• Home
 • »
 • News
 • »
 • explained
 • »
 • Explainer: ಸಿಗರೇಟ್ ತಯಾರಕ ಕಂಪನಿಗಳಿಗೆ ಬಿಗ್‌ ಶಾಕ್‌ ನೀಡಿದ ಸ್ಪೇನ್! ಇವರು ಮಾಡಿದ ಉಪಾಯ ನೋಡಿ

Explainer: ಸಿಗರೇಟ್ ತಯಾರಕ ಕಂಪನಿಗಳಿಗೆ ಬಿಗ್‌ ಶಾಕ್‌ ನೀಡಿದ ಸ್ಪೇನ್! ಇವರು ಮಾಡಿದ ಉಪಾಯ ನೋಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿಗರೇಟ್ ತ್ಯಾಜ್ಯಗಳು ಭೂಮಿಯ ಮೇಲಿರುವ ಹೆಚ್ಚು ಕಸದ ವಸ್ತುಗಳಲ್ಲಿ ಒಂದಾಗಿದೆ. ಕಸ ಎನ್ನುವುದಕ್ಕಿಂತ ಈ ತ್ಯಾಜ್ಯಗಳು ರಾಸಾಯನಿಕ ವಸ್ತುಗಳನ್ನು ಹೊಂದಿರುತ್ತವೆ. 7,000 ವಿಷಕಾರಿ ರಾಸಾಯನಿಕಗಳನ್ನು ಹೊಂದಿರುವ ಸಿಗರೇಟ್‌ ತ್ಯಾಜ್ಯ ಪರಿಸರಕ್ಕೆ ಸಹಜವಾಗಿಯೇ ಹಾನಿ ಉಂಟುಮಾಡುವ ಕಸವಾಗಿದೆ.

ಮುಂದೆ ಓದಿ ...
 • Trending Desk
 • 4-MIN READ
 • Last Updated :
 • New Delhi, India
 • Share this:

ಪ್ರಪಂಚದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್‌ಗೆ (Cancer) ಪ್ರಮುಖವಾಗಿ ತಂಬಾಕು ಕಾರಣವಾಗುತ್ತಿದ್ದು, ಅದನ್ನು ತಡೆಯುವ ಉದ್ದೇಶದಿಂದ ಪ್ರತಿ ದೇಶವೂ ಒಂದಲ್ಲಾ ಒಂದು ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ. ಸಿಂಗಲ್ ಸಿಗರೇಟ್ ಮಾರಾಟಕ್ಕೆ ಬ್ರೇಕ್ ಹಾಕಿರುವ ಭಾರತದ (India) ಕ್ರಮವಾಗಿರಬಹುದು ಮತ್ತು 1 ಜನವರಿ 2009 ರಂದು ಅಥವಾ ನಂತರ ಜನಿಸಿದವರಿಗೆ ತಂಬಾಕು (Tobacco) ಖರೀದಿಗೆ ನಿಷೇಧ ಹೇರಿರುವ ನ್ಯೂಜಿಲೆಂಡ್‌ ಕ್ರಮವಾಗಿರಬಹುದು ಹೀಗೆ ವಿಶ್ವದ ದೇಶಗಳು (Nations) ತಮ್ಮ ದೇಶವನ್ನು ಹೊಗೆ ಮುಕ್ತ ದೇಶವನ್ನಾಗಿ ಮಾಡಲು ಹೊಸ ಉಪಕ್ರಮಗಳನ್ನು ಜಾರಿಗೆ ತರುತ್ತಲೇ ಇರುತ್ತವೆ.


ಧೂಮಪಾನ, ಮದ್ಯಪಾನ ಎಲ್ಲವೂ ಬಿಡಿಸಲಾಗದ ಚಟಗಳು. ಇವುಗಳನ್ನು ಕಾನೂನಿನ ಹಾದಿಯಲ್ಲಾದರೂ ಕಡಿಮೆಗೊಳಿಸುವ ಗುರಿಯನ್ನು ಆಯಾ ದೇಶದ ಸರ್ಕಾರಗಳು ಹೊಂದಿವೆ.


ಸ್ಪೇನ್‌ ಹೊಸ ಅಸ್ತ್ರ


ಭಾರತ, ನ್ಯೂಜಿಲೆಂಡ್‌ನಂತೆ ಸ್ಪೇನ್‌ ಈಗ ತಂಬಾಕು ಸೇವನೆ ನಿಷೇಧಕ್ಕೆ ಹೊಸ ಅಸ್ತ್ರವೊಂದನ್ನು ಬಿಟ್ಟಿದೆ. ಅದೇನಪ್ಪಾ ಎಂದರೆ ಪ್ರತಿ ವರ್ಷ ಧೂಮಪಾನಿಗಳು ಸಿಗರೇಟ್‌ ಸೇದಿ ಎಲ್ಲೆಂದರಲ್ಲಿ ಬೀಸಾಡುತ್ತಾರೆ. ಹೀಗೆ ಬಿಸಾಡುವ ಲಕ್ಷಾಂತರ ಸಿಗರೇಟ್ ತುಂಡುಗಳನ್ನು ಸ್ವಚ್ಛಗೊಳಿಸುವ ವೆಚ್ಚವನ್ನು ತಂಬಾಕು ಕಂಪನಿಗಳೇ ಭರಿಸಬೇಕು ಎಂಬ ಹೊಸ ಕಾನೂನು ಒಂದನ್ನು ಮಾಡಿದೆ.


ಸಿಗರೇಟ್ ತಯಾರಕ ಕಂಪನಿಗಳಿಗೆ ಬಿಗ್‌ ಶಾಕ್‌ ನೀಡಿದ ಸ್ಪೇನ್


ಬೀಚ್‌ಗಳಲ್ಲಿ ಸಿಗರೇಟ್ ಸೇದುವುದನ್ನು ನಿಷೇಧಿಸಿದ ನಂತರ, ಸ್ಪೇನ್ ಈಗ ಪ್ರತಿ ವರ್ಷ ಜನ ಸೇದಿ ಬಿಸಾಡುವ ಲಕ್ಷಾಂತರ ಸಿಗರೇಟ್ ತುಂಡುಗಳನ್ನು ಸ್ವಚ್ಛಗೊಳಿಸುವ ವೆಚ್ಚವನ್ನು ತಂಬಾಕು ಕಂಪನಿಗಳು ಪಾವತಿಸುವಂತೆ ಅವರ ಮೇಲೆ ಖರ್ಚಿನ ಹೊಣೆಯನ್ನು ಹೊರಿಸುತ್ತಿದೆ. ಇದು ಧೂಮಪಾನವನ್ನು ತ್ಯಜಿಸುವಂತೆ ಮಾಡಲು ಸ್ಪೇನ್‌ನ ಪ್ರಯತ್ನ ಕೂಡ ಹೌದು. ಸಿಗರೇಟ್ ತುಂಡುಗಳನ್ನು ಸ್ವಚ್ಛಗೊಳಿಸುವ ವೆಚ್ಚವನ್ನು ತಂಬಾಕು ಕಂಪನಿಗಳ ಮೇಲೆ ಹೇರಿದರೆ, ಆ ಕಂಪನಿಗಳು ವೆಚ್ಚ ಭರಿಸಲು ತನ್ನ ಗ್ರಾಹಕರ ಮೊರೆ ಹೋಗುತ್ತದೆ.


ಇದನ್ನೂ ಓದಿ: NEET PG 2023 ಅರ್ಜಿ ಸಲ್ಲಿಕೆ ಇಂದಿನಿಂದ ಆರಂಭ, ಈ ಲಿಂಕ್​ ಬಳಸಿ ಅಪ್ಲೈ ಮಾಡಿ


ಅಂದರೆ ಸಿಗರೇಟ್‌ ಪ್ಯಾಕೆಟ್‌ ಅಥವಾ ಸಿಂಗಲ್‌ ಸಿಗರೇಟ್‌ ರೇಟ್‌ಗಳನ್ನು ವೆಚ್ಚ ಪಾವತಿಗೆ ಅನುಗುಣವಾಗಿ ಹೆಚ್ಚಿಸುತ್ತದೆ. ಇದು ಗ್ರಾಹಕರಿಗೆ ಖಂಡಿತ ಹೊರೆಯಾಗುತ್ತದೆ. ಬೆಲೆ ಏರಿಕೆಯಿಂದಾಗಿಯಾದರೂ ಜನ ಧೂಮಪಾನ ತ್ಯಜಿಸುತ್ತಾರೆ ಎಂಬುವುದು ಸ್ಪೇನ್‌ ಸರ್ಕಾರದ ದೂರದ ಯೋಚನೆಯಾಗಿದೆ.‌


ಕಳೆದ ವರ್ಷವೇ ಹೊಸ ಕಾನೂನಿಗೆ ಸಿಕ್ಕಿದೆ ಅನುಮೋದನೆ


ಸ್ಪೇನ್‌ ಈ ಕಾನೂನನ್ನು ಇದೇ ಶುಕ್ರವಾರದಿಂದ ಜಾರಿಗೆ ತರಲು ಯೋಜಿಸುತ್ತಿದ್ದು, ಕಳೆದ ವರ್ಷವೇ ಹೊಸ ಕಾನೂನಿಗೆ ಅನುಮೋದನೆಯನ್ನು ಪಡೆದುಕೊಂಡಿದೆ ಎಂದು ವರದಿಯಾಗಿದೆ. ಇದು ತ್ಯಾಜ್ಯವನ್ನು ಕಡಿಮೆ ಮಾಡಲು ಮತ್ತು ಮರುಬಳಕೆಯನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ ನಿಯಮಗಳ ಗುಂಪಿನ ಭಾಗವಾಗಿದೆ ಎಂದು ದಿ ಗಾರ್ಡಿಯನ್ ವರದಿ ಮಾಡಿದೆ.


ಹೊಸ ಶಾಸನವು ಕಟ್ಲರಿ ಮತ್ತು ಪ್ಲೇಟ್‌ಗಳು, ಹತ್ತಿ ಮೊಗ್ಗುಗಳು, ವಿಸ್ತರಿತ ಪಾಲಿಸ್ಟೈರೀನ್ ಕಪ್‌ಗಳು ಮತ್ತು ಪ್ಲಾಸ್ಟಿಕ್ ಸ್ಟ್ರಾಗಳಂತಹ ಏಕ-ಬಳಕೆಯ ಪ್ಲಾಸ್ಟಿಕ್‌ಗಳನ್ನು ನಿಷೇಧಿಸುವುದು ಮತ್ತು ಪ್ಲಾಸ್ಟಿಕ್ ಆಹಾರ ಪ್ಯಾಕೇಜಿಂಗ್ ಅನ್ನು ಕಡಿತಗೊಳಿಸುವುದನ್ನು ಒಳಗೊಂಡಿದೆ.


ಹೊಸ ನಿಯಮಗಳು ಏನು ಹೇಳುತ್ತವೆ ?


ಹೊಸ ಕಾನೂನುಗಳ ಪ್ರಕಾರ, ಸಿಗರೇಟ್ ತಯಾರಕರು ಬಟ್ ವಿಲೇವಾರಿ ಅಪಾಯಗಳ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲು ಜವಾಬ್ದಾರರಾಗಿರುತ್ತಾರೆ. ಸ್ವಚ್ಛತಾ ಅಭಿಯಾನವನ್ನು ಹೇಗೆ ಕಾರ್ಯಗತಗೊಳಿಸಲಾಗುತ್ತದೆ ಅಥವಾ ಎಷ್ಟು ವೆಚ್ಚವಾಗುತ್ತದೆ ಎಂಬುದರ ಬಗ್ಗೆ ಸ್ಪೇನ್‌ ಇನ್ನೂ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.


ಆದಾಗ್ಯೂ, ಒಂದು ಅಧ್ಯಯನವು ವರದಿ ಮಾಡಿರುವ ಪ್ರಕಾರ ತಂಬಾಕು ಕಂಪನಿಗಳಿಗೆ ಒಟ್ಟು ಬಿಲ್ € 1 ಶತಕೋಟಿ (ರೂ. 8,785 ಕೋಟಿ) ತಗುಲಬಹುದು ಎಂದು ಅಂದಾಜಿಸಲಾಗಿದೆ.


ಸಿಗರೇಟ್ ತುಂಡುಗಳನ್ನು ಸ್ವಚ್ಛಗೊಳಿಸುವ ವಾರ್ಷಿಕ ವೆಚ್ಚ ಎಷ್ಟು ಗೊತ್ತಾ?


Rezero, ಖಾಸಗಿ ಪ್ರತಿಷ್ಠಾನದ ಮತ್ತೊಂದು ಸಂಶೋಧನೆಯಲ್ಲಿ, ಕ್ಯಾಟಲೋನಿಯಾ ಪ್ರದೇಶದಲ್ಲಿ ಸಿಗರೇಟ್ ತುಂಡುಗಳನ್ನು ಸ್ವಚ್ಛಗೊಳಿಸುವ ವಾರ್ಷಿಕ ವೆಚ್ಚವು ಪ್ರತಿ ನಿವಾಸಿಗೆ € 12 ಮತ್ತು € 21 (Rs 1,000 ರಿಂದ Rs 1,800) ನಡುವೆ ಇರುತ್ತದೆ. ಇನ್ನು ಕಡಲ ತೀರದಲ್ಲಿ ವಾಸಿಸುವ ನಿವಾಸಿಗಳಿಗೆ ಈ ವೆಚ್ಚವು ಇನ್ನೂ ದುಬಾರಿಯಾಗಿರುತ್ತದೆ. ಹೀಗಾಗಿಯೇ ಸ್ಪೇನ್‌ ಈಗ ಸಮುದ್ರದ ತೀರಗಳಲ್ಲಿ ಸಿಗರೇಟ್‌ ಸೇದುವುದನ್ನು ನಿಷೇಧಿಸಿದೆ. ಥೈಲ್ಯಾಂಡ್‌ ಸರ್ಕಾರ ಕೂಡ ಫುಕೇಟ್‌ನಲ್ಲಿ ಇದೇ ನಿಯಮವನ್ನು ಜಾರಿಗೆ ತಂದಿದೆ.


ಕ್ಯಾಟಲೋನಿಯಾದ ಪ್ರಾದೇಶಿಕ ಆಡಳಿತದ ಸಹಯೋಗದೊಂದಿಗೆ ನಡೆಸಿದ ವರದಿಯ ಪ್ರಕಾರ, "ಕ್ಯಾಟಲೋನಿಯಾದಲ್ಲಿ, ಸಿಗರೇಟ್ ತುಂಡುಗಳು ವರ್ಷಕ್ಕೆ 2700 ಟನ್‌ಗಳಿಗಿಂತ ಹೆಚ್ಚು ತ್ಯಾಜ್ಯವನ್ನು ಉತ್ಪಾದಿಸುತ್ತವೆ ಮತ್ತು ಜಾಗತಿಕವಾಗಿ ಸೇದುವ 70 ಪ್ರತಿಶತ ಸಿಗರೇಟ್‌ಗಳು ಭೂಮಿ ಅಥವಾ ನೈಸರ್ಗಿಕ ಸ್ಥಳಗಳಲ್ಲಿ ಕೊನೆಗೊಳ್ಳುತ್ತವೆ ಎಂದು ಅಂದಾಜಿಸಲಾಗಿದೆ".


ಧೂಮಪಾನ ಮುಕ್ತವಾಗಲು ಸ್ಪೇನ್‌ ಪ್ರಯತ್ನ


ಹೊಸ ಕಾನೂನು ಯುರೋಪಿಯನ್ ರಾಷ್ಟ್ರದಲ್ಲಿ ಧೂಮಪಾನಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ದಾರಿ ಮಾಡಿಕೊಟ್ಟಿದೆ ಎನ್ನಬಹುದು. ಕಳೆದ ವರ್ಷದ ಸರ್ಕಾರಿ ಅಂಕಿಅಂಶಗಳ ಪ್ರಕಾರ, ಸುಮಾರು 22 ಪ್ರತಿಶತದಷ್ಟು ಸ್ಪೇನ್ ಜನರು ಈ ಧೂಮಪಾನ ವ್ಯಸನಕ್ಕೆ ಅಂಟಿಕೊಂಡಿದ್ದಾರೆ ಎನ್ನಲಾಗಿದೆ. ಹಾಗೆಯೇ ಶೇಕಡಾ 23.3 ಪುರುಷರು ಮತ್ತು 16.4 % ಮಹಿಳೆಯರು ವ್ಯಸನಿಗಳಾಗಿದ್ದಾರೆ.


ಸ್ಪೇನ್‌ನಲ್ಲಿ ವ್ಯಸನಿಗಳಾದ ಯುವ ಜನತೆ


ವಿಶ್ವ ಆರೋಗ್ಯ ಸಂಸ್ಥೆ (WHO) ಯ ವರದಿಯ ಪ್ರಕಾರ, ಪ್ರತಿಯೊಬ್ಬ ಸ್ಪೇನ್ ವಯಸ್ಕ ಮತ್ತು ಹದಿಹರೆಯದವರು ಸಿಗರೇಟ್ ಸೇದುತ್ತಾರೆ ಎಂದು ಹೇಳಿದೆ. 2020 ರಲ್ಲಿ 18 ಪ್ರತಿಶತ ವಯಸ್ಕರು ತಂಬಾಕು ಸೇವನೆ ಮಾಡುತ್ತಾರೆ ಮತ್ತು 2019 ರಲ್ಲಿ 15-16 ವರ್ಷ ವಯಸ್ಸಿನ ಹದಿಹರೆಯದವರಲ್ಲಿ 21 ಪ್ರತಿಶತದಷ್ಟು ಜನರು ಸಿಗರೇಟ್ ಸೇದುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಆಘಾತಕಾರಿ ವರದಿಯನ್ನು ಬಿಡುಗಡೆ ಮಾಡಿತ್ತು.


ಸ್ಪ್ಯಾನಿಷ್ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ಶ್ವಾಸಕೋಶದ ಕ್ಯಾನ್ಸರ್ ಸಾಮಾನ್ಯವಾಗಿ ಧೂಮಪಾನದಿಂದ ಉಂಟಾಗುತ್ತದೆ. ಇದು ದೇಶದ ಮೂರನೇ ಅತಿ ಹೆಚ್ಚು ರೋಗನಿರ್ಣಯದ ಕ್ಯಾನ್ಸರ್ ಆಗಿದೆ, ನವೆಂಬರ್ 2021 ರವರೆಗೆ 29,549 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ.


ಈ ಅಂಕಿ ಅಂಶಗಳನ್ನು ನೋಡುವುದಾದರೆ ಸ್ಪೇನ್‌ನಲ್ಲಿ ಅತಿಹೆಚ್ಚು ಧೂಮಪಾನಿಗಳು ಇರುವುದು ಕಂಡುಬಂದಿದೆ. ಹೀಗಾಗಿ ಭವಿಷ್ಯದ ಪೀಳಿಗೆಗೆ, ಯುವಜನತೆಯ ರಕ್ಷಣೆ, ಪರಿಸರ ರಕ್ಷಣೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಇಂತಹ ಕ್ರಮಗಳ ಜಾರಿಗೆ ಮುಂದಾಗಿದೆ. ಧೂಮಪಾನವನ್ನು ತಡೆಗಟ್ಟುವ ಮತ್ತು ಮಿತಿಗೊಳಿಸುವ ಪ್ರಯತ್ನದ ಭಾಗವಾಗಿ ಸ್ಪೇನ್‌ ಹಲವು ಕ್ರಮಗಳನ್ನು ಈ ಹಿಂದೆ ಜಾರಿಗೆ ತಂದಿದೆ. ಈ ಮೂಲಕ ಸುತ್ತುವರಿದ ಸಾರ್ವಜನಿಕ ಪ್ರದೇಶಗಳು, ಸಾರಿಗೆ ಮತ್ತು ಕಾರ್ಯಸ್ಥಳಗಳಲ್ಲಿ ಧೂಮಪಾನದ ಸಂಪೂರ್ಣ ನಿಷೇಧದೊಂದಿಗೆ ಕಟ್ಟುನಿಟ್ಟಾದ ಹೊಗೆ-ಮುಕ್ತ ನಿಬಂಧನೆಯನ್ನು ಅಳವಡಿಸಿಕೊಂಡ ಮೊದಲ ಯುರೋಪಿಯನ್ ದೇಶ ಸ್ಪೇನ್ ಆಗಿದೆ ಎಂದು ದಿ ಲೋಕಲ್ ವರದಿ ಮಾಡಿದೆ.


2021 ರಲ್ಲಿ ಕಡಲತೀರಗಳಲ್ಲಿ ಧೂಮಪಾನ ನಿಷೇಧ


ಪರಿಸರವನ್ನು ಕಾಪಾಡುವ ಉದ್ದೇಶದಿಂದ ಸ್ಪೇನ್‌ ಬೀಚ್‌ಗಳಲ್ಲಿ ಧೂಮಪಾನವನ್ನು 2021 ರಲ್ಲಿ ನಿಷೇಧಿಸಿತ್ತು. ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯ ನಡೆಸುವಾಗ ಅನೇಕ ಸಿಗರೇಟ್ ತುಂಡುಗಳನ್ನು ಸಂಗ್ರಹವಾಗಿದ್ದವು. ಈ ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ನಿಷೇಧದ ನಿರ್ಧಾರವನ್ನು ಸ್ಪೇನ್‌ ತೆಗೆದುಕೊಂಡಿದೆ. ಈ ಕ್ರಮಗಳು ಕಟ್ಟುನಿಟ್ಟಾಗಿ ಜಾರಿ ಮಾಡಿದ್ದರಿಂದ ನಂತರದ ದಿನಗಳಲ್ಲಿ ಸ್ಪೇನ್‌ ಒಟ್ಟು 17.5 ಪ್ರತಿಶತ ಸಮುದ್ರ ತೀರ ಹೊಗೆ ಮುಕ್ತ ಎಂದು ಘೋಷಣೆ ಮಾಡಿದೆ. ಬಾರ್ಸಿಲೋನಾ ಕಳೆದ ವರ್ಷ ನಗರದ ಎಲ್ಲಾ 10 ಬೀಚ್‌ಗಳಲ್ಲಿ ಧೂಮಪಾನವನ್ನು ನಿಷೇಧಿಸಿದೆ.


WHO ಈ ಕಾರ್ಯವನ್ನು ಶ್ಲಾಘಿಸಿದೆ


ಸ್ಪೇನ್‌ನ ಬೀಚ್ ಧೂಮಪಾನ ನಿಷೇಧದ ಈ ಕ್ರಮವನ್ನು WHO ಶ್ಲಾಘಿಸಿದೆ. WHO ಬೀಚ್ ಧೂಮಪಾನ ನಿಷೇಧದ ಪ್ರಯೋಜನಗಳು "ವಿಸ್ತೃತ" ಎಂದು ಹೇಳಿದೆ. ಈ ರೀತಿಯ ಕಾನೂನುಗಳು ಸೆಕೆಂಡ್-ಹ್ಯಾಂಡ್ (ಬೇರೆಯವರು ಬಿಟ್ಟ ಹೊಗೆಯನ್ನು ಸೇವಿಸುವುದು) ಒಡ್ಡಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದೆ.


ಸಿಗರೇಟ್‌ ಸೇದುವವರೇನೋ ರೋಗಕ್ಕೆ ತುತ್ತಾಗುತ್ತಾರೆ. ಆದರೆ, ಆ ಹೊಗೆ ಪಕ್ಕದಲ್ಲೇ ಇದ್ದವನ ಆರೋಗ್ಯವನ್ನೂ ಬಲಿ ತೆಗೆದುಕೊಳ್ಳುತ್ತದೆ. ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ಅಥವಾ ಪರೋಕ್ಷ ಧೂಮಪಾನ ಇವತ್ತಿನ ದೊಡ್ಡ ಪಿಡುಗು.


1.2 ಮಿಲಿಯನ್ ಅಕಾಲಿಕ ಸಾವು


ಸುತ್ತಮುತ್ತಲಿನಲ್ಲಿ ಯಾರಾದರು ಧೂಮಪಾನ ಮಾಡುತ್ತಿದ್ದರೆ, ಅವರ ಬಾಯಿಯಿಂದ ಹೊರಬರುವ ಹೊಗೆಯನ್ನು ನೀವು ಉಸಿರಾಡಿದಾಗ ಅದು ಪರೋಕ್ಷ ಧೂಮಪಾನವಾಗುತ್ತದೆ. ಇದು ಜಾಗತಿಕ ಮಟ್ಟದಲ್ಲಿ ವರ್ಷಕ್ಕೆ 1.2 ಮಿಲಿಯನ್ ಅಕಾಲಿಕ ಸಾವುಗಳಿಗೆ ಕಾರಣವಾಗುತ್ತದೆ ಎಂದು ವಿಶ್ವಸಂಸ್ಥೆ ಹೇಳಿದೆ.


ಹೀಗಾಗಿ ಧೂಮಪಾನ ನಿಲ್ಲಿಸಿ, ಕಸವನ್ನು ಕಡಿಮೆ ಮಾಡಿ, ಸಿಗರೇಟ್ ತುಂಡುಗಳಿಂದ ಉಂಟಾಗುವ ಪರಿಸರಕ್ಕೆ ಹಾನಿಯನ್ನು ತಡೆಯಿರಿ ಮತ್ತು ಸೌಕರ್ಯಗಳನ್ನು ಸುಧಾರಿಸಿ ಎನ್ನುತ್ತದೆ ವಿಶ್ವಸಂಸ್ಥೆ.


ಭೂಮಿಯ ಮೇಲೆ ಹೆಚ್ಚು ಕಸದ ವಸ್ತು ಸಿಗರೇಟ್‌ ತ್ಯಾಜ್ಯ


ಸಿಗರೇಟ್ ತ್ಯಾಜ್ಯಗಳು ಭೂಮಿಯ ಮೇಲಿರುವ ಹೆಚ್ಚು ಕಸದ ವಸ್ತುಗಳಲ್ಲಿ ಒಂದಾಗಿದೆ ಎನ್ನಲಾಗಿದೆ. ಕಸ ಎನ್ನುವುದಕ್ಕಿಂತ ಈ ತ್ಯಾಜ್ಯಗಳು ರಾಸಾಯನಿಕ ವಸ್ತುಗಳನ್ನು ಹೊಂದಿರುತ್ತವೆ. 7,000 ವಿಷಕಾರಿ ರಾಸಾಯನಿಕಗಳನ್ನು ಹೊಂದಿರುವ ಸಿಗರೇಟ್‌ ತ್ಯಾಜ್ಯ ಪರಿಸರಕ್ಕೆ ಸಹಜವಾಗಿಯೇ ಹಾನಿ ಉಂಟುಮಾಡುವ ಕಸವಾಗಿದೆ.


"ಸರಿಸುಮಾರು 4.5 ಟ್ರಿಲಿಯನ್ ಸಿಗರೇಟ್ ತ್ಯಾಜ್ಯಗಳು ಪ್ರತಿ ವರ್ಷ ನಮ್ಮ ಸಾಗರಗಳು, ನದಿಗಳು, ನಗರದ ಕಾಲುದಾರಿಗಳು, ಉದ್ಯಾನವನಗಳು, ಮಣ್ಣು ಮತ್ತು ಕಡಲತೀರಗಳನ್ನು ಕಲುಷಿತಗೊಳಿಸುತ್ತವೆ" ಎಂದು WHO ನಲ್ಲಿ ಆರೋಗ್ಯ ಪ್ರಚಾರದ ನಿರ್ದೇಶಕ ಡಾ ರುಡಿಗರ್ ಕ್ರೆಚ್ ಹೇಳಿದ್ದಾರೆ.


ಭಾರತ, ಚೀನಾ ಈ ಸ್ವಚ್ಛಾ ಕಾರ್ಯಕ್ಕೆ ಖರ್ಚು ಮಾಡುವುದೆಷ್ಟು?


ಸಿಗರೇಟ್‌ ತುಂಡುಗಳನ್ನು ಸ್ವಚ್ಛಗೊಳಿಸುವುದು ಎಲ್ಲಾ ದೇಶಗಳಿಗೂ ದೊಡ್ಡ ದುಬಾರಿ ಕೆಲಸವಾಗಿದೆ. WHO ವರದಿಯ ಪ್ರಕಾರ, ಪ್ರತಿ ವರ್ಷ ಚೀನಾಕ್ಕೆ ಸುಮಾರು $2.6 ಶತಕೋಟಿ (Rs 21,533 ಕೋಟಿ) ಮತ್ತು ಭಾರತವು ಸರಿಸುಮಾರು $766 ಮಿಲಿಯನ್ (Rs 6,342 ಕೋಟಿ) ಮತ್ತು ಬ್ರೆಜಿಲ್ ಮತ್ತು ಜರ್ಮನಿಯು $ 200 ಮಿಲಿಯನ್ (ರೂ. 1,485 ಕೋಟಿ) ಈ ಸಿಗರೇಟ್‌ ತುಂಡುಗಳನ್ನು ಕ್ಲೀನ್‌ ಮಾಡಲು ವ್ಯಯಿಸುತ್ತದೆ.

First published: