• ಹೋಂ
 • »
 • ನ್ಯೂಸ್
 • »
 • Explained
 • »
 • Explained: ಭೂಕಂಪದ ಅವಶೇಷಗಳಲ್ಲಿ ಸಿಕ್ಕಿಬಿದ್ದವರ ಬದುಕು ಹೇಗಿರುತ್ತೆ?

Explained: ಭೂಕಂಪದ ಅವಶೇಷಗಳಲ್ಲಿ ಸಿಕ್ಕಿಬಿದ್ದವರ ಬದುಕು ಹೇಗಿರುತ್ತೆ?

ಟರ್ಕಿ ಮತ್ತು ಸಿರಿಯಾ ಭೂಕಂಪ

ಟರ್ಕಿ ಮತ್ತು ಸಿರಿಯಾ ಭೂಕಂಪ

ದುರಂತದ ನಂತರ ಮೊದಲ 24 ಗಂಟೆಗಳಲ್ಲಿ ಹೆಚ್ಚಿನ ರಕ್ಷಣಾ ಕಾರ್ಯಗಳು ನಡೆಯುತ್ತವೆ. ತದನಂತರ ಸಿಲುಕಿಕೊಂಡವರು ಬದುಕುಳಿಯುವ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದು ತಜ್ಞರ ಹೇಳಿಕೆಯಾಗಿದೆ.

 • Trending Desk
 • 2-MIN READ
 • Last Updated :
 • New Delhi, India
 • Share this:

  ಟರ್ಕಿ ಮತ್ತು ಸಿರಿಯಾದ ಕೆಲವು ಭಾಗಗಳಿಗೆ ಫೆಬ್ರವರಿ 6 ರಂದು ರಿಕ್ಟರ್ ಮಾಪಕದಲ್ಲಿ 7.8 ರ ತೀವ್ರತೆಯ (Turkey Syria Earthquake Magnitude) ಭೂಕಂಪ ಅಪ್ಪಳಿಸಿತು. ನಂತರ ಕೆಲವು ಗಂಟೆಗಳ ನಂತರ ಅದೇ ಪ್ರಮಾಣದ ಎರಡನೇ ಭೂಕಂಪ ಸಂಭವಿಸಿತು. ಭೂಕಂಪದಿಂದ (Turkey Syria Earthquake Latest News) ಉಂಟಾಗಿರುವ ವಿನಾಶ ಅಗಾಧ ಪ್ರಮಾಣದ್ದಾಗಿದ್ದು 16,000 ಕ್ಕೂ ಹೆಚ್ಚು ಜನರು ಸತ್ತಿದ್ದಾರೆ ಎಂದು ದೃಢಪಡಿಸಲಾಗಿದೆ. ಆದರೆ ಅವಶೇಷಗಳಡಿಯಲ್ಲಿ ಇನ್ನೂ ಮೃತದೇಹಗಳು ಪತ್ತೆಯಾಗತ್ತಲೇ ಇವೆ ಎಂದು ರಕ್ಷಣಾ ತಂಡಗಳು ತಿಳಿಸಿವೆ. ಹಾಗಾಗಿ ಸಾವಿನ ಸಂಖ್ಯೆ ಇನ್ನಷ್ಟು ತೀವ್ರವಾಗಿ ಹೆಚ್ಚಲಿದೆ ಎಂಬುದು ದೃಢಪಟ್ಟಿದೆ.


  ಟರ್ಕಿಗೆ ಹರಿದು ಬರುತ್ತಿದೆ ಜಾಗತಿಕ ನೆರವು
  ಟರ್ಕಿಯಲ್ಲಿ ಅಂಟಾಕ್ಯಾ ಮತ್ತು ಗಾಜಿಯಾಂಟೆಪ್ ನಗರಗಳು ಹೆಚ್ಚು ಹಾನಿಗೊಳಗಾಗಿವೆ ಮತ್ತು ಸಿರಿಯಾ ಅಲೆಪ್ಪೊ ಮತ್ತು ಇಡ್ಲಿಬ್‌ನಲ್ಲಿ ಕಟ್ಟಡಗಳು ಮತ್ತು ರಸ್ತೆಗಳ ನಾಶದಿಂದ ಅನೇಕ ಭಾಗಗಳೊಂದಿಗೆ ಸಂಪರ್ಕ ತಪ್ಪಿಹೋಗಿದೆ. ಇಂತಹ ಸನ್ನಿವೇಶದಲ್ಲೂ ಟರ್ಕಿ ಹಾಗೂ ಸಿರಿಯಾದೊಂದಿಗೆ ಹಗೆತನ ಕಟ್ಟಿಕೊಂಡಿರುವ ಅನೇಕ ದೇಶಗಳು ಸಹಾಯ ಹಸ್ತ ಚಾಚಿವೆ. ಹಾಗೂ ನಿರಾಶ್ರಿತರ ರಕ್ಷಣೆಗಾಗಿ ಸೇನೆಗಳನ್ನು ಕಳುಹಿಸಿಕೊಟ್ಟಿವೆ. ಆಹಾರ ಮತ್ತು ನಿರಾಶ್ರಿತ ತಾಣಗಳನ್ನು ಕಲ್ಪಿಸಿವೆ.


  ಸಹಾಯ ಹಸ್ತಚಾಚಿರುವ ದೇಶಗಳು
  ಟರ್ಕಿ ಹಾಗೂ ಸಿರಿಯಾಗೆ ಜಾಗತಿಕವಾಗಿ ನೆರವು ಹರಿದು ಬರುತ್ತಿದ್ದು ಭಾರತ, ಯುಎಸ್, ಯುಕೆ, ರಷ್ಯಾ, ಚೀನಾ, ಜಪಾನ್, ಪಾಕ್, ಇಸ್ರೇಲ್ ಹಾಗೂ ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳು ಸಹಾಯ ಹಸ್ತ ಚಾಚಿವೆ ಮತ್ತು ರಕ್ಷಣಾ ತಂಡಗಳನ್ನು ಕಳುಹಿಸಿವೆ. ಇಸ್ರೇಲ್ ಟರ್ಕಿಯೊಂದಿಗೆ ಉದ್ವಿಗ್ನ ಸಂಬಂಧಗಳನ್ನು ಹೊಂದಿದ್ದರೂ ಸಿರಿಯಾದೊಂದಿಗೆ ಯುದ್ಧಗಳನ್ನು ನಡೆಸುತ್ತಿದ್ದರೂ ಸಹಾಯಕ್ಕಾಗಿ ಮುಂದೆ ಬಂದಿದೆ.


  ಕಟ್ಟಡಗಳಡಿಯಲ್ಲಿ ಸಿಲುಕಿರುವ ರಕ್ಷಣೆ
  ಕಟ್ಟಡಗಳ ಅವೇಶಷಗಳಡಿಯಲ್ಲಿ ಸಾಕಷ್ಟು ಜನರು ಸಿಲುಕಿರುವುದು ಹಾಗೂ ರಕ್ಷಣಾ ತಂಡಗಳು ಅವರನ್ನು ರಕ್ಷಿಸುವುದರಲ್ಲಿ ನಿರತವಾಗಿವೆ. ಹೀಗೆ ಸಿಲುಕಿದವರ ಪರಿಸ್ಥಿತಿ, ಅವರಿಗೆ ತಗುಲಿದ ಗಾಯ, ಹವಾಮಾನ ಪರಿಸ್ಥಿತಿ ಹಾಗೂ ಹೇಗೆ ಸಿಲುಕಿದ್ದಾರೆ ಎಂಬುದರ ಮೇಲೆ ನಿರ್ಧರಿತವಾಗಿವೆ ಎಂದು ತಜ್ಞರು ತಿಳಿಸಿದ್ದಾರೆ. ವಿನಾಶಕಾರಿ ಭೂಕಂಪದಿಂದ ಕಾಣೆಯಾಗಿರುವ ಅದೆಷ್ಟೋ ಜನರನ್ನು ಹುಡುಕಲು ಪ್ರಪಂಚದಾದ್ಯಂತದ ಹುಡುಕಾಟ ತಂಡಗಳು ಟರ್ಕಿ ಮತ್ತು ಸಿರಿಯಾದಲ್ಲಿ ಸ್ಥಳೀಯ ತುರ್ತು ಸಿಬ್ಬಂದಿಯನ್ನು ಸೇರಿಕೊಂಡಿವೆ.


  24 ಗಂಟೆಗಳಲ್ಲಿ ನಡೆಯುತ್ತದೆ ತ್ವರಿತ ಕಾರ್ಯಾಚರಣೆ
  ದುರಂತದ ನಂತರ ಮೊದಲ 24 ಗಂಟೆಗಳಲ್ಲಿ ಹೆಚ್ಚಿನ ರಕ್ಷಣಾ ಕಾರ್ಯಗಳು ನಡೆಯುತ್ತವೆ. ತದನಂತರ ಸಿಲುಕಿಕೊಂಡವರು ಬದುಕುಳಿಯುವ ಸಾಧ್ಯತೆಗಳು ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದು ತಜ್ಞರ ಹೇಳಿಕೆಯಾಗಿದೆ. ಹೀಗೆ ಕಟ್ಟಡಗಳ ಅವೇಶಷಗಳಡಿಯಲ್ಲಿ ಸಿಲುಕಿಕೊಂಡವರು ಕಲ್ಲುಗಳ ಹೊಡೆತಗಳಿಂದ ತೀವ್ರವಾಗಿ ಗಾಯಗೊಳ್ಳುತ್ತಾರೆ. ಅವಶೇಷಗಳಡಿಯಲ್ಲಿ ಗಾಳಿ, ಬೆಳಕು, ಆಹಾರದ ಕೊರತೆಯಿಂದ ಬಳಲಿ ಸಾವನ್ನಪ್ಪುತ್ತಾರೆ ಎಂಬುದು ತಜ್ಞರ ಹೇಳಿಕೆಯಾಗಿದೆ.


  ಆದರೂ ಅವಶೇಷಗಳಡಿಯಲ್ಲಿ ಹತ್ತು ಹದಿನೈದು ದಿನ ಬದುಕುಳಿದವರೂ ಇದ್ದಾರೆ. ಆದರಿಲ್ಲಿ ಹವಾಮಾನ ಇನ್ನಿತರ ಅಂಶಗಳು ಮುಖ್ಯವಾಗಿರುತ್ತವೆ ಎಂಬುದು ತಜ್ಞರ ವಾದವಾಗಿದೆ.


  ರಕ್ಷಣಾ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡಿರುವ ಅಂಶಗಳು
  ಪರಿಹಾರ ವಿಮಾನಗಳಿಗೆ ಹಾರಲು ಅಡ್ಡಿಯನ್ನುಂಟು ಮಾಡಿರುವ ಕೆಟ್ಟ ಹವಾಮಾನ ಅಂತೆಯೇ ಕಠಿಣ ಗಾಳಿ ಹಾಗೂ ಹಿಮ ಬದುಕುಳಿದವರಿಗೆ ಕಷ್ಟಕರ ಪರಿಸ್ಥಿತಿಗಳನ್ನು ಏರ್ಪಡಿಸಿದೆ. ನಿರಾಶ್ರಿತರು ಟರ್ಕಿ-ಸಿರಿಯಾ ಗಡಿಯಲ್ಲಿನ ನಿರಾಶ್ರಿತ ಶಿಬಿರಗಳಲ್ಲಿ ವಾಸಿಸುತ್ತಿದ್ದು ತುರ್ತು ನೆರವಿನ ಅಗತ್ಯವಿದೆ


  ಸಿರಿಯಾದ ಮೇಲಿನ ನಿರ್ಬಂಧಗಳು ರಕ್ಷಣಾ ವ್ಯವಸ್ಥೆಯನ್ನು ಹದಗೆಡಿಸಿದ್ದು ಪರಿಹಾರಗಳನ್ನು ವಿಳಂಬಗೊಳಿಸುತ್ತಿವೆ. ಯುದ್ಧ-ಹಾನಿಗೊಳಗಾದ ದೇಶದ ಭಾಗಗಳು ಬಂಡುಕೋರರ ನಿಯಂತ್ರಣದಲ್ಲಿವೆ- ಮತ್ತು ಕೆಲವು ISIS ಅಡಿಯಲ್ಲಿ ನಲುಗುತ್ತಿವೆ. ಇದು ಹಿಂಸೆಗೆ ಪ್ರಚೋದನೆ ನೀಡಬಹುದು ಅಥವಾ ದುರಂತದ ಲಾಭವನ್ನು ಪಡೆಯುವ ಹುನ್ನಾರ ನಡೆಸಬಹುದು


  ಅವಶೇಷಗಳಡಿಯಲ್ಲಿ ಸಿಲುಕಿರುವವರು ಮೃತಪಡಲು ಕಾರಣಗಳೇನು?
  ಕಟ್ಟಡಗಳ ಅವಶೇಷಗಳಡಿಯಲ್ಲಿ ಸಿಲುಕಿರುವವರಿಗೆ ಆಹಾರ ಹಾಗೂ ಗಾಳಿ ದೊರೆಯದೇ ಇದ್ದಲ್ಲಿ ಹಾಗೂ ಹವಾಮಾನ ಪರಿಸ್ಥಿತಿ ಪ್ರತಿಕೂಲವಾದಲ್ಲಿ ಕೂಡ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇರುತ್ತದೆ. ಸಿರಿಯಾ ಮತ್ತು ಟರ್ಕಿಯಲ್ಲಿನ ಚಳಿಗಾಲದ ಪರಿಸ್ಥಿತಿಗಳು ರಕ್ಷಣಾ ಪ್ರಯತ್ನಗಳಿಗೆ ಅಡ್ಡಿಪಡಿಸಿವೆ ಮತ್ತು ತಾಪಮಾನವು ಘನೀಕರಣಕ್ಕಿಂತ ಕಡಿಮೆಯಾಗಿದೆ.


  ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ಯಾವಾಗ ನಿಲ್ಲಿಸುತ್ತವೆ?
  ಸಾಮಾನ್ಯವಾಗಿ ಐದನೇ ಹಾಗೂ ಏಳನೇ ದಿನಗಳ ನಂತರ ಬದುಕುಳಿದವರು ಕಂಡುಬರುವುದು ಅಪರೂ. ಆಗ ಹೆಚ್ಚಿನ ಹುಡುಕಾಟ ಮತ್ತು ರಕ್ಷಣಾ ತಂಡಗಳು ತಮ್ಮ ಕಾರ್ಯಾಚರಣೆಯನ್ನು ನಿಲ್ಲಿಸುತ್ತಾರೆ ಎಂದು ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ತುರ್ತು ಮತ್ತು ವಿಪತ್ತು ಔಷಧ ತಜ್ಞ ಡಾ.ಜರೋನ್ ಲೀ ತಿಳಿಸಿದ್ದಾರೆ.


  ಏಳು ದಿನಗಳ ನಂತರವೂ ಬದುಕಿದ ಉದಾಹರಣೆಯಿದೆ!
  ಆದರೆ ಏಳು ದಿನಗಳು ಕಳೆದ ನಂತರವೂ ಬದುಕುಳಿದ ಅನೇಕ ಅದೃಷ್ಟವಂತರ ಸುದ್ದಿಗಳಿವೆ. ದುರಾದೃಷ್ಟದ ಸಂಗತಿ ಎಂದರೆ ಹೀಗೆ ಸಂಭವಿಸುವುದು ತುಂಬಾ ಅಪರೂಪ ಹಾಗೂ ಅಸಾಮಾನ್ಯ ಪ್ರಕರಣಗಳಾಗಿರುತ್ತವೆ ಎಂದು ಜರೋನ್ ತಿಳಿಸಿದ್ದಾರೆ.


  ಇದನ್ನೂ ಓದಿ: Lookout Notice: ಲುಕ್‌ ಔಟ್ ನೋಟಿಸ್ ಎಂದರೇನು? ಯಾವಾಗ, ಯಾರ ವಿರುದ್ಧ ಇದನ್ನು ಹೊರಡಿಸಲಾಗುತ್ತದೆ?


  ಅವಶೇಷಗಳಿಂದ ಉಂಟಾದ ಗಾಯಗಳು, ಅಂಗ ಛೇದನ ಸೇರಿದಂತೆ ಕೆಲವೊಂದು ಆಘಾತಕಾರಿ ಗಾಯಗಳೊಂದಿಗೆ ಜನರು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆ ಎಂದು ನಾರ್ತ್‌ವೆಸ್ಟರ್ನ್ ಯೂನಿವರ್ಸಿಟಿಯ ಫೀನ್‌ಬರ್ಗ್ ವೈದ್ಯಕೀಯ ಶಾಲೆಯ ತುರ್ತು ವೈದ್ಯಕೀಯ ತಜ್ಞ ಡಾ ಜಾರ್ಜ್ ಚಿಯಾಂಪಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


  ಕಟ್ಟಡಗಳಡಿಯಲ್ಲಿ ಸಿಲುಕಿಕೊಂಡವರ ಮಾನಸಿಕ ಸ್ಥಿತಿ ಹೇಗಿರುತ್ತೆ?
  ಹೀಗೆ ಸಿಲುಕಿಕೊಂಡವರು ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗಿದ್ದರೆ ಆ ಕಾಯಿಲೆಗಳ ಪರಿಣಾಮ ಕೂಡ ಅವರ ಮೇಲೆ ಪರಿಣಾಮ ಬೀರುತ್ತದೆ. ಒಂದು ರೀತಿಯ ಉಸಿರುಗಟ್ಟಿಸುವ ಪರಿಸ್ಥಿತಿ ಅವರನ್ನು ಕಾಡುತ್ತದೆ. ಅಂತೆಯೇ ಈ ಸಮಯದಲ್ಲಿ ಅವರ ವಯಸ್ಸು, ಲಿಂಗ ಹಾಗೂ ಮಾನಸಿಕ ಸ್ಥಿತಿ ಕೂಡ ಮುಖ್ಯವಾಗಿರುತ್ತದೆ ಎಂಬುದು ಜಾರ್ಜ್ ಹೇಳಿಕೆಯಾಗಿದೆ.


  ಬದುಕುಳಿದವರು ಅನೇಕ ಮಂದಿ
  ಕೆಲವೊಂದು ಭೀಕರ ಸನ್ನಿವೇಶಗಳಲ್ಲಿ ಕೂಡ ಜನರು ಪಾರಾಗಿರುವುದನ್ನು ನಾವು ನೋಡಿರುತ್ತೇವೆ.  ಬದುಕಲು ಸಾಧ್ಯವಾಗದೇ ಇರುವ ಪರಿಸ್ಥಿತಿಗಳಲ್ಲಿ ಕೂಡ ಬದುಕಿ ಬಂದವರ ಹಲವಾರು ದೃಷ್ಟಾಂತಗಳಿವೆ ಎಂದು ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ತುರ್ತು ವೈದ್ಯಕೀಯ ತಜ್ಞರಾದ ಡಾ. ಕ್ರಿಸ್ಟೋಫರ್ ಕೊಲ್ವೆಲ್ ತಿಳಿಸಿದ್ದಾರೆ.


  ಒಮ್ಮೊಮ್ಮೆ ಹೀಗೆ ಬದುಕಿ ಬಂದವರು ಯುವಕರಾಗಿರುತ್ತಾರೆ ಹಾಗೂ ಉತ್ತಮ ಆರೋಗ್ಯವನ್ನು ಹೊಂದಿದವರಾಗಿರುತ್ತಾರೆ. ಹೀಗಾಗಿ ಬದುಕಲು ಬೇಕಾದ ಗಾಳಿ ಹಾಗೂ ನೀರನ್ನು ಹುಡುಕಿಕೊಳ್ಳುವಷ್ಟು ಶಕ್ತಿ ಅವರಲ್ಲಿರುತ್ತದೆ ಎಂದು ಕ್ರಿಸ್ಟೋಫರ್ ತಿಳಿಸಿದ್ದಾರೆ.


  ಯುವಕರು ಹಾಗೂ ಆರೋಗ್ಯವಂತರು ಹೆಚ್ಚು ಪಾರಾಗುತ್ತಾರೆ
  2011ರ ಜಪಾನ್ ಭೂಕಂಪ ಹಾಗೂ ಸುನಾಮಿಯ ನಂತರ ಹದಿಹರೆಯದ ಯುವಕ ಹಾಗೂ ಆತನ 80 ರ ಹರೆಯದ ಅಜ್ಜಿ ಒಂಭತ್ತು ದಿನಗಳ ನಂತರ ಪತ್ತೆಯಾಗಿದ್ದರು ಎಂಬ ಘಟನೆಯನ್ನು ಕ್ರಿಸ್ಟೋಫರ್ ನೆನಪಿಸಿಕೊಂಡಿದ್ದಾರೆ. ಹಿಂದಿನ ವರ್ಷ, 15 ದಿನಗಳ ನಂತರ ಪೋರ್ಟ್-ಔ-ಪ್ರಿನ್ಸ್‌ನಲ್ಲಿ ಭೂಕಂಪದ ಅವಶೇಷಗಳಿಂದ 16 ವರ್ಷದ ಹೈಟಿ ಹುಡುಗಿಯನ್ನು ರಕ್ಷಿಸಲಾಯಿತು ಎಂಬ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.


  ಮಾನಸಿಕವಾಗಿ ಸದೃಢವಾಗಿರೋದು ಮುಖ್ಯ
  ಬದುಕುಳಿಯಲು ಮಾನಸಿಕ ಸ್ಥಿತಿ ಮುಖ್ಯವಾಗಿರುತ್ತದೆ. ಒಮ್ಮೊಮ್ಮೆ ಭರವಸೆ ಕಳೆದುಕೊಳ್ಳುವುದರಿಂದ ಕೂಡ ದೇಹ ದುರ್ಬಲಗೊಳ್ಳುತ್ತದೆ ಹಾಗೂ ಕೊನೆಗೆ ಮರಣ ಸಂಭವಿಸುತ್ತದೆ ಎಂಬುದು ಕ್ರಿಸ್ಟೋಪರ್ ಹೇಳಿಕೆಯಾಗಿದೆ. ರಕ್ಷಣಾ ತಂಡದವರು ಹಾಗೂ ಬದುಕುಳಿದ ಉಳಿದ ಸಂತ್ರಸ್ತರ ಸಂಪರ್ಕವಿಲ್ಲದೇ ಇದ್ದ ಸಂದರ್ಭದಲ್ಲಿ ಕೂಡ ಸಿಲುಕಿಹಾಕಿಕೊಂಡವರು ನಿರಾಶರಾಗಿ ಭರವಸೆ ಕಳೆದುಕೊಂಡು ಅಲ್ಲಿಯೇ ನಿಶ್ಚಲರಾಗುತ್ತಾರೆ ಎಂದು ಕ್ರಿಸ್ಟೋಫರ್ ತಿಳಿಸಿದ್ದಾರೆ.


  ಇದನ್ನೂ ಓದಿ: Explained: ಕಣಿವೆ ನಾಡಿನಲ್ಲಿ 'ಖಜಾನೆ'! ಬದಲಾಗುತ್ತಾ ಭಾರತದ ಅದೃಷ್ಟ? ಏನಿದು ಲಿಥಿಯಂ?


  ಜೀವಂತವಾಗಿರುವ ಯಾರಾದರೂ ನಿಮ್ಮೊಂದಿಗಿದ್ದರೆ ಬದುಕಬೇಕೆಂಬ ಇಚ್ಛೆಯಿಂದ ಇಬ್ಬರೂ ಮಾನಸಿಕ ಸ್ಥಿತಿಯನ್ನು ಗಟ್ಟಿಗೊಳಿಸುತ್ತೀರಿ ಹಾಗೂ ಭರವಸೆ ಕಳೆದುಕೊಳ್ಳುವುದಿಲ್ಲ ಎಂದು ಜಾರ್ಜ್ ತಿಳಿಸಿದ್ದಾರೆ.
  ಟರ್ಕಿಯ ಭೂಕಂಪ
  ಟರ್ಕಿಯಲ್ಲಿ ಸಂಭವಿಸಿದ ಮೊದಲ ಭೂಕಂಪವು ರಿಕ್ಟರ್ ಮಾಪಕದಲ್ಲಿ 7.8 ಎಂದು ನೋಂದಾಯಿತವಾಗಿದೆ. 100 ಕಿಮೀ ಉದ್ದಕ್ಕೂ ಇದು ಚಾಚಿಕೊಂಡಿದ್ದು ಕಟ್ಟಡಗಳಿಗೆ ಹಾನಿಯನ್ನುಂಟು ಮಾಡುವಷ್ಟು ಪ್ರಬಲವಾಗಿತ್ತು ಎಂದು ತಜ್ಞರು ಅಂದಾಜಿಸಿದ್ದಾರೆ.


  ಭೂಕಂಪಕ್ಕೆ ಕಾರಣವೇನು?
  ಭೂಮಿಯ ಹೊರಪದರವು ಪ್ರತ್ಯೇಕ ಪ್ಲೇಟ್‌ಗಳಿಂದ ರಚನೆಗೊಂಡಿದ್ದು ಅವು ಪರಸ್ಪರ ಗೂಡುಕಟ್ಟಿದ ಶೈಲಿಯಲ್ಲಿ ಜೋಡಣೆಗೊಂಡಿರುತ್ತವೆ. ಈ ಪ್ಲೇಟ್‌ಗಳು ಚಲಿಸಲು ಪ್ರಯತ್ನಿಸಿದಾಗ ಒಂದಕ್ಕೊಂದು ತಿಕ್ಕಿಕೊಳ್ಳುತ್ತವೆ. ಆದರೆ ಒಮ್ಮೊಮ್ಮೆ ಒತ್ತಡ ಅಧಿಕವಾದಾಗ ಒಂದು ಪ್ಲೇಟ್ ಸ್ವಲ್ಪ ಸರಿದರೂ ಕೂಡ ಭೂಮಿಯ ಮೇಲ್ಮೈ ಚಲನೆಯಾಗುತ್ತದೆ.


  ಭೂಕಂಪಗಳನ್ನು ಹೇಗೆ ಅಳೆಯಲಾಗುತ್ತದೆ?
  ಮೊಮೆಂಟ್ ಮ್ಯಾಗ್ನಿಟ್ಯೂಡ್ ಸ್ಕೇಲ್ ಮೂಲಕ ಭೂಕಂಪನಗಳನ್ನು ಅಳೆಯಲಾಗುತ್ತದೆ. ರಿಕ್ಟರ್ ಮಾಪಕದ ಬದಲಿಗೆ ಈ ಪರಿಕವನ್ನು ಅತ್ಯಾಧುನಿಕ ಮಾಪಕವಾಗಿ ಬಳಸಲಾಗುತ್ತಿದೆ. ಭೂಕಂಪಕ್ಕೆ ಕಾರಣವಾದ ಸಂಖ್ಯೆಯು ದೋಷ ರೇಖೆಯು ಚಲಿಸಿದ ದೂರ ಮತ್ತು ಅದನ್ನು ಚಲಿಸಿದ ಬಲದ ಸಂಯೋಜನೆಯನ್ನು ಪ್ರತಿನಿಧಿಸುತ್ತದೆ.

  Published by:ಗುರುಗಣೇಶ ಡಬ್ಗುಳಿ
  First published: