Explained: ಭಾರತದಲ್ಲಿ ಕ್ಯಾಬಿನೆಟ್ ಮಂತ್ರಿಯನ್ನು ಬಂಧಿಸುವ ವಿಧಾನ ಏನು..? ನಾರಾಯಣ್‌ ರಾಣೆ ಬಂಧಿಸಿದ್ದು ನಿಯಮ ಬಾಹಿರನಾ..?

Narayan Rane: ಭಾರತದಲ್ಲಿ ಕ್ಯಾಬಿನೆಟ್ ಮಂತ್ರಿಯನ್ನು ಬಂಧಿಸುವ ಬೇರೆ ವಿಧಾನ ಇದೆ. ಸಂಸತ್‌ ಸದಸ್ಯರು ಅಥವಾ ಅಪರಿಚಿತರು ಯಾರೇ ಆಗಲಿ, ಸಭಾಧ್ಯಕ್ಷರು/ಸ್ಪೀಕರ್‌ ಪೂರ್ವಾನುಮತಿಯಿಲ್ಲದೆ ಸದನದ ಆವರಣದಲ್ಲಿ ಅವರನ್ನು ಬಂಧಿಸುವಂತಿಲ್ಲ

ನಾರಾಯಣ್ ರಾಣೆ

ನಾರಾಯಣ್ ರಾಣೆ

  • Share this:
ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ನಾರಾಯಣ್ ರಾಣೆ ಬಂಧನ ವಿಚಾರ ದೇಶದಲ್ಲಿ, ಪ್ರಮುಖವಾಗಿ ಮಹಾರಾಷ್ಟ್ರದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಮಾತನಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ನಾರಾಯಣ್ ರಾಣೆ ವಿರುದ್ಧ ಮೂರು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಕೇಂದ್ರ ಸಚಿವರನ್ನು ಬಂಧಿಸಲು ಮಹಾರಾಷ್ಟ್ರ ಪೊಲೀಸರು ತನ್ನ ತಂಡವನ್ನು ಕಳುಹಿಸಿದ್ದರೆ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ರಾಜ್ಯ ಸರ್ಕಾರವು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರನ್ನು ಬಂಧಿಸುವುದು "ಪ್ರೋಟೋಕಾಲ್ ವಿರುದ್ಧ" ಎಂದು ಹೇಳಿದರು ಮತ್ತು ಸ್ಯೂಮೋಟೋ ಆಗಿ ಅದು ಹೇಗೆ ಕೇಂದ್ರ ಮಂತ್ರಿ ವಿರುದ್ಧ ಬಂಧನ ವಾರಂಟ್ ಹೊರಡಿಸಬಹುದು ಎಂದು ಪ್ರಶ್ನೆ ಮಾಡಿದರು.

ಹಾಗಾದರೆ, ಭಾರತದಲ್ಲಿ ಕ್ಯಾಬಿನೆಟ್ ಮಂತ್ರಿಯನ್ನು ಬಂಧಿಸುವ ವಿಧಾನವೇನು..?
ಸಂಸತ್ತು ಅಧಿವೇಶನ ನಡೆಯದ ಸಮಯದಲ್ಲಿ, ಕೇಂದ್ರ ಮಂತ್ರಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದಲ್ಲಿ ಕ್ಯಾಬಿನೆಟ್ ಸಚಿವರನ್ನು ಕಾನೂನು ಜಾರಿ ಸಂಸ್ಥೆ ಬಂಧಿಸಬಹುದು. ಆದರೆ, ರಾಜ್ಯಸಭೆಯ ಕಾರ್ಯವಿಧಾನಗಳು ಮತ್ತು ವರ್ತನೆಯ ನಿಯಮಗಳ ಸೆಕ್ಷನ್ 22 ಎ ಪ್ರಕಾರ, ಪೊಲೀಸರು, ನ್ಯಾಯಾಧೀಶರು ಅಥವಾ ಮ್ಯಾಜಿಸ್ಟ್ರೇಟ್ ಬಂಧನಕ್ಕೆ ಕಾರಣ, ಬಂಧನದ ಸ್ಥಳ ಅಥವಾ ಸೂಕ್ತ ರೂಪದಲ್ಲಿ ಸೆರೆವಾಸದ ಬಗ್ಗೆ ರಾಜ್ಯಸಭೆಯ ಸಭಾಧ್ಯಕ್ಷರಿಗೆ ತಿಳಿಸಬೇಕು.

ಬಂಧನದ ಸಂದರ್ಭದಲ್ಲಿ ರಾಜ್ಯಸಭೆಯ ಸಭಾಧ್ಯಕ್ಷರು ಅನುಸರಿಸಬೇಕಾದ ವಿಧಾನವೇನು..?
ರಾಜ್ಯಸಭೆಯ ಸಭಾಧ್ಯಕ್ಷರು ಕಲಾಪ ನಡೆಯುತ್ತಿದ್ದ ವೇಳೆ ತಮ್ಮ ಸದಸ್ಯರು ಬಂಧನವಾದರೆ ಆ ಬಗ್ಗೆ ಕೌನ್ಸಿಲ್‌ ಸದಸ್ಯರಿಗೆ ಮಾಹಿತಿ ನೀಡಬೇಕು. ಕಲಾಪ ನಡೆಯದ ಸಮಯದಲ್ಲಿ ರಾಜ್ಯಸಭಾ ಸದಸ್ಯರ ಅಥವಾ ಸಂಸದರ ಮಾಹಿತಿಗಾಗಿ ಬುಲೆಟಿನ್‌ನಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

ರಾಜ್ಯಸಭಾ ಸದಸ್ಯರನ್ನು ಬಂಧಿಸದಿರುವ ಸವಲತ್ತುಗಳು ಇದೆಯಾ..?
ಸಂಸತ್ತಿನ ಮುಖ್ಯ ಸವಲತ್ತುಗಳ ಪ್ರಕಾರ, ಸಿವಿಲ್ ಪ್ರಕರಣಗಳಲ್ಲಿ, ಸಿವಿಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 135ರ ಪ್ರಕಾರ, ಸದನದ ಮುಂದುವರಿಕೆಯ ಸಮಯದಲ್ಲಿ ಮತ್ತು ಅದರ ಪ್ರಾರಂಭದ 40 ದಿನಗಳ ಮೊದಲು ಮತ್ತು ಅದರ ಮುಕ್ತಾಯದ 40 ದಿನಗಳ ನಂತರ ಬಂಧನದಿಂದ ಅವರಿಗೆ ಸ್ವಾತಂತ್ರ್ಯವಿದೆ. ಆದರೆ, ಕ್ರಿಮಿನಲ್ ಅಪರಾಧಗಳು ಅಥವಾ ತಡೆಗಟ್ಟುವ ಬಂಧನದ ಅಡಿಯಲ್ಲಿ ಅಂದರೆ ಬಂಧನ ಪ್ರಕರಣಗಳಿಗೆ ಸಂಸದರಿಗೆ ಈ ಸವಲತ್ತು ಅನ್ವಯಿಸುವುದಿಲ್ಲ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಮಾಜಿ ಶಾಸಕನಿಗೆ 25 ವರ್ಷ ಜೈಲುಶಿಕ್ಷೆ

ಸದನದ ಆವರಣದಿಂದ ಸಂಸದರನ್ನು ಅಥವಾ ಇತರೆ ವ್ಯಕ್ತಿಯನ್ನು ಬಂಧಿಸಬಹುದೇ..?
ಸಂಸತ್‌ ಸದಸ್ಯರು ಅಥವಾ ಅಪರಿಚಿತರು ಯಾರೇ ಆಗಲಿ, ಸಭಾಧ್ಯಕ್ಷರು/ಸ್ಪೀಕರ್‌ ಪೂರ್ವಾನುಮತಿಯಿಲ್ಲದೆ ಸದನದ ಆವರಣದಲ್ಲಿ ಅವರನ್ನು ಬಂಧಿಸುವಂತಿಲ್ಲ. ಮತ್ತು ಈ ನಿಟ್ಟಿನಲ್ಲಿ ಗೃಹ ಸಚಿವಾಲಯವು ವಿಧಿಸಿರುವ ಕಾರ್ಯವಿಧಾನಕ್ಕೆ ಅನುಸಾರವಾಗಿ ಪೊಲೀಸರು ಅಥವಾ ತನಿಖೆ ಸಂಸ್ಥೆಯವರು ನಡೆದುಕೊಳ್ಳಬೇಕು. ಅದೇ ರೀತಿ ಸಿವಿಲ್ ಅಥವಾ ಕ್ರಿಮಿನಲ್ ಇರಲಿ ಅಧ್ಯಕ್ಷರ/ಸ್ಪೀಕರ್ ಪೂರ್ವಾನುಮತಿ ಪಡೆಯದೆ ಸದನದ ಆವರಣದಲ್ಲಿ ಯಾವುದೇ ಕಾನೂನು ಪ್ರಕ್ರಿಯೆ ನಡೆಸುವಂತಿಲ್ಲ.

ಈ ಮಧ್ಯೆ, ಕೇಂದ್ರ ಸಚಿವ ನಾರಾಯಣ್ ರಾಣೆಗೆ ಮಂಗಳವಾರ ತಡರಾತ್ರಿ ಮಹಾದ್‌ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: