ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ (Karnataka assembly election) ಕಾಂಗ್ರೆಸ್ (Congress) ಗೆದ್ದು ಬೀಗಿದೆ. ಮತದಾರರ ಮನಸ್ಸು (Voters) ಸೆಳೆಯಲು ಕಾಂಗ್ರೆಸ್‌ಗೆ ಕಷ್ಟವಾಯ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಗೆದ್ದ ಬಳಿಕ ಸಿಎಂ (CM) ಯಾರು ಆಗಬೇಕು, ಸ್ಪೀಕರ್ (Speaker) ಯಾರಾಗಬೇಕು ಹಾಗೂ ಮಂತ್ರಿಸ್ಥಾನ (Minister) ಯಾರ್ಯಾರಿಗೆ ನೀಡಬೇಕು ಎಂಬ ಬಗ್ಗೆ ಮೀಟಿಂಗ್ ಮೇಲೆ ಮೀಟಿಂಗ್, ಲಾಬಿ ಮೇಲೆ ಲಾಬಿ ನಡೆದಿದ್ದಂತೂ ಸುಳ್ಳಲ್ಲ. ಕೊನೆಗೂ ಹರಸಾಹಸದ ಬಳಿಕ ಸಿದ್ದರಾಮಯ್ಯ (Siddaramaiah) ಸಿಎಂ ಆದ್ರೆ, ಡಿಕೆ ಶಿವಕುಮಾರ್ (DK Shivakumar) ಡಿಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಇದಾದ ಬಳಿಕ ಸ್ಪೀಕರ್ ಸ್ಥಾನ ಯಾರಿಗೆ ಕೊಡ್ಬೇಕು ಎಂಬ ಬಗ್ಗೆ ಚರ್ಚೆಯಾದಾಗ ಯಾರೊಬ್ಬರೂ ಉತ್ಸಾಹ ತೋರಿಲ್ಲ. ಕೊನೆಗೆ ಆರ್‌ವಿ ದೇಶಪಾಂಡೆಯವರನ್ನು (R.V. Deshapande) ಹಂಗಾಮಿ ಸ್ಪೀಕರ್ ಆಗಿ ನೇಮಿಸಲಾಯ್ತು. ಬಳಿಕ ಮಂಗಳೂರು (Mangaluru) ಕ್ಷೇತ್ರದ ಕಾಂಗ್ರೆಸ್ ಶಾಸಕ ಯು.ಟಿ. ಖಾದರ್ (U.T. Khader) ಅವರನ್ನು ವಿಧಾನಸಭಾ ಅಧ್ಯಕ್ಷ ಅಥವಾ ಸ್ಪೀಕರ್ ಆಗಿ ನೇಮಿಸಲಾಗಿದೆ. ಖಾದರ್‌ಗೆ ಮಂತ್ರಿ ಸ್ಥಾನದ ಬದಲು ಸ್ಪೀಕರ್ ಸ್ಥಾನ ನೀಡಿದ್ದಕ್ಕೆ ಕರಾವಳಿ ಕಾಂಗ್ರೆಸ್‌ನಲ್ಲೇ ಅಸಮಾಧಾನ ವ್ಯಕ್ತವಾಗಿದೆ. ಈ ಹಿಂದೆ ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದ ಖಾದರ್ಗೆ, ಈ ಬಾರಿಯೂ ಉತ್ತಮ ಖಾತೆ ನೀಡಬಹುದಿತ್ತು. ಅದರ ಬದಲಾಗಿ ಸ್ಪೀಕರ್ ಸ್ಥಾನಕ್ಕೆ ನೇಮಿಸಿದ್ದು ಕರಾವಳಿ ಭಾಗದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗೋ ಸಾಧ್ಯತೆ ಇದೆ ಅಂತ ವಿಶ್ಲೇಷಿಸಲಾಗುತ್ತಿದೆ.
ಯು.ಟಿ. ಖಾದರ್ ಯಾರು?
ಯು.ಟಿ. ಖಾದರ್ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ. ಅಕ್ಟೋಬರ್ 12, 1969 ರಂದು ಜನಿಸಿದ ಖಾದರ್ ಅವರ ತಂದೆ ಯು.ಟಿ. ಫರೀದ್ ಕೂಡ ಶಾಸಕರಾಗಿದ್ದರು. 2007ರಲ್ಲಿ ತಂದೆ ನಿಧನಾ ನಂತರ ಉಪಚುನಾವಣೆಯಲ್ಲಿ ಗೆದ್ದು, ಶಾಸಕರಾದರು.
ಅಲ್ಲಿಂದ ಸತತವಾಗಿ 5 ಬಾರಿ ಗೆದ್ದಿರುವ ಖಾದರ್, ಸಚಿವರಾಗಿಯೂ ಕೆಲಸ ಮಾಡಿದ್ದಾರೆ. 2013-18ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿ ಕೆಲಸ ಮಾಡಿದ್ರು. 2018-19ರಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಖಾದರ್ ಅವರು ವಸತಿ ಮತ್ತು ನಗರಾಭಿವೃದ್ಧಿ ಖಾತೆಗಳನ್ನು ಹೊಂದಿದ್ದರು.
ಇದನ್ನೂ ಓದಿ: Rahul Gandhi: ಭಾರತ್ ಜೋಡೋ ಯಾತ್ರೆಯಿಂದ ರಾಹುಲ್ ಗಾಂಧಿಗೆ ಸಿಕ್ತಾ ಪೊಲಿಟಿಕಲ್ ಪವರ್?
ಆರೋಗ್ಯ ಸಚಿವರಾಗಿ ಉತ್ತಮ ಸೇವೆ
ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಯುಟಿ ಖಾದರ್ ಆರೋಗ್ಯ ಸಚಿವರಾಗಿದ್ದಾಗ ಉತ್ತಮವಾಗಿ ಕೆಲಸ ಮಾಡಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು.
ಮತ್ತೊಮ್ಮೆ ಅವಕಾಶ ಸಿಗದಿರುವುದಕ್ಕೆ ಅಸಮಾಧಾನ
ಈ ಬಾರಿಯೂ ಖಾದರ್‌ಗೆ ಸಚಿವ ಸ್ಥಾನ ಸಿಗುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಖಾದರ್‌ಗೆ ಸಚಿವ ಸ್ಥಾನದ ಬದಲು ಸ್ಪೀಕರ್ ಸ್ಥಾನ ನೀಡಲಾಗಿದೆ. ಇದು ಆ ಭಾಗದ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.
ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗುತ್ತಾ?
ಹಿಂದುತ್ವದ ಭದ್ರಕೋಟೆ ಎನಿಸಿಕೊಂಡ ಕರಾವಳಿಯಲ್ಲಿ 18 ಕ್ಷೇತ್ರಗಳಿವೆ. ಅದರಲ್ಲೂ ದಕ್ಷಿಣ ಕನ್ನಡದಲ್ಲಿ ಬಿಜೆಪಿ ಭಯಬೇರಿ ಬಾರಿಸಿದೆ. ಈ ಪೈಕಿ ಕಾಂಗ್ರೆಸ್‌ನಿಂದ ಗೆದ್ದವರು ಯುಟಿ ಖಾದರ್ ಹಾಗೂ ಪುತ್ತೂರಿನ ಅಶೋಕ್ ರೈ ಇಬ್ಬರೇ, ಹೀಗಾಗಿ ಖಾದರ್‌ಗೆ ಮಂತ್ರಿಸ್ಥಾನ ನೀಡಿದ್ದರೆ ಮಂಗಳೂರಲ್ಲಿ ಕಾಂಗ್ರೆಸ್‌ಗೆ ಬಲ ಬರುತ್ತಿತ್ತು. ಆದರೆ ಈಗ ಮಂತ್ರಿಸ್ಥಾನ ನೀಡದೇ ಇರುವುದರಿಂದ ಹಿನ್ನಡೆಯಾಗುವ ಸಾಧ್ಯತೆ ಇದೆ ಅಂತ ವಿಶ್ಲೇಷಿಸಲಾಗುತ್ತಿದೆ.
ಕಾಂಗ್ರೆಸ್ ಮುಖಂಡರ ಬೇಸರ
ಖಾದರ್ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಇಲ್ಲದಿರುವುದು ಕರಾವಳಿ ಭಾಗದಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸಿದರು. ಕೇವಲ ಕೋಮು ರಾಜಕಾರಣವಲ್ಲ, ನಾನಾ ವಿಷಯಗಳ ಬಗ್ಗೆ ಮಾತನಾಡುವ ಖಾದರ್ ಸಂಪುಟದಲ್ಲಿ ಇರದೇ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ.
ಇದನ್ನೂ ಓದಿ: DCM: ಉಪಮುಖ್ಯಮಂತ್ರಿ ಅನ್ನೋದು ಅಧಿಕಾರವಿಲ್ಲದ ಅಲಂಕಾರಿಕ ಹುದ್ದೆಯೇ? ಡಿಸಿಎಂಗೆ ಯಾವ ಪವರ್ ಇರುತ್ತದೆ?
ಕರಾವಳಿಯಲ್ಲಿ ಕಾಂಗ್ರೆಸ್‌ಗೀಗ ನಾಯಕರ ಕೊರತೆ
ಸದ್ಯ ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಾಂಗ್ರೆಸ್‌ಗೆ ಸಮರ್ಥ ನಾಯಕರೇ ಇಲ್ಲ ಎಂಬಂತಾಗಿದೆ. ಬಿ. ರಮಾನಾಥ್ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ವಸಂತ ಬಂಗೇರ ಅವರಂತಹ ಹಿರಿಯ ನಾಯಕರು ಚುನಾವಣಾ ರಾಜಕೀಯದಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಯುಟಿ ಖಾದರ್ ಅವರು ಪಕ್ಷ ಮುನ್ನಡೆಸಬಹುದು ಎಂಬ ನಿರೀಕ್ಷೆ ಇತ್ತು. ಇದೀಗ ಸ್ಪೀಕರ್ ಸ್ಥಾನಕ್ಕೆ ಏರಿರೋದ್ರಿಂದ ಆ ಅವಕಾಶ ತಪ್ಪಿದಂತಾಗಿದೆ. ಹೀಗಾಗಿ ಸ್ಪೀಕರ್ ಆಗುವುದಕ್ಕಿಂತ ಯುಟಿ ಖಾದರ್ ಶಾಸಕರಾಗಿದ್ದರೆ ಚೆನ್ನಾಗಿತ್ತು. ಸಚಿವ ಪಟ್ಟ ಸಿಗದಿದ್ದರೂ ಪರವಾಗಿರಲಿಲ್ಲ ಎಂದು ಬೆಂಬಲಿಗರು ಹೇಳುತ್ತಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ