ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಯ (Agriculture Bill) ವಿರುದ್ಧ ರೈತರು ಸತತ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ, ರೈತರ ಹೋರಾಟದ ಬಗ್ಗೆ ಕೇಂದ್ರ ಸರ್ಕಾರ (Central Government) ಈವರೆಗೆ ಯಾವುದೇ ಕ್ರಮ ಜರುಗಿಸಿಲ್ಲ. ಅಲ್ಲದೆ, ರೈತರ ಬೇಡಿಕೆಗೂ ಮಣಿಯವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಪರಿಣಾಮ ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (Samyukt Kisan Morcha) ತಮ್ಮ ಹೋರಾಟವನ್ನು ಮತ್ತಷ್ಟು ಪ್ರಬಲಗೊಳಿಸುವ ಉದ್ದೇಶದಿಂದ ಇಂದು (ಸೆಪ್ಟೆಂಬರ್ 27) ರಂದು ಭಾರತ್ ಬಂದ್ (Bharat Bandh) ಗೆ ಕರೆ ನೀಡಿದೆ. ಈ ಬಂದ್ಗೆ ಬಿಜೆಪಿ (BJP) ಯೇತರ ಸರ್ಕಾರವಿರುವ ಅನೇಕ ರಾಜ್ಯಗಳು ಮತ್ತು ರಾಜಕೀಯ ಪಕ್ಷಗಳು ಬೆಂಬಲ ಸೂಚಿಸಿವೆ. ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಬಂದ್ಗೆ ವೈಎಸ್ ಜಗನ್ ಮೋಹನ್ ರೆಡ್ಡಿ ನೇತೃತ್ವದ ಆಂಧ್ರಪ್ರದೇಶ ಸರ್ಕಾರ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (AAP) ಮತ್ತು ತೆಲುಗು ದೇಶಂ ಪಕ್ಷ (TDP) ಮತ್ತು ಎಡಪಕ್ಷಗಳು ಈಗಾಗಲೇ ಬೆಂಬಲವನ್ನು ಘೋಷಿಸಿವೆ. ಭಾರತ್ ಬಂದ್ ವೇಳೆ ಕರ್ನಾಟಕದಲ್ಲಿ ಯಾವೆಲ್ಲ ಸೇವೆಗಳು ಇರಲಿವೆ, ಯಾವೆಲ್ಲಾ ಸೇವೆಗಳು ಬಂದ್ ಆಗಲಿವೆ ಎಂಬ ಸಂಪೂರ್ಣ ಇಲ್ಲಿದೆ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಭಾಗಶಃ ಬಂದ್ ಆಗುವ ಸಾಧ್ಯತೆ ಇದೆ. ರಾಜ್ಯ ರೈತ ಸಂಘ ಬಹುತೇಕ ರಾಜ್ಯದ ಎಲ್ಲ ಕಡೆ ರಸ್ತೆ ಚಳವಳಿ ನಡೆಸುವ ಕಾರಣ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ. ಬೆಂಗಳೂರು ವಿವಿ ಸೇರಿದಂತೆ ನಾಳೆ ನಡೆಯಬೇಕಿದ್ದ ಎಲ್ಲ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಏನಿರುತ್ತೆ.. ಏನಿರಲ್ಲ..?
- ಹಾಲು, ತರಕಾರಿ, ಮೆಡಿಕಲ್, ಆಸ್ಪತ್ರೆ, ಆ್ಯಂಬುಲೆನ್ಸ್, ಹೋಟೆಲ್- ಓಪನ್
- ಕೆಎಸ್ಆರ್ಟಿಸಿ-ಇರುತ್ತೆ.
- ಬಿಎಂಟಿಟಿ- ಇರುತ್ತೆ..
- ಮೆಟ್ರೋ- ಇರುತ್ತೆ..
- ಆಟೋ- ಇರುತ್ತೆ..
- ಟ್ಯಾಕ್ಸಿ- ಇರುತ್ತೆ.
- ಕ್ಯಾಬ್ - ಇರುತ್ತೆ.
- ಬೀದಿ ವ್ಯಾಪಾರ- ಇರುತ್ತೆ.
- ಶಾಲಾ ಕಾಲೇಜು ಇರುತ್ತೆ.
- ಸರ್ಕಾರಿ ಕಚೇರಿ ಇರುತ್ತೆ.
ಬಂದ್ ಗೆ ಯಾರೆಲ್ಲ ಬೆಂಬಲ..?
- ಸಂಯುಕ್ತ ಕಿಸಾನ್ ಮೋರ್ಚಾ
- ರಾಜ್ಯ ರೈತ ಸಂಘ
- ರಾಜ್ಯ ಹಸಿರು ಸೇನೆ
- ರಾಜ್ಯ ಪ್ರಾಂತ ರೈತ ಸಂಘ
- ರೈತ ಕಾರ್ಮಿಕ ಸಂಘ
- ಅಖಿಲ ಭಾರತ್ ಕಿಸಾನ್ ಸಭಾ
- ವಾಟಾಳ್ ನಾಗರಾಜ್ ಬೆಂಬಲ ನೀಡಲಿದ್ದಾರೆ.
ನೈತಿಕ ಬೆಂಬಲ ನೀಡಿದವರು?
- ಕರವೇ ನಾರಾಯಣಗೌಡ ಬಣ ಬಂದ್ಗೆ ನೈತಿಕ ಬೆಂಬಲ ನೀಡಲಿದೆ. ಹೋರಾಟಕ್ಕೆ ಮಾತ್ರ ಬೆಂಬಲ, ಬಂದ್ಗೆ ಬೆಂಬಲವಿಲ್ಲ.
- ಕೆಎಸ್ಆರ್ಟಿಸಿ ಬಿಎಂಟಿಸಿ ನೌಕರರ ಸಂಘ ನೈತಿಕ ಬೆಂಬಲ
- ಆಟೋ ಊಬರ್ ಓಲಾ ಸಂಘಟನೆಗಳು ನೈತಿಕ ಬೆಂಬಲ
- ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ
- ಲಾರಿ ಮಾಲೀಕರ ಸಂಘ- ನೈತಿಕ ಬೆಂಬಲ
- ರುಪ್ಸಾ, ಕ್ಯಾಮ್ಸ್ ಸಂಘಟನೆ - ನೈತಿಕ ಬೆಂಬಲ
ರಾಜ್ಯದಲ್ಲಿ ಇಂದು ಲಾರಿಗಳು, ಸರ್ಕಾರಿ ಬಸ್ಸುಗಳು, ಓಲಾ- ಉಬರ್ ಟ್ಯಾಕ್ಸಿಗಳು ಎಂದಿನಂತೆ ಸಂಚಾರ ಮಾಡಲಿವೆ. ಇವುಗಳ ಸಂಚಾರದಲ್ಲಿ ಯಾವುದೇ ವ್ಯತ್ಯಯ ಇಲ್ಲ. ಆದರೆ, ರಸ್ತೆ ತಡೆ ನಡೆಸುವುದರಿಂದ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಪರಿಸ್ಥಿತಿ ನೋಡಿಕೊಂಡು ಅಲ್ಲಿನ ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ತೆಗೆದುಕೊಳ್ಳಲಿದ್ದಾರೆ.
ಹೋಟೆಲ್ ಓಪನ್ ಇರುತ್ತಾ?
ರಾಜ್ಯದಲ್ಲಿ ಎಂದಿನಂತೆ ಹೋಟೆಲ್ ಮತ್ತು ರೆಸ್ಟೋರೆಂಟ್ ಸೇವೆ ಇರುತ್ತೆ. ಭಾರತ್ ಬಂದ್ಗೆ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳು ನೈತಿಕ ಬೆಂಬಲ ನೀಡಿವೆ. ಹೋಟೆಲ್ ಹಾಗೂ ರೆಸ್ಟೋರೆಂಟ್ ಮುಚ್ಚಿದ್ರೆ ತೊಂದರೆ ಆಗುತ್ತೆ. ಸೋಮವಾರ ರಾಜ್ಯಾದ್ಯಂತ ಹೋಟೆಲ್ ಹಾಗೂ ರೆಸ್ಟೋರೆಂಟ್ ಓಪನ್ ಇರುತ್ತೆ ಎಂದು ಕರ್ನಾಟಕ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಮಾಹಿತಿ ನೀಡಿದ್ದಾರೆ.
ಶಾಲಾ-ಕಾಲೇಜು ಓಪನ್ ಇರುತ್ತಾ?
ಒಂದೂವರೆ ವರುಷದಿಂದ ಶಾಲಾ-ಕಾಲೇಜು ತೆರೆದಿಲ್ಲ. ಇದೀಗ ಶಾಲಾ- ಕಾಲೇಜು ಆರಂಭವಾಗಿವೆ. ಭಾರತ್ ಬಂದ್ ಗೆ ನೈತಿಕ ಬೆಂಬಲ ನೀಡಲಾಗುವುದು. ಎಂದಿನಂತೆ ಶಾಲಾ-ಕಾಲೇಜು ಓಪನ್ ಇರಲಿದೆ ಎಂದು ರುಪ್ಸಾ ಹಾಗೂ ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆಗಳು ಸ್ಪಷ್ಟನೆ ನೀಡಿದೆ.
ಇದನ್ನು ಓದಿ: Council Election: ಮತದಾರರ ಪಟ್ಟಿಗೆ ನೋಂದಾಯಿಸಿದರೆ ಉಚಿತವಾಗಿ 1 ಲಕ್ಷ ರೂ. ಇನ್ಶ್ಯೂರೆನ್ಸ್ ಬಾಂಡ್!
ಶಾಂತಿ ಕಾಪಾಡುವಂತೆ ಗೃಹ ಸಚಿವರ ಮನವಿ
ಬಂದ್ ವೇಳೆ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸರಿಗೆ ಸೂಚನೆ ನೀಡಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಭಾನುವಾರವೇ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಗರ, ರಾಜ್ಯದ ಜಿಲ್ಲಾ ಕೇಂದ್ರಗಳು ಜೊತೆಗೆ ಇತರ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಶೇಷ ನಿಗಾ ವಹಿಸುವಂತೆ ಗೃಹ ಸಚಿರು ನಿರ್ದೇಶನ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ