• Home
 • »
 • News
 • »
 • explained
 • »
 • Types of Cryptocurrencies: ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಟಾಪ್ 10 ಕ್ರಿಪ್ಟೊಕರೆನ್ಸಿಗಳು

Types of Cryptocurrencies: ಪ್ರತಿಯೊಬ್ಬರೂ ತಿಳಿದಿರಲೇಬೇಕಾದ ಟಾಪ್ 10 ಕ್ರಿಪ್ಟೊಕರೆನ್ಸಿಗಳು

Top ten cryptocurrencies

Top ten cryptocurrencies

Top ten cryptocurrencies: ಕ್ರಿಪ್ಟೊಕರೆನ್ಸಿ ಹಡಗಿನಲ್ಲಿ ಪ್ರಯಾಣ ಆರಂಭಿಸಲು, ಸಂಬಂಧಿಸಿದ ಇತರ ಅಪರಿಚಿತ ಕ್ರಿಪ್ಟೊಕರೆನ್ಸಿಗಳತ್ತ ನೋಡುವ ಮುನ್ನ ಕೆಲವು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಕ್ರಿಪ್ಟೊಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು

 • Share this:

  ಇಂದು ಸಾವಿರಾರು Cryptocurrency ಚಲಾವಣೆಯಲ್ಲಿವೆ, ಖಚಿತವಾಗಿ ಯಾವ ಕ್ರಿಪ್ಟೊಕರೆನ್ಸಿಗಳ ಮೇಲೆ ನಂಬಿಕೆ ಇಡಬೇಕು ಎಂಬ ಬಗ್ಗೆ ತಿಳಿದುಕೊಳ್ಳಲು ಮೊದಲ ಬಾರಿಯ ಬಳಕೆದಾರರಲ್ಲಿ ಸಾಕಷ್ಟು ಗೊಂದಲ ಮತ್ತು ಅತೀವ ಆಸಕ್ತಿ ಇರುತ್ತದೆ. ಇದರ ಜೊತೆಗೆ, ಕೆಲವು ಸಂದರ್ಭಗಳಲ್ಲಿ ತಮ್ಮ ಮೌಲ್ಯದಲ್ಲಿ ಶೇಕಡಾ 100ರಷ್ಟು ಏರಿಕೆ ದಾಖಲಿಸಿ FOMOವನ್ನು ಪ್ರೇರೇಪಿಸಿರುವ ಕೆಲವು ಅಪರಿಚಿತ ಕ್ರಿಪ್ಟೊಕರೆನ್ಸಿಗಳು ಇರುವುದೂ ನಿಜ.


  ಕ್ರಿಪ್ಟೊಕರೆನ್ಸಿ ಹಡಗಿನಲ್ಲಿ ಪ್ರಯಾಣ ಆರಂಭಿಸಲು, ಸಂಬಂಧಿಸಿದ ಇತರ ಅಪರಿಚಿತ ಕ್ರಿಪ್ಟೊಕರೆನ್ಸಿಗಳತ್ತ ನೋಡುವ ಮುನ್ನ ಕೆಲವು ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಕ್ರಿಪ್ಟೊಕರೆನ್ಸಿಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. ಇದನ್ನು ಗಮನದಲ್ಲಿ ಇರಿಸಿಕೊಂಡು, ನಿಮ್ಮ ಕ್ರಿಪ್ಟೊ ಪ್ರಯಾಣವನ್ನು ಪ್ರಾರಂಭಿಸಲು ಸಹಾಯವಾಗುವಂತೆ, ಆಗಸ್ಟ್ 2021ರ ಮಾರುಕಟ್ಟೆ ಮೌಲ್ಯವನ್ನು ಆಧರಿಸಿ, ನಾವು ಟಾಪ್ 10 ಕ್ರಿಪ್ಟೊಕರೆನ್ಸಿಗಳನ್ನು ನಿಮಗೆ ಇಲ್ಲಿ ಒಟ್ಟುಗೂಡಿಸಿದ್ದೇವೆ.


  1 - Bitcoin:
  ಎಲ್ಲ ಕ್ರಿಪ್ಟೊಕರೆನ್ಸಿಗಳ ದೊಡ್ಡಪ್ಪ ಎಂದೇ ಕರೆಯಬಹುದಾದ, Bitcoin ಅನ್ನು ಸತೋಷಿ ನಕಮೋಟೊ ಎಂಬ ಹೆಸರಿನ ಅಡಿಯಲ್ಲಿ ಕೆಲವು ವ್ಯಕ್ತಿ ಅಥವಾ ಕೆಲವು ಗುಂಪು 2009ರಲ್ಲಿ ರಚಿಸಲಾದ ನೈಜ ಕ್ರಿಪ್ಟೊಕರೆನ್ಸಿಯಾಗಿದೆ. ಬಹುತೇಕ ಕ್ರಿಪ್ಟೊಕರೆನ್ಸಿಗಳಂತೆಯೇ, Bitcoin ಸಹ ಬ್ಲಾಕ್‌ಚೈನ್‌ನಲ್ಲಿ ರನ್ ಆಗುತ್ತದೆ, ಬ್ಲಾಕ್‌ಚೈನ್ ಎಂಬುದು ಸಾವಿರಾರು ಕಂಪ್ಯೂಟರ್‌ಗಳ ಒಂದು ನೆಟ್‌ವರ್ಕ್‌ ಆಗಿದ್ದು, ಅದು ಯಾವುದೇ ಮಧ್ಯವರ್ತಿಗಳಿಲ್ಲದೇ ನೈಜ ಸಮಯದಲ್ಲಿ ವಹಿವಾಟುಗಳನ್ನು ಪರಿಶೀಲಿಸುತ್ತದೆ.
  ಕಾರ್ಯನಿರ್ವಹಣೆಯ ಪುರಾವೆಯಂತಹ ಹೆಚ್ಚುವರಿ ಪರಿಕಲ್ಪನೆಗಳ ಜೊತೆಗೆ, ಯಾವುದೇ ಹ್ಯಾಕಿಂಗ್ ಪ್ರಯತ್ನಗಳಿಂದ Bitcoin ಭದ್ರವಾಗಿದೆ ಮತ್ತು ಸುರಕ್ಷಿತವಾಗಿದೆ. ಆಗಸ್ಟ್ ಅಂತ್ಯಕ್ಕೆ ಇದರ ಮಾರುಕಟ್ಟೆ ಬಂಡವಾಳ $856 ಬಿಲಿಯನ್ ಇದ್ದು, 5 ವರ್ಷಗಳ ಹಿಂದೆ $500 ಇದ್ದ ಒಂದು ಬಿಟ್‌ಕಾಯಿನ್ ದರವು ಇಂದು $45,000 ಆಗಿದೆ, ಅಂದರೆ ಆಶ್ಚರ್ಯಗೊಳಿಸುವಂತಹ 8900% ರಷ್ಟು ರಿಟರ್ನ್ಸ್ ಗಳಿಸಿದೆ ಎಂಬುದನ್ನು ಇದು ತೋರಿಸುತ್ತದೆ.


  2 – Ethereum:
  Ethereum ಒಂದು ಬ್ಲಾಕ್‌ಚೈನ್ ಆಗಿದ್ದು, Ether ಅಥವಾ ETH ಅನ್ನು ತನ್ನದೇ ಆದ ಟೋಕನ್ ಆಗಿ ಹೊಂದಿದೆ ಮತ್ತು ಅದನ್ನು ಸಾಮಾನ್ಯವಾಗಿ ಕ್ರಿಪ್ಟೊಕರೆನ್ಸಿ ಎಂದೂ ಸಹ ಉಲ್ಲೇಖಿಸಲಾಗುತ್ತದೆ. ಒಂದು ವೇಳೆ ನೀವು ಡಿಜಿಟಲ್ ರೂಪದಲ್ಲಿ NFTಗಳನ್ನು ಮಾರಾಟ ಮಾಡುವುದರ ಬಗ್ಗೆ ಕೇಳಿದ್ದರೆ, ಅವೆಲ್ಲವನ್ನೂ ಬಹುತೇಕ Ethereum ಬ್ಲಾಕ್‌ಚೈನ್ ಬಳಸಿಕೊಂಡು ಪ್ರಕ್ರಿಯೆಗೊಳಿಸಲಾಗಿರುತ್ತದೆ. ನಿರಂತರವಾಗಿ ಅಪ್‌ಗ್ರೇಡ್ ಆಗಲು ಮತ್ತು ಮಾರುಕಟ್ಟೆ ಟ್ರೆಂಡ್‌ನಲ್ಲಿ ಉನ್ನತ ಸ್ಥಾನದಲ್ಲಿರಲು ಪ್ರಯತ್ನಿಸುವ ಅತ್ಯಂತ ಸದೃಢ ಪ್ಲಾಟ್‌ಫಾರ್ಮ್‌ಗಳಲ್ಲಿ ಇದೂ ಒಂದಾಗಿದೆ – ಗಮನಾರ್ಹ ಮೊತ್ತದ ಮೂಲಕ ಫಾಸಿಲ್ ಫ್ಯುಯಲ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಇದರ ಇತ್ತೀಚಿನ ಉಪಕ್ರಮ ಹೊಂದಿದೆ.


  ಕ್ರಿಪ್ಟೊಕರೆನ್ಸಿಯಾಗಿಯೂ ಇದು ಬೆರಗುಗೊಳಿಸುವ ರಿಟರ್ನ್ಸ್ ನೀಡಿದೆ, 5 ವರ್ಷಗಳ ಅವಧಿಯಲ್ಲಿ $11 ನಿಂದ $3000 ವರೆಗೂ ಬೆಳವಣಿಗೆಯಾಗಿದ್ದು, 27,000% ರಷ್ಟು ಅದ್ಭುತ ರಿಟರ್ನ್ ದಾಖಲಿಸಿದೆ. ಇದರ ಪ್ರಸ್ತುತ ಮಾರುಕಟ್ಟೆ ಬಂಡವಾಳ $357 ಬಿಲಿಯನ್ ಆಗಿದ್ದು, ಇದನ್ನು ವಿಶ್ವದ ಎರಡನೇ ದೊಡ್ಡ ಕ್ರಿಪ್ಟೊಕರೆನ್ಸಿಯನ್ನಾಗಿ ಮಾಡಿದೆ.
  ಹಾಗಾದರೆ ಇದಕ್ಕಾಗಿ ಎಲ್ಲಿ ವಿಚಾರಿಸಬೇಕು, ಯಾರನ್ನು ಕೇಳಬೇಕು ಎಂದು ಕೇಳಿಕೊಂಡರೆ, Zebpay ಅನ್ನು ಶಿಫಾರಸು ಮಾಡಲು ನಮಗೆ ಅನುಮತಿಸಿ, ನಿಮ್ಮ ಇಷ್ಟದ ಕ್ರಿಪ್ಟೊಗಳಲ್ಲಿ ಕೇವಲ 100 ರೂಪಾಯಿಯಿಂದ ಆರಂಭಿಸಿ ಹೂಡಿಕೆ ಮಾಡಲು ಅದು ಅವಕಾಶ ಮಾಡಿಕೊಡುತ್ತದೆ. ನಿಮ್ಮ ಮೊದಲ ಕ್ರಿಪ್ಟೊಕರೆನ್ಸಿಯ ಖರೀದಿಯನ್ನು ಪ್ರಾರಂಭಿಸಲು ನೀವು ಮಾಡಬೇಕಿರುವುದು ಇಷ್ಟೇ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ತ್ವರಿತವಾಗಿ ಸರಳ KYC ಪ್ರಕ್ರಿಯೆಯನ್ನು ಸ್ವತಃ ದೃಢೀಕರಿಸಿ.


  3 – Binance Coin:
  $70 ಮಿಲಿಯನ್ ಮಾರುಕಟ್ಟೆ ಬಂಡವಾಳದೊಂದಿಗೆ, Binance Coin ಇಂದು ಲಭ್ಯವಿರುವ ಮೂರನೇ ಅತ್ಯಂತ ಜನಪ್ರಿಯ ಕ್ರಿಪ್ಟೊಕರೆನ್ಸಿಯಾಗಿದೆ. ಇದನ್ನು ಟ್ರೇಡಿಂಗ್ ಮಾಡಲು, ಪಾವತಿ ಪ್ರಕ್ರಿಯೆಗೊಳಿಸಲು ಅಥವಾ ಪ್ರಯಾಣ ವ್ಯವಸ್ಥೆಗಳನ್ನು ಬುಕಿಂಗ್ ಮಾಡುವುದಕ್ಕೂ ಸಹ ಬಳಸಬಹುದು ಮತ್ತು ಕ್ರಿಪ್ಟೊಕರೆನ್ಸಿಯ ಇತರ ರೂಪಗಳಾದ Ethereum ಅಥವಾ Bitcoinಗಳೊಂದಿಗೆ ಟ್ರೇಡಿಂಗ್ ಅಥವಾ ಎಕ್ಸ್‌ಚೇಂಜ್ ಸಹ ಮಾಡಬಹುದು.


  ಭಾರತದಲ್ಲಿ, Zebpay ಕ್ರಿಪ್ಟೊಕರೆನ್ಸಿ ಪ್ಲಾಟ್‌ಫಾರ್ಮ್ ತನ್ನ ಬಳಕೆದಾರರಿಗೆ ಇದಕ್ಕಿಂತ ಅತ್ಯುತ್ತಮವಾದುದನ್ನು ನೀಡುತ್ತದೆ. Zebpay Earnನೊಂದಿಗೆ, KYC-ನೋಂದಾಯಿತ ಬಳಕೆದಾರರು ಆಯ್ದ ಕ್ರಿಪ್ಟೊ ಹೋಲ್ಡಿಂಗ್ಸ್‌ಗಳ ಮೇಲೆ ದಿನವೂ ರಿಟರ್ನ್ಸ್ ಗಳಿಸಲು ಅರ್ಹರಾಗುತ್ತಾರೆ. ಈಗ ಜಾರಿಯಲ್ಲಿರುವಂತೆ, ನೀವು ಹೊಂದಿರುವ ಕಾಯಿನ್‌ಗಳು ಮತ್ತು ಕ್ರಿಪ್ಟೊಕರೆನ್ಸಿಯನ್ನು ಆಧರಿಸಿ, ಕೆಲವು ಕ್ರಿಪ್ಟೊಗಳನ್ನು ಹೊಂದಿರುವುದಕ್ಕಾಗಿ ಮಾತ್ರವೇ ನೀವು, 1% ನಿಂದ 7.5% ವರೆಗಿನ ರಿಟರ್ನ್ ಅನ್ನು ಕ್ರಿಪ್ಟೊಗಳಲ್ಲಿ ಗಳಿಸುತ್ತೀರಿ. ಕ್ರಿಪ್ಟೊಕರೆನ್ಸಿಯನ್ನು ಸಂಗ್ರಹಿಸಲು ಮತ್ತು ನಿಮ್ಮ ಕ್ರಿಪ್ಟೊ ಹೋಲ್ಡಿಂಗ್ಸ್ ಮೇಲೆ ರಿಟರ್ನ್ ಗಳಿಸಲು Zebpay Earn ಅತ್ಯುತ್ತಮ ವಿಧಾನವಾಗಿದೆ.


  4 – Cardano:
  ಹೊಸ ಕ್ರಿಪ್ಟೊಕರೆನ್ಸಿಗಳಲ್ಲಿ Cardano ಒಂದಾಗಿದ್ದರೂ, ಮಾರುಕಟ್ಟೆಯಲ್ಲಿ ತನ್ನದೇ ಹವಾ ಸೃಷ್ಟಿಸಿದೆ ಮತ್ತು ಅತ್ಯಂತ ಹೆಚ್ಚು ಆಸಕ್ತಿ ಕೆರಳಿಸಿರುವ ಕ್ರಿಪ್ಟೊಕರೆನ್ಸಿಯಾಗಿದೆ. ವಹಿವಾಟುಗಳನ್ನು ಮೌಲ್ಯಮಾಪನ ಮಾಡಲು, ದೊಡ್ಡ ಕ್ರಿಪ್ಟೊಕರೆನ್ಸಿಗಳ ತುಲನೆಯಲ್ಲಿ ಕಡಿಮೆ ಎನರ್ಜಿಯನ್ನು ಬಳಸುವ ಹೊಸ ವಿಧಾನ ‘ಪ್ರೂಫ್-ಆಫ್-ಸ್ಟೇಕ್’ ಅನ್ನು ಅಳವಡಿಸಿಕೊಂಡಿರುವುದರಿಂದ ಇದು ಹೆಸರುವಾಸಿಯಾಗಿದೆ. ಆಗಸ್ಟ್ 2021ರ ಅಂತ್ಯಕ್ಕೆ ಇದರ ಮಾರುಕಟ್ಟೆ ಬಂಡವಾಳವು $69 ಬಿಲಿಯನ್.


  5 – Tether:
  Tether, $64 ಬಿಲಿಯನ್‌ ಮಾರುಕಟ್ಟೆ ಬಂಡವಾಳ ಹೊಂದಿದ್ದು, stablecoin ಎಂದು ಕರೆಯಲಾಗುವ ವಿಭಿನ್ನ ರೀತಿಯ ಕ್ರಿಪ್ಟೊಕರೆನ್ಸಿ ಆಗಿದೆ. ಇದಕ್ಕೆ US ಡಾಲರ್‌ಗಳಂತಹ ಒಪ್ಪಿತ ಕರೆನ್ಸಿಗಳ ಬೆಂಬಲ ಇರುವುದರಿಂದ ಇತರ ಅಸ್ಥಿರ ಕ್ರಿಪ್ಟೊಕರೆನ್ಸಿಗಳಿಗೆ ಹೋಲಿಸಿದರೆ ಇದು ಹೆಚ್ಚು ಸ್ಥಿರ ಹಾಗೂ ವಿಶ್ವಾಸಾರ್ಹವೆನಿಸಿದೆ.


  6 – XRP:
  Ripple ಡಿಜಿಟಲ್ ತಂತ್ರಜ್ಞಾನ ಕಂಪನಿಯನ್ನು ರಚಿಸಿದ ತಂಡವೇ XRP ಅನ್ನು ರಚಿಸಿದ್ದು, ಒಪ್ಪಿತ ಕರೆನ್ಸಿಗಳು ಮತ್ತು ಇತರ ಪ್ರಮುಖ ಕ್ರಿಪ್ಟೊಕರೆನ್ಸಿಗಳನ್ನೂ ಒಳಗೊಂಡಂತೆ ವಿವಿಧ ಕರೆನ್ಸಿ ಪ್ರಕಾರಗಳನ್ನು ಎಕ್ಸ್‌ಚೇಂಜ್ ಮಾಡಲು ಇದನ್ನೊಂದು ನೆಟ್‌ವರ್ಕ್ ಆಗಿ ಬಳಸಲಾಗುತ್ತಿದೆ. ಆಗಸ್ಟ್ 2021ರ ಅಂತ್ಯಕ್ಕೆ XRP ಮಾರುಕಟ್ಟೆ ಬಂಡವಾಳವು $52 ಬಿಲಿಯನ್.


  7 – Dogecoin:
  ಮೆಮೆ ಆಗಿ ಆರಂಭವಾಗಿದ್ದು, ಇಂದು $40 ಬಿಲಿಯನ್‌ಗಿಂತಲೂ ಹೆಚ್ಚಿನ ಮೌಲ್ಯದ ಕ್ರಿಪ್ಟೊಕರೆನ್ಸಿಯಾಗಿ ಬದಲಾಗಿದೆ. ಇಲ್ಲೊಂದು ಆಕರ್ಷಕವೆನಿಸುವ ವಾಸ್ತವ ಸಂಗತಿಯಿದೆ – 2017ರಲ್ಲಿ Dogecoinನ ಮೌಲ್ಯವು $0.0002 ಇತ್ತು ಮತ್ತು ಇಂದು ಅದು $0.31 ಆಗಿದೆ, ಅಂದರೆ 5 ವರ್ಷಗಳಲ್ಲಿ 154900% ದಷ್ಟು ಬೆಳವಣಿಗೆ ಸಾಧಿಸಿದೆ!


  8 – Polkadot:
  Polkadot ಅನ್ನು 2020ರಲ್ಲಿ ಪ್ರಾರಂಭಿಸಲಾಗಿದೆ ಮತ್ತು ಕೇವಲ ಒಂದು ವರ್ಷದಲ್ಲಿ $2.93 ನಿಂದ $25.61 ಗೆ ಏರಿಕೆ ಆಗಿದೆ – ಅಂದರೆ 774% ಬೆಳವಣಿಗೆ! ಇದು ಕ್ರಿಪ್ಟೊಕರೆನ್ಸಿ ನೆಟ್‌ವರ್ಕ್‌ವೊಂದನ್ನು ರಚಿಸಲು ಪ್ರಯತ್ನಿಸುತ್ತಿದ್ದು, ಆ ನೆಟ್‌ವರ್ಕ್ ವಿವಿಧ ಬ್ಲಾಕ್‌ಚೈನ್‌ಗಳನ್ನು ಸಂಪರ್ಕಿಸುವುದರಿಂದಾಗಿ, ಅವೆಲ್ಲವೂ ಒಟ್ಟಿಗೆ ಕಾರ್ಯನಿರ್ವಹಿಸಬಹುದು ಎಂಬುದು Polkadot ನ USP ಆಗಿದೆ. ಇದರ ಮಾರುಕಟ್ಟೆ ಬಂಡವಾಳವು $25 ಬಿಲಿಯನ್‌ಗಿಂತ ಹೆಚ್ಚು.


  9 – USD Coin:
  USD Coin ಎಂಬುದು ಇನ್ನೊಂದು stablecoin ಆಗಿದ್ದು, $23 ಬಿಲಿಯನ್ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ ಮತ್ತು ಇನ್ನೂ ಬೆಳೆಯುತ್ತಿದೆ. ಇದು Ethereum ಬೆಂಬಲದೊಂದಿಗೆ ನಡೆಯುತ್ತಿದೆ ಮತ್ತು ಜಾಗತಿಕ ವಹಿವಾಟುಗಳನ್ನು ಪೂರ್ಣಗೊಳಿಸಲು ಇದನ್ನು ಬಳಸಬಹುದು.


  10 – Solana:
  ಕೊನೆಯಲ್ಲಿ, ಆದರೂ ಕನಿಷ್ಠ ಎಂದು ಪರಿಗಣಿಸುವಂತಿಲ್ಲ, Solana, $20 ಬಿಲಿಯನ್‌ಗಿಂತಲೂ ಹೆಚ್ಚಿನ ಮಾರುಕಟ್ಟೆ ಬಂಡವಾಳ ಹೊಂದಿರುವ ಇದು, ವಹಿವಾಟುಗಳನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಪ್ರಕ್ರಿಯೆಗೊಳಿಸಲು ಸಹಾಯವಾಗುವ ಪ್ರೂಫ್-ಆಫ್-ಸ್ಟೇಕ್ ಮತ್ತು ಪ್ರೂಫ್-ಆಫ್-ಹಿಸ್ಟರಿ ಎಂಬ ವಿಶಿಷ್ಟ ಹೈಬ್ರಿಡ್ ಕಾರ್ಯವಿಧಾನಗಳಿಂದಾಗಿ ಇತ್ತೀಚೆಗೆ ಸುದ್ದಿಯಲ್ಲಿರುವ ಮತ್ತೊಂದು ಕ್ರಿಪ್ಟೊಕರೆನ್ಸಿಯಾಗಿದೆ. Solana ಸಹ 2020ರಲ್ಲಿ ಪ್ರಾರಂಭವಾಗಿದ್ದು, ಆಗ ಇದರ ದರ $0.77 ಇತ್ತು ಮತ್ತು ಇಂದು ಅದು 9405% ರಷ್ಟು ಬೆಳವಣಿಗೆ ಸಾಧಿಸಿದ್ದು, $73.19 ದರಕ್ಕೆ ದೊರೆಯುತ್ತಿದೆ.


  ಲಭ್ಯವಿರುವ ಸಾಕಷ್ಟು ಆಯ್ಕೆಗಳೊಂದಿಗೆ, ಯಾವ ಕ್ರಿಪ್ಟೊಕರೆನ್ಸಿಯು ನಿಮ್ಮನ್ನು ಅತಿ ಹೆಚ್ಚು ಆಕರ್ಷಿಸಿತೋ ಅದರಲ್ಲಿ ಹೂಡಿಕೆ ಮಾಡಲು ಮತ್ತು ಅದರಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವುದನ್ನು ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲು ಸುಲಭವಾಗಿದೆ. ನಾವು ಮೊದಲೇ ಹೇಳಿದಂತೆ, ನೀವು Zebpay ಖಾತೆ ತೆರೆಯಬಹುದು ಮತ್ತು KYC ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಕೂಡಲೇ ನೀವು ಹೂಡಿಕೆ ಮಾಡಲು ಪ್ರಾರಂಭಿಸಬಹುದು ಹಾಗೂ Zebpay Earnನೊಂದಿಗೆ ನಿಮ್ಮ ಮೆಚ್ಚಿನ ಕ್ರಿಪ್ಟೊಕರೆನ್ಸಿಯನ್ನು ಹೊಂದಿರುವುದಕ್ಕಾಗಿಯೇ ಕ್ರಿಪ್ಟೊವನ್ನು ಗಳಿಸಬಹುದು. ಇನ್ನೇಕೆ ತಡ, ಇಂದೇ ನಿಮ್ಮ ಕ್ರಿಪ್ಟೊಕರೆನ್ಸಿ ಪ್ರಯಾಣವನ್ನು ಪ್ರಾರಂಭಿಸಿ!

  Published by:Sharath Sharma Kalagaru
  First published: