• ಹೋಂ
  • »
  • ನ್ಯೂಸ್
  • »
  • Explained
  • »
  • China: ಚೀನಾದಲ್ಲಿ ಉಲ್ಲಂಘನೆಯಾಗುತ್ತಿದೆಯಾ ಮಾನವ ಹಕ್ಕುಗಳು? ಯುಎನ್ ವರದಿಯಲ್ಲಿ ಸ್ಫೋಟಕ ವಿಚಾರ!

China: ಚೀನಾದಲ್ಲಿ ಉಲ್ಲಂಘನೆಯಾಗುತ್ತಿದೆಯಾ ಮಾನವ ಹಕ್ಕುಗಳು? ಯುಎನ್ ವರದಿಯಲ್ಲಿ ಸ್ಫೋಟಕ ವಿಚಾರ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಚೀನಾದ ಒಂದು ಪ್ರದೇಶದಲ್ಲಿ ಮಾನವ ಹಕ್ಕುಗಳ ದುರುಪಯೋಗ ಕುರಿತಂತೆ ವಿಶ್ವಸಂಸ್ಥೆಯು ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯನ್ನು ಸುಮಾರು ಒಂದು ವರ್ಷದಿಂದ ಸಿದ್ಧಪಡಿಸಲಾಗುತ್ತಿದ್ದು, ಜಿನೀವಾದಲ್ಲಿ ಬಿಡುಗಡೆ ಮಾಡಲಾಯಿತು. ಮಾನವ ಹಕ್ಕುಗಳ ಯುಎನ್ ಹೈ ಕಮಿಷನರ್ ಆಗಿ ಕಾರ್ಯನಿರ್ವಹಿಸಿದ್ದ ಮಿಚೆಲ್ ಬ್ಯಾಚೆಲೆಟ್ ಅವರ ನಾಲ್ಕು ವರ್ಷಗಳ ಅವಧಿ ಮುಗಿಯುವ ಮುನ್ನ ವರದಿಯನ್ನು ಬಹಿರಂಗಗೊಳಿಸಿದ್ದಾರೆ.

ಮುಂದೆ ಓದಿ ...
  • Share this:

ಚೀನಾದ ಕ್ಸಿನ್‌ಜಿಯಾಂಗ್ (Xinjiang) ಪ್ರದೇಶದಲ್ಲಿ ಮಾನವ ಹಕ್ಕುಗಳ ದುರುಪಯೋಗ ಕುರಿತಂತೆ ವಿಶ್ವಸಂಸ್ಥೆಯು ಆಘಾತಕಾರಿಯಾದ ವರದಿಯನ್ನು ಬಿಡುಗಡೆ ಮಾಡಿದ್ದು, ಚಿತ್ರಹಿಂಸೆ ಆರೋಪಗಳು ನಿಜವಾಗಿದ್ದು, ಮಾನವೀಯತೆಯ ವಿರುದ್ಧ ಸಂಭವನೀಯ ಅಪರಾಧಗಳನ್ನು (Crime) ಉಲ್ಲೇಖಿಸಿರುವುದು ತಿಳಿದುಬಂದಿದೆ. ಈ ವರದಿಯನ್ನು ಸುಮಾರು ಒಂದು ವರ್ಷದಿಂದ ಸಿದ್ಧಪಡಿಸಲಾಗುತ್ತಿದ್ದು ವರದಿಯನ್ನು ಜಿನೀವಾದಲ್ಲಿ ಬುಧವಾರ ರಾತ್ರಿ 11:47 ಗಂಟೆಗೆ (2147 GMT) ಬಿಡುಗಡೆ ಮಾಡಲಾಯಿತು. ಮಾನವ ಹಕ್ಕುಗಳ ಯುಎನ್ ಹೈ ಕಮಿಷನರ್ (UN High Commissioner for Human Rights) ಆಗಿ ಕಾರ್ಯನಿರ್ವಹಿಸಿದ್ದ ಮಿಚೆಲ್ ಬ್ಯಾಚೆಲೆಟ್ (Michelle Bachelet) ಅವರ ನಾಲ್ಕು ವರ್ಷಗಳ ಅವಧಿ ಮುಗಿಯುವ ಮುನ್ನ ವರದಿಯನ್ನು ಗೊಳಿಸಿದ್ದಾರೆ.


ವರದಿಯಿಂದ ಕೋಪಗೊಂಡಿರುವ ಬೀಜಿಂಗ್‌ ಅದನ್ನು ಬಿಡುಗಡೆ ಮಾಡದಂತೆ ತೀವ್ರ ಒತ್ತಡಹಾಕಿದರೂ ಅದನ್ನು ಕ್ಯಾರೆ ಎನ್ನದ ಚಿಲಿಯ ಮಾಜಿ ಅಧ್ಯಕ್ಷರು ವರದಿಯನ್ನು ಜಗತ್ತಿಗೆ ಬಿಡುಗಡೆಗೊಳಿಸುವುದನ್ನು ನಿರ್ಧರಿಸಿದರು. ನನ್ನ ಅಧಿಕಾರಾವಧಿ ಮುಗಿಯುವ ಮುನ್ನ ನಾನು ಅದನ್ನು ಪ್ರಕಟಿಸುತ್ತೇನೆ ಎಂದು ಹೇಳಿರುವೆ, ಹಾಗೆಯೇ ಮಾಡುತ್ತೇನೆ ಎಂದು ಎಎಫ್‌ಪಿಗೆ ಕಳುಹಿಸಿದ ಇಮೇಲ್‌ನಲ್ಲಿ ಬ್ಯಾಚೆಲೆಟ್ ತಿಳಿಸಿದ್ದರು. ಸಮಸ್ಯೆಗಳು ತೀವ್ರ ಗಂಭೀರವಾಗಿದ್ದು ಇದನ್ನು ದೇಶದ ಉನ್ನತ ಮಟ್ಟದ ಮಟ್ಟದ ರಾಷ್ಟ್ರೀಯ ಮತ್ತು ಪ್ರಾದೇಶಿಕ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಿದೆ ಎಂಬುದು ಬ್ಯಾಚೆಲೆಟ್ ಮಾತಾಗಿದೆ.


ಶೋಷಣೆ ನಡೆಸುತ್ತಿರುವ ಚೀನಾ:
ವರ್ಷಗಳಿಂದ ಚೀನಾ ದೂರದ-ಪಶ್ಚಿಮ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಉಯ್ಘರ್‌ಗಳು ಮತ್ತು ಇತರ ಮುಸ್ಲಿಂ ಅಲ್ಪಸಂಖ್ಯಾತರನ್ನು ಬಂಧಿಸಿದೆ ಎಂಬ ಆರೋಪಕ್ಕೊಳಗಾಗಿದೆ. ಹೋರಾಟಗಾರರು ಚೀನಾದ ದುರುಪಯೋಗದ ಕುರಿತು ಆರೋಪಿಸಿದ್ದು, ಬೀಜಿಂಗ್ ಈ ಆರೋಪಗಳನ್ನು ತಿರಸ್ಕರಿಸಿದೆ ಅಂತೆಯೇ ಉಗ್ರರನ್ನು ಸದೆಬಡಿಯಲು ವಿನ್ಯಾಸಗೊಳಿಸಲಾದ ವೃತ್ತಿಪರ ಕೇಂದ್ರಗಳನ್ನು ಕ್ಸಿನ್‌ಜಿಯಾಂಗ್‌ನಲ್ಲಿ ನಡೆಸಲಾಗುತ್ತಿದೆ ಎಂದು ಹೇಳಿದೆ.


ಇದನ್ನೂ ಓದಿ:  Explained: ಚೀನಾದ ಆರ್ಥಿಕ ಬಿಕ್ಕಟ್ಟು ವಿಶ್ವದಾದ್ಯಂತ ಹೇಗೆ ಪರಿಣಾಮ ಬೀರಲಿದೆ? ಇದ್ರಿಂದ ಭಾರತಕ್ಕೆ ಆತಂಕವೋ, ಅನುಕೂಲವೋ?


ಕ್ಸಿನ್‌ಜಿಯಾಂಗ್ ಉಯ್ಘರ್ ಸ್ವಾಯತ್ತ ಪ್ರದೇಶದೊಳಗಿನ ಸಂಪೂರ್ಣ ಮೌಲ್ಯಮಾಪನವನ್ನು ನಡೆಸುವ ಅಗತ್ಯವಿದೆ ಎಂದು ಬ್ಯಾಚೆಲೆಟ್ ಅಂತಿಮವಾಗಿ ತೀರ್ಮಾನಿಸಿದ್ದಾರೆ.


ಚಿತ್ರಹಿಂಸೆ ಆರೋಪಗಳು ನಿಜವಾದುದು
ಭಯೋತ್ಪಾದನೆ ನಿಗ್ರಹ ಮತ್ತು 'ಉಗ್ರವಾದ' ಕಾರ್ಯತಂತ್ರಗಳನ್ನು ಅನ್ವಯಿಸುವ ಸಂದರ್ಭದಲ್ಲಿ ಸರಕಾರವು ಕ್ಸಿನ್‌ಜಿಯಾಂಗ್‌ನಲ್ಲಿ ಗಂಭೀರವಾದ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡಿದೆ ಎಂದು ವರದಿ ಹೇಳಿದೆ. ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಕೇಂದ್ರಗಳ ಹೆಸರಿನಲ್ಲಿ ಜನರನ್ನು ನೋಡಿಕೊಳ್ಳುತ್ತಿರುವ ರೀತಿಯ ಕುರಿತು ಮೌಲ್ಯಮಾಪನ ಕಳವಳ ವ್ಯಕ್ತಪಡಿಸಿದೆ. ಬಲವಂತವಾಗಿ ವೈದ್ಯಕೀಯ ಚಿಕಿತ್ಸೆ ನೀಡುವುದು, ಬಂಧಿಸುವಂತಹ ಪ್ರತಿಕೂಲ ಪರಿಸ್ಥಿತಿಗಳು ಒಳಗೊಂಡಂತೆ ಚಿತ್ರಹಿಂಸೆ ಅಥವಾ ಕೆಟ್ಟದಾಗಿ ನಡೆಸಿಕೊಳ್ಳುವ ರೀತಿ ನಿಜವಾಗಿದೆ ಇದರೊಂದಿಗೆ ಲೈಂಗಿಕ ಹಾಗೂ ಲಿಂಗ ಆಧಾರಿತ ಹಿಂಸಾಚಾರದ ವೈಯಕ್ತಿಕ ಆರೋಪಗಳು ವರದಿಯಾಗಿವೆ ಎಂದು ಮೌಲ್ಯಮಾಪನ ಬಣ್ಣಿಸಿದೆ.


ಉಯ್ಘರ್ ಮತ್ತು ಇತರ ಪ್ರಧಾನ ಮುಸ್ಲಿಂ ಗುಂಪುಗಳ ಸದಸ್ಯರ ಅನಿಯಂತ್ರಿತ ಮತ್ತು ತಾರತಮ್ಯದ ಬಂಧನದ ವ್ಯಾಪ್ತಿಯು ನಿರ್ದಿಷ್ಟವಾಗಿ ಮಾನವೀಯತೆಯ ವಿರುದ್ಧ ಅಪರಾಧಗಳು ಎಂದು ಮೂಲಗಳು ಬಣ್ಣಿಸಿವೆ. ಕ್ಸಿನ್‌ಜಿಯಾಂಗ್‌ನಲ್ಲಿ ವಿವರಿಸಿದ ಪರಿಸ್ಥಿತಿಯ ಮೇಲೆ ತನ್ನ ನೋಟವನ್ನು ಕೇಂದ್ರೀಕರಿಸುವಂತೆ ವರದಿಯು ಬೀಜಿಂಗ್, ಯುಎನ್ ಮತ್ತು ವಿಶ್ವವನ್ನು ಒತ್ತಾಯಿಸಿದೆ.


ಬೀಜಿಂಗ್ ಆರೋಪಗಳನ್ನು ದೃಢವಾಗಿ ವಿರೋಧಿಸಿದೆ
ಬ್ಯಾಚಲೆಡ್ ಕಚೇರಿಯು ವರದಿಯನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ ನಂತರ ನ್ಯೂಯಾರ್ಕ್‌ನಲ್ಲಿರುವ ಯುಎನ್‌ಯ ಚೀನಾ ರಾಯಭಾರಿ ಜಾಂಗ್ ಜುನ್ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬೀಜಿಂಗ್ ಈ ಆರೋಪಗಳನ್ನು ದೃಢವಾಗಿ ವಿರೋಧಿಸಿದೆ ಎಂಬುದಾಗಿ ತಿಳಿಸಿರುವುದಾಗಿ ಎಂದು ಹೇಳಿದ್ದಾರೆ. ಕ್ಸಿನ್‌ಜಿಯಾಂಗ್‌ನಲ್ಲಿರುವ ಸಮಸ್ಯೆಗಳು ರಾಜಕೀಯ ಪ್ರೇರಣೆಗೊಳಗಾಗಿ ನಿರ್ಮಿಸಲಾದ ಕಟ್ಟುಕತೆಯಾಗಿದ್ದು ಚೀನಾದ ಸ್ಥಿರತೆಯನ್ನು ದುರ್ಬಲಗೊಳಿಸುವುದು ಮತ್ತು ಚೀನಾದ ಅಭಿವೃದ್ಧಿಯನ್ನು ತಡೆಯುವುದು ಈ ವರದಿಯ ಉದ್ದೇಶ ಎಂಬುದಾಗಿ ಜಾಂಗ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಬ್ಯಾಚೆಲೆಟ್ ಸ್ವತಂತ್ರ ಹೇಳಿಕೆಗಳನ್ನು ನೀಡಬೇಕು ಹೊರತಾಗಿ ಪಾಶ್ಚಿಮಾತ್ಯ ದೇಶಗಳ ಒತ್ತಡಕ್ಕೆ ಒಳಗಾಗಬಾರದು ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Explained: ಭಾರತದ INS ವಿಕ್ರಾಂತ್​ ನೋಡಿ ಅಮೆರಿಕಾ, ಚೀನಾಗೆ ನಡುಕ! ಈ ಯುದ್ಧನೌಕೆಯ ಶಕ್ತಿ ಅಸಾಧಾರಣ


ಬ್ಯಾಚೆಲೆಟ್ ಹಾಗೂ ಅವರ ಕಚೇರಿಯು ವರದಿ ವಿಳಂಬವಾಗಿರುವ ಒಂದೇ ಕಾರಣವನ್ನು ಪುನರಾವರ್ತಿಸಿದ್ದು, ವರದಿಯನ್ನು ಹೇಳಿಕೆಗಳಿಗಾಗಿ ಮೊದಲಿಗೆ ಬೀಜಿಂಗ್‌ಗೆ ಕಳುಹಿಸಲಾಗಿತ್ತು ಇದರಿಂದ ವರದಿ ನೀಡುವುದು ವಿಳಂಬವಾಗಿತ್ತು ಎಂದಿದ್ದಾರೆ. ಆದರೆ ಇಂತಹ ವರದಿಗಳಲ್ಲಿ ಈ ರೀತಿಯ ಹೇಳಿಕೆಗಳು ಸಾಮಾನ್ಯ ಎಂದು ಅವರು ತಿಳಿಸಿದ್ದಾರೆ. ಚೀನಾ ಇದುವರೆಗೆ ವರದಿಯನ್ನು ನೋಡಿಲ್ಲ ಎಂಬುದಾಗಿ ಜಾಂಗ್ ಸಮರ್ಥಿಸಿಕೊಂಡಿದ್ದು ವರದಿಯಲ್ಲಿರುವ ಆರೋಪಗಳನ್ನು ವಿರೋಧಿಸಿದ್ದಾರೆ. ವರದಿಯು ಯುಎನ್ ಮತ್ತು ಸದಸ್ಯ ರಾಷ್ಟ್ರದ ನಡುವಿನ ಸಹಕಾರವನ್ನು ಹಾಳುಮಾಡುತ್ತದೆ. ಅಲ್ಲದೆ ಚೀನಾದ ಆಂತರಿಕ ವ್ಯವಹಾರಗಳಲ್ಲಿ ಸಂಪೂರ್ಣವಾಗಿ ಹಸ್ತಕ್ಷೇಪ ಮಾಡುತ್ತದೆ ಎಂಬುದಾಗಿ ಜಾಂಗ್ ದೂರಿದ್ದಾರೆ.

top videos
    First published: