ಚಹಾ (Tea) ಬಹು ಜನರ ಪಾಲಿನ ನಿತ್ಯ ಸೇವಿಸುವ ಒಂದು ಆಹ್ಲಾದಕರ ಪೇಯವಾಗಿದೆ. ಸಾಕಷ್ಟು ಜನರ (People) ದಿನ ಆರಂಭವಾಗುವುದೇ ಒಂದು ಕಪ್ ಚಹಾ (Cup of tea) ಹೀರಿದ ನಂತರ ಅಂದರೆ ತಪ್ಪಾಗಲಾರದು. ಬಹುಶಃ ನೀರಿನ ನಂತರ ಅತ್ಯಂತ ಜನಪ್ರಿಯ ದೈನಂದಿನ ಪಾನೀಯಗಳ (Drinks) ಪಟ್ಟಿಗೆ ಚಹಾವನ್ನು ಸೇರಿಸಬಹುದು. ನಮ್ಮಲ್ಲಿ ದಿನಕ್ಕೆ ಹಲವಾರು ಬಾರಿ ಚಹಾ ಸೇವಿಸುವ ಜನರಿದ್ದಾರೆ. ಜಗತ್ತಿನಾದ್ಯಂತ ಚಹಾ ಸೇವಿಸುವ ಅಸಂಖ್ಯಾತ ಜನರಿದ್ದಾರೆ ಎಂದರೆ ನೀವು ನಂಬಲೇಬೇಕು. ಇಷ್ಟೊಂದು ಅದ್ಭುತ ಪಾನೀಯವಾಗಿರುವ ಚಹಾ ಎಲ್ಲ ರೀತಿಯ ಗೌರವಕ್ಕೆ ಅರ್ಹವಾಗಿದೆ ಎಂದರೆ ತಪ್ಪಿಲ್ಲ. ಹಾಗಾಗಿಯೇ ಮೇ 21ಅನ್ನು ಪ್ರತಿ ವರ್ಷ ಈ ಅಗತ್ಯ ಪಾನೀಯದ ಮಹತ್ವವನ್ನು (Importance) ಸಂಭ್ರಮಿಸುವ ಮೂಲಕ ಅದಕ್ಕೆ ಗೌರವ ಸಲ್ಲಿಸಲೆಂದು ಸಮರ್ಪಿಸಲಾಗಿದೆ.
ಅಂತರರಾಷ್ಟ್ರೀಯ ಚಹಾ ದಿನ: ಇತಿಹಾಸ
ಅಂತರರಾಷ್ಟ್ರೀಯ ಚಹಾ ದಿನವನ್ನು ಈ ದಿನದಲ್ಲಿ ಆಚರಿಸಬೇಕೆಂಬ ಪರಿಕಲ್ಪನೆಯನ್ನು ಡಿಸೆಂಬರ್ 21, 2019 ರಂದು ಮಾಡಲಾಯಿತು ಮತ್ತು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು ಅಂದಿನಿಂದ ದಿನವನ್ನು ಆಚರಿಸುತ್ತ ಮುನ್ನಡೆಸುತ್ತಿದೆ. ಈ ದಿನವನ್ನು ನಮ್ಮ ಜೀವನದಲ್ಲಿ ಚಹಾದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ಉತ್ಪಾದನೆಯನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುವ ಗುರಿಯನ್ನು ಹೊಂದಿದೆ.
ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಕಾರಿ
ಇತ್ತೀಚಿನ ದಿನಗಳು ನಮ್ಮೆಲ್ಲರನ್ನೂ ನಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವಂತೆ ಮಾಡಿದೆ, ನಮ್ಮ ರೋಗನಿರೋಧಕ ಶಕ್ತಿಯನ್ನು ನಿರ್ಮಿಸುವತ್ತ ಹೆಚ್ಚು ಗಮನಹರಿಸ ಬೇಕಾಗಿದೆ. ಆದ್ದರಿಂದ, ಈ ಅಂತರಾಷ್ಟ್ರೀಯ ಚಹಾ ದಿನದಂದು, ನಾವು ನಿಮಗೆ ಪ್ರತಿರೋಧ ಶಕ್ತಿ ಹೆಚ್ಚಿಸುವ ಬೂಸ್ಟರ್ ಎನ್ನಲಾಗುವ ನಿರ್ದಿಷ್ಟ ರೀತಿಯ ಚಹಾದ ಕುರಿತು ಮಾಹಿತಿ ನೀಡುತ್ತಿದ್ದೇವೆ.
ಚಹಾದ ಬಗ್ಗೆ ಸಂಶೋಧಕರು ಹೇಳಿದ್ದೇನು?
ಇತ್ತೀಚೆಗೆ, ಟೀ ಕೌನ್ಸಿಲ್ ಆಫ್ ಅಮೆರಿಕ ತನ್ನ ಆರನೇ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಚಹಾ ಮತ್ತು ಮಾನವನ ಆರೋಗ್ಯದ ಕುರಿತು ನಡೆಸಿತು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಹಸಿರು ಚಹಾವನ್ನು ಸೇವಿಸುವ ಪ್ರಯೋಜನಗಳನ್ನು ಎತ್ತಿ ತೋರಿಸಿದೆ. ಈ ವಿಚಾರ ಸಂಕಿರಣವನ್ನು ದಯಾಂಗ್ ವು, ಎಂಡಿ, ಪಿಹೆಚ್ಡಿ ಇವರು ನೇತೃತ್ವ ವಹಿಸಿದ್ದರು.
ಇದನ್ನೂ ಓದಿ: International Tea Day: ಮೂಳೆಗಳ ಆರೋಗ್ಯಕ್ಕೆ ಬಾಳೆ ಹಣ್ಣಿನ ಟೀ ಬೆಸ್ಟ್! ಟ್ರೈ ಮಾಡಿ ನೋಡಿ
ಹ್ಯೂಮನ್ ನ್ಯೂಟ್ರಿಷನ್ ರಿಸರ್ಚ್ ಸೆಂಟರ್ ಆನ್ ಏಜಿಂಗ್‌ನಲ್ಲಿರುವ ನ್ಯೂಟ್ರಿಷನಲ್ ಇಮ್ಯುನೊಲಾಜಿ ಲ್ಯಾಬೊರೇಟರಿಯ ಸಹಾಯಕ ನಿರ್ದೇಶಕ ಮತ್ತು ಟಫ್ಟ್ಸ್ ವಿಶ್ವವಿದ್ಯಾಲಯದಲ್ಲಿ ಫ್ರೈಡ್‌ಮನ್ ಸ್ಕೂಲ್ ಆಫ್ ನ್ಯೂಟ್ರಿಷನ್ ಸೈನ್ಸ್ ಅಂಡ್ ಪಾಲಿಸಿಯ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಡೇಯಾಂಗ್ ವು, "ಹಸಿರು ಚಹಾವು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹಲವಾರು ಇತರ ಆರೋಗ್ಯ ಪ್ರಯೋಜನಗಳ ನಡುವೆ ಅನಾರೋಗ್ಯ ಉಂಟಾಗದಂತೆ ನಿಮ್ಮ ದೇಹದ ಪ್ರತಿರೋಧವನ್ನು ಹೆಚ್ಚಿಸುತ್ತದೆ." ಎಂದು ಹೇಳಿದ್ದಾರೆ.
ಗ್ರೀನ್ ಟೀ ಅಲ್ಲಿ ಇರುವ ಆರೋಗ್ಯ ಪ್ರಯೋಜನಗಳು
ಹಾಗಾದರೆ ಗ್ರೀನ್ ಟೀ ಅಥವಾ ಹಸಿರು ಚಹಾದ ಏನೆಲ್ಲ ಪ್ರಯೋಜನಗಳಿವೆ ಎಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಈ ಕೆಳಗಿನವುಗಳನ್ನೊಮ್ಮೆ ಓದಿ. ಹಸಿರು ಚಹಾದ ಕೆಳಗಿನ ಪ್ರಯೋಜನಗಳನ್ನು ಹೈಲೈಟ್ ಮಾಡಲಾಗಿದೆ:
* ಹಸಿರು ಚಹಾವು ಕ್ಯಾಟೆಚಿನ್‌ಗಳು/ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ ಅದು ರೋಗಕಾರಕ (ರೋಗ-ಉಂಟುಮಾಡುವ ಜೀವಿಗಳು) ಸೋಂಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಪ್ರತಿರಕ್ಷಣಾ ಹೋಮಿಯೋಸ್ಟಾಸಿಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ.
* ಹಸಿರು ಚಹಾವು ಟಿ ಸೆಲ್-ಮಧ್ಯಸ್ಥಿಕೆಯ ಸ್ವಯಂ ನಿರೋಧಕ ಕಾಯಿಲೆಗಳನ್ನು ತಡೆಗಟ್ಟಲು ಮತ್ತು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ಹಸಿರು ಚಹಾವು ರೋಗಕಾರಕ ಅಂಶಗಳ ವಿರುದ್ಧ ಹೋರಾಡುತ್ತದೆ ಮತ್ತು ಅವುಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಆತಿಥೇಯರ ಪ್ರತಿರಕ್ಷಣಾ ಪ್ರತಿಕ್ರಿಯೆಗೆ ಸಹಾಯ ಮಾಡುತ್ತದೆ.
* ಇದು ಸ್ವಯಂ-ಸಹಿಷ್ಣುತೆಯನ್ನು ಉತ್ತೇಜಿಸುವ ಮೂಲಕ ಸ್ವಯಂ ನಿರೋಧಕ ಅಸ್ವಸ್ಥತೆಗಳನ್ನು ನಿವಾರಿಸುತ್ತದೆ, ಆಟೋ ಆಂಟಿಜೆನ್-ಪ್ರೇರಿತ ಉರಿಯೂತದ ದಾಳಿಯನ್ನು ನಿಗ್ರಹಿಸುತ್ತದೆ ಮತ್ತು ಅಂಗಾಂಶ ದುರಸ್ತಿಯನ್ನು ಹೆಚ್ಚಿಸುತ್ತದೆ.
* ದೇಹದಲ್ಲಿ ಪ್ರತಿಕಾಯಗಳನ್ನು ಉತ್ಪಾದಿಸುವ ಮೂಲಕ ಇನ್ಫ್ಲುಯೆಂಜಾದಂತಹ ಉಸಿರಾಟದ ಕಾಯಿಲೆಗಳನ್ನು ನಿಭಾಯಿಸಲು ಹಸಿರು ಚಹಾ ಸಹಾಯ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ