HOME » NEWS » Explained » UPSC RECRUITMENT THROUGH LATERAL ENTRY TO THE CENTRAL GOVERNMENT POST STG SESR

ಕೇಂದ್ರ ಸರ್ಕಾರಿ ಹುದ್ದೆಗೆ ಲ್ಯಾಟರಲ್ ಪ್ರವೇಶದ ಮೂಲಕ ಯುಪಿಎಸ್ಸಿ ನೇಮಕಾತಿ: ಇದರ ಹಿಂದಿನ ಕಾರಣ, ಪ್ರಕ್ರಿಯೆ ಮತ್ತು ವಿವಾದಗಳ ಬಗ್ಗೆ ಮಾಹಿತಿ ಇಲ್ಲಿದೆ..

ಲ್ಯಾಟರಲ್ ಎಂಟ್ರಿ ಮೂಲಕ ಅಧಿಕಾರಿಯಾಗುವ ಈ ಸರ್ಕಾರಿ ಕಾರ್ಯದರ್ಶಿಯನ್ನು ಮೂರರಿಂದ ಐದು ವರ್ಷಗಳವರೆಗೆ ಗುತ್ತಿಗೆ ಪಡೆಯುತ್ತಾರೆ. ಆದರೆ, ಈ ಪೋಸ್ಟ್​ಗಳಿಗೆ ಮೀಸಲಾತಿ ಇರುವುದಿಲ್ಲ

news18-kannada
Updated:March 1, 2021, 6:57 PM IST
ಕೇಂದ್ರ ಸರ್ಕಾರಿ ಹುದ್ದೆಗೆ ಲ್ಯಾಟರಲ್ ಪ್ರವೇಶದ ಮೂಲಕ ಯುಪಿಎಸ್ಸಿ ನೇಮಕಾತಿ: ಇದರ ಹಿಂದಿನ ಕಾರಣ, ಪ್ರಕ್ರಿಯೆ ಮತ್ತು ವಿವಾದಗಳ ಬಗ್ಗೆ ಮಾಹಿತಿ ಇಲ್ಲಿದೆ..
ಪ್ರಾತಿನಿಧಿಕ ಚಿತ್ರ.
  • Share this:
ಕೇಂದ್ರ ಸಾರ್ವಜನಿಕ ಸೇವಾ ಆಯೋಗವು (ಯುಪಿಎಸ್ಸಿ) "ಜಂಟಿ ಕಾರ್ಯದರ್ಶಿ ಮತ್ತು ಕೇಂದ್ರ ಸರ್ಕಾರಿ ಇಲಾಖೆಗಳಲ್ಲಿ 27 ನಿರ್ದೇಶಕರ ಹುದ್ದೆಗಳಿಗೆ" ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆ ನೀಡಲು ಸಿದ್ಧರಿರುವ ಪ್ರತಿಭಾವಂತ ಮತ್ತು ಪ್ರೇರಿತ ಭಾರತೀಯ ಪ್ರಜೆಗಳಿಂದ" ಅರ್ಜಿಗಳನ್ನು ಕೋರಿ ಪ್ರಕಟಣೆ ಹೊರಡಿಸಿದೆ. ಲ್ಯಾಟರಲ್ ಎಂಟ್ರಿ ಮೂಲಕ ಅಧಿಕಾರಿಯಾಗುವ ಈ ಸರ್ಕಾರಿ ಕಾರ್ಯದರ್ಶಿಯನ್ನು ಮೂರರಿಂದ ಐದು ವರ್ಷಗಳವರೆಗೆ ಗುತ್ತಿಗೆ ಪಡೆಯುತ್ತಾರೆ. ಆದರೆ, ಈ ಪೋಸ್ಟ್​ಗಳಿಗೆ ಮೀಸಲಾತಿ ಇರುವುದಿಲ್ಲ”, ಅಂದರೆ ಎಸ್ಸಿಗಳು, ಎಸ್ಟಿಗಳು ಮತ್ತು ಒಬಿಸಿಗಳಿಗೆ ಸಾಮಾನ್ಯ ಹಾಗೂ ಈ ಹಿಂದಿನ ಪದ್ಧತಿಯಂತೆ ಯಾವುದೇ ಕೋಟಾಗಳಿಲ್ಲ.

‘ಲ್ಯಾಟರಲ್ ಎಂಟ್ರಿ’ ಎಂದರೇನು..?

ತನ್ನ ಮೂರು ವರ್ಷಗಳ ಕ್ರಿಯಾ ಕಾರ್ಯಸೂಚಿಯಲ್ಲಿ ನೀತಿ ಆಯೋಗ ಮತ್ತು ಸೆಕ್ಟರಲ್ ಗ್ರೂಪ್ ಆಫ್ ಸೆಕ್ರೆಟರೀಸ್ (ಎಸ್ಜಿಒಎಸ್) 2017 ರ ಫೆಬ್ರವರಿಯಲ್ಲಿ ಸಲ್ಲಿಸಿದ ವರದಿಯಲ್ಲಿ ಕೇಂದ್ರ ಸರ್ಕಾರದಲ್ಲಿ ಮಧ್ಯಮ ಮತ್ತು ಹಿರಿಯ ನಿರ್ವಹಣಾ ಹಂತಗಳಲ್ಲಿ ಸಿಬ್ಬಂದಿಯನ್ನು ಸೇರಿಸಲು ಶಿಫಾರಸು ಮಾಡಿತ್ತು. ಸಾಮಾನ್ಯ ಕೋರ್ಸ್​ನಲ್ಲಿ ಆಯ್ಕೆಯಾದ ಅಖಿಲ ಭಾರತ ಸೇವೆಗಳು, ಕೇಂದ್ರ ನಾಗರಿಕ ಸೇವೆಗಳಿಂದ ವೃತ್ತಿ ಅಧಿಕಾರಿಗಳು ಮಾತ್ರ ಆಗಿದ್ದು, ಈ ಹಿನ್ನೆಲೆ ಈ 'ಲ್ಯಾಟರಲ್ ಎಂಟ್ರಿ' ಮೂಲಕ ಆಯ್ಕೆಯಾದವರು ಕೇಂದ್ರ ಕಾರ್ಯದರ್ಶಿಯ ಭಾಗವಾಗಲಿದ್ದಾರೆ.

ಕ್ಯಾಬಿನೆಟ್ ನೇಮಕಾತಿ ಸಮಿತಿಯಿಂದ (ಎಸಿಸಿ) ನೇಮಕಗೊಂಡ ಜಂಟಿ ಕಾರ್ಯದರ್ಶಿ, ಇಲಾಖೆಯಲ್ಲಿ ಮೂರನೇ ಅತ್ಯುನ್ನತ ಶ್ರೇಣಿಯನ್ನು (ಕಾರ್ಯದರ್ಶಿ ಮತ್ತು ಹೆಚ್ಚುವರಿ ಕಾರ್ಯದರ್ಶಿ ನಂತರ) ಹೊಂದಿದ್ದಾರೆ ಮತ್ತು ಇಲಾಖೆಯಲ್ಲಿ ಒಂದು ವಿಭಾಗದ ಆಡಳಿತ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ನಿರ್ದೇಶಕರ ಹುದ್ದೆ ಜಂಟಿ ಕಾರ್ಯದರ್ಶಿಗಿಂತ ಕೆಳಗಿನ ಶ್ರೇಣಿಯಾಗಿದೆ.

‘ಲ್ಯಾಟರಲ್ ಎಂಟ್ರಿ’ಗೆ ಸರ್ಕಾರ ನೀಡುತ್ತಿರುವ ಸಮರ್ಥನೆ ಏನು..?

ಜುಲೈ 4, 2019 ರಂದು, ಡಿಒಪಿಟಿ ರಾಜ್ಯ ಸಚಿವ ಜಿತೇಂದ್ರ ಸಿಂಗ್, "ಸರ್ಕಾರವು ಅವರ ವಿಶೇಷ ಜ್ಞಾನ ಮತ್ತು ಡೊಮೇನ್ ಪ್ರದೇಶದಲ್ಲಿನ ಪರಿಣತಿಯನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ಕೆಲವು ಪ್ರಮುಖ ವ್ಯಕ್ತಿಗಳನ್ನು ಸರ್ಕಾರದಲ್ಲಿ ನಿರ್ದಿಷ್ಟ ಹುದ್ದೆಗಳಿಗೆ ನೇಮಕ ಮಾಡಿದೆ'' ಎಂದು ರಾಜ್ಯ ಸಭೆಯಲ್ಲಿ ಹೇಳಿದರು.

ಅಲ್ಲದೆ, ಇದೇ ರೀತಿಯ ಮತ್ತೊಂದು ಪ್ರಶ್ನೆಗೆ ಮೇಲ್ಮನೆಯಲ್ಲೇ ಉತ್ತರಿಸಿದ್ದ ಸಚಿವರು, "ಲ್ಯಾಟರಲ್ ನೇಮಕಾತಿಯು ಹೊಸ ಪ್ರತಿಭೆಗಳನ್ನು ತರುವ ಮತ್ತು ಮಾನವಶಕ್ತಿಯ ಲಭ್ಯತೆಯನ್ನು ಹೆಚ್ಚಿಸುವ ಅವಳಿ ಉದ್ದೇಶಗಳನ್ನು ಸಾಧಿಸುವ ಗುರಿಯನ್ನು ಹೊಂದಿದೆ." ಎಂದು ಹೇಳಿದ್ದರು.ಸರ್ಕಾರ ಈವರೆಗೆ ‘ಲ್ಯಾಟರಲ್ ಎಂಟ್ರಿ’ಮೂಲಕ ನೇಮಕಾತಿ ನಡೆಸಿದ್ದಾರಾ..?
ಅಂತಹ ನೇಮಕಾತಿಗಳ ಎರಡನೇ ರೌಂಡ್ಗೆ ಈ ಹೊಸ ಪ್ರಕಟಣೆಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಈ ಹಿಂದೆ ವಿವಿಧ ಸಚಿವಾಲಯಗಳು ,ಇಲಾಖೆಗಳಲ್ಲಿ ಜಂಟಿ ಕಾರ್ಯದರ್ಶಿ 10 ಹುದ್ದೆಗಳಿಗೆ ಮತ್ತು ಉಪ ಕಾರ್ಯದರ್ಶಿ. ನಿರ್ದೇಶಕರ ಮಟ್ಟದಲ್ಲಿ 40 ಹುದ್ದೆಗಳಿಗೆ ಸರ್ಕಾರದ ಹೊರಗಿನ ತಜ್ಞರನ್ನು ನೇಮಿಸಲು ಸರ್ಕಾರ ನಿರ್ಧರಿಸಿತ್ತು.

ಜಂಟಿ ಕಾರ್ಯದರ್ಶಿ ಮಟ್ಟದ ನೇಮಕಾತಿಗಳ ಜಾಹೀರಾತು, 2018 ರ ಆರಂಭದಲ್ಲಿ ಬಿಡುಗಡೆಯಾಗಿದ್ದು, ಈ ವೇಳೆ 6,077 ಜನ ಅರ್ಜಿ ಸಲ್ಲಿಸಿದ್ದರು. ಯುಪಿಎಸ್ಸಿ ಆಯ್ಕೆ ಪ್ರಕ್ರಿಯೆಯ ನಂತರ, ಒಂಬತ್ತು ಜನರನ್ನು 2019 ರಲ್ಲಿ ಒಂಬತ್ತು ವಿವಿಧ ಸಚಿವಾಲಯಗಳು, ಇಲಾಖೆಗಳಲ್ಲಿ ನೇಮಕ ಮಾಡಲು ಶಿಫಾರಸು ಮಾಡಲಾಗಿದೆ.

ಈ ಪೈಕಿ ಕಾಕೋಲಿ ಘೋಷ್ ಎಂಬ ಒಬ್ಬರು ಹುದ್ದೆಗೆ ಳಿದವರು - ಅಂಬರ್ ದುಬೆ, ರಾಜೀವ್ ಸಕ್ಸೇನಾ, ಸುಜಿತ್ ಕುಮಾರ್ ಬಾಜಪೇಯಿ, ದಿನೇಶ್ ದಯಾನಂದ್ ಜಗದಲೆ, ಭೂಷಣ್ ಕುಮಾರ್, ಅರುಣ್ ಗೋಯೆಲ್, ಸೌರಭ್ ಮಿಶ್ರಾ ಮತ್ತು ಸುಮನ್ ಪ್ರಸಾದ್ ಸಿಂಗ್ ಅವರನ್ನು ಮೂರು ವರ್ಷಗಳ ಒಪ್ಪಂದದ ಮೇಲೆ ನೇಮಿಸಲಾಗಿದೆ. ಅಲ್ಲದೆ, ಖಾಸಗಿ ವಲಯಕ್ಕೆ ಮರಳಲು ಅರುಣ್ ಗೋಯೆಲ್ ಎಂಬುವರು ಕಳೆದ ವರ್ಷ ಡಿಸೆಂಬರ್ನಲ್ಲಿ ರಾಜೀನಾಮೆ ನೀಡಿದ್ದರು.

ಲ್ಯಾಟರಲ್ ಎಂಟ್ರಿ’ ಬಗ್ಗೆ ಹಲವರಿಂದ ಟೀಕೆ..! ಇದಕ್ಕೆ ಕಾರಣ..?

ಎಸ್ಸಿ, ಎಸ್ಟಿ ಮತ್ತು ಒಬಿಸಿಗಳನ್ನು ಪ್ರತಿನಿಧಿಸುವ ಗುಂಪುಗಳು ಈ ನೇಮಕಾತಿಗಳಲ್ಲಿ ಯಾವುದೇ ಮೀಸಲಾತಿ ಇಲ್ಲ ಎಂಬ ನೀತಿಯ ವಿರುದ್ಧ ಈಗಾಗಲೇ ಪ್ರತಿಭಟಿಸಿವೆ.

ಫೆಬ್ರವರಿ 5 ರಂದು ಕೇಂದ್ರ ಸರ್ಕಾರದ ಈ ಅಧಿಸೂಚನೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಟ್ವಿಟ್ ಮಾಡಿದ್ದಕ್ಕೆ ಇದರ ವಿರುದ್ಧ ಬಿಹಾರದ ಪ್ರತಿಪಕ್ಷದ ನಾಯಕ ತೇಜಸ್ವಿ ಯಾದವ್ ಟೀಕೆ ಮಾಡಿದ್ದರು. ಜತೆಗೆ, ''ಯುಪಿಎಸ್ಸಿ ಆಯ್ಕೆ ವಿಧಾನವು 'ರಾಷ್ಟ್ರ ನಿರ್ಮಾಣಕ್ಕಾಗಿ' ಇಚ್ಛೆ, ಪ್ರೇರಣೆ ಮತ್ತು ಪ್ರತಿಭಾವಂತ ಅಭ್ಯರ್ಥಿಗಳನ್ನು ಖಚಿತಪಡಿಸಿಕೊಳ್ಳಲು ವಿಫಲವಾಗಿದೆಯೇ ಎಂದು ನೀವು ವಿವರಿಸಬೇಕು. ವಂಚಿತ ವಿಭಾಗಗಳಿಗೆ ಮೀಸಲಾತಿಯನ್ನು ಸೈಡ್ಲೈನ್ ಮಾಡಲು ಮತ್ತು ಕಡಿಮೆ ಮಾಡಲು ಇದು ಮತ್ತೊಂದು ತಂತ್ರವಲ್ಲವೇ? ” ಎಂದೂ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ್ದರು.

ಜತೆಗೆ, “ಬಿಜೆಪಿ ತನ್ನದೇ ಜನರನ್ನು ಬಹಿರಂಗವಾಗಿ ಕರೆತರಲು ಬಾಗಿಲು ತೆರೆಯುತ್ತಿದೆ. ವರ್ಷಗಳಿಂದ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳ ಬಗ್ಗೆ ಯಾರು ಕಾಳಜಿ ವಹಿಸುತ್ತಾರೆ..?'' ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

ಹಾಗಾದರೆ ಈ ಒಪ್ಪಂದದ ನೇಮಕಾತಿಗಳಿಗೆ ಮೀಸಲಾತಿ ಇಲ್ಲವೇ..?
“ಕೇಂದ್ರ ಸರ್ಕಾರದ ಹುದ್ದೆಗಳು ಮತ್ತು ಸೇವೆಗಳಿಗೆ ನೇಮಕಾತಿಗಳಿಗೆ ಸಂಬಂಧಿಸಿದಂತೆ, 45 ದಿನಗಳ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯವರೆಗೆ ಇರುವ ತಾತ್ಕಾಲಿಕ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ , ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೀಸಲಾತಿ ಇರುತ್ತದೆ” ಎಂದು ಮೇ 15, 2018 ರ ಸುತ್ತೋಲೆಯಲ್ಲಿ ಹೇಳಲಾಗಿದೆ. ಇದು ಸೆಪ್ಟೆಂಬರ್ 24, 1968 ರವರೆಗೆ ಗೃಹ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಸುತ್ತೋಲೆಯ ಒಂದು ಪುನರಾವರ್ತನೆಯಾಗಿದೆ. ಒಬಿಸಿಯನ್ನೂ ಇದು ಒಳಗೊಂಡಿರುತ್ತದೆ.

ಇದನ್ನು ಓದಿ: ನಿಮ್ಮ ಮೊಗದಲ್ಲಿ ನಗು ಮೂಡಿಸುತ್ತದೆ ಪುಟ್ಟಕಂದನ ಮುದ್ದಾದ ಆಟ: ವಿಡಿಯೋ ಸಖತ್ ವೈರಲ್

ಆದರೂ, ಈ ಹುದ್ದೆಗಳಿಗೆ ಯಾಕೆ ಮೀಸಲಾತಿ ಇಲ್ಲ ಎನ್ನುವುದಕ್ಕೆ ಒಂದು ಕಾರಣವಿದೆ.
ಪ್ರಸ್ತುತ ಅನ್ವಯವಾಗುವ “13-ಪಾಯಿಂಟ್ ರೋಸ್ಟರ್” ಪ್ರಕಾರ, ಮೂರು ಪೋಸ್ಟ್ಗಳವರೆಗೆ ಯಾವುದೇ ಮೀಸಲಾತಿ ಇಲ್ಲ ಎನ್ನಲಾಗಿದೆ. “ಒಂದೇ ಪೋಸ್ಟ್ ಕೇಡರ್ನಲ್ಲಿ, ಮೀಸಲಾತಿ ಅನ್ವಯಿಸುವುದಿಲ್ಲ. ಈ ಯೋಜನೆಯಡಿಯಲ್ಲಿ ಭರ್ತಿ ಮಾಡಬೇಕಾದ ಪ್ರತಿಯೊಂದು ಪೋಸ್ಟ್ ಒಂದೇ ಪೋಸ್ಟ್ ಆಗಿರುವುದರಿಂದ, ಮೀಸಲಾತಿ ಅನ್ವಯಿಸುವುದಿಲ್ಲ. ” ಎಂದು ಆರ್ಟಿಐ ಕಾಯ್ದೆಯಡಿ ಡಿಒಪಿಟಿ ಒದಗಿಸಿದ ಉತ್ತರ ಹೇಳುತ್ತದೆ.

2019 ರಲ್ಲಿ ನೇಮಕಗೊಂಡ ಒಂಬತ್ತು ವ್ಯಕ್ತಿಗಳಲ್ಲಿ ಪ್ರತಿಯೊಬ್ಬರನ್ನು ಪ್ರತ್ಯೇಕ ನೇಮಕಾತಿಯಾಗಿ ನೇಮಕ ಮಾಡಿಕೊಳ್ಳಲಾಯಿತು - ಅವರನ್ನು ಒಂಬತ್ತು ಜನರ ಗುಂಪಾಗಿ ಪರಿಗಣಿಸಿದ್ದರೆ, ಕೇಂದ್ರದ ಮೀಸಲಾತಿ ನಿಯಮಗಳ ಪ್ರಕಾರ ಒಬಿಸಿಗಳಿಗೆ ಕನಿಷ್ಠ ಎರಡು ಸ್ಥಾನಗಳು ಮತ್ತು ಎಸ್ಸಿ ಅಭ್ಯರ್ಥಿಗೆ ಒಂದು ಸ್ಥಾನ ದೊರೆಯಬೇಕಿತ್ತು.

ಅದೇ ರೀತಿ ಇತ್ತೀಚಿನ ಜಾಹೀರಾತಿನಲ್ಲಿ, 27 ನಿರ್ದೇಶಕರನ್ನು ಒಂದೇ ಗುಂಪಾಗಿ ಪರಿಗಣಿಸಿದ್ದರೆ, 13 ಅಂಕಗಳ ಪಟ್ಟಿಯ ಪ್ರಕಾರ ಏಳು ಹುದ್ದೆಗಳನ್ನು ಒಬಿಸಿಗಳಿಗೆ, ನಾಲ್ಕು ಎಸ್ಸಿಗಳಿಗೆ, ಒಂದು ಎಸ್ಟಿಗೆ ಮತ್ತು ಇಡಬ್ಲ್ಯೂಎಸ್ ವಿಭಾಗಕ್ಕೆ ಎರಡು ಹುದ್ದೆಗಳಿಗೆ ಮೀಸಲಾತಿ ನೀಡಬೇಕಾಗುತ್ತದೆ. ಆದರೆ ಅವುಗಳನ್ನು ಪ್ರತಿ ಇಲಾಖೆಗೆ ಪ್ರತ್ಯೇಕವಾಗಿ ಪರಿಗಣಿಸಲಾಗಿರುವುದರಿಂದ, ಆ ಎಲ್ಲ ಹುದ್ದೆಗಳಿಗೆ ಮೀಸಲಾತಿ ಇಲ್ಲ ಎಂದು ಘೋಷಿಸಲಾಗಿದೆ.
Published by: Seema R
First published: March 1, 2021, 6:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories