್ಲದೆ ವೈರಸ್‌ ಅಟ್ಟಹಾಸ ಮೆರೆದಿತ್ತು. ಈಗ ಕೋವಿಡ್ - 19 ವಿರುದ್ಧ ಸಾಕಷ್ಟು ಲಸಿಕೆಗಳು (covid vaccine) ಲಭ್ಯವಾಗಿದ್ದು, ಹೊಸ ಸೋಂಕಿತರ ಪ್ರಕರಣಗಳೂ ಕಡಿಮೆಯಾಗುತ್ತಿದೆ. ಹಲವೆಡೆ ಈಗಲೂ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದ್ದರೂ, ಮೊದಲಿದ್ದ ತೀವ್ರತೆ ಈಗಿಲ್ಲ. ಯುಕೆಯ ಆಸ್ಟ್ರಾಜೆನಿಕಾ ಲಸಿಕೆಗೆ (astrazeneca vaccine) ಪರ್ಯಾಯವಾಗಿ ಈಗ ಫ್ರೆಂಚ್‌ ಲಸಿಕಾ ಕಂಪನಿಯೊಂದು ಹೊಸ ಲಸಿಕೆಯನ್ನು ಅಭಿವೃದ್ಧಿಗೊಳಿಸಿದೆ. ವಾಲ್ನೆವಾ ಎಸ್ಇ (Valneva SE) ಎಂಬ ಫ್ರೆಂಚ್‌ ಲಸಿಕಾ ಕಂಪನಿ, ತನ್ನ ನಿಷ್ಕ್ರಿಯಗೊಳಿಸಿದ ಕೋವಿಡ್ - 19 ಲಸಿಕೆ ಅಭ್ಯರ್ಥಿ VLA2001ರ 3 ನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಪ್ರಕಟಿಸಿದೆ. ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆಯಂತೆ ಈ ಲಸಿಕೆ ಪರಿಣಾಮಕಾರಿ ಎಂದು ಫ್ರೆಂಚ್‌ ಲಸಿಕಾ ಕಂಪನಿ ಹೇಳಿಕೊಂಡಿದೆ.


ಲಸಿಕೆಯ ವಿಧ


VLA2001 ಒಂದು ನಿಷ್ಕ್ರಿಯ, ಸಹಾಯಕ ಅಥವಾ ಫೆಸಿಲಿಟೇಟರ್‌ ಲಸಿಕೆ. ಇದರರ್ಥ ಇದು ಸಂಪೂರ್ಣ ಸಾರ್ಸ್- CoV-2 ವೈರಸ್ ಅನ್ನು ನಿಷ್ಕ್ರಿಯಗೊಳಿಸಿದ ರೂಪದಲ್ಲಿ ತಲುಪಿಸುತ್ತದೆ. ರಾಸಾಯನಿಕಗಳು, ಶಾಖ ಅಥವಾ ವಿಕಿರಣವನ್ನು ಬಳಸಿ ವೈರಸ್ ಅನ್ನು ಕೊಲ್ಲಲಾಗುತ್ತದೆ. ಸತ್ತ ವೈರಸ್ ನಮಗೆ ಸೋಂಕು ತಗುಲಿಸುವುದಿಲ್ಲ. ಆದರೆ ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸಬಹುದು.


ಬ್ರಿಸ್ಟಲ್ ವಿಶ್ವವಿದ್ಯಾಲಯದ ಪೀಡಿಯಾಟ್ರಿಕ್ಸ್ ಪ್ರಾಧ್ಯಾಪಕ ಹಾಗೂ ಟ್ರಯಲ್ ಚೀಫ್ ಇನ್ವೆಸ್ಟಿಗೇಟರ್, ಆ್ಯಡಮ್ ಫಿನ್: "ಇದು ಯುಕೆ, ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ನಿಯೋಜಿಸಲಾದ ಲಸಿಕೆಗಳಿಗಿಂತ ಲಸಿಕೆ ತಯಾರಿಕೆಗೆ ಹೆಚ್ಚು ಸಾಂಪ್ರದಾಯಿಕ ವಿಧಾನವಾಗಿದೆ ಮತ್ತು ಈ ಫಲಿತಾಂಶಗಳು ಈ ಲಸಿಕೆ ಅಭ್ಯರ್ಥಿಯು ಸಾಂಕ್ರಾಮಿಕ ರೋಗ ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಹಾದಿಯಲ್ಲಿದೆ ಎಂದು ಸೂಚಿಸುತ್ತದೆ’’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.


ಪೋಲಿಯೋ ಮತ್ತು ಫ್ಲೂ ಲಸಿಕೆಗಳು ನಿಷ್ಕ್ರಿಯ ಲಸಿಕೆಗಳ ಸಾಮಾನ್ಯ ಉದಾಹರಣೆಗಳಾಗಿವೆ. ಭಾರತದ ಕೋವ್ಯಾಕ್ಸಿನ್‌ ಕೂಡ ನಿಷ್ಕ್ರಿಯ ಲಸಿಕೆಯಾಗಿದೆ.


ಪ್ರಸ್ತುತ, UKಯಲ್ಲಿರುವ ಮಾಡರ್ನಾ, ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಸೇರಿ ಯಾವುದೇ ಲಸಿಕೆಗಳು ನಿಷ್ಕ್ರಿಯ ಲಸಿಕೆಗಳಲ್ಲ. ಮಾಡರ್ನಾ ಮತ್ತು ಫೈಜರ್/ಬಯೋಟೆಕ್ mRNA ಲಸಿಕೆಗಳು. ಅವುಗಳು SARS-CoV-2 ಸ್ಪೈಕ್ ಪ್ರೋಟೀನ್‌ನ ಕೋಡ್ ಅನ್ನು ಒಳಗೊಂಡಿರುತ್ತವೆ ಮತ್ತು ಒಮ್ಮೆ ದೇಹದೊಳಗೆ ಸ್ಪೈಕ್ ಪ್ರೋಟೀನ್ ಉತ್ಪಾದಿಸಲು ನಮ್ಮ ದೇಹಕ್ಕೆ ಕಲಿಸುತ್ತವೆ. ನಮ್ಮ ರೋಗನಿರೋಧಕ ವ್ಯವಸ್ಥೆಯು ಇದನ್ನು ಗುರುತಿಸುತ್ತದೆ ಮತ್ತು ಕೋವಿಡ್ -19 ವಿರುದ್ಧ ರೋಗನಿರೋಧಕ ಪ್ರತಿಕ್ರಿಯೆಯನ್ನು ಆರಂಭಿಸುತ್ತದೆ. ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆ SARS-CoV-2 ಸ್ಪೈಕ್ ಪ್ರೋಟೀನ್‌ನ ಕೋಡ್ ಅನ್ನು ಅಡೆನೋ ವೈರಸ್‌ ಎಂಬ ಇನ್ನೊಂದು ವೈರಸ್‌ ಅನ್ನು ಕ್ಯಾರಿಯರ್ ಆಗಿ ಬಳಸಿ ಡೆಲಿವರಿ ಮಾಡುತ್ತದೆ


ಪ್ರಮಾಣಿತ ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿದಾಗ ವಾಲ್ನೆವಾ ಲಸಿಕೆಯ ಡೋಸ್‌ ಸ್ಥಿರವಾಗಿದೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಈ ಹಿನ್ನೆಲೆ, ಇದು ಅತಿ ಕಡಿಮೆ ತಾಪಮಾನದಲ್ಲಿ ಸಾಗಾಟ ಮತ್ತು ಶೇಖರಣೆಯ ಅಗತ್ಯವಿರುವ ಕೋವಿಡ್ ಲಸಿಕೆಗಳಿಗಿಂತ ವಿತರಿಸಲು ಸುಲಭವಾಗಿಸುತ್ತದೆ.


ದಕ್ಷತೆ


VLA2001ನ 3ನೇ ಪರೀಕ್ಷಾ ಹಂತದ ಅಧ್ಯಯನ ಈಗಾಗಲೇ ನಡೆದಿದ್ದು, ಈ ಅಧ್ಯಯನಕ್ಕೆ 'Cov-Compare' ಎಂದು ಹೆಸರಿಡಲಾಗಿತ್ತು. ಇದು 18 ವರ್ಷಕ್ಕಿಂತ ಮೇಲ್ಪಟ್ಟ 4,012 ಭಾಗವಹಿಸುವವರನ್ನು ಒಳಗೊಂಡಿದೆ. ಯುಕೆಯಾದ್ಯಂತ 26 ಸ್ಥಳಗಳಲ್ಲಿ ಪ್ರಯೋಗ ನಡೆಸಲಾಯಿತು.


30 ವರ್ಷಕ್ಕಿಂತ ಮೇಲ್ಪಟ್ಟ 2,972 ಭಾಗವಹಿಸುವವರನ್ನು ರ‍್ಯಾಂಡಮ್‌ ಆಗಿ ಎರಡು ಗುಂಪುಗಳಾಗಿ ನಿಯೋಜಿಸಲಾಗಿದೆ ಮತ್ತು ವಾಲ್ನೆವಾ ಅಥವಾ ಆಕ್ಸ್‌ಫರ್ಡ್/ಅಸ್ಟ್ರಾಜೆನೆಕಾ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದಿದ್ದಾರೆ. 18 ರಿಂದ 29 ವರ್ಷ ವಯಸ್ಸಿನ 1,040 ಭಾಗವಹಿಸುವವರ ಇನ್ನೊಂದು ಗುಂಪು 28 ದಿನಗಳ ಅಂತರದಲ್ಲಿ ಎರಡು ಡೋಸ್ ವಾಲ್ನೆವಾ ಲಸಿಕೆಯನ್ನು ಪಡೆದಿದ್ದಾರೆ.


ಹೆಚ್ಚಿನ ಪ್ರತಿಕಾಯ

ವ್ಯಾಕ್ಸಿನೇಷನ್ ಪಡೆದ ಎರಡು ವಾರಗಳ ನಂತರ, 30 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಕರಲ್ಲಿ, ಆಕ್ಸ್‌ಫರ್ಡ್/ಆಸ್ಟ್ರಾಜೆನಿಕಾ ಲಸಿಕೆಗೆ ಹೋಲಿಸಿದರೆ VLA2001 ಲಸಿಕೆ ಅಭ್ಯರ್ಥಿ ಹೆಚ್ಚಿನ ಮಟ್ಟದ ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಪ್ರಚೋದಿಸಲು ಸಾಧ್ಯವಾಯಿತು ಎಂದು ಫಲಿತಾಂಶಗಳು ತೋರಿಸಿವೆ. ಲಸಿಕೆ ವಿಶಾಲ ಟಿ-ಸೆಲ್ ಪ್ರತಿಕ್ರಿಯೆಗಳನ್ನು ಪ್ರೇರೇಪಿಸಲು ಸಾಧ್ಯವಾಯಿತು ಎಂದು ತಂಡವು ಗಮನಿಸುತ್ತದೆ.


ವಾಲ್ನೆವಾ ಲಸಿಕೆ ಪಡೆದ ಭಾಗವಹಿಸುವವರು ಆಕ್ಸ್‌ಫರ್ಡ್/ಆಸ್ಟ್ರಾಜೆನಿಕಾ ಲಸಿಕೆ ನೀಡಿದ ಗುಂಪಿಗೆ ಹೋಲಿಸಿದರೆ ಕಡಿಮೆ ಮಟ್ಟದ ಪ್ರತಿಕೂಲ ಪರಿಣಾಮಗಳನ್ನು ವರದಿ ಮಾಡಿದ್ದಾರೆ. "1%ಕ್ಕಿಂತ ಕಡಿಮೆ ವಿಶೇಷ ಆಸಕ್ತಿಯ ಪ್ರತಿಕೂಲ ಘಟನೆ ವರದಿ ಮಾಡಿದೆ" ಎಂದು ಪ್ರಕಟಣೆಯಲ್ಲಿ ಸೇರಿಸಲಾಗಿದೆ.


ಈ ವರ್ಷಾಂತ್ಯದಲ್ಲಿ ಅನುಮೋದನೆ

ವಾಲ್ನೆವಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಾಮಸ್ ಲಿಂಗಲ್‌ಬ್ಯಾಕ್, ಕಂಪನಿಯು ಶೀಘ್ರದಲ್ಲೇ ಡೇಟಾವನ್ನು ಯುಕೆ ಔಷಧಗಳು ಮತ್ತು ಆರೋಗ್ಯ ರಕ್ಷಣಾ ಉತ್ಪನ್ನಗಳ ನಿಯಂತ್ರಣ ಸಂಸ್ಥೆಗೆ ಸಲ್ಲಿಸಲಿದ್ದು, ಈ ವರ್ಷದ ಅಂತ್ಯದೊಳಗೆ ಸಂಭಾವ್ಯ ಆರಂಭಿಕ ಅನುಮೋದನೆಯನ್ನು ನಿರೀಕ್ಷಿಸಲಾಗಿದೆ ಎಂದು ಸುದ್ದಿಗಾರರಿಗೆ ಹೇಳಿದರು.


ಇದನ್ನು ಓದಿ: ಕಡೆಗೂ ಆಗ್ರಾಕ್ಕೆ ಭೇಟಿ ನೀಡಲು ಪ್ರಿಯಾಂಕಾ ಗಾಂಧಿಗೆ ಅನುಮತಿ

ಈ ವಾಲ್ನೆವಾ ಲಸಿಕೆಯ ಮಾಹಿತಿ ಅಥವಾ ಅಪ್‌ಡೇಟ್‌ ಬಳಿಕ ಫ್ರೆಂಚ್‌ ಮೂಲದ ಕಂಪನಿಯ ಷೇರುಗಳ ಆರಂಭಿಕ ಅಧಿವೇಶನ ವಹಿವಾಟಿನಲ್ಲಿ 37.5%ನಷ್ಟು ಏರಿಕೆ ಕಂಡಿದೆ. ಸೆಪ್ಟೆಂಬರ್‌ನಲ್ಲಿ ವಾಲ್ನೆವಾ ಕಂಪನಿಯ ಷೇರುಗಳು ಕುಸಿತ ಕಂಡಿದ್ದವು.


ಇನ್ನು, ಲಸಿಕೆಯ ಡೋಸ್‌ಗಳು ಹೆಚ್ಚು ಲಭ್ಯವಾಗುತ್ತಿದ್ದಂತೆ ಸ್ವಯಂಸೇವಕರಿಗೆ ಪ್ಲೇಸ್‌ಬೊ ನೀಡುವ ಬದಲು, ಈಗಾಗಲೇ ರೆಗ್ಯುಲೇಟರ್ ಅನುಮೋದಿಸಿದ ಲಸಿಕೆಯ ತಮ್ಮ ಲಸಿಕೆಗಳನ್ನು ಪರೀಕ್ಷಿಸುವ ಬೆರಳೆಣಿಕೆಯಷ್ಟು ಲಸಿಕೆ ಅಭಿವರ್ಧಕರಲ್ಲಿ ವಾಲ್ನೆವಾ ಕೂಡ ಒಬ್ಬರು.


ಇದನ್ನು ಓದಿ: ಗೃಹ ಸಾಲ ಪಡೆದುಕೊಳ್ಳುವ ಮುನ್ನ ಅರಿತುಕೊಳ್ಳಬೇಕಾಗಿರುವ ಅಂಶಗಳೇನು..? ಇಲ್ಲಿದೆ ವಿವರ

"ಈ ಫಲಿತಾಂಶಗಳು ಸಾಮಾನ್ಯವಾಗಿ ನಿಷ್ಕ್ರಿಯಗೊಳಿಸಿದ ಸಂಪೂರ್ಣ ವೈರಸ್ ಲಸಿಕೆಗಳಿಗೆ ಸಂಬಂಧಿಸಿದ ಅನುಕೂಲಗಳನ್ನು ದೃಢಪಡಿಸುತ್ತದೆ" ಎಂದು ಮುಖ್ಯ ಕಾರ್ಯನಿರ್ವಾಹಕ ಥಾಮಸ್ ಲಿಂಗಲ್‌ಬಾಚ್ ಹೇಳಿದರು. ಹಾಗೂ, COVID-19 ವಿರುದ್ಧದ ಹೋರಾಟಕ್ಕೆ ಕಂಪನಿಯು ಮಹತ್ವದ ಕೊಡುಗೆ ನೀಡುತ್ತದೆ ಎಂದು ನಂಬಿರುವುದಾಗಿಯೂ ತಿಳಿಸಿದ್ದಾರೆ.


ಇನ್ನು, ಲಸಿಕೆಯ ಅಭ್ಯರ್ಥಿಯಾದ ವಾಲ್ನೆವಾ 5 ರಿಂದ 12 ವರ್ಷ ವಯಸ್ಸಿನ ಮಕ್ಕಳಲ್ಲಿ ಪ್ರಯೋಗಗಳಿಗೆ ಮತ್ತು ಬೂಸ್ಟರ್‌ ಡೋಸ್‌ ಅಗತ್ಯವಿರುವವರಿಗೆ VLA2001 ಲಸಿಕೆ ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲು ವಾಲ್ನೆವಾ ಪ್ರಾಯೋಜಿತ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ ಎಂದೂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಥಾಮಸ್‌ ಲಿಂಗಲ್‌ಬಾಚ್‌ ಸುದ್ದಿಗಾರರಿಗೆ ಹೇಳಿದರು.


First published: