Independence day: 75ನೇ ಸ್ವಾತಂತ್ರ್ಯೋತ್ಸವ, ಬ್ರಿಟಿಷ್​ರಿಂದ ಬಿಡುಗಡೆಯಾದ ದಿನದ ಒಂದು ಮೆಲುಕು

ಇಂದು ಸ್ವಾತಂತ್ರ್ಯ ಹಬ್ಬ. ಭಾರತ ದೇಶ ಸ್ವತಂತ್ರವಾಗಿ ಇಂದಿಗೆ 75 ವರ್ಷವಾಗಿದೆ. ಹಾಗಾಗಿ ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನು ಸಡಗರ, ಸಂಭ್ರಮದಿಂದ ಆಚರಿಸ್ತಿದ್ದೇವೆ. ಸ್ವಾತಂತ್ರ್ಯ ಹಬ್ಬದ ಒಂದು ಮೆಲುಕು

75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

  • Share this:
ಇಂದು ಸ್ವಾತಂತ್ರ್ಯ ಹಬ್ಬ. ಭಾರತ (India) ದೇಶ ಸ್ವತಂತ್ರವಾಗಿ (independent) ಇಂದಿಗೆ 75 ವರ್ಷವಾಗಿದೆ. ಹಾಗಾಗಿ ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವನ್ನು ಸಡಗರ, ಸಂಭ್ರಮದಿಂದ (Celebration) ಆಚರಿಸ್ತಿದ್ದೇವೆ. ದೇಶದ ಮೂಲೆ ಮೂಲೆಯಲ್ಲೂ ದೇಶಭಕ್ತಿಗೀತೆಗಳು ಅನುರಣಿಸ್ತಿದೆ. ಕೆಂಪುಕೋಟೆಯಿಂದ (Red fort) ಪ್ರಧಾನಿ ಕೂಡ ಧ್ವಜಾರೋಹಣ (Flag Hoisting) ಮಾಡಿ ಸಂದೇಶ (Speech) ನೀಡುತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ರಾಷ್ಟ್ರೀಯ ಧ್ವಜಾರೋಹಣ, ಮೆರವಣಿಗೆಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. 200 ವರ್ಷಗಳ ಬ್ರಿಟಿಷ್ ಆಳ್ವಿಕೆಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದ್ದು 1947 ಆಗಸ್ಟ್ 15 ರಂದು. ಪ್ರತಿ ವರ್ಷ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಶಾಲಾ-ಕಾಲೇಜು, ಕಛೇರಿಗಳಲ್ಲಿ ದೇಶಭಕ್ತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

15 ಆಗಸ್ಟ್ 1947ರಂದು ಭಾರತ ದೇಶ ಸ್ವತಂತ್ರವಾಯ್ತು. 1858 ರಿಂದ 1947ರವರೆಗೆ ನಮ್ಮನ್ನು ಆಳಿದ ಬ್ರಿಟಿಷರಿಂದ ಮುಕ್ತವಾದ ಭಾರತವು ಸ್ವತಂತ್ರ ದೇಶವಾಯಿತು. ಭಾರತವು 1858 ರಿಂದ 1947 ರವರೆಗೆ ಬ್ರಿಟಿಷರ ಆಳ್ವಿಕೆಯಲ್ಲಿತ್ತು. ಇದಕ್ಕೂ ಮೊದಲು ನಾವು 1757 ರಿಂದ 1857 ರವರೆಗೆ ಈಸ್ಟ್ ಇಂಡಿಯನ್ ಕಂಪನಿಯಿಂದ ಆಳಲ್ಪಡುತ್ತಿದ್ದೆವು.

ಭಾರತೀಯರ ಮೊದಲ ಹೋರಾಟ ಸಿಪಾಯಿ ದಂಗೆ

ಸಿಪಾಯಿ ದಂಗೆ ಅಥವಾ 1857ರ ಭಾರತೀಯ ಬಂಡಾಯವು ನಮ್ಮ ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಹೋರಾಟವಾಗಿದೆ. ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರು ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಅಂತಿಮವಾಗಿ ನಮ್ಮ ದೇಶವನ್ನು ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಗೊಳಿಸಿದರು.

75ನೇ ಸ್ವಾತಂತ್ರ್ಯ ಹಬ್ಬದ ಸಂಭ್ರಮ

ಭಾರತದಲ್ಲಿ ಪ್ರತಿವರ್ಷ ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಗುತ್ತದೆ. 1947ರ ಆಗಸ್ಟ್ 15ರ ಮಧ್ಯರಾತ್ರಿ 12 ಗಂಟೆಗೆ ಬ್ರಿಟಿಷರಿಂದ ಭಾರತವನ್ನು ಮುಕ್ತಿಗೊಳಿಸಿ, ಸ್ವಾತಂತ್ರ್ಯವನ್ನು ಪಡೆಯಲಾಯಿತು. ಅದರಲ್ಲೂ ಈ ಬಾರಿ ನಾವು 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸ್ತಿದ್ದೇವೆ.

ವೀರ ಹೋರಾಟಗಾರರ ಬಲಿದಾನದ ನೆನಪು

ಈ ಸ್ವಾತ್ರ್ಯವನ್ನು ಪಡೆಯಲು ಅನೇಕ ವೀರ ಹೋರಾಟಗಾರರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು. ಅದಕ್ಕಾಗಿಯೇ ಅವರ ತ್ಯಾಗ, ಬಲಿದಾನವನ್ನು ನೆನಪು ಮಾಡಿಕೊಳ್ಳುವ ಸಲುವಾಗಿ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತದೆ.

ಸ್ವಾತಂತ್ರ್ಯ ದಿನದಂದು ಧೈರ್ಯ, ತ್ಯಾಗ, ಬಲಿದಾನ, ಶಾಂತಿ, ಮನುಷ್ಯ ಮತ್ತು ಪ್ರಕೃತಿ ನಡುವಿನ ಬಾಂಧವ್ಯವನ್ನು ಸಾರುವ ಸಂಕೇತವನ್ನು ಸೂಚಿಸುವ ತ್ರಿವರ್ಣ ಧ್ವಜವನ್ನು ಹಾರಿಸಲಾಗುತ್ತದೆ. ದೇಶದ ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳು ಹಾಗೂ ಬೃಹತ್ ಮೈದಾನಗಳಲ್ಲಿ ಧ್ವಜಾರೋಹಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ. ಈ 7 ದಶಕಗಳಲ್ಲಿ ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಸುವರ್ಣ ಸಾಧನೆಯನ್ನು ಮಾಡಿ ಇಡೀ ವಿಶ್ವದಲ್ಲಿ ನಮ್ಮ ತ್ರಿವರ್ಣ ಧ್ವಜದ ಮೌಲ್ಯವನ್ನು ಹೆಚ್ಚಿಸಿದೆ.

1950ರಲ್ಲಿ ರಾಷ್ಟ್ರಗೀತೆಯ ಮನ್ನಣೆ

ಸ್ವಾತಂತ್ರ್ಯದ ಸಮಯದಲ್ಲಿ ಭಾರತವು ರಾಷ್ಟ್ರಗೀತೆಯನ್ನು ಹೊಂದಿರಲಿಲ್ಲ. ರವೀಂದ್ರನಾಥ ಟ್ಯಾಗೋರ್ ಅವರು 1911 ರಲ್ಲಿ ಜನ ಗನ ಮನ ಸಿದ್ಧಪಡಿಸಿದ್ದರು. ಅದನ್ನು ರಾಷ್ಟ್ರಗೀತೆಯನ್ನಾಗಿ 1950, ಜನವರಿ 25ರಂದು ಭಾರತದ ರಾಷ್ಟ್ರಗೀತೆಯಾಗಿ ಅಧಿಕೃತವಾಗಿ ಘೋಷಿಸಲಾಯ್ತು.

ಆಗಸ್ಟ್​ 15ರ ಧ್ವಜಾರೋಹಣದ ವಿಶೇಷತೆ

ಆಗಸ್ಟ್ 15 ರ ಸ್ವಾತಂತ್ರ್ಯ ದಿನದ ಸಂದರ್ಭದಲ್ಲಿ, ಧ್ವಜವನ್ನು ಹಗ್ಗದಿಂದ ಕೆಳಗಿನಿಂದ ಮೇಲಕ್ಕೆ ಎಳೆಯಲಾಗುತ್ತದೆ. ನಂತರ ಅದನ್ನು ಬಿಚ್ಚಲಾಗುತ್ತದೆ ಮತ್ತು ಹಾರಿಸಲಾಗುತ್ತದೆ. ಇದನ್ನು ಧ್ವಜಾರೋಹಣ ಎಂದು ಕರೆಯಲಾಗುತ್ತದೆ. ಏಕೆಂದರೆ ಇದನ್ನು 15 ಆಗಸ್ಟ್ 1947 ರ ಐತಿಹಾಸಿಕ ಘಟನೆಯನ್ನು ಗೌರವಿಸಲು ಇದನ್ನು ಮಾಡಲಾಗುತ್ತದೆ.

ಆಗಸ್ಟ್​ 15ಕ್ಕೆ ಪ್ರಧಾನಿಯಿಂದ ಧ್ವಜಾರೋಹಣ

ಆಗಸ್ಟ್ 15ರಂದು ದೇಶದ ಪ್ರಧಾನಮಂತ್ರಿ ಧ್ವಜಾರೋಹಣ ಮಾಡುತ್ತಾರೆ. ಏಕೆಂದರೆ ಸ್ವಾತಂತ್ರ್ಯ ಸಿಕ್ಕ ದಿನದಂದು ಭಾರತದ ಸಂವಿಧಾನವು ಜಾರಿಗೆ ಬಂದಿರಲಿಲ್ಲ. ಹೀಗಾಗಿ ರಾಷ್ಟ್ರದ ಸಾಂವಿಧಾನಿಕ ಮುಖ್ಯಸ್ಥರಾದ ರಾಷ್ಟ್ರಪತಿ ಅಧಿಕಾರ ಸ್ವೀಕಾರ ಮಾಡಿರುವುದಿಲ್ಲ. ಆದರೆ ದೇಶದಲ್ಲಿ ಸಂವಿಧಾನದ ಅನುಷ್ಠಾನದ ಸ್ಮರಣಾರ್ಥವಾಗಿ ಆಚರಿಸಲಾಗುವ ಜನವರಿ 26 ಗಣರಾಜೋತ್ಸವದದು ರಾಷ್ಟ್ರಪತಿಗಳು ಧ್ವಜಾರೋಹಣ ಮಾಡುತ್ತಾರೆ.
Published by:Thara Kemmara
First published: