ಬಹು ನಿರೀಕ್ಷಿತ ಕೇಂದ್ರ ಸರ್ಕಾರದ 2023-24ನೇ ಸಾಲಿನ ಬಜೆಟ್ (Union Budget 2023-24) ಮಂಡನೆಯಾಗಿದೆ. ಬರೋಬ್ಬರಿ 45 ಲಕ್ಷ ಕೋಟಿ ರೂಪಾಯಿಗಳ ಆಯವ್ಯಯ ಮಂಡನೆಯಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Union Finance Minister Nirmala Sitharaman) ಸತತ 5ನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಕೃಷಿ, ಕೈಗಾರಿಕೆ, ರಕ್ಷಣೆ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಭರಪೂರ ಕೊಡುಗೆ ಘೋಷಿಸಲಾಗಿದೆ. ಇತ್ತ ಕರ್ನಾಟಕಕ್ಕೂ (Karnataka) ಪಾಲು ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ (Upper Bhadra Project) 5,300 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಹಾಗಾದ್ರೆ ‘ನಿರ್ಮಲ ಲೆಕ್ಕಾಚಾರ’ದಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ ಸಿಕ್ಕಿದೆ? ಯಾವ ವಸ್ತುಗಳ ಬೆಲೆ ಏರಿದೆ? ಯಾವ ವಸ್ತುಗಳ ಬೆಲೆ ಇಳಿಕೆಯಾಗಿದೆ? ಯಾರಿಗೆ ಸಿಹಿ, ಯಾರಿಗೆ ಕಹಿ? ಈ ಎಲ್ಲಾ ಮಾಹಿತಿ ಇಲ್ಲಿದೆ ಓದಿ…
45 ಲಕ್ಷ ಕೋಟಿಯ ಬಜೆಟ್
2022-23ನೇ ಸಾಲಿನಲ್ಲಿ 39,44,909 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿತ್ತು. ಆದರೆ ಈ ಬಾರಿ ಬಜೆಟ್ ಗಾತ್ರದಲ್ಲಿ ಏರಿಕೆಯಾಗಿದೆ. 2023-24ನೇ ಸಾಲಿನಲ್ಲಿ ಒಟ್ಟು 45 ಲಕ್ಷ ಕೋಟಿಯ ಬಜೆಟ್ ಘೋಷಿಸಲಾಗಿದೆ. ಸಾಲವನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು 27.2 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ ಹಾಗೂ ಒಟ್ಟು ವೆಚ್ಚ ರೂ 45 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ಈ ಪೈಕಿ ನಿವ್ವಳ ತೆರಿಗೆ ಸ್ವೀಕೃತಿಗಳು 23.3 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ವಿತ್ತೀಯ ಕೊರತೆಯು ಜಿಡಿಪಿಯ ಶೇಕಡಾ 5.9 ಎಂದು ಅಂದಾಜಿಸಲಾಗಿದೆ.
ತೆರಿಗೆ ಭಾರ ಇಳಿಸಿದ ಬಜೆಟ್
ಆದಾಯ ತೆರಿಗೆ (Income Tax) ಮಿತಿಯನ್ನು 5 ಲಕ್ಷ ರೂಪಾಯಿಯಿಂದ 7 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಸೆಕ್ಷನ್ 87ಎ ಅಡಿಯಲ್ಲಿ 5 ರಿಂದ 7 ಲಕ್ಷ ರೂಪಾಯಿ ತೆರಿಗೆ ಮಿತಿ ಏರಿಕೆ ಮಾಡಲಾಗಿದೆ. ಸಂಬಳ (Salary) ಪಡೆಯುವ ವರ್ಗ ಇದೀಗ 7 ಲಕ್ಷ ರೂಪಾಯಿವರೆಗೆ ಯಾವುದೇ ಆದಾಯ ತೆರಿಗೆ ಪಾವತಿಸುವಂತಿಲ್ಲ. ಇದೀಗ 3 ಲಕ್ಷ ರೂಪಾಯಿ ವರೆಗೆ ವೈಯುಕ್ತಿಕ ತೆರಿಗೆದಾರರು ಯಾವುದೇ ತೆರಿಗೆ ಪಾವತಿ ಮಾಡುವಂತಿಲ್ಲ. 3 ರಿಂದ 6 ಲಕ್ಷ ರೂಪಾಯಿ ಆದಾಯ ಹೊಂದಿದ ವೈಯುಕ್ತಿಕ ತೆರಿಗೆದಾರರು ಶೇಕಡ 5 ರಷ್ಟು ತೆರಿಗೆ ಪಾವತಿ ಮಾಡಬೇಕು. '2019-20ರಲ್ಲಿ ಹೊಸ ಟ್ಯಾಕ್ಸ್ ರಿಜಿಮ್ ಅನ್ನು ವಿತ್ತ ಸಚಿವೆ ಘೋಷಿಸಿದ್ದರು. 0 ಯಿಂದ 2.5 ಲಕ್ಷದವರೆಗೆ ಯಾವುದೇ ತೆರಿಗೆ ಕಟ್ಟಿವಂತಿಲ್ಲ. 2.5 ಲಕ್ಷದಿಂದ 5 ಲಕ್ಷದವರೆಗೆ 5%, ಇದಾದ ಬಳಿಕ ಎರಡುವರೆ ಲಕ್ಷ ಹೆಚ್ಚಾದಂತೆ 5 % ಟ್ಯಾಕ್ಸ್ ಸೇರುತ್ತಾ ಹೋಗಿತ್ತು. 5 ಲಕ್ಷದವರೆಗೆ ಈ ಹಿಂದೆ ರಿಬೆಟ್ ಇತ್ತು. ಈಗ 7 ಲಕ್ಷದವರೆಗೆ ಹೆಚ್ಚಿಸಲಾಗಿದೆ.
ಹೊಸ ಟ್ಯಾಕ್ಸ್ ಸ್ಲ್ಯಾಬ್ ಏನಿದೆ?
₹ 0-3 ಲಕ್ಷ | ಯಾವುದೇ ತೆರಿಗೆ ಇಲ್ಲ |
₹ 3-6 ಲಕ್ಷ | 5 % |
₹ 6-9 ಲಕ್ಷ | 10 % |
₹ 9-12 ಲಕ್ಷ | 15 % |
₹ 12-15 ಲಕ್ಷ | 20 % |
₹ 15 ಲಕ್ಷಕ್ಕಿಂತ ಹೆಚ್ಚು | 30 % |
ಈ ಬಾರಿ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗಿದೆ. ರೈಲ್ವೇಗೆ 2.4 ಲಕ್ಷ ಕೋಟಿ ರೂಪಾಯಿಗಳ ಅನುದಾನ ಘೋಷಿಸಲಾಗಿದೆ. ಇದು ಬಜೆಟ್ ಇತಿಹಾಸದಲ್ಲೇ ನೀಡಲಾಗಿರುವ ಅತೀ ಹೆಚ್ಚಿನ ಅನುದಾನವಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ 4 ಪಟ್ಟು ಹೆಚ್ಚು ಹಾಗೂ 2013-14ರ ಕಾಂಗ್ರೆಸ್ ಸರ್ಕಾರದ ಬಜೆಟ್ಗೆ ಹೋಲಿಸಿದರೆ 9 ಪಟ್ಟು ಹೆಚ್ಚಾಗಿದೆ ಅಂತ ಹೇಳಲಾಗುತ್ತಿದೆ.
ಇದನ್ನೂ ಓದಿ: Income Tax Slabs: ನಿರ್ಮಲಾ ಸೀತಾರಾಮನ್ ಇಳಿಸಿದ್ರು ಟ್ಯಾಕ್ಸ್ ಭಾರ, ಜನಸಾಮಾನ್ಯರು ಮಾಡೋದು ಹೇಗೆ ತೆರಿಗೆ ಲೆಕ್ಕಾಚಾರ?
ಯಾವ ಇಲಾಖೆಗೆ ಎಷ್ಟು ಅನುದಾನ?
- ಮೊಬೈಲ್ ಫೋನ್ ಚಾರ್ಜರ್
- ಎಲ್ಇಡಿ ಟಿವಿ
- ಸೈಕಲ್
- ಕ್ಯಾಮೆರಾ ಲೆನ್ಸ್
- ಇ ವಾಹನಗಳ ಬ್ಯಾಟರಿ
- ಬಟ್ಟೆಗಳು
- ಪಾಲಿಶ್ ಮಾಡಿದ ವಜ್ರ
- ಬಟ್ಟೆ
- ಮೊಬೈಲ್ ಫೋನ್
- ಆಟಿಕೆ
- ಮೊಬೈಲ್ ಕ್ಯಾಮೆರಾ ಲೆನ್ಸ್
- ವಿದ್ಯುತ್ ವಾಹನಗಳು
- ವಜ್ರದ ಆಭರಣಗಳು
- ಜೈವಿಕ ಅನಿಲಕ್ಕೆ ಸಂಬಂಧಿಸಿದ ವಿಷಯಗಳು
- ಲಿಥಿಯಂ ಜೀವಕೋಶಗಳು
- ಸೈಕಲ್
ಬಜೆಟ್‌ನಲ್ಲಿ ದುಬಾರಿಯಾದ ವಸ್ತುಗಳು
ಈ ಬಾರಿ ಕರ್ನಾಟಕದಲ್ಲಿ ವಿಧಾನಸಭಾ ಎಲೆಕ್ಷನ್ ಇದೆ. ಹೀಗಾಗಿ ಕೇಂದ್ರದ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಂಹಪಾಲು ಸಿಗುವ ನಿರೀಕ್ಷೆ ಇತ್ತು. ಆದರೆ ನಿರಾಶೆ ಮೂಡಿಸದೇ ಕರ್ನಾಟಕಕ್ಕೆ ಬಂಪರ್ ನೀಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ 5300 ಕೋಟಿ ರೂಪಾಯಿ ಅನುದಾನ ಘೋಷಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ