Explained: ಮತ್ತೆ ಮಾಸ್ಕ್​ ಧರಿಸುವುದನ್ನು ಕಡ್ಡಾಯ ಮಾಡಿದ ಅಮೆರಿಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಾಸ್ಕ್ ಧರಿಸುವಿಕೆಯ ಜೊತೆಗೆ ಸಾಮಾಜಿಕ ಅಂತರ ಹಾಗೂ ಕೈಗಳ ಸ್ವಚ್ಛತೆ ಕಾಪಾಡುವಂತೆ ತಿಳಿಸಿ ಕೋವಿಡ್‌ನ ನಿರ್ಮೂಲನೆ ಮಾರ್ಗಸೂಚಿಗಳನ್ನು ಸಿಡಿಸಿ ಪ್ರಕಟಿಸಿದೆ. 

  • Share this:

    ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆಗಾಗಿ ಅಮೆರಿಕಾ ಕೇಂದ್ರವು ಮಾಸ್ಕ್ ಧರಿಸುವ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಲಸಿಕೆ ಹಾಕಿಸಿದವರು ಹೆಚ್ಚಿನ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ ಎಂಬ ನಿಯಮವನ್ನು ಮೇ ತಿಂಗಳಿನಲ್ಲಿ ಘೋಷಿಸಿದ್ದರೂ ದೇಶದಲ್ಲಿ ಕೊರೋನಾ ಉಲ್ಬಣಗೊಳ್ಳುತ್ತಿದ್ದು ಈಗ ಪುನಃ ಮಾಸ್ಕ್ ಧರಿಸುವ ಹಿಂದಿನ ಆದೇಶವನ್ನು ಜಾರಿಗೆ ತಂದಿದೆ. ಕೋವಿಡ್ ಸಮಯದಲ್ಲಿ ಮಾಸ್ಕ್ ಕಡ್ಡಾಯವೆಂಬುದು ಈಗ ದೃಢೀಕೃತವಾಗಿದ್ದು ಮಾಸ್ಕ್ ಎಂಬುದು ಇನ್ನು ಮುಂದೆ ಜನಜೀವನದಲ್ಲಿ ಕಡ್ಡಾಯವಾಗಲಿದೆಯೇ ಎಂಬುದು ಜನರ ಮುಂದಿರುವ ಸವಾಲಾಗಿದೆ.


    ಸಿಡಿಸಿ ಏನು ಹೇಳಿತ್ತು?


    ಪೂರ್ಣವಾಗಿ ಲಸಿಕೆ ಪಡೆದುಕೊಂಡವರು ಇನ್ನು ಮುಂದೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲವೆಂಬ ನಿಯಮವನ್ನು ಸಿಡಿಸಿ ಜಾರಿಗೆ ತಂದಿತ್ತು. ಆದರೆ ಜುಲೈ 27 ರ ನಂತರ ಸಿಡಿಸಿ ಲಸಿಕೆ ಹಾಕಿಸಿಕೊಂಡವರೂ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ ಎಂಬ ಹೊಸ ಮಾರ್ಗಸೂಚಿಯನ್ನು ಜಾರಿಗೆ ತಂದಿತು. ಮಾಸ್ಕ್ ಧರಿಸುವುದರಿಂದ ಕೋವಿಡ್ ರೂಪಾಂತರಗಳ ವರ್ಗಾವಣೆಯಾಗುವುದಿಲ್ಲ ಎಂದು ಕೂಡ ತಿಳಿಸಿತ್ತು.


    ನಿಯಮದಲ್ಲಿ ಬದಲಾವಣೆಯಾಗಲು ಕಾರಣವೇನು?


    ಸಿಡಿಸಿ ನಿರ್ದಿಷ್ಟಪಡಿಸಿರುವಂತೆ ದೇಶದಲ್ಲಿ ಡೆಲ್ಟಾ ಆಕ್ರಮಣ ದಿನೇ ದಿನೇ ಪ್ರಾಬಲ್ಯ ಪಡೆದುಕೊಳ್ಳುತ್ತಿದ್ದು ತ್ವರಿತ ರಕ್ಷಣೆಯನ್ನು ಪಡೆಯಲು ಮಾಸ್ಕ್ ಧರಿಸುವಿಕೆಯೊಂದೇ ಪರಿಹಾರ ಎಂದು ತಿಳಿಸಿದೆ. ಅಮೆರಿಕಾದ ಆರೋಗ್ಯ ತಜ್ಞರು ತಿಳಿಸಿರುವಂತೆ ಡೆಲ್ಟಾದ ಪ್ರಾಬಲ್ಯ ಹೆಚ್ಚು ಕಾಡುತ್ತಿರುವುದು ಇನ್ನೂ ಲಸಿಕೆ ಪಡೆದುಕೊಳ್ಳದವರಲ್ಲಾಗಿದೆ. ಲಸಿಕೆ ಹಾಕಿಸಿಕೊಂಡವರಲ್ಲಿ ಈ ಸೋಂಕಿನ ಪ್ರಗತಿಯನ್ನು ಪತ್ತೆಹಚ್ಚುವುದು ತುಸು ಕಷ್ಟವಾಗಿದೆ. ಭಾರತದಲ್ಲಿ 2020 ರಲ್ಲಿ ಪತ್ತೆಯಾದ ಡೆಲ್ಟಾ ರೂಪಾಂತರವು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು ಎಂಬುದು ತಜ್ಞರ ಕಳವಳವಾಗಿದೆ.


    ಮಾಸ್ಕ್ ಧರಿಸುವಿಕೆಯ ಮಾರ್ಗಸೂಚಿಗಳು ಏನು?


    ಆರಂಭದಲ್ಲಿ ಸಿಡಿಸಿ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಮಾಸ್ಕ್ ಧರಿಸುವ ಕುರಿತು ಪ್ರಕಟಿಸಿದ್ದ ಅದೇ ಮಾರ್ಗಸೂಚಿಗಳನ್ನು ಪ್ರಸ್ತುತ ಯುಎಸ್‌ನಲ್ಲಿ ಜಾರಿಗೆ ತರಲಾಗಿದೆ. ಕಾರ್ಮಿಕರಿಗೆ ಮಾಸ್ಕ್‌ಗಳು ಹೆಚ್ಚು ಅಗತ್ಯವಿದ್ದು ಸಾಕಷ್ಟು ಪ್ರಮಾಣದಲ್ಲಿ ಮಾಸ್ಕ್‌ಗಳು ಇವರಿಗೆ ದೊರೆಯುತ್ತದೆ ಎಂಬುದನ್ನು ಖಚಿತಪಡಿಸಬೇಕಿದೆ.


    ಮಾಸ್ಕ್ ಧರಿಸುವಿಕೆಯ ಜೊತೆಗೆ ಸಾಮಾಜಿಕ ಅಂತರ ಹಾಗೂ ಕೈಗಳ ಸ್ವಚ್ಛತೆ ಕಾಪಾಡುವಂತೆ ತಿಳಿಸಿ ಕೋವಿಡ್‌ನ ನಿರ್ಮೂಲನೆ ಮಾರ್ಗಸೂಚಿಗಳನ್ನು ಸಿಡಿಸಿ ಪ್ರಕಟಿಸಿದೆ.


    ಇದನ್ನು ಓದಿ: ಕೋವಿಡ್ - 19 ಪ್ರತಿಕಾಯಗಳು ದೇಹದಲ್ಲಿ ಎಷ್ಟು ಸಮಯಗಳವರೆಗೆ ಇರುತ್ತವೆ? ಅಧ್ಯಯನದ ವರದಿ ಏನು?

    ಮಾಸ್ಕ್ ಧರಿಸದಿರುವುದಕ್ಕೆ ಅಧಿಕೃತ ಅನುಮತಿ ಇದೆಯೇ?


    ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ಕೋವಿಡ್ ಮಾರ್ಗಸೂಚಿಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿತು. ನಿರ್ಬಂಧಗಳನ್ನು ತೆಗೆದುಹಾಕುವ ತೀರ್ಮಾನವನ್ನು ಮಾಡಿತು. ಸಾರ್ವಜನಿಕ ಸ್ಥಳ, ಕಚೇರಿ ಹಾಗೂ ನೈಟ್‌ಕ್ಲಬ್‌ಗಳನ್ನು ಪುನಃ ಆರಂಭಿಸುವುದರೊಂದಿಗೆ ಮಾಸ್ಕ್ ನಿರ್ಬಂಧವನ್ನು ಕೈಬಿಡಲಾಯಿತು.


    ದೇಶವು ಇನ್ನೇನು ಸಹಜ ಸ್ಥಿತಿಗೆ ಮರಳಬೇಕು ಎಂಬಷ್ಟರಲ್ಲಿಯೇ ಇಂಗ್ಲೆಂಡ್ ಆಧಾರಿತ ಮಾಧ್ಯಮ ಪ್ರವರ್ತಕರು ಮಾಸ್ಕ್‌ಗಳ ನಿರ್ಬಂಧ ಕೈಬಿಡುವುದು ಅಷ್ಟೊಂದು ಒಳ್ಳೆಯ ಅಭಿಪ್ರಾಯವಲ್ಲ ಎಂದು ಸಲಹೆ ನೀಡಿದರು. ಇಂಗ್ಲೆಂಡ್‌ನ ಅದೇ ಮಾರ್ಗವನ್ನು ಅನುಸರಿಸಿದ ಸ್ವೀಡನ್, ಇಸ್ರೇಲ್, ನ್ಯೂಜಿಲ್ಯಾಂಡ್ ಮಾಸ್ಕ್ ಬಳಕೆಯನ್ನು ಸಡಿಲಗೊಳಿಸಿದವು. ಆದರೆ ಡೆಲ್ಟಾ ರೂಪಾಂತರಗಳು ಪ್ರಬಲಗೊಳ್ಳುತ್ತಿದ್ದಂತೆಯೇ ಈ ದೇಶಗಳು ಹಿಂದಿನ ನಿಯಮಗಳನ್ನು ಪುನಃ ಜಾರಿಗೆ ತಂದಿವೆ. ಅಂತೂ ಲಸಿಕೆಯಿಂದ ಪೂರ್ಣ ರಕ್ಷಣೆ ಖಾತ್ರಿಯಾದ ಬಳಿಕವೇ ಮಾಸ್ಕ್ ಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸಲಾಗುತ್ತದೆ ಎಂಬುದು ಈ ರಾಷ್ಟ್ರಗಳ ತಜ್ಞರ ಅಭಿಪ್ರಾಯವಾಗಿದೆ.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    First published: