International Museum Day: ಇಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ - ಇತಿಹಾಸ, ಮಹತ್ವದ ಬಗ್ಗೆ ನಿಮಗೂ ತಿಳಿದಿರಲಿ

ವಸ್ತು ಸಂಗ್ರಹಾಲಯ ನೋಡಲು ಯಾರಿಗೆ ತಾನೇ ಇಷ್ಟ ಇರಲ್ಲ. ಯಾವುದಾದರು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಮ್ಯೂಸಿಯಂ ಇದ್ದರೆ ಖಂಡಿತ ಭೇಟಿ ನೀಡುತ್ತೇವೆ. ಇದು ನಮ್ಮ ಗತಕಾಲದ, ವಿಭಿನ್ನ ವಸ್ತುಗಳು ಅಥವಾ ಕೆಲವು ಉಲ್ಲೇಖಗಳನ್ನು ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ (ಐಎಂಡಿ) ವನ್ನು ಪ್ರತಿ ವರ್ಷ ಮೇ 18ರಂದು ಆಚರಿಸಲಾಗುತ್ತದೆ.

 ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ  ದಿನ

ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ

  • Share this:
ವಸ್ತು ಸಂಗ್ರಹಾಲಯ (Museum) ನೋಡಲು ಯಾರಿಗೆ ತಾನೇ ಇಷ್ಟ ಇರಲ್ಲ. ಯಾವುದಾದರು ಒಂದು ಸ್ಥಳಕ್ಕೆ (Place) ಹೋದಾಗ ಅಲ್ಲಿ ಮ್ಯೂಸಿಯಂ ಇದ್ದರೆ ಖಂಡಿತ ಭೇಟಿ ನೀಡುತ್ತೇವೆ. ಇದು ನಮ್ಮ ಗತಕಾಲದ, ವಿಭಿನ್ನ ವಸ್ತುಗಳು (Different objects) ಅಥವಾ ಕೆಲವು ಉಲ್ಲೇಖಗಳನ್ನು ನಮಗೆ ನೋಡಲು ಅನುವು ಮಾಡಿಕೊಡುತ್ತದೆ. ಹೀಗಾಗಿ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ (International Museum Day) (ಐಎಂಡಿ) ವನ್ನು ಪ್ರತಿ ವರ್ಷ ಮೇ 18ರಂದು ಆಚರಿಸಲಾಗುತ್ತದೆ. ಪ್ರಮುಖ ಸಾಂಸ್ಕೃತಿಕ ವಿನಿಮಯ (Cultural exchange), ಸಂಸ್ಕೃತಿಗಳ ಪುಷ್ಟೀಕರಣ ಮತ್ತು ಜನರಲ್ಲಿ ಪರಸ್ಪರ ತಿಳುವಳಿಕೆ, ಸಹಕಾರ ಮತ್ತು ಶಾಂತಿಯ ಅಭಿವೃದ್ಧಿಯ ಸಾಧನವಾಗಿ ವಸ್ತುಸಂಗ್ರಹಾಲಯಗಳ ಮೌಲ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಸ್ಮರಿಸಲಾಗುತ್ತದೆ. .

icom.museum ಪ್ರಕಾರ, ವಸ್ತುಸಂಗ್ರಹಾಲಯಗಳು ನಮ್ಮ ಸುತ್ತಲಿನ ಪ್ರಪಂಚವನ್ನು ಪರಿವರ್ತಿಸುವ ಶಕ್ತಿಯನ್ನು ಹೊಂದಿವೆ. ವಸ್ತುಸಂಗ್ರಹಾಲಯಗಳು ನಮ್ಮ ಭೂತಕಾಲದ ಬಗ್ಗೆ ನಮಗೆ ಚಿತ್ರಣ ನೀಡುವುದರ ಜೊತೆಗೆ ಉತ್ತಮ ಭವಿಷ್ಯವನ್ನು ಕಂಡುಹಿಡಿಯಲು ಮತ್ತು ನಿರ್ಮಿಸಲು ನಮ್ಮ ಮನಸ್ಸನ್ನು ತೆರೆಯುವ ಮಾರ್ಗವನ್ನು ನಮಗೆ ತೋರಿಸುತ್ತವೆ.ವಸ್ತುಸಂಗ್ರಹಾಲಯಗಳಲ್ಲಿ ಸುರಕ್ಷಿತವಾಗಿ ಸಂಗ್ರಹವಾಗಿರುವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದಕ್ಕಾಗಿ ಅಂತರ್ರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನವನ್ನು ಆಚರಿಸಲಾಗುತ್ತದೆ.

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಇತಿಹಾಸ
ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ವಾರ್ಷಿಕ ಆಚರಣೆಯನ್ನು 1977 ರಲ್ಲಿ ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ಮ್ಯೂಸಿಯಂ (ICOM) ಘೋಷಿಸಿತು ಮತ್ತು ಅಂದಿನಿಂದ ಪ್ರತಿವರ್ಷ ಇದನ್ನು ಆಚರಿಸಲಾಗುತ್ತಿದೆ. ರಷ್ಯಾದ ಮಾಸ್ಕೋದಲ್ಲಿ ನಡೆದ ICOM ಜನರಲ್ ಅಸೆಂಬ್ಲಿಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಯಿತು.

ಇದನ್ನೂ ಓದಿ:

ವಸ್ತುಸಂಗ್ರಹಾಲಯಗಳ ಸೃಜನಶೀಲ ಆಕಾಂಕ್ಷೆಗಳು ಮತ್ತು ಪ್ರಯತ್ನಗಳನ್ನು ಮತ್ತಷ್ಟು ಏಕೀಕರಿಸಲು ಮತ್ತು ಅವರ ಚಟುವಟಿಕೆಯತ್ತ ವಿಶ್ವ ಸಾರ್ವಜನಿಕರ ಗಮನವನ್ನು ಸೆಳೆಯಲು ಈ ದಿನವನ್ನು ಗೊತ್ತುಪಡಿಸಲಾಗಿದೆ. 2009ರಲ್ಲಿ, ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವು 90 ಕ್ಕೂ ಹೆಚ್ಚು ದೇಶಗಳಲ್ಲಿ ಈವೆಂಟ್‌ಗಳನ್ನು ಆಯೋಜಿಸುವ 20,000 ವಸ್ತುಸಂಗ್ರಹಾಲಯಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಿತ್ತು. ಈ ದಿನವು ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ಸಮುದಾಯಕ್ಕೆ ಒಂದು ಅನನ್ಯ ಕ್ಷಣವನ್ನು ಸೂಚಿಸುತ್ತದೆ.

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಮಹತ್ವ:
ಮೇ 18 ವಸ್ತುಸಂಗ್ರಹಾಲಯಗಳಿಗೆ ಸಂಬಂಧಿಸಿದ ಜನರಿಗೆ ಮತ್ತು ವಸ್ತುಸಂಗ್ರಹಾಲಯದೊಂದಿಗೆ ಒಲವಿರುವ ಜನರಿಗೆ ಸಾಕಷ್ಟು ಮಹತ್ವದ ದಿನವಾಗಿದೆ.ಸಮುದಾಯ ನಿರ್ಮಾಣ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ವಸ್ತುಸಂಗ್ರಹಾಲಯಗಳು ವಹಿಸುವ ಪ್ರಮುಖ ಪಾತ್ರದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಬಹಳಷ್ಟು ಮಹತ್ವವನ್ನು ಹೊಂದಿದೆ.

ಇದನ್ನೂ ಓದಿ: Most Poisonous Fruits: ಸಾವಿನ ದವಡೆಯಲ್ಲಿ ಸಿಲುಕಿಸುವ ಡೇಂಜರಸ್​ ಹಣ್ಣುಗಳಿವು! ತಿನ್ಬೇಡಿ ಹುಷಾರ್​​! 

ನಮ್ಮ ಸಮಾಜ ಮತ್ತು ಪರಂಪರೆಯ ಅತ್ಯಗತ್ಯ ಭಾಗವಾಗಿದೆ ಮತ್ತು ಆದ್ದರಿಂದ ಯಾವುದೇ ಸಂದರ್ಭದಲ್ಲೂ ಅದನ್ನು ರಕ್ಷಿಸಬೇಕು ಇದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರತಿವರ್ಷ ವಿಶ್ವದಾದ್ಯಂತದ ವಿವಿಧ ವಸ್ತುಸಂಗ್ರಹಾಲಯಗಳನ್ನು ಅಂತರ್ರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನಾಚರಣೆಯಲ್ಲಿ ಸೇರಲು ಆಹ್ವಾನಿಸಲಾಗುತ್ತದೆ.

ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಥೀಮ್:

ಪ್ರತಿ ವರ್ಷ, ವಸ್ತುಸಂಗ್ರಹಾಲಯಗಳ ಅಂತರರಾಷ್ಟ್ರೀಯ ಮಂಡಳಿಯು ಹೊಸ ಥೀಮ್‌ನೊಂದಿಗೆ ಈ ದಿನವನ್ನು ಆಚರಿಸಲು ತಯಾರಿ ನಡೆಸುತ್ತದೆ. ಈ ವರ್ಷದ ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಥೀಮ್ "ಸಂಗ್ರಹಾಲಯಗಳ ಶಕ್ತಿ" ಎಂಬುವುದಾಗಿದೆ.

ವಸ್ತುಸಂಗ್ರಹಾಲಯಗಳು ಸಮಾಜ ಮತ್ತು ಜಗತ್ತಿನಲ್ಲಿ ಧನಾತ್ಮಕ ಬದಲಾವಣೆಗಳನ್ನು ಪರಿವರ್ತಿಸುವ ಮತ್ತು ಪೋಷಿಸುವ ಶಕ್ತಿಯನ್ನು ಹೊಂದಿವೆ. 2021 ರ ಅಂತರ್ರಾಷ್ಟ್ರೀಯ ವಸ್ತುಸಂಗ್ರಹಾಲಯದ ದಿನದ ಮುಖ್ಯ ಸಂದೇಶವೇನೆಂದರೆ “ವಸ್ತುಸಂಗ್ರಹಾಲಯಗಳ ಭವಿಷ್ಯ: ಮರುಪಡೆಯಿರಿ ಮತ್ತು ಮರು ಕಲ್ಪಿಸಿಕೊಳ್ಳಿ” ಎಂಬುವುದಾಗಿತ್ತು.

ಈ ದಿನವನ್ನು ಹೇಗೆ ಆಚರಿಸಲಾಗುತ್ತದೆ

ಪ್ರತಿ ವರ್ಷ, ಅನೇಕ ದೇಶಗಳು ವಸ್ತುಸಂಗ್ರಹಾಲಯಗಳನ್ನು ಆಚರಿಸಲು ಮತ್ತು ಸಮಾರಂಭದಲ್ಲಿ ಭಾಗವಹಿಸಲು ಮುಂದೆ ಬರುತ್ತವೆ. 2021ರಲ್ಲಿ, 158 ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಆಚರಿಸಲಾದ ಈವೆಂಟ್‌ನಲ್ಲಿ ಪ್ರಪಂಚದಾದ್ಯಂತದ 37,000 ವಸ್ತುಸಂಗ್ರಹಾಲಯಗಳು ಭಾಗವಹಿಸಿದ್ದವು.

ಇದನ್ನೂ ಓದಿ:  Vegetable Garden: ಪಿವಿಸಿ ಪೈಪ್‍ಗಳಲ್ಲಿ ತರಕಾರಿ ಬೆಳೆದ ಬಿಹಾರದ ಮಹಿಳೆ! ಎಷ್ಟು ಚೆಂದಾ ಉಂಟು ನೋಡಿ

ಈ ಆಚರಣೆಗಳು ಸಾಮಾನ್ಯವಾಗಿ ಒಂದು ದಿನ ಅಥವಾ ಒಂದು ವಾರದವರೆಗೆ ಇರುತ್ತದೆ. ಇದು ಜನರನ್ನು ಭಾಗವಹಿಸಲು ಮತ್ತು ಪರಂಪರೆ ಮತ್ತು ಸಂಸ್ಕೃತಿಯ ಬಗ್ಗೆ ಕಲಿಯಲು ಪ್ರೋತ್ಸಾಹಿಸುತ್ತದೆ. ಸುಂದರವಾದ ಬಣ್ಣಗಳು ಮತ್ತು ಲೈಟ್ ಗಳನ್ನು ಬಳಸಿ ಆಕರ್ಷಕವಾದ ಅಲಂಕಾರಗಳಿಂದ ವಸ್ತುಸಂಗ್ರಹಾಲಯಗಳಿಗೆ ಜೀವ ತುಂಬುತ್ತಾರೆ. ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಆಚರಣೆಗಳು ಗ್ಯಾಲರಿಗಳು ಮತ್ತು ವಸ್ತುಸಂಗ್ರಹಾಲಯಗಳಿಗೆ ಭೇಟಿ ನೀಡುವುದು, ಈವೆಂಟ್‌ಗಳಲ್ಲಿ ಭಾಗವಹಿಸುವುದು ಮತ್ತು ದಿನದ ಸ್ಮರಣಾರ್ಥ ವಸ್ತುಸಂಗ್ರಹಾಲಯಗಳಲ್ಲಿನ ಪ್ರದರ್ಶನಗಳಿಗೆ ಸಾಕ್ಷಿಯಾಗುವುದು ಆಗಿದೆ.
Published by:Ashwini Prabhu
First published: