UAE Golden Visa Rules: ದುಬೈ ಕನಸಿನ ರಹದಾರಿಯಾದ ಗೋಲ್ಡನ್ ವೀಸಾ ಪಡೆಯುವುದು ಹೇಗೆ?

ಹೂಡಿಕೆದಾರರಿಗೆ, ಬ್ಯುಸಿನೆಸ್​​​ಮ್ಯಾನ್​ಗಳಿಗೆ, ಅನನ್ಯ ಪ್ರತಿಭೆಯಿರುವವರಿಗೆ, ವೈದ್ಯಕೀಯ ಕ್ಷೇತ್ರದವರಿಗೆ, ತಂತ್ರಜ್ಞಾನ ಕ್ಷೇತ್ರದವರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದುಬೈ ಸರ್ಕಾರ ಈ ಗೋಲ್ಡನ್​​ ವೀಸಾವನ್ನು ನೀಡುತ್ತೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಬಾಲಿವುಡ್​​ನ ಬ್ಯಾಡ್​​ ಬಾಯ್​ ಅಂತಲೇ ಕರೆಸಿಕೊಳ್ಳುತ್ತಿದ್ದ ನಟ ಸಂಜತ್​ ದತ್​ಗೆ ದುಬೈ ಸರ್ಕಾರ ಗೋಲ್ಡನ್​​ ವೀಸಾ ನೀಡಿದೆ. 10 ವರ್ಷಗಳ ಕಾಲ ಕುಟುಂಬದೊಂದಿಗೆ ದುಬೈನಲ್ಲಿ ನೆಲೆಸಿ, ವ್ಯವಹಾರ ನಡೆಸಬಹುದಾದ ಅನುಮತಿ ಇದಾಗಿದೆ. ಸಂಜಯ್​​ ದತ್​ಗೆ ಈ ಗೋಲ್ಡನ್​ ವೀಸಾ ದೊರೆಯುತ್ತಿದಂತೆ ಎಲ್ಲೆಡೆಯೂ ಗೋಲ್ಡನ್​ ವೀಸಾ ಬಗ್ಗೆ ಚರ್ಚೆ ಶುರುವಾಗಿದೆ. ದುಬೈಗೆ ಹೋಗಿ ಕೈ ತುಂಬಾ ದುಡಿಯುವ ಕನಸು ಕಾಣುತ್ತಿರುವ ಹಲವರು ಗೋಲ್ಡನ್​ ವೀಸಾದತ್ತ ಕಣ್ಣರಳಿಸುತ್ತಿದ್ದಾರೆ. ಹೂಡಿಕೆದಾರರಿಗೆ, ಬ್ಯುಸಿನೆಸ್​​​ಮ್ಯಾನ್​ಗಳಿಗೆ, ಅನನ್ಯ ಪ್ರತಿಭೆಯಿರುವವರಿಗೆ, ವೈದ್ಯಕೀಯ ಕ್ಷೇತ್ರದವರಿಗೆ, ತಂತ್ರಜ್ಞಾನ ಕ್ಷೇತ್ರದವರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದುಬೈ ಸರ್ಕಾರ ಈ ಗೋಲ್ಡನ್​​ ವೀಸಾವನ್ನು ನೀಡುತ್ತೆ.

ಗೋಲ್ಡನ್​​ ವೀಸಾವನ್ನು ಹೇಗೆ ಪಡೆಯಬಹುದು?

ಗೋಲ್ಡನ್​ ವೀಸಾ ಪಡೆಯಲು ಇಚ್ಛಿಸುವವರು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿಯಲ್ಲಿ ಕೇಳಲಾದ ಎಲ್ಲಾ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ದುಬೈನಲ್ಲಿ ನೆಲೆ ವ್ಯವಹಾರಾ, ಹೂಡಿಕೆ ಮಾಡಲು ಬಯಸುವವರು ಅರ್ಜಿ ಸಲ್ಲಿಸಬಹುದು.

10 ವರ್ಷಗಳ ಕಾಲ ದುಬೈನಲ್ಲಿ ನೆಲೆಸಲು ಏನು ಮಾಡಬೇಕು?

  • ದುಬೈನಲ್ಲಿ 10 ಮಿಲಿಯನ್​​ ಧೀರಮ್ಸ್​​​​​​ ನಷ್ಟು ಹೂಡಿಕೆ ಮಾಡಬೇಕು. ಇನ್ವೆಸ್ಟಮೆಂಟ್​ ಫಂಡ್​ ಅಥವಾ ಯಾವುದಾದರೂ ಕಂಪನಿಯಲ್ಲಿ ಹೂಡಿಕೆ ಮಾಡಬೇಕು.

  • ಶೇ.60ರಷ್ಟು ಹೂಡಿಕೆ ರಿಯಲ್​ ಎಸ್ಟೇಟ್​​​ ಆಗಿರಬಾರದು.

  • ಹೂಡಿಕೆ ಹಣ ಲೋನ್​​ ಹಣವಾಗಿರಬಾರದು, ಆಸ್ತಿಯನ್ನು ಹೂಡಿಕೆ ಮಾಡುವುದಾದರೆ ಆಸ್ತಿ ಸಂಪೂರ್ಣ ಸ್ವಂತದಾಗಿರಬೇಕು.

  • ಮೂರು ವರ್ಷಗಳಲ್ಲಿ ಹೂಡಿಕೆದಾರರು ಲಾಭದಾಯಕ ಉದ್ದಿಮೆ ನಡೆಸುವಂತಿರಬೇಕು.


ಈ ರೀತಿ ಹೂಡಿಕೆಮಾಡುವವರು 10 ವರ್ಷದ ನಂತರವೂ ವೀಸಾವನ್ನು ವಿಸ್ತರಿಸಿಕೊಂಡು ದುಬೈನಲ್ಲೇ ನೆಲೆಸಬಹುದು. ಒಳ್ಳೆಯ ಬ್ಯುಸಿನೆಸ್​​​ ಹೊಂದಿದ್ದಲ್ಲಿ ಅವರ ಪತ್ನಿ, ಮಕ್ಕಳು ಅವರೊಂದಿಗೆ ದುಬೈನಲ್ಲಿ ನೆಲೆಸಬಹುದು. ಅವರ ಕಂಪನಿಯ ಮ್ಯಾನೇಜರ್​, ಒಬ್ಬರು ಸಲಹೆಗಾರರು ಅವರೊಂದಿಗೆ ದುಬೈನಲ್ಲಿ ಇರಬಹುದು.

ಇದನ್ನೂ ಓದಿ: ಹೆಣ್ಮಕ್ಕಳೇ ಸ್ಟ್ರಾಂಗ್ ಗುರೂ.. ಕೊರೊನಾದಿಂದ ಬಚಾವ್ ಆದವರಲ್ಲಿ ಪುರುಷರಗಿಂತ ಮಹಿಳೆಯರ ಸಂಖ್ಯೆಯೇ ಹೆಚ್ಚು!

ಪ್ರತಿಭಾವಂತರಿಗೂ ಸಿಗಲಿದೆ ಗೋಲ್ಡನ್​​ ವೀಸಾ

ಹೂಡಿಕೆದಾರರಿಗೆ, ಬ್ಯುಸಿನೆಸ್​​​ಮ್ಯಾನ್​ಗಳಿಗೆ, ಅನನ್ಯ ಪ್ರತಿಭೆಯಿರುವವರಿಗೆ, ವೈದ್ಯಕೀಯ ಕ್ಷೇತ್ರದವರಿಗೆ, ತಂತ್ರಜ್ಞಾನ ಕ್ಷೇತ್ರದವರಿಗೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದುಬೈ ಸರ್ಕಾರ ಈ ಗೋಲ್ಡನ್​​ ವೀಸಾವನ್ನು ನೀಡುತ್ತೆ. ಪ್ರತಿಭೆಯ ಆದಾರದ ಮೇಲೆ 10 ವರ್ಷಗಳ ನೆಲೆಸಬಹುದಾಗಿದ್ದು, ಇವರೊಂದಿಗೆ ಪತ್ನಿ-ಮಕ್ಕಳು ಇರಬಹುದು. ನಟ ಸಂಜಯ್​​ ದತ್​ ಅವರಿಗೆ ಪ್ರತಿಭೆಯ ಆಧಾರದ ಮೇಲೆಯೇ ವೀಸಾ ನೀಡಲಾಗಿದೆ. ಅವರು ದುಬೈನಲ್ಲಿ ಕುಟುಂಬದೊಂದಿಗೆ ನೆಲೆಸಲು, ವ್ಯವಹಾರ ನಡೆಸಲು ಅರ್ಹರಾಗಿದ್ದಾರೆ.

5 ವರ್ಷಗಳ ಕಾಲಕ್ಕೂ ವೀಸಾ ಪಡೆಯಬಹುದು

ಇನ್ನು ದುಬೈನಲ್ಲಿ ಸ್ವಂತ ವ್ಯವಹಾರ ಮಾಡ ಬಯಲುವವರು 5 ವರ್ಷಗಳ ಕಾಲಕ್ಕೂ ವೀಸಾವನ್ನೂ ಪಡೆಯುವ ಅವಕಾಶವಿದೆ. 5 ಮಿಲಿಯನ್​ ಧೀರಮ್ಸ್​​​​​​ ನಷ್ಟು ಹೂಡಿಕೆ ಮಾಡಬೇಕು. ರಿಯಲ್​ ಎಸ್ಟೇಟ್​ನಲ್ಲಿ ಹೂಡಿಕೆ ಮಾಡುವುದಾದರೆ ಹೂಡಿಕೆ ಹಣವನ್ನು ಲೋನ್​ನಿಂದ ಪಡೆದಿರಬಾರದು. ಆಸ್ತಿಯನ್ನು ಖರೀದಿಸಿದಲ್ಲಿ ಕನಿಷ್ಠ ಮೂರು ವರ್ಷಗಳವರೆಗೂ ಮಾರದಂತೆ ಉಳಿಸಿಕೊಳ್ಳಬೇಕು.

ವಿದ್ಯಾರ್ಥಿಗಳು ಗೋಲ್ಡನ್​ ವೀಸಾ ಪಡೆಯಬಹುದು

ಪ್ರತಿಭಾನ್ವಿತ ವಿದ್ಯಾರ್ಥಿಗಳು ಶೇ.95ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದರು ಗೋಲ್ಡನ್​​ ವೀಸಾಗೆ ಅರ್ಹರಾಗಿರುತ್ತಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾನು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: