ತಾಲಿಬಾನ್ನ ರಕ್ಕಸೀ ಪ್ರವೃತ್ತಿ ಬಗ್ಗೆ ಮಾಧ್ಯಮಗಳಲ್ಲಿ ಬಹಳಷ್ಟು ವರದಿಗಳು ಬರುತ್ತಲೇ ಇರುತ್ತವೆ. ಸೋಷಿಯಲ್ ಮೀಡಿಯಾಗಳಲ್ಲಿ ತಾಲಿಬಾನ್ಗೆ ಸಂಬಂಧಿಸಿದ ಅನೇಕ ಸುದ್ದಿ, ವಿಡಿಯೋ, ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಮೊನ್ನೆ ಕಂದಹಾರ್ನಲ್ಲಿ ಹೆಲಿಕಾಪ್ಟರ್ನಲ್ಲಿ ತಾಲಿಬಾನಿಗಳು ಚಲಾಯಿಸುತ್ತಿದ್ದ ಹೆಲಿಕಾಪ್ಟರ್ನ ವಿಡಿಯೋವೊಂದು ತಾಲಿಬ್ ಟೈಮ್ಸ್ ಎಂಬ ಹೆಸರಿನ ಟ್ವಿಟ್ಟರ್ ಖಾತೆಯಿಂದ ಅಪ್ಲೋಡ್ ಆಗಿತ್ತು. ಅದೀಗ ಭಾರೀ ವೈರಲ್ ಆಗಿದೆ. ಅಮೆರಿಕ ಸೇನೆ ಸಂಪೂರ್ಣ ಕಾಲ್ತೆಗೆದ ಬೆನ್ನಲ್ಲೇ ತಾಲಿಬಾನ್ ಪ್ಯಾಟ್ರೋಲಿಂಗ್ ನಡೆಸುತ್ತಿರುವ ಚಿತ್ರ ಇದಾಗಿತ್ತು. ಆದರೆ, ಈ ದೃಶ್ಯದಲ್ಲಿ ಇರುವ ಹೆಲಿಕಾಪ್ಟರ್ನಲ್ಲಿ ಕೆಳಗೆ ಹಗ್ಗದಿಂದ ಒಬ್ಬ ವ್ಯಕ್ತಿಯ ದೇಹ ನೇತಾಡುತ್ತಿತ್ತು. ಈ ವಿಡಿಯೋ ಹಾಕಿದ ತಾಲಿಬ್ ಟೈಮ್ಸ್ ಈ ವ್ಯಕ್ತಿ ನೇತಾಡುತ್ತಿದ್ದ ಬಗ್ಗೆ ಏನೂ ಬರೆದಿರಲಿಲ್ಲ. ತಾಲಿಬಾನ್ನಿಂದ ಪಹರೆಯಾಗುತ್ತಿದೆ ಎಂದು ತಿಳಿಸಿದ್ದು ಬಿಟ್ಟು ಬೇರೆ ಯಾವ ಮಾಹಿತಿಯನ್ನೂ ಹಂಚಿಕೊಂಡಿರಲಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ತರಹಾವೇರಿ ಚರ್ಚೆಗೆ ಒಳಗಾಗಿದೆ. ತಾಲಿಬಾನ್ನ ರಕ್ಕಸ ಪ್ರವೃತ್ತಿಗೆ ಈ ಚಿತ್ರಕ್ಕಿಂತ ಬೇರೆ ಸಾಕ್ಷ್ಯ ಬೇಕಿಲ್ಲ ಎಂದೇ ಬಹಳಷ್ಟು ಮಂದಿ ಕಮೆಂಟ್ ಮಾಡಿದ್ದಾರೆ. ವ್ಯಕ್ತಿಯನ್ನ ಹೆಲಿಕಾಪ್ಟರ್ನಲ್ಲಿ ನೇಣುಬಿಗಿದು ಹೊತ್ತೊಯ್ಯಲಾಗುತ್ತಿದೆ ಎಂಬ ಅಭಿಪ್ರಾಯಗಳೇ ಹೆಚ್ಚಾಗಿ ಕಂಡುಬಂದಿವೆ. ಅಮೆರಿಕದ ರಿಪಬ್ಲಿಕನ್ ಪಕ್ಷದ ಸಂಸದ ಟೆಡ್ ಕ್ರಜ್ ಅವರು ಈ ವಿಡಿಯೋ ಶೇರ್ ಮಾಡಿಕೊಂಡು ಬೈಡನ್ ಸರ್ಕಾರವನ್ನು ಕಟುವಾಗಿ ಟೀಕೆ ಕೂಡ ಮಾಡಿದ್ದಾರೆ.
ಆದರೆ, ಜನರು ಅಂದುಕೊಂಡಂತೆ ಈ ವಿಡಿಯೋದಲ್ಲಿ ವ್ಯಕ್ತಿಯನ್ನ ನೇಣುಬಿಗಿದು ಹೊತ್ತೊಯ್ಯುತ್ತಿಲ್ಲ ಎಂದು ಆಲ್ಟ್ ನ್ಯೂಸ್ ಎಂಬ ಫ್ಯಾಕ್ಟ್ ಚೆಕಿಂಗ್ ವೆಬ್ಸೈಟ್ ವಿಮರ್ಶಿಸಿದೆ. ವಿಡಿಯೋದಲ್ಲಿರುವ ದೃಶ್ಯವನ್ನು ಝೂಮ್ ಮಾಡಿ ನೋಡಿದರೆ ಆ ವ್ಯಕ್ತಿಯ ಕತ್ತಿಗೆ ಅಲ್ಲ ತೋಳಿನ ಕೆಳಗೆ ಹಗ್ಗ ಕಟ್ಟಿರುವುದು ಕಂಡುಬರುತ್ತದೆ. ಅಲ್ಲದೇ ವಿಡಿಯೋದಲ್ಲಿ 15 ಸೆಕೆಂಡುಗಳ ಬಳಿಕ ಆ ವ್ಯಕ್ತಿಯ ದೇಹದಲ್ಲಿ ಚಲನೆ ಕಾಣಿಸುತ್ತದೆ. ಇದರಿಂದ ಆ ವ್ಯಕ್ತಿ ಸತ್ತಿಲ್ಲ ಎಂಬುದು ದೃಢಪಡುತ್ತದೆ ಎಂದು ಆಲ್ಟ್ ನ್ಯೂಸ್ ಅಭಿಪ್ರಾಯಪಟ್ಟಿದೆ.
Another landmark picture taking the world in a new era of terror.
Taliban hang a person, presumed to be an American interpreter, from a U.S. Blackhawk helicopter.
The left over US helicopters will now be used in #Afganistan like this. pic.twitter.com/8q6C5bo4IB
— Sudhir Chaudhary (@sudhirchaudhary) August 31, 2021
ಅಷ್ಟೇ ಅಲ್ಲ, ಕಂದಹಾರ್ ರಾಜ್ಯಪಾಲರ ಕಚೇರಿಯ ಖಾತೆಯಿಂದಲೂ ಇಂಥದ್ದೇ ಒಂದು ವಿಡಿಯೋ ಅಪ್ಲೋಡ್ ಆಗಿದೆ. ತಾನು ಆ ಖಾತೆಯೊಂದಿಗೆ ಡಿಎಂ ಮೂಲಕ ಸಂಪರ್ಕ ಸಾಧಿಸಿ ವಿಚಾರಿಸಿದೆವು. ರಾಜ್ಯಪಾಲರ ಕಟ್ಟಡದಲ್ಲಿದ್ದ ಧ್ವಜವನ್ನು ಸರಿಪಡಿಸಲು ಹೆಲಿಕಾಪ್ಟರ್ನಿಂದ ಆ ವ್ಯಕ್ತಿಯನ್ನ ಹಗ್ಗಕಟ್ಟಿ ಕೆಳಗಿಳಿಸಲಾಗಿತ್ತು ಎಂಬ ವಿಚಾರ ಗೊತ್ತಾಯಿತು ಎಂದು ಆಲ್ಟ್ ನ್ಯೂಸ್ ತಿಳಿಸಿದೆ.
Black Hawk over the #Kandahar governor office. #Kandahar #Afghanistan pic.twitter.com/9dLT46L2Ut
— Aśvaka - آسواکا News Agency (@AsvakaNews) August 30, 2021
ಅಫ್ಘಾನಿಸ್ತಾನದ ಸ್ಥಳೀಯ ಪತ್ರಕರ್ತರೂ ಕೂಡ ಈ ವಿಡಿಯೋವನ್ನು ಅಪ್ಲೋಡ್ ಮಾಡಿ, ಇದು 100 ಮೀಟರ್ ಎತ್ತರದ ದ್ವಜಸ್ತಂಭದ ಮೇಲೆ ಬಾವುಟ ಕಟ್ಟಲು ತಾಲಿಬಾನ್ ಮಾಡುತ್ತಿರುವ ಪ್ರಯತ್ನ ಎಂದು ಬರೆದಿದ್ದಾರೆ. ಇನ್ನೂ ಅನೇಕ ಸ್ಥಳೀಯರೂ ಕೂಡ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿದ್ಧಾರೆ. ಅವರ್ಯಾರೂ ಕೂಡ ಇದು ತಾಲಿಬಾನಿಗಳಿಂದ ಸಾರ್ವಜನಿಕವಾಗಿ ವ್ಯಕ್ತಿಯನ್ನ ನೇಣು ಹಾಕಿದ್ದಾರೆಂದು ಹೇಳಿಲ್ಲ ಎನ್ನಲಾಗಿದೆ. ಹಾಗೆಯೇ, ಈ ವಿಡಿಯೋವನ್ನು ಅಪ್ಲೋಡ್ ಮಾಡಿದ್ದ ತಾಲಿಬ್ ಟೈಮ್ಸ್ ಹೆಸರಿನ ಟ್ವಿಟ್ಟರ್ ಖಾತೆ ಸದ್ಯ ಸಸ್ಪೆಂಡ್ ಆಗಿದೆ.
ಇದನ್ನೂ ಓದಿ: Fact Check: ಭಾರತದ ಅಧ್ಯಕ್ಷತೆಯಲ್ಲಿ ಯುಎನ್ಎಸ್‌ಸಿ ತಾಲಿಬಾನ್ ಅನ್ನು ಭಯೋತ್ಪಾದಕ ಪಟ್ಟಿಯಿಂದ ತೆಗೆದುಹಾಕಿದೆಯೇ..?
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ